ನವರತ್ನಮಾಲಿಕಾ

October 1, 2014 ರ 6:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನವರತ್ನದಮಾಲೆಯ ಹಾಂಗೆ ರಚಿತ ಆದ ಈ ನವರತ್ನಮಾಲಿಕಾ ಸ್ತೋತ್ರ ಶಂಕರಾಚಾರ್ಯರ ಕೃತಿ.
ಅಬ್ಬೆಯ ನವ ವಿಧಲ್ಲಿ ವರ್ಣನೆ ಮಾಡುವ ಈ ಕೃತಿಲಿ ಅಮ್ಮನ ಸುಂದರ ರೂಪವ ಮನಸ್ಸಿಲಿ ಭಾವಿಸಿ ನಮಿಸುತ್ತೆ – ಹೇಳುವ ಹಾಂಗೆ ಇದ್ದು.

ಸರ್ವಾಲಂಕೃತೆಯಾದ ಅಮ್ಮನ ರೂಪವ ಕಲ್ಪಿಸಿ ಬರದ ಶೈಲಿ ಮನಸ್ಸಿಲಿ ಅಬ್ಬೆಯ ರೂಪವ ಯಥಾವತ್ ರೂಪಿಸಿ ಕೊಡ್ತು.
ಹಾರ,ನೂಪುರ, ಕಿರೀಟ, ಕುಂಡಲಂದ ಅಲಂಕೃತ ಆಗಿ, ಕಾಲಸರ್ಪ, ಪಾಶ, ಬಾಣ ಧನುಸ್ಸು, ಅಂಕುಶ ಹೊಂದಿಗೊಂಡು ಶಿವನ ಒಟ್ಟಿಂಗೆ ನಿಂದು, ಸೂರ್ಯಪ್ರಭೆಯ ಓಡ್ಯಾಣ ಹಾಕಿದ ಅಮ್ಮನ ರೂಪವ ಮನಸ್ಸಿಲಿ ದ್ಯಾನಿಸಿಗೋಳ್ತೆ. ಇಂದಿರಾರಮಣ ಸೋದರಿ, ಬಾಲಚಂದ್ರಂದ ಕೂಡಿದ ಚಂದ್ರಶೇಖರಿಯಾದ ನೀನು ಚೆಂದದ ಕಣ್ಣು, ಚೆಂದದ ಮೋರೆಯ ಹೊಂದಿದ್ದೆ.
ಅಬ್ಬೆಯ ಅಂಗಂಗ ಅಗ್ನಿಮಂಡಲದ ಹಾಂಗೆ ಪ್ರಭೆ ಹೊಂದಿದ್ದು, ಗಗನ ಶರೀರಿಣಿಯಾಗಿ ಸೂರ್ಯಚಂದ್ರರ ಕಣ್ಣಾಗಿ ಹೊಂದಿದ ರೂಪದ ಅಮ್ಮನ ಮನಸಾ ನೆನೆಸಿ ಭಜಿಸುತ್ತೆ.
ಗಣಪತಿ ಷಣ್ಮುಖರ ಜನನಿಯಾಗಿ, ಪ್ರಪಂಚದ ಪ್ರಕೃತಿ ರೂಪ ಹೊಂದಿದ, ಪದ್ಮದ ರೂಪ ಹೊಂದಿದ ಪ್ರಥಮ ಮಾತೃಕೆಯ ಮನಸ್ಸಿಲಿ ನೆನೆಸುತ್ತೆ. ಆಗಮ ಪ್ರಣವ ಪೀಠಸ್ಥೆ, ಮಂಗಳ ಶರೀರದ, ಸಕಲವೇದಗಳ ಸಾರಪ್ರದಳಾಗಿಪ್ಪ, ಮೂಲ ಮಂತ್ರಂದ ಶೋಭಿತಳಾಗಿಪ್ಪ, ನಾದ ಬಿಂದುವಿಲಿ ಸಂತುಷ್ಟಳಪ್ಪ ಯೌವನೆಯಾದ ಮಾತೃಕಾರೂಪಿಣಿಯಾದ ತ್ರಿಪುರ ಸುಂದರಿಯ ಮನಸ್ಸಿಲಿ ಭಜಿಸುತ್ತೆ. ಕಪ್ಪಾದ ಮುಂಗುರುಳಿಂದ ಶೋಭಿತೆಯಾಗಿ, ಮುಡಿದ ಮಲ್ಲಿಗೆ ಸುಗಂಧ ಸೂಸುವ, ಕೋಮಲ ಕಂಠದ ಮೇಲೆ ವಿರಾಜಿಸುವ ಮುಖಾರವಿಂದದ ಅಖಿಲನಾಯಕಿಯ ಮನಸ್ಸಿಲೇ ಭಜಿಸುತ್ತೆ.

ಶಂಕರಾಚಾರ್ಯರಿಂದ ರಚಿತವಾದ ಈ ನವರತ್ನಮಾಲಿಕಾ ಸ್ತೋತ್ರವ ನಿತ್ಯವೂ ನಿಯಮಲ್ಲಿ ಜಪಿಸಿದರೆ ಭಕ್ತಿ, ಅಭೀಷ್ಟಫಲ ಸಿಕ್ಕಿ ಮುಕ್ತಿ ಪ್ರಾಪ್ತಿ ಆವುತ್ತು ಹೇಳಿ ಇದರ ಫಲಶ್ರುತಿಲಿ ಹೇಳ್ತವು.
ನವರತ್ನಮಾಲಿಕಾ ಸ್ತೋತ್ರದ ಒಂದೊಂದು ಶ್ಲೋಕವೂ ಒಂದೊಂದು ರತ್ನಕ್ಕೆ ಸಮವಾಗಿಯೇ ಇದ್ದು.
ಇದರ ಪ್ರತಿಯೊಬ್ಬಂದೆ ಮನಸಾ ಭಜಿಸಿದರೆ ಅಬ್ಬೆಗೆ ನವರತ್ನದ ಹಾರ ತೊಡಿಸಿ ಅಲಂಕಾರ ಮಾಡಿದ ಫಲವೇ ಸಿಕ್ಕಿ ಮನಸ್ಸು ನೆಮ್ಮದಿಲಿ, ಆನಂದಲ್ಲಿ ಜೀವನ ಸಾಗಿ ಮುಕ್ತಿ ಸಿಕ್ಕುಗು. ಬೈಲಿನ ಎಲ್ಲೋರಿಂಗೂ ಈ ನವರಾತ್ರಿಯ ಸುಸಮಯಲ್ಲಿ ಇದರ ಓದಿ ಅಪ್ಪಗ ಎಲ್ಲಾ ಅಭೀಷ್ಟಂಗ ನೆರವೇರಿ, ಸಕಲ ಸುಖ ಪ್ರಾಪ್ತಿ ಆಗಲಿ ಹೇಳ್ತ ಹಾರಯಿಕೆ.

ನವರತ್ನಮಾಲಿಕಾ

ಹಾರನೂಪುರಕಿರೀಟಕುಂಡಲವಿಭೂಷಿತಾವಯವಶೋಭಿನೀಂ
ಕಾರಣೇಶವರಮೌಲಿಕೋಟಿಪರಿಕಲ್ಪ್ಯಮಾನಪದಪೀಠಿಕಾಮ್ |
ಕಾಲಕಾಲಫಣಿಪಾಶಬಾಣಧನುರಂಕುಶಾಮರುಣಮೇಖಲಾಂ
ಫಾಲಭೂತಿಲಕಲಲೋಚನಾಂ ಮನಸಿ ಭಾವಯಾಮಿ ಪರದೇವತಾಮ್ ||1||

ಗಂಧಸಾರಘನಸಾರಚಾರುನವನಾಗವಲ್ಲಿರಸವಾಸಿನೀಂ
ಸಾಂಧ್ಯರಾಗಮಧುರಾಧರಾಭರಣಸುಂದರಾನನಶುಚಿಸ್ಮಿತಾಮ್ |
ಮಂದರಾಯತವಿಲೋಚನಾಮಮಲಬಾಲಚಂದ್ರ ಕೃತಶೇಖರೀಂ
ಇಂದಿರಾರಮಣಸೋದರೀಂ ಮನಸಿ ಭಾವಯಾಮಿ ಪರದೇವತಾಮ್ ||2||

ಸ್ಮೇರಚಾರುಮುಖಮಂಡಲಾಂ ವಿಮಲಗಂಡಲಂಬಿಮಣಿಮಂಡಲಾಂ
ಹಾರದಾಮಪರಿಶೋಭಮಾನಕುಚಭಾರಭೀರುತನುಮಧ್ಯಮಾಮ್ |
ವೀರಗರ್ವಹರನೂಪುರಾಂ ವಿವಿಧಕಾರಣೇಶವರಪೀಠಿಕಾಂ
ಮಾರವೈರಿಸಹಚಾರಿಣೀಂ ಮನಸಿ ಭಾವಯಾಮಿ ಪರದೇವತಾಮ್ ||3||

ಭೂರಿಭಾರಧರಕುಂಡಲೀಂದ್ರಮಣಿಬದ್ಧಭೂವಲಯಪೀಠಿಕಾಂ
ವಾರಿರಾಶಿಮಣಿಮೇಖಲಾವಲಯವಹ್ನಿಮಂಡಲಶರೀರಿಣೀಮ್ |
ವಾರಿಸಾರವಹಕುಂಡಲಾಂ ಗಗನಶೇಖರೀಂ ಚ ಪರಮಾತ್ಮಿಕಾಂ
ಚಾರುಚಂದ್ರರವಿಲೋಚನಾಂ ಮನಸಿ ಭಾವಯಾಮಿ ಪರದೇವತಾಮ್ ||4||

ಕುಂಡಲತ್ರಿವಿಧಕೋಣಮಂಡಲವಿಹಾರಷಡ್ದಲಸಮುಲ್ಲಸ-
ತ್ಪುಂಡರೀಕಮುಖಭೇದಿನೀಂ ಚ ಪ್ರಚಂಡಭಾನುಭಾಸಮುಜ್ವಲಾಮ್ |
ಮಂಡಲೇಂದುಪರಿವಾಹಿತಾಮೃತತರಂಗಿಣೀಮರುಣರೂಪಿಣೀಂ
ಮಂಡಲಾಂತಮಣಿದೀಪಿಕಾಂ ಮನಸಿ ಭಾವಯಾಮಿ ಪರದೇವತಾಮ್ ||5||

ವಾರಣಾನನಮಯೂರವಾಹಮುಖದಾಹವಾರಣಪಯೋಧರಾಂ
ಚಾರಣಾದಿಸುರಸುಂದರೀಚಿಕುರಶೇಖರೀಕೃತಪದಾಂಬುಜಾಮ್ |
ಕಾರಣಾಧಿಪತಿಪಂಚಕಪ್ರಕೃತಿಕಾರಣಪ್ರಥಮಮಾತೃಕಾಂ
ವಾರಣಾಂತಮುಖಪಾರಣಾಂ ಮನಸಿ ಭಾವಯಾಮಿ ಪರದೇವತಾಮ್ ||6||

ಪದ್ಮಕಾಂತಿಪದಪಾಣಿಪಲ್ಲವಪಯೋಧರಾನಾನಸರೋರುಹಾಂ
ಪದ್ಮರಾಗಮಣಿಮೇಖಲಾವಲಯನೀವಿಶೋಭಿತನಿತಂಬಿನೀಮ್ |
ಪದ್ಮಸಂಭವಸದಾಶಿವಾಂತಮಯಪಂಚರತ್ನಪದಪೀಠಿಕಾಂ
ಪದ್ಮಿನೀಂ ಪ್ರಣವರೂಪಿಣೀಂ ಮನಸಿ ಭಾವಯಾಮಿ ಪರದೇವತಾಮ್ ||7||

ಆಗಮಪ್ರಣವಪೀಠಿಕಾಮಮಲವರ್ಣಮಂಗಲಶರೀರಿಣೀಂ
ಆಗಮಾವಯವಶೋಭಿನೀಮಖಿಲವೇದಸಾರಕೃತಶೇಖರೀಮ್ |
ಮೂಲಮಂತ್ರಮುಖಮಂಡಲಾಂ ಮುದಿತನಾದಬಿಂದುನವಯೌವನಾಮ್
ಮಾತೃಕಾಂ ತ್ರಿಪುರಸುಂದರೀಂ ಮನಸಿ ಭಾವಯಾಮಿ ಪರದೇವತಾಮ್ ||8||

ಕಾಲಿಕಾತಿಮಿರಕುಂತಲಾಂತಘನಭೃಂಗಮಂಗಲವಿರಾಜಿನೀಂ
ಚೂಲಿಕಾಶಿಖರಮಾಲಿಕಾವಲಯಮಲ್ಲಿಕಾಸುರಭಿಸೌರಭಾಮ್ |
ವಾಲಿಕಾಮಧುರಗಂಡಮಂಡಲಮನೋಹರಾನನಸರೋರುಹಾಂ
ಕಾಲಿಕಾಮಖಿಲನಾಯಿಕಾಂ ಮನಸಿ ಭಾವಯಾಮಿ ಪರದೇವತಾಮ್ ||9||

ನಿತ್ಯಮೇವ ನಿಯಮೇನ ಜಲ್ಪತಾಂ
ಭುಕ್ತಿಮುಕ್ತಿಫಲದಾಮಭೀಷ್ಟದಾಮ್ |
ಶಂಕರೇಣ ರಚಿತಾಂ ಸದಾ ಜಪೇ-
ನ್ನಾಮರತ್ನನವರತ್ನಮಾಲಿಕಾಮ್ ||10||

ಇತಿ ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ಯಸ್ಯ ಶ್ರೀ ಗೋವಿಂದಭಗವತ್ಪೂಜ್ಯಪಾದಶಿಷ್ಯಸ್ಯ ಶ್ರೀಮಚ್ಛಂಕರಭಗವತಃ ಕೃತೌ ನವರತ್ನಮಾಲಿಕಾ ಸಂಪೂರ್ಣಾ ||

~*~*~

ಸ್ತೋತ್ರವ ಕೇಳಲೆ:

ನವರತ್ನಮಾಲಿಕಾ, 5.0 out of 10 based on 1 rating

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಮುಣ್ಚಿಕಾನ ಭಾವ

  ಇಷ್ಟು ಒಳ್ಳೆಯ ಸ್ತೋತ್ರವ ಬೈಲಿಲಿ ಕೊಟ್ಟದ್ದಕ್ಕೆ ಶ್ರೀಅಕ್ಕಂಗೆ ಧನ್ಯವಾದಂಗೊ. ಆನು ಇದರ ಆಡಿಯೋ download ಮಾಡಿ ಮಡುಗಿದೆ.

  [Reply]

  VA:F [1.9.22_1171]
  Rating: +1 (from 1 vote)
 2. ಚೆನ್ನೈ ಬಾವ°

  ಸಂಗ್ರಹಯೋಗ್ಯ. ಶಂಕರಾಚಾರ್ಯರ ವಿಶಿಷ್ಠ ಕೃತಿಗಳ ಸಂಗ್ರಹಿಸಿ ಬೈಲಿಂಗೆ ತಿಳಿಸುವದು ಉತ್ತಮ ಕಾರ್ಯ. ಧನ್ಯವಾದಂಗೊ ಹೇಳಿತ್ತು – ‘ಚೆನ್ನೈವಾಣಿ’.

  [Reply]

  VN:F [1.9.22_1171]
  Rating: +1 (from 1 vote)
 3. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಫಾಲಭೂತಿಲಕಲಲೋಚನಾಂ..ಇಂದಿರಾರಮಣಸೋದರೀಂ..ಮಾರವೈರಿಸಹಚಾರಿಣೀಂ..ಚಾರುಚಂದ್ರರವಿಲೋಚನಾಂ..
  ಮಂಡಲಾಂತಮಣಿದೀಪಿಕಾಂ..ವಾರಣಾಂತಮುಖಪಾರಣಾಂ..ಪದ್ಮಿನೀಂ ಪ್ರಣವರೂಪಿಣೀಂ..ಮಾತೃಕಾಂ ತ್ರಿಪುರಸುಂದರೀಂ.. ಕಾಲಿಕಾಮಖಿಲನಾಯಿಕಾಂ..ಮನಸಿ ಭಾವಯಾಮಿ ಪರದೇವತಾಮ್.
  ನವರಾತ್ರಿಯ ಈ ಶುಭ ಸಮಯಲ್ಲಿ ನವರತ್ನಮಾಲಿಕೆ ಹೇಳ್ತ ಒಳ್ಳೆ ಸ್ತೋತ್ರ ಮತ್ತೆ ಆಡಿಯೋ ಒದಗಿಸಿ ನೀನು ಧನ್ಯಳಾದೆ

  [Reply]

  VA:F [1.9.22_1171]
  Rating: +1 (from 1 vote)
 4. ದೀಪಿಕಾ
  ದೀಪಿಕಾ

  ಶ್ರೀ ಅಕ್ಕ೦ಗೆ ಧನ್ಯವಾದ..ತು೦ಬಾ ಖುಶಿಆವ್ತು ಇದರ ಕೇಳ್ಳೆ.. ಮಾಯಾಮಾಳವ ಗೌಳ ಮತ್ತೆ ಬ್ರಿ೦ದಾವನ ಸಾರ೦ಗ ರಾಗಲ್ಲಿ ಹಾಡಿದ ಶೈಲಿಯೂ ಖುಶೀ ಆತು..

  [Reply]

  VN:F [1.9.22_1171]
  Rating: +1 (from 1 vote)
 5. ಮಂಗ್ಳೂರ ಮಾಣಿ

  ಎಷ್ಟು ಧನ್ಯವಾದ್ ಅಹೇಳಿರೂ ಸಾಲ ಚಿಕ್ಕಮ್ಮ ನಿಂಗೊಗೆ..
  ರಾಗಲ್ಲಿ ಹೇಳ್ಲೆ ಎಶ್ಟು ಖುಶಿ ಆವ್ತು…???..!!

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶ್ರೀಅಕ್ಕ°ಡಾಮಹೇಶಣ್ಣನೀರ್ಕಜೆ ಮಹೇಶವಿನಯ ಶಂಕರ, ಚೆಕ್ಕೆಮನೆಕೆದೂರು ಡಾಕ್ಟ್ರುಬಾವ°ದೊಡ್ಮನೆ ಭಾವಅನು ಉಡುಪುಮೂಲೆವಾಣಿ ಚಿಕ್ಕಮ್ಮಒಪ್ಪಕ್ಕಉಡುಪುಮೂಲೆ ಅಪ್ಪಚ್ಚಿದೊಡ್ಡಭಾವಜಯಶ್ರೀ ನೀರಮೂಲೆದೊಡ್ಡಮಾವ°ಶುದ್ದಿಕ್ಕಾರ°ಅಡ್ಕತ್ತಿಮಾರುಮಾವ°ಗಣೇಶ ಮಾವ°ಕೇಜಿಮಾವ°ಬೋಸ ಬಾವಚೆನ್ನೈ ಬಾವ°ಕಳಾಯಿ ಗೀತತ್ತೆಡಾಗುಟ್ರಕ್ಕ°ಪುತ್ತೂರುಬಾವಮಾಲಕ್ಕ°ವೇಣೂರಣ್ಣಶಾಂತತ್ತೆಬಟ್ಟಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ