ರುದ್ರ ಗೀತೆ : (ಅನುವಾಕ – 06)

February 28, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಲೇಖಕರ ಪರಿಚಯ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಶ್ರೀ ರುದ್ರ ಗೀತೆ” ಹೇಳುವ ಕನ್ನಡ ಗೀತೆಗಳ ಸಂಗ್ರಹವ ಇಲ್ಲಿ ಕೊಡುತ್ತಾ ಇದ್ದೆ.
ಒಂದು ಅನುವಾಕ ಸಂಸ್ಕೃತಲ್ಲಿ ಆದ ನಂತ್ರ ಅದರ ಕನ್ನಡ ಗೀತೆ ಬತ್ತ ಹಾಂಗೆ ಬರದ್ದೆ.

<< ಅನುವಾಕ 01- ಇಲ್ಲಿದ್ದು
<< ಅನುವಾಕ 02- ಇಲ್ಲಿದ್ದು
<< ಅನುವಾಕ 03- ಇಲ್ಲಿದ್ದು
<< ಅನುವಾಕ 04- ಇಲ್ಲಿದ್ದು
<< ಅನುವಾಕ 05- ಇಲ್ಲಿದ್ದು

– ಶರ್ಮಪ್ಪಚ್ಚಿ

ರುದ್ರಪ್ರಶ್ನಃ
ಅನುವಾಕ – 06

ನಮೋ ಜ್ಯೇಷ್ಠಾಯ ಚ ಕನಿಷ್ಠಾಯ ಚ ನಮಃ –
ಪೂರ್ವಜಾಯ ಚಾಪರಜಾಯ ಚ ನಮೋ –
ಮಧ್ಯಮಾಯ ಚಾಪಗಲ್ಭಾಯ ಚ ನಮೋ –
ಜಘನ್ಯಾಯ ಚ ಬುಧ್ನಿಯಾಯ ಚ ನಮಃ –
ಸೋಭ್ಯಾಯ ಚ ಪ್ರತಿಸರ್ಯಾಯ ಚ ನಮೋ –
ಯಾಮ್ಯಾಯ ಚ ಕ್ಷೇಮ್ಯಾಯ ಚ ನಮ –
ಉರ್ವರ್ಯಾಯ ಚ ಖಲ್ಯಾಯ ಚ ನಮಃ –
ಶ್ಲೋಕ್ಯಾಯ ಚಾವಸಾನ್ಯಾಯ ಚ ನಮೋ –
ವನ್ಯಾಯ ಚ ಕಕ್ಷ್ಯಾಯ ಚ ನಮಃ –
ಶ್ರವಾಯ ಚ ಪ್ರತಿಶ್ರವಾಯ ಚ ನಮ –
ಆಶುಷೇಣಾಯ ಚಾಶುರಥಾಯ ಚ ನಮಃ –
ಶೂರಾಯ ಚಾವಭಿಂದತೇ ಚ ನಮೋ –
ವರ್ಮಿಣೇ ಚ ವರೂಥಿನೇ ಚ ನಮೋ –
ಬಿಲ್ಮಿನೇ ಚ ಕವಚಿನೇ ಚ ನಮಃ –
ಶ್ರುತಾಯ ಚ ಶ್ರುತಸೇನಾಯ ಚ|| 6 ||

ರುದ್ರಗೀತೆ – 06

ನಮಿಪೆ ಉನ್ನತ ಸ್ಥಾನದವನಿಗೆ ನಮಿಪೆ ಕೆಳಗಡೆ ಬಿದ್ದವನಿಗೆ|
ನಮಿಪೆ ಮೊದಲಿಗೆ ಜನಿಸಿದವನಿಗೆ ನಮಿಪೆ ಕೊನೆಯಲಿ ಹುಟ್ಟಿದವಗೆ||1||

ನಮಿಪೆ ಮಧ್ಯದ ಪ್ರಾಯದವನಿಗೆ ನಮಿಪೆ ಬೆಳೆಯದೆ ಉಳಿದವನಿಗೆ|
ನಮಿಪೆ ಹಿಂಬದಿ ಜನ್ಮದವನಿಗೆ ನಮಿಪೆ ಬೇರಲಿ ಪುಟ್ಟಿದವಗೆ||2||

ನಮಿಪೆ ಗುಣಗಳ ಮಿಶ್ರದವನಿಗೆ ನಮಿಪೆ ಎಲ್ಲೆಡೆ ಚಲಿಸುವನಿಗೆ|
ನಮಿಪೆ ಕಾಲನ ಲೋಕದವನಿಗೆ ನಮಿಪೆ ಸುಖಕರ ಜಾಗದವಗೆ||3||

ನಮಿಪೆ ಹೊಲಗಳ ವಿಪುಲ ಧಾನ್ಯಕೆ ನಮಿಪೆ ಕೇರಿದ ಧಾನ್ಯ ಕಣಕೆ |
ನಮಿಪೆ ಸ್ತುತ್ಯದ ಮಂತ್ರದವನಿಗೆ ನಮಿಪೆ ವೇದದಿ ವರ್ಣಿತನಿಗೆ||4||

ನಮಿಪೆ ವನದಲಿ ಮರದ ರೂಪಕೆ ನಮಿಪೆ ಕಾಡಿನ ಲತೆಯ ಸಿರಿಗೆ|
ನಮಿಪೆ ಧ್ವನಿಯನು ಮಾಡುವವನಿಗೆ ನಮಿಪೆ ಮರುದನಿ ಗೊಂಬವನಿಗೆ||5||

ನಮಿಪೆ ಚುರುಕಿನ ಯುದ್ಧದವನಿಗೆ ನಮಿಪೆ ರಥಗಳ ಧಾವಿಪವಗೆ|
ನಮಿಪೆ ಶೂರರ ವರ್ಗದವನಿಗೆ ನಮಿಪೆ ಶತ್ರುವ ಇರಿಯುವನಿಗೆ||6||

ನಮಿಪೆ ತನ್ನನೆ ರಕ್ಷಿಪವನಿಗೆ ನಮಿಪೆ ಸೂತನ ರಕ್ಷಿಪವಗೆ|
ನಮಿಪೆ ಶಿರದಲಿ ಕವಚಧರಿಪಗೆ ನಮಿಪೆ ಎದೆಯಲಿ ಕವಚಧರಗೆ|
ನಮಿಪೆ ಬಹುಕಡೆ ಸ್ತುತಿಯ ಪಡೆವಗೆ ನಮಿಪೆ ಸ್ತುತ್ಯದ ಸೇನೆಯವಗೆ||7||

ಸೂ: ಅನುವಾಕ -7 ರ ರುದ್ರಗೀತೆ ಬಪ್ಪ ಸೋಮವಾರ ನಿರೀಕ್ಷಿಸಿ.

ರುದ್ರ ಗೀತೆ : (ಅನುವಾಕ – 06), 5.0 out of 10 based on 1 rating
ಶುದ್ದಿಶಬ್ದಂಗೊ (tags): , , , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ.

  ಧನ್ಯವಾದಗಳು ಶರ್ಮಪ್ಪಚ್ಚಿ.

  ರುದ್ರ ಗೀತೆ ಸಂಪೂರ್ಣ ಇಲ್ಲಿ ಎದುರುನೋಡುತ್ತೆ.

  ಇದರ ಓದಿ ಅರ್ಥ ಮಾಡಿ ರುದ್ರ ಹೇಳಿರೆ ಹೇಳ್ತವಂಗೆ ಭಾವನಾತ್ಮಕ ಉಚ್ಚಾರ ಗಾಮ್ಬೀರ್ಯ ಸ್ಪಸ್ಟತೆ ಧೈರ್ಯ ಹೆಚ್ಚಿಕ್ಕು, ಅರ್ಥಪೂರ್ಣವಾಗಿಯೂ ಇಕ್ಕು. ಕೇಳಲೂ ಲಾಯಕ ಇಕ್ಕು ಕೂದೊಂಡು ಕೇಳುವೋ ಹೇಳಿ ಕಾಂಗು.

  [Reply]

  VA:F [1.9.22_1171]
  Rating: 0 (from 0 votes)
 2. ಉಂಡೆಮನೆ ಕುಮಾರ°
  ಉಂಡೆಮನೆ ಕುಮಾರ°

  ಎಂಗೊ ರುದ್ರ ಈಗ ಕಲಿತ್ತಾ ಇದ್ದೆಯೊ.. ಒಟ್ಟಿಂಗೇ ಕನ್ನಡಾನುವಾದವೂ ನಿಂಗೊ ಕೊಡ್ತಾ ಇಪ್ಪದು ತುಂಬಾ ಒಳ್ಳೆದಾತು, ಅಪ್ಪಚ್ಚಿ ಧನ್ಯವಾದಂಗೊ..

  [Reply]

  VA:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°
  ಚೆನ್ನೈ ಭಾವ.

  ಅರ್ಥ ಗೊಂತಿಲ್ಲದ್ದೆ ಹೇಳ್ವಾಗ ವಾಕ್ಯವೂ ಅರ್ಥವತ್ತಾವ್ತಿಲ್ಲೇ. ಆರಿಂಗೂ ಗೊಂತಿಲ್ಲದ್ದ ಕಾರಣ ನಾವೂ ತಪ್ಪಿಸ್ಯೋಳ್ತು. ಈ ಅರ್ಥ ಗೊಂತಿಲ್ಲದ್ದೇ ಹೇಳ್ವಾಗ ಎನಗೊಂದು ನೆಂಪಾತು. ಇಲ್ಲೇ ಅದರ ಬಿಕ್ಕುತ್ತು ಉಚಿತ.

  ಇತ್ತೀಚಿಗೆ ಆನೊಂದು ಸಂಗೀತ ಕೇಳಿದೆ ಪ್ರಸಿದ್ಧ ವಿದ್ವಾಂಸ ಹಾಡೋದು.

  ಹಾಡು : ವಾತಾಪಿ ಗಣಪತಿಂ ..

  ಎದುರು ಕೂದವು ಕೈಲಿ ತಾಳ ಹಾಕುತ್ತೆಂತ್ಸು , ತಲೆ ಆಡುಸುತ್ಸೋ.. ಯಪ್ಹಾ ಅದುವೆ ಒಂದು ಪ್ರತ್ಯೇಕ ನೋಡ್ಲೆ ಚಂದ. ಅದು ಬಿಡಿ. ರಾಗ ಆಲಾಪನೆ , ಪಿಟಿಲು , ಮುಗುದು ಪದ್ಯ ಸುರುವಾತು. ಹೋತು …. ಹೋತು… ಹೋತು.

  ಇದಾ ಈಗ..,

  ಪ್ರಾಣವ ಸ್ವರೂಪ ವಕ್ರ ತುಂಡಮ್
  ನಿರಂತರಂ ನಿಟಿಲ ಚಂದ್ರ ಖಂಡಂ
  ನಿಜ ವಾಮ ಕರ ವಿಕೃತೇಕ್ಷು ಖಂಡಂ

  ಪುನಃ

  ನಿರಂತರಂ ನಿಟಿಲ ಚಂದ್ರ ದಂಡಂ
  ನಿಜ ವಾಮ ಕರ ವಿಕೃತೇಕ್ಷು ಖಂಡಂ
  ………………..

  ರಾಮ ರಾಮ., ಎಂತ ಆಲಾಪನೆ , ಎಂತ ಸ್ವರಂಗೋ, ತಾಳವೋ , ಮಂಡೆ ಆಡ್ಸಿದ್ದೋ, ಅಕೇರಿಗೆ ಕೈ ತಟ್ಟಿಕ್ಕಿ ಹೋದವು.
  ಇವನೂ ಒಹ್ ಭಾರಿ ಹಾಡಿ ಬಿಟ್ಟೆ ಹೇಳಿ ಬೀಗಿಕ್ಕಿ ಹೋದ.

  ಇಲ್ಲಿ ದಂಡ ಖಂಡ ಆದ್ದು ಆರಿಂಗಾರು ಗೊಂತಾಯ್ದೋ.!!!!!

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ಚೆನ್ನೈಭಾವಾ
  ಕೆಲವು ಜೆನ ಅಡಿಶಿದಳ್ ಯಶೋದಾ ಹೇಳಿಯೇ ಹಾಡುತ್ತವು.

  [Reply]

  ಚೆನ್ನೈ ಬಾವ°

  ಚೆನ್ನೈಭಾವ Reply:

  ಹಹಹಃ ಪಾಪ. (ಆರು ಕೇಳೆಡಿ)

  [Reply]

  VA:F [1.9.22_1171]
  Rating: 0 (from 0 votes)
  ನೆಗೆಗಾರ°

  ನೆಗೆಗಾರ° Reply:

  { ವಿಕೃತೇಕ್ಷು ಖಂಡಂ }
  ಇಲ್ಲಿ “ವಿಧೃತೇಕ್ಷು ದಂಡಂ” ಆಯೆಕ್ಕಾದ್ಸು ಆರಿಂಗಾರು ಗೊಂತಾಯಿದೋ? 😉 😉

  [Reply]

  VA:F [1.9.22_1171]
  Rating: 0 (from 0 votes)
  ಗಣೇಶ ಪೆರ್ವ

  ಗಣೇಶ Reply:

  ನಿರ೦ತರ೦ ನಿಟಿಲ ಚ೦ದ್ರ ಕ೦ಠ೦
  ನಿಜ ವಾಮಕರ ವಿಧೃತೇಕ್ಷುದ೦ಡ೦ ಹೇಳಿಯೋ ಆಯೆಕಾದ್ದದು?

  ಹೆಚ್ಚಿನವು ಹಾಡುವಗ ನಿಜವಾ ಮಕರ ವಿಧೃತೇಕ್ಷುದ೦ಡ೦ ಹೇಳಿ ಹಾಡುತ್ತವು!! ಅರ್ಥ ಅನರ್ಥ ಆವುತ್ತು.. ಕೆಲವು ಮಲಯಾಳಿ ಗಾಯಕರು ‘ಚಿ೦ತೆ ಯಾತಕೋ ಮನುಜಾ.. ಭ್ರಾ೦ತಿ ಯಾತಕೋ’ ಹೇಳುವದರ ‘ಚಿ೦ದಿ ಯಾತಕೋ ಮನುಜಾ ಬ್ರಾ೦ದಿ ಯಾತಕೋ’ ಹೇಳಿಯುದೆ ಹಾಡುತ್ತವು… ‘ಮನುಷ್ಯ೦ಗೆ ಚಿ೦ದಿ (ಚಿ೦ದಿ ವಸ್ತ್ರ)ಯುದೆ ಬ್ರಾ೦ಡಿಯುದೆ ಅಗತ್ಯ ಇಲ್ಲೆ’ ಹೇಳಿಯೋ ಏನೋ.. :-)

  ಕೆ. ಎಸ್. ಚಿತ್ರಾ ಹಾಡಿದ ‘ಕೃಷ್ಣಾ ನೀ ಬೇಗನೆ ಬಾರೋ..’ ಯೂ ಟ್ಯೂಬಿಲ್ಲಿ ಇದ್ದು. ಕೇಳಿ ನೋಡಿ. ಉಚ್ಚಾರಣೆ ಸ್ಪಷ್ಟವಾಗಿದ್ದ೦ಡೇ ಹೃದಯಹಾರಿಯಾಗಿ ಅಮೋಘವಾಗಿ ಹೇ೦ಗೆ ಹಾಡ್ಳಕ್ಕು ಹೇಳುವದಕ್ಕೆ ಒ೦ದು ಉತ್ತಮ ಉದಾಹರಣೆ..

  [Reply]

  VA:F [1.9.22_1171]
  Rating: 0 (from 0 votes)
 4. ಹಳೆಮನೆ ಅಣ್ಣ

  ಪ್ರಸಿದ್ಧ ಸಂಗೀತಗಾರರೆಲ್ಲ ಹಾಂಗೇ… ಎಂದರೋಮ… ಹಾನುಭಾವುಲು… ಹೇಳಿಯೇ ಸಂಗೀತ ಮಾಡುದು. ಅರ್ಥ ಕೇಳಿರೆ ಟೆಟ್ಟೆಟ್ಟೆ…

  [Reply]

  VA:F [1.9.22_1171]
  Rating: 0 (from 0 votes)
 5. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಶರ್ಮಪ್ಪಚ್ಚಿ,
  ಶಂಭಟ್ಟರ ಅನುವಾದ ಅರ್ಥವತ್ತಾಗಿದ್ದು. ಸೋಮವಾರಂದ ಸೋಮವಾರಕ್ಕೆ ಕಾಯಿತ್ತ ಹಾಂಗಾಯಿದು. ಎಲ್ಲಾ ಅನುವಾಕಂಗಳದ್ದುದೇ ಪ್ರಿಂಟುತೆಗದು ಮಡಿಗಿದ್ದು.

  [Reply]

  ಚೆನ್ನೈ ಬಾವ°

  ಚೆನ್ನೈಭಾವ Reply:

  ಸೂ : ©: ಈ ಶುದ್ದಿಯ ಎಲ್ಲಾ ಹಕ್ಕುದೇ ಶರ್ಮಪ್ಪಚ್ಚಿ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಏ,ಭಾವ,
  ಪೆಟ್ಟು ಕೊಟ್ಟ ಮೇಲೆ ಕ್ಷಮೆ ಕೇಳಿರೂ,ಕ್ಷಮೆ ಕೇಳಿದ ಮೇಲೆ ಪೆಟ್ಟು ಕೊಟ್ಟರೂ ಲೆಕ್ಕಾಚಾರ ಒ೦ದೇ ಅಲ್ಲದೋ?
  ಶರ್ಮಪ್ಪಚ್ಚೀ,
  ಹಕ್ಕುಪತ್ರಕ್ಕೆ ಹೆಬ್ಬೆಟ್ಟು ಒತ್ತುವದೋ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪವನಜಮಾವದೀಪಿಕಾದೊಡ್ಡಮಾವ°ಕಳಾಯಿ ಗೀತತ್ತೆಪುತ್ತೂರಿನ ಪುಟ್ಟಕ್ಕಶಾಂತತ್ತೆಕಾವಿನಮೂಲೆ ಮಾಣಿವೇಣಿಯಕ್ಕ°ಪಟಿಕಲ್ಲಪ್ಪಚ್ಚಿನೆಗೆಗಾರ°ದೇವಸ್ಯ ಮಾಣಿಅಕ್ಷರದಣ್ಣಬಟ್ಟಮಾವ°ಕಜೆವಸಂತ°ಶೀಲಾಲಕ್ಷ್ಮೀ ಕಾಸರಗೋಡುಹಳೆಮನೆ ಅಣ್ಣಚೂರಿಬೈಲು ದೀಪಕ್ಕವಾಣಿ ಚಿಕ್ಕಮ್ಮವೇಣೂರಣ್ಣಕೇಜಿಮಾವ°vreddhiಒಪ್ಪಕ್ಕಡೈಮಂಡು ಭಾವಪೆರ್ಲದಣ್ಣಮುಳಿಯ ಭಾವಮಾಲಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ