ರುದ್ರ ಗೀತೆ : (ಅನುವಾಕ – 11)

April 4, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಲೇಖಕರ ಪರಿಚಯ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಶ್ರೀ ರುದ್ರ ಗೀತೆ” ಹೇಳುವ ಕನ್ನಡ ಗೀತೆಗಳ ಸಂಗ್ರಹವ ಇಲ್ಲಿ ಕೊಡುತ್ತಾ ಇದ್ದೆ.

ಒಂದು ಅನುವಾಕ ಸಂಸ್ಕೃತಲ್ಲಿ ಆದ ನಂತ್ರ ಅದರ ಕನ್ನಡ ಗೀತೆ ಬತ್ತ ಹಾಂಗೆ ಬರದ್ದೆ.

ಕಳುದವಾರದ ಅನುವಾ10- ಇಲ್ಲಿದ್ದು

– ಶರ್ಮಪ್ಪಚ್ಚಿ

– ಶರ್ಮಪ್ಪಚ್ಚಿ

ರುದ್ರಪ್ರಶ್ನಃ

ಅನುವಾಕ – 11

ಸಹಸ್ರಾಣಿ ಸಹಸ್ರಶೋ ಯೇ ರುದ್ರಾ ಅಧಿ ಭೂಮ್ಯಾಮ್| ತೇಷಾಗ್‍ಂ ಸಹಸ್ರಯೋಜನೇವಧನ್ವಾನಿ ತನ್ಮಸಿ|

ಅಸ್ಮಿನ್ಮಹತ್ಯರ್ಣವೇನ್ತರಿಕ್ಷೇ ಭವಾ ಅಧಿ| ನೀಲಗ್ರೀವಾ ಶಿತಿಕಂಠಾಃ ಶರ್ವಾ ಅಧಃ, ಕ್ಷಮಾಚರಾಃ|

ನೀಲಗ್ರೀವಾಃ ಶಿತಿಕಂಠಾ ದಿವಗ್‍ಂ ರುದ್ರಾ ಉಪಶ್ರಿತಾಃ| ಯೇ ವೃಕ್ಷೇಷು ಸಸ್ಪಿಂಜರಾ ನೀಲಗ್ರೀವಾ ವಿಲೋಹಿತಾಃ|

ಯೇ ಭೂತಾನಾಮಧಿಪತಯೋ ವಿಶಿಖಾಸಃ ಕಪರ್ದಿನಃ| ಯೇ ಅನ್ನೇಷು ವಿವಿಧ್ಯನ್ತಿ ಪಾತ್ರೇಷು ಪಿಬತೋ ಜನಾನ್|

ಯೇ ಪಥಾಂ ಪಥಿರಕ್ಷಯ ಐಲಬೃದಾ ಯವ್ಯುಧಃ| ಯೇ ತೀರ್ಥಾನಿ ಪ್ರಚರನ್ತಿ ಸೃಕಾವನ್ತೋ ನಿಷಂಗಿಣಃ|

ಯ ಏತಾವನ್ತಶ್ಚ ಭೂಯಾಗ್‍ಂಸಶ್ಚ ದಿಶೋ ರುದ್ರಾ ವಿತಸ್ತಿರೇ| ತೇಷಾಗ್‍ಂ ಸಹಸ್ರಯೋಜನೇವ ಧನ್ವಾನಿ ತನ್ಮಸಿ|

ನಮೋ ರುದ್ರೇಭ್ಯೋ ಯೇ ಪೃಥಿವ್ಯಾಂ ಯೇನ್ತರಿಕ್ಷೇ ಯೇ ದಿವಿ ಯೇಷಾಮನ್ನಂ ವಾತೋ ವರ್‍ಷಮಿಷವಸ್ತೇಭ್ಯೋ ದಶ ಪ್ರಾಚೀರ್ದಶ ದಕ್ಷಿಣಾ ದಶ ಪ್ರತೀಚೀರ್ದಶೋದೀಚೀರ್ದಶೋರ್ಧ್ವಾಸ್ತೇಭ್ಯೋ ನಮಸ್ತೇ ನೋ ಮೃಡಯಂತು ತೇ ಯಂ ದ್ವಿಷ್ಮೋ ಯಶ್ಚ ನೋ ದ್ವೇಷ್ಟಿ ತಂ ವೋ ಜಂಭೇ ದಧಾಮಿ||11||

ರುದ್ರಗೀತೆ – 11

ವಿವಿಧ ರುದ್ರರು ರೂಪ ಸಾಸಿರ ಮೆರೆಯುತಿರುವರು ಭೂಮಿ ತಳದಿ|

ಹೆದೆಯ ಸಡಿಲಿಸಿ ಬಾಣ ಬೀಳಲಿ ದೂರ ಸಾಸಿರ ಯೋಜನದಲಿ||೧||

ಯಾವ ರುದ್ರರು ಶಾಂತ ಕಡಲಲಿ ಬುವಿಯ ದಿವಿಯಲಿ ವಾಸಿಸಿಹರು||೨||

ಯಾವ ರುದ್ರರು ಶ್ವೇತ ಕೊರಳಲಿ ನೀಲಿ ವಿಷವನು ಧರಿಸುತಿಹರು||೩||

ಯಾವ ರುದ್ರರು ದೇವಲೋಕದ ಶ್ವೇತ ದೇಹದ ನೀಲಗಲದ||೪||

ಯಾವ ರುದ್ರರು ಮರದಲಿರುವರು ಹಸಿರು ಕೆಂಪಿನ ನೀಲಗಲದ||೫||

ಯಾವ ರುದ್ರರು ಭೂತ ಪತಿಗಳು ಜಟೆಯ ಧರಿಪರು ಬೋಳುತಲೆಯ||೬||

ಯಾವ ರುದ್ರರು ಪಾತ್ರದೊಳಗಡೆ ಅನ್ನ ಭುಜಿಪರ ಸೇರುತಿಹರು||೭||

ಯಾವ ರುದ್ರರು ರಸ್ತೆ ಕಾಯುತ ಅನ್ನ ತರುವರು ಶತ್ರುಹರರು||೮||

ಯಾವ ರುದ್ರರು ಖಡ್ಗ ಹಿಡಿಯುತ ತೀರ್ಥ ಸ್ಥಳಗಳ ಕಾಯುತಿಹರು||೯||

ಇಂತು ಹೇಳಿದ ಇನ್ನು ಹೇಳದ ಎಲ್ಲ ಕಡೆಯಲಿ ರುದ್ರರಿಹರು|

ಹೆದೆಯ ಸಡಿಲಿಸಿ ಬಾಣ ಬೀಳಲಿ ದೂರ ಸಾಸಿರ ಯೋಜನದಲಿ||೧೦||

ಯಾವ ರುದ್ರರು ಜಗದಲಿರುತಲಿ ಅನ್ನವನ್ನೇ ಬಾಣಗೊಳಿಪರು|

ಹತ್ತು ಬೆರಳಲಿ ಮುಗಿಯುತಿರುವೆನು ಎಲ್ಲ ದಿಕ್ಕಿಗು ಮುಖವ ತಿರುಗಿ|

ಮೂಡು ಪಡುವಿಗು ತೆಂಕು ಬಡಗಿಗು ಮೇಲೆ ಕೆಳಗಡೆ ಕೈಯ ಮುಗಿವೆ|

ಯಾರು ನಮ್ಮನು ದ್ವೇಷಿಸುವರೊ ನಾವು ಯಾರನು ದ್ವೇಷಿಸುವೆವೊ|

ರುದ್ರರೆಲ್ಲರ ನಿನ್ನ ಬಾಯಲಿ ಸುರಿವೆ; ನಮ್ಮನು ಹರಸು ಹರನೆ||೧೧||

ಓಂ ಶಾಂತಿಃ ಶಾಂತಿಃ ಶಾಂತಿಃ ||

~*~*~*~

ಸೂ:

ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಶರ್ಮಪ್ಪಚ್ಚಿ., ಈ ವಾರದ್ದು ಆತು. ಇನ್ನಾಣ ವಾರಕ್ಕೆ ಕಾಯುತ್ತಿನ್ನು. ಮಡ್ವ ಮಾವನ ಕೆಲಸ ಅದ್ಭುತ. ನಿಂಗಳ ಈ ಸೇವೆ ಅತ್ತ್ಯುತ್ತಮ.

  [Reply]

  VA:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  Gopalakrishna BHAT S.K.

  ರುದ್ರ ತತ್ತ್ವ ಅಮೂರ್ತವಾಗಿ ಗಹನವಾಗಿ ಇದ್ದು ಹೇಳುವ ವರ್ಣನೆ. ನೀಲ ಬಣ್ಣ ಇನ್ತಾ ಗಹನತೆಯ ಸಂಕೇತ ಅಡ.ಸಮುದ್ರ,ಅಕಾಶ ಎಲ್ಲಾ ನೀಲಿ ಅಲ್ಲದೊ?
  ರುದ್ರದ ಅಧ್ಯಾಯ ಮುಗುತ್ತು.ಶರ್ಮಣ್ಣ ಇನ್ನು ಬಾಕಿ ಇಪ್ಪ ಸರ್ವೊ ವೈ ರುದ್ರ,ಚಮಕ ಬರೆಯೆಕ್ಕು.

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘುಮುಳಿಯ

  ಶರ್ಮಪ್ಪಚ್ಚಿ,
  ಸರಳ ಸು೦ದರ ಅನುವಾದ. ಮನುಷ್ಯನ ಮನಸ್ಸು ಎಷ್ಟು ನಿರ್ಮಲ ಆಗಿರೆಕ್ಕು ಹೇಳಿ ಈ ಅಧ್ಯಾಯವ ನೋಡಿ ಅರ್ಥೈಸೆಕ್ಕು.ಹೇಳಿದ,ಹೇಳದ ಸಕಲ ಕಡೆ ರುದ್ರರಿದ್ದವು,ದ್ವೇಷ ಇದ್ದರೂ ರುದ್ರ ಸುರಿಯಲಿ ಹೇಳುವ ಮಾತುಗೊ ನಮ್ಮ ಜೀವನ ಮಾರ್ಗ ಆಯೆಕ್ಕು.ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೆಂಕಟ್ ಕೋಟೂರುಜಯಶ್ರೀ ನೀರಮೂಲೆವಿದ್ವಾನಣ್ಣಜಯಗೌರಿ ಅಕ್ಕ°ಶರ್ಮಪ್ಪಚ್ಚಿಮಂಗ್ಳೂರ ಮಾಣಿದೊಡ್ಡಮಾವ°ದೀಪಿಕಾಮಾಷ್ಟ್ರುಮಾವ°ನೆಗೆಗಾರ°ಡಾಮಹೇಶಣ್ಣಸರ್ಪಮಲೆ ಮಾವ°ಡೈಮಂಡು ಭಾವಶೀಲಾಲಕ್ಷ್ಮೀ ಕಾಸರಗೋಡುಚೂರಿಬೈಲು ದೀಪಕ್ಕಪಟಿಕಲ್ಲಪ್ಪಚ್ಚಿಚೆನ್ನಬೆಟ್ಟಣ್ಣನೀರ್ಕಜೆ ಮಹೇಶದೊಡ್ಡಭಾವವೇಣಿಯಕ್ಕ°ಅಕ್ಷರ°ಕಜೆವಸಂತ°ಶುದ್ದಿಕ್ಕಾರ°ಅನು ಉಡುಪುಮೂಲೆಕೊಳಚ್ಚಿಪ್ಪು ಬಾವರಾಜಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ