ಪುರುಷ ಸೂಕ್ತಮ್

August 1, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಪುರುಷ ಸೂಕ್ತ ” ವ ಇಲ್ಲಿ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠಲ್ಲಿ ಒಂದು ಪಾದ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.

ಶರ್ಮಪ್ಪಚ್ಚಿ
~~~

ಪುರುಷ ಸೂಕ್ತಮ್

ಸೂಕ್ತಿ:

ಸೃಷ್ಟಿಗೊಂಡನು ಸೃಷ್ಟಿಕರ್ತನು ಸೃಷ್ಟಿಗಾಗಿಯೆ ಯಜ್ಞಹುತನು
ದೃಷ್ಟಿಗೋಚರ ತ್ವಷ್ಟನರಿತರೆ ಪಾನವಮೃತ ಪುರುಷಜ್ಞಾನ

ಓಂ ಸಹಸ್ರ ಶೀರ್ ಷಾ ಪುರುಷಃ | ಸಹಸ್ರಾಕ್ಷಃ ಸಹಸ್ರಪಾತ್| ಸ ಭೂಮಿಂ ವಿಶ್ವತೋ ವೃತ್ವಾ| ಅತ್ಯತಿಷ್ಠದ್ದಶಾಂಗುಲಮ್|
ಪುರುಷ ಏವೇದಗ್ಂ ಸರ್ವಮ್| ಯದ್ಭೂತಂ ಯಚ್ಚ ಭವ್ಯಮ್| ಉತಾಮೃತತ್ವಸ್ಯೇಶಾನಃ| ಯದನ್ನೇನಾತಿರೋಹತಿ|
ಏತಾವಾನಸ್ಯ ಮಹಿಮಾ| ಅತೋ ಜ್ಯಾಯಾಗ್ ಶ್ಚ ಪೂರುಷಃ|| ೧||

ತಲೆಯ ಸಾಸಿರ ಪ್ರಜ್ಞ ಪುರುಷನು ನೋಳ್ವ ಸಾಸಿರ ನಯನದಿಂದ

ಪಾದ ಸಾಸಿರದಿಂದ ಹರಡಿಹ ವಿಶ್ವದಗಲವ ಮೀರಿ ಹರಿದು

ಹಾಸು ಹೊಕ್ಕಿಹೆ ಪುರುಷನೆಲ್ಲವ ಹಿಂದೆ ಮುಂದೆಯು ಇರುವುದೆಲ್ಲ

ಪುರುಷನೀತನು ಅಮೃತಕೇಶ್ವರ ಜೀವ ಕೋಟಿಗು ಅವನೆ ತಳವು

ಪೇಳ್ದ ಪೊಗಳಿಕೆ ಹಿರಿಯ ಮಹಿಮೆಯ ಮೇರೆ ಹರಿಯುತ ಸರ್ವ ವ್ಯಾಪಿ||೧||


ಪಾದೋಸ್ಯ ವಿಶ್ವ ಭೂತಾನಿ| ತ್ರಿಪಾದಸ್ಯಾಮೃತಂ ದಿವಿ| ತ್ರಿಪಾದೂರ್ಧ್ವ ಉದೈತ್ಪುರುಷಃ|
ಪಾದೋಸ್ಯೇಹಾ ಭವಾತ್ಪುನಃ| ತತೋ ವಿಷ್ವಙ್ ವ್ಯಕ್ರಾಮತ್| ಸಾಶನಾನಶನೇ ಅಭಿ|
ತಸ್ಮಾದ್ವಿರಾಡಜಾಯತ| ವಿರಾಜೋ ಅಧಿ ಪೂರುಷಃ| ಸ ಜಾತೋ ಅತ್ಯರಿಚ್ಯತ| ಪಶ್ಚಾದ್ಭೂಮಿ ಮಥೋ ಪುರಃ||೨||

ಒಂದು ಪಾಲಿಂ ಜೀವ ಸೃಷ್ಟಿಸಿ ಮೂರು ಪಾಲಿಂ ಸ್ವರ್ಗದೃಷ್ಟಿ

ಮೂರು ಪಾಲಿಂ ಮೇಲೆ ಮೆರೆದರೆ ಕಾಲು ಪಾಲಿಂ ವಿಶ್ವ ಜನನ

ವ್ಯಕ್ತವಾಗಿಹ ದೃಷ್ಟಿಗೋಚರ ಅನ್ನ ಉಂಬವರಲ್ಲದವರು

ಆತನಿಂದ ವಿರಾಜನುದಯದಿ ದಿವ್ಯ ಪುರುಷನು ರೂಪು ಗೊಂಡ

ಬೆಳೆಯ ತೊಡಗಿದ ಭೂಮಿ ರಚಿಸಿದ ವಿವಿಧ ರೂಪವ ಮುಂದೆ ಹೊಂದಿ||೨||


ಯತ್ಪುರುಷೇಣ ಹವಿಷಾ| ದೇವಾ ಯಜ್ಞಮತನ್ವತ| ವಸಂತೋ ಅಸ್ಯಾ ಸೀದಾಜ್ಯಮ್|
ಗ್ರೀಷ್ಮ ಇಧ್ಮಶ್ಶರದ್ಧವಿಃ| ಸಪ್ತಾಸ್ಯಾಸನ್ ಪರಿಧಯಃ| ತ್ರಿಸ್ಸಪ್ತ ಸಮಿಧಃ ಕೃತಾಃ| ದೇವಾ ಯದ್ಯಜ್ಞಂ ತನ್ವಾನಾಃ|
ಅಬಧ್ನನ್ ಪುರುಷಂ ಪಶುಮ್| ತಂ ಯಜ್ಞಂ ಬರ್ ಹಿಷಿ ಪ್ರೌಕ್ಷನ್| ಪುರುಷಂ ಜಾತಮಗ್ರತಃ||೩||

ಪುರುಷನಾತನ ಯಜ್ಞಗೈದರು ಕೊಂಡನಾತನು ಯಾಗ ಹವಿಸು

ಋತು ವಸಂತವು ಆಜ್ಯವಾಯಿತು ಗ್ರೀಷ್ಮ ಸಮಿಧವು ಶರದ್ ಹವಿಸು

ಪರಿಧಿ ಕುಂಡಕೆ ಏಳು ಕಡೆಯಿಂ ಸಮಿಧಗೊಂಡಿತು ಮೂರು ಏಳು

ಕಟ್ಟಿಬಿಟ್ಟರು ಯೂಪ ಸ್ತಂಭಕೆ ಯಜ್ಞಪಷುವೇ ದಿವ್ಯ ಪುರುಷ||೩||


ತೇನ ದೇವಾ ಅಯಜಂತ| ಸಾಧ್ಯಾ ಋಷಯಶ್ಚ ಯೇ| ತಸ್ಮಾದ್ಯಜ್ಞಾಥ್ಸರ್ವಹುತಃ|
ಸಂಭೃತಂ ಪೃಷದಾಜ್ಯಮ್| ಪಶೂಗ್ ಸ್ತಾಗ್ ಶ್ಚಕ್ರೇ ವಾಯವ್ಯಾನ್| ಆರಣ್ಯಾನ್ ಗ್ರಾಮ್ಯಾಶ್ಚ ಯೇ|
ತಸ್ಮಾದ್ಯಜ್ಞಾಥ್ಸರ್ವಹುತಃ|ಋಚಸ್ಸಾಮಾನಿ ಜಜ್ಞಿರೇ| ಛಂದಾಗ್ಂಸಿ ಜಜ್ಞಿರೇ ತಸ್ಮಾತ್| ಯಜುಸ್ತಸ್ಮಾದಜಾಯತ||೪||

ಆದಿ ಪುರುಷನ ಯಜ್ಞ ಕುಂಡದಿ ಋಷಿಗಳೊಂದಿಗೆ ದೇವತೆಯರು

ಆದಿಯಜ್ಞವ ಪೂರ್ಣಗೈದರು ಮಂತ್ರ ಪ್ರೋಕ್ಷಣೆ ದರ್ಭೆ ಜಲದಿ

ದೇಹವೊಸರಿತು ಯಜ್ಞಹುತನಿಂ ಮೊಸರು ತುಪ್ಪವು ಮೊದಲ ಪ್ರಸವ

ವಾಯು ಮಾರ್ಗದ ಪಕ್ಷಿಕುಲಗಳು ಕಾಡುನಾಡಿನ ಮೃಗ ಸಮೂಹ

ಮತ್ತೆ ಜನಿಸಿತು ಆದಿವೇದವು ಸಾಮವೇದದ ಛಂದಸುಗಳು

ಯಜುರ್ವೇದವು ಉದಯವಾದವು ಯಜ್ಞಹುತನಾ ದೇಹದಿಂದ||೪||


ತಸ್ಮಾದಶ್ವಾ ಅಜಾಯಂತ| ಯೇ ಕೇ ಚೋಭಯಾದತಃ| ಗಾವೋ ಹ ಜಜ್ಞಿರೇ ತಸ್ಮಾತ್|
ತಸ್ಮಾಜ್ಜಾತಾ ಅಜಾವಯಃ| ಯತ್ಪುರುಷಂ ವ್ಯದಧುಃ| ಕತಿಧಾ ವ್ಯಕಲ್ಪಯನ್| ಮುಖಂ ಕಿಮಸ್ಯ ಕೌ ಬಾಹೂ|
ಕಾವೂರೂ ಪಾದಾವುಚ್ಯೇತೇ| ಬ್ರಾಹ್ಮಣೋಸ್ಯ ಮುಖಮಾಸೀತ್| ಬಾಹೂ ರಾಜನ್ಯಃ ಕೃತಃ||೫||

ಆತನಿಂದಲೆ ತುರಗದುದಯವು ಮತೆ ಹಲ್ಲಿನ ಸಾಲಿನೆರಡು

ಗೋವು ಕುರಿಗಳು ಮೊದಲೂಗೊಂಡಿಹ ಆದುವೆಲ್ಲಾ ಪ್ರಾಣಿ ಜನನ

ಪುರುಷನಾತನ ಅಂಗ ಕಲ್ಪನೆ ಬಂತು ಚಿಂತನೆ ಬಹಳ ತೆರದಿ

ಮುಖವು ಹೇಗಿದೇ? ತೋಳು ಯಾವುದು? ತೊಡೆಯು ಪಾದಗಳೆಂತು ಇಹವು?

ಮೋರೆಯಾಯಿತು ಬ್ರಹ್ಮ ತೇಜವು ರಾಜರಾದರು ಬಾಹು ಬಲದಿ||೫||


ಊರೂ ತದಸ್ಯ ಯದ್ವೈಶ್ಯಃ| ಪದ್ಭ್ಯಾಗ್ಂ ಶೂದ್ರೋ ಅಜಾಯತ| ಚಂದ್ರಮಾ ಮನಸೋ ಜಾತಃ|
ಚಕ್ಷೋಸ್ಸೂರ್ಯೋ ಅಜಾಯತ| ಮುಖಾದಿಂದ್ರಶ್ಚಾಗ್ನಿಶ್ಚ| ಪ್ರಾಣಾದ್ವಾಯುರಜಾಯತ| ನಾಭ್ಯಾ ಆಸೀದಂತರಿಕ್ಷಮ್|
ಶೀರ್ಷ್ಣೋ ದ್ಯೌಸ್ಸಮವರ್ತತ|  ಪದ್ಭ್ಯಾಂ ಭೂಮಿರ್ದಿಶಶ್ರೋತ್ರಾತ್| ತಥಾ ಲೋಕಾಗ್ಂ ಅಕಲ್ಪಯನ್||೬||

ತೊಡೆಗಳಿಂದಲೆ ವೈಶ್ಯರುದಯವು ಪಾದ ಹೊಂದಿತು ಶೂದ್ರ ವರ್ಗ

ಮಾನಸಿಜನೇ ಚಂದ್ರನಾದನು ಸೂರ್ಯ ನಯನಗಳಿಂದ ಜನನ

ಅಗ್ನಿ ಇಂದ್ರರು ಮುಖದ ಮಕ್ಕಳು ಪ್ರಾಣಗೊಂಡಿತು ವಾಯು ರೂಪ

ಹೊಕ್ಕುಳಿಂದಾಕಾಶವಾಯಿತು ತಲೆಯು ಹೊಂದಿತು ಸ್ವರ್ಗ ಲೋಕ

ಕಾಲಿನಿಂದಲೆ ಭೂಮಿಯಾಯಿತು ಕಿವಿಗಳಲ್ಲೇ ದಿಕ್ಕು ಪ್ರಸವ ||೬||


ವೇದಾಹಮೇತಂ ಪುರುಷಂ ಮಹಾಂತಮ್| ಆದಿತ್ಯ ವರ್ಣಂ ತಮಸಸ್ತುಪಾರೇ| ಸರ್ವಾಣಿ ರೂಪಾಣಿ ವಿಚಿತ್ಯ ದೀರಃ|
ನಾಮಾನಿ ಕೃತ್ವಾಭಿ ವದನ್ ಯದಾಸ್ತೇ| ಧಾತಾ ಪುರಸ್ತಾದ್ಯಮುದಾ ಜಹಾರ|ಶಕ್ರಃ ಪ್ರವಿದ್ವಾನ್ ಪ್ರದಿಶಶ್ಚತಸ್ರಃ|
ತ ಮೇವಂ ವಿದ್ವಾನ್ ಅಮೃತ ಇಹ ಭವತಿ| ನಾನ್ಯಃ ಪಂಥಾ ಅಯನಾಯ ವಿದ್ಯತೇ| ಯಜ್ಞೇನ ಯಜ್ಞ ಮಯಜಂತ ದೇವಾಃ |
ತಾನಿ ಧರ್ಮಾಣಿ ಪ್ರಥಮಾನ್ಯಾಸನ್| ತೇ ಹ ನಾಕಂ ಮಹಿಮಾನಸ್ಸಚಂತೇ|| ಯತ್ರ ಪೂರ್ವೇ ಸಾಧ್ಯಾಸ್ಸಂತಿ ದೇವಾಃ||೭||

ವೇದ್ಯನಾದೆನು ಪರಮ ಪುರುಷನ ಸೂರ್ಯ ಪ್ರಭೆಯದು ಕತ್ತಲಾಚೆ

ಧೀರನಾತನು ಸರ್ವ ಸೃಷ್ಟಿಯ ರೂಪನಾಮದಿ ಪಸರಿಸಿಹನು

ಬ್ರಹ್ಮ ದೇವನು ಸ್ತುತಿಸಿದವನನು ದಿಕ್ಕಿನಧಿಪತಿ ಇಂದ್ರ ಸಹಿತ

ಪರಮ ಈಶ್ವರನರಿವ ವಿದ್ಯೆಯು ಅಮೃತವಾದುದು: ಬೇರೆ ಇಲ್ಲ

ಆದಿ ಯಜ್ಞದಿ ಧರ್ಮದುದಯವು ಸ್ವರ್ಗ ಮಾರ್ಗವೆ ಯಜ್ಞ ಮಾರ್ಗ

ಸಾಧ್ಯ ದೇವರ ವಾಸ ಸ್ವರ್ಗವ ಯಜ್ಞಗೈವರು ಹೊಂದುತಿಹರು||೭||


ಅದ್ಭ್ಯಸಂಭೂತಃ ಪೃಥಿವ್ವೈ ರಸಾಚ್ಚ| ವಿಶ್ವಕರ್ಮಣಸ್ಸಮವರ್ತತಾಧಿ| ತಸ್ಯ ತೃಷ್ಟಾ ವಿದಧದ್ರೂಪಮೇತಿ|
ತತ್ಪುರುಷಸ್ಯ ವಿಶ್ವಮಾಜಾನಮಗ್ರೇ| ವೇದಾಹ ಮೇತಂ ಪುರುಷಂ ಮಹಾಂತಮ್|
ಆದಿತ್ಯ ವರ್ಣಂ ತಮಸಃ ಪರಸ್ತಾತ್| ತಮೇವಂ ವಿದ್ವಾನಮೃತ ಇಹ ಭವತಿ| ನಾನ್ಯಃ ಪಂಥಾ ವಿದ್ಯತೇಯನಾಯ|
ಪ್ರಜಾಪತಿಶ್ಚರತಿ ಗರ್ಭೇ ಅಂತಃ| ಅಜಾಯ ಮಾನೋ ಬಹುಧಾ ವಿಜಾಯತೇ||೮||

ನೀರು ಮಣ್ಣಿನಿಂದುದಯ ರಸದಿಂ ವಿಶ್ವಕರ್ಮನು ಜನಿಸಿ ಬಂದ

ತ್ವಷ್ಟನೆಂಬವ ತಾರವೆತ್ತಿದ ಆದಿ ಪುರುಷನು ವಿವಿಧ ರೂಪ

ವೇದ್ಯನಾದೆನು ಪರಮ ಪುರುಷನ ಸೂರ್ಯ ಪ್ರಭೆಯಿದು ಕತ್ತಲಾಚೆ

ಪರಮ ಈಶ್ವರನರಿವ ವಿದ್ಯೆಯು ಅಮೃತವಾದುದು: ಬೇರೆ ಇಲ್ಲ

ಜನ್ಮ ವಿರದವ ಜನ್ಮ ರೂಪದಿ ಅಂತರಾತ್ಮನು ಚಲಿಸುತಿಹನು|೮||


ತಸ್ಯ ಧೀರಾಃ ಪರಿಜಾನಂತಿ ಯೋನಿಮ್| ಮರೀಚೀನಾಂ ಪದಮಿಚ್ಛಂತಿ ವೇಧಸಃ|
ಯೋ ದೇವೇಭ್ಯೋ ಆತಪತಿ| ಯೋ ದೇವಾನಾಂ ಪುರೋಹಿತಃ| ಪೂರ್ವೋಯೋ ದೇವೇಭ್ಯೋ ಜಾತಃ|
ನಮೋ ರುಚಾಯ ಬ್ರಾಹ್ಮಯೇ| ರುಚಂ ಬ್ರಾಹ್ಮಂ ಜನಯಂತಃ| ದೇವಾ ಅಗ್ರೇ ತದಬ್ರುವನ್|
ಯಸ್ತ್ವೈವಂ ಬ್ರಾಹ್ಮಣೋ ವಿದ್ಯಾತ್| ತಸ್ಯ ದೇವಾ ಅಸನ್ವಶೇ||೯||

ಉಗಮವಾತನ ಅರಿತ ಧೀರರು ಅರ್ಹರವರು ಮಹರ್ಷಿ ಪದಕೆ

ಹೊಳೆವನಾವನು ಸುರರಿಗೋಸ್ಕರ ಅಮರ ದೇವರ ಪುರೋಹಿತನೊ

ಜನ್ಮವಾವನು ದೇವಗಿತ್ತನೊ ಬ್ರಹ್ಮ ತೇಜಕೆ ನಮಿಪೆ ನಮಿಪೆ

ಬ್ರಹ್ಮ ತೇಜವನರಿತ ಅಮರರು ನುಡಿದರೀತೆರ ವೇದ ಮಾತು

“ಬ್ರಹ್ಮ ಮಹಿಮೆಯ ನುರಿತ ಬ್ರಾಹ್ಮಣ ದೇವಲೋಕದ ಪತಿಯ ಪತಿಯು”||೯||


ಹ್ರೀಶ್ಚತೇ ಲಕ್ಷ್ಮೀಶ್ಚ ಪತ್ನ್ಯೌ| ಅಹೋ ರಾತ್ರೇ ಪಾರ್ಶ್ವೇ| ನಕ್ಷತ್ರಾಣಿ ರೂಪಮ್|ಅಶ್ವಿನೌ ವ್ಯಾತ್ತಮ್|
ಇಷ್ಟಂ ಮನಿಷಾಣ| ಅಮುಂ ಮನಿಷಾಣ| ಸರ್ವಂ ಮನಿಷಾಣ||೧೦||

ಮಡದಿರಿಬ್ಬರು ಲಜ್ಜೆ ಲಕ್ಷ್ಮಿಯು ಹಗಲು ರಾತ್ರೆಯ ಎಡವು ಬಲವು

ತಾರೆ ನಭದಲಿ ನಿನ್ನ ರೂಪವು ದಿವಿಯು ಬುವಿಗಳು ಬಾಯಿಯಗಲ

ಪುರುಷ ಶ್ರೇಷ್ಟನೆ ನಮಗೆ ಕರುಣಿಸು ಇಷ್ಟ, ಇಹವನು, ಸರ್ವ ಸುಖವ||೧೦||


ವೇದಾತ್ಮನಾಯ ವಿದ್ಮಹೇ ಹಿರಣ್ಯ ಗರ್ಭಾಯ ಧೀ ಮಹಿ
ತನ್ನೋ ಬ್ರಹ್ಮ ಪ್ರಚೋದಯಾತ್

ಜ್ಞಾನಗೊಂಬೆವು ವೇದಾತ್ಮನನು ಹಿರಣ್ಯ ಗರ್ಭವ ಧ್ಯಾನಿಸುವೆವು

ಬ್ರಹ್ಮ ದೇವರು ನಮ್ಮ ಬುದ್ಧಿಗೆ ಕೊಡಲಿ ಪ್ರೇರಣೆ ಪುರುಷನೆಡೆಗೆ

ಶಾಂತಿ ಪಾಠ

ಓಂ ತಚ್ಛಂ ಯೋರಾವೃಣೀಮಹೇ| ಗಾತುಂ ಯಜ್ಞಾಯ| ಗಾತುಂ ಯಜ್ಞ ಪತಯೇ|
ದೈವೀ ಸ್ವಸ್ತಿರಸ್ತು ನಃ| ಸ್ವಸ್ತಿರ್ಮಾನುಷೇಭ್ಯಃ| ಊರ್ಧ್ವಂ ಜಿಗಾತು ಭೇಷಜಮ್|
ಶಂ ನೋ ಅಸ್ತು ದ್ವಿಪದೇ| ಶಂಚತುಷ್ಪದೇ| ಓಂ ಶಾಂತಿಃ ಶಾಂತಿಃ ಶಾಂತಿಃ||

ದುರಿತ ತೊರೆಯಲಿ ಸರ್ವಕಾಲಕೆ ಸ್ತುತಿಪೆ ಯಜ್ಞಕೆ ಯಜ್ಞಪತಿಗೆ

ಶ್ರೇಯ ನೀಡಲಿ ನಮಗೆ, ಜನರಿಗೆ ಸಸ್ಯದೌಷಧಿ ವೃದ್ಧಿಗೊಳಲಿ

ಸುಖವ ನೀಡಲಿ ಪಕ್ಷಿ ವರ್ಗಕೆ ಸುಖವ ನೀಡಲಿ ಪ್ರಾಣಿಗಳಿಗು

ಶಾಂತಿಯಾಗಲಿ! ಶಾಂತಿಯಾಗಲಿ!! ಸರ್ವ ಲೋಕದಿ ಶಾಂತಿಯಿರಲಿ!!!
***

(ಸಂಗ್ರಹ: “ವೇದ ಮಂತ್ರ ಗೀತಾಂಜಲಿ”- ಡಾ| ಮಡ್ವ ಶಾಮ ಭಟ್ಟ, ಕುಂಬಳೆ)

ಸೂ:
ವೇದಮೂರ್ತಿ ತುಪ್ಪೆಕಲ್ಲು ಸಹೋದರರ
“ಪುರುಷ ಸೂಕ್ತಮ್” ಧ್ವನಿಮುದ್ರಿಕೆಯ ಬೈಲಿನ ಚೆನ್ನೈಬಾವ ಕಳುಸಿಕೊಟ್ಟಿದವು. ಬೈಲಿನ ಕೇಳುಗರಿಂಗಾಗಿ ಇಲ್ಲಿ ನೇಲುಸಿದ್ದು:
ಇಬ್ರಿಂಗೂ ಧನ್ಯವಾದಂಗೊ.


Get this widget | Track details | eSnips Social DNA
ಪುರುಷ ಸೂಕ್ತಮ್, 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಗೋಪಾಲಣ್ಣ
  Gopalakrishna BHAT S.K.

  ವಿರಾಟ್ ಪುರುಷನ ಅದ್ಭುತ ವರ್ಣನೆ…ಸಯನ್ಸ್ ನ ಬಿಗ್ ಬಾಂಗ್ ಥಿಯರಿಗೆ [ಮಹಾ ಸ್ಫೋಟ ಸಿದ್ಧಾಂತ] ಇದು ಹೊಂದುತ್ತು ಹೇಳಿ ಓದಿದ್ದೆ.

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  [ಮತ್ತೆ ಜನಿಸಿತು ಆದಿವೇದವು ಸಾಮವೇದದ ಛಂದಸುಗಳು
  ಯಜುರ್ವೇದವು ಉದಯವಾದವು ಯಜ್ಞಹುತನಾ ದೇಹದಿಂದ] – ಮನೋಜ್ಞ ವರ್ಣನೆ. ಡಾ|| ಬರದ್ದು ಬಹು ಲಾಯಕ್ಕ ಆಯ್ದು. ಬೈಲಿಂಗೆ ಕೊಡ್ತಾ ಇಪ್ಪ ಶರ್ಮ ಅಪ್ಪಚ್ಚಿಗೆ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಬೊಳುಂಬು ಮಾವ

  ಪರಮಾತ್ಮನ ವಿಶ್ವರೂಪವ ಚೆಂದಕೆ ತೋರುಸಿಕೊಟ್ಟ ಡಾಕ್ಟ್ರಿಂಗು, ಶರ್ಮಪ್ಪಚ್ಚಿಗುದೆ ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘು ಮುಳಿಯ

  ಮಹೋನ್ನತ ಕಲ್ಪನೆ.ಧನ್ಯವಾದ೦ಗೊ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣನೆಗೆಗಾರ°ಶ್ಯಾಮಣ್ಣಬಂಡಾಡಿ ಅಜ್ಜಿಮಾಲಕ್ಕ°ಕೇಜಿಮಾವ°ಉಡುಪುಮೂಲೆ ಅಪ್ಪಚ್ಚಿದೇವಸ್ಯ ಮಾಣಿಪುತ್ತೂರಿನ ಪುಟ್ಟಕ್ಕಗೋಪಾಲಣ್ಣಶೇಡಿಗುಮ್ಮೆ ಪುಳ್ಳಿಶಾ...ರೀವಾಣಿ ಚಿಕ್ಕಮ್ಮಪೆರ್ಲದಣ್ಣಒಪ್ಪಕ್ಕಅಜ್ಜಕಾನ ಭಾವಸುವರ್ಣಿನೀ ಕೊಣಲೆಎರುಂಬು ಅಪ್ಪಚ್ಚಿಮುಳಿಯ ಭಾವಶುದ್ದಿಕ್ಕಾರ°ಅಕ್ಷರ°ಡಾಗುಟ್ರಕ್ಕ°ವೇಣಿಯಕ್ಕ°ಅಕ್ಷರದಣ್ಣಕೊಳಚ್ಚಿಪ್ಪು ಬಾವಪವನಜಮಾವಚೆನ್ನಬೆಟ್ಟಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ