ನವದುರ್ಗಾ ಸ್ತೋತ್ರಮ್

ಬೈಲಿನ ಎಲ್ಲೋರಿಂಗೂ ನವರಾತ್ರಿಯ ಶುಭಾಶಯಂಗೊ…
ಒಂಬತ್ತು ದಿನದ ನವರಾತ್ರಿಲಿ ನವವಿಧದ ಒಂಬತ್ತು ಶ್ಲೋಕಂಗಳ ಶ್ರೀಅಕ್ಕ ಬೈಲಿಂಗೆ ಹೇಳ್ತವು.
ಎಲ್ಲೋರುದೇ ಇದರ ಸದುಪಯೋಗ ಮಾಡಿಂಡು, ಶ್ರೀದೇವಿಯ ಕೃಪೆಗೆ ಪಾತ್ರರಾಯೇಕು ಹೇಳ್ತದು ನಮ್ಮ ಕೋರಿಕೆ.
~
ಗುರಿಕ್ಕಾರ
°

ನವರಾತ್ರಿ ಹೇಳಿದರೆ ಒಂಬತ್ತು ದಿನಂಗಳ ಪರ್ವಕಾಲ.
ಆಶ್ವೀಜ ಮಾಸದ ಶರದೃತುವಿಲಿ ಬಪ್ಪ ಶರನ್ನವರಾತ್ರಿ ಇಂದಿಂದ ಸುರು ಆವುತ್ತು.
ಸರ್ವಶಕ್ತೆಯಾದ ಅಮ್ಮನ ಸಂಪ್ರೀತ ಮಾಡ್ಲೆ ಇಪ್ಪ ದಿನಂಗ. ನಾವು ಈ ಎಲ್ಲಾ ದಿನವೂ ಅಬ್ಬೆಯ ಭಗುತಿಲಿ, ಮನಸಾ ನೆನೆಸಿ, ಭಜಿಸಿ, ಅರ್ಚಿಸಿ ಅಬ್ಬೆಂದ ಹರಿವ ಪುಣ್ಯಪ್ರಭೆಯ ನಮ್ಮ ಸುತ್ತ ರಕ್ಷೆಯಾಗಿ ಮಡಿಕ್ಕೊಂಬಲೆ ಇಪ್ಪ ಪುಣ್ಯಕಾಲ.
ಶಕ್ತಿಸ್ವರೂಪಿಣಿಯಾದ ದುರ್ಗೆಯ ಪ್ರಾರ್ಥನೆ ಮಾಡಿದರೆ ನಮ್ಮ ದುಃಖಂಗ ಎಲ್ಲ ನಾಶ ಆಗಿ, ನವಗೆಲ್ಲರಿಂಗೆ ಆಯುರಾರೋಗ್ಯ,ಸಕಲಸೌಭಾಗ್ಯ,ನೆಮ್ಮದಿ ಎಲ್ಲ ಸಿಕ್ಕುತ್ತು.
ಈ ನವರಾತ್ರಿಯ ಬಗ್ಗೆ, ಅಬ್ಬೆಯ ನವರೂಪಂಗಳ ಬಗ್ಗೆ, ಬೇರೆ ಬೇರೆ ಆಚರಣೆಗಳ ಬಗ್ಗೆ ಒಪ್ಪಣ್ಣ ಅಂದೊಂದರಿ ಬರದ್ದ°. “ನವನವೋನ್ಮೇಷ ಶಾಲಿನೀ… ನವರಾತ್ರಿಯ ಚಾಮಿ ನೀ “ ಹೇಳಿ.
ಪುನಾ ಒಂದರಿ ಶುದ್ದಿಯ ಓದಿ, ಅಬ್ಬೆಗೆ, ಆ ಸರ್ವಶಕ್ತೆಗೆ ನಾವು ಶರಣು ಹೋಪೋ°.

ಕಷ್ಟಂಗಳ ದೂರ ಮಾಡುವ, ಅಸುರ ಶಕ್ತಿಗಳ ಧ್ವಂಸ ಮಾಡುವ, ದುಃಖಂಗಳ ಕೊನೆಗೊಳಿಸುವ, ನವದುರ್ಗೆಗೋ, ನಮ್ಮ ಎಲ್ಲರ ಕಷ್ಟಂಗಳ ಹರಿಯಲಿ..
ನಮ್ಮೊಳ ಇಪ್ಪ ಅಸುರ ಶಕ್ತಿಯ ಧ್ವಂಸ ಮಾಡಲಿ..
ನಮ್ಮೆಲ್ಲರ ದುಃಖ ಕಳದು ಎಲ್ಲರ ಮನೆ, ಮನಲ್ಲಿಯೂ ಸುಖ, ಆನಂದ ತುಂಬಿ ಹರಿಯಲಿ…

ನವರಾತ್ರಿಯ ಸುರುವಾಣ ದಿನ ಆದ ಇಂದು ನವದುರ್ಗಾ ಸ್ತೋತ್ರವ ಇಲ್ಲಿ ಕೊಡ್ತಾ ಇದ್ದೆ.
ನವದುರ್ಗೆಯ ಒಂಬತ್ತು ಅವತಾರದ ಈ ಸ್ತೋತ್ರವ ಮಗುವಿನ ಮನಸ್ಸಿನವನಾಗಿ ಆರು ಓದುತ್ತವೋ ಅವು ಧನ,ಧಾನ್ಯ,ಬಲ, ಕೀರ್ತಿ, ಆಯುಸ್ಸು, ಮತ್ತು ಸೌಖ್ಯವ ಹೊಂದುತ್ತವು.
ಇದರ ಓದುವಿಕೆಯಿಂದ ದುರ್ಗತಿಹಾರಿಣಿಯಾದ ದುರ್ಗೆ ಆ ಭಕ್ತನ ದುರ್ಗತಿಯ ಕೂಡ್ಲೇ ನಾಶಮಾಡುವದು ನಿಶ್ಚಿತ ಹೇಳಿ ಸ್ತೋತ್ರದ ಫಲಶ್ರುತಿಲಿ ಹೇಳ್ತವು.
~
ಶ್ರೀ ಅಕ್ಕ
°

ನವದುರ್ಗಾ ಸ್ತೋತ್ರಮ್

ಶೈಲಪುತ್ರೀ

ವಂದೇ ವಾಂಛಿತಲಾಭಾಯ ಚಂದ್ರಾರ್ಧಕೃತಶೇಖರಾಂ |
ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಮ್ ||

ಬ್ರಹ್ಮಚಾರಿಣೀ

ದಧಾನಾ ಕರಪದ್ಮಾಭ್ಯಾಮಕ್ಷಮಾಲಾಕಮಂಡಲೂ |
ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ ||

ಚಂದ್ರಘಂಟಾ

ಪಿಂಡಜಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ |
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ ||

ಕೂಷ್ಮಾಂಡಾ

ಸುರಾಸಂಪೂರ್ಣಕಲಶಂ ರುಧಿರಾಪ್ಲುತಮೇವ ಚ |
ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ ||

ಸ್ಕಂದಮಾತಾ

ಸಿಂಹಾಸನಾಗತಾ ನಿತ್ಯಂ ಪದ್ಮಾಶ್ರಿತಕರದ್ವಯಾ |
ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ ||

ಕಾತ್ಯಾಯನೀ ದೇವೀ

ಚಂದ್ರಹಾಸೋಜ್ವಲಕರಾ ಶಾರ್ದೂಲವರವಾಹನಾ |
ಕಾತ್ಯಾಯನೀ ಶುಭಂ ದದ್ಯಾದ್ದೇವೀ ದಾನವಘಾತಿನೀ ||

ಕಾಲರಾತ್ರೀ

ಏಕವೇಣೀ ಜಪಾಕರ್ಣಪುರಾ ನಗ್ನಾ ಖರಾಸ್ಥಿತಾ |
ಲಂಬೋಷ್ಠೀ ಕರ್ಣಿಕಾಕರ್ಣೀ ತೈಲಾಭ್ಯಕ್ತಶರೀರಿಣೀ ||
ವಾಮಪಾದೋಲ್ಲಸಲ್ಲೋಹಲತಾಕಂಟಕಭೂಷಣಾ |
ವರ್ಧನಮೂರ್ಧಧ್ವಜಾ ಕೃಷ್ಣಾ ಕಾಲರಾತ್ರಿರ್ಭಯಂಕರೀ ||

ಮಹಾಗೌರೀ

ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರಧರಾ ಶುಚಿಃ |
ಮಹಾಗೌರೀ ಶುಭಂ ದದ್ಯಾನ್ಮಹಾದೇವಪ್ರಮೋದದಾ ||

ಸಿದ್ಧಿದಾತ್ರೀ

ಸಿದ್ಧಗಂಧರ್ವಯಕ್ಷಾದ್ಯೈರಸುರೈರಮರೈರಪಿ |
ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ ||

ಫಲಶ್ರುತಿ:

ನವದುರ್ಗಾಸ್ತವಮಿದಂ
ಯಃ ಪಠೇತ್ ಶಿಶುಮಾನಸಃ |
ಧನಂ ಧಾನ್ಯಂ ಬಲಂ ಕೀರ್ತಿಮ್
ಆಯುಃ ಸೌಖ್ಯಮ್ ಚ ವಿಂದತಿ||

ದುರ್ಗತಿಮ್ ತಸ್ಯ ಭಕ್ತಸ್ಯ
ದುರ್ಗಾ ದುರ್ಗತಿ ಹಾರಿಣೀ |
ಪಾಠಮಾತ್ರೇಣ ನಾಶತ್ವಂ
ಆಶುಪ್ರಾಪಯತೇಧ್ರುವಮ್ ||

~*~*~

ಸೂ:

ಸ್ತೋತ್ರವ ಓದಿಗೊಂಡು ಕೇಳುಲೆ:

ಶ್ರೀಅಕ್ಕ°

   

You may also like...

9 Responses

 1. ಕೃಷ್ಣಮೂರ್ತಿ ಹೇರಳೆ says:

  ವಂದನೆಗಳು ಅಕ್ಕಾ,

  ಸಿರ್ಸಿ ಮಾರಿಕಾಂಬ ದೇವಸ್ಥಾನದಲ್ಲಿ ನವದುರ್ಗಾ ದೊಡ್ಡ ಪಟ ನೋಡಿದ್ದೆ ಅಷ್ತೆ. ಈ ಸ್ತೋತ್ರ ನೋಡಿ ತುಂಬಾ ಕುಷಿ ಆಯ್ತು. ಇಂಥಹವುಗಳು ನಮಗೆ /ಈಗಿನವರಿಗೆ ಸಿಗೋದು ಅಪರೂಪ.

  ಧನ್ಯವಾದ,

  ಕೃಷ್ಣಮೂರ್ತಿ ಹೇರಳೆ

 2. ಚೆನ್ನೈ ಭಾವ says:

  ಸಕಾಲದಲ್ಲಿ ಶ್ರೀ ನವದುರ್ಗಾ ಸ್ತೋತ್ರ.

  ಆಡಿಯೋ ಲಾಯಕ ಇದ್ದು. ಧನ್ಯವಾದಂಗೊ.

 3. ತೆಕ್ಕುಂಜ ಕುಮಾರ ಮಾವ° says:

  ಧನ್ಯವಾದಂಗೊ, ಅಕ್ಕಂಗೆ.

 4. ವಿದ್ಯಾ ರವಿಶಂಕರ್ says:

  ಸಕಾಲಿಕ ಸ್ತೋತ್ರಂಗಳ ತಿಳಿಸಿದ ಶ್ರೀ ಅಕ್ಕಂಗೆ ಧನ್ಯವಾದಂಗೊ.

 5. ಅನುಶ್ರೀ ಬಂಡಾಡಿ says:

  ಧನ್ಯವಾದಂಗೊ ಶ್ರೀ ಅಕ್ಕ.
  ನವರಾತ್ರಿ ಎಲ್ಲೊರಿಂಗೂ ಶುಭತರಲಿ.

 6. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  dhanyavaada

  • ಉಡುಪುಮೂಲೆ ಅಪ್ಪಚ್ಚಿ says:

   ತಡವಾಗಿ ನೋಡಿದೆ.ಬಹಳ ಒಳ್ಳೆಯ ಕಾರ್ಯ ಮಾಡಿದ್ದಿ. ಧನ್ಯವಾಡ೦ಗೊ ಅಕ್ಕ.

  • ಉಡುಪುಮೂಲೆ ಅಪ್ಪಚ್ಚಿ says:

   ತಡವಾಗಿ ನೋಡಿದೆ.ಬಹಳ ಒಳ್ಳೆಯ ಕಾರ್ಯ ಮಾಡಿದ್ದಿ. ಧನ್ಯವಾದ೦ಗೊ ಅಕ್ಕ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *