ಲಲಿತಾ ಪಂಚಕಮ್

September 29, 2014 ರ 6:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನವರಾತ್ರಿಯ ಐದನೇ ದಿನ ಇಂದು ಶುಕ್ಲಪಂಚಮಿ.
ಇಂದು ದೇವಿಯ ಲಾಲಿತ್ಯ ರೂಪಿಣಿಯಾಗಿ ಲಲಿತಾ ಪಂಚಮಿ ಹೇಳಿ ಆಚರಣೆ ಮಾಡ್ತವು.
ದೇವಿಯ ಹೆಸರೇ ಹೇಳುವ ಹಾಂಗೆ ಲಲಿತೆ. ಅತ್ಯಂತ ಸುಂದರ ರೂಪಂದ ಕಂಗೊಳಿಸುವ ಈ ಲಲಿತಾ ತ್ರಿಪುರಸುಂದರಿಯ ಅವತಾರ ಎಂತಕ್ಕೆ ಆತು? ಹೇಂಗೆ ಆತು ಹೇಳಿ ಲಲಿತೋಪಖ್ಯಾನಲ್ಲಿ ವಿಸ್ತಾರಲ್ಲಿ ಹೇಳಿದ್ದವಡ್ಡ. ಅದರ ಸೂಕ್ಷ್ಮರೂಪ ಇಲ್ಲಿದ್ದು..

ಶಿವ° ಮನ್ಮಥನ ತನ್ನ ಮೂರನೇ ಕಣ್ಣಿಂದ ದಹನ ಮಾಡುವಗ ದೇಹದ ಬೂದಿಯ ಚಿತ್ರಕರ್ಮ ಹೇಳ್ತ ಗಣೇಶ್ವರ° ಒಟ್ಟುಮಾಡಿ, ಒಂದು ಪುರುಷಾಕೃತಿಯ ಮಾಡ್ತ°.
ತನ್ನ ಎದುರಿಪ್ಪ ಆ ವಿಚಿತ್ರ ಶರೀರವ ಶಿವ° ನೋಡಿದ ಕೂಡ್ಲೇ ಅದಕ್ಕೆ ಜೀವ ಬತ್ತು. ಸಾಕ್ಷಾತ್ ಮನ್ಮಥನ ಹಾಂಗೇ ಇದ್ದ ತೇಜಸ್ವೀ ವೆಗ್ತಿಯ ಹತ್ತರೆ ಚಿತ್ರಕರ್ಮ ಹೇಳ್ತ°,”ನೀನು ಮಹಾದೇವನ ಸ್ತುತಿಮಾಡು. ಅವಂದ ನಿನಗೆ ಬೇಕಾದ್ದು ಸಿಕ್ಕುತ್ತು” ಹೇಳಿ.
ಆ ವೆಗ್ತಿ ಚಿತ್ರಕರ್ಮಂದ ಶತರುದ್ರೀ ಮಂತ್ರವ ಕಲ್ತು ಅದನ್ನೇ ಜಪಿಸಿ, ರುದ್ರನ ಪೂಜೆ ಮಾಡ್ತ°. ಇದರಿಂದ ಸಂಪ್ರೀತ° ಆದ ಪರಮೇಶ್ವರ°, ಅವಂಗೆ ಅರುವತ್ತುಸಾವಿರ ವರ್ಷದ ವರೆಗೆದೇ ಚಕ್ರವರ್ತಿ ಪದವಿಯ ಅನುಗ್ರಹಿಸುತ್ತ°.
ಪರಶಿವನ ಈ ನಡತೆಯ ನೋಡಿದ ಬ್ರಹ್ಮ ’ಭಂಡ್’ ’ಭಂಡ್’ ಹೇಳಿ ಹೇಳ್ತ°. ಹಾಂಗಾಗಿ ಆ ವಿಚಿತ್ರಪುರುಷನ ಹೆಸರು ಭಂಡ ಹೇಳಿಯೇ ಆತು.
ಹುಟ್ಟಿದ್ದೇ ರುದ್ರನ ಕೋಪಂದ ಭಸ್ಮ ಆದ ರೂಪಂದ! ಅದೇ ಸ್ವಭಾವಲ್ಲಿ ರುದ್ರಸ್ವರೂಪವನ್ನೇ ಹೊಂದಿ, ಮಯ ಕಟ್ಟಿದ ಶೋಣಿತಾಪುರಲ್ಲಿ ರಾಜ್ಯ ಆಳಿಗೊಂಡು ಇತ್ತಿದ್ದ°. ಮತ್ತೆ ಕಾಲಕ್ರಮಲ್ಲಿ ಎಲ್ಲೋರ ಸೋಲುಸಿ, ಇಂದ್ರನ ಸ್ವರ್ಗಕ್ಕೂ ಆಕ್ರಮಣ ಮಾಡ್ಲೆ ಹೋವುತ್ತ°. ಇಂದ್ರ°, ನಾರದನ ಉಪದೇಶದ ಹಾಂಗೆ ಹಿಮಗಿರಿಯ ಬುಡಕ್ಕೆ ಬಂದು, ಭಾಗೀರಥೀ ತೀರಲ್ಲಿ ಪರಾಶಕ್ತಿಯ ಮಹಾಪೂಜೆಯ ಯಾಗವಿಧಾನಂದ ಮಾಡ್ತ°. ಆ ಯಜ್ಞ ಕುಂಡಂದ ಪರಮತೇಜಃಪುಂಜ ಆಗಿ ಒಂದು ಚಕ್ರಾಕಾರ ಉದ್ಭವ ಆವುತ್ತು.
ಆ ಚಕ್ರದ ಮಧ್ಯಲ್ಲಿ, ಉದಯ ಆವುತ್ತ ಸೂರ್ಯಂಗೆ ಸಮವಾದ ಪ್ರಭೆ ಹೊಂದಿದ, ಜಗಜ್ಜನನಿ, ಬ್ರಹ್ಮವಿಷ್ಣುಶಿವಸ್ವರೂಪಳೂ, ಅತ್ಯಂತ ಸುಂದರಿಯೂ, ಆನಂದರಸಸಾಗರಳೂ, ಜಪಾಕುಸುಮದ ಕಾಂತಿ ಹೊಂದಿದ, ದಾಳಿಂಬೆಯ ಹೂಗಿನ ಬಣ್ಣದ ಸೀರೆ ಸುತ್ತಿದ, ಸರ್ವಾಭರಣಭೂಷಿತೆಯಾದ, ಪಾಶಾಂಕುಶ-ಇಕ್ಷುಕೋದಂಡ-ಪಂಚಬಾಣಂಗಳಿಂದ ಶೋಭಿಸುವ ಕೈಗಳನ್ನೂ ಹೊಂದಿದ ಮಹಾದೇವಿಯ ಅವತಾರ ಆವುತ್ತು!
ಹೀಂಗೆ ಉದ್ಭವಿಸಿದ ದೇವೀ ತ್ರಿಪುರಸುಂದರಿ ದೇವತೆಗಳ ಪ್ರಾರ್ಥನೆಯ ಮನ್ನಿಸಿ, ಭಂಡಾಸುರನ ಕೊಲ್ಲುಲೆ ಒಪ್ಪಿಗೊಳ್ತು.
ಭಂಡ ಹೇಳಿದರೆ ಲಜ್ಜೆ ಇಲ್ಲದವ° ಹೇಳಿ ಅರ್ಥ. ಜೀವಭಾವ ಹೊಂದಿದ ಸಂಸಾರಿ. ಈ ರೂಪದ ಭಂಡಾಸುರನ, ಲಾಲಿತ್ಯರೂಪಿಣಿಯಾಗಿ ದೇವಿ ಸಂಹಾರ ಮಾಡ್ತು. ಇಚ್ಛಾಶಕ್ತಿ,ಜ್ಞಾನಶಕ್ತಿ, ಕ್ರಿಯಾಶಕ್ತಿಸ್ವರೂಪಿಣಿಯಾದ ಲಲಿತಾಂಬಿಕೆಯ ನಾವೆಲ್ಲ ಸುಲಭರೂಪಲ್ಲಿ ಲಲಿತಾಸಹಸ್ರನಾಮದ ಮೂಲಕ ಆರಾಧನೆ ಮಾಡಿ, ಆ ದೇವಿಯ ಪೂರ್ಣ ಅನುಗ್ರಹಕ್ಕೆ ಪ್ರಾಪ್ತಿ ಆವುತ್ತು.

ಶ್ರೀ ಶಂಕರಾಚಾರ್ಯರು ಲಲಿತೆಯ ಸೌಂದರ್ಯವ ಬಣ್ಣಿಸಿ ಬರದ ಕೃತಿಯೇ ಲಲಿತಾ ಪಂಚಕಮ್.
ಪ್ರಾತಃ ಕಾಲಲ್ಲಿ ದೇವಿಯ ಸೌಂದರ್ಯವ, ದೇವಿಯ ಚರಣಕಮಲವ ನೆನೆಸಿ ಭಜನೆಮಾಡ್ತೆ, ನಮಿಸುತ್ತೆ, ಲಲಿತೆಯ ಪುಣ್ಯನಾಮವ ಸ್ತುತಿ ಮಾಡ್ತೆ, ಅಬ್ಬೆಯ, ಕಾಮೇಶ್ವರಿ, ಕಮಲೆ, ಮಹೇಶ್ವರಿ, ಶಾಂಭವಿ, ಜಗನ್ಮಾತೆ, ಸರಸ್ವತಿ, ತ್ರಿಪುರೇಶ್ವರಿ ಹೀಂಗೆಲ್ಲಾ ನಾನಾ ವಿಧ ಪುಣ್ಯನಾಮಲ್ಲಿ ಸ್ತುತಿಮಾಡ್ತೆ- ಹೇಳಿ ಈ ಶ್ಲೋಕಲ್ಲಿ ಆಚಾರ್ಯರು ಸುಲಭರೂಪಲ್ಲಿ ಅಮ್ಮನ ಆರಾಧಿಸುವ ಬಗೆ ನವಗೆ ಮಾಡಿ ಕೊಟ್ಟಿದವು.
ಲಲಿತಾಂಬಿಕೆಯ ಸೌಭಾಗ್ಯ ಕೊಡುವ ಈ ಶ್ಲೋಕ ಆರು ಪ್ರಾತಃ ಕಾಲಲ್ಲಿ ಪಠನೆ ಮಾಡ್ತವಾ, ಅವಕ್ಕೆ ಲಲಿತಾದೇವಿ ಕೂಡ್ಲೇ ಪ್ರಸನ್ನಳಾಗಿ ವಿದ್ಯೆ, ಸಂಪತ್ತು, ನಿರ್ಮಲ ಸುಖ, ಅಪಾರ ಕೀರ್ತಿ ಕೊಡ್ತು ಹೇಳಿ ಶ್ಲೋಕದ ಫಲಶ್ರುತಿಲಿ ಹೇಳ್ತವು.
ನಮ್ಮ ಬೈಲಿಲಿಯೂ ಲಲಿತಾಪಂಚಮಿಯ ಬೇರೆ ಬೇರೆ ರೀತಿಲಿ ಆರಾಧನೆ ಮಾಡ್ತವು. ಹೆಚ್ಚಿನವ್ವು ಲಲಿತಾಸಹಸ್ರನಾಮ ಮಾಡಿ ಕುಂಕುಮಾರ್ಚನೆ ಮಾಡ್ತವು. ಬಲ್ನಾಡು ಸುಬ್ಬಣ್ಣಮಾವನ ಮನೆ ಪಂಚವಟಿಲಿ ಪಂಚಮಿಗೆ ’ಲಲಿತಾಪಂಚಮಿ ಅಖಂಡ ಭಜನೆ’ ಮಾಡ್ತವು. ಈ ಲಲಿತಾಪಂಚಮಿಯ ಶುಭದಿನ ಎಲ್ಲೋರೂ ಈ ಕಣ್ಣು ಮನಸ್ಸು ತುಂಬುವ ರೂಪರಾಶಿಯ ಅಬ್ಬೆಯ ರೂಪವ ಧ್ಯಾನಿಸಿ, ಭಕ್ತೀಲಿ ಅರ್ಚನೆ ಮಾಡಿ, ನಮ್ಮೊಳ ಇಪ್ಪ ಭಂಡಾಸುರನನ್ನೂ ನಾಶಮಾಡಿ ಪಾವನರಾಯೆಕ್ಕು ಹೇಳ್ತ ಹಾರಯಿಕೆ.

ಲಲಿತಾ ಪಂಚಕಮ್

ಪ್ರಾತಃ ಸ್ಮರಾಮಿ ಲಲಿತಾವದನಾರವಿಂದಂ
ಬಿಂಬಾಧರಂ ಪೃಥುಲಮೌಕ್ತಿಕಶೋಭಿನಾಸಮ್ |
ಆಕರ್ಣದೀರ್ಘನಯನಂ ಮಣಿಕುಂಡಲಾಢ್ಯಂ
ಮಂದಸ್ಮಿತಂ ಮೃದುಮದೋಜ್ಜ್ವಲಭಾಲದೇಶಮ್ ||1||

ಪ್ರಾತರ್ಭಜಾಮಿ ಲಲಿತಾಭುಜಕಲ್ಪವಲ್ಲೀಂ
ರತ್ನಾಂಗುಲೀಯಲಸದಂಗುಲಿಪಲ್ಲವಾಢ್ಯಾಮ್ |
ಮಾಣಿಕ್ಯಹೇಮವಲಯಾಂಗದಶೋಭಮಾನಾಂ
ಪುಂಡ್ರೇಕ್ಷುಚಾಪಕುಸುಮೇಷುಸೃಣೀರ್ದಧಾನಾಮ್ ||2||

ಪ್ರಾತರ್ನಮಾಮಿ ಲಲಿತಾಚರಣಾರವಿಂದಂ
ಭಕ್ತೇಷ್ಟದಾನನಿರತಂ ಭವಸಿಂಧುಪೋತಮ್ |
ಪದ್ಮಾಸನಾದಿಸುರನಾಯಕಪೂಜನೀಯಂ
ಪದ್ಮಾಂಕುಶಧ್ವಜಸುದರ್ಶನಲಾಂಛನಾಢ್ಯಮ್ ||3||

ಪ್ರಾತಃ ಸ್ತುವೇ ಪರಶಿವಾಂಲಲಿತಾಂ ಭವಾನೀಂ
ತ್ರಯ್ಯಂತವೇದ್ಯವಿಭವಾಂಕರುಣಾನವದ್ಯಾಮ್ |
ವಿಶ್ವಸ್ಯ ಸೃಷ್ಟಿವಿಲಯಸ್ಥಿತಿಹೇತುಭೂತಾಂ
ವಿಶ್ವೇಶ್ವರೀಂ ನಿಗಮವಾಂಙ್ಮನಸಾದಿದೂರಾಮ್ ||4||

ಪ್ರಾತರ್ವದಾಮಿ ಲಲಿತೇ ತವ ಪುಣ್ಯನಾಮ
ಕಾಮೇಶ್ವರೀತಿ ಕಮಲೇತಿ ಮಹೇಶ್ವರೀತಿ |
ಶ್ರೀಶಾಂಭವೀತಿ ಜಗತಾಂ ಜನನೀ ಪರೇತಿ
ವಾಗ್ದೇವತೇತಿ ವಚಸಾ ತ್ರಿಪುರೇಶ್ವರೀತಿ ||5||

ಯಃ ಶ್ಲೋಕಪಂಚಕಮಿದಂ ಲಲಿತಾಂಬಿಕಾಯಾಃ
ಸೌಭಾಗ್ಯದಂ ಸುಲಲಿತಂ ಪಠತಿ ಪ್ರಭಾತೇ |
ತಸ್ಮೈ ದದಾತಿ ಲಲಿತಾ ಝಟಿತಿ ಪ್ರಸನ್ನಾ
ವಿದ್ಯಾಂ ಶ್ರಿಯಂ ವಿಮಲಸೌಖ್ಯಮನಂತಕೀರ್ತಿಮ್ ||6||

~*~*~

ಸ್ತೋತ್ರವ ಕೇಳಲೆ:

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಲಲಿತಾ ಪಂಚಮಿ ಬಗ್ಗೆ ಮಾಹಿತಿ ಸಹಿತ ಲಲಿತಾ ಪಂಚಕಮ್ ಬೈಲಿಲಿ ನೀಡಿದ್ದಕ್ಕೆ ಅಕ್ಕಂಗೆ ಧನ್ಯವಾದ.
  [ಸೌಭಾಗ್ಯದಂ ಸುಲಲಿತಂ ಪಠತಿ ಪ್ರಭಾತೇ ] – ಅಪ್ಪು., ಉದಿಯಪ್ಪಗ ಕೇಳ್ಳೆ ಲಾಯಕ ಆಹ್ಲಾದಕರವಾಗಿದ್ದು. ಒಳ್ಳೆ ಕೊಂಡಾಟವೂ ಆವ್ತು.

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಮಾವ

  ಭಂಡನ ರುಂಡ ಚೆಂಡಾಡಿದ ಶ್ರೀ ಲಲಿತೆಯ ಕಥೆ ಕೇಳಿದೆ. ಎನಗಿದು ಹೊಸತ್ತು. ಒಟ್ಟಿಂಗೆ ಲಲಿತಾ ಪಂಚಕವನ್ನು ಕೊಟ್ಟ ಶ್ರೀ ಅಕ್ಕಂಗೆ ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)
 3. ಅನು ಉಡುಪುಮೂಲೆ
  ಅನುಪಮ

  ಅಕ್ಕ ತು೦ಬಾ ಒಳ್ಲೆ ಸುದ್ದಿ ಕೊಟ್ಟಿದಿ. ಧನ್ಯವಾದಗಳು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸರ್ಪಮಲೆ ಮಾವ°ಮಾಷ್ಟ್ರುಮಾವ°ಸುವರ್ಣಿನೀ ಕೊಣಲೆಕೆದೂರು ಡಾಕ್ಟ್ರುಬಾವ°ದೊಡ್ಡಭಾವದೊಡ್ಮನೆ ಭಾವದೇವಸ್ಯ ಮಾಣಿನೀರ್ಕಜೆ ಮಹೇಶಹಳೆಮನೆ ಅಣ್ಣಪುತ್ತೂರಿನ ಪುಟ್ಟಕ್ಕಕಜೆವಸಂತ°ಪುತ್ತೂರುಬಾವದೊಡ್ಡಮಾವ°ಅನು ಉಡುಪುಮೂಲೆವೇಣೂರಣ್ಣಎರುಂಬು ಅಪ್ಪಚ್ಚಿಅಕ್ಷರ°ಡಾಗುಟ್ರಕ್ಕ°ಸುಭಗಮಂಗ್ಳೂರ ಮಾಣಿಅಜ್ಜಕಾನ ಭಾವಒಪ್ಪಕ್ಕಪುಣಚ ಡಾಕ್ಟ್ರುಗೋಪಾಲಣ್ಣವಿನಯ ಶಂಕರ, ಚೆಕ್ಕೆಮನೆಬೋಸ ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
"ಆನು ಕಂಡುಂಡ ಕಾಶೀಯಾತ್ರೆ"
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?

ಬೆಣಚ್ಚಿಪ್ಪಲ್ಲಿ ಹುಡ್ಕಲೆ