ಪವಮಾನ ಸೂಕ್ತಮ್ (ಭಾಗ-೧)

October 24, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ಸೂಕ್ತ ಗೀತಾಂಜಲಿ” ಪುಸ್ತಕಂದ “ಪವಮಾನ ಸೂಕ್ತಮ್ ನ ಇಲ್ಲಿ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.

ಶರ್ಮಪ್ಪಚ್ಚಿ
~~~

ಪವಮಾನ ಸೂಕ್ತಮ್ (ಭಾಗ-೧)

ಹಿರಣ್ಯ ವರ್ಣಾಃ ಶುಚಯಃ ಪಾವಕಾಃ ಯಾಸು ಜಾತಃ ಕಶ್ಯಪೋಯಾಸ್ವಿಂದ್ರಃ  ||

ಅಗ್ನಿಂ ಯಾ ಗರ್ಭಂ ದಧಿರೇ ವಿರೂಪಾಸ್ತಾನ ಆಪಶ್ಶಗ್ಗ್ ಸ್ಯೋನಾ ಭವಂತು||೧||

ಯಾಸಾಗ್ಂ ರಾಜಾ ವರುಣೋ ಯಾತಿ ಮಧ್ಯೇ ಸತ್ಯಾನೃತೇ ಅವ ಪಶ್ಯನ್ ಜನಾನಾಮ್|

ಮಧುಶ್ಚುತಃ ಶುಚಯೋ ಯಾಃ ಪಾವಕಾಸ್ತಾ ನ ಆಪಶ್ಶಗ್ಗ್ ಸ್ಯೋನಾ ಭವಂತು ||೨||

ಯಾಸಾಂ ದೇವಾ ದಿವಿ ಕೃಣ್ವಂತಿ ಭಕ್ಷಂ ಯಾ ಅಂತರಿಕ್ಷೇ ಬಹುಧಾ ಭವಂತಿ|

ಯಾಃ ಪೃಥಿವೀಂ ಪಯಸೋಂದಂತಿ ಶುಕ್ರಾಸ್ತಾನ ಆಪಶ್ಶಗ್ಗ್ ಸ್ಯೋನಾ ಭವಂತು ||೩||

ಶಿವೇನ ಮಾ ಚಕ್ಷುಷಾ ಪಶ್ಯತಾಪಃ ಶಿವಯಾ ತನುವೋಪ ಸ್ಪೃಶತ ತ್ವಚಂ ಮೇ|

ಸರ್ವಾಗ್ಂ ಅಗ್ನೀಗ್ಂ ರಪ್ಸುಷದೋ ಹುವೇ ವೋ ಮಯಿ ವರ್ಚೋ ಬಲಮೋಜೋ ನಿಧತ್ತ||೪||

ಯದದಃ ಸಂಪ್ರಯತೀರಹಾವನದತಾ ಹತೇ |

ತಸ್ಮಾದಾ ನದ್ಯೋ ನಾಮಸ್ಥ ತಾವೋ ನಾಮಾನಿ ಸಿಂಧವಃ ||೫||

ಯತ್ಪ್ರೇಷಿತಾ ವರುಣೇನ ತಾಃ ಶ್ಶೀಭಗ್ಂ ಸಮವಲ್ಗತ|

ತದಾಪ್ನೋದಿಂದ್ರೋವೋ ಯತೀಸ್ತಸ್ಮಾ ದಾಪೋ ಅನುಸ್ಥನ ||೬||

ಆಪಕಾಮಗ್ಗ್ ಸ್ಯಂದಮಾನಾ ಅವೀವರತ ವೋ ಹಿಕಮ್ |

ಇಂದ್ರೋ ವಃ ಶಕ್ತಿಭಿರ್ದೇವೀ ಸ್ತಸ್ಮಾ ದ್ವಾರ್ಣಾಮ ವೋಹಿತಮ್ ||೭||

ಏಕೋ ದೇವೋ ಅಪ್ಯತಿಷ್ಠತಿಥ್ಸ್ಯಂದಮಾನಾ ಯಥಾ ವಶಮ್ |

ಉದಾನಿಷುರ್ಮಹೀರಿತಿ ತಸ್ಮಾ ದುದಕ ಮುಚ್ಯತೇ ||೮||

ಆಪೋ ಭದ್ರಾಃ ಘೃತಮಿದಾಪ ಆಸುರಗ್ನೀಷೋಮೌ ಬಿಭ್ರತ್ಯಾಪ ಇತ್ತಾಃ |

ತೀವ್ರೋ ರಸೋ ಮಧುಪೃಚಾಮರಂಗಮ ಆ ಮಾ ಪ್ರಾಣೇನ ಸಹ ವರ್ಚಸಾಗನ್ ||೯||

ಆದಿತ್ಪ ಶ್ಯಾಮ್ಯುತ ವಾ ಶೃಣೋಮ್ಯಾ ಮಾ ಘೋಷೋ ಗಚ್ಛತಿ ವಾಙ್ ನ ಆಸಾಮ್ |

ಮನ್ಯೇ ಭೇಜಾನೋ ಅಮೃತಸ್ಯ ತರ್ಹಿ ಹಿರಣ್ಯ ವರ್ಣಾಃ ಅ ತೃಪಂ ಯ ದಾವಃ ||೧೦||

ಆಪೋ ಹಿಷ್ಠಾ ಮಯೋಭುವಸ್ತಾನ ಊರ್ಜೇದಧಾತನ |

ಮಹೇ ರಣಾಯ ಚಕ್ಷಸೇ ||೧೧||

ಯೋವಃ ಶಿವತಮೋ ರಸಸ್ತಸ್ಯ ಭಾಜಯತೇ ಹನಃ

ಉಶತೀರಿವ ಮಾತರಃ ||೧೨||

ತಸ್ಮಾ ಅರಂಗ ಮಾಮ ವೋಯಸ್ಯ ಕ್ಷಯಾಯ ಜನ್ವಥ |

ಆಪೋ ಜನಯಥಾಚ ನಃ ||೧೩||

ಪವಮಾನ ಸೂಕ್ತ (ಕನ್ನಡ ಗೀತೆ)

ಹೊನ್ನ ಬಣ್ಣದ ಶುದ್ಧ ಶುದ್ಧಿಪ ಇಂದ್ರ ಕಶ್ಯಪರಿಂಗೆ ಮಾತೆ

ಗರ್ಭದೊಳಗಡೆ ಅಗ್ನಿ ಧರಿಸುತ ವಿವಿಧ ರೂಪದಿ ಸುಖವದಾತೆ

ಜಲವು ಎಲ್ಲೆಡೆ ಮುದವ ನೀಡಲಿ ನಮಗೆ ಸುಖವತ್ಯಂತ ಕೊಡಲಿ ||೧||

ನಿತ್ಯ ಕರ್ಮವ ನೋಡುತಿರುವನು ರಾಜ ವರುಣನು ನೀರಿನೊಳಗೆ

ಮಧುರ ಪಾವನ ಜಲವು ಹರಿಯಲಿ ನಮಗೆ ಸುಖವತ್ಯಂತ ಕೊಡಲಿ ||೨||

ದೇವಲೋಕದ ದೇವತೆಗಳಿಗೆ ಪಾನವಾಗಿಹ ಅಮೃತ ಜಲವು

ಮಳೆಯ ಸುರಿಸುತ ಅಂತರಿಕ್ಷದಿ ಭೂಮಿ ತೋಯಿಪ ಶುದ್ಧ ರಸವು

ಎಲ್ಲ ಕಡೆಯಲಿ ಸುಖವ ನೀಡಲಿ ನಮಗೆ ಸುಖವತ್ಯಂತ ಕೊಡಲಿ ||೩||

ನೋಡಿರೆನ್ನನು ಶಾಂತ ನೋಟದಿ ಸ್ಪರ್ಷ ತೋಷವು ದೇಹಕಿರಲಿ

ನೀರಿನೊಳಗಿಹ ಅಗ್ನಿ ದೇವಗೆ ಹೋಮಿಸುತ್ತಲಿ ತೃಪ್ತಿಗೊಳಿಪೆ

ಬಲವ ಕಾಂತಿಯ ಓಜೆಯನ್ನೂ ನನಗೆ ನೀಡಿರಿ ತೃಪ್ತಿಗೊಂಡು ||೪||

ದಿವಿಯ ಕಡೆಯಿಂ ಕೆಳಗೆ ಧುಮುಕುತ ಮೋಡ ಘರ್ಷಣೆಗೊಂಡ ಶಬ್ದ

ಹೆಸರುಗಳಿಸಿತು ನದಿಯು ಎನ್ನುವ; ಹರಿವ ನೀರಿನ ಕರೆವರಿಂತು ||೫||

ವರುಣ ಪ್ರೇರಿತ ಜಲಗಳೆಲ್ಲವು ಖುಷಿಯ ಕುಣಿತದಿ ಹರಿಯುತಿರಲು

ಇಂದ್ರನಪ್ಪುಗೆ ಪಡೆದ ಕಾರಣ ಆಪಃ ಎಂದೇ ನಾಮ ಬಂತು ||೬||

ಫಲವ ಬಯಸದೆ ಹರಿವ ವಾರಿಯೆ ದೇವಿ ನಿಮ್ಮನು ಇಂದ್ರ ವರಿಸೆ

ನಿಮ್ಮ ಶಕ್ತಿಯು ಹರಿವ ರೀತಿಯ ವರಣದಿಂದಲೆ ಹೆಸರು ’ವಾರಿ’ ||೭||

ಸ್ವೇಚ್ಚೆ ಹರಿಯುವ ನೀರ ತಡೆಯಲು ತುಂಬಿ ತುಳುಕಿತು ಎಲ್ಲ ಕಡೆಗು

ಜಲದ ಹೆಸರದು ಉದಕವಾಯಿತು ತಡೆಗೆ ಹರಿವುದು ನೀರ ಗುಣವು ||೮||

ಸರ್ವ ಮಂಗಳ ಜಲ ಸುಮಂಗಲ ತುಪ್ಪ ಬಪ್ಪುದು ಗೋವಿನಿಂದ

ಅಗ್ನಿ ಸೋಮವ ಧರಿಸುತಿರುವುದು ಮಧುರ ರುಚಿಕರ ಪುಷ್ಟಿ ಕರ್ತೃ

ನನ್ನ ಪ್ರಾಣಕೆ ಶಕ್ತಿ ನೀಡಲಿ ರಸವ ನೀಡುತ ಹೊಂದಿ ಬರಲಿ ||೯||

ದೇಹದೊಳಗಡೆ ನೀರು ಚಲಿಸಲು ಕಣ್ಣು ಕಾಂಬುದು ಕಿವಿಗೆ ಶಕ್ತಿ

ನೀರ ನಾದವು ಶಬ್ದವಾಗಲು ನನ್ನ ಮಾತುಗಳಲ್ಲಿ ಉಕ್ತಿ

ಹೊನ್ನ ಹೊಳಪಿನ ಜಲ ಸಮೂಹವೆ ನಿಮ್ಮ ಸಾರದ ರಸವನುಂಡು

ಅಮೃತ ಭೋಜನವೆಂದು ತಿಳಿವೆನು ತೃಪ್ತಿ ಪಡೆವೆನು ಸೇವಿಸುತಲಿ ||೧೦||

ಜಲದ ದೇವತೆ ಸಕಲ ಪ್ರಾಣಿಗು ನೀಡುತಿರುವಿರಿ ಸ್ನಾನಪಾನ

ನಿಮ್ಮ ದಯೆಯಲಿ ಪಡೆಯುತಿರುವೆವು ಬ್ರಹ್ಮ ಸುಂದರ ಕಾಂಬ ಶಕ್ತಿ ||೧೧||

ರಸವನುಣಿಸಿರಿ ಶಾಂತಿ ಸುಖಗಳ ಜಗದ ಜೀವಿಗಳನ್ನು ತಣಿಸಿ

ತಾಯಿ ಮಕ್ಕಳ ಹಾಲನುಣಿಸುವ ತೆರದಿ ನಮ್ಮನು ಪುಷ್ಟಿಗೊಳಿಸಿ ||೧೨||

ನಿಮ್ಮನಾಶ್ರಿಪೆ ಜಲದ ಮಾತೆಯೆ ಜೀವ ಬದುಕಲು ವಿಪುಲ ನೀರು

ಮಳೆಯ ಸುರಿಸುತ ಬೆಳೆಯನುಳಿಸಿರಿ ಪುತ್ರ ಪೌತ್ರರು ಋಣಿಯು ನಿಮಗೆ ||೧೩||

ಓಂ ಶಾಂತಿಃ ಶಾಂತಿಃ ಶಾಂತಿಃ

ಸಂಗ್ರಹ: ಸೂಕ್ತ ಗೀತಾಂಜಲಿ- ಡಾ|ಮಡ್ವ ಶಾಮ ಭಟ್ಟ

[ಇದರ ಮುಂದಿನ ಭಾಗ ಇನ್ನಾಣ ಸೋಮವಾರ ]

ಸೂ:
ವೇದಮೂರ್ತಿ ತುಪ್ಪೆಕಲ್ಲು ಸಹೋದರರ
“ಪವಮಾನ ಸೂಕ್ತಮ್” ಧ್ವನಿಮುದ್ರಿಕೆಯ ಬೈಲಿನ ಚೆನ್ನೈಬಾವ ಕಳುಸಿಕೊಟ್ಟಿದವು. ಬೈಲಿನ ಕೇಳುಗರಿಂಗಾಗಿ ಇಲ್ಲಿ ನೇಲುಸಿದ್ದು:
ಇಬ್ರಿಂಗೂ ಧನ್ಯವಾದಂಗೊ.

Get this widget | Track details | eSnips Social DNA
ಪವಮಾನ ಸೂಕ್ತಮ್ (ಭಾಗ-೧), 5.0 out of 10 based on 1 rating

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  [ಎಲ್ಲ ಕಡೆಯಲಿ ಸುಖವ ನೀಡಲಿ ನಮಗೆ ಸುಖವತ್ಯಂತ ಕೊಡಲಿ ] – ಇದು ಖುಶೀ ಆತು. ಮಂತ್ರಾರ್ಥ ಓದಿಕ್ಕಿ, ಮತ್ತೆ ಮಂತ್ರ ಕೇಳಿಗೊಂಡು ಓದಲೆ ಇನ್ನೂ ಲಾಯಕ ಆತು. ಶರ್ಮಪ್ಪಚ್ಚಿಗೆ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 2. ಡೈಮಂಡು ಭಾವ
  ಸೂರ್ಯ

  ಶರ್ಮಪ್ಪಚ್ಚಿ ಪಷ್ಟಾಯಿದು..ಇನ್ನು ಕೆಲವು ಸರಣಿ ಲೇಖನಗಳ ನಿರೀಕ್ಷೆಲಿ…

  [Reply]

  VA:F [1.9.22_1171]
  Rating: 0 (from 0 votes)
 3. ವಿದ್ಯಾ ರವಿಶಂಕರ್
  ವಿದ್ಯಾ ರವಿಶಂಕರ್

  ಧನ್ಯವಾದಂಗೊ.

  [Reply]

  VN:F [1.9.22_1171]
  Rating: 0 (from 0 votes)
 4. ಕೃಷ್ಣ ಭಟ್, ಶೇಡಿಗುಮ್ಮೆ

  ಧನ್ಯವಾದಂಗೋ !

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬೊಳುಂಬು ಮಾವ°ಯೇನಂಕೂಡ್ಳು ಅಣ್ಣಬಂಡಾಡಿ ಅಜ್ಜಿಚುಬ್ಬಣ್ಣಮಂಗ್ಳೂರ ಮಾಣಿಡೈಮಂಡು ಭಾವಸಂಪಾದಕ°ಅಡ್ಕತ್ತಿಮಾರುಮಾವ°ನೀರ್ಕಜೆ ಮಹೇಶವೆಂಕಟ್ ಕೋಟೂರುvreddhiಅನುಶ್ರೀ ಬಂಡಾಡಿಪ್ರಕಾಶಪ್ಪಚ್ಚಿದೊಡ್ಡಮಾವ°ದೀಪಿಕಾಶೀಲಾಲಕ್ಷ್ಮೀ ಕಾಸರಗೋಡುದೇವಸ್ಯ ಮಾಣಿಬಟ್ಟಮಾವ°ಮುಳಿಯ ಭಾವಅನಿತಾ ನರೇಶ್, ಮಂಚಿಒಪ್ಪಕ್ಕಕೇಜಿಮಾವ°ಕೆದೂರು ಡಾಕ್ಟ್ರುಬಾವ°ಅಕ್ಷರ°ಡಾಮಹೇಶಣ್ಣಶ್ರೀಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ