ನಾರಾಯಣ ಸೂಕ್ತಮ್

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ನಾರಾಯಣ ಸೂಕ್ತ ” ವ ಇಲ್ಲಿ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.

ಶರ್ಮಪ್ಪಚ್ಚಿ

~~~

ನಾರಾಯಣ ಸೂಕ್ತಮ್

ಸಹಸ್ರ ಶೀರ್ ಷಂ ದೇವಂ ವಿಶ್ವಾಕ್ಷಂ ವಿಶ್ವ ಶಂಭುವಮ್|

ವಿಶ್ವಂ ನಾರಾಯಣಂ ದೇವಮಕ್ಷರಂ ಪರಮಂ ಪದಮ್|

ವಿಶ್ವತಃ ಪರಮಾನ್ನಿತ್ಯಂ ವಿಶ್ವಂ ನಾರಾಯಣಗ್ಂ ಹರಿಮ್|

ವಿಶ್ವಮೇವೇದಂ ಪುರುಷಸ್ತದ್ವಿಶ್ವಮುಪಜೀವತಿ|

ಪತಿಂ ವಿಶ್ವಸ್ಯಾತ್ಮೇಶ್ವರಗ್ಂ ಶಾಶ್ವತಗ್ಂ ಶಿವಮಚ್ಯುತಮ್|

ನಾರಾಯಣಂ ಮಹಾಜ್ಞೇಯಂ ವಿಶ್ವಾತ್ಮಾನಂ ಪರಾಯಣಮ್|

ನಾರಾಯಣ ಪರೋಜ್ಯೋತಿರಾತ್ಮಾ ನಾರಾಯಣಃ ಪರಃ|

ನಾರಾಯಣ ಪರಂ ಬ್ರಹ್ಮ ತತ್ತ್ವಂ ನಾರಾಯಣ ಪರಃ|

ನಾರಾಯಣ ಪರೋ ಧ್ಯಾತಾ ಧ್ಯಾನಂ ನಾರಾಯಣ: ಪರಃ|

ಯಚ್ಚ ಕಿಂಚಿಜ್ಜಗಥ್ಸರ್ವಂ ದೃಶ್ಯತೇ ಶ್ರೂಯತೇಪಿವಾ||೧||

ಅಂತರ್ಬಹಿಶ್ಚ ತಥ್ಸರ್ವಂ ವ್ಯಾಪ್ಯ ನಾರಾಯಣಸ್ಥಿತಃ|

ಅನಂತಮವ್ಯಯಂ ಕವಿಗ್ಂ ಸಮುದ್ರೇಂತಂ ವಿಶ್ವಶಂಭುವಮ್|

ಪದ್ಮಕೋಶ ಪ್ರತೀಕಾಶಗ್ಂ ಹೃದಯಂ ಚಾಪ್ಯಧೋಮುಖಮ್|

ಅಧೋನಿಷ್ಟ್ಯಾ ವಿತಸ್ತ್ಯಾಂತೇ ನಾಭ್ಯಾಮುಪರಿ ತಿಷ್ಠತಿ|

ಜ್ವಾಲಮಾಲಾಕುಲಂ ಭಾತೀ ವಿಶ್ವಸ್ಯಾಯತನಂ ಮಹತ್|

ಸಂತತಗ್ಂ ಶಿಲಾಭಿಸ್ತು ಲಂಬತ್ಯಾಕೋಶಸನ್ನಿಭಮ್|

ತಸ್ಯಾಂತೇ ಸುಷಿರಗ್ಂ ಸೂಕ್ಷ್ಮಂ ತಸ್ಮಿನ್ ಥ್ಸರ್ವಂ ಪ್ರತಿಷ್ಠಿತಮ್|

ತಸ್ಯ ಮಧ್ಯೇ ಮಹಾನಗ್ನಿರ್ವಿಶ್ವಾರ್ಚಿರ್ವಿಶ್ವತೋ ಮುಖಃ|

ಸೋಗ್ರಭುಗ್ವಿಭಜಂತಿಷ್ಠನ್ನಾಹಾರಮಜರಃ ಕವಿಃ|

ತಿರ್ಯಗೂರ್ಧ್ವಮಧಶ್ಯಾಯೀ ರಶ್ಮಯಸ್ತಸ್ಯ ಸಂತತಾ|

ಸಂತಾಪಯತಿ ಸ್ವಂ ದೇಹಮಾಪಾದತಲ ಮಸ್ತಕಃ|

ತಸ್ಯ ಮಧ್ಯೇ ವಹ್ನಿ ಶಿಖಾ ಅಣೀಯೋರ್ಧ್ವಾ ವ್ಯವಸ್ಥಿತಃ|

ನೀಲತೋ ಯದಮಧ್ಯಸ್ಥಾದ್ವಿದ್ಯುಲ್ಲೇಖೇವ ಭಾಸ್ವರಾ|

ನೀವಾರಶೂಕವತ್ತನ್ವೀ ಪೀತಾಭಾಸ್ವತ್ಯಣೂಪಮಾ|

ತಸ್ಯಾಶ್ಶಿಖಾಯಾಮಧ್ಯೇ ಪರಮಾತ್ಮಾ ವ್ಯವಸ್ಥಿತಃ|

ಸ ಬ್ರಹ್ಮ ಸ ಶಿವಃ ಸ ಹರಿಃ ಸೇಂದ್ರ ಸ್ಸೋಕ್ಷರಃ ಪರಮ ಸ್ಸ್ವರಾಟ್||೨||

ಋತಗ್ಂ ಸತ್ಯಂ ಪರಂ ಬ್ರಹ್ಮಪುರುಷಂ ಕೃಷ್ಣ ಪಿಂಗಲಮ್|

ಊರ್ಧ್ವರೇತಂ ವಿರೂಪಾಕ್ಷಂ ವಿಶ್ವರೂಪಾಯ ವೈ ನಮೋ ನಮಃ|

ಓಂ ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀ ಮಹಿ

ತನ್ನೋ ವಿಷ್ಣು: ಪ್ರಚೋದಯಾತ್||

~~~

ನಾರಾಯಣ ಸೂಕ್ತ ( ಕನ್ನಡ ಗೀತೆ)

ತಲೆಯ ಸಾಸಿರ ದಿವ್ಯ ಪುರುಷನು ವಿಶ್ವದೃಷ್ಟನು ವಿಶ್ವ ತುಷ್ಟ|

ವಿಶ್ವ ನಾರಾಯಣನೆ ದೇವನು ಮೋಕ್ಷಕವನೇ ಪರಮ ಪತಿಯು|

ವಿಶ್ವ ಸುತ್ತುವ ಪರಮ ಸತ್ಯವು ವಿಶ್ವ ನಾರಾಯಣನೆ ಹರಿಯು|

ವಿಶ್ವವೆಲ್ಲವು ಪುರುಷನಾವೃತ ವಿಶ್ವ ಜೀವಕೆ ಅವನೆ ತಳವು|

ವಿಶ್ವದಾತ್ಮನೆ ವಿಶ್ವಕೇಶ್ವರ ನಾಶ ಹೊಂದದ ಶಾಶ್ವತತ್ವ|

ವಿಶ್ವ ನಾರಾಯಣನೆ ಜ್ಞಾನವು ಶಿವತುರೀಯತೆ ಪರಮ ಗತಿಯು|

ಜ್ಯೋತಿ ನಾರಾಯಣನೆ ಶ್ರೇಷ್ಠನು ಆತ್ಮ ನಾರಾಯಣನೆ ಶ್ರೇಷ್ಠ|

ಬ್ರಹ್ಮ ನಾರಾಯಣನೆ ಶ್ರೇಷ್ಠನು ತತ್ವ ನಾರಾಯಣನೆ ಶ್ರೇಷ್ಠ|

ಧ್ಯಾನ ನಾರಾಯಣನೆ ಶ್ರೇಷ್ಠನು ಧ್ಯಾನಿ ನಾರಾಯಣನೆ ಶ್ರೇಷ್ಠ|

ಜಗದೊಳೆಲ್ಲೆಡೆ ದೃಶ್ಯಶ್ರಾವ್ಯದ ವಸ್ತು ಸರ್ವವು ಸರ್ವ ಸ್ಥಿತಿಯು||೧||

ಒಳಗು ಹೊರಗಡೆ ಸರ್ವ ಕಡೆಗೂ ವ್ಯಾಪ್ತ ನಾರಾಯಣನೆ ಹರಿಯು|

ವಿಶ್ವತುಷ್ಟನ ನಾಶರಹಿತನ ಸರ್ವ ಜ್ಞಾನಿಯ ಧ್ಯಾನಗೊಳಲಿ|

ಮುಖವು ಕೆಳಗಡೆ ತೆರದಿ ಪದ್ಮದ ಹೃದಯದೊಳಗಡೆ ಗುರಿಯು ನಿಲಲಿ|

ಕಂಠದಡಿಯಲಿ ಬೆರಳ ದೂರದಿ ನಾಭಿಮೇಗಡೆ ವಾಸವಿಹುದು|

ಜ್ವಾಲೆಯಂದದಿ ಕುಲದಿ ಜ್ವಲಿಸುವ ವಿಶ್ವ ಕೋಟಿಗೆ ಸ್ಥಾನವಹುದು|

ಪದ್ಮ ಮುಕುಲದ ಸುತ್ತ ಮುತ್ತಲು ನಾಡಿ ಪುಂಜವು ಪಸರಿಸಿಹುದು|

ನಾಡಿ ಸೂಕ್ಷ್ಮ ಸುಷುಮ್ನವೆಂಬುದು ಸ್ಥಾಪಿಸಿರುವುದು ಅದರ ಒಳಗೆ|

ಮಧ್ಯ ಮಹಾನ್ ಅಗ್ನಿಯಿರುವುದು ಸರ್ವಜ್ಞಾನದ ವಿವಿಧ ರೂಪ|

ದೇಹದೊಳಗಡೆ ಪಚನಗೊಳ್ಳುತ ಮೂಲೆ ಮೂಲೆಗೆ ರಸದ ಹರಿವು|

ರಶ್ಮಿ ಹರಡಿದೆ ಕೆಳಗೆ ಮೇಗಡೆ ಮಹಾನಗ್ನಿಯ ಕಾರ್ಯವ್ಯಾಪ್ತಿ|

ದೇಹ ತಾಪವ ನೀಡುತಿರುವುದು ಪಾದದಿಂದದು ತಲೆಯ ವರೆಗೆ|

ಬೆಂಕಿ ನಾಲಗೆ ತೆರದಿ ಮಧ್ಯದಿ ಅಣುಗಳೂರ್ಧ್ವದಿ ನೆಲಸಿ ಇಹುದು|

ಹೊನ್ನ ಹೊಳೆತವು ಅದರ ಮಧ್ಯದಿ ಮೋಡದೆಡೆಗೆ ವಿದ್ಯುತ್ತಿನಂತೆ|

ಮಿಂಚು ಹೂಂಚುತ ಪ್ರಭೆಯ ಹೊಂದುತ ಭತ್ತ ತೆನೆಯೊಳಡಗಿದಂತೆ|

ಮಧ್ಯದಡಗಿದೆ ಬೆಂಕಿ ಜ್ವಾಲೆಯ ಪರಮ ಆತ್ಮನ ವಾಸದಿರವು|

ಬ್ರಹ್ಮನಾತನು ಶಿವ ಹರೀಂದ್ರನು ಪರಮ ಬ್ರಹ್ಮ ವಿರಾಟ ಪುರುಷ||೨||

ಪರಮ ಸತ್ಯವು ಪರಬ್ರಹ್ಮನು ಕಪ್ಪು ಪಿಂಗಳ ಪುರುಷ ರೂಪಿ|

ನಮಿಪೆ ನಮಿಪೆನು ಊರ್ಧ್ವರೇತಗೆ ವಿರೂಪಾಕ್ಷಗೆ ವಿಶ್ವವ್ಯಾಪಿ|

ವೇದ ನಾರಾಯಣನ ಹೊಂದಲು ವಾಸುದೇವನ ಧ್ಯಾನಿಸುವೆವು|

ವಿಷ್ಣು ದೇವನೆ ಕರುಣೆಯಿಂದಲೆ ನಮಗೆ ದೊರಕಲಿ ಜ್ಞಾನ ದಾನ|

~~~

(ಸಂಗ್ರಹ: ವೇದ ಮಂತ್ರ ಗೀತಾಂಜಲಿ-ಮಡ್ವ ಡಾ| ಶಾಮ ಭಟ್ಟ, ಕುಂಬಳೆ)

ಸೂ:
ವೇದಮೂರ್ತಿ ತುಪ್ಪೆಕಲ್ಲು ಸಹೋದರರ
“ನಾರಾಯಣ  ಸೂಕ್ತಮ್” ಧ್ವನಿಮುದ್ರಿಕೆಯ ಬೈಲಿನ ಚೆನ್ನೈಬಾವ ಕಳುಸಿಕೊಟ್ಟಿದವು. ಬೈಲಿನ ಕೇಳುಗರಿಂಗಾಗಿ ಇಲ್ಲಿ ನೇಲುಸಿದ್ದು:
ಇಬ್ರಿಂಗೂ ಧನ್ಯವಾದಂಗೊ.


Get this widget | Track details | eSnips Social DNA

ಶರ್ಮಪ್ಪಚ್ಚಿ

   

You may also like...

8 Responses

 1. ಚೆನ್ನೈ ಭಾವ says:

  ನಾರಾಯಣನೆ ಶ್ರೇಷ್ಠ ಹೇಳಿ ವರ್ಣಿಸುವ ನಾರಾಯಣ ಸೂಕ್ತ ಲಾಯಕ್ಕ ಆಯ್ದು. ಧನ್ಯವಾದ. ಇನ್ನಾಣ ನಿರೀಕ್ಷೆಲಿ ಒಪ್ಪ.

 2. ಪೆರ್ಮುಖ ಈಶ್ವರ ಭಟ್ says:

  ಪ್ರಿಯರೆ , ನಾರಾಯಣ ಸೂಕ್ತ ಕೇಳಿದೆ….ಹೀಂಗಿಪ್ಪ ದ್ವನಿ ಮುದ್ರಿಕೆಗಳ ಇನ್ನೂ ಹಾಕೆಕ್ಕು ಹೇಳಿ ವಿನಂತಿ…

 3. ಬೊಳುಂಬು ಕೃಷ್ಣಭಾವ° says:

  ಶಿವರಾಮ ಮಾವನ ಸ್ವರ ಕೇಳ್ತನ್ನೆ… ಇವ್ವು ನಮ್ಮ ಪೆರಡಾಲ ದೇವಸ್ಥಾನದ ಹತ್ತರೆ ಮನೆ ಮಾಡಿದವ್ವು… ಅವರತ್ರೆ ನಿಂಗಳದ್ದು ತುಪ್ಪೆಕಲ್ಲೋ.. ಕೇಳಿರೆ ಅಲ್ಲ, ಎಂಗೊ ಕೋಡಿಯಡ್ಕ ಹೇಳುಗು 😉 [ಕುಶಾಲಿಂಗೆ]
  ಬೈಲಿಂಗೆ ಕೊಟ್ಟ ಶರ್ಮಪ್ಪಚ್ಚಿಗೆ ಧನ್ಯವಾದ.

  • ಇನ್ನಾಣ ಸರ್ತಿ ಕೋಡಿಯಡ್ಕ ಹೇಳಿರೆ ನಿಂಗೊ ಒಪ್ಪೆಡಿ. ತುಪ್ಪೆಕ್ಕಲ್ಲು ಭಟ್ಟಜ್ಜನ ಪುಳ್ಳಿಯೇ, ಪೆರಡಾಲ ಶಿವನೇ ಹೇಳಿ.![ಹಿಹಿಹಿ]

 4. ವಿದ್ಯಾ ರವಿಶಂಕರ್ says:

  ಧನ್ಯವಾದಂಗೊ.

 5. ಅಡಕೋಳಿ says:

  ಸಂಗ್ರಹ ರಜ ಜಾಸ್ತಿ ಆತು, ಅರಗಿಸುಲೆ ಕಷ್ಟ! ಆದರೆ ಶರ್ಮಣ್ಣನ ಶ್ರಮಕ್ಕೆ ಹರೇ ರಾಮ.

 6. ಶರ್ಮಪ್ಪಚ್ಚಿ,

  ಧ್ವನಿ, ಅರ್ಥ ಸಹಿತ ನಾರಾಯಣ ಸೂಕ್ತಮ್ ನ ಬೈಲಿಲಿ ಕೊಟ್ಟದಕ್ಕೆ ಧನ್ಯವಾದಂಗೋ.

  ತುಂಬಾ ಒಳ್ಳೆ ಸಂಗ್ರಹ ಬೈಲಿಂಗೆ. ಬೈಲು ತುಂಬುತ್ತಾ ಇದ್ದು.

  ಇನ್ನುದೇ ಬರಲಿ.. ಅಮೂಲ್ಯ ಸಂಗ್ರಹಯೋಗ್ಯ ನಿಧಿಗೋ!!!

 7. :):):)
  ಒಳ್ಳೊಳ್ಳೆ ವಿಷಯಂಗಳಾ ಸಂಗ್ರಹ ಬತ್ತಾ ಇದ್ದು ಅಪ್ಪಚ್ಚೀ..
  ಖುಶಿ ಆತು:)

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *