ಕೆಲವು ಚೂರ್ಣಿಕೆಗೊ

ಎಲ್ಲೊರಿಂಗೂ ನಮಸ್ಕಾರ ಇದ್ದು!
ಅನುಪ್ಪತ್ಯದ ಎಡಕ್ಕಿಲಿ ಇತ್ಲಾಗಿ ಬಪ್ಪದು ಹೇಳಿರೆ ತಾರಕಲ್ಲಿ ರುದ್ರ ಹೇಳಿದಷ್ಟು ಕಷ್ಟದ ಕೆಲಸ.

ಆದರೂ ಒಂದರಿ ಬಂದಿಕ್ಕಿದ್ದು.
ಜೆಂಬ್ರಂಗೊಕ್ಕೆ ಚೂರ್ಣಿಕೆಗಳ ಬರದುಕೊಡಿ ಬಟ್ಟಮಾವ ಹೇಳಿದ ನಮ್ಮ ಒಪ್ಪಣ್ಣ.
ಚೂರ್ಣಿಕೆಗೊ ಬರವಲೆ ಕೂದರೆ ನೆಂಪಾಗ, ಉಂಬಲೆ ಕೂಬಗಳೇ ನೆಂಪಪ್ಪದು ಮಾಣೀ – ಹೇಳಿದೆ.
ಎಂತ ಹೇಳಿರೂ ಕೇಳಲೇ ಕೇಳ!
ಎಷ್ಟಾದರೂ ನವಗೆ ಗೊಂತಿಪ್ಪದರ ಹೇಳಿಕೊಡದ್ದೆ ಆವುತ್ತೋ!
ಇದಾ, ಎಂಗೊ ಸಣ್ಣ ಇಪ್ಪಗ ಹೇಳಿಗೊಂಡಿದ್ದ ಕೆಲವು. ಬಿಟ್ಟು ಹೋದ್ದದಿದ್ದರೆ ಸೇರುಸಿಗೊಳಿ, ಆತೋ?

(ಅನ್ನಪೂರ್ಣಾಷ್ಟಕ, ಶಂಕರಾಚಾರ್ಯ)
ನಿತ್ಯಾನಂದಕರೀ ವರಾಭಯಕರೀ ಸೌಂದರ್ಯ ರತ್ನಾಕರೀ |
ನಿರ್ಧೂತಾಖಿಲ ಘೋರಪಾವನ ಕರೀ ಪ್ರತ್ಯಕ್ಷ ಮಾಹೇಶ್ವರೀ ||
ಪ್ರಾಲೇಯಾಚಲವಂಶ ಪಾವನಕರೀ ಕಾಶೀ ಪುರಾಧೀಶ್ವರೀ |
ಭಿಕ್ಷಾಂದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ||

(ಗೆಣವತಿ ಸ್ತುತಿ)
ಶುಂಡಾಮಂಡಿತ ರತ್ನಪೂರ್ಣ ಕಲಶಂ ಸಿಂಹಾಸನಸ್ಥಂ ಪ್ರಭುಂ |
ಷಟ್‌ಕೋಣಾಂತ ಹಿಮಾದ್ರಿ ತನಯಾ ಸೂನುಂ ಪ್ರಸನ್ನಾನನಮ್ ||
ಲಕ್ಷ್ಮ್ಯಾಲಿಂಗಿತ ವಿಗ್ರಹಂ ತ್ರಿನಯನಂ ಭಕ್ತೇಶು ಕಲ್ಪದ್ರುಮಮ್
ಮಂತ್ರಾಧೀನ ತನುಂ ಮಹಾಗಣಪತಿಂ ವಂದೇ ಮಹೇಶಾರ್ಚಿತಂ ||

(ಶಿವಮಾನಸಪೂಜಾ)
ಆತ್ಮಾತ್ವಂ ಗಿರಿಜಾಮತಿಃ ಸಹಚರಾಃ ಪ್ರಾಣಾಃಶರೀರಂ ಗೃಹಂ |
ಪೂಜಾತೇ ವಿಷಯೋಪಭೋಗ ರಚನಾ ನಿದ್ರಾ ಸಮಾಧಿ ಸ್ಥಿತಿಃ ||
ಸಂಚಾರಃ ಪದಯೋ ಪ್ರದಕ್ಷಿಣ ವಿಧಿಃ ಸ್ತೋತ್ರಾಣಿ ಸರ್ವಾಗಿರೋ |
ಯದ್ಯತ್ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್ ||

(ರಾಮನ ಸ್ತೋತ್ರ)
ವೈದೇಹೀ ಸಹಿತಂ ಸುರದ್ರುಮತಲೇ ಹೈಮೇ ಮಹಾ ಮಂಟಪೇ
ಮಧ್ಯೇ ಪುಷ್ಪಕಮಾಸನೇ ಮಣಿಮಯೇ ವೀರಾಸನೇ ಸುಸ್ಥಿತಮ್ |
ಅಗ್ರೇವಾಚಯತಿ ಪ್ರಭಂಜನ ಸುತಂ ತತ್ವಂ ಮುನಿಭ್ಯಃ ಪರಂ |
ವ್ಯಾಖ್ಯಾಂತಂ ಭರತಾದಿಭಿಃ ಪರಿವೃತಂ ರಾಮಂ ಭಜೇ ಶ್ಯಾಮಲಮ್ ||


(ಲೀಲಾಶುಕನ ಕಾವ್ಯ)
ಸಾಯಂಕಾಲೇ ವನಾಂತೇ ಕುಸುಮಿತ ಸಮಯೇ ಸೈಕತೇ ಚಂದ್ರಿಕಾಯಾಂ |
ತ್ರೈಲೋಕ್ಯಾಕರ್ಷಣಾಂಗಂ ಸುರುನರ ಗಣಿಕಾ ಮೋಹನಾಪಾಂಗಮೂರ್ತಿ |
ಸೇವ್ಯಂ ಶೃಂಗಾರ ಭಾವೈಃ ನವರಸ ಭರಿತೈಃ ಗೋಪಕನ್ಯಾ ಸಹಸ್ರೈಃ
ವಂದೇಹಂ ರಾಸಕೇಲೀರತ ಅತಿಸುಭಗಂ ಪಶ್ಯ ಗೋಪಾಲಬಾಲಮ್ ||

ಕಸ್ತೂರೀ ತಿಲಕಂ ಲಲಾಟಫಲಕೇ ವಕ್ಷಸ್ಥಲೇ ಕೌಸ್ತುಭಂ |
ನಾಸಾಗ್ರೇ ನವಮೌಕ್ತಿಕಂ ಕರತಲೇವೇಣುಂ ಕರೇ ಕಂಕಣಮ್ ||
ಸರ್ವಾಂಗೇ ಹರಿಚಂದನಂ ಚ ಕಲಯನ್ ಕಂಠೇಚ ಮುಕ್ತಾವಲೀ |
ಗೋಪಸ್ತ್ರೀ ಪರಿವೇಷ್ಟಿತೋ ವಿಜಯತೇ ಗೋಪಾಲಚೂಡಾಮಣೀ ||

ಪಕ್ಕನೆ ಒಂದೇ ಸರ್ತಿಗೆ ಎಲ್ಲ ನೆಂಪಾಗದ್ದಕ್ಕೆ, ನಿದಾನಕ್ಕೆ ಒಂದೊಂದೇ ಸೇರುಸುವೊ, ಆಗದೋ?
ನಿಂಗೊಗೆ ನೆಂಪಾದ್ದರ ಹೇಳಿಕ್ಕಿ!

ಹ್ಮ್, ರಜಾ ಅಂಬೆರ್ಪು!
ಇಂದಿರುಳಿಂಗೆ ಗುರುವಾಯನಕೆರೆಗೆ ಎತ್ತೆಕ್ಕು, ನಾಳೆ ಗ್ರಾಶಾಂತಿ!
ಅಕ್ಕಂಬಗ, ಹಂತಿಲಿ ಕಾಂಬೊ°.
~

ನಿಂಗಳ,
ಬಟ್ಟಮಾವ°

ಬಟ್ಟಮಾವ°

   

You may also like...

28 Responses

 1. ಪಾಯಾತ್ ಕುಮಾರಜನಕ: ಶಶಿಖಂಡಮೌಳಿ:
  ಶಂಖಪ್ರಭಶ್ಚ ನಿಧನಶ್ಚ ಗವೀಶಯಾನ:
  ಗಂಗಾಂಚ ಪನ್ನಗಧರಶ್ಚ ಉಮಾವಿಲಾಸ:
  ಆದ್ಯಕ್ಷರ ರಹಿತೋ ಸಹಿತೋಪಿ ದೇವ:

 2. ನೆಗೆಗಾರ° says:

  ಅಪ್ಪಚ್ಹಿ ಅಳಿಯಂಗೆ ಸೊಪ್ಪಿನ ಮೇಲಾರ
  ಅಪ್ಪಚ್ಚಿ ಅಳಿಯಂಗೆ ಸೊಪ್ಪಿನ ಮೇಲಾರ
  ಹುಲ್ಲಕ್ಕಿ ಅಶನ ಕಸಂಟೆಣ್ಣೆ |
  ಹುಲ್ಲಕ್ಕಿ ಅಶನ ಕಸಂಟೆಣ್ಣೆ ಬಳಿಸಿದರೆ
  ಅಪ್ಪಚ್ಚಿ ಅಳಿಯ° ಉಂಡೇಳುಗು ||

  • ಶ್ರೀಶ. ಹೊಸಬೆಟ್ಟು says:

   ಅಪ್ಪೋ ನಗೆಗಾರ,
   ಇದರ ಯಾವ ರಾಗಲ್ಲಿ ಹಾಡಿದ್ದು?:) 🙂

 3. ಬಟ್ಯ says:

  ಎಂಕ್ ಒಂಜಿಲಾ ಅರ್ಥ ಆಪುಜ್ಜಿ.. 🙁

 4. Krishna Mohan Bhat says:

  nagegaarana haadilli kone saalu appachi aliyan surudungu heli kelida nempu.
  haange uuta aada melana ondu sloka eddu bhatta mavanatre hellaga andare helutte.ningo heleyi helta dairyalli barette.darburasya bhayam naasti tasso mahaa paapaha nishabdo prana sankataa…. bhojananthe madya madye bhara bharaa..
  uttara ningoge gontaagikkallado.

 5. Adithi says:

  Ee choornike heenge intha raagalle haadekku heli idda? Yaradru haadidre mp3 upload maadidre engalu kalile sulabha aavthu alda?

 6. ಸಂಗ್ರಹ ಯೋಗ್ಯ, ಇನ್ನಷ್ಟು ಹೀಂಗಿಪ್ಪದು ಬರಲಿ ಬಟ್ಟ ಮಾವ.

 7. ಚೆನ್ನೈ says:

  ಇನ್ನೂ ಬೇಕು ಯೆಂಗೊಗೆ ಭಟ್ಟ ಮಾವ

  ಯೆವುತ್ತು ನಿಂಗೋಗೆ ಬಿಡುವು ಸಿಕ್ಕುಗು ಕಾದೊಂಡಿದ್ದೆಯೋ.

 8. ಚೆನ್ನೈ ಭಾವ says:

  ಕೆಲವು ಶುಭಾಷಿತ ಶ್ಲೋಕಂಗಳ ಚೂರ್ಣಿಕೆಲಿ ಬತ್ತಾಂಗೆ ಮಾಡೆಕು ಭಟ್ತಮಾವ. ಎಲ್ಲಾ ಕಡೆ ಒಂದೇ ಹಾಂಗಿರ್ತು ಬಾರದ್ದೆ ಅಪರೂಪದ ಮತ್ತು ಸ್ವಾರಸ್ಯದ ಹಲವು ಶ್ಲೋಕಂಗೋ ಇದ್ದನ್ನೇ ( ಎನಗೆ ಗೊಂತಿಲ್ಲೇ- ಎಡೆ ಎಡೆಲಿ ಕೆಲವು ದಿಕ್ಕೆ ಕೇಳುತ್ತು -ಖುಷಿಯಾವ್ತು) ಅದು ಪ್ರಚಲಿತಕ್ಕೆ ಬರೆಕು ಹೇಳಿ ಆಶಯ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *