ರುದ್ರ ಗೀತೆ : (ಅನುವಾಕ – 03)

February 7, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಲೇಖಕರ ಪರಿಚಯ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಶ್ರೀ ರುದ್ರ ಗೀತೆ” ಹೇಳುವ ಕನ್ನಡ ಗೀತೆಗಳ ಸಂಗ್ರಹವ ಇಲ್ಲಿ ಕೊಡುತ್ತಾ ಇದ್ದೆ.
ಒಂದು ಅನುವಾಕ ಸಂಸ್ಕೃತಲ್ಲಿ ಆದ ನಂತ್ರ ಅದರ ಕನ್ನಡ ಗೀತೆ ಬತ್ತ ಹಾಂಗೆ ಬರದ್ದೆ.

<< ಅನುವಾಕ 01- ಇಲ್ಲಿದ್ದು
<< ಅನುವಾಕ 02- ಇಲ್ಲಿದ್ದು
– ಶರ್ಮಪ್ಪಚ್ಚಿ

ರುದ್ರಪ್ರಶ್ನಃ
ಅನುವಾಕ – 0
3

ನಮಃ ಸಹಮಾನಾಯ ನಿವ್ಯಾಧಿನ ಆವ್ಯಾಧಿನೀನಾಮ್ ಪತಯೇ ನಮೋ –
ನಮಃ ಕಕುಭಾಯ ನಿಷಂಗಿಣೇ ಸ್ತೇನಾನಾಂ ಪತಯೇ ನಮೋ –
ನಮೋ ನಿಷಂಗಿಣ ಇಷುಧಿಮತೇ ತಸ್ಕರಾಣಾಂ ಪತಯೇ ನಮೋ –
ನಮೋ ವಂಚತೇ ಪರಿವಂಚತೇ ಸ್ತಾಯೂನಾಂ ಪತಯೇ ನಮೋ –
ನಮೋ ನಿಚೇರವೇ ಪರಿಚರಾಯಾರಣ್ಯಾನಾಂ ಪತಯೇ ನಮೋ –
ನಮಃ ಸೃಕಾವಿಭ್ಯೋ ಜಿಘಾಗ್‍ಂಸದ್ಭ್ಯೋ ಮುಷ್ಣತಾಂ ಪತಯೇ ನಮೋ –
ನಮೋಸಿಮದ್ಭ್ಯೋ ನಕ್ತಂಚರದ್ಭ್ಯಃ ಪ್ರಕೃನ್ತಾನಾಂ ಪತಯೇ ನಮೋ –
ನಮ ಉಷ್ಣೀಷಿಣೇ ಗಿರಿಚರಾಯ ಕುಲುಂಚಾನಾಂ ಪತಯೇ ನಮೋ –
ನಮ ಇಷುಮದ್ಭ್ಯೋ ಧನ್ವಾವಿಭ್ಯಶ್ಚ ವೋ ನಮೋ  – ನಮ ಆತನ್ವಾನೇಭ್ಯಃ ಪ್ರತಿದಧಾನೇಭ್ಯಶ್ಚ ವೋ ನಮೋ – ನಮ ಆಯಚ್ಛದ್ಭ್ಯೋ ವಿಸೃಜದ್ಭ್ಯಶ್ಚ ವೋ ನಮೋ – ನಮೋಸ್ಯದ್ಭ್ಯೋ ವಿಧ್ಯದ್ಭ್ಯಶ್ಚ ವೋ ನಮೋ – ನಮಃ ಆಸೀನೇಭ್ಯಃ ಶಯಾನೇಭ್ಯಶ್ಚ ವೋ ನಮೋ – ನಮಃ ಸ್ವಪದ್ಭ್ಯೋ ಜಾಗ್ರದ್ಭ್ಯಶ್ಚ ವೋ ನಮೋ – ನಮಸ್ತಿಷ್ಠಭ್ಯೋ ಧಾವದ್ಭ್ಯಶ್ಚ ವೋ ನಮೋ – ನಮಃ ಸಭಾಭ್ಯಃ ಸಭಾಪತಿಭ್ಯಶ್ಚ ವೋ ನಮೋ – ನಮೋ ಅಶ್ವೇಭ್ಯೋಶ್ವಪತಿಭ್ಯಶ್ಚ ವೋ ನಮಃ|| ೩ ||

ರುದ್ರ ಗೀತೆ

ನಮಿಪೆ ಕ್ಷಮೆಯಲಿ ಕೊಲ್ಲುವವನಿಗೆ ನಮಿಪೆ ಶೂಲದಿ ತಿವಿಯುವನಿಗೆ|
ನಮಿಪೆ ಸುತ್ತುತ ಎಲ್ಲ ಕಡಯಿಂ ತಿವಿವ ಶೂರರ ಮುಖ್ಯಪತಿಗೆ||೧||

ನಮಿಪೆ ಶ್ರೇಷ್ಠದ ಗಣ್ಯ ವ್ಯಕ್ತಿಗೆ ನಮಿಪೆ ಖಡ್ಗದ ಚೋರ ಪತಿಗೆ|
ನಮಿಪೆ ಬಾಣದ ತೂಣಿಯವನಿಗೆ ನಮಿಪೆ ಕಳ್ಳ ದರೋಡೆ ಪತಿಗೆ||೨||

ನಮಿಪೆ ಕೆಲವೆಡೆ ವಂಚಿಪವನಿಗೆ ನಮಿಪೆ ಎಲ್ಲೆಡೆ ವಂಚಿಪವಗೆ|
ನಮಿಪೆ ನಂಬಿಸಿ ಸುಲಿದು ವಂಚಿಸಿ ವನದ ಸಿರಿಯನು ದೋಚುವನಿಗೆ||೩||

ನಮಿಪೆ ಸ್ವಂತದಿ ರಕ್ಷಿಪವನಿಗೆ ನಮಿಪೆ ಜನರನು ಕೊಲ್ಲುವನಿಗೆ|
ನಮಿಪೆ ಸೊತ್ತನು ಬೆಳೆಯ ಸಿರಿಯನು ಕದ್ದು ಮಾರುವ ಜನರ ಪತಿಗೆ||೪||

ನಮಿಪೆ ಖಡ್ಗವ ಧರಿಸುವವನಿಗೆ ನಮಿಪೆ ರಾತ್ರೆಯ ಸ್ತೇನಪತಿಗೆ|
ನಮಿಪೆ ಪರರನು ಹಿಡಿದು ಸೊತ್ತನು ಹೊಡೆದು ನೋಯಿಸಿ ಕೊಲ್ಲುವನಿಗೆ||೫||

ನಮಿಪೆ ಪಕಡಿಯ ಧರಿಸಿದವನಿಗೆ ನಮಿಪೆ ಗಿರಿಚರ ಭೂಮಿ ಹರಗೆ|
ನಮಿಪೆ ಬಾಣವ ಹಿಡಿಯುತಿರುವಗೆ ನಮಿಪೆ ಧನುಗಳ ಧರಿಸಿದವಗೆ||೬||

ನಮಿಪೆ ಬಿಲ್ಲಿನ ಹುರಿಯನೆಳವಗೆ ನಮಿಪೆ ಬಾಣವ ನಿರಿಸುವನಿಗೆ|
ನಮಿಪೆ ಹೆದೆಯನು ಎಳೆಯುವವನಿಗೆ ನಮಿಪೆ ನಂತರ ತೊರೆಯುವನಿಗೆ||೭||

ನಮಿಪೆ ಬಾಣವ ಹೂಡುವವನಿಗೆ ನಮಿಪೆ ಗುರಿಯನು ಸಾಧಿಪವಗೆ|
ನಮಿಪೆ ಆಸನ ಹೊಂದಿದವರಿಗೆ ನಮಿಪೆ ಹಾಯಲಿ ನಿದ್ರಿಪರಿಗೆ||೮||

ನಮಿಪೆ ಕನಸನು ಕಾಣುವವರಿಗೆ ನಮಿಪೆ ಎಚ್ಚರಗೊಂಡವರಿಗೆ|
ನಮಿಪೆ ನಿಂತಿಹ ರುದ್ರರವರಿಗೆ ನಮಿಪೆ ಎಲ್ಲೆಡೆ ಓಡುವರಿಗೆ||೯||

ನಮಿಪೆ ಸಭೆಯಲಿ ಸೇರಿದವರಿಗೆ ನಮಿಪೆ ಸಭೆಯಧ್ಯಕ್ಷ ಪದಕೆ|
ನಮಿಪೆ ಅಶ್ವವನೇರಿದವರಿಗೆ ನಮಿಪೆ ಹಯಗಳ ಸ್ವಾಮಿಗಳಿಗೆ||೧೦||

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ಬೊಳುಂಬು ಮಾವ°
  ಬೊಳುಂಬು ಮಾವ

  ಶರ್ಮಪ್ಪಚ್ಚಿ,
  ೩ನೆಯ ಕಂತನ್ನು ಓದಿದೆ. ಮದಲಾಣ ಹಾಂಗೆ ಲಾಯಕಾಯಿದು.
  ನಮಿಪೆ ಕೆಲವೆಡೆ ವಂಚಿಪವನಿಗೆ ನಮಿಪೆ ಎಲ್ಲೆಡೆ ವಂಚಿಪವಗೆ|
  ನಮಿಪೆ ನಂಬಿಸಿ ಸುಲಿದು ವಂಚಿಸಿ ವನದ ಸಿರಿಯನು ದೋಚುವನಿಗೆ
  ನಮಿಪೆ ಸ್ವಂತದಿ ರಕ್ಷಿಪವನಿಗೆ ನಮಿಪೆ ಜನರನು ಕೊಲ್ಲುವನಿಗೆ|
  ನಮಿಪೆ ಸೊತ್ತನು ಬೆಳೆಯ ಸಿರಿಯನು ಕದ್ದು ಮಾರುವ ಜನರ ಪತಿಗೆ
  ಈ ಗೆರೆಗಳ ಓದುವಗ, ವಿಶೇಷ ಆಗಿ ಕಂಡತ್ತು. ಇದರಲ್ಲಿ , ವ್ಯಂಗ್ಯಾರ್ಥ, ಅಥವ ಒಳಾಣ ಅರ್ಥ ಎಂತಾರು ಇದ್ದೊ ? ನಿಂಗೊಗೆ ಗೊಂತಿದ್ದೊ ?

  [Reply]

  ಶಂಕರ ಪಿ. ಎಸ್.ಮಂಗಳೂರು Reply:

  ಬಹುಶಃ ನಾವು ವೇದ ಮಂತ್ರಂಗಳ ಬರೇ ಶಬ್ದಾರ್ಥಂಗಳ ಹಾಂಗೆ ಓದುವದರಿಂದ ಅಪಾರ್ಥ ಬಪ್ಪ ಸಂದರ್ಭಂಗೊ ಖಂಡಿತವಾಗಿಯೂ ಇದ್ದು,ಅದಕ್ಕೆ ವಿಮರ್ಶೆಗಳನ್ನೂ ಒಟ್ಟಿಂಗೆ ಓದಿಯೊಳಕು ಹೇಳಿ ಬಲ್ಲವರು ಹೇಳುವದು.

  [Reply]

  VA:F [1.9.22_1171]
  Rating: +2 (from 2 votes)
  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ಡಾಕ್ಟು ಇದರ ಮೂಲ ಪುಸ್ತಕದ ಪ್ರಸ್ತಾವನೆಲಿ ಹೀಂಗೆ ಹೇಳಿದ್ದವು.
  “ಈ ಗೀತೆಗಳಲ್ಲಿ ಸರಿಯಾದ ಅರ್ಥ ಬರುವಂತೆ ಪ್ರಯತ್ನಿಸಿದ್ದೇನೆ. ನಾನು ವಿದ್ವಾಂಸನಲ್ಲ, ವೇದ ಪಾರಂಗತ ಮೊದಲೇ ಅಲ್ಲ. ಹಾಗಿರುವಾಗ ನನ್ನ ಸೀಮಿತ ಬುದ್ಧಿಗೆ ಎಟಕುವಷ್ಟು ಬರೆದೆ. ಪದ್ಯ ರೂಪದ ಅನುವಾದದಲ್ಲಿ ಭಾವಾರ್ಥಕ್ಕೆ ಪ್ರಾಧಾನ್ಯತೆ ಕೊಡಲಾಗಿದೆ. ಮೆದುಳಿಗಿಂತ ಹೃದಯವೇ ಗೆದ್ದಿದೆ. ಋಷಿ ಮುಖದಿಂದ ಬಂದ ಮಂತ್ರಗಳಿಗೆ ಸ್ವರ ಗಾಂಭೀರ್ಯವೂ ಅರ್ಥ ಸೌಂದರ್ಯವೂ ರಸ ತನ್ಮಯತೆಯೂ ಇರುವುದರಿಂದ ಕೆಲವು ವೇದ ಮಂತ್ರಗಳನ್ನು ಆಯ್ದು ಜನ ಸಾಮಾನ್ಯನಿಗೆ ಆಸ್ವಾದಿಸುವುದಕ್ಕಾಗಿ ಜನ ಸಾಮಾನ್ಯನೊಬ್ಬನು ಇಲ್ಲಿ ಯತ್ನಿಸಿದ್ದಾನೆ”
  ಶಂಕರ, ಮಹೇಶ, ಗೋಪಾಲ ಎಲ್ಲರ ಅಭಿಪ್ರಾಯಕ್ಕೆ ಎನ್ನಸಹಮತ ಇದ್ದು.
  ಶಿವ ಭಕ್ತ, ಎಲ್ಲರಲ್ಲಿಯೂ ಶಿವನನ್ನೇ ಕಾಣ್ತ. “ರುದ್ರ ಶಿವ” ಯಾವ ರೂಪಲ್ಲಿ ಕಾಂಬಲೆ ಸಿಕ್ಕುತ್ತ ಗೊಂತಿಲ್ಲೆ. ಹಾಂಗಾಗಿ ದೇವರ ಸೃಷ್ಟಿಯ ಎಲ್ಲವನ್ನೂ ಬೇಧ ಭಾವ ಇಲ್ಲದ್ದೆ ಒಂದೇ ಸಮನಾಗಿ ನೋಡ್ತ. ಎಲ್ಲರಲ್ಲಿಯೂ ಶಿವನ ಕಂಡು ಅವಕ್ಕೆ ನಮಸ್ಕಾರ ಮಾಡ್ತ.
  ವೇದ ಮಂತ್ರಂಗೊಕ್ಕೆ ವ್ಯಾಖ್ಯಾನ ಮಾಡ್ಲೆ ಗೊಂತಿಪ್ಪ ವಿದ್ವಾಂಸರು ಇದರ ಬಗ್ಗೆ ವಿವರ ತಿಳಿಸಿರೆ ಒಳ್ಲೆದು.

  [Reply]

  VA:F [1.9.22_1171]
  Rating: +1 (from 1 vote)
 2. ಬಲ್ನಾಡುಮಾಣಿ

  ವಾಹ್! ಶಿವನ ವರ್ಣನೆಯ ಕನ್ನಡ ಶಬ್ದಂಗಳಲ್ಲಿ ಓದುವಾಗ ತುಂಬಾ ಕೊಶಿ ಆವ್ತು.. ಡಾ| ಶಾಮ ಭಟ್ಟ, ಮಡ್ವ ಇವರ ವಿದ್ವತ್ತಿಂಗೆ ಒಂದು ಪ್ರಣಾಮ! ಸಂಗ್ರಹಿಸಿದ ಶರ್ಮಪ್ಪಚ್ಚಿಗೂ ಒಂದು ಸಲಾಮು! ಧನ್ಯವಾದಂಗೋ!. ಮುಂದಾಣ ಸಂಚಿಕೆಗೆ ಕಾಯ್ತಾ ಇದ್ದೆ!

  [Reply]

  VN:F [1.9.22_1171]
  Rating: +1 (from 1 vote)
 3. ಮುಳಿಯ ಭಾವ
  ರಘುಮುಳಿಯ

  ವಿಶೇಷವಾಗಿದ್ದು.ದೇವರು ಕೆಟ್ಟವರಿ೦ಗೂ ಒಳ್ಲೆಯವರಿ೦ಗೂ ರುದ್ರನೇ ಹೇಳುವ ಅರ್ಥವೊ? ಸ೦ಸ್ಕೃತ ಗೊ೦ತಿಪ್ಪವು ಒ೦ದರಿ ಬೆಣಚ್ಚು ತೊರುಸುವಿರಾ?
  ಬೈಲಿ೦ಗೆ ತ೦ದ ಅಪ್ಪಚ್ಚಿಗೆ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 4. ಶ್ಯಾಮಣ್ಣ
  ಶ್ಯಾಮಣ್ಣ

  ಆರೆ!!! ರುದ್ರನ ಹಾಂಗೆಂತಕೆ ವರ್ಣಿಸಿದ್ದು?? ಇಲ್ಲಿ negetive ಆಗಿ ವರ್ಣಿಸಿದ್ದಾ?

  [Reply]

  VA:F [1.9.22_1171]
  Rating: 0 (from 0 votes)
 5. ಡಾಮಹೇಶಣ್ಣ
  ಮಹೇಶ

  ಮಕ್ಕಳ ಪ್ರೀತಿಲ್ಲಿ ಲೂಟಿಪೋಕ°, ಕಳ್ಳ°, ಹೇಳಿ ಹೇಳ್ತಿಲ್ಲೆಯ? ಹಾ೦ಗೆ ದೇವರ ವರ್ಣಿಸುವದಾಗಿಕ್ಕು!
  ಕೃಷ್ಣನ ನವನೀತ ಚೋರ° ಬಾರೊ ಹೇಳಿ ಹೇಳ್ತ ಹಾಂಗೆ.
  ಶಿವನ ಕಿರಾತನ ರೂಪಲ್ಲಿ ಕಾಂಬದು ಕಥೆಗಳಲ್ಲಿ ಕಾಣ್ತು. ಹಾಂಗಾಗಿ ಕಿರಾತನ ಸ್ವಭಾವಂಗಳ ಹೇಳಿದ್ದಾಯಿಕ್ಕು.
  ಅಥವಾ,
  ಪ್ರತಿಯೊಬ್ಬನಲ್ಲುದೆ ಶಿವತತ್ತ್ವ ಇದ್ದು, ಅದರ ಕಾಣೆಕು ಹೇಳಿ ಸೂಚಿಸಲಾಗಿಕ್ಕು.

  [Reply]

  VA:F [1.9.22_1171]
  Rating: +1 (from 1 vote)
 6. ಗೋಪಾಲಣ್ಣ
  Gopalakrishna BHAT S.K.

  ರುದ್ರ ಸರ್ವವ್ಯಾಪಿ-ಎಲ್ಲರಲ್ಲೂ ಇಪ್ಪವ.ಕೆಟ್ಟವರಲ್ಲೂ ಅವ ಇದ್ದ-ಅವನ ಶಿವತತ್ವ[ಶುಭಕರವಾದ ತತ್ವ]ಎಲ್ಲೋಡಿಕ್ಕೂ ಇದ್ದು ಹೇಳುದರ ಇಲ್ಲಿ ಹೇಳಿದ್ದವು.[ಇದು ವಿದ್ವಾಂಸ ಮತ್ತೂರು ಕೃಷ್ಣಮೂರ್ತಿ ಅಜ್ಜನ ಮಾತು]

  [Reply]

  VA:F [1.9.22_1171]
  Rating: +2 (from 2 votes)
 7. ಶಂಕರ ಪಿ. ಎಸ್.ಮಂಗಳೂರು

  ವೇದ ಮಂತ್ರಂಗಳ ಭಾಷ್ಯಂಗಳ(ವಿಮರ್ಶೆಗೊ-ಗೂಢಾರ್ಥಂಗೊ) ಸಮೇತ ಓದದ್ದರೆ ಅದು ಬರೇ ಭಜನೆ ಪದ್ಯಂಗೊ ಹೇಳಿ ಕೆಲವು ಬುದ್ದಿಜೀವಿ ಹೇಳಿಸಿಕೊಂಬ ಜನಂಗೊ ಹೇಳಲೆ ಅವಕಾಶ ಆವುತ್ತು,-ಇದು ಎನ್ನ ವೈಯುಕ್ತಿಕ ಅಭಿಪ್ರಾಯ-ಬಯಲಿನವರ ಅಭಿಪ್ರಾಯ ಹೇಂಗೊ???

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಶ೦ಕರಣ್ಣಾ,ಇದು ಹೀ೦ಗೆ೦ತಕೆ ಬರದ್ದವು ಹೇಳುವ ಪ್ರಶ್ನೆ ಹುಟ್ಟಿ ಮೂಲಾರ್ಥ ತಿಳುಕ್ಕೊ೦ಬಲೆ ದಾರಿಯೂ ಅಕ್ಕೋ ಹೇಳಿ ಕಾಣುತ್ತು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೀಪಿಕಾದೊಡ್ಡಭಾವಮಂಗ್ಳೂರ ಮಾಣಿಯೇನಂಕೂಡ್ಳು ಅಣ್ಣವಸಂತರಾಜ್ ಹಳೆಮನೆತೆಕ್ಕುಂಜ ಕುಮಾರ ಮಾವ°ಕಜೆವಸಂತ°ಪುತ್ತೂರಿನ ಪುಟ್ಟಕ್ಕಶೇಡಿಗುಮ್ಮೆ ಪುಳ್ಳಿಚುಬ್ಬಣ್ಣಅನುಶ್ರೀ ಬಂಡಾಡಿಶಾ...ರೀಪಟಿಕಲ್ಲಪ್ಪಚ್ಚಿಕಾವಿನಮೂಲೆ ಮಾಣಿಪೆರ್ಲದಣ್ಣಚೂರಿಬೈಲು ದೀಪಕ್ಕವಿನಯ ಶಂಕರ, ಚೆಕ್ಕೆಮನೆಸರ್ಪಮಲೆ ಮಾವ°ಪುಟ್ಟಬಾವ°ದೇವಸ್ಯ ಮಾಣಿಒಪ್ಪಕ್ಕಬೋಸ ಬಾವಹಳೆಮನೆ ಅಣ್ಣಬೊಳುಂಬು ಮಾವ°ಪವನಜಮಾವನೆಗೆಗಾರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ