ಮೇಧಾ ಸೂಕ್ತಮ್

August 29, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ಸೂಕ್ತ  ಗೀತಾಂಜಲಿ” ಪುಸ್ತಕಂದ “ಮೇಧಾ ಸೂಕ್ತ ” ವ ಇಲ್ಲಿ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.

ಶರ್ಮಪ್ಪಚ್ಚಿ
~~~

ಮೇಧಾ ಸೂಕ್ತಮ್

ಮೇಧಾದೇವೀ ಜುಷಮಾಣಾ ನ ಆಗಾದ್ವಿಶ್ವಾಚೀ ಭದ್ರಾ ಸುಮನಸ್ಯಮಾನಾ|

ತ್ವಯಾ ಜುಷ್ಟಾ ನುದಮಾನಾ ದುರುಕ್ತಾನ್ ಬೃಹದ್ವದೇಮ ವಿದಥೇ ಸುವೀರಾಃ ||೧||

ತ್ವಯಾ ಜುಷ್ಟ ಋಷಿರ್ಭವತಿ ದೇವಿ ತ್ವಯಾ ಬ್ರಹ್ಮಾಗತ ಶ್ರೀ ರುತ ತ್ವಯಾ|

ತ್ವಯಾ ಜುಷ್ಟಶ್ಚಿತ್ರಂ ವಿಂದತೇ ವಸು ಸಾ ನೋ ಜುಷಸ್ವ ದ್ರವಿಣೋ ನ ಮೇಧೇ||೨||

ಮೇಧಾಂ ಮ ಇಂದ್ರೋ ದಧಾತು| ಮೇಧಾಂ ದೇವೀ ಸರಸ್ವತೀ|

ಮೇಧಾಂ ಮೇ ಅಶ್ವಿನಾವುಭಾವಾದತ್ತಾಂ ಪುಷ್ಕರಸ್ರಜಾ||೩||

ಅಪ್ಸರಾಸು ಚ ಯಾ ಮೇಧಾ ಗಂಧರ್ವೇಷು ಚ ಯನ್ಮನಃ|

ದೈವೀಂ ಮೇಧಾ ಸರಸ್ವತೀ ಸಾಮಾಂ ಮೇಧಾ ಸುರಭಿರ್ಜುಷತಾಗ್ ಸ್ವಾಹಾ ||೪||

ಆ ಮಾಂ ಮೇಧಾ ಸುರಭಿರ್ವಿಶ್ವರೂಪಾ ಹಿರಣ್ಯ ವರ್ಣಾ ಜಗತೀ ಜಗಮ್ಯಾ|

ಊರ್ಜಸ್ವತೀ ಪಯಸಾ ಪಿನ್ವಮಾನಾ ಸಾಮಾಂ ಮೇಧಾ ಸುಪ್ರತೀಕಾ ಜುಷಂತಾಮ್ ||೫||

ಮಯಿ ಮೇಧಾಂ ಮಯಿಪ್ರಜಾಂ ಮಯ್ಯಗ್ನಿಸ್ತೇ ಜೋದಧಾತು|

ಮಯಿ ಮೇಧಾಂ ಮಯಿ ಪ್ರಜಾಂ ಮಯೀಂದ್ರ ಇಂದ್ರಿಯಂ ದಧಾತು|

ಮಯಿ ಮೇಧಾಂ ಮಯಿ ಪ್ರಜಾಂ ಮಯಿ ಸೂರ್ಯೋ ಭ್ರಾಜೋ ದಧಾತು ||೬||

ಓಂ ಶಾಂತಿಃ ಶಾಂತಿಃ ಶಾಂತಿಃ ||

ಮೇಧಾ ಸೂಕ್ತ (ಕನ್ನಡ ಗೀತೆ)

ಸಕಲ ಜೀವಿಯ ಬುದ್ಧಿ ದೇವತೆ ದೇವಿ ಮೇಧಾ ಶ್ರೇಯದಾತೆ

ರೂಪ ಮಂಗಳ ನಮಗನುಗ್ರಹ ನೀಡು ಸುಮನದಿ ತೋಷ ಪ್ರೀತೆ

ವೇದ ರಹಿತದ ಮಾತು ತೊರೆಯುತ ವೀರ ಪುತ್ರರ ಸೇರಿಕೊಂಡು

ನಿನ್ನ ಪ್ರೀತಿಯ ಬಯಸಿ ದೇವಿಯೆ ಸಾರುತಿರುವೆವು ಬ್ರಹ್ಮ ತತ್ವ ||೧||

ಮನುಜ ಋಷಿಯಾಗುವನು ಒಲಿದರೆ ಬ್ರಹ್ಮನಾಗುವ ನಿನ್ನ ದಯದಿ

ಭಾಗ್ಯಗೊಂಬನು ಸಿರಿಯನುಂಬನು ಧನಿಕ ಬಡವನ ಪೊರೆವ ತೆರದಿ ||೨||

ಇಂದ್ರ ನೀಡಲಿ ನನಗೆ ಮೇಧಾ ವಾಣಿ ಮೇಧಾ ಶಕ್ತಿ ಕೊಡಲಿ

ನನಗೆ ನೀಡಲಿ ಶಕ್ತಿ ಮೇಧಾ ಪದ್ಮ ಮಾಲೆಯ ಅಶ್ವಿನಿಗಳು ||೩||

ದೇವ ಸ್ತ್ರೀಯರ ಶಕ್ತಿ ಮೇಧಾ ಮನದಿ ಗಂಧರ್ವರಲಿ ಸಹಿತ

ದೇವ ಶಕ್ತಿಯು ದೇವ ವಿದ್ಯೆಯು ಕೂಡಿಕೊಂಡಿಹ ಬುದ್ಧಿಶಕ್ತಿ

ಗಂಧ ಬೀರುತ ಇಷ್ಟ ನೀಡುತ ಹೊಂದಲೆನ್ನನು ಹೋಮಿಸುವೆನು |೪||

ಹೊನ್ನ ಬಣ್ಣದ ಗಂಧ ಸೂಸುವ ಸಕಲ ವಿಧದಲಿ ಜಗದಿ ಮೆರೆವ

ಜನರ ಕಾಮಕೆ ಶಕ್ತಿ ನೀಡುವ ದೇವಿ ಮೇಧಾ ಒಲಿಯಲೆನಗೆ

ಹಾಲು ಮೊಸರನು ಸುರಿದು ನಮ್ಮನು ತೋಷ ಹೊಂದುತ ನಲಿದು ಬರಲಿ ||೫||

ಅಗ್ನಿ ನೀಡಲಿ ನನಗೆ ಮೇಧಾ ವೀರ ಸಂತತಿ ಬ್ರಹ್ಮ ತೇಜ

ಇಂದ್ರ ನೀಡಲಿ ನನಗೆ ಮೇಧಾ ವೀರ ಸಂತತಿ ಇಂದ್ರಿಯಾರ್ಥ

ಸೂರ್ಯ ನೀಡಲಿ ನನಗೆ ಮೇಧಾ ವೀರ ಸಂತತಿ ಮುಖದಿ ಕಾಂತಿ||೬||

ಸಂಗ್ರಹ: ಸೂಕ್ತ ಗೀತಾಂಜಲಿ (ಡಾ| ಮಡ್ವ ಶಾಮ ಭಟ್ಟ)

ಸೂ:
ವೇದಮೂರ್ತಿ ತುಪ್ಪೆಕಲ್ಲು ಸಹೋದರರ
“ಮೇಧಾ  ಸೂಕ್ತಮ್” ಧ್ವನಿಮುದ್ರಿಕೆಯ ಬೈಲಿನ ಚೆನ್ನೈಬಾವ ಕಳುಸಿಕೊಟ್ಟಿದವು. ಬೈಲಿನ ಕೇಳುಗರಿಂಗಾಗಿ ಇಲ್ಲಿ ನೇಲುಸಿದ್ದು:
ಇಬ್ರಿಂಗೂ ಧನ್ಯವಾದಂಗೊ.

Get this widget | Track details | eSnips Social DNA
ಮೇಧಾ ಸೂಕ್ತಮ್, 4.5 out of 10 based on 2 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಮೇಧಾ ಶಕ್ತಿ ಕೊಡಲಿ ಹೇಳಿ ಹೇಳ್ವ ಕೋರಿಕೆ ಲಾಯಕ್ಕ ಆಯ್ದು. ಧನ್ಯವಾದ.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರ°ಸಂಪಾದಕ°ಪವನಜಮಾವಕಳಾಯಿ ಗೀತತ್ತೆಪುಣಚ ಡಾಕ್ಟ್ರುಶರ್ಮಪ್ಪಚ್ಚಿಮಾಷ್ಟ್ರುಮಾವ°vreddhiವೆಂಕಟ್ ಕೋಟೂರುಡಾಗುಟ್ರಕ್ಕ°ಸರ್ಪಮಲೆ ಮಾವ°ವಸಂತರಾಜ್ ಹಳೆಮನೆನೆಗೆಗಾರ°ವೇಣೂರಣ್ಣತೆಕ್ಕುಂಜ ಕುಮಾರ ಮಾವ°ಬಟ್ಟಮಾವ°ದೊಡ್ಮನೆ ಭಾವವಿಜಯತ್ತೆಹಳೆಮನೆ ಅಣ್ಣಸುಭಗಒಪ್ಪಕ್ಕನೀರ್ಕಜೆ ಮಹೇಶಕೇಜಿಮಾವ°ಜಯಶ್ರೀ ನೀರಮೂಲೆಶೀಲಾಲಕ್ಷ್ಮೀ ಕಾಸರಗೋಡುಯೇನಂಕೂಡ್ಳು ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ