ಕೇನೋಪನಿಷತ್ -ದ್ವಿತೀಯ ಖಂಡ

December 26, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ಉಪನಿಷತ್ ಗೀತಾಂಜಲಿ” ಪುಸ್ತಕಂದ ಕೇನೋಪನಿಷತ್ ಇದರ ದ್ವಿತೀಯ ಖಂಡ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.

ಶರ್ಮಪ್ಪಚ್ಚಿ
~~~~

ಕೇನೋಪನಿಷತ್ (ದ್ವಿತೀಯ ಖಂಡ)

ಯದಿ ಮನ್ಯಸೇ ಸುವೇದೇತಿ ದಭ್ರಮೇವಾಪಿ

ನೂನಂ ತ್ವಂ ವೇತ್ಥ ಬ್ರಹ್ಮಣೋ ರೂಪಮ್ |

ಯದಸ್ಯ ತ್ವಂ ಯದಸ್ಯ ದೇವೇಷ್ವಥ ನು

ಮೀಮಾಂಸ್ಯಮೇವ ತೇ ಮನ್ಯೇ ವಿದಿತಮ್ ||೧||

ನಾಹಂ ಮನ್ಯೇ ಸುವೇದೇತಿ ನೋ ನ ವೇದೇತಿ ವೇದ ಚ|

ಯೋ ನಸ್ತದ್ವೇದ ತದ್ವೇದ ನೋ ನ ವೇದೇತಿ ವೇದ ಚ ||೨||

ಯಸ್ಯಾ ಮತಂ ತಸ್ಯ ಮತಂ ಮತಂ ಯಸ್ಯ ನ ವೇದ ಸಃ |

ಅವಿಜ್ಞಾತಂ ವಿಜಾನತಾಂ ವಿಜ್ಞಾತಮವಿಜಾನತಾಮ್ ||೩||

ಪ್ರತಿಬೋಧ ವಿದಿತಂ ಮತಮಮೃತತ್ವಂ ಹಿ ವಿಂದತೇ

ಆತ್ಮನಾ ವಿಂದತೇ ವೀರ್ಯಂ ವಿದ್ಯಯಾ ವಿಂದತೇSಮೃತಮ್ ||೪||

ಇಹ ಚೇದವೇದೀದಥ ಸತ್ಯಮಸ್ತಿ ನ ಚೇದಿಹಾವೇದೀನ್ಮಹತೀ ವಿನಷ್ಟಿಃ |

ಭೂತೇಷು ಭೂತೇಷು ವಿಚಿತ್ಯ ಧೀರಾಃ ಪ್ರೇತಾಸ್ಮ್ಯಾಲ್ಲೋಕಾದಮೃತಾ ಭವಂತಿ ||೫||

ಕೇನೋಪನಿಷತ್ (ದ್ವಿತೀಯ ಖಂಡ)-ಕನ್ನಡ ಗೀತೆ

ತಿಳಿದೆ ನಾ ಪರಮಾತ್ಮನೆಂದರೆ ನೀನು ತಿಳಿದುದು ಅಲ್ಲವು

ಜ್ಞಾನಿಯೊರೆವುದ ತಿಳಿಯ ಬೇಕಿದೆ ಮತ್ತೆ ನಿನ್ನಯ ಮನವನು ||೧||

ತಿಳಿದೆ ನಿಖರದಿ ಎನ್ನಲಾರೆನು ತಿಳಿಯನೆಂದೂ ಪೇಳೆನು

ತಿಳಿದು ಕೊಂಡವರಿಹರು ಹಲವರು; ತಿಳಿವೆ ವಿನಯದಿ ಅವರನು ||೨||

ತಿಳಿಯೆನೆನ್ನಲು ತಿಳಿದುಕೊಂಡಿಹ ತಿಳಿದೆನೆನ್ನಲು ತಿಳಿಯನು

ವಿನಯವಿರದಿರೆ ತಿಳಿಯದೇ ಇದೆ, ವಿನಯದಿಂದಲೆ ಜ್ಞಾನವು ||೩||

ಪುರುಷ- ಪ್ರಕೃತಿ ಜ್ಞಾನದಾಳಾದಿ ಅಮೃತದನುಭವ ಪಡೆವನು

ಶಕ್ತಿಗೊಂಬನು ಆತ್ಮ ಬಲದಲಿ ವಿದ್ಯೆಯಿಂದಲಿ ಮೋಕ್ಷವು ||೪||

ಸತ್ಯ ಜ್ಞಾನವ ಜನ್ಮವಿದರಲಿ ಪಡೆದರಾತನು ಸಾರ್ಥನು

ಸಾಧ್ಯವಿರದಿರೆ ಕಷ್ಟ ಜೀವನ ಬಹಳ ನಷ್ಟದಿ ವ್ಯರ್ಥವು

ಜೀವ ಜಡವೆರಡರನು ಮಥಿಸುತ ಜ್ಞಾನ ಪಡೆದವರಮರರು ||೫||

ಓಂ ಶಾಂತಿಃ ಶಾಂತಿಃ ಶಾಂತಿಃ

……ಇನ್ನಾಣ ವಾರಕ್ಕೆ

ಸಂಗ್ರಹ: ಉಪನಿಷತ್ ಗೀತಾಂಜಲಿ-ಡಾ| ಮಡ್ವ ಶಾಮ ಭಟ್ಟ

ಕೇನೋಪನಿಷತ್- ಒಂದನೇ ಖಂಡಕ್ಕೆ ಇಲ್ಲಿ ನೋಡಿ


ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಲಾಯಕ ಆಯ್ದು. ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)
 2. ಜಯಶ್ರೀ ನೀರಮೂಲೆ
  jayashree.neeramoole

  ಧನ್ಯವಾದ ಅಪ್ಪಚ್ಚಿ… ನಾವೆಲ್ಲಾ ಪಡೆಯಲೇಬೇಕಾದ… ಜೀವನಕ್ಕೆ ಅತ್ಯಂತ ಉಪಯುಕ್ತವಾದ… ಜ್ಹಾನ ಅದು…

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಬೊಳುಂಬು ಮಾವ

  ಜೀವನದ ಸಾರವ ಎಷ್ಟು ಚೆಂದಕೆ ಹೇಳಿದ್ದವು ಅಲ್ಲದೊ. ಒದಗುಸಿ ಕೊಟ್ಟ ಅಪ್ಪಚ್ಚಿಗೆ ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)
 4. ಒಪ್ಪಣ್ಣ

  ಶಂಭಟ್ಟಜ್ಜ ಡಾಗುಟ್ರ ಸರಳ ಅನುವಾದಂಗೊ ನೋಡಿ ಕೊಶಿ ಆತು.
  ಇವರ ಅನುವಾದಂದಲಾಗಿಯಾದರೂ ನವಗೆ “ಕೇನೋಪನಿಷತ್ತಿನ” ಬಗ್ಗೆ ಗೊಂತಾತು.

  ಧನ್ಯವಾದ ಅಪ್ಪಚ್ಚಿ.

  [Reply]

  VA:F [1.9.22_1171]
  Rating: 0 (from 0 votes)
 5. ಮುಳಿಯ ಭಾವ
  ರಘು ಮುಳಿಯ

  ” ವಿನಯದಿಂದಲೆ ಜ್ಞಾನವು” – ಜೀವನ ಸಾರವ ಸತ್ವಯುತವಾಗಿ ಅನುವಾದ ಮಾಡಿದ್ದವು.ಧನ್ಯವಾದ ಅಪ್ಪಚ್ಚಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರದಣ್ಣಪಟಿಕಲ್ಲಪ್ಪಚ್ಚಿವಸಂತರಾಜ್ ಹಳೆಮನೆಡೈಮಂಡು ಭಾವದೊಡ್ಡಭಾವಗೋಪಾಲಣ್ಣಪ್ರಕಾಶಪ್ಪಚ್ಚಿಚೆನ್ನೈ ಬಾವ°ಶೇಡಿಗುಮ್ಮೆ ಪುಳ್ಳಿಶ್ಯಾಮಣ್ಣಡಾಗುಟ್ರಕ್ಕ°ಶಾ...ರೀಪುತ್ತೂರಿನ ಪುಟ್ಟಕ್ಕಮಂಗ್ಳೂರ ಮಾಣಿಮಾಷ್ಟ್ರುಮಾವ°ಮಾಲಕ್ಕ°ದೇವಸ್ಯ ಮಾಣಿಶ್ರೀಅಕ್ಕ°ಪುಣಚ ಡಾಕ್ಟ್ರುಶರ್ಮಪ್ಪಚ್ಚಿವೇಣಿಯಕ್ಕ°ಪೆಂಗಣ್ಣ°ಡಾಮಹೇಶಣ್ಣಸುವರ್ಣಿನೀ ಕೊಣಲೆಪುತ್ತೂರುಬಾವಅನು ಉಡುಪುಮೂಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ