Oppanna.com

ಕಠೋಪನಿಷತ್-ದ್ವಿತೀಯ ವಲ್ಲೀ

ಬರದೋರು :   ಶರ್ಮಪ್ಪಚ್ಚಿ    on   23/01/2012    4 ಒಪ್ಪಂಗೊ

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ಉಪನಿಷತ್ ಗೀತಾಂಜಲಿ” ಪುಸ್ತಕಂದ ಕಠೋಪನಿಷತ್ ಇದರ ದ್ವಿಯತೀಯ ವಲ್ಲೀ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.

ಶರ್ಮಪ್ಪಚ್ಚಿ
~~~~

ಕಠೋಪನಿಷತ್-ದ್ವಿತೀಯ ವಲ್ಲೀ

(ಕೃಷ್ಣ ಯಜುರ್ವೇದೀಯ ಕಠ ಶಾಖಾ)

ಅನ್ಯಚ್ಛ್ರೇಯೋSನ್ಯದುತೈವ ಪ್ರೇಯಸ್ತೇ ಉಭೇ ನಾನಾರ್ಥೇ ಪುರುಷಂ ಸಿನೀತಃ |

ತಯೋಃ ಶ್ರೇಯ ಆದದಾನಸ್ಯ ಸಾಧು ಭವತಿ

ಹೀಯತೇSರ್ಥಾದ್ಯ ಉ ಪ್ರೇಯೋ ವೃಣೀತೇ ||೧||

ಶ್ರೇಯಶ್ಚ ಪ್ರೇಯಶ್ಚ ಮನುಷ್ಯಮೇತಸ್ತೌ ಸಂಪರೀತ್ಯ ವಿವಿನಕ್ತಿ ಧೀರಃ

ಶ್ರೇಯೋ ಹಿ ಧೀರೋSಭಿಪ್ರೇಯಸೋ ವೃಣೀತೇ

ಪ್ರೇಯೋ ಮಂದೋ ಯೋಗಕ್ಷೇಮಾದ್ವೃಣೀತೇ ||೨||

ಸ ತ್ವಂ ಪ್ರಿಯಾನ್ ಪ್ರಿಯರೂಪಾಂಶ್ಚ ಕಾಮಾನ್

ಅಭಿಧ್ಯಾಯನ್ ನಚಿಕೇತೋSತ್ಯಸ್ರಾಕ್ಷೀಃ |

ನೈತಾಂ ಸೃಂಕಾಂ ವಿತ್ತಮಯೀಮವಾಪ್ತೋ

ಯಸ್ಯಾಂ ಮಜ್ಜಂತಿ ಬಹವೋ ಮನುಷ್ಯಾಃ ||೩||

ದೂರಮೇತೇ ವಿಪರೀತೇ ವಿಷೂಚೀ ಅವಿದ್ಯಾ ಯಾ ಚ ವಿದ್ಯೇತಿ ಜ್ಞಾತಾ |

ವಿದ್ಯಾಭೀಪ್ಸಿನಂ ನಚಿಕೇತಸಂ ಮನ್ಯೇ ನ ತ್ವಾ ಕಾಮಾ ಬಹವೋSಲೋಲುಪಂತ ||೪||

ಅವಿದ್ಯಾಯಾಮಂತರೇ ವರ್ತಮಾನಾಃ ಸ್ವಯಂ ಧೀರಾಃ ಪಂಡಿತಂಮನ್ಯಮಾನಾಃ |

ದಂದ್ರಮ್ಯಮಾಣಾಃ ಪರಿಯಂತಿ ಮೂಢಾ

ಅಂಧೇನೈವ ನೀಯಮಾನಾ ಯಥಾಂಧಾಃ ||೫||

ನ ಸಾಂಪರಾಯಃ ಪ್ರತಿಭಾತಿ ಬಾಲಂ ಪ್ರಮಾದ್ಯಂತಂ ವಿತ್ತ ಮೋಹೇನ ಮೂಢಮ್ |

ಅಯಂ ಲೋಕೋ ನಾಸ್ತಿ ಪರ ಇತಿ ಮಾನೀ ಪುನಃ ಪುನರ್ವಶಮಾಪದ್ಯತೇ ಮೇ ||೬||

ಶ್ರವಣಾಯಾಪಿ ಬಹುಭಿರ್ಯೋ ನ ಲಭ್ಯಃ ಶೃಣ್ವಂತೋSಪಿ ಬಹವೋ ಯಂ ನ ವಿದ್ಯುಃ |

ಆಶ್ಚರ್ಯೋ ವಕ್ತಾ ಕುಶಲೋSಸ್ಯ ಲಭ್ದಾSSಶ್ಚರ್ಯೋ ಜ್ಞಾತಾ ಕುಶಲಾನುಶಿಷ್ಟಃ ||೭||

ನ ನರೇಣಾವರೇಣ ಪ್ರೋಕ್ತ ಏಷ ಸುವಿಜ್ಞೇಯೋ ಬಹುಧಾ ಚಿಂತ್ಯಮಾನಃ |

ಅನನ್ಯಪ್ರೋಕ್ತೇ ಗತಿರತ್ರ ನಾಸ್ತ್ಯಣೀಯಾನ್ ಹ್ಯತರ್ಕ್ಯಮಣುಪ್ರಮಾಣಾತ್ ||೮||

ನೈಷಾ ತರ್ಕೇಣ ಮತಿರಾಪನೇಯಾ ಪ್ರೋಕ್ತಾSನ್ಯೇನೈವ ಸುಜ್ಞಾನಾಯ ಪ್ರೇಷ್ಠ |

ಯಾಂ ತ್ವಮಾಪಹ ಸತ್ಯಧೃತಿರ್ಬತಾಸಿ

ತ್ವಾದೃಙ್ನೋ ಭೂಯಾನ್ನಚಿಕೇತಃ ಪ್ರಷ್ಟಾ ||೯||

ಜಾನಾಮ್ಯಹಂ ಶೇವಧಿರಿತ್ಯನಿತ್ಯಂ ನ ಹ್ಯಧ್ರುವೈಃ ಪ್ರಾಪ್ಯತೇ ಹಿ ಧ್ರುವಂ ತತ್ |

ತತೋ ಮಯಾ ನಾಚಿಕೇತಶ್ಚಿತೋSಗ್ನಿ-

ರನಿತ್ಯೈರ್ದ್ರವ್ಯೈಃ ಪ್ರಾಪ್ತವಾನಸ್ಮಿ ನಿತ್ಯಮ್ ||೧೦||

ಕಾಮಸ್ಯಾಪ್ತಿಂ ಜಗತಃ ಪ್ರತಿಷ್ಠಾಂ ಕ್ರತೋರಾನಂತ್ಯಮಭಯಸ್ಯ ಪಾರಮ್ |

ಸ್ತೋಮಂ ಮಹದುರುಗಾಯಂ ಪ್ರತಿಷ್ಠಾಂ ದೃಷ್ಟ್ವಾ

ಧೃತ್ಯಾ ಧೀರೋ ನಚಿಕೇತೋSತ್ಯಸ್ರಾಕ್ಷೀಃ ||೧೧||

ತಂ ದುರ್ದಶಂ ಗೂಢಮನುಪ್ರವಿಷ್ಟಂ ಗುಹಾಹಿತಂ ಗಹ್ವರೇಷ್ಠಂ ಪುರಾಣಮ್ |

ಆಧ್ಯಾತ್ಮಯೋಗಾಧಿಗಮೇನ ದೇವಂ ಮತ್ವಾ ಧೀರೋ ಹರ್ಷಶೋಕೌ ಜಹಾತಿ ||೧೨||

ಏತಚ್ಛ್ರುತ್ವಾ ಸಂಪರಿಗೃಹ್ಯ ಮರ್ತ್ಯಃ ಪ್ರವೃಹ್ಯ ಧರ್ಮ್ಯಮಣುಮೇತಮಾಪ್ಯ |

ಸ ಮೋದತೇ ಮೋದನೀಯಂ ಹಿ ಲಬ್ದ್ವಾ

ವಿವೃತಂ ಸದ್ಮ ನಚಿಕೇತಸಂ ಮನ್ಯೇ ||೧೩||

ಅನ್ಯತ್ರ ಧರ್ಮಾದನ್ಯತ್ರಾಧರ್ಮಾದನ್ಯತ್ರಾಸ್ಮಾತ್ ಕೃತಾಕೃತಾತ್ |

ಅನ್ಯತ್ರ ಭೂತಾಚ್ಚ ಭವ್ಯಾಚ್ಚ ಯತ್ತತ್ ಪಶ್ಯಸಿ ತದ್ವದ ||೧೪||

ಸರ್ವೇ ವೇದಾ ಯತ್ಪದಮಾಮನಂತಿ ತಪಾಂಸಿ ಸರ್ವಾಣಿ ಚ ಯದ್ವದಂತಿ |

ಯದಿಚ್ಛಂತೋ ಬ್ರಹ್ಮಚರ್ಯಂ ಚರಂತಿ

ತತ್ತೇ ಪದಂ ಸಂಗ್ರಹೇಣ ಬ್ರವೀಮ್ಯೋಮಿತ್ಯೇತತ್ ||೧೫||

ಏತದ್ದ್ಯೇವಾಕ್ಷರಂ ಬ್ರಹ್ಮ  ಏತದ್ಧ್ಯೇವಾಕ್ಷರಂ  ಪರಮ್

ಏತದ್ಧ್ಯೇವಾಕ್ಷರಂ ಜ್ಞಾತ್ವಾ ಯೋ ಯದಿಚ್ಛತಿ ತಸ್ಯ ತತ್ ||೧೬||

ಏತದಾಲಂಬನಂ ಶ್ರೇಷ್ಠ ಮೇತದಾಲಂಬನಂ ಪರಮ್ |

ಏತದಾಲಂಬನಂ ಜ್ಞಾತ್ವಾ ಬ್ರಹ್ಮ ಲೋಕೇ ಮಹೀಯತೇ ||೧೭||

ನ ಜಾಯತೇ ಮ್ರಿಯತೇ ವಾ ವಿಪಶ್ಚಿನ್ನಾಯಂ ಕುತಶ್ಚಿನ್ನ ಬಭೂವ ಕಶ್ಚಿತ್ |

ಅಜೋ ನಿತ್ಯಃ ಶಾಶ್ವತೋSಯಂ ಪುರಾಣೋ

ನ ಹನ್ಯತೇ ಹನ್ಯಮಾನೇ ಶರೀರೇ ||೧೮||

ಹಂತಾ ಚೇನ್ಮನ್ಯತೇ ಹಂತುಂ ಹತಶ್ಚೇನ್ಮನ್ಯತೇ ಹತಮ್ |

ಉಭೌ ತೌ ನ ವಿಜಾನೀತೋ ನಾಯಂ ಹಂತಿ ನ ಹನ್ಯತೇ ||೧೯||

ಅಣೋರಣೀಯಾನ್ ಮಹತೋ ಮಹೀಯಾನ್

ಆತ್ಮಾSಸ್ಯ ಜಂತೋರ್ನಿಹಿತೋ ಗುಹಾಯಾಮ್ |

ತಮಕ್ರತುಃ ಪಶ್ಯತಿ ವೀತಶೋಕೋ ಧಾತುಪ್ರಸಾದಾನ್ಮಹಿಮಾನಮಾತ್ಮನಃ ||೨೦||

ಆಸೀನೋ ದೂರಂ ವ್ರಜತಿ ಶಯಾನೋ ಯಾತಿ ಸರ್ವತಃ |

ಕಸ್ತಂ ಮದಾಮದಂ ದೇವಂ ಮದನ್ಯೋ ಜ್ಞಾತುಮರ್ಹತಿ ||೨೧||

ಅಶರೀರಂ ಶರೀರೇಷ್ವನವಸ್ಥೇಷ್ವ ವಸ್ಥಿತಮ್ |

ಮಹಾಂತಂ ವಿಭುಮಾತ್ಮಾನಂ ಮತ್ವಾಧೀರೋ ನ ಶೋಚತಿ ||೨೨||

ನಾಯಮಾತ್ಮಾ ಪ್ರವಚನೇನ ಲಭ್ಯೋ

ನ ಮೇಧಯಾ ನ ಬಹುನಾ ಶ್ರುತೇನ |

ಯಮೇವೈಷ ವೃಣುತೇ ತೇನ ಲಭ್ಯಸ್ತಸ್ಯೈಷ ಆತ್ಮಾ ವಿವೃಣುತೇ ತನೂಂ ಸ್ವಾಮ್ ||೨೩||

ನಾವಿರತೋ ದುಶ್ಚರಿತಾನ್ನಾಶಾಂತೋ ನಾಸಮಾಹಿತಃ |

ನಾಶಾಂತಮಾನಸೋ ವಾSಪಿ ಪ್ರಜ್ಞಾನೇನೈನಮಾಪ್ನುಯಾತ್ ||೨೪||

ಯಸ್ಯ ಬ್ರಹ್ಮ ಚ ಕ್ಷತ್ತ್ರಂ ಚ ಉಭೇ ಭವತ ಓದನಃ |

ಮೃತ್ಯುರ್ಯಸ್ಯೋಪಸೇಚನಂ ಕ ಇತ್ಥಾ ವೇದ ಯತ್ರ ಸಃ ||೨೫||

ಕಠೋಪನಿಷತ್-ಎರಡನೆಯ ವಲ್ಲಿ (ಕನ್ನಡ ಗೀತೆ)

(ಇಹದ ಭೋಗವ ಪೂರ್ಣ ತ್ಯಜಿಸಲು ನುಡಿದ ಯಮನುಪದೇಶವ)

ಒಳಿತು ಹಿತಗಳು ಎರಡು ವಿಧದಲಿ ಧ್ಯೇಯವಿರುವವು ಜನರಿಗೆ

ಒಳಿತು ಆತ್ಮಾನಂದ ತರುವುದು ಹೀನ ಹಿತ ಸಂಸಾರಿಗೆ ||೧||

ಆತ್ಮ ದೇಹದ ದಾರಿ ಬರುವವು ಮನುಜರೆದುರಲಿ ಆಯ್ಕೆಗೆ

ಬುದ್ಧಿವಂತನ ಆಯ್ಕೆಯಾತ್ಮವು; ದೇಹ ಪ್ರೀತಿಯು ಕ್ಷುದ್ರಗೆ ||೨||

ಪ್ರಿಯದ ಕಾಮದ ಭೋಗ ಭಾಗ್ಯವ ಪೂರ್ಣ ಮಥಿಸಿಹೆ ತ್ಯಜಿಸಿಹೆ

ಜನರು ಕೊಳೆವರು ಹಣದ ಮಡುವಲಿ; ಒಲ್ಲೆ ನೀ ನಚಿಕೇತನೆ ||೩||

ವಿದ್ಯೆಯೆಂಬದವಿದ್ಯೆಯೆಂಬುದು ಬೇರೆ ಬೇರೆಯೆ ದೂರವು

ತಿಳಿವೆ ನಾ ನಚಿಕೇತನೆಂದಿಗೆ ಕಾಮ ಸೆಳೆಯದ ಶಿಷ್ಯನು ||೪||

ತಾವೆ ಪಂಡಿತ ಧೀರರೆನ್ನುತ ವಕ್ರದಾರಿಯ ಮೂಢರು

ಕುರುಡ ಕುರುಡನ ಕೈಯ ಹಿಡಿಯುತ ನಡೆವ ತೆರದಲಿ  ಅಲೆವರು ||೫||

ಮೋಕ್ಷ ರುಚಿಸದು ಮಂದ ಬುದ್ಧಿಗೆ ಹಣದ ಮೋಹದ ಮೂಢಗೆ

ಜಗವಿದಲ್ಲದೆ ಬೇರೆಯಿಲ್ಲವು ಎನುತ ಬರುವರು ಹಿಡಿತಕೆ ||೬||

ಬಹಳ ಜನರಿಗು ಸಿಗದು ಕೇಳಲು ಕೇಳುತಿದ್ದರು ತಿಳಿಯದು

ಕೇಳಲದ್ಭುತ ಪಡೆಯಲದ್ಭುತ ಪಾಠ ಹೇಳಲು ಜ್ಞಾನಿಯು ||೭||

ಆತ್ಮ ಜ್ಞಾನ ವಿಹೀನ ಜನರುಪದೇಶ ಮಾಡಲು ತಿಳಿಯದು

ತಜ್ಞನೊರೆಯಲು ಜ್ಞಾನ ಖಂಡಿತ, ಸೂಕ್ಷ್ಮ ವಿಷಯವತರ್ಕ್ಯವು ||೮||

ತರ್ಕದಿಂದೀ ಜ್ಞಾನ ದೊರಕದು ಜ್ಞಾನಿಯರುಹಲು ತಿಳಿವುದು

ಬರಲಿ ಶಿಷ್ಯರು ಸತ್ಯ ಬುದ್ಧಿಯ ನಿನ್ನ ತೆರದಲಿ ನಿಷ್ಠರು ||೯||

ನಿಧಿಯು ನಶ್ವರವೆಂದು ತಿಳಿದಿಹೆ ನಿತ್ಯ ದೊರಕದನತ್ಯದಿ

ನಿತ್ಯದಾತ್ಮನ ಅರಿತುಕೊಂಡಿಗೆ ಜ್ಞಾನದಗ್ನಿಯ ಬೆಳಗಿಸಿ ||೧೦||

ಪೂರ್ತಿ ಕಾಮವ ಜಗದ ಗೌರವ ಕೀರ್ತಿ ನಿಷ್ಠೆ ಸಮೂಹವ

ಬುದ್ಧಿ ಧೈರ್ಯದಿ ಧೀರನಾಗಿಹೆ ತ್ಯಾಗದಿಂ ಸಂಮೋಹವ ||೧೧||

ದೃಶ್ಯವಾಗದ ಗುಹೆಯಲಡಗಿದ ಹೃದಯ ಪುರುಷ ಪುರಾಣನ

ತಿಳಿಯೆ ಯೋಗಾಧ್ಯಾತ್ಮದಿಂದಲೆ ತೊರೆವ ಹರ್ಷವ ಶೋಕವ ||೧೨||

ಕೇಳುತರಿಯುತ ಸೂಕ್ಷ್ಮ ಧರ್ಮವ ಮನುಜ ಮುಂಗಡೆ ನಡೆದರೆ

ಹರ್ಷಗೊಂಬನು ಹರ್ಷನೀಯನು; ಹೃದಯ ನಿನ್ನದು ತೆರೆದಿದೆ ||೧೩||

(ಯಮನ ಬೋಧನೆ ಕೇಳಿದ ಹುಡುಗನು ಮುಂದೆ ಪ್ರಶ್ನೆಯ ಕೇಳ್ದನು)

ಧರ್ಮದಿಂದಲಧರ್ಮದಿಂದಲು ಭಿನ್ನ ಕಾರಣ ಕರ್ಮದ

ನಿನ್ನೆ ನಾಳೆಗು ಅನ್ಯವಾದುದ ಪೇಳು ನೋಡಿದರಾವುದ ||೧೪||

(ಸೂಕ್ಷ್ಮವನು ನಚಿಕೇತನು ಕೇಳಲು ಯಮನು ಹರ್ಷದಿ ನುಡಿದನು)

ಸರ್ವವೇದದ ಧ್ಯೇಯವಾವುದೊ ಸರ್ವ ತಪಗಳ ಗುರಿಯದೆ

ಯಾವುದಾಶಿಸಿ ಬ್ರಹ್ಮಚರ್ಯಾಚರಿಸುತಿರುವರದುವೆ “ಓಮ್” ||೧೫||

ಅಕ್ಷರಿದುವೇ ಪರಮ ಆತ್ಮನು ಪರಮ ಬ್ರಹ್ಮನ ಪದವಿದು

ಜ್ಞಾನ ಹೊಂದುತ ಅಕ್ಷರಿದರಲಿ ತನ್ನ ಇಚ್ಛೆಯ ಪಡೆವನು ||೧೬||

ಇದುವೆ ಆಶ್ರಯವಿದುವೆ ಶ್ರೇಷ್ಠವು ಪರಮ ಆಶ್ರಯ ಬ್ರಹ್ಮನು

ಬ್ರಹ್ಮ ಲೋಕದಿ ಮಹಿಮನಾತನು ಧ್ಯಾನಗೊಂಡಾಕ್ಷರವನು ||೧೭||

ಈತಗಿಲ್ಲವು ಜನನ ಮರಣವು ಚೇತನಾತ್ಮನನಾದಿಯು

ನಿತ್ಯ ಸತ್ಯನು ಈ ಸನಾತನ ದೇಹ ನಶಿಸಲು ಗತಿಸನು ||೧೮||

ಕೊಂದನೆನ್ನುತ ಕೊಂದೆನೆನ್ನುತ ನೆನೆವರಿಬ್ಬರು ತಿಳಿಯರು

ಕೊಲ್ಲಲಾಗದು ಸಾಯದೆಂದಿಗು ಅರಿವರೀತೆರ ಧನ್ಯರು ||೧೯||

ಸೂಕ್ಷ್ಮನಣುವಿಗು ಬೃಹತ್ ಮಹಿಮಗು ಪ್ರಾಣಿ ಹೃದಯದಿ ಅಡಗಿದ

ಶಾಂತನಿಂದ್ರಿಯ ಶೋಕವಿಲ್ಲದೆ ಕಾಂಬನಾತನ ಮಹಿಮೆಯ ||೨೦||

ಅಚಲನಾದರು ದೂರ ವ್ಯಾಪ್ತನು ಅಡಗಿಯಿದ್ದರು ಅಲೆವನು

ಗರ್ವವಿರದಾನಂದಮಯನಾ ದೇವನರಿಯರು ಇತರರು ||೨೧||

ದೇಹರಹಿತನು ದೇಹದೊಳಗಡೆ ಸರ್ವವ್ಯಾಪ್ತನು ಶಾಶ್ವತ

ಈತ ಶ್ರೇಷ್ಠನು ತಿಳಿಯಲಾತನ ಧೀರ ಹೊಂದನು ಶೋಕವ ||೨೨||

ಶಾಸ್ತ್ರವಚನದಿಂದ ತಿಳಿಯದು ಬುದ್ಧಿ ಮೇಧಾದಿಂದಲು

ಸತ್ಯ ಸಾಧಕ ಪಡೆವನಾತನ ಆತ್ಮ ತಾನೇ ಒಲಿಯಲು ||೨೩||

ಕೀಳು ನಡತೆಯ ದಾಸನಿಂದ್ರಿಯ ಮನವು ಒಂದೆಡೆ ನಿಲ್ಲದೆ

ಶಾಂತಿಯಿರದವ ಅರಿಯನಾತನ ಶುಷ್ಕ ಜ್ಞಾನಕೆ ಸಿಕ್ಕದೆ ||೨೪||

ಯಾರಿಗಾಗಿದೆ ಬ್ರಹ್ಮ ಕ್ಷತ್ರಿಯ ಉಣ್ಣುವಶನದ ತೆರದಲಿ

ಮೃತ್ಯುವುಪ್ಪಿನ ಕಾಯಿಯಾತಗೆ ಹೇಗೆ ಇದರನು ತಿಳಿಸಲಿ ||೨೫||

||ಓಂ ಶಾಂತಿಃ ಶಾಂತಿಃ ಶಾಂತಿಃ||

ತೃತೀಯ ವಲ್ಲಿ ಇನ್ನಾಣ ವಾರಕ್ಕೆ

ಪ್ರಥಮ ವಲ್ಲಿಗೆ ಇಲ್ಲಿ ನೋಡಿ

ಸಂಗ್ರಹ- ಉಪನಿಷತ್ ಗೀತಾಂಜಲಿ, ಡಾ| ಮಡ್ವ ಶಾಮ ಭಟ್ಟ

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

4 thoughts on “ಕಠೋಪನಿಷತ್-ದ್ವಿತೀಯ ವಲ್ಲೀ

  1. “ತಾವೆ ಪಂಡಿತ ಧೀರರೆನ್ನುತ ವಕ್ರದಾರಿಯ ಮೂಢರು

    ಕುರುಡ ಕುರುಡನ ಕೈಯ ಹಿಡಿಯುತ ನಡೆವ ತೆರದಲಿ ಅಲೆವರು”…

    ಸತ್ಯವರಸಿ ಹೋಪವಂಗೆ ಏಕಾಂಗಿಯಾಗಿ ಮುನ್ನಡೆವ ಧೈರ್ಯ ಬೇಕಾವುತ್ತು…

  2. ಬಹಳ ಉತ್ತಮ ಆಯಿದು.

  3. ಅಬ್ಬ! ಅದ್ಭುತ ಸಾರ. ಪ್ರತಿಯೊಂದು ಸಾಲಿಲ್ಲಿಯೂ ಮಹತ್ವ. ಧನ್ಯವಾದ ಅಪ್ಪಚಿಗೆ. ಕನ್ನಡನುವಾದ ಪದ ರಚಿಸಿ ಬಹುದೊಡ್ಡ ಉಪಕಾರ ಮಾಡಿ ಕೊಟ್ಟಿಕ್ಕಿ ಹೋಯ್ದವು ಮಡ್ವದಜ್ಜ°. ನಮನಗಳು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×