ರುದ್ರ ಗೀತೆ : (ಅನುವಾಕ – 02)

ಆತ್ಮೀಯ ಬೈಲಿಂಗೆ,

ಲೇಖಕರ ಪರಿಚಯ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಶ್ರೀ ರುದ್ರ ಗೀತೆ” ಹೇಳುವ ಕನ್ನಡ ಗೀತೆಗಳ ಸಂಗ್ರಹವ ಇಲ್ಲಿ ಕೊಡುತ್ತಾ ಇದ್ದೆ.
ಒಂದು ಅನುವಾಕ ಸಂಸ್ಕೃತಲ್ಲಿ ಆದ ನಂತ್ರ ಅದರ ಕನ್ನಡ ಗೀತೆ ಬತ್ತ ಹಾಂಗೆ ಬರದ್ದೆ.

ಕಳುದವಾರದ ’ಅನುವಾ01- ಇಲ್ಲಿದ್ದು
– ಶರ್ಮಪ್ಪಚ್ಚಿ

<< ಅನುವಾಕ o1 ಇಲ್ಲಿದ್ದು

ರುದ್ರಪ್ರಶ್ನಃ
ಅನುವಾಕ – 02

ನಮೋ ಹಿರಣ್ಯಬಾಹವೇ ಸೇನಾನ್ಯೇ ದಿಶಾಂ ಚ ಪತಯೇ ನಮೋ –
ನಮೋ ವೃಕ್ಷೇಭ್ಯೋ ಹರಿಕೇಶೇಭ್ಯಃ ಪಶೂನಾಂ ಪತಯೇ ನಮೋ –
ನಮಃ ಸಸ್ಪಿಂಜರಾಯ ತ್ವಿಷೀಮತೇ ಪಥೀನಾಂ ಪತಯೇ ನಮೋ –
ನಮೋ ಬಭ್ಲುಶಾಯ ವಿವ್ಯಾಧಿನೇನ್ನಾನಾಂ ಪತಯೇ ನಮೋ –
ನಮೋ ಹರಿಕೇಶಾಯೋಪವೀತಿನೇ ಪುಷ್ಟಾನಾಂ ಪತಯೇ ನಮೋ –
ನಮೋ ಭವಸ್ಯ ಹೇತ್ಯೈ ಜಗತಾಂ ಪತಯೇ ನಮೋ –
ನಮೋ ರುದ್ರಾಯಾತತಾವಿನೇ ಕ್ಷೇತ್ರಾಣಾಂ ಪತಯೇ ನಮೋ –
ನಮಃ ಸೂತಾಯಾ ಹಂತ್ಯಾಯ ವನಾನಾಂ ಪತಯೇ ನಮೋ –
ನಮೋ ರೋಹಿತಾಯ ಸ್ಥಪತಯೇ ವೃಕ್ಷಾಣಾಂ ಪತಯೇ ನಮೋ –
ನಮೋ ಮಂತ್ರಿಣೇ ವಾಣಿಜಾಯ ಕಕ್ಷಾಣಾಂ ಪತಯೇ ನಮೋ –
ನಮೋ ಭುವಂತಯೇ ವಾರಿವಸ್ಕೃತಾಯೌಷಧೀನಾಂ ಪತಯೇ ನಮೋ –
ನಮ ಉಚ್ಚೈರ್ಘೋಷಾಯಾಕ್ರಂದಯತೇ ಪತ್ತೀನಾಂ ಪತಯೇ ನಮೋ –
ನಮಃ ಕೃತ್ಸ್ನವೀತಾಯ ಧಾವತೇ ಸತ್ವನಾಂ ಪತಯೇ ನಮಃ|| 2 ||

ರುದ್ರ ಗೀತೆ

ನಮಿಪೆ ಹೊನ್ನಿನ ಭುಜಗಳೆರಡಕೆ ಸಮಿಪೆ ಸೈನ್ಯದ ದಿಶೆಯ ಪತಿಗೆ| |
ನಮಿಪೆ ಮರಗಳ ಹಸಿರು ಶಿಖರಕೆ ನಮಿಪೆ ಪಶುಗಳ ಪರಮ ಪತಿಗೆ||1||

ನಮಿಪೆ ಕೆಂಚಿನ ಹಸಿರು ಕಾಂತಿಗೆ ನಮಿಪೆ ರಸ್ತೆಯ ರಾಜ ಪತಿಗೆ|
ನಮಿಪೆ ವೃಷಭಾ ರೂಢದವನಿಗೆ ನಮಿಪೆ ಶೂಲಿಗೆ ಅನ್ನಪತಿಗೆ||2||

ನಮಿಪೆ ಕಪ್ಪಿನ ಕೇಶದವನಿಗೆ ನಮಿಪೆ ಪುಷ್ಟ್ಯುಪವೀತಧರೆಗೆ|
ನಮಿಪೆ ಕಷ್ಟವ ಕಡಿಯುವವನಿಗೆ ನಮಿಪೆ ಲೋಕದ ಏಕಪತಿಗೆ ||3||

ನಮಿಪೆ ರಕ್ಷಿಪ ಬಿಲ್ಲಿನವನಿಗೆ ನಮಿಪೆ ಕ್ಷೇತ್ರದ ರುದ್ರಪತಿಗೆ|
ನಮಿಪೆ ಸೂತಗೆ ಸಾಯದವನಿಗೆ ನಮಿಪೆ ಕಾಡಿನ ರಕ್ಷಿಪವಗೆ||4||

ನಮಿಪೆ ರಕ್ತದ ವರ್ಣದವನಿಗೆ ನಮಿಪೆ ಮರಗಳ ಭವ್ಯಪತಿಗೆ|
ನಮಿಪೆ ವಣಿಕಗೆ ಮಂತ್ರಿವರ್ಯಗೆ ನಮಿಪೆ ಕ್ಲಿಷ್ಟದ ದುರ್ಗಪತಿಗೆ||5||

ನಮಿಪೆ ಭುವನವ ಹರಡಿದವನಿಗೆ ನಮಿಪೆ ಔಷಧ ವನದ ಸಿರಿಗೆ –
ನಮಿಪೆ ಘೋಷದಿ ಅಳಿಸುವವನಿಗೆ ನಮಿಪೆ ಪಾದದ ಸೈನ್ಯಪತಿಗೆ|
ನಮಿಪೆ ಸುತ್ತುತ ಶತ್ರು ಹಂತಗೆ ನಮಿಪೆ ಧಾವಿಪ ಅಭಯಪತಿಗೆ||6||

ಸೂ: ಅನುವಾಕ 03, ಬಪ್ಪ ಸೋಮವಾರ.

ಶರ್ಮಪ್ಪಚ್ಚಿ

   

You may also like...

8 Responses

 1. ಬೊಳುಂಬು ಮಾವ says:

  ಎರಡನೆಯ ಕಂತುದೆ ಲಾಯಕಿದ್ದು. ಕನ್ನಡಕ್ಕೆ ಬಂದಪ್ಪಗಳುದೆ ಸಂಸ್ಕೃತದ ಮಾಧುರ್ಯ ಹಾಂಗೇ ಒಳುಕ್ಕೊಂಡಿದು. ಡಾಕ್ಟ್ರಿಂಗು, ಒದಗಿಸಿ ಕೊಟ್ಟ ಶರ್ಮಪ್ಪಚ್ಚಿಗು ಧನ್ಯವಾದಂಗೊ.

 2. ರಘುಮುಳಿಯ says:

  ಸರಳ ಅರ್ಥವೂ ,ಪ್ರಾಸಬದ್ಧವೂ ಆದ ಅನುವಾದ.ಕೃತಜ್ನತೆಗೊ,ಅಪ್ಪಚ್ಚಿ.

 3. ಮುಣ್ಚಿಕಾನ ಪ್ರಮೊದ says:

  ರುದ್ರದ ಕುರಿತು ಬರದ್ದಕ್ಕೆ ದನ್ಯವಾದಂಗೋ………….

 4. Venkatesh says:

  ಅನುವಾದ ಲಾಯಿಕ್ಕಾಯಿದು. ಮುಂದಾಣ ಕಂತಿಗೆ ಕಾಯುವ ಹಾಂಗೆ ಆಯಿದು.

 5. ಶರ್ಮಪ್ಪಚ್ಚಿ,
  ತುಂಬಾ ಲಾಯಕಲ್ಲಿ ಅನುವಾದ ಬಯಿಂದು. ಪ್ರತಿ ಸಾಲು ಓದಿ ಅಪ್ಪಗ ಎಷ್ಟು ಭಾವ ತುಂಬಿ ಬರದ್ದವು ಹೇಳಿ ಆವುತ್ತು.
  ಭಕ್ತಿ ಮನಸ್ಸಿಲಿ ಇಲ್ಲದ್ದೆ ಹೀಂಗೆ ಬರವಲೆ ಎಡಿಯ ಅಲ್ಲದಾ?
  ಸಂಗ್ರಹಯೋಗ್ಯ ಅನುವಾಕದ ಅನುವಾದ ಕೊಟ್ಟದಕ್ಕೆ ಧನ್ಯವಾದ ಅಪ್ಪಚ್ಚಿ.

 6. ಅಡಕೋಳಿ says:

  ನಿಮ್ಮ ಪಠಣ ಕೇಳಿದ್ದೆ. ಅರ್ಥ ನೋದಿ ಕುಶೀ ಆತು. ಮುಂದುವರೆಲಿ. ಹರೇ ರಾಮ

 7. ಮತ್ತೊಂದು ಒಳ್ಳೆ ಸಂಚಿಕೆ ಅಪ್ಚಚ್ಚಿ.. ರುದ್ರದ ಅನುವಾದ ಓದಿದಷ್ಟೂ ಹೊಸ ಅರ್ತಂಗೊ ಹೊಳೆತ್ತಾ ಇದ್ದು.. 🙂

  • ಉಡುಪುಮೂಲೆ ಅಪ್ಪಚ್ಚಿ says:

   ಹರೇ ರಾಮ ಅತ್ಯುತ್ಕೃಷ್ಟ ಅನುವಾದ ನಿ೦ಗೊಗೆ ಎರಡು ಜೆನಕ್ಕೂ ಸಾಷ್ಟಾ೦ಗ ನಮೋನ್ನಮಃ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *