ರುದ್ರ ಗೀತೆ : (ಅನುವಾಕ – 10)

March 28, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಲೇಖಕರ ಪರಿಚಯ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಶ್ರೀ ರುದ್ರ ಗೀತೆ” ಹೇಳುವ ಕನ್ನಡ ಗೀತೆಗಳ ಸಂಗ್ರಹವ ಇಲ್ಲಿ ಕೊಡುತ್ತಾ ಇದ್ದೆ.
ಒಂದು ಅನುವಾಕ ಸಂಸ್ಕೃತಲ್ಲಿ ಆದ ನಂತ್ರ ಅದರ ಕನ್ನಡ ಗೀತೆ ಬತ್ತ ಹಾಂಗೆ ಬರದ್ದೆ.

ಕಳುದವಾರದ ಅನುವಾ09- ಇಲ್ಲಿದ್ದು
– ಶರ್ಮಪ್ಪಚ್ಚಿ

– ಶರ್ಮಪ್ಪಚ್ಚಿ

ರುದ್ರಪ್ರಶ್ನಃ
ಅನುವಾಕ – 10

ದ್ರಾಪೇ ಅಂಧಸಸ್ಪತೇ ದರಿದ್ರನ್ನೀಲಲೋಹಿತ| ಏಷಾಂ ಪುರುಷಾಣಾಮೇಷಾಂ ಪಶೂನಾಂ ಮಾ ಭೇರ್ಮಾರೋ ಮೋ ಏಷಾಂ ಕಿಂಚನಾಮಮತ್|
ಯಾ ತೇ ರುದ್ರ ಶಿವಾ ತನೂಃ ಶಿವಾ ವಿಶ್ವಾಹಭೇಷಜೀ| ಶಿವಾ ರುದ್ರಸ್ಯ ಭೇಷಜೀ ತಯಾ ನೋ ಮೃಡ ಜೀವಸೇ|
ಇಮಾಗ್‍ಂ ರುದ್ರಾಯ ತವಸೇ ಕಪರ್ದಿನೇ ಕ್ಷಯದ್ವೀರಾಯ ಪ್ರಭರಾಮಹೇ ಮತಿಮ್| ಯಥಾ ನಃ ಶಮಸದ್ದ್ವಿಪದೇ ಚತುಷ್ಪದೇ ವಿಶ್ವಂ ಪುಷ್ಟಂ ಗ್ರಾಮೇ ಅಸ್ಮಿನ್ನನಾತುರಮ್|

ಮೃಡಾ ನೋ ರುದ್ರೋತನೋ ಮಯಸ್ಕೃಧಿ ಕ್ಷಯದ್ವೀರಾಯ ನಮಸಾ ವಿಧೇಮತೇ| ಯಚ್ಛಂ ಚ ಯೋಶ್ಚ ಮನುರಾಯಜೇ ಪಿತಾ ತದಶ್ಯಾಮ ತವ ರುದ್ರ ಪ್ರಣೀತೌ|
ಮಾ ನೋ ಮಹಾನ್ತಮುತ ಮಾ ನೋ ಅರ್ಭಕಂ ಮಾ ನ ಉಕ್ಷಂತಮುತ ಮಾ ನ ಉಕ್ಷಿತಮ್| ಮಾ ನೋ ವಧೀಃ ಪಿತರಂ ಮೋತ ಮಾತರಂ ಪ್ರಿಯಾ ಮಾ ನಸ್ತನುವೋ ರುದ್ರ ರೀರಿಷಃ|

ಮಾ ನ ಸ್ತೋಕೇ ತನಯೇ ಮಾ ನ ಆಯುಷಿ ಮಾನೋ ಗೋಷು ಮಾ ನೋ ಅಶ್ವೇಷು ರೀರಿಷಃ| ವೀರಾನ್ಮಾನೋ ರುದ್ರ ಭಾಮಿತೋವಧೀರ್ ಹವಿಷ್ಮನ್ತೋ ನಮಸಾ ವಿಧೇಮ ತೇ|
ಆರಾತ್ತೇ ಗೋಘ್ನ ಉತ ಪೂರುಷಘ್ನೇ ಕ್ಷಯದ್ವೀರಾಯ ಸುಮ್ನಮಸ್ಮೇ ತೇ ಅಸ್ತು| ರಕ್ಷಾ ಚ ನೋ ಅಧಿ ಚ ದೇವ ಬ್ರೂಹ್ಯಧಾ ಚ ನಃ ಶರ್ಮ ಯಚ್ಛ ದಿಬರ್ಹಾಃ|

ಸ್ತುಹಿ ಶ್ರುತಂ ಗರ್ತಸದಂ ಯುವಾನಂ ಮೃಗನ್ನ ಭೀಮಮುಪಹತ್ನುಮುಗ್ರಮ್| ಮೃಡಾ ಜರಿತ್ರೇ ರುದ್ರ ಸ್ತವಾನೋ ಅನ್ಯಂತೇ ಅಸ್ಮನ್ನಿವಪನ್ತು ಸೇನಾಃ|
ಪರಿಣೋ ರುದ್ರಸ್ಯ ಹೇತಿರ್ವೃಣಕ್ತು ಪರಿ ತ್ವೇಷಸ್ಯ ದುರ್ಮತಿರಘಾಯೋಃ| ಅವಸ್ಥಿರಾ ಮಘವದ್ಭ್ಯಸ್ತನುಷ್ವ ಮೀಢ್ವಸ್ತೋಕಾಯ ತನಯಾಯ ಮೃಡಯ|

ಮೀಢುಷ್ಟಮ ಶಿವತಮ ಶಿವೋ ನಃ ಸುಮನಾ ಭವ| ಪರಮೇ ವೃಕ್ಷ ಆಯುಧಂ ನಿಧಾಯ ಕೃತ್ತಿಂ ವಸಾನ ಆಚರ ಪಿನಾಕಂ ಬಿಭ್ರದಾಗಹಿ|
ವಿಕಿರಿದ ವಿಲೋಹಿತ ನಮಸ್ತೇ ಅಸ್ತು ಭಗವಃ| ಯಾಸ್ತೇ ಸಹಸ್ರಗ್‍ಂ ಹೇತಯೋನ್ಯಮಸ್ಮನ್ನಿವಪನ್ತು ತಾಃ|
ಸಹಸ್ರಾಣಿ ಸಹಸ್ರಧಾ ಬಾಹುವೋಸ್ತವ ಹೇತಯಃ| ತಾಸಾ ಮೀಶಾನೋ ಭಗವಃ ಪರಾಚೀನಾ ಮುಖಾ ಕೃಧಿ|| 10 ||

ರುದ್ರಗೀತೆ – 10

ಅನ್ನ ದಾತನೆ ಅನ್ನದರಸನೆ ದೀನನಾಗಿಯೆ ಸುಖವ ಪಡೆವೆ|
ನೀಲಕಂಠನೆ ರಕ್ತವರ್ಣನೆ ದುಷ್ಟ ಜನರಿಗೆ ಕಷ್ಟ ಕೊಡುವೆ||1||

ನಮ್ಮ ಪ್ರೀತಿಯ  ಜನರ ದನಗಳನೆಂದು ಹೆದರಿಸಬೇಡ ಹರನೆ|
ರೋಗ ಪೀಡಿತಗೊಳದೆ ಬದುಕಲಿ ಒಬ್ಬರಾದರು ದುಃಖ ಪಡದೆ||2||

ರುದ್ರ ದೇವನೆ ಶಿವನ ರೂಪದಿ ವಿಶ್ವದೌಷಧಿಯಾದ ತನುವೆ|
ಎಲ್ಲ ಕ್ಲೇಷವ ಹರಿಸಿ ಜ್ಞಾನವನಿತ್ತು ಜೀವನ ಮೋದಗೊಳಿಸು||3||

ಯಾವ ರುದ್ರರು ಶತ್ರುನಾಶಕರವರ ಕಾಲಿಗೆ ಮನವು ನಿಲಲಿ|
ನಮ್ಮ ಗ್ರಾಮದ ಪ್ರಾಣಿ ವರ್ಗವು ಮನುಜ ವರ್ಗವು ಸುಖದಿ ಇರಲಿ||4||

ಜಡೆಯ ಧರಿಸಿದ ರುದ್ರ ದೇವನೆ, ರೋಗವಿಲ್ಲದೆ ಪುಷ್ಟಿಸಿರಲಿ|
ವೀರರನ್ನೇ ನಾಶ ಮಾಡುವ ನಮ್ಮ ನಮನವು ರುದ್ರ ನಿನಗೆ||5||

ಎರಡು ಲೋಕದಿ ಸುಖವ ಕೊಡುವನೆ ನಿನಗೆ ನಮಿಪೆವು ಪಾಪ ಹರನೆ|
ಮನುವಿಗಿತ್ತಿಹ ವರದ ಬಲದಲಿ ಸುಖವು ನಿರ್ಭಯ ನಮಗೆ ಬರಲಿ||6||

ನಮ್ಮ ಪೀಡಿಸಬೇಡ ರುದ್ರನೆ ವೃದ್ಧ ಜನರನು ಗರ್ಭ ಶಿಶುವ |
ಮಾತೆ ಪಿತರನು ಯುವಕ ಯುವತಿಯ ಪ್ರೀತಿಗಂಟಿದ ಕುಸುಮ ತನುವ||7||

ಕೋಪಗೊಳ್ಳುತ ರುದ್ರ ದೇವನೆ ನಮ್ಮ ಮಕ್ಕಳ ದುಡುಕಬೇಡ|
ಸುತರನೆಂದಿಗು ಬೇಡ ನೋಯಿಸೆ ನಮ್ಮ ಜೀವನ ಕಲಕ ಬೇಡ||8||

ನಮ್ಮ ದನಗಳ ಕುದುರೆಗಳನೂ ನಮ್ಮ ಯುದ್ಧದ ವೀರರನ್ನು|
ನೋವುಗೊಳಿಸಲೆ ಬೇಡ; ನಿನ್ನನು ಹಸಿವಿನಿಂದಲೆ ಪೂಜಿಸುವೆವು||9||

ಘೋರವಾಗಿಹ ವೀರನಾಶಕ ನಿನ್ನ ರೂಪವ ದೂರ ಸರಿಸು|
ನಮ್ಮ ಗೋವನು ಹಿರಿಯ ಕಿರಿಯರ ಸುಖದಿ ರಕ್ಷಿಸಿ ದಯದಿ ಸಲಹು||10||

ಯಾವ ರೂಪವು ಸುಖವನೀವುದೊ ಅದನು ಹತ್ತಿರ ನಮಗೆ ಇರಿಸು|
ದೇವಲೋಕದಿ ಸುಖವ ಕೊಡುತಲಿ ಸಾಕಿ ಸಲಹುತ ಮುದವ ನೀಡು||11||

ಹೃದಯ ಸ್ಥಳದಲಿ ಕುಳಿತ ಯುವಕನೆ ಭಯವ ಪುಟ್ಟಿಪ ಸಿಂಹದಂತೆ|
ನಿನ್ನ ಘೋರದ ರೂಪ ಪೊಗಳುವೆ ಶರಣು ಹೊಗುವೆವು ನಾವು ಕಂಡು||12||

ನಮ್ಮ ನಮನದಿ ತೃಪ್ತಿಗೊಳ್ಳುತ ನಿನ್ನ ಸೇನೆಯ ಬೇರೆ ಕಳಿಸು|
ನಶಿಸಿ ಹೋಗುವ ದೇಹ ನಮ್ಮದು ಗಾಯಗೊಳಿಸದೆ ಮುದವ ನೀಡು||13||

ರುದ್ರ ಬಾಣವು ನಮ್ಮನುಳಿಸಲಿ ಉರಿವ ಕೋಪವು ಶಮನಗೊಳಲಿ|

ವರವನೀಯುತ ಸ್ಥಿರದ ಧನುವನು ನಮ್ಮ ಕಡೆಯಲಿ ಮೊಟಕುಗೊಳಿಸು|
ನಮ್ಮ ಮಕ್ಕಳನವರ ಮಕ್ಕಳ, ಹರಕೆ ಕೊಡುವೆನು,ತೋಷಗೊಳಿಸು||14||

ವರವ ಕರುಣಿಪ ಪರಮ ಶಿವನೇ ಸುಖದ ಮನದಲಿ ಶುಭವ ನೀಡು|
ದೂರ ವೃಕ್ಷದಿ ಶಸ್ತ್ರವಡಗಿಸಿ ಗಜದ ಚರ್ಮವ ಧರಿಸಿ ಬಂದು|
ಧನು ಪಿನಾಕವ ಹೆಗಲಿಗೇರಿಸಿ ನಮ್ಮ ಎದುರಲಿ ಮುಖವ ತೋರು||15||

ಸಿರಿಯ ಸುರಿಯುವ ಶ್ವೇತ ವರ್ಣನೆ ನಿನಗೆ ನಮಿಪೆವು ರುದ್ರ ದೇವ|
ಶಸ್ತ್ರ ಸಾಸಿರದಿಂದ ನಮ್ಮನು ಹೊರತು ಪಡಿಸುತ ನಾಶಗೊಳಿಸು||16||

ತೆರದಿ ಸಾಸಿರ ಸಾಸಿರಾಯುಧ ನಿನ್ನ ಕೈಯಲಿ ಧರಿಸುತಿರುವೆ|
ಅವುಗಳೆಲ್ಲವ ಮುಖವ ತಿರುಗಿಸಿ ನಮ್ಮ ದಿಶೆಯಿಂ ಸರಿಸು ದೇವ||17 ||

ಸೂ:

ಶುದ್ದಿಶಬ್ದಂಗೊ (tags): , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಇದು ಬೇಗ ಓದಿ ಮುಗುತ್ತನ್ನೇ ಅಪ್ಪಚ್ಚಿ.

  [Reply]

  VA:F [1.9.22_1171]
  Rating: 0 (from 0 votes)
 2. ಓದಿ ಖುಷಿ ಆತು. ಉಪಯುಕ್ತ ಇದ್ದು. ತುಂಬಾ ತುಂಬಾ ಥ್ಯಾಂಕ್ಸ್.
  ರಾಮಚಂದ್ರ ದೇವ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರದಣ್ಣಅಕ್ಷರ°ದೊಡ್ಡಭಾವಉಡುಪುಮೂಲೆ ಅಪ್ಪಚ್ಚಿಶ್ರೀಅಕ್ಕ°ಪೆರ್ಲದಣ್ಣಸುವರ್ಣಿನೀ ಕೊಣಲೆಚೆನ್ನಬೆಟ್ಟಣ್ಣನೆಗೆಗಾರ°ವೆಂಕಟ್ ಕೋಟೂರುಜಯಗೌರಿ ಅಕ್ಕ°ದೊಡ್ಮನೆ ಭಾವಪುತ್ತೂರುಬಾವವಾಣಿ ಚಿಕ್ಕಮ್ಮಡೈಮಂಡು ಭಾವಮಾಲಕ್ಕ°ಚುಬ್ಬಣ್ಣಕೊಳಚ್ಚಿಪ್ಪು ಬಾವಚೆನ್ನೈ ಬಾವ°ಕೇಜಿಮಾವ°ದೀಪಿಕಾಅನುಶ್ರೀ ಬಂಡಾಡಿಗಣೇಶ ಮಾವ°ವೇಣೂರಣ್ಣಪಟಿಕಲ್ಲಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡು
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ