Oppanna.com

ಪ್ರಭಾತೇ ಕರದರ್ಶನಮ್ ||

ಬರದೋರು :   ಬಟ್ಟಮಾವ°    on   29/01/2010    6 ಒಪ್ಪಂಗೊ

ಬಟ್ಟಮಾವ°

ದಿನ ಉದಿಯಾದರೆ ಸಾಕು ನಮ್ಮ ಸಂಸ್ಕೃತಿಲಿ ಕ್ರಮಂಗೊ ಸುರು ಆವುತ್ತು.
ಹಸೆಂದ ಎದ್ದ ಕೂಡ್ಳೇ, ಚಕ್ಕನ ಕಟ್ಟಿ ಕೂದು, ಎರಡೂ ಅಂಗೈಗಳ ಜೋಡುಸಿ, ಪುಸ್ತಕ ಓದಿದ ಹಾಂಗೆ ಹಿಡ್ಕೊಂಡು ಈ ಶ್ಲೋಕ ಹೇಳಿ ಪ್ರಾರ್ಥನೆ ಮಾಡುದು ನಮ್ಮ ಕ್ರಮಂಗಳಲ್ಲಿ ಒಂದು:
ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತೀ |
ಕರಮೂಲೇ ಸ್ಥಿತಾ ಗೌರೀ ಪ್ರಭಾತೇ ಕರದರ್ಶನಮ್ ||

(ಅಂಗೈ ಕೊಡೀಲಿ ಇಪ್ಪ -ಪೈಸೆಯ ಅಧಿದೇವತೆ ಲಕ್ಷ್ಮಿಗೂ, ಅಂಗೈಯ ಮಧ್ಯಲ್ಲಿ ಇಪ್ಪ – ವಿದ್ಯೆಯ ಅಧಿದೇವತೆ ಸರಸ್ವತಿಗೂ, ಅಂಗೈಯ ಬುಡಲ್ಲಿ ಇಪ್ಪ – ಶಕ್ತಿಯ ಅಧಿದೇವತೆ ಗೌರಿಗೂ, ಈ ಕರದರ್ಶನದ ಮೂಲಕ ನಮಿಸುತ್ತೆ.)
buy best rolex watches for sale
ಪಕ್ಕನೆ ಗೋಷ್ಟಿ ಇಲ್ಲದ್ದೆ ಆರನ್ನಾರು ತೊಳುದು ಹೋದರೆ ನಾವು ಅವರ ಮುಟ್ಟಿ ನಮಸ್ಕಾರ ಮಾಡಿಗೊಳ್ತು. ಅಲ್ದಾ? ಅದೇ ನಮುನೆ, ಹಸೆಂದ ಎದ್ದು, ನೆಲಕ್ಕಂಗೆ ಇಳಿವ ಮೊದಲೇ ಈ ಪ್ರಾರ್ಥನೆ ಮಾಡುದು:
ಸಮುದ್ರವಸನೇ ದೇವಿ ಪರ್ವತಸ್ತನ ಮಂಡಲೇ |
ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ ||

(ಚಾಮಿ – ಭೂದೇವಿ, ಸುತ್ತಲೂ ಆವರುಸಿಪ್ಪ ಸಮುದ್ರವೇ ನಿನ್ನ ಸೀರೆ, ಪರ್ವತಂಗಳೇ ನಿನ್ನ ದೇಹ. ನಿನಗೆ ನಮಸ್ಕಾರಂಗೊ. ವಿಷ್ಣುಪತ್ನಿ ಆದ ನಿನಗೆ ಎನ್ನ ಕಾಲು ಮುಟ್ಟುಸಿಗೊಂಡು ಇದ್ದೆ. ಕ್ಷಮಿಸೆಕ್ಕು!)
ಈ ಶ್ಳೋಕ ಹೇಳಿಕ್ಕಿ ನೆಲಕ್ಕವ ಒಂದರಿ ಕೈಲಿ ಮುಟ್ಟಿ, ನಮಸ್ಕಾರ ಮಾಡಿಕ್ಕಿ ಏಳುದು.
ಹಾಂಗೆ ಆ ದಿನ ಸುರು ಅಪ್ಪದು!

6 thoughts on “ಪ್ರಭಾತೇ ಕರದರ್ಶನಮ್ ||

  1. ಪಾಯಸದ ಬಗ್ಗೆ ಹೆಚ್ಚು ಹೇಳೆಡ ಮಾರಾಯ. ಎನಗೆ ಆಸೆ ಆವುತ್ತು.

  2. ನವಗೆ ಸಣ್ಣಾಗಿಪ್ಪಗಳೇ (ಪ್ರಭಾತೇ ಕರದರ್ಶನಮ್) ಎಂತಕೆ ಈ ಶ್ಲೋಕ ಹೇಳಿ ಕೊಡುವದು? ಎಂತದೋ ಒಂದು ಅರ್ಥ ಇದ್ದೋ ಹೇಳಿ ಕಾಣುತ್ತು:
    ಲಕ್ಷ್ಮಿ ಕೈಯ್ಯ ಕೊಡಿಲ್ಲಿ — ನಾವು ಪೈಸೆ ದಾನ ಮಾಡ್ಲೆ ರೆಡಿ ಆಗಿರೆಕು ಹೇಳಿ
    ವಿಶಾಲವಾಗಿ ಅಂಗೈಲಿ ಸರಸ್ವತಿ — ಹಾಂಗೆ ನಮ್ಮಲ್ಲಿ ಒಳ್ಳೆಯ ವಿಚಾರಕ್ಕೆ ಕಲಿವಲೆ ಹೆಚ್ಚು ಅವಕಾಶ ಇರಲಿ ಹೇಳಿ
    ಮಣಿಗೆಂಟಿನ ಹತ್ರೆ ಗೌರಿ(ಅನ್ನಪೂರ್ಣೆ) — ಸೌಟು ತಿರುಗಿಸಿ ಪಾಯಸ ಬಡುಸಲೂ, ಬಾಳೆಲೆಂದ ಕೈ ತಿರುಗಿಸಿ ಪಾಯಸ ಉಂಬದರಲ್ಲೂ ನಾವು ಟ್ರೈನಿಂಗು ಪಡವವು (ಬೇರೆಯವಕ್ಕೆ ಅರಡಿಯ ಇದು!) ಹೇಳಿ.
    ಅಪ್ಪೋ ?

    1. ಸಮ್ಪತ್ತು ಯಾವತ್ತೂ ಕೈಯ ಕೊಡಿಲಿ ಇಪ್ಪದು, ಶಾಶ್ವತ ಅಲ್ಲ. ಯಾವಾಗ ಬೇಕಾದರೂ ನಷ್ಟ ಅಕ್ಕು. ಆದರೆ ಸರಸ್ವತಿ – ಜ್ನ್ಹಾನ ಹಾನ್ಗೆ ಅಲ್ಲ. ಅದು ನಮ್ಮ ಕಯ್ಯ ಮಧ್ಯಲ್ಲಿ ಇಪ್ಪದು, ನಮ್ಮ ಕಯ್ಯ ಮಧ್ಯಲ್ಲಿ ಇಪ್ಪ ವಸ್ತು ಗಟ್ಟಿ, ಬಿದ್ದು ಹೋಗ, ನಷ್ಟ ಆಗ. ಕರತಲೇ ಸ್ಥಿತಾ ಗೌರೀ – ಹೇಳುವದಕ್ಕೆ ಎನ್ತರ ಹೇಳಿ ನೆನ್ಪಾವುತ್ತಾ ಇಲ್ಲೆ. ಈ ವಿಶಯವ ನಾವು ಮರೆಯದ್ದೆ ಯಾವತ್ತೂ ನೆನ್ಪಿಲ್ಲಿ ಮಡಿಗ್ಯೋಳೆಕು ಹೇಳಿ ಕೂಡಾ ಇದರ ಅರ್ಥ ಮಾಡ್ಳಕ್ಕು ಅಲ್ದಾ? ತಪ್ಪಿದ್ದರೆ ಕ್ಷಮಿಸಿ, ತಿದ್ದಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×