ಮಹತೋ ಮಹೀಯಾನ್

November 14, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ಸೂಕ್ತ ಗೀತಾಂಜಲಿ” ಪುಸ್ತಕಂದ ಮಹತೋ  ಮಹೀಯಾನ್ ನ ಇಲ್ಲಿ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.

ಶರ್ಮಪ್ಪಚ್ಚಿ
~~~

ಮಹತೋ  ಮಹೀಯಾನ್

(ಮಹಾನಾರಾಯಣೋಪನಿಷತ್ ನ ಸುರುವಾಣ ಏಳು ಮಂತ್ರಂಗೊ)

ಅಂಭಸ್ಯ ಪಾರೇ ಭುವನಸ್ಯ ಮಧ್ಯೆ ನಾಕಸ್ಯ ಪೃಷ್ಟೇ ಮಹತೋ ಮಹೀಯಾನ್|

ಶುಕ್ರೇಣ ಜ್ಯೋತಿಗ್ಂಷಿ ಸಮನುಪ್ರವಿಷ್ಟಃ ಪ್ರಜಾಪತಿಶ್ಚರತಿ ಗರ್ಭೇ ಅಂತಃ ||೧||

ಯಸ್ಮಿನ್ನಿದಗ್ಂ ಸಂ ಚ ವಿಚೈತಿ ಸರ್ವಂ ಯಸ್ಮಿನ್ದೇವಾ ಅಧಿ ವಿಶ್ವೇ ನಿಷೇದುಃ |

ತದೇವ ಭೂತಂ ತದು ಭವ್ಯ ಮಾ ಇದಂ ತದಕ್ಷರೇ ಪರಮೇ ವ್ಯೋಮನ್ ||೨||

ಯೇನಾವೃತಂ ಖಂ ಚ ದಿವಂ ಮಹೀಂ ಚ ಯೇನಾದಿತ್ಯಸ್ತಪತಿ ತೇಜಸಾ ಬ್ರಾಜಸಾ ಚ |

ಯಮಂತ ಸ್ಸಮುದ್ರೇ ಕವಯೋ ವಯಂತಿ ಯದಕ್ಷರೇ ಪರಮೇ ಪ್ರಜಾಃ ||೩||

ಯತಃ ಪ್ರಸೂತಾ ಜಗತಃ ಪ್ರಸೂತೀ ತೋಯೇನ ಜೀವಾನ್ಪೃಚಸರ್ಜ ಭೂಮ್ಯಾಮ್ |

ಯದೋಷಧೀಭಿಃ ಪುರುಷಾನ್ ಪಶೂಗ್ ಶ್ಚ ವಿವೇಶ ಭೂತಾನಿ ಚರಾಚರಾಣಿ ||೪||

ಅತಃ ಪರಂ ನಾನ್ಯದಣೀಯಸಗ್ಂ ಹಿ ಪರಾತ್ಪರಂ ಯನ್ಮಹತೋ ಮಹಾಂತಮ್ |

ಯದೇಕಮವ್ಯಕ್ತ ಮನಂತರೂಪಂ ವಿಶ್ವಂ ಪುರಾಣಂ ತಮಸಃ ಪರಸ್ತಾತ್ ||೫||

ತದೇವರ್ತಂ ತದುಸತ್ಯಮಾಹುಸ್ತದೇವ ಬ್ರಹ್ಮ ಪರಮಂ ಕವೀನಾಮ್ |

ಇಷ್ಟಾಪೂರ್ತಂ ಬಹುಧಾ ಜಾತಂ ಜಾಯಮಾನಂ ವಿಶ್ವಂ ಭಿಭರ್ತಿ ಭುವನಸ್ಯ ನಾಭಿಃ ||೬||

ತದೇವಾಗ್ನಿಸ್ತದ್ವಾಯುಸ್ತಥ್ಸೂರ್ಯಸ್ತದು ಚಂದ್ರಮಾಃ |

ತದೇವ ಶುಕ್ರಮಮೃತಂ ತದ್ಬ್ರಹ್ಮತದಾಪಸ್ಸ ಪ್ರಜಾಪತಿಃ ||೭||

ಓಂ ಶಾಂತಿಃ ಶಾಂತಿಃ ಶಾಂತಿಃ

ಮಹಿಮಾತಿ ಮಹಿಮ (ಕನ್ನಡ ಗೀತೆ)

ಪಾರವರಿಯದ ಕಡಲ ನೀರಲಿ ಭೂಮಿ ಮಧ್ಯದಿ ಸ್ವರ್ಗ ದಾಚೆ |

ಮಹಿಮೆ ಹಿರಿಮೆಯ ಬ್ರಹ್ಮ ನೆಲಸಿಹ ಜೀವ ಚೈತನ್ಯಗಳನು ತುಂಬಿ |

ಬೀಜ ರೂಪದಿ ಜ್ಯೋತಿ ಬೆಳಗುತ ಅಂತರಾತ್ಮನು ಮೆರೆವನೊಳಗೆ ||೧||

ವಿಶ್ವದೆಲ್ಲೆಡೆ ಸೃಷ್ಟಿಲಯಪಿತ ದೇವತೆಗಳನು ಪೊರೆವ ಶಕ್ತಿ |

ಹಿಂದೆ ಮುಂದೆಯು ಎಂದಿಗೆಂದಿಗು ಅದುವೆ ಅಕ್ಷರ ವ್ಯೋಮ ರೂಪಿ ||೨||

ವ್ಯಾಪ್ತನಾತನು ಸರ್ವ ದಿಶೆಯಲಿ ಭೂಮಿ ಸ್ವರ್ಗಗಳಲ್ಲು ಮಧ್ಯೆ|

ಸೂರ್ಯನುರಿವನು ಬೆಳಕನೀವನು; ಮುನಿಯ ಹೃದಯಾಕಾಶದಲ್ಲಿ |

ಬಂಧಗೊಳುವನು ಧ್ಯಾನಗೈಯಲು; ಅವನೆ ಅಕ್ಷರ ಪ್ರಜಾಪತಿಯು ||೩||

ಪ್ರಕೃತಿಯಾತನ ಮೊದಲ ಸೃಷ್ಟಿಯು; ಪಂಚ ಭೂತಗಳಿಂದ ಜನನ |

ವನದ ಔಷಧಿ, ಪ್ರಾಣಿ, ಮನುಜರ, ಚರಾಚರಗಳ ಪ್ರಾಣ ತುಂಬಿ ||೪||

ಶ್ರೇಷ್ಠರಲ್ಲಿಯು ಶ್ರೇಷ್ಠನಾತನು ಒಬ್ಬನಲ್ಲದೆ ಇಬ್ಬರಲ್ಲ |

ವ್ಯಕ್ತಗೊಳ್ಳದೆ ರೂಪನಂತದಿ ವಿಶ್ವವ್ಯಾಪ್ತನು ಪೂರ್ವದಿಂದ |

ಕತ್ತಲಾಚೆಗೆ ಉತ್ತಮೋತ್ತನು ಅಣುಗಳಿಂದಲು ಸಣ್ಣಗಿಹನು ||೫||

ಧರ್ಮವದುವೇ ಸತ್ಯವದುವೇ ಪರಮ ಬ್ರಹ್ಮನು ಅದುವೆಯೆಂದು |

ಪೇಳ್ವರೆಲ್ಲರು ಜ್ಞಾನವಂತರು ಪೂಜ್ಯ ಋಷಿಗಳು ಘೋಷಿಸಿಹರು |

ಧರೆಯ ಧರಿಸಿದ ನಾಭಿಯದುವೇ, ಮುಂದೆ ಹಿಂದೆಯು ಇರುವುದದುವೆ ||೬||

ಅಗ್ನಿಯದುವೇ ವಾಯುವದುವೇ ಸೂರ್ಯನದುವೇ ಚಂದ್ರ ಕೂಡ

ಶುಕ್ರವದುವೇ ಅಮೃತವದುವೇ ಜಲವು ಅದುವೇ ಪ್ರಜಾಪತಿಯು ||೭||

ಓಂ ಶಾಂತಿಃ ಶಾಂತಿಃ ಶಾಂತಿಃ

ಸಂಗ್ರಹ: ಸೂಕ್ತ ಗೀತಾಂಜಲಿ- ಡಾ| ಮಡ್ವ ಶಾಮ ಭಟ್ಟ

ಸೂ:
ವೇದಮೂರ್ತಿ ತುಪ್ಪೆಕಲ್ಲು ಸಹೋದರರ
ಮಹತೋ  ಮಹೀಯಾನ್” ಧ್ವನಿಮುದ್ರಿಕೆಯ ಬೈಲಿನ ಚೆನ್ನೈಬಾವ ಕಳುಸಿಕೊಟ್ಟಿದವು. ಬೈಲಿನ ಕೇಳುಗರಿಂಗಾಗಿ ಇಲ್ಲಿ ನೇಲುಸಿದ್ದು:
ಇಬ್ರಿಂಗೂ ಧನ್ಯವಾದಂಗೊ.

[audio:audio/mahato_maheeyaan.mp3] ಮಹತೋ ಮಹೀಯಾನ್, 5.0 out of 10 based on 1 rating

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಈ ಕಂತೂ ಲಾಯಕ ಆಯ್ದು. ಧನ್ಯವಾದ ಅಪ್ಪಚ್ಚಿಗೆ.

  [Reply]

  VA:F [1.9.22_1171]
  Rating: 0 (from 0 votes)
 2. ಜಯಶ್ರೀ ನೀರಮೂಲೆ
  jayashree.neeramoole

  ಧನ್ಯವಾದ ಅಪ್ಪಚ್ಚಿ… ಆನು ಹರೇ ರಾಮದ ಸಹಾಯಂದ, ಗುರುಗಳ ಅಶೀರ್ವಾದಂದ ದೇವರು ಹೇಳಿರೆ ಎಂತರ,ಹೇಂಗೆ ಹೇಳಿ ತಿಳುಕ್ಕೊಂಬಲೇ ಪ್ರಯತ್ನ ಪಡುತ್ತಾ ಇದ್ದೆ. ತಿಳುಕ್ಕೊಂದಷ್ಟೂ ಎನಗೆ ಏನೂ ಗೊಂತಿಲ್ಲೇ ಹೇಳಿ ಅನ್ನಿಸುತ್ತು… ಆದರೆ ಕಲಿವಲೆ ಮಾಂತ್ರ ತುಂಬಾ ಆಸಕ್ತಿದಾಯಕವಾದ ವಿಷಯ… ಸಂಸ್ಕ್ರುತಲ್ಲಿ ಅರ್ಥ ಮಾಡಿಗೊಮ್ಬಷ್ಟು ಜ್ಹಾನ ಎನಗಿಲ್ಲೇ… ಕನ್ನಡ ಅನುವಾದ ಓದುವಾಗ “ಅಪ್ಪಪ್ಪು ದೇವರು ಹೀಂಗೆ ಇಪ್ಪದು” ಹೇಳಿ ಅನ್ನಿಸುತ್ತು.

  [Reply]

  VA:F [1.9.22_1171]
  Rating: 0 (from 0 votes)
 3. ಕೃಷ್ಣ ಭಟ್, ಶೇಡಿಗುಮ್ಮೆ

  ಧನ್ಯವಾದಂಗೋ !

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಜ್ಜಕಾನ ಭಾವಉಡುಪುಮೂಲೆ ಅಪ್ಪಚ್ಚಿಪುಟ್ಟಬಾವ°ಡಾಮಹೇಶಣ್ಣವಾಣಿ ಚಿಕ್ಕಮ್ಮಬಂಡಾಡಿ ಅಜ್ಜಿಪುತ್ತೂರಿನ ಪುಟ್ಟಕ್ಕವಿದ್ವಾನಣ್ಣಒಪ್ಪಕ್ಕಮುಳಿಯ ಭಾವಚೆನ್ನಬೆಟ್ಟಣ್ಣಅನುಶ್ರೀ ಬಂಡಾಡಿಶೀಲಾಲಕ್ಷ್ಮೀ ಕಾಸರಗೋಡುಬೋಸ ಬಾವಚೆನ್ನೈ ಬಾವ°ವಸಂತರಾಜ್ ಹಳೆಮನೆದೀಪಿಕಾಶೇಡಿಗುಮ್ಮೆ ಪುಳ್ಳಿಮಂಗ್ಳೂರ ಮಾಣಿಎರುಂಬು ಅಪ್ಪಚ್ಚಿತೆಕ್ಕುಂಜ ಕುಮಾರ ಮಾವ°ಕೆದೂರು ಡಾಕ್ಟ್ರುಬಾವ°ನೆಗೆಗಾರ°ವೆಂಕಟ್ ಕೋಟೂರುಕಾವಿನಮೂಲೆ ಮಾಣಿವಿನಯ ಶಂಕರ, ಚೆಕ್ಕೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ