ರುದ್ರ ಗೀತೆ : (ಅನುವಾಕ – 04)

February 14, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಲೇಖಕರ ಪರಿಚಯ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಶ್ರೀ ರುದ್ರ ಗೀತೆ” ಹೇಳುವ ಕನ್ನಡ ಗೀತೆಗಳ ಸಂಗ್ರಹವ ಇಲ್ಲಿ ಕೊಡುತ್ತಾ ಇದ್ದೆ.
ಒಂದು ಅನುವಾಕ ಸಂಸ್ಕೃತಲ್ಲಿ ಆದ ನಂತ್ರ ಅದರ ಕನ್ನಡ ಗೀತೆ ಬತ್ತ ಹಾಂಗೆ ಬರದ್ದೆ.

<< ಅನುವಾಕ 01- ಇಲ್ಲಿದ್ದು
<< ಅನುವಾಕ 02- ಇಲ್ಲಿದ್ದು
<< ಅನುವಾಕ 03- ಇಲ್ಲಿದ್ದು

– ಶರ್ಮಪ್ಪಚ್ಚಿ

ರುದ್ರಪ್ರಶ್ನಃ
ಅನುವಾಕ – 04

ನಮ ಆವ್ಯಾಧಿನೀಭ್ಯೋ ವಿವಿಧ್ಯನ್ತೀಭ್ಯಶ್ಚ ವೋ ನಮೋ –
ನಮ ಉಗಣಾಭ್ಯಸ್ತೃಗ್‍ಂಹತೀಭ್ಯಶ್ಚ ವೋ ನಮೋ –
ನಮೋ ಗೃಥ್ಸೇಭ್ಯೋ ಗೃಥ್ಸಪತಿಭ್ಯಶ್ಚ ವೋ ನಮೋ –
ನಮೋ ವ್ರಾತೇಭ್ಯೋ ವ್ರಾತಪತಿಭ್ಯಶ್ಚ ವೋ ನಮೋ –
ನಮೋ ಗಣೇಭ್ಯೋ ಗಣಪತಿಭ್ಯಶ್ಚ ವೋ ನಮೋ –
ನಮೋ ವಿರೂಪೇಭ್ಯೋ ವಿಶ್ವರೂಪೇಭ್ಯಶ್ಚ ವೋ ನಮೋ –
ನಮೋ ಮಹದ್ಭ್ಯಃ, ಕ್ಷುಲ್ಲಕೇಭ್ಯಶ್ಚ ವೋ ನಮೋ –
ನಮೋ ರಥಿಭ್ಯೋರಥೇಭ್ಯಶ್ಚ ವೋ ನಮೋ –
ನಮೋ ರಥೇಭ್ಯೋ ರಥಪತಿಭ್ಯಶ್ಚ ವೋ ನಮೋ –
ನಮಃ ಸೇನಾಭ್ಯಃ ಸೇನಾನಿಭ್ಯಶ್ಚ ವೋ ನಮೋ –
ನಮಃ, ಕ್ಷತೃಭ್ಯಃ ಸಂಗ್ರಹೀತೃಭ್ಯಶ್ಚ ವೋ ನಮೋ –
ನಮಸ್ತಕ್ಷಭ್ಯೋ ರಥಕಾರೇಭ್ಯಶ್ಚ ವೋ ನಮೋ –
ನಮಃ ಕುಲಾಲೇಭ್ಯಃ ಕರ್ಮಾರೇಭ್ಯಶ್ಚ ವೋ ನಮೋ –
ನಮಃ ಪುಂಜಿಷ್ಟೇಭ್ಯೋ ನಿಷಾದೇಭ್ಯಶ್ಚ ವೋ ನಮೋ –
ನಮ ಇಷುಕೃದ್ಭ್ಯೋ ಧನ್ವಕೃದ್ಭ್ಯಶ್ಚ ವೋ ನಮೋ –
ನಮೋ ಮೃಗಯುಭ್ಯಃ ಶ್ವನಿಭ್ಯಶ್ಚ ವೋ ನಮೋ –
ನಮಃ ಶ್ವಭ್ಯಃ ಶ್ವಪತಿಭ್ಯಶ್ಚ ವೋ ನಮಃ|| 4 ||

ರುದ್ರಗೀತೆ

ನಮಿಪೆ ಎಲ್ಲೆಡೆ ಇರಿಯುವವರಿಗೆ ನಮಿಪೆ ಬಹುವಿಧ ಚುಚ್ಚುವರಿಗೆ|
ನಮಿಪೆ ದೇವತೆ ಸಪ್ತ ಮಾತೆಗೆ ನಮಿಪೆ ದುರ್ಗತಿ ಮಾಡುವರಿಗೆ||೧||

ನಮಿಪೆ ಕದಿಯುವ ಲೋಭಿಯವರಿಗೆ ನಮಿಪೆ ಅಂತಹ ನಾಯಕರಿಗೆ|
ನಮಿಪೆ ನೆರೆದಿಹ ಜನ ಸಮೂಹಕೆ ನಮಿಪೆ ಹಿಂಡಿನ ಸ್ವಾಮಿಗಳಿಗೆ||೨||

ನಮಿಪೆ ಭೂತ ಪಿಶಾಚಿಯವರಿಗೆ ನಮಿಪೆ ಗಣಗಳ ಗಣ್ಯಪತಿಗೆ|
ನಮಿಪೆ ರೂಪ ವಿಕಾರದವರಿಗೆ ನಮಿಪೆ ವಿಧ ವಿಧ ಹೊಂದುವರಿಗೆ||೩||

ನಮಿಪೆ ಹಿರಿಮೆಯ ತೋರಿದವರಿಗೆ ನಮಿಪೆ ಸ್ವಲ್ಪವು ಇಲ್ಲದವರಿಗೆ|
ನಮಿಪೆ ರಥದಾರೂಢದವರಿಗೆ ನಮಿಪೆ ರಥವಿರದಲೆಯುವರಿಗೆ||೪||

ನಮಿಪೆ ರಥದಾಕಾರದವರಿಗೆ ನಮಿಪೆ ರಥಗಳ ಸ್ವಾಮಿಗಳಿಗೆ|
ನಮಿಪೆ ಸೇನೆಯ ವಿವಿಧ ತುಕುಡಿಗೆ ನಮಿಪೆ ಸೇನೆಯ ನಾಯಕರಿಗೆ||೫||

ನಮಿಪೆ ಚಲಿಸಲು ಕಲಿಸುವವರಿಗೆ ನಮಿಪೆ ತಾವೇ ಚಲಿಸುವರಿಗೆ|
ನಮಿಪೆ ಬಡಗಿಯ ವಂಶದವರಿಗೆ ನಮಿಪೆ ರಥಗಳ ಕೆತ್ತುವರಿಗೆ||೬||

ನಮಿಪೆ ಮಡಕೆಯ ಮಾಡುವವರಿಗೆ ನಮಿಪೆ ಲೋಕದ ಕರ್ಮಠರಿಗೆ|
ನಮಿಪೆ ಖಗಗಳ ಬೇಟೆಯವರಿಗೆ ನಮಿಪೆ ಮೀನನು ಹಿಡಿಯುವರಿಗೆ||೭||

ನಮಿಪೆ ಬಾಣವ ರಚಿಸುವವರಿಗೆ ನಮಿಪೆ ಬಿಲ್ಲನು ನಿರ್ಮಿಪರಿಗೆ|
ನಮಿಪೆ ಬೇಟೆಯನಾಡುವರಿಗೆ ನಮಿಪೆ ಶುನಕವ ಒಯ್ವ ಪತಿಗೆ|
ನಮಿಪೆ ಸೊಣಗನ ರೂಪದವರಿಗೆ ನಮಿಪೆ ಸೊಣಗನ ಸಾಕುಪತಿಗೆ||೮||

ಸೂ: ಅನುವಾಕ 05ರ ರುದ್ರಗೀತೆ – ಬಪ್ಪ ಸೋಮವಾರ ನಿರೀಕ್ಷಿಸಿ.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಶ್ರೀಅಕ್ಕ°

  ಶರ್ಮಪ್ಪಚ್ಚಿ, ಈ ಅನುವಾಕದ ಅನುವಾದಲ್ಲಿ ಎಲ್ಲಾ ವೃತ್ತಿಯವಕ್ಕೆ ಅವರವರ ವೃತ್ತಿಯ ಬಗ್ಗೆ ಹೇಳಿ ವಂದನೆ ಹೇಳಿದ್ದು ಕಾಣ್ತು. ಎಲ್ಲೋರನ್ನೂ ನಾವು ಗೌರವಿಸೆಕ್ಕು ಹೇಳ್ತ ಭಾವನೆ ಆದಿಕ್ಕು ಅಲ್ಲದಾ?

  ಲಾಯ್ಕಾಯಿದು.

  [Reply]

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  [ಎಲ್ಲೋರನ್ನೂ ನಾವು ಗೌರವಿಸೆಕ್ಕು ಹೇಳ್ತ ಭಾವನೆ]. ಅಪ್ಪು
  ಧನ್ಯವಾದಂಗೊ

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ಸೊಣಗ ಹೇಳಿರೆ ಆರಪ್ಪಾ? ಸಕಲರಲ್ಲೂ ದೇವರ ಕಾಣುವ ಪ್ರಯತ್ನ ,ರುದ್ರ ಹೇಳಿರೆ ಅಲ್ಲದೋ?ಅಪ್ಪಚ್ಚಿ,ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 3. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  [ಸೊಣಗ ಹೇಳಿರೆ ಆರಪ್ಪಾ]
  ಸೊಣಗ= ಶ್ವಾನ,ನಾಯಿ

  [Reply]

  ಗಣೇಶ ಪೆರ್ವ

  ಗಣೇಶ Reply:

  ಹಾ.. ಅದು ಸರಿ…… ಅ೦ಬಗ ಅಬ್ಬೆ ಸುಮ್ಮನೆ ಅಲ್ಲ ಸಣ್ಣಾದಿಪ್ಪಗ ‘ಕೈಕ್ಕಾಲಿ೦ಗೆ ಸೊಣ೦ಗದ್ದೆ ಕೂದ೦ಡು ಎ೦ತಾರು ಓದೋ..” ಹೇಳಿ ಬೈಕ್ಕ೦ಡಿತ್ತಿದ್ದದು… :-) ಅದು ಎಶ್ಟು ಷ್ಟ್ರೋ೦ಗು ಹೇಳಿ ಈಗ ಗೊ೦ತಾತಿದಾ…

  [Reply]

  VA:F [1.9.22_1171]
  Rating: 0 (from 0 votes)
 4. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಹೇಂಗಿಪ್ಪವಕ್ಕೂ ಅರ್ಥ ಅಪ್ಪ ಹಾಂಗೆ ಪದ ಕಟ್ಟಿದ ಮಡ್ವ ಶಂಭಟ್ಟರಿಂಗೂ ಇಲ್ಲಿ ಅಚ್ಚು ಜೋಡುಸಿದ ಶರ್ಮಪ್ಪಚ್ಚಿಗೂ ಧನ್ಯವಾದಂಗೊ.

  [Reply]

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ಒಪ್ಪ ಕೊಟ್ಟು ಪ್ರೋತ್ಸಾಹಿಸುವ ನಿನಗೆ ಧನ್ಯವಾದಂಗೊ

  [Reply]

  VA:F [1.9.22_1171]
  Rating: 0 (from 0 votes)
 5. ಗೋಪಾಲಣ್ಣ
  Gopalakrishna BHAT S.K.

  ಶುನಕ[ಸಂಸ್ಕೃತ]
  ಸೊಣಗ[ತದ್ಭವ] ಹೇಳಿದರೆ ನಾಯಿ.
  ಸೊಣಂಗುದು ಹೇಳಿದರೆ ತಾಗುದು,ತಗಲುವುದು,ಅಡ್ಡಿ ಅಪ್ಪದು ಹೇಳಿ ತೋರುತ್ತು.-ಅಲ್ಲಿ ಉಪಯೋಗಿಸಿದ ಸಂದರ್ಭಲ್ಲಿ.

  [Reply]

  VA:F [1.9.22_1171]
  Rating: 0 (from 0 votes)
 6. ಬೊಳುಂಬು ಮಾವ°
  ಬೊಳುಂಬು ಮಾವ

  ಸರಳ ಕನ್ನಡಲ್ಲಿ ಶ್ಲೋಕವ ಓದಿ ಕೊಶಿ ಆತು. ಎಲ್ಲಾ ವೃತ್ತಿಯವು ನಮಗೆ ಬೇಕು, ಅವಕ್ಕೆ ನಮಿಸುತ್ತದು ನಮ್ಮ ಕರ್ತ್ಯವ್ಯ ಹೇಳಿ ಶ್ಲೋಕದ ಮುಖಾಂತರ ಹೇಳಿದ್ದದು. ಒಪ್ಪಣ್ಣ ಬರದ ಕುಂಬಳೆ ಬೆಡಿಯ ಪುನಃ ನೆಂಪು ಮಾಡಿತ್ತು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನುಶ್ರೀ ಬಂಡಾಡಿಸುವರ್ಣಿನೀ ಕೊಣಲೆಪುತ್ತೂರುಬಾವವೇಣೂರಣ್ಣದೊಡ್ಡಮಾವ°ಬಂಡಾಡಿ ಅಜ್ಜಿಸರ್ಪಮಲೆ ಮಾವ°ಕೊಳಚ್ಚಿಪ್ಪು ಬಾವಕಾವಿನಮೂಲೆ ಮಾಣಿಅಕ್ಷರದಣ್ಣಮಾಷ್ಟ್ರುಮಾವ°ಶಾ...ರೀಕೇಜಿಮಾವ°ಬೋಸ ಬಾವಚೆನ್ನಬೆಟ್ಟಣ್ಣಬೊಳುಂಬು ಮಾವ°ಚೂರಿಬೈಲು ದೀಪಕ್ಕವೇಣಿಯಕ್ಕ°ಶೇಡಿಗುಮ್ಮೆ ಪುಳ್ಳಿಅನಿತಾ ನರೇಶ್, ಮಂಚಿಮುಳಿಯ ಭಾವಡಾಗುಟ್ರಕ್ಕ°ದೇವಸ್ಯ ಮಾಣಿಡಾಮಹೇಶಣ್ಣಪುಣಚ ಡಾಕ್ಟ್ರುಶರ್ಮಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ