ಪವಮಾನ ಸೂಕ್ತಮ್ (ಭಾಗ ೨)

October 31, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ಸೂಕ್ತ ಗೀತಾಂಜಲಿ” ಪುಸ್ತಕಂದ “ಪವಮಾನ ಸೂಕ್ತಮ್ ನ ಇಲ್ಲಿ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.

ಶರ್ಮಪ್ಪಚ್ಚಿ
~~~

ಪವಮಾನ ಸೂಕ್ತಮ್ (ಭಾಗ ೨)

ಪವಮಾನಃ ಸುವರ್ಜನಃ | ಪವಿತ್ರೇಣ ವಿಚರ್ಷಣಿಃ |

ಯಃ ಪೋತಾ ಸ ಪುನಾತು ಮಾ ||೧||

ಪುನಂತು ಮಾ ದೇವಾ ಜನಾಃ | ಪುನಂತು ಮನವೋ ಧಿಯಾ |

ಪುನಂತು ವಿಶ್ವ ಆಯವಃ ||೨||

ಜಾತವೇದಃ ಪವಿತ್ರವತ್ | ಪವಿತ್ರೇಣ ಪುನಾಹಿಮಾ |

ಶುಕ್ರೇಣ ದೇವದೀದ್ಯತ್ | ಅಗ್ನೇ ಕ್ರತ್ವಾ ಕ್ರತೂಗ್ಂ ರನು ||೩||

ಯತ್ತೇ ಪವಿತ್ರ ಮರ್ಚಿಷಿ | ಅಗ್ನೇ ವಿತತ ಮಂತರಾ | ಬ್ರಹ್ಮ ತೇನ ಪುನೀಮಹೇ ||೪||

ಉಬಾಭ್ಯಾಂ ದೇವ ಸಹಿತಃ | ಪವಿತ್ರೇಣ ಸವೇನ ಚ | ಇದಂ ಬ್ರಹ್ಮ ಪುನೀಮಹೇ ||೫||

ವೈಶ್ವ ದೇವೀ ಪುನತೀ ದೇವ್ಯಾಗಾತ್ | ಯಸ್ಯೈ ಬಹ್ವೀಸ್ತನುವೋ ವೀತಪೃಷ್ಠಾಃ |

ತಯಾ ಮದಂತ ಸಧಮಾದ್ಯೇಷು| ವಯಗ್ಗ್ ಸ್ಯಾಮ ಪತಯೋ ರಯೀಣಾಮ್ ||೬||

ವೈಶ್ವಾನರೋ ರಶ್ಮೀ ಭಿರ್ಮಾ ಪುನಾತು | ವಾತಃ ಪ್ರಾಣೇ ನೇಷಿರೋ ಮಯೋಭೂಃ |

ದ್ಯಾವಾ ಪೃಥಿವೀ ಪಯಸಾ ಪಯೋಭಿಃ | ಋತಾವರೀ ಯಜ್ಞಿಯೇ ಮಾ ಪುನೀತಾಮ್ ||೭||

ಬೃಹದ್ಭಿಃ ಸವಿತಸ್ತೃಭಿಃ | ವರ್ಷಿಷ್ಠೈರ್ದೇವ ಮನ್ವಭಿಃ | ಅಗ್ನೇ ದಕ್ಷೈಃ ಪುನಾಹಿ ಮಾ ||೮||

ಯೇನ ದೇವಾ ಅಪುನತ | ಯೇನಾssಪೋ ದಿವ್ಯಂಕಶಃ |

ತೇನ ದಿವ್ಯೇನ ಬ್ರಹ್ಮಣಾ | ಇದಂ ಬ್ರಹ್ಮ ಪುನೀಮಹೇ ||೯||

ಯಃ ಪಾವಮಾನೀ ರಧ್ಯೇತಿ | ಋಷಿಭಿಃ ಸಂಭೃತಗ್ಂ ರಸಮ್ |

ಸರ್ವಗ್ಂ ಸ ಪೂತ ಮಶ್ನಾತಿ | ಸ್ವದಿತಂ ಮಾತರಿಶ್ವನಾ ||೧೦||

ಪಾವಮಾನೀರ್ಯೋ ಅಧ್ಯೇತಿ | ಋಷಿಭಿಃ ಸಂಭೃತಗ್ಂ ರಸಮ್ |

ತಸ್ಮೈ ಸರಸ್ವತೀ ದುಹೇ | ಕ್ಷೀರಗ್ಂ ಸರ್ಪಿರ್ಮಧೂದಕಮ್ ||೧೧||

ಪಾವಮಾನೀಃ ಸ್ವಸ್ತ್ಯಯನೀಃ | ಸದುಘಾಹಿ ಪಯಸ್ವತೀಃ | ಋಷಿಭಿಃ ಸಂಭೃತೋ ರಸಃ |

ಬ್ರಾಹ್ಮಣೇಷ್ವಮೃತಗ್ಂ ಹಿತಮ್ ||೧೨||

ಪಾವಮಾನೀರ್ದಿಶಂತು ನಃ | ಇಮಂ ಲೋಕಮಥೋ ಅಮುಮ್ |

ಕಾಮಾನ್ಸಮರ್ಧಯಂತು ನಃ | ದೇವೀರ್ದೇವೈಃ ಸಮಾಭೃತಾಃ ||೧೩||

ಪಾವಮಾನೀಃ ಸ್ವಸ್ತ್ಯಯನೀಃ | ಸುದುಘಾಹಿ ಘೃತಶ್ಚುತಃ |

ಋಷಿಭಿಃ ಸಂಭೃತೋ ರಸಃ | ಬ್ರಾಹ್ಮಣೇಷ್ವಮೃತಗ್ಂ ಹಿತಮ್ ||೧೪||

ಯೇನ ದೇವಾಃ ಪವಿತ್ರೇಣ | ಆತ್ಮಾನಂ ಪುನತೇ ಸದಾ | ತೇನ ಸಹಸ್ರಧಾರೇಣ |

ಪಾವಮಾನ್ಯಃ ಪುನಂತು ಮಾ ||೧೫||

ಪ್ರಾಜಾಪತ್ಯಂ ಪವಿತ್ರಮ್ | ಶತೋದ್ಯಾಮಗ್ಂ ಹಿರಣ್ಮಯಮ್ |

ತೇನ ಬ್ರಹ್ಮವಿದೋ ವಯಮ್ | ಪೂತಂ ಬ್ರಹ್ಮ ಪುನೀಮಹೇ ||೧೬||

ಇಂದ್ರಃ ಸುನೀತೀ ಸಹ ಮಾ ಪುನಾತು | ಸೋಮ ಸ್ವಸ್ತ್ಯಾ ವರುಣಃ ಸಮೀಚ್ಯಾ |

ಯಮೋ ರಾಜಾ ಪ್ರಮೃಣಾಭಿಃ ಪುನಾತು ಮಾ | ಜಾತವೇದಾ ಮೋರ್ಜಯಂತ್ಯಾ ಪುನಾತು ||೧೭||

ಓಂ ಶಾಂತಿಃ ಶಾಂತಿಃ ಶಾಂತಿಃ

ಪವಮಾನ ಸೂಕ್ತ-ಭಾಗ ೨ (ಕನ್ನಡ ಗೀತೆ)

ನಾಕ ಲೋಕದ ಪೂಜ್ಯ ದೇವನು ಶುದ್ಧಿ ಗೈವನು ವಿವಿಧ ತೆರದಿ

ಸಕಲ ಜನರನು ಶುದ್ಧಿಪಾತನು ಎನ್ನ ಪಾವನಗೊಳಿಸುತಿರಲಿ ||೧||

ದೇವರೆಲ್ಲ ಪವಿತ್ರಗೊಳಿಸಲಿ ಮನವು ಮುನಿಗಳು ಋಷಿಗಳೆಲ್ಲ

ವಿಶ್ವದಲ್ಲಿಹ ಪರಮ ಪುರುಷರು ದಯದಿ ಪಾವನ ಮಾಡುತಿರಲಿ ||೨||

ಸಕಲವರಿತಿಹ ಅಗ್ನಿ ದೇವನೆ ಪೂರ್ಣ ತೇಜದಿ ಶೋಭಿಸುತಲಿ

ಯಾಗ ಶುದ್ಧಿಯ ಗೈವ ತೆರದಲಿ ಎನ್ನ ಪಾವನ ಗೊಳಿಸು ಬಂದು ||೩||

ನಿನ್ನ ಜ್ವಾಲೆಯು ಅಗ್ನಿ ದೇವನೆ ಪೂರ್ಣ ತೇಜದಿ ಶೋಭಿಸುತಲಿ

ಪೂರ್ಣ ಪಾವನ ಗುಣಗಳೊಂದಿಗೆ ನಮ್ಮನೆಲ್ಲ ಪವಿತ್ರಗೊಳಿಸು ||೪||

ಶುದ್ದಿ ಸಾಧನ ಯಾಗ ಕ್ರಿಯೆಗಳು ಎರಡು ಗುಣಗಳು ನಮಗೆ ರಕ್ಷೆ

ಸೂರ್ಯ ದೇವನೆ ನಮಗೆ ಕರುಣಿಸು ಎರಡು ತರದಲಿ ಪೂರ್ಣ ಶುದ್ಧಿ ||೫||

ವಿಶ್ವ ದೇವತೆಯಾದ ದೇವಿಯು ನಮ್ಮ ಪಾವನಗೊಳಲು ಬರಲಿ

ದೇಹ ಸುಂದರ ಸ್ತುತಿಯ ದೇವಿಯು ಕೃಪೆಯ ಹೊಂದುತ ಮೋದಗೊಳಲಿ

ಯಾಗ ಋತ್ವಿಜರೊಡನೆ ಗೈಯುತ ಧನವು ಸಂಪದ ಹರಿದು ಬರಲಿ ||೬||

ಅಗ್ನಿ ದೇವನು ರಶ್ಮಿ ಬೀರುತ ಎನ್ನ ಪಾವನ ಗೊಳಿಸುತಿರಲಿ

ಪ್ರಾಣ ರೂಪದಿ ವಾಯು ದೇವನು ದೇಹದೊಳಗಡೆ ಶುದ್ದಿ ಕೊಡಲಿ

ಸತ್ಯ ರೂಪದ ಸ್ವರ್ಗ ಭೂಮಿಯು ಹಾಲು ಮೊಸರಿಂ ಶುದ್ಧಿ ಕೊಡಲಿ ||೭||

ಅಗ್ನಿ ರೂಪದ ಸವಿತ ದೇವನೆ ಬಹಳ ದೊಡ್ಡದು ನಿನ್ನ ಶಕ್ತಿ

ತುಂಬು ಕೃಪೆಯಲಿ ಪಾಪ ಹರಿಸಲು ನಮಗೆ ಪಾವನ ನಿನ್ನ ರಕ್ಷೆ ||೮||

ದೇವ ಯಾಗ ಪವಿತ್ರಗೊಳಿಪರು ಜಲದ ದೇವತೆ ಸ್ವರ್ಗ ದಾರಿ

ಪೂರ್ಣ ಪಾವನ ಗೈದ ವಿಧದಲಿ ಶುದ್ದಿಗೊಳಿಪೆವು ಯಾಗ ಕರ್ಮ ||೯||

ಯಾವ ಮನುಜನು ಮಂತ್ರ ಪಾವನ ಪಠಿಸುತಿರುವನೊ ಅರ್ಥ ಸಹಿತ

ಸರ್ವ ಸಾರದ ರುಚಿಯ ಪಡೆವನು ವಾಯು ರಚಿಸಿದ ಋಷಿಗಳುದಿತ ||೧೦||

ಕಲಿವನಾವನು ಶುದ್ಧ ಮಂತ್ರವ ಕರೆವ ಹಾಲನು ಮೊಸರು ಜೇನು

ಋಷಿಗಳಾರ್ಜಿತ ಮಂತ್ರವಿದರಲಿ ವರ ಸರಸ್ವತಿ ತೋಷಗೊಂಡು ||೧೧||

ಮಂತ್ರ ಪಾವನ ಕ್ಷೇಮಕಾರಕ ಹಾಲು ತುಪ್ಪವ ಸುರಿಸುತಿರಲಿ

ಋಷಿಗಳಾರ್ಜಿತ ರಸ ಪವಿತ್ರವು ವಿಪ್ರಗೀಯಲಿ ಅಮೃತ ಫಲವ ||೧೨||

ದೇವರಾರ್ಜಿತ ಮಂತ್ರ ಪಾವನ ಲೋಕವಿದು ಪರಲೋಕವನ್ನು

ನೀಡಲೆಮಗೆ ಅಧಿದೇವತೆಗಳು ಎಲ್ಲ ಕಾಮವ ಇಷ್ಟಗಳನು ||೧೩||

ಮಂತ್ರ ಪಾವನ ಕ್ಷೇಮಕಾರಕ ತುಪ್ಪ ಸುರಿಸುತ ಇಷ್ಟ ತರಲಿ

ಋಷಿಗಳಾರ್ಜಿತ ರಸ ಪವಿತ್ರವು ವಿಪ್ರಗೀಯಲಿ ಅಮೃತ ಫಲವ ||೧೪||

ಮಂತ್ರ ಪಾವನದಿಂದ ದೇವರು ದೇಹ ಪಾವನಗೊಳಿಪ ತೆರದಿ

ಬಹಳ ವಿಧದಲಿ ಬಹಳ ರೂಪದಿ ನಮ್ಮ ಪಾವನ ಮಾಡುತಿರಲಿ ||೧೫||

ನೂರು ದರ್ಭೆಯ ಬ್ರಹ್ಮ ಕೂರ್ಚೆಯು ಪಾಪನಾಶಕ ಶಕ್ತಿಯಿಂದ

ವೇದ ತಿಳಿದಿಹ ವಿಪ್ರರೆಮ್ಮನು ಪರಮ ಪಾವನ ಗೊಳಿಸುತಿರಲಿ ||೧೬||

ನನ್ನ ಪಾವನ ಗೊಳಿಸಲೋಸುಗ ಬರಲಿ ಇಂದ್ರ ’ಸುನೀತಿ’ಯೊಡನೆ

ಸೋಮದೇವನು ’ಸ್ವತ್ತಿ’ಯೊಂದಿಗೆ ರಾಜ ಯಮ ’ಪ್ರಮೃಣಾ’ಳೊಡನೆ

ಹಾಲು ಮೊಸರನು ರಸವ ನೀಡುತ ಅಗ್ನಿ ’ಊರ್ಜಯಂತೀ’ಯೊಡನೆ ||೧೭||

ಓಂ ಶಾಂತಿಃ ಶಾಂತಿಃ ಶಾಂತಿಃ

ಸಂಗ್ರಹ: ಸೂಕ್ತ ಗೀತಾಂಜಲಿ- ಡಾ|ಮಡ್ವ ಶಾಮ ಭಟ್ಟ

ಪವಮಾನ ಸೂಕ್ತ (ಭಾಗ-೧) ಇಲ್ಲಿ ನೋಡಿ

ಸೂ:
ವೇದಮೂರ್ತಿ ತುಪ್ಪೆಕಲ್ಲು ಸಹೋದರರ
“ಪವಮಾನ ಸೂಕ್ತಮ್” ಧ್ವನಿಮುದ್ರಿಕೆಯ ಬೈಲಿನ ಚೆನ್ನೈಬಾವ ಕಳುಸಿಕೊಟ್ಟಿದವು. ಬೈಲಿನ ಕೇಳುಗರಿಂಗಾಗಿ ಇಲ್ಲಿ ನೇಲುಸಿದ್ದು:
ಇಬ್ರಿಂಗೂ ಧನ್ಯವಾದಂಗೊ.

Get this widget | Track details | eSnips Social DNA
ಪವಮಾನ ಸೂಕ್ತಮ್ (ಭಾಗ ೨), 5.0 out of 10 based on 1 rating

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ನಮ್ಮನೆಲ್ಲ ಶುದ್ಧಿಗೊಳಿಸಿ, ಪಾವನ ರಕ್ಷೆಯಿತ್ತು, ವಿಪ್ರಗೀಯಲಿ ಅಮೃತ ಫಲವ – ಲಾಯಕ ಆಯ್ದು ಅಪ್ಪಚ್ಚಿ ಹೇಳಿ ಹೇಳಿತ್ತು ಇತ್ಲಾಗಿಂದ ‘ಚೆನ್ನೈವಾಣಿ’

  [Reply]

  VA:F [1.9.22_1171]
  Rating: 0 (from 0 votes)
 2. ಅಡಕೋಳಿ
  ಅಡಕೋಳಿ

  ಇಂತದ್ದು ಒಂದು ಇದ್ದು ಹೇಳಿ ತಿಳಿದು ಖುಷಿ ಆತು, ಶರ್ಮಣ್ಣನ ಶ್ರಮಕ್ಕೆ ಧನ್ಯವಾದ.

  [Reply]

  VN:F [1.9.22_1171]
  Rating: 0 (from 0 votes)
 3. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಪವಮಾನ ಸೂಕ್ತವ ಕೇಳಿಗೊಂಡು ಓದಿಯಪ್ಪಗ ಮನಸ್ಸಿಂಗೆ ಆನಂದ ಆತು.
  ಧ್ವನಿ ಮುದ್ರಿಕೆಲಿಪ್ಪ ಧ್ವನಿಯ ಅನುಸರಿಸಿಗೊಂಡು ಓದುವಾಗ ಎಲ್ಲಿಯೂ ಒಂದೇ ಒಂದು ಅಕ್ಷರ ತಪ್ಪಿಲ್ಲದ್ದೆ ಬರದ್ದದು ನೋಡಿ ತುಂಬ ಖುಷಿ ಆತು. ಶರ್ಮಪ್ಪಚ್ಚಿಯ ಶ್ರಮಕ್ಕೆ ಮೆಚ್ಚೆಕ್ಕು.

  [Reply]

  VN:F [1.9.22_1171]
  Rating: 0 (from 0 votes)
 4. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಇದರಲ್ಲಿ ಚೆನ್ನೈ ಭಾವನ ಕೊಡುಗೆ ತುಂಬಾ ಇದ್ದು.
  ಸ್ತೋತ್ರಂಗೊ ಒಂದೇ ದಿಕ್ಕೆ ಸಿಕ್ಕದ್ದಿಪ್ಪಗ, ಅದರ ಬೇರೆ ಬೇರೆ ಕಡೆಂದ ಹೆರ್ಕಿ ತಂದು, ಒಂದು ಮಾಡಿ ಬೈಲಿಂಗೆ ಒದಗಿಸುವದು ಚೆನ್ನೈ ಭಾವ.
  ಅವರ ಶ್ರಮಕ್ಕೆ ಆನು ಆಭಾರಿ

  [Reply]

  VA:F [1.9.22_1171]
  Rating: 0 (from 0 votes)
 5. ಕೃಷ್ಣ ಭಟ್, ಶೇಡಿಗುಮ್ಮೆ

  ಧನ್ಯವಾದಂಗೋ !

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣರಾಜಣ್ಣವೇಣಿಯಕ್ಕ°ದೀಪಿಕಾಮಂಗ್ಳೂರ ಮಾಣಿಚೆನ್ನಬೆಟ್ಟಣ್ಣಶರ್ಮಪ್ಪಚ್ಚಿಚೂರಿಬೈಲು ದೀಪಕ್ಕಪುಣಚ ಡಾಕ್ಟ್ರುಉಡುಪುಮೂಲೆ ಅಪ್ಪಚ್ಚಿಬೊಳುಂಬು ಮಾವ°ಪವನಜಮಾವಶಾಂತತ್ತೆದೊಡ್ಡಭಾವವಿನಯ ಶಂಕರ, ಚೆಕ್ಕೆಮನೆಪೆಂಗಣ್ಣ°ಅಕ್ಷರ°ಶೀಲಾಲಕ್ಷ್ಮೀ ಕಾಸರಗೋಡುಶ್ರೀಅಕ್ಕ°ಮುಳಿಯ ಭಾವಮಾಲಕ್ಕ°ಅನುಶ್ರೀ ಬಂಡಾಡಿಸುಭಗಒಪ್ಪಕ್ಕಚೆನ್ನೈ ಬಾವ°ಎರುಂಬು ಅಪ್ಪಚ್ಚಿಪಟಿಕಲ್ಲಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ