ಮಹಾಲಕ್ಷ್ಯಷ್ಟಕ ಸ್ತೋತ್ರ

ಶ್ರೀ ಮಹಾಲಕ್ಷ್ಮ್ಯಾಷ್ಟಕ ಸ್ತೋತ್ರಮ್:

ನಮಸ್ತೇಸ್ತು ಮಹಾಮಾಯೇ, ಶ್ರೀ ಪೀಠೇ ಸುರ ಪೂಜಿತೇ|
ಶಂಖ ಚಕ್ರ ಗದಾಹಸ್ತೇ, ಮಹಾ ಲಕ್ಷ್ಮೀ ನಮೋಸ್ತು ತೇ ||1||

ನಮಸ್ತೇ ಗರುಡಾರೂಢೇ ಕೋಲಾಸುರ ಭಯಂಕರಿ|
ಸರ್ವ ಪಾಪ ಹರೇ ದೇವಿ, ಮಹಾಲಕ್ಷ್ಮೀ ನಮೋಸ್ತು ತೇ ||2||

ಸರ್ವಜ್ಞೇ ಸರ್ವ ವರದೇ ಸರ್ವದುಷ್ಟ ಭಯಂಕರಿ|
ಸರ್ವ ದುಃಖ ಹರೇ ದೇವಿ ಮಹಾಲಕ್ಷ್ಮೀ ನಮೋಸ್ತು ತೇ ||3||

ಸಿಧ್ದಿ ಬುದ್ಧಿ ಪ್ರದೇ ದೇವಿ ಭಕ್ತಿ ಮುಕ್ತಿ ಪ್ರದಾಯಿನಿ|
ಮಂತ್ರಮೂರ್ತೇ ಸದಾ ದೇವಿ ಮಹಾಲಕ್ಷ್ಮೀ ನಮೋಸ್ತು ತೇ||4||

ಆದ್ಯಂತರಹಿತೇ ದೇವಿ ಆದಿ ಶಕ್ತಿ ಮಹೇಶ್ವರಿ|
ಯೋಗಜ್ಞೇ ಯೋಗ ಸಂಭೂತೇ ಮಹಾಲಕ್ಷ್ಮೀ ನಮೋಸ್ತು ತೇ||5||

ಸ್ಥೂಲ ಸೂಕ್ಷ್ಮ ಮಹಾರೌದ್ರೇ ಮಹಾ ಶಕ್ತಿ ಮಹೋದರೇ|
ಮಹಾ ಪಾಪ ಹರೇ ದೇವಿ ಮಹಾಲಕ್ಷ್ಮೀ ನಮೋಸ್ತು ತೇ ||6||

ಪದ್ಮಾಸನಸ್ಥಿತೇ ದೇವಿ ಪರಬ್ರಹ್ಮ ಸ್ವರೂಪಿಣಿ|
ಪರಮೇಶಿ ಜಗನ್ಮಾತಃ ಮಹಾಲಕ್ಷ್ಮೀ ನಮೋಸ್ತು ತೇ||7||

ಶ್ವೇತಾಂಬರಧರೇ ದೇವಿ ನಾನಾಲಂಕಾರ ಭೂಷಿತೇ|
ಜಗಸ್ಥಿತೇ ಜಗನ್ಮಾತಃ ಮಹಾಲಕ್ಷ್ಮೀ ನಮೋಸ್ತು ತೇ||8||

ಫಲಶ್ರುತಿ :

ಮಹಾ ಲಕ್ಷ್ಮ್ಯಾಷ್ಟಕ ಸ್ತೋತ್ರಂ ಯಃ ಪಠೇತ್ ಭಕ್ತಿಮಾನ್ನರಃ|
ಸರ್ವ ಸಿದ್ಧಿಮವಾಪ್ನೋತಿ ರಾಜ್ಯಂ ಪ್ರಾಪ್ನೋತಿ ಸರ್ವದಾ||9||

ಏಕ ಕಾಲೇ ಪಠೇನ್ನಿತ್ಯಂ ಮಹಾ ಪಾಪ ವಿನಾಶನಂ|
ದ್ವಿಕಾಲೇ ಯಃ ಪಠೇನ್ನಿತ್ಯಂ ಧನ ಧಾನ್ಯ ಸಮನ್ವಿತಃ||10||

ತ್ರಿಕಾಲೇ ಯಃ ಪಠೇನಿತ್ಯಂ ಮಹಾ ಶತ್ರು ವಿನಾಶನಂ|
ಮಹಾ ಲಕ್ಷ್ಮೀಃ ಭವೇನ್ನಿತ್ಯಂ ಪ್ರಸನ್ನಾ ವರದಾ ಶುಭಾ||11||

|| ಇತಿ ಶ್ರೀ ಮಹಾ ಲಕ್ಷ್ಮ್ಯಾಷ್ಟಕ ಸ್ತೋತ್ರಂ ಸಂಪೂರ್ಣಂ||

ಶರ್ಮಪ್ಪಚ್ಚಿ

   

You may also like...

8 Responses

 1. ಶರ್ಮಪ್ಪಚ್ಚಿ says:

  ಕೆ.ಮಹೇಶ ಕಳುಸಿದ ಮಿಂಚಂಚೆ ಹೀಂಗಿದ್ದು:
  ಶರ್ಮಪ್ಪಚ್ಚಿ,
  ಮಹಾಲಕ್ಷ್ಮ್ಯಷ್ಟಕ ಸ್ತೋತ್ರ ಕೊಟ್ಟದು ಲಾಯಕಾಯಿದು.
  ಕೆಲವು ಪರಿಷ್ಕಾರ೦ಗಳ ಸೂಚಿಸೆಕಾ?
  ಲಕ್ಷ್ಮೀ+ಅಷ್ಟಕ=ಲಕ್ಷ್ಮ್ಯಷ್ಟಕ ಆವುತ್ತು. ಹಾ೦ಗಾಗಿ ಮಹಾಲಕ್ಷ್ಮ್ಯಷ್ಟಕ ಸ್ತೋತ್ರ ಹೇಳಿ ಆಯೆಕು.
  ಈ ಸ್ತೋತ್ರ ಮಾಲಿಕೆಲ್ಲಿಪ್ಪ ವಿಶೇಷ ಎ೦ತ ಹೇಳಿರೆ ದೇವಿಯ ವರ್ಣನೆ ಎಲ್ಲವೂ ಸ೦ಬೋಧನಾ ವಿಭಕ್ತಿಲ್ಲೇ ಇಪ್ಪದು.
  ಹಾ೦ಗಾಗಿ ಹೀ೦ಗೆ ಆಯೆಕು–
  ಮಹಾಲಕ್ಷ್ಮೀ ನಮೋಸ್ತುತೇ —
  ಮಹಾಲಕ್ಷ್ಮಿ ನಮೋಸ್ತು ತೇ (ಮಹಾಲಕ್ಷ್ಮಿಯೇ ನಿನಗೆ ನಮಸ್ಕಾರವಿರಲಿ)
  ..ಭಯ೦ಕರೀ — ..ಭಯ೦ಕರಿ (೨ ಮತ್ತು ೩ ರಲ್ಲಿ)
  ದೇವೀ (ದೇವಿಯು) — ದೇವಿ (ದೇವಿಯೇ) (೫ ನೆ ಶ್ಲೋಕ)
  ಜಗನ್ಮಾತಾಃ — ಜಗನ್ಮಾತಃ (೮)
  ಮಹಾ ಲಕ್ಷ್ಮೀ — ಮಹಾಲಕ್ಷ್ಮೀಃ (೧೧) (ಇಲ್ಲಿ ಮಹಾಲಕ್ಷ್ಮಿಯು ಪ್ರಸನ್ನಳಾಗಲಿ ಹೇಳುವ ಅರ್ಥ ಬರೆಕು, ಹಾ೦ಗಾಗಿ)
  K Mahesh
  Research Scholar,
  Cell for Indian Science and Technology in Sanskrit,
  Indian Institute of Technology,
  Powai, Mumbai- 400076.
  ಓದುವವು ಇದರ ಸರಿಪಡಿಸೆಕ್ಕು ಹೇಳಿ ಕೇಳಿಗೊಳ್ತೆ
  ಸೂಚನೆ ಕೊಟ್ಟ ಮಹೇಶಂಗೆ ಧನ್ಯವಾದಂಗೊ.

  • ಗುರಿಕ್ಕಾರ° says:

   ಡಾಮಹೇಶಣ್ಣಾ..
   ನಿಂಗೊ ಬೈಲಿನ ಸೊತ್ತು!!
   ಇಷ್ಟು ಸೂಕ್ಷ್ಮಂಗೊ ಬೌಷ್ಷ ಆರುದೇ ಹೇಳ್ತವಿಲ್ಲೆ. ಒಂದೇ ಒಪ್ಪಲ್ಲಿ ಎಷ್ಟು ತೂಕದ, ವಿವರಂಗೊ ತಿಳುಸಿಕೊಟ್ಟಿ.

   ತಿದ್ದೊಪ್ಪ ಕೊಟ್ಟ ನಿಂಗೊಗೂ, ಅದರ ಸಂತೋಷಲ್ಲಿ ಸ್ವೀಕರುಸಿದ ಶರ್ಮಪ್ಪಚ್ಚಿಗೂ ಸವಿನಯ ಅಭಿವಂದನೆಗೊ.
   ಹರೇರಾಮ..

 2. ರಘುಮುಳಿಯ says:

  ಸಂಗ್ರಹಿಸಿ ಸಾದರಪಡಿಸಿದ ಅಪ್ಪಚ್ಚಿಗೂ ,ಸೂಕ್ಷ್ಮಲ್ಲಿ ನೋಡಿ ಸರಿ ಮಾಡಿದ ಮಹೇಶಂಗೂ ಧನ್ಯವಾದ೦ಗೋ.

 3. ಗೋಪಾಲ ಮಾವ says:

  ಸ್ತೋತ್ರವ ಬೈಲಿಂಗೆ ತಿಳುಸಿಕೊಟ್ಟ ಶರ್ಮಪ್ಪಚ್ಚಿಗೆ ಧನ್ಯವಾದ. ಅಪ್ಪಚ್ಚಿ ಕನ್ನಡಲ್ಲಿ ಒಳ್ಳೆ ಸ್ಪೀಡಿಲ್ಲಿ ಟೈಪು ಮಾಡುತ್ತವೋ ಹೇಳಿ. ಅದೂ ಶ್ಲೋಕಂಗಳ ಟೈಪು ಮಾಡೆಕಾರೆ ಅದು ದೊಡ್ಡ ಕೆಲಸವೆ.

 4. ಶರ್ಮಪ್ಪಚ್ಚೀ..
  ನಮ್ಮ ಹೆರಿಯೋರು ಮನೆಲಿ ಹೇಳಿಗೊಂಡು ಇದ್ದಿದ್ದ ಶ್ಲೋಕಂಗಳ ಸಂಪಾಲುಸಿ ತಂದು ಬೈಲಿಂಗೆ ಕೊಡ್ತಾ ಇಪ್ಪದು ತುಂಬಾ ಒಳ್ಳೆ ಕಾರ್ಯ. ಇನ್ನುದೇ ಬತ್ತಾ ಇರಳಿ..
  ಡಾಮಹೇಶಣ್ಣನ ಸಂಸ್ಕೃತ ಮೌಲ್ಯವರ್ಧನೆಯ ಕಾರ್ಯವೂ ಆಗಲಿ.
  ಎರಡುದೇ ಸಂತೋಷದ ವಿಚಾರ. 🙂

 5. ಈ ಸ್ತೋತ್ರ ಎನ್ನ ಅಜ್ಜಿ ಹೇಳಿಗೊಂಡಿತ್ತವು…ಹಾಂಗೆ ರಜ ರಜಾ ಬಾಯಿಗೆ ಬಂದುಗೊಂಡಿತ್ತು..ಈಗ ಬೈಲಿಲಿ ಪ್ರಕಟ ಮಾಡಿದ ಶರ್ಮಪ್ಪಚ್ಚಿ ಮತ್ತೆ ಮಹೇಶಣ್ಣ,,ನಿಂಗೋಗೆ ತುಂಬು ಹೃದಯದ ಧನ್ಯವಾದಂಗ….

 6. ಗುತ್ತು ಸದಾಶಿವ° says:

  ಈಗಷ್ಟೇ ಶರ್ಮಪ್ಪಚ್ಚಿಯ ಭಾಷಾಪ್ರೇಮದ ಆಳದ ಅರಿವಾತೆನಗೆ. ತುಂಬಾ ಸಂತೋಷ ಹೇಂಗಿಪ್ಪವರ ಮಾರ್ಗದರ್ಶಿತ್ವ ಇಪ್ಪದು ಈ ಉಪಯುಕ್ತವಾದ ಶುದ್ದಿ ಪತ್ರಕ್ಕೆ.

 7. ಶ್ರೀದೇವಿ ವಿಶ್ವನಾಥ್ says:

  ಶರ್ಮಪ್ಪಚ್ಚಿ, ಮಹಾಲಕ್ಷ್ಮ್ಯಷ್ಟಕ ಸ್ತೋತ್ರ ಬೈಲಿಂಗೆ ಕೊಟ್ಟದು ಒಳ್ಳೇದಾತು… ಹೆರ ಸುಮಾರು ಪುಸ್ತಕಂಗ ಸಿಕ್ಕುತ್ತು..
  ಸಂಸ್ಕೃತಲ್ಲಿ ಸ್ತೋತ್ರಂಗಳ ಮೂಲ ರೂಪ ಆದ ಕಾರಣ ನಾವು ಅದರ ಪುಸ್ತಕ ಪ್ರತಿಯ ಮಾತ್ರ ಓದುತ್ತಲ್ಲದಾ? ಸರಿ ತಪ್ಪು ವಿಮರ್ಶುಸುತ್ತಿಲ್ಲೇ.
  ಹಾಂಗಾಗಿ ಅದರ ಹೆಚ್ಚಿನ ಫಲ ನವಗೆ ಸಿಕ್ಕದ್ದದಾದಿಕ್ಕು.
  ನಾವು ತಪ್ಪಿದಲ್ಲಿ, ಸ್ವಪ್ರೇರಣೆಂದ ಡಾಮಹೇಶಣ್ಣನ ಹಾಂಗೆ ನಮ್ಮ ತಿದ್ದುವೋರು ಸಿಕ್ಕವು ಅಲ್ಲದಾ?
  ಒಳ್ಳೇದಾತು.. ಇನ್ನುದೇ ನಾವು ನಿತ್ಯ ಹೇಳ್ತ ಸ್ತೋತ್ರಂಗ ಸಿಕ್ಕಿದರೆ ಬೈಲಿಂಗೆ ಹಾಕಿಕ್ಕಿ ಆತಾ?

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *