ರುದ್ರ ಗೀತೆ : (ಅನುವಾಕ – 05)

February 21, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಲೇಖಕರ ಪರಿಚಯ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಶ್ರೀ ರುದ್ರ ಗೀತೆ” ಹೇಳುವ ಕನ್ನಡ ಗೀತೆಗಳ ಸಂಗ್ರಹವ ಇಲ್ಲಿ ಕೊಡುತ್ತಾ ಇದ್ದೆ.
ಒಂದು ಅನುವಾಕ ಸಂಸ್ಕೃತಲ್ಲಿ ಆದ ನಂತ್ರ ಅದರ ಕನ್ನಡ ಗೀತೆ ಬತ್ತ ಹಾಂಗೆ ಬರದ್ದೆ.

<< ಅನುವಾಕ 01- ಇಲ್ಲಿದ್ದು
<< ಅನುವಾಕ 02- ಇಲ್ಲಿದ್ದು
<< ಅನುವಾಕ 03- ಇಲ್ಲಿದ್ದು
<< ಅನುವಾಕ 04- ಇಲ್ಲಿದ್ದು

– ಶರ್ಮಪ್ಪಚ್ಚಿ

ರುದ್ರಪ್ರಶ್ನಃ
ಅನುವಾಕ – 05

ನಮೋ ಭವಾಯ ಚ ರುದ್ರಾಯ ಚ ನಮಃ –
ಶರ್ವಾಯ ಚ ಪಶುಪತಯೇ ಚ ನಮೋ –
ನೀಲಗ್ರೀವಾಯ ಚ ಶಿತಿಕಂಠಾಯ ಚ ನಮಃ –
ಕಪರ್ದಿನೇ ಚ ವ್ಯುಪ್ತಕೇಶಾಯ ಚ ನಮಃ –
ಸಹಸ್ರಾಕ್ಷಾಯ ಚ ಶತಧನ್ವನೇ ಚ ನಮೋ –
ಗಿರಿಶಾಯ ಚ ಶಿಪಿವಿಷ್ಟಾಯ ಚ ನಮೋ –
ಮೀಢುಷ್ಟಮಾಯ ಚೇಷುಮತೇ ಚ ನಮೋ –
ಹ್ರಸ್ವಾಯ ಚ ವಾಮನಾಯ ಚ ನಮೋ –
ಬೃಹತೇ ಚ ವರ್ ಷೀಯಸೇ ಚ ನಮೋ –
ವೃದ್ಧಾಯ ಚ ಸಂವೃದ್ಧ್ವನೇ ಚ ನಮೋ –
ಅಗ್ರಿಯಾಯ ಚ ಪ್ರಥಮಾಯ ಚ ನಮ –
ಆಶವೇ ಚಾಜಿರಾಯ ಚ ನಮಃ –
ಶೀಘ್ರಿಯಾಯ ಚ ಶೀಭ್ಯಾಯ ಚ ನಮ –
ಊರ್ಮ್ಯಾಯ ಚಾವಸ್ವನ್ಯಾಯ ಚ ನಮಃ –
ಸ್ರೋತಸ್ಯಾಯ ಚ ದ್ವೀಪ್ಯಾಯ ಚ|| ೫ ||

ರುದ್ರಗೀತೆ

ನಮಿಪೆ ಭವನಿಗೆ ರುದ್ರ ದೇವಗೆ ನಮಿಪ ಶರ್ವಗೆ ಪಶುವಪತಿಗೆ|
ನಮಿಪೆ ನೀಲಿಯ ಕೊರಳಿನವನಿಗೆ ನಮಿಪೆ ಶ್ವೇತದ ಕಂಠದವಗೆ||೧||

ನಮಿಪೆ ಜಡೆಯನು ಧರಿಸಿದವನಿಗೆ ನಮಿಪೆ ಕೂದಲೇ ಇಲ್ಲದವಗೆ|
ನಮಿಪೆ ಸಾಸಿರ ಕಣ್ಣಿನವನಿಗೆ ನಮಿಪೆ ಸಾಸಿರ ಬಿಲ್ಲಿನವಗೆ||೨||

ನಮಿಪೆ ಗಿರಿಶಗೆ ವಿಷ್ಣು ರೂಪಗೆ ನಮಿಪೆ ವರನಿಗೆ ಬಾಣಧರೆಗೆ|
ನಮಿಪೆ ಕಿರಿಯಗೆ ಗಿಡ್ಡದವನಿಗೆ ನಮಿಪೆ ಗಾತ್ರದಿ ಶ್ರೇಷ್ಠದವಗೆ||೩||

ನಮಿಪೆ ಆದಿ ಪುರಾಣ ಪುರುಷಗೆ ನಮಿಪೆ ವೇದದಿ ಹೊಗಳಿದವಗೆ|
ನಮಿಪೆ ಮುಂಗಡೆ ಚಲಿಸುವವನಿಗೆ ನಮಿಪೆ ಆದ್ಯತೆ ಪಡೆದವನಿಗೆ||೪||

ನಮಿಪೆ ಎಲ್ಲೆಡೆ ಹರಡಿದವನಿಗೆ ನಮಿಪೆ ವೇಗದಿ ಓಡುವನಿಗೆ|
ನಮಿಪೆ ಶೀಘ್ರದಿ ಚಲಿಸುವವನಿಗೆ ನಮಿಪೆ ಝರಿಯಲಿ ನೀರಿನವಗೆ||೫||

ನಮಿಪೆ ಘರ್ಜಿಪ ಅಲೆಗಳವನಿಗೆ ನಮಿಪೆ ಸ್ಥಿರದಲಿ ನಿಂತ ಜಲಕೆ|
ನಮಿಪೆ ನೊರೆಯಲಿ ಅಡಗಿದವನಿಗೆ ನಮಿಪೆ ದ್ವೀಪದಿ ಮೆರೆಯುವನಿಗೆ||೬||

ಸೂ: ಅನುವಾಕ -6 ರ ರುದ್ರಗೀತೆ ಬಪ್ಪ ಸೋಮವಾರ ನಿರೀಕ್ಷಿಸಿ.

ರುದ್ರ ಗೀತೆ : (ಅನುವಾಕ – 05), 5.0 out of 10 based on 1 rating

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಗೋಪಾಲಣ್ಣ
  Gopalakrishna BHAT S.K.

  ರುದ್ರನ ಸರ್ವಾನ್ತರ್ಯಾಮೀ ಶಕ್ತಿಯ ಪ್ರಬುದ್ಧ ವಿವರಣೆ.ಲಾಯಕ ಆಯಿದು.

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಮಾವ

  ಶಿವನ ವೈವಿಧ್ಯಮಯ ರೂಪಂಗಳ ವರ್ಣಿಸಿ ಬರದ ಕನ್ನಡ ರೂಪಾಂತರ ಲಾಯಕಿದ್ದು.

  [Reply]

  VA:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°

  ವಿಶಿಷ್ಟ ಸಾಧನೆ . ರಮ್ಯ ಮನೋಹರ ರೂಪಾಂತರ. ಓದಲೂ ಲಾಯ್ಕ ಆವ್ತಿದು.

  ಅಪ್ಪಚ್ಚಿಗೇ ಎಡಿಗಷ್ಟೆ ಇಷ್ಟೊಂದು ತಾಳ್ಮೆಲಿ ಕೂದು ಚಂದಕೆ ರೂಪು ಕೊಡೆಕ್ಕಾರೆ.

  ಸೋಮವಾರ ಸೋಮವಾರ ಎದುರು ನೋಡ್ಲಕ್ಕೋ ಮುಂದಿನ ಕಂತು.

  [Reply]

  VN:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘುಮುಳಿಯ

  ಈ ಕ೦ತಿಲಿ ಹೆರಾಣ ರೂಪವ ವರ್ಣಿಸಿದ ಹಾ೦ಗೆ ಕಾಣುತ್ತು.ಅರ್ಥ ಆಗಿ ಅಪ್ಪಗ ಸ೦ತೋಷ ಆವುತ್ತು.ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 5. ಶ್ರೀಅಕ್ಕ°

  ಶರ್ಮಪ್ಪಚ್ಚಿ, ಈ ಅನುವಾದಲ್ಲಿ ಕೆಲವು ಕಡೆ ಎರಡು ತೀರಾ ವಿಪರೀತಂಗಳ ಹೇಳಿದ್ದವು ಅಲ್ಲದಾ?

  [ನಮಿಪೆ ನೀಲಿಯ ಕೊರಳಿನವನಿಗೆ ನಮಿಪೆ ಶ್ವೇತದ ಕಂಠದವಗೆ
  ನಮಿಪೆ ಜಡೆಯನು ಧರಿಸಿದವನಿಗೆ ನಮಿಪೆ ಕೂದಲೇ ಇಲ್ಲದವಗೆ
  ನಮಿಪೆ ಕಿರಿಯಗೆ ಗಿಡ್ಡದವನಿಗೆ ನಮಿಪೆ ಗಾತ್ರದಿ ಶ್ರೇಷ್ಠದವಗೆ
  ನಮಿಪೆ ಘರ್ಜಿಪ ಅಲೆಗಳವನಿಗೆ ನಮಿಪೆ ಸ್ಥಿರದಲಿ ನಿಂತ ಜಲಕೆ|
  ನಮಿಪೆ ನೊರೆಯಲಿ ಅಡಗಿದವನಿಗೆ ನಮಿಪೆ ದ್ವೀಪದಿ ಮೆರೆಯುವನಿಗೆ]

  ತುಂಬಾ ಲಾಯಕಾಯಿದು.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುವರ್ಣಿನೀ ಕೊಣಲೆದೀಪಿಕಾಜಯಶ್ರೀ ನೀರಮೂಲೆಮುಳಿಯ ಭಾವಶುದ್ದಿಕ್ಕಾರ°ಕಜೆವಸಂತ°ಪುತ್ತೂರುಬಾವಸಂಪಾದಕ°ಕಾವಿನಮೂಲೆ ಮಾಣಿಅನು ಉಡುಪುಮೂಲೆಕೆದೂರು ಡಾಕ್ಟ್ರುಬಾವ°ಪ್ರಕಾಶಪ್ಪಚ್ಚಿಡಾಗುಟ್ರಕ್ಕ°ವಿಜಯತ್ತೆಕಳಾಯಿ ಗೀತತ್ತೆದೊಡ್ಡಭಾವಅಕ್ಷರದಣ್ಣವಸಂತರಾಜ್ ಹಳೆಮನೆವಾಣಿ ಚಿಕ್ಕಮ್ಮನೆಗೆಗಾರ°vreddhiಪಟಿಕಲ್ಲಪ್ಪಚ್ಚಿಎರುಂಬು ಅಪ್ಪಚ್ಚಿಅಜ್ಜಕಾನ ಭಾವಅಕ್ಷರ°ಸುಭಗ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ