ರುದ್ರ ಗೀತೆ : (ಅನುವಾಕ – 01)

ಆತ್ಮೀಯ ಬೈಲಿಂಗೆ,

ಲೇಖಕರ ಪರಿಚಯ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಶ್ರೀ ರುದ್ರ ಗೀತೆ” ಹೇಳುವ ಕನ್ನಡ ಗೀತೆಗಳ ಸಂಗ್ರಹವ ಇಲ್ಲಿ ಕೊಡುತ್ತಾ ಇದ್ದೆ.
ಪ್ರತಿ ಸೋಮವಾರಕ್ಕೆ ಒಂದು ಅನುವಾಕದ ಹಾಂಗೆ ಇಲ್ಲಿ ಹಾಕುತ್ತೆ.
ಒಂದು ಅನುವಾಕ ಸಂಸ್ಕೃತಲ್ಲಿ ಆದ ನಂತ್ರ ಅದರ ಕನ್ನಡ ಗೀತೆ ಬತ್ತ ಹಾಂಗೆ ಬರದ್ದೆ.
– ಶರ್ಮಪ್ಪಚ್ಚಿ

ಶ್ರೀ ರುದ್ರ ಮಂತ್ರವನ್ನು ಪಠಿಸುವಾಗ ನಮ್ಮ ಶರೀರ, ಶ್ವಾಸ, ಇಂದ್ರಿಯ ಮತ್ತು ಮನಸ್ಸನ್ನು ತಯಾರು ಮಾಡಬೇಕು.

ಬಾಹ್ಯ ಸ್ಥಿತಿಯಿಂದ ಅಂತರಂಗದ ತುರೀಯ ಸ್ಥಿತಿಗೆ ಹೋಗಲು ನಾವು ಸಿದ್ಧರಾಗಬೇಕು.
ಮೊದಲನೇ ಅನುವಾಕದಲ್ಲಿ ಪಿನಾಕ ಬಿಲ್ಲನ್ನು ತಪಸ್ಸು ಮಾಡಿ ಶಿವನಿಂದ ಪಡೆಯಲಿಕ್ಕೆ ಹೋದ ಅರ್ಜುನನು ಗೊತ್ತಿಲ್ಲದೆಯೇ ಕಿರಾತ ರೂಪದಲ್ಲಿರುವ ಪರಮೇಶ್ವರನ ಮುಂದೆ ನಿಂತ ದೃಶ್ಯದಂತಿರುತ್ತದೆ.
ತನ್ನ ಸಾಮರ್ಥ್ಯವೆಲ್ಲಾ ಉಡುಗಿ ಹೋಗಿ ಶಿವನನ್ನೇ ಶರಣು ಹೋಗುತ್ತಾನೆ.
ಶಿವನು ಕರುಣೆಯಿಂದ ತನ್ನ ರುದ್ರ ರೂಪವೆಲ್ಲವನ್ನೂ, ನಂತರ ವಿಶ್ವ ರೂಪವನ್ನೂ ಕರುಣಿಸುತ್ತಾನೆ.
ಅನುವಾಕ ಎರಡರಿಂದ ಎಂಟರವರೆಗೆ ಪ್ರಕೃತಿಯಲ್ಲಿ ಲೀನವಾದ ಶಿವನ ವಿಶ್ವ ರೂಪವನ್ನು ಕಂಡು ಭಕ್ತ ಬೆರಗಾಗುತ್ತಾನೆ.
ಒಂದು ರೀತಿಯ ಆಶ್ಚರ್ಯವೂ ಆನಂದವೂ ಆವರಿಸುತ್ತದೆ.

ಎಂಟನೇ ಅನುವಾಕದಲ್ಲಿ ಶಿವನು ಅವನ ತುರೀಯ ಸ್ಥಿತಿಯನ್ನು ಕರುಣಿಸಿ ಜೀವನದ ಉತ್ತಮ ಸ್ಥಿತಿ ಗತಿಯನ್ನು ಅನುಭವಿಸುವಂತೆ ಮಾಡುತ್ತಾನೆ.
ಆ ಸ್ಥಿತಿ ಹೆಚ್ಚು ಹೊತ್ತು ಉಳಿಯಲಾರದು.
ಭಕ್ತನು ಕೆಳಗೆ ಇಳಿದು ಪರಿಸರದ  ಪ್ರಕೃತಿಯನ್ನು ಕಾಣುತ್ತಾನೆ. ಪುನಃ ಮೊದಲಿನಂತೆಯೇ ಪ್ರಕೃತಿ ಲೀನವಾದ ಶಿವನನ್ನು ಕಾಣುತ್ತಾನೆ ಒಂಭತ್ತನೇ ಅನುವಾಕದಲ್ಲಿ.
ಆದರೆ ಈ ಸಲದ ರುದ್ರ ಭಕ್ತನ ಆಪ್ತ ಬಂಧು, ತನ್ನ ಇಚ್ಛೆಯನ್ನು ದೇವನ ಮುಂದೆ ಪ್ರಾರ್ಥಿಸಿಕೊಳ್ಳುತ್ತಾನೆ.
ತನ್ನ ಅಭೀಷ್ಟವ, ತನ್ನ ಮಕ್ಕಳ ಮೊಮ್ಮಕ್ಕಳ ಶ್ರೇಯಸ್ಸನ್ನು ಕಾಪಾಡುವಂತೆ ದೇವರನ್ನು ಬೇಡುತ್ತಾನೆ ಇದು ಹತ್ತನೇ ಅನುವಾಕದಲ್ಲಿ.

ಇನ್ನು ಹನ್ನೊಂದನೇ ಅನುವಾಕದಲ್ಲಿ ಬೇರೆ ಬೇರೆ ರೂಪದ ರುದ್ರರು ತನ್ನನು ಹಿಂಸಿಸದೆ ತನಗೆ ರಕ್ಷಣೆ ಕೊಡುವಂತೆ ರುದ್ರಶಿವನನ್ನು ಬೇಡಿಕೊಳ್ಳುತ್ತಾನೆ.
ಸಂಪೂರ್ಣ ಶರಣಾಗುತ್ತ ರುದ್ರ ಶಿವನು ಮೃತ್ಯುವಿಂದ ಪಾರು ಮಾಡಿ ತನ್ನ ಕೈ ಶಿವನ ಪೂಜೆಯಿಂದ ವಿಶ್ವಕ್ಕೆ ಔಷಧಿಯಾಗಲೆಂದು ಕೇಳಿಕೊಳ್ಳುತ್ತಾನೆ.

ಶ್ರೀ ರುದ್ರ ಪಠಿಸುವುದೆಂದರೆ ಧ್ಯಾನದಲ್ಲಿ ತುರೀಯ ಸ್ಥಿತಿಗೆ ಹೋಗಿ ಹಿಂತಿರುಗಿ ಬಂದ ಅನುಭವವಾಗುತ್ತದೆ.

ಶ್ರೀ ರುದ್ರ ಪ್ರಶ್ನಃ

(ಕೃಷ್ಣಯಜುರ್ವೇದ ತೈತ್ತಿರೀಯ ಸಂಹಿತಾ| ಚತುರ್ಥಂ ವೈಶ್ವ ದೇವಂ ಕಾಂಡಮ್ |  ಪಂಚಮಃ ಪ್ರಪಾಠಕಃ)

|| ಓಂ ನಮೋ ಭಗವತೇ ರುದ್ರಾಯ ||

|| ಹರಿಃ ಓಂ ||

ಅನುವಾಕ 1:

ಓಂ ನಮಸ್ತೇ ರುದ್ರ ಮನ್ಯವ ಉತೋತ ಇಷವೇ ನಮಃ| ನಮಸ್ತೇ ಅಸ್ತು ಧನ್ವನೇ ಬಾಹುಭ್ಯಾಮುತ ತೇ ನಮಃ|
ಯಾ ತ ಇಷುಃ ಶಿವತಮಾ ಶಿವಂ ಬಭೂವ ತೇ ಧನುಃ| ಶಿವಾ ಶರವ್ಯಾ ಯಾ ತವ ತಯಾ ನೋ ರುದ್ರ ಮೃಡಯ|
ಯಾ ತೇ ರುದ್ರ ಶಿವ ತನೂರಘೋರಾ ಪಾಪಕಾಶಿನೀ| ತಯಾ ನಸ್ತನುವಾ ಶಂತಮಯಾ ಗಿರಿಶಂತಾಭಿಚಾಕಶೀಹಿ|

ಯಾಮಿಷುಂ ಗಿರಿಶಂತ ಹಸ್ತೇ ಭಿಭರ್ಷ್ಯಸ್ತವೇ| ಶಿವಾಂ ಗಿರಿತ್ರ ತಾಂ ಕುರು ಮಾ ಹಿಗ್‍ಂಸೀಃ ಪುರುಷಂ ಜಗತ್|
ಶಿವೇನ ವಚಸಾ ತ್ವಾ ಗಿರಿಶಾಚ್ಛಾವದಾಮಸಿ| ಯಥಾ ನಃ ಸರ್ವಮಿಜ್ಜಗದಯಕ್ಷ್ಮಗ್‍ಂ ಸುಮನಾ ಅಸತ್|
ಅಧ್ಯವೋಚದಧಿವಕ್ತಾ ಪ್ರಥಮೋ ದೈವ್ಯೋ ಭಿಷಕ್| ಅಹೀಗ್‍ಶ್ಚ ಸರ್ವಾನ್‍ಜಂಭಯಂಥ್ಸರ್ವಾಶ್ಚ ಯಾತುಧಾನ್ಯಃ|
ಅಸೌ ಯಸ್ತಾಮ್ರೋ ಅರುಣ ಉತ ಬಭ್ರುಃ ಸುಮಂಗಲಃ|ಯೇ ಚೇ ಮಾಗ್‍ಂ ರುದ್ರಾ ಅಭಿತೋ ದಿಕ್ಷು

– ಶ್ರಿತಾ ಸ್ಸಹಸ್ರಶೋವೈಷಾಗ್‍ಂ ಹೇಡ ಈಮಹೇ| ಅಸೌ ಯೋವಸರ್ಪತಿ ನೀಲಗ್ರೀವೋ ವಿಲೋಹಿತಃ|
ಉತೈನಂ ಗೋಪಾ ಅದೃಶನ್ನದೃಶನ್ನುದಹಾರ್ಯಃ| ಉತೈನಂ ವಿಶ್ವಾ ಭೂತಾನಿ ಸ ದೃಷ್ಟೋ ಮೃಡಯಾತಿ ನಃ|
ನಮೋ ಅಸ್ತು ನೀಲಗ್ರೀವಾಯ ಸಹಸ್ರಾಕ್ಷಾಯ ಮೀಢುಷೇ| ಅಥೋ ಯೇ ಅಸ್ಯ ಸತ್ವಾನೋಹಂ ತೇಭ್ಯೋಕರನ್ನಮಃ|
ಪ್ರಮುಂಚ ಧನ್ವನಸ್ತ್ವಮುಭಯೋರಾರ್ತ್ನಿಯೋರ್ಜ್ಯಾಮ್| ಯಾಶ್ಚ ತೇ ಹಸ್ತ ಇಷವಃ ಪರಾ ತಾ ಭಗವೋ ವಪ|

ಅವತತ್ಯ ಧನುಸ್ತ್ವಗ್‍ಂ ಸಹಸ್ರಾಕ್ಷ ಶತೇಷುಧೇ| ನಿಶೀರ್ಯ ಶಲ್ಯಾನಾಂ ಮುಖಾ ಶಿವೋ ನಃ ಸುಮನಾ ಭವ|
ವಿಜ್ಯಂ ಧನುಃ ಕಪರ್ದಿನೋ ವಿಶಲ್ಯೋ ಬಾಣವಾಗ್‍ಂ ಉತ| ಅನೇಶನ್ನಸ್ಯೇಷವ ಆಭುರಸ್ಯ ನಿಷಂಗಥಿಃ|
ಯಾ ತೇ ಹೇತಿರ್ಮೀಢುಷ್ಟಮ ಹಸ್ತೇ ಬಭೂವ ತೇ ಧನುಃ| ತಯಾಸ್ಮಾನ್, ವಿಶ್ವತಸ್ತ್ವಮಯಕ್ಷ್ಮಯಾ ಪರಿಬ್ಭುಜ|
ನಮಸ್ತೇ ಅಸ್ತ್ವಾಯುಧಾಯಾನಾತತಾಯ ಧೃಷ್ಣವೇ| ಉಭಾಭ್ಯಾಮುತ ತೇ ನಮೋ ಬಾಹುಭ್ಯಾಂ ತವ ಧನ್ವನೇ|
ಪರಿ ತೇ ಧನ್ವನೋ ಹೇತಿರಸ್ಮಾನ್ವೃಣಕ್ತು ವಿಶ್ವತಃ| ಅಥೋ ಯ ಇಷುಧಿಸ್ತವಾರೇ ಅಸ್ಮನ್ನಿಧೇಹಿ ತಮ್ ||೧||

ಶಂಭವೇ ನಮಃ||

ನಮಸ್ತೇ ಅಸ್ತು ಭಗವನ್ವಿಶ್ವೇಶ್ವರಾಯ ಮಹಾದೇವಾಯ ತ್ರ್ಯಂಬಕಾಯ ತ್ರಿಪುರಾಂತಕಾಯ ತ್ರಿಕಾಗ್ನಿಕಾಲಾಯ ಕಾಲಾಗ್ನಿರುದ್ರಾಯ ನೀಲಕಂಠಾಯ ಸರ್ವೇಶ್ವರಾಯ ಸದಾಶಿವಾಯ ಶಂಕರಾಯ ಮೃತ್ಯುಂಜಯಾಯ ಶ್ರೀ ಮನ್ಮಹಾದೇವಾಯ ನಮಃ||

ಶ್ರೀ ರುದ್ರ ಗೀತೆ

ಸೂಕ್ತಿ:

ಶಿವ ತುರೀಯತೆ ನೆನೆದು ಮನದಲಿ ಈಶನ್ಯಾಸದಿ ಮೈಯ ತಳೆದು|
ಅರ್ಥ ಭಾವನೆ ಸವಿಯನುಣ್ಣುತ ರುದ್ರ ಗೀತೆಯ ಪಠಿಸು ದಿನವು ||

|| ನಮಸ್ಕರಿಪೆ ಶ್ರೀ ರುದ್ರ ಭಗವಂತನಿಗೆ ||

ನಮಿಪೆ ನಮಿಪೆನು ರುದ್ರ ದೇವನೆ ನಿನ್ನ ಕೋಪಕೆ ಬಾಣಗಳಿಗೆ|
ನಮಿಪೆ ಪುನರಪಿ ನಿನ್ನ ಬಿಲ್ಲಿಗೆ ಮತ್ತೆ ನಿನ್ನಯ ತೋಳುಗಳಿಗೆ ||೧||

ಶುಭವ ಹೊಂದುತ ಬಾಣವೆಲ್ಲವು ಶುಭವು ಧನುವಿನ ರೂಪದಿಂದ|
ಶುಭವೆ ಬತ್ತಳಿಕೆಯಲಿ ನೆಲಸುತ ಶುಭವ ನೀಡಲಿ ಹರುಷದಿಂದ||೨||

ಶಾಂತವಾಗಿಹ ಘೋರವಲ್ಲದ ಪಾಪವಿಲ್ಲದ ತನುವ ಮೆರೆದು|
ಗಿರಿಶ ರುದ್ರನೆ ನಮಗೆ ಕರುಣಿಸು ಶಿವನ ರೂಪದಿ ಬಂದು ಹರಸು||೩||

ಕೈಲಿ ಹಿಡಿದಿಹ ಬಾಣವೆಲ್ಲವು ಬಿಡುವ ಮುಂಚೆಯೆ ಶಮನಗೊಳಲಿ|
ಜಗದಿ ಮನುಜರ ಹಿಂಸೆ ಮಾಡದೆ ಸುಖದಿ ಪಾಲಿಸು ಗಿರಿಯ ಪತಿಯೆ||೪||

ಶಾಂತ ವಚನದಿ ಬೇಡುತಿರುವೆನು ಗಿರಿಶ ನಿನ್ನಯ ಪ್ರೀತಿ ಬಯಸಿ|
ರೋಗವಿಲ್ಲದೆ ಜಗದೊಳೆಲ್ಲರು ಸುಖದ ಮನದಲಿ ಬಾಳುತಿರಲಿ||೫||

ಆಢ್ಯ ವೈದ್ಯನೆ ದೇವತೆಗಳಿಗೆ, ನನ್ನ ಕ್ಷೇಮಕೆ ನಾಶಪಡಿಸು|
ಕಾಂಬ ಹುಲಿಗಳು ಹಾವು; ಕಾಣದ ಭೂತ ಪ್ರೇತದ ಶತ್ರುಗಳನು ||೬||

ಉದಯ ವೀತನ ತಾಮ್ರ ವರ್ಣವು ಹೊನ್ನ ಹಳದಿಯ ಕಿರಣವರುಣ|
ಸರ್ವ ದಿಕ್ಕಿಗು ಸುತ್ತುವರಿಯುವ ಸಂಖ್ಯ ಸಾಸಿರ ರುದ್ರಗಣರ|

ಸರ್ವಮಂಗಳ ರುದ್ರ ದೇವನು ಕೋಪ ತಗ್ಗಿಸಿ ಶಾಂತಿಗೊಳಲಿ||೭||
ಕೆಂಪು ಬಣ್ಣದ ಉದಯ ಅಸ್ತದಿ ನೀಲಕಂಠನು ಸುತ್ತುತಿಹನು|

ಗೋಪ ಬಾಲಕರವನ ಕಾಂಬರು ನೀರ ನೀರೆಯರಕ್ಷಿಗಮನ|
ವಿಶ್ವದೆಲ್ಲೆಡೆ ಜೀವ ಕೋಟಿಗೆ ಬೆಳಕ ನೀವನು ನಮಗೆ ಮುದವ|| ೮||

ನೀಲಕಂಠಗೆ ಸಹಸ್ರಾಕ್ಷಗೆ ನಮಿಪೆ ಮುದವನು ನೀಡಲೆಮಗೆ|
ಅವನ ಅನುಚರ ಪ್ರಥಮ ಗಣರಿಗು ನನ್ನ ದೈನ್ಯದ ನೂರು ನಮನ|| ೯||

ಬಿಲ್ಲ ಹೆದೆಯನು ಎರಡು ಕಡೆಯಲಿ ಬಿಡಿಸಿ ರುದ್ರನೆ ಕೈಲಿ ಹಿಡಿದು|
ದೂರ ಸರಿಸುತ ಬಾಣ ರಾಶಿಯ ನನ್ನ ಕಣ್ಣುಗಳಿಂದ ಮರೆಸು ||೧೦||

ನೂರು ಬತ್ತಳಿಕೆಯಲಿ ತುಂಬಿದ ರುದ್ರ ಸಾಸಿರ ಕಣ್ಣಿನವನೆ|
ಬಾಣ ಮೊಂಡಿಸಿ ಬಿಲ್ಲ ಸಡಿಲಿಸಿ ಶಿವನೆ ಮನದಲಿ ನೆಲಸು ಮುದದಿ||೧೧||

ಹಗ್ಗವಿಲ್ಲದ ಬಿಲ್ಲು ಆಗಲಿ ಬತ್ತಳಿಕೆಯೇ ಖಾಲಿ ಇರಲಿ|
ಜಡೆಯ ಜೂಟನ ಬಾಣ ಮುರಿಯಲಿ ಖಡ್ಗ ಒರೆಯಲಿ ಇಲ್ಲದಿರಲಿ||೧೨||

ಸರ್ವ ಮಂಗಲ ನೀಡುವಾತನೆ ನಿನ್ನ ಕೈಗಳ ಬಿಲ್ಲು ಖಡ್ಗ|
ಗಾಯಗೊಳಿಸದೆ ಶಾಂತವಾಗುತ ಎಲ್ಲ ದುರಿತಗಳಿಂದ ಪೊರೆಯೆ ||೧೩||

ನಮಿಪೆ ಪುನರಪಿ ಶಕ್ತಿ ಧೃಡತೆಯ ಶಮನಗೊಂಡಿಹ ಶಸ್ತ್ರಗಳಿಗೆ|
ನಿನ್ನ ತೋಳುಗಳೆರಡ ನಮಿಪೆನು ನಿನ್ನ ಬಿಲ್ಲಿಗೆ ನಮಿಪೆ ನಮಿಪೆ||೧೪||

ನಿನ್ನ ಬಿಲ್ಲಿನ ಬಾಣದಿಂದಲೆ ನಮ್ಮ ರಕ್ಷಿಸು ವಿವಿಧ ತೆರದಿ |
ನಿನ್ನ ಬತ್ತಳಿಕೆಯನು ದೂರದಿ ನಮ್ಮ ಭಯವನು ಹರಿಸು ಎಸೆದು||೧೫||

ನಮನಗೈಯುವೆ: ಶ್ರೀ ಭಗವಂತನಿಗೆ, ವಿಶ್ವೇಶ್ವರನಿಗೆ, ಮಹಾದೇವನಿಗೆ, ತ್ರಯಂಬಕನಿಗೆ,
ತ್ರಿಪುರಾಂತಕನಿಗೆ, ತ್ರಿಕಾಗ್ನಿ ಕಾಲನಿಗೆ, ಕಾಲಾಗ್ನಿರುದ್ರನಿಗೆ, ನೀಲಕಂಠನಿಗೆ, ಸರ್ವೇಶ್ವರನಿಗೆ

ಸದಾಶಿವನಿಗೆ, ಶಂಕರನಿಗೆ, ಮೃತ್ಯುಂಜಯನಿಗೆ, ಶ್ರೀಮನ್ ಮಹಾದೇವನಿಗೆ ನಮೋ ನಮಃ ||

ಸೂ: ಅನುವಾಕ 2, ಬಪ್ಪ ಸೋಮವಾರ ನಿರೀಕ್ಷಿಸಿ,
– ಶರ್ಮಪ್ಪಚ್ಚಿ

ಶರ್ಮಪ್ಪಚ್ಚಿ

   

You may also like...

15 Responses

  1. ಸರ್ಪಮಲೆ ಮಾವ says:

    ಡಾಕ್ಟ್ರು ಮಾವ (ಎನ್ನ ಸೋದರ ಮಾವ) ಯಾವದೇ ವಿಷಯವ ತೆಕ್ಕೊಂಡರೂ ಅದರ ಶ್ರಮ ವಹಿಸಿ ಆಳವಾದ ಅಧ್ಯಯನ ಮಾಡದ್ದೆ ಬಿಡುವ ಕ್ರಮ ಇತ್ತಿಲ್ಲೆ. ಈ ಕಲಿವ ಉತ್ಸಾಹ ಕಡೆವರೆಂಗೆ ಇತ್ತು. ಒಂದು ವಿಷಯವ ಕಲಿವಲೆ ಸುರು ಮಾಡಿದರೆ, ಆ ವಿಷಯ ಗೊಂತಿದ್ದವರ ಹತ್ತರೆ ಚರ್ಚಿಸುಗು; ಯಾವಾಗಲೂ ಅದೇ ವಿಷಯವ ಬಗ್ಗೆ ಚಿಂತಿಸುಗು, ಮಾತಾಡುಗು. ಕಂಪ್ಯೂಟರ್ ಕಲ್ತವು, ಹಣಕಾಸು (Finance), ಅರ್ಥಶಾಸ್ತ್ರ(Economics), ಆಢಳಿತ(Management), ಚಿತ್ರಕಲೆ ಇತ್ಯಾದಿ ವಿಷಯಂಗಳ ಬಗ್ಗೆಯೂ ಓದಿಗೊಂಡವು, ಚಿತ್ರಕಲೆಯ ಕಲಿವ ಪ್ರಯತ್ನವೂ ಮಾಡಿದ್ದವಡ. ಯಾವ ವಿಷಯ ಆದರೂ ಸರಿ, ಅದರ ತಿಳುಕ್ಕೊಂಬ ಪ್ರಯತ್ನ ಮಾಡಿದರೆ, ಅದಲ್ಲಿ ಕಲಿವಲೆ ಎಷ್ಟೊಂದು ಇದ್ದು ಹೇಳಿ ಆಶ್ಚರ್ಯ ಆವುತ್ತು ಹೇಳಿಗೊಂಡಿತ್ತಿದ್ದವು. ಆ ವಿಷಯಕ್ಕೆ ಸಂಬಂಧಪಟ್ಟ ಪುಸ್ತಕಂಗಳ ತೆಕ್ಕೊಂಡಿತ್ತಿದ್ದವು.
    ವೇದಮಂತ್ರಂಗಳ ಕನ್ನಡ ಪದ್ಯ ರೂಪಲ್ಲಿ ಸರಳವಾಗಿ ಬರಕ್ಕೊಂಡಿಪ್ಪಗ ಆ ವಿಷಯಲ್ಲಿ ಪುಸ್ತಕಂಗಳ ಸಂಗ್ರಹ ಮಾಡಿದ್ದಲ್ಲದ್ದೆ, ಗೊಂತಿಪ್ಪವರ ಹತ್ತರೆ ಚರ್ಚಿಸುವ ಪ್ರಯತ್ನವನ್ನೂ ಮಾಡಿಯೊಂಡಿತ್ತಿದ್ದವು. ಆದರೆ ಇದರ ಬಗ್ಗೆ ಮಾತಾಡುವಾಗ ಒಂದರಿ ಹೀಂಗೆ ಹೇಳಿತ್ತಿದ್ದವುಃ “ನಮ್ಮ ಬಟ್ಟಕ್ಕಳತ್ತರೆ ಈ ವಿಷಯದ ಬಗ್ಗೆ ಚರ್ಚಿಸಲೆ ಹೋದರೆ, ಹೆಚ್ಚಿನವಕ್ಕೆ ಆಸಕ್ತಿಯೇ ಇಲ್ಲೆ; ಬರದ್ದರ ತೋರಿಸಿ ವಿಮರ್ಶೆಮಾಡಿ ಹೇಳಿ ಕೇಳಿದರೆ, ಡಾಕ್ಟ್ರು ಇಷ್ಟು ಮಾಡಿದ್ದೇ ದೊಡ್ಡದು, ಲಾಯ್ಕಾಯಿದು ಕೆಲಸ ಹೇಳುತ್ತವಷ್ಟೇ ವಿನಾ ಸರಿಯಾದ ವಿಮರ್ಶೆ ಮಾಡಿ ತಪ್ಪು ಸರಿ ತೋರಿಸಿಕೊಟ್ಟು ಹೇಂಗೆ ಇನ್ನೂ ಲಾಯ್ಕಿಲ್ಲಿ ಬರವಲಕ್ಕು ಹೇಳಿ ಸರಿಯಾದ ಅಭಿಪ್ರಾಯ ಕೊಡುತ್ತವಿಲ್ಲೆ. ಡಾಕ್ಟ್ರು ಇಷ್ಟು ಮಾಡಿದ್ದೇ ದೊಡ್ಡದು ಹೇಳುವ ಮಾತು ಎನಗೆ ಬೇಡ” ಹೇಳಿ ಬೇಜಾರ ವ್ಯಕ್ತಪಡಿಸಿದವು. ಅವರ ಸ್ವಭಾವ ಹಾಂಗೇ ಇತ್ತು – ಹೇಳೆಕ್ಕಾದ್ದರ ನೇರೆವಾಗಿ, ಸ್ಪಷ್ಟವಾಗಿ ಹೇಳುವ ಅಭ್ಯಾಸ.
    ಶರ್ಮ ಬಾವ ಅವರ ಬೈಲಿಂಗೆ ಪರಿಚಯಿಸಿ, ಅವು ಬರದ್ದರ ಕೂಡಾ ಬೈಲ್ಲಿ ಪ್ರಕಟುಸುವ ಕೆಲಸ ಮಾಡೆಂಡಿಪ್ಪದು ನಿಜವಾಗಿ ಮೆಚ್ಚೆಕಾದ ವಿಷಯ. ಶರ್ಮ ಬಾವಂಗೆ ಅಭಿನಂದನಗೊ.

  2. ಸಂಗ್ರಹಯೋಗ್ಯ ಸಂಚಿಕೆ ಅಪ್ಪಚ್ಚಿ! ಡಾ| ಶಾಮ ಭಟ್ಟರ ಪ್ರಯತ್ನ ಖಂಡಿತವಾಗಿ ಪ್ರಶಂಸನೀಯ, ರುದ್ರ ಕೇಳ್ತಷ್ಟೇ ಹೊರತು ಸರಿಯಾಗಿ ಅರ್ಥೈಸಿಗೊಂಡದು ಕಮ್ಮಿಯೇ,, ಕನ್ನಡದ ಗೀತೆ ಓದಿಯಪ್ಪದ್ದೆ ತುಂಬಾ ಕೊಶಿಯಾತು! ಧನ್ಯವಾದಂಗೋ!!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *