ಕೇನೋಪನಿಷತ್-ಪ್ರಥಮ ಖಂಡ

December 19, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ಉಪನಿಷತ್ ಗೀತಾಂಜಲಿ” ಪುಸ್ತಕಂದ ಕೇನೋಪನಿಷತ್ ಇದರ ಪ್ರಥಮ ಖಂಡ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.

ಶರ್ಮಪ್ಪಚ್ಚಿ
~~~~

ಕೇನೋಪನಿಷತ್ (ಪ್ರಥಮ ಖಂಡ)

ಸಾಮವೇದೀಯ ತಲವಕಾರ ಬ್ರಾಹ್ಮಣ

ಕೇನೇಷಿತಂ ಪತತಿ ಪ್ರೇಷಿತಂ ಮನಃ ಕೇನ ಪ್ರಾಣಃ ಪ್ರಥಮಃ ಪ್ರೈತಿ ಯುಕ್ತಃ |

ಕೇನೇಷಿತಾಂ ವಾಚಮಿಮಾಂ ವದಂತಿ ಚಕ್ಷುಃ |

ಶ್ರೋತ್ರಂ ಕ ಉ ದೇವೋ ಯುನಕ್ತಿ ||೧||

ಶ್ರೋತ್ರಸ್ಯ ಶ್ರೋತ್ರಂ ಮನಸೋ ಮನೋ ಯದ್ |

ವಾಚೋ ಹ ವಾಚಂ ಸ ಉ ಪ್ರಾಣಸ್ಯ ಪ್ರಾಣಃ |

ಚಕ್ಷುಷಶ್ಚಕ್ಷುರತಿಮುಚ್ಯ ಧೀರಾಃ ಪ್ರೇತ್ಯಾಸ್ಮಾಲ್ಲೋಕಾದಮೃತಾ ಭವಂತಿ ||೨||

ನ ತತ್ರ ಚಕ್ಷುರ್ಗಚ್ಛತಿ ನ ವಾಗ್ಗಚ್ಛತಿ ನೋ ಮನಃ |

ನ ವಿದ್ಮೋ ವಿಜಾನೀಮೋ ಯಥೈತದನುಶಿಷ್ಯಾತ್ ||೩||

ಅನ್ಯ ದೇವ ತದ್ವಿದಿತಾದಥೋ ಅವಿದಿತಾದಧಿ |

ಇತಿ ಶುಶ್ರುಮ ಪೂರ್ವೇಷಾಂ ಯೇ ನಸ್ತದ್ವ್ಯಾಚಚಕ್ಷಿರೇ ||೪||

ಯದ್ವಾಚಾSನಭ್ಯುದಿತಂ ಯೇನ ವಾಗಭ್ಯುಧ್ಯತೇ |

ತದೇವ ಬ್ರಹ್ಮ ತ್ವಂ ವಿದ್ಧಿ ನೇದಂ ಯದಿದಮುಪಾಸತೇ ||೫||

ಯನ್ಮನಸಾ ನ ಮನುತೇ ಯೇನಾಹುರ್ಮನೋ ಮತಮ್ |

ತದೇವ ಬ್ರಹ್ಮ ತ್ವಂ ವಿದ್ಧಿ ನೇದಂ ಯದಿದಮುಪಾಸತೇ ||೬||

ಯಚಕ್ಷುಷಾ ನ ಪಶ್ಯತಿ ಯೇನ ಚಕ್ಷೂಂಷಿ ಪಶ್ಯತಿ |

ತದೇವ ಬ್ರಹ್ಮ ತ್ವಂ ವಿದ್ಧಿ ನೇದಂ ಯದಿದಮುಪಾಸತೇ ||೭||

ಯಚ್ಛ್ರೋತ್ರೇಣ ನ ಶೃಣೋತಿ ಯೇನ ಶ್ರೋತ್ರಮಿದಂ ಶ್ರುತಮ್ |

ತದೇವ ಬ್ರಹ್ಮ ತ್ವಂ ವಿದ್ಧಿ ನೇದಂ ಯದಿದಮುಪಾಸತೇ ||೮||

ಯತ್ ಪ್ರಾಣೇನ ಪ್ರಾಣಿತಿ ಯೇನ ಪ್ರಾಣಃ ಪ್ರಣೀಯತೇ |

ತದೇವ ಬ್ರಹ್ಮ ತ್ವಂ ವಿದ್ಧಿ ನೇದಂ ಯದಿದಮುಪಾಸತೇ ||೯||

***

ಕೇನೋಪನಿಷತ್ (ಕನ್ನಡ ಗೀತೆ)- ಮೊದಲನೆಯ ಖಂಡ

ಯಾರ ಪ್ರೇರಣೆಯಿಂದ ಮನವಿದು ಇಚ್ಛಿತಾರ್ಥಕೆ ಚಲಿಪುದು?

ಮುಖ್ಯ ಪ್ರಾಣನು ಯಾವ ದೇವರ ಹೊಂದಿ ಜತೆಯಲ್ಲಿರುವನು?

ಮಾತನಾಡಲು ಬಯಕೆ ಯಾರದು? ಕಿವಿಗೆ ಕಣ್ಣಿಗೆ ಯಾರದು? ||೧||

(ಪ್ರಶ್ನೆಯೀತೆರ ಶಿಷ್ಯ ಕೇಳಲು ಗುರುಗಳುತ್ತರ ನುಡಿದರು)

ಕಿವಿಗೆ ಕಿವಿಯದು ಮನಕೆ ಮನವದು ಮಾತುಗಳ ಒಳ ಮಾತದು

ಪ್ರಾಣಗಳಿಗೂ ಪ್ರಾಣವಾಗಿದೆ ಕಣ್ಣುಗಳ ಒಳ ಕಣ್ಣದು

ಬುದ್ಧಿಶಾಲಿಯು ಮೀರುತಿಂದ್ರಿಯ ಜನ್ಮ ದಾಟುತ ಮುಕ್ತನು ||೨||

ಹೋಗದಾಕಡೆ ಕಣ್ಣ ದೃಷ್ಟಿಯು ಮಾತು ಮನವದು ಹೋಗದು

ನಾವು ಅರಿಯೆವು, ಸ್ಪಷ್ಟವಾಗದು ಹೇಗೆ ಹೇಳಲು ಸಾಧ್ಯವು ! ||೩||

ತಿಳಿದುದಾವುದು ತಿಳಿಯದಿರುವುದಕಿಂತ ಮೀರಿಹನಾತನು

ಬೇರೆಯಾತನು, ಎಟಕನರಿವಿಗೆ ಪೇಳ್ವರೀತೆರ ಹಿರಿಯರು ||೪||

ಪ್ರಕಟವಾಗದು ಮಾತಿನಿಂದಲಿ ಮಾತು ಅದರಿಂ ಪ್ರಕಟವು

ಈಶನೀತರವೆಂದು ತಿಳಿಯಿರಿ ಅಲ್ಲವೀಜಗ ದೇವರು ||೫||

ಸಾಧ್ಯವಾಗದು ಮನವು ಗ್ರಹಿಸಲು ಮನವು ಅದರಿಂದುದಯವು

ಈಶನೀತರವೆಂದು ತಿಳಿಯಿರಿ ಅಲ್ಲವೀಜಗ ದೇವರು ||೬||

ಕಾಣಲಾಗದು ಕಣ್ಣಿನಿಂದಲೆ ಕಣ್ಣು ಅದರಿಂ ಕಾಂಬುದು

ಈಶನೀತರವೆಂದು ತಿಳಿಯಿರಿ ಅಲ್ಲವೀಜಗ ದೇವರು ||೭||

ಕೇಳಲಾಗದು ಕಿವಿಗಳಿಂದಲೆ ಕಿವಿಗಳದರಿಂ ಕೇಳ್ವುದು

ಈಶನೀತರವೆಂದು ತಿಳಿಯಿರಿ ಅಲ್ಲವೀಜಗ ದೇವರು ||೮||

ಬದುಕಲಾಗದು ಪ್ರಾಣದಿಂದಲೆ ಪ್ರಾಣವದರಿಂ ಚಲಿಪುದು

ಈಶನೀತರವೆಂದು ತಿಳಿಯಿರಿ ಅಲ್ಲವೀಜಗ ದೇವರು ||೯||

ಓಂ ಶಾಂತಿಃ ಶಾಂತಿಃ ಶಾಂತಿಃ

……ಇನ್ನಾಣ ವಾರಕ್ಕೆ

ಸಂಗ್ರಹ: ಉಪನಿಷತ್ ಗೀತಾಂಜಲಿ-ಡಾ| ಮಡ್ವ ಶಾಮ ಭಟ್ಟ


ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಯಾವುದರಿಂದ ಇದೆಲ್ಲಾ?-ಎಲ್ಲರ ಮನಸ್ಸಿಲಿ ಉದಿಸುವ ಪ್ರಶ್ನೆ!
  ಸತ್ಯವಾದ ಬ್ರಹ್ಮನ ಕುರಿತು ವಿವರಿಸುವ ಉಪನಿಷತ್ ಓದಿ ಕುಶಿ ಆತು ಶರ್ಮಣ್ಣ.

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಉಂಡೆಮನೆ ಕುಮಾರಣ್ಣ ಹೇಳಿದಾಂಗೆ ಕ್ಲಿಷ್ಟವಾದ ಉಪನಿಷತ್ ಸಾರವ ಅನುವಾದ ರೂಪಲ್ಲಿ ಇಲ್ಲಿ ನವಗೆ ಸಿಕ್ಕುತ್ತಾ ಇಪ್ಪದಕ್ಕೆ ತುಂಬಾ ಧನ್ಯವಾದ ಮಡ್ವದಜ್ಜಂಗೂ ಶರ್ಮಪ್ಪಚ್ಚಿಗೂ.

  [Reply]

  VA:F [1.9.22_1171]
  Rating: 0 (from 0 votes)
 3. ಜಯಶ್ರೀ ನೀರಮೂಲೆ
  jayashree.neeramoole

  ಮಾತನಾಡುವುದು, ಕೇಳುವುದು, ನೋಡುವುದು,…ಮನಸ್ಸು,ಬುದ್ಧಿ… ಸುಲಭಲ್ಲಿ ಹೇಳುತ್ತರೆ ಎಲ್ಲ ೫ ಜ್ಹಾನೆಂದ್ರಿಯಗಳೂ, ಎಲ್ಲ ೫ ಕರ್ಮೆಂದ್ರಿಯಗಳೂ… ಮನಸ್ಸು,ಬುದ್ಧಿ ಎಲ್ಲವುದೇ ಅವನ ನಿಯಂತ್ರಣಲ್ಲಿ ಇಪ್ಪದು… ನಾವು ಕೇವಲ ನಿಮಿತ್ತ ಮಾಂತ್ರ ಹೇಳುವ ಸತ್ಯ ಒಂದರಿ ಗೊಂತಾದ ಮೇಲೆ ‘ಆನು’,’ಎನ್ನದು’,’ಆನು ಮಾಡಿದ್ದು’ ಹೇಳುವ ಭಾವ ಬತ್ತಿಲ್ಲೆ… “ಆದದ್ದೆಲ್ಲ ಒಳಿತೆ ಆಗಿದೆ, ಆಗುತ್ತಿರುವುದೆಲ್ಲ ಒಳಿತೆ ಆಗುತ್ತಿದೆ” ಹೇಳುದು ಅರ್ಥ ಆವುತ್ತು…. ಮತ್ತೆ ಜೀವನದ ಎಲ್ಲ ಗೋಳಾಟ೦ಗಳೂ ಮುಗುದು ಜೀವನ ಹೇಳಿರೆ ಆನಂದದ ಆಟ ಆವುತ್ತು…

  [Reply]

  VA:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘು ಮುಳಿಯ

  ಕಲ್ಪನೆಗೆ ಮೀರಿದ ಅರ್ಥ ! ಸರಳ ಸು೦ದರ,ಅಬ್ಬಾ..ಅನುವಾದ ಭಾರೀ ಲಾಯ್ಕ ಇದ್ದನ್ನೆ.ಧನ್ಯವಾದ ಅಪ್ಪಚ್ಚಿ.

  [Reply]

  VA:F [1.9.22_1171]
  Rating: 0 (from 0 votes)
 5. ಮಂಗ್ಳೂರ ಮಾಣಿ

  ಪ್ರಕಟವಾಗದು ಮಾತಿನಿಂದಲಿ ಮಾತು ಅದರಿಂ ಪ್ರಕಟವು
  ಸಾಧ್ಯವಾಗದು ಮನವು ಗ್ರಹಿಸಲು ಮನವು ಅದರಿಂದುದಯವು
  ಕಾಣಲಾಗದು ಕಣ್ಣಿನಿಂದಲೆ ಕಣ್ಣು ಅದರಿಂ ಕಾಂಬುದು
  ಕೇಳಲಾಗದು ಕಿವಿಗಳಿಂದಲೆ ಕಿವಿಗಳದರಿಂ ಕೇಳ್ವುದು
  ಬದುಕಲಾಗದು ಪ್ರಾಣದಿಂದಲೆ ಪ್ರಾಣವದರಿಂ ಚಲಿಪುದು
  ಈಶನೀತರವೆಂದು ತಿಳಿಯಿರಿ ಅಲ್ಲವೀಜಗ ದೇವರು

  ಎಷ್ಟು ಗ್ರೇಶಿಯರೂ ಮುಗಿತ್ತೇ ಇಲ್ಲೆನ್ನೆ ಅಪ್ಪಚ್ಚಿ??

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರ°ಅಡ್ಕತ್ತಿಮಾರುಮಾವ°ವಿದ್ವಾನಣ್ಣಅಕ್ಷರದಣ್ಣಗೋಪಾಲಣ್ಣಕಜೆವಸಂತ°ಶರ್ಮಪ್ಪಚ್ಚಿಸುಭಗಹಳೆಮನೆ ಅಣ್ಣಪುತ್ತೂರುಬಾವಅನುಶ್ರೀ ಬಂಡಾಡಿvreddhiವಸಂತರಾಜ್ ಹಳೆಮನೆಮಾಲಕ್ಕ°ನೆಗೆಗಾರ°ಗಣೇಶ ಮಾವ°ಶ್ಯಾಮಣ್ಣತೆಕ್ಕುಂಜ ಕುಮಾರ ಮಾವ°ಬೊಳುಂಬು ಮಾವ°ಜಯಶ್ರೀ ನೀರಮೂಲೆಶೇಡಿಗುಮ್ಮೆ ಪುಳ್ಳಿಕಳಾಯಿ ಗೀತತ್ತೆಉಡುಪುಮೂಲೆ ಅಪ್ಪಚ್ಚಿಅನು ಉಡುಪುಮೂಲೆಪೆಂಗಣ್ಣ°ಸಂಪಾದಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ