ಕಠೋಪನಿಷತ್ -ಪಂಚಮ ವಲ್ಲೀ

February 13, 2012 ರ 6:00 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ಉಪನಿಷತ್ ಗೀತಾಂಜಲಿ” ಪುಸ್ತಕಂದ ಕಠೋಪನಿಷತ್ ಇದರ ಪಂಚಮ ವಲ್ಲೀ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.

ಶರ್ಮಪ್ಪಚ್ಚಿ
~~~~

ಕಠೋಪನಿಷತ್ (ಪಂಚಮ ವಲ್ಲೀ)

ಪುರಮೇಕಾದಶದ್ವಾರಮಜಸ್ಯಾವಕ್ರಚೇತಸಃ|

ಅನುಷ್ಠಾಯ ನ ಶೋಚತಿ ವಿಮುಕ್ತಶ್ಚ ವಿಮುಚ್ಯತೇ || ಏತದ್ವೈತತ್|| ೧||

ಹಂಸಃ ಶುಚಿಷದ್ವಸುರಂತರಿಕ್ಷಸದ್ಧೋತಾ ವೇದಿಷದತಿಥಿರ್ದುರೋಣಸತ್ |

ನೃಷದ್ವರಸದೃತಸದ್ವ್ಯೋಮಸದಬ್ಜಾ ಗೋಜಾ ಋತಜಾ ಅದ್ರಿಜಾ ಋತಂ ಬೃಹತ್ ||೨||

ಊರ್ಧ್ವಂ ಪ್ರಾಣಮುನ್ನಯತ್ಯಪಾನಂ ಪ್ರತ್ಯಗಸ್ಯತಿ |

ಮಧ್ಯೇ ಮಾಮನಮಾಸೀನಂ ವಿಶ್ವೇ ದೇವಾ ಉಪಾಸತೇ ||೩||

ಅಸ್ಯ ವಿಸ್ರಂಸಮಾನಸ್ಯ ಶರೀರಸ್ಥಸ್ಯ ದೇಹಿನಃ |

ದೇಹಾದ್ವಿಮುಚ್ಯಮಾನಸ್ಯ ಕಿಮತ್ರ ಪರಿಶಿಷ್ಯತೇ ||ಏತದ್ವೈತತ್ ||೪||

ನ ಪ್ರಾಣೇನ ನಾಪಾನೇನ ಮರ್ತ್ಯೋ ಜೀವತಿ ಕಶ್ಚನ |

ಇತರೇಣ ತು ಜೀವಂತಿ ಯಸ್ಮಿನ್ನೇತಾವುಪಾಶ್ರಿತೌ ||೫||

ಹಂತ ತ ಇದಂ ಪ್ರವಾಕ್ಷ್ಯಾಮಿ ಗುಹ್ಯಂ ಬ್ರಹ್ಮ ಸನಾತನಮ್ |

ಯಥಾ ಚ ಮರಣಂ ಪ್ರಾಪ್ಯ ಆತ್ಮಾ ಭವತಿ ಗೌತಮ ||೬||

ಯೋನಿಮನ್ಯೇ ಪ್ರಪದ್ಯಂತೇ ಶರೀರತ್ವಾಯ ದೇಹಿನಃ

ಸ್ಥಾಣುಮನ್ಯೇSನುಸಂಯಂತಿ ಯಥಾಕರ್ಮ ಯಥಾಶ್ರುತಮ್ ||೭||

ಯ ಏಷ ಸುಪ್ತೇಷು ಜಾಗರ್ತಿ ಕಾಮಂ ಕಾಮಂ ಪುರುಷೋ ನಿರ್ಮಿಮಾಣಃ |

ತದೇವ ಶುಕ್ರಂ ತದ್ಭ್ರಹ್ಮ ತದೇವಾಮೃತಮುಚ್ಯತೇ |

ತಸ್ಮಿಂಲ್ಲೋಕಾಃ ಶ್ರಿತಾಃ ಸರ್ವೇ ತದು ನಾತ್ಯೇತಿ ಕಶ್ಚನ ||ಏತದ್ವೈತತ್||೮||

ಅಗ್ನಿರ್ಯಥೈಕೋ ಭುವನಂ ಪ್ರವಿಷ್ಟೋ ರೂಪಂ ರೂಪಂ ಪ್ರತಿರೂಪೋ ಬಭೂವ |

ಏಕಸ್ತಥಾ ಸರ್ವಭೂತಾಂತರಾತ್ಮಾ ರೂಪಂ ರೂಪಂ ಪ್ರತಿರೂಪೋ ಬಹಿಶ್ಚ ||೯||

ವಾಯುರ್ಯಥೈಕೋ ಭುವನಂ ಪ್ರವಿಷ್ಟೋ ರೂಪಂ ರೂಪಂ ಪ್ರತಿರೂಪೋ ಬಭೂವ |

ಏಕಸ್ತಥಾ ಸರ್ವಭೂತಾಂತರಾತ್ಮಾ ರೂಪಂ ರೂಪಂ ಪ್ರತಿರೂಪೋ ಬಹಿಶ್ಚ ||೧೦||

ಸೂರ್ಯೋ ಯಥಾ ಸರ್ವಲೋಕಸ್ಯಚಕ್ಷುರ್ನ ಲಿಪ್ಯತೇ ಚಾಕ್ಷುಷೈರ್ಬಾಹ್ಯದೋಷೈಃ|

ಏಕಸ್ತಥಾ ಸರ್ವ ಭೂತಾಂತರಾತ್ಮಾ ನ ಲಿಪ್ಯತೇ ಲೋಕದುಃಖೇನ ಬಾಹ್ಯಃ ||೧೧||

ಏಕೋ ವಶೀ ಸರ್ವಭೂತಾಂತರಾತ್ಮಾ ಏಕಂ ರೂಪಂ ಬಹುಧಾ ಯಃ ಕರೋತಿ|

ತಮಾತ್ಮಸ್ಥಂ ಯೇSನುಪಶ್ಯಂತಿ ಧೀರಾಸ್ತೇಷಾಂ ಸುಖಂ ಶಾಶ್ವತಂ ನೇತರೇಷಾಮ್ ||೧೨||

ನಿತ್ಯೋSನಿತ್ಯೋನಾಂ ಚೇತನಶ್ಚೇತನಾನಾಮೇಕೋ ಬಹೂನಾಂ ಯೋ ವಿದಧಾತಿ ಕಾಮಾನ್ |

ತಮಾತ್ಮಸ್ಥಂ ಯೇSನುಪಶ್ಯಂತಿ ಧೀರಾಸ್ತೇಷಾಂ ಶಾಂತಿಃ ಶಾಶ್ವತೀ ನೇತರೇಷಾಮ್ ||೧೩||

ತದೇತದಿತಿ ಮನ್ಯಂತೇSನಿರ್ದೇಶ್ಯಂ ಪರಮಂ ಸುಖಮ್ |

ಕಥಂ ನು ತದ್ವಿಜಾನೀಯಾಂ ಕಿಮು ಭಾತಿ ವಿಭಾತಿ ವಾ||೧೪||

ನ ತತ್ರ ಸೂರ್ಯೋ ಭಾತಿ ನ ಚಂದ್ರತಾರಕಂ

ನೇಮಾ ವಿದ್ಯುತೋ ಭಾಂತಿ ಕುತೋSಯಮಗ್ನಿಃ |

ತಮೇವ ಭಾಂತಮನುಭಾತಿ ಸರ್ವಂ ತಸ್ಯ ಭಾಸಾ ಸರ್ವಮಿದಂ ವಿಭಾತಿ ||೧೫||

ಕಠೋಪನಿಷತ್ (ಐದನೆಯ ವಲ್ಲಿ)-ಕನ್ನಡ ಗೀತೆ

ದೇಹದಲಿ ಹನ್ನೊಂದು ದ್ವಾರದಿ ವಾಸಿಪಾವ್ಯಯ ತೇಜನು

ಧರ್ಮ ಮಾರ್ಗದಿ ನಡೆದುಕೊಂಡರೆ ದುಃಖಭಾಗಿಯ ಆಗನು

ದೇಹದಂತ್ಯದಿ ಮುಕ್ತನಾತನು; ಈತನೇ ಜೀವಾತ್ಮನು ||೧||

ನಿರ್ಮಲಾತ್ಮನು ಚಲಿಪನೆಲ್ಲೆಡೆ ಅಂತರಿಕ್ಷದಿ ಸೂಕ್ಷ್ಮನು

ಯಾಜಿ ಯಜ್ಞದಿ ಅತಿಥಿ ಮನೆಯಲಿ ಮನುಜರೊಳಗಿಹ ದೇವನು

ಶ್ರೇಷ್ಠರಲ್ಲಿಯು ಸತ್ಯ ನಿತ್ಯನು ಮಹಿಮೆ ಹಿರಿಮೆಯ ರೂಪನು ||೨||

ಪ್ರಾಣ ಮೇಗಡೆ ಎಳೆದುಗೊಂಬನು ಕೆಳಗಪಾನವ ದೂಡುವ

ಸಕಲ ದೇವತೆ ಪೂಜ್ಯ ಸುಂದರ ಆತ್ಮ ಮಧ್ಯದಿ ನೆಲಸಿಹ ||೩||

ಕ್ರಿಯಾ ನಿರತನು ದೇಹಧಾರಿಯು ದೇಹ ತೊರೆಯುತ ನಡೆವನು

ಇವನ ವಿಷಯದಿ ಉಳಿದುದೇನಿದೆ? ಈತನೇ ಜೀವಾತ್ಮನು ||೪||

ಪ್ರಾಣದಿಂದಲಪಾನದಿಂದಲು ಮನುಜ ಬದುಕಲಸಾಧ್ಯವು

ಯಾವನಾಶ್ರಯವಿವುಗಳೆರಡಕು ಆತನಿಂದಲೆ ಜೀವವು ||೫||

ಕೇಳು, ಗೌತಮ, ಗೂಢ ಜ್ಞಾನವ ನಿತ್ಯ ಸತ್ಯ ಸನಾತನ

ಆತ್ಮ ಹೊಂದುವುದಾವ ಗತಿಯನು ದೇಹ ಹೊಂದಲು ಮರಣವ ||೬||

ದೇಹಿಗೊಂಬನು ವಿವಿಧ ಜನ್ಮವ ಕರ್ಮ ಜ್ಞಾನಕೆ ಅನುಗುಣ

ಜೀವ ಜಂತುಗಳಾಗಿ ಜನನವು; ಕೆಲವರು ಪಡೆವರು ಮೋಕ್ಷವ ||೭||

ದೇಹ ನಿದ್ರಿಸೆ ಕರ್ಮ ನಿರತನು ಆತ್ಮನೆಚ್ಚರವಿರುವನು

ಶುದ್ಧನಾತನು ಹಿರಿಯನಾತನು ಅಮರನಾತನು ಧಾತೃವು

ಮೀರಲಾತನ ಸಾಧ್ಯವಿಲ್ಲವು; ಈತನೇ ಜೀವಾತ್ಮನು||೮||

ಅಗ್ನಿ ಲೋಕದಿ ಪೊಗುತ ವಸ್ತುಗಳಂತೆ ಪಡೆವುದು ರೂಪವ

ಸರ್ವ ಪ್ರಾಣಿಗಳಲ್ಲಿ ಆತ್ಮನು ಹಾಗೆ ಒಳಗಿಹ ಹೊರಗಿಹ ||೯||

ವಾಯು ಜಗದಲಿ ಪೊಗುತ ವಸ್ತುಗಳಂತೆ ಪಡೆವುದು ರೂಪವ

ಸರ್ವ ಪ್ರಾಣಿಗಳಲ್ಲಿ ಆತ್ಮನು ಹಾಗೆ ಒಳಗಿಹ ಹೊರಗಿಹ ||೧೦||

ಸರ್ವ ಲೋಕದ ನಯನ ಸೂರ್ಯನು ಕಣ್ಣ ದೋಷಕಬಾಧ್ಯನು

ಅಂತರಾತ್ಮನು ಇದುವೆ ತೆರದಲಿ ಜಗದ ದುಃಖಕಭಾಗಿಯು ||೧೧||

ಎಲ್ಲ ಪ್ರಾಣಿಗಳಂತರಾತ್ಮನು ಪ್ರಕೃತಿಯಲಿ ಪರಮಾತ್ಮನು

ಆತ್ಮನರಿತರೆ ಸುಖವು ಶಾಶ್ವತ; ಮಿಕ್ಕ ಜನರಿಗೆ ಸಿಕ್ಕದು ||೧೨||

ನಿತ್ಯನೆಲ್ಲೆಡೆ ಜಡದಿ ಚೇತನ ಕಾಮ ಪೂರ್ಣನು ಒಂಟಿಯು

ಆತ್ಮನರಿತರೆ ಸುಖವು ಶಾಶ್ವತ; ಮಿಕ್ಕ ಜನರಿಗೆ ಸಿಕ್ಕದು ||೧೩||

ಪೇಳಲರಿಯದ ಪರಮ ಸುಖವದು ತಿಳಿವರಿಂತಿದ ಮನುಜರು

ತಾನೆ ಹೊಳೆವುದೆ? ಹೊಳೆಯುತಿರುವುದೆ ಬೇರೆ ಬೆಳಕಿನ ಪ್ರಭೆಯಲಿ ||೧೪||

ಸೂರ್ಯ ಬೆಳಗನು ಚಂದ್ರ ತಾರಕ ಮಿಂಚು ಅಗ್ನಿಯು ಬೆಳಗದು

ಬೆಳಗಲದುವೇ ಸರ್ವರದರಲಿ ಬೆಳಕುಗೊಳ್ಳುತ ಹೊಳೆವುದು||೧೫||

॥ಓಂ ಶಾಂತಿಃ ಶಾಂತಿಃ ಶಾಂತಿಃ ॥

ಷಷ್ಠ ವಲ್ಲೀ ಇನ್ನಾಣ ವಾರಕ್ಕೆ

ಚತುರ್ಥ ವಲ್ಲೀ ಗೆ ಇಲ್ಲಿ ನೋಡಿ

ಸಂಗ್ರಹ- ಉಪನಿಷತ್ ಗೀತಾಂಜಲಿ, ಡಾ| ಮಡ್ವ ಶಾಮ ಭಟ್ಟ

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ತಸ್ಯ ಭಾಸಾ ಸರ್ವಮಿದಂ ವಿಭಾತಿ-ಸತ್ಯವಾದ ಮಾತು.
  ಕಠೋಪನಿಷತ್ ನಾವು ನಿತ್ಯವೂ ನೋಡುವ ಆದರೆ ಗೋಷ್ಟಿ ಮಾಡದ್ದ ವಿಷಯಂಗಳ ಹೇಳುತ್ತು.

  [Reply]

  VA:F [1.9.22_1171]
  Rating: +1 (from 1 vote)
 2. ಜಯಶ್ರೀ ನೀರಮೂಲೆ
  jayashree.neeramoole

  ಹರೇ ರಾಮ,
  ಮೊದಲಿಂಗೆ ನಮ್ಮ ಆಂತರ್ಯಲ್ಲಿಪ್ಪ ಆ ಜೀವಾತ್ಮನ ಕಂಡುಗೊಲ್ಲೆಕ್ಕು… ನಂತರ ಅದೇ ಚೈತನ್ಯ ಎಲ್ಲ ಮನುಷ್ಯರಲ್ಲಿಯೂ,ಎಲ್ಲ ಜೀವಿಗಳಲ್ಲಿಯೂ ಇಡೀ ಜಗತ್ತಿನ ಚರಾಚರಗಳಲ್ಲಿ ಇಪ್ಪ ಚೈತನ್ಯ ಹೇಳುದರ ಅರ್ಥ ಮಾಡಿಗೊಲ್ಲೆಕ್ಕು… ಆ ಆಂತರ್ಯ ಹೇಳಿದ ಹಾಂಗೆ ನಡಕ್ಕೊಂಡರೆ ನಾವು ಧರ್ಮ ಮಾರ್ಗಲ್ಲಿ ನಡದ ಹಾಂಗೆ ಆವುತ್ತು… ಇದರಿಂದ ಎಲ್ಲೋರಿಂಗೂ ಒಳಿತಾವುತ್ತು… ಆ ಆಂತರ್ಯಕ್ಕೆ ವಿರುದ್ದವಾಗಿ ನಡಕ್ಕೊಂಡರೆ ನಾವು ಅಧರ್ಮ ಮಾರ್ಗಲ್ಲಿ ನಡದ ಹಾಂಗೆ ಆವುತ್ತು…ಆ ಚೈತನ್ಯ ಒಂದೇ ಆದ ಕಾರಣ ಅಧರ್ಮ ಮಾಡಿರೆ ನಮಗೂ,ಇತರರಿಂಗೂ ತೊಂದರೆ ಆವುತ್ತು…(ನಾವು ಬೇರೆ,ಇತರ ಜೀವಿಗ ಬೇರೆ ಹೇಳುವ ಬೇಧ ಇರುತ್ತಿಲ್ಲೇ…) ಈ ಹಾದಿಲ್ಲಿ ಮುನ್ನಡವಗ ಕೆಲವು ಸರ್ತಿ ಹೊಗಳಿಕೆ ಸಿಕ್ಕುತ್ತು, ಕೆಲವು ಸರ್ತಿ ಬೈಗುಳ ಸಿಕ್ಕುತ್ತು. ಎರಡನ್ನೂ ಅವಂಗೆ ಬಿಟ್ಟು ನಾವು ಆಂತರ್ಯ ಹೇಳಿದ ಹಾದಿಲ್ಲಿ ಮುನ್ನಡೆಕು… ಇದುವೇ ಜೀವನ… ಸುಖ,ದುಃಖಗಳ ಮೀರಿದ ಶಾಶ್ವತವಾದ ಆನಂದ…ಪರಮಾನಂದ…

  [Reply]

  VA:F [1.9.22_1171]
  Rating: +1 (from 1 vote)
 3. ಚೆನ್ನೈ ಬಾವ°
  ಚೆನ್ನೈ ಭಾವ

  ಗೋಪಾಲಣ್ಣನೊಟ್ಟಿಂಗೆ ನಮ್ಮದೂ ಇತ್ಲಾಗಿಂದ.

  [Reply]

  VA:F [1.9.22_1171]
  Rating: +1 (from 1 vote)
 4. ಮುಳಿಯ ಭಾವ
  ರಘು ಮುಳಿಯ

  “ದೇಹಿಗೊಂಬನು ವಿವಿಧ ಜನ್ಮವ ಕರ್ಮ ಜ್ಞಾನಕೆ ಅನುಗುಣ

  ಜೀವ ಜಂತುಗಳಾಗಿ ಜನನವು; ಕೆಲವರು ಪಡೆವರು ಮೋಕ್ಷವ”
  ಬ೦ಧನ೦ದ ಬಿಡುಗಡೆ ಸಿಕ್ಕೆಕ್ಕಾರೆ ಸುಲಭ ಇದ್ದು..ಅರ್ಥಪೂರ್ಣ ಅನುವಾದ.

  [Reply]

  VA:F [1.9.22_1171]
  Rating: +1 (from 1 vote)
 5. ವಿದ್ಯಾ ರವಿಶಂಕರ್
  ವಿದ್ಯಾ ರವಿಶಂಕರ್

  ಧನ್ಯವಾದಂಗೊ.

  [Reply]

  VN:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡಾಮಹೇಶಣ್ಣvreddhiಪೆರ್ಲದಣ್ಣಅಡ್ಕತ್ತಿಮಾರುಮಾವ°ಶೇಡಿಗುಮ್ಮೆ ಪುಳ್ಳಿವಸಂತರಾಜ್ ಹಳೆಮನೆಒಪ್ಪಕ್ಕಬೊಳುಂಬು ಮಾವ°ಬಟ್ಟಮಾವ°ದೊಡ್ಡಮಾವ°ಚೆನ್ನಬೆಟ್ಟಣ್ಣಶುದ್ದಿಕ್ಕಾರ°ಪುಣಚ ಡಾಕ್ಟ್ರುಚೆನ್ನೈ ಬಾವ°ಪ್ರಕಾಶಪ್ಪಚ್ಚಿಕಜೆವಸಂತ°ಎರುಂಬು ಅಪ್ಪಚ್ಚಿಮುಳಿಯ ಭಾವಯೇನಂಕೂಡ್ಳು ಅಣ್ಣವೇಣೂರಣ್ಣಹಳೆಮನೆ ಅಣ್ಣಕೊಳಚ್ಚಿಪ್ಪು ಬಾವದೊಡ್ಮನೆ ಭಾವಚುಬ್ಬಣ್ಣಅನುಶ್ರೀ ಬಂಡಾಡಿಪವನಜಮಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ