ರುದ್ರ ಗೀತೆ : (ಅನುವಾಕ – 07)

March 7, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಲೇಖಕರ ಪರಿಚಯ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಶ್ರೀ ರುದ್ರ ಗೀತೆ” ಹೇಳುವ ಕನ್ನಡ ಗೀತೆಗಳ ಸಂಗ್ರಹವ ಇಲ್ಲಿ ಕೊಡುತ್ತಾ ಇದ್ದೆ.
ಒಂದು ಅನುವಾಕ ಸಂಸ್ಕೃತಲ್ಲಿ ಆದ ನಂತ್ರ ಅದರ ಕನ್ನಡ ಗೀತೆ ಬತ್ತ ಹಾಂಗೆ ಬರದ್ದೆ.

<< ಅನುವಾಕ 01- ಇಲ್ಲಿದ್ದು
<< ಅನುವಾಕ 02- ಇಲ್ಲಿದ್ದು
<< ಅನುವಾಕ 03- ಇಲ್ಲಿದ್ದು
<< ಅನುವಾಕ 04- ಇಲ್ಲಿದ್ದು
<< ಅನುವಾಕ 05- ಇಲ್ಲಿದ್ದು
<< ಅನುವಾಕ 06- ಇಲ್ಲಿದ್ದು

– ಶರ್ಮಪ್ಪಚ್ಚಿ

ರುದ್ರಪ್ರಶ್ನಃ
ಅನುವಾಕ – 07

ನಮೋ ದುಂದುಭ್ಯಾಯ ಚಾಹನನ್ಯಾಯ ಚ ನಮೋ –
ಧೃಷ್ಣವೇ ಚ ಪ್ರಮೃಶಾಯ ಚ ನಮೋ –
ದೂತಾಯ ಚ ಪ್ರಹಿತಾಯ ಚ ನಮೋ –
ನಿಷಂಗಿಣೇ ಚೇಷುಧಿಮತೇ ಚ –
ನಮಸ್ತೀಕ್ಷ್ಣೇಷವೇ ಚಾಯುಧಿನೇ ಚ ನಮಃ –
ಸ್ವಾಯುಧಾಯ ಚ ಸುಧನ್ವನೇ ಚ ನಮಃ –
ಸ್ರುತ್ಯಾಯ ಚ ಪಥ್ಯಾಯ ಚ ನಮಃ –
ಕಾಟ್ಯಾಯ ಚ ನೀಪ್ಯಾಯ ಚ ನಮಃ –
ಸೂದ್ಯಾಯ ಚ ಸರಸ್ಯಾಯ ಚ ನಮೋ –
ನಾದ್ಯಾಯ ಚ ವೈಶಂತಾಯ ಚ ನಮಃ –
ಕೂಪ್ಯಾಯ ಚಾವಟ್ಯಾಯ ಚ ನಮೋ –
ವರ್ಷ್ಯಾಯ ಚಾವರ್ಷ್ಯಾಯ ಚ ನಮೋ –
ಮೇಘ್ಯಾಯ ಚ ವಿದ್ಯುತ್ಯಾಯ ಚ ನಮ –
ಈಧ್ರಿಯಾಯ ಚಾತಪ್ಯಾಯ ಚ ನಮೋ  –
ವಾತ್ಯಾಯ ಚ ರೇಷ್ಮಿಯಾಯ ಚ ನಮೋ –
ವಾಸ್ತವ್ಯಾಯ ಚ ವಾಸ್ತುಪಾಯ ಚ|| 7 ||

ರುದ್ರಗೀತೆ – 07

ನಮಿಪೆ ಭೇರಿಯ ನುಡಿಸುವವನಿಗೆ ನಮಿಪೆ ಭೇರಿಯ ಕೋಲಿನವಗೆ|
ನಮಿಪೆ ಯುದ್ಧದಿ ಧೃಡತೆಯವನಿಗೆ ನಮಿಪೆ ಯೋಚಿಸಿ ಹೊಡೆಯುವನಿಗೆ||1||

ನಮಿಪೆ ವಾಚಕ ಒಯ್ಯುವವನಿಗೆ ನಮಿಪೆ ರಾಯಸ ದೂತದವಗೆ|
ನಮಿಪೆ ಖಡ್ಗವ ಧರಿಸಿದವನಿಗೆ ನಮಿಪೆ ಬಾಣದ ಚೀಲದವಗೆ||2||

ನಮಿಪೆ ಹರಿತದ ಬಾಣಧರಿಪಗೆ ನಮಿಪೆ ಆಯುಧ ಪೂರ್ಣಧರಗೆ|
ನಮಿಪೆ ಆಯುಧ ಕರತ್ರಿಶೂಲಗೆ ನಮಿಪೆ ಬಿಲ್ಲು ಪಿನಾಕಧರಗೆ||3||

ನಮಿಪೆ ಕಿರುತರ ಕಾಲುದಾರಿಗೆ ನಮಿಪೆ ಅಗಲದ ರಾಜಪಥಕೆ|
ನಮಿಪೆ ಸೀಮಿತ ನದಿಯ ನೀರಿಗೆ ನಮಿಪೆ ನೀರಿನ ಝರಿಯ ಸಿರಿಗೆ||4||

ನಮಿಪೆ ಜವುಗಿನ ಮಣ್ಣಲಿರುವಗೆ ನಮಿಪೆ ಸರಸಿಯ ನೀರಿನವಗೆ|
ನಮಿಪೆ ಹರಿಯುವ ನದಿಯಲಿರುವಗೆ ನಮಿಪೆ ಪರ್ವತ ಕೊಳದ ತಳಕೆ||5||

ನಮಿಪೆ ಬಾವಿಯ ಒಳಗೆ ಇರುವಗೆ ನಮಿಪೆ ಹೊಂಡದಿ ಉಳಿಯುವನಿಗೆ|
ನಮಿಪೆ ಮಳೆಯಲಿ ಹೊಳೆಯುತಿರುವಗೆ ನಮಿಪೆ ನೀರೇ ಇಲ್ಲದೆಡೆಗೆ||6||

ನಮಿಪೆ ಮೋಡದಿ ಅಡಗಿದವನಿಗೆ ನಮಿಪೆ ಮಿಂಚನು ಹೊಂಚುವನಿಗೆ|
ನಮಿಪೆ ಶರದಿನ ಹೊಳೆವ ಮುಗಿಲಿಗೆ ನಮಿಪೆ ಬಿಸಿಲನು ಬೆರೆತ ಮಳೆಗೆ||7||

ನಮಿಪೆ ಮಳೆಯನು ಕರೆದ ಗಾಳಿಗೆ ನಮಿಪೆ ಹಿಮವನು ಸುರಿದ ಮಳೆಗೆ|
ನಮಿಪೆ ಮನೆಗಳ ಸಿರಿಯಲಿರುವಗೆ ನಮಿಪೆ ಮನೆಯೊಳ ದೈವಗಳಿಗೆ||8||

ಸೂ: ಅನುವಾಕ -8 ರ ರುದ್ರಗೀತೆ ಬಪ್ಪ ಸೋಮವಾರ ನಿರೀಕ್ಷಿಸಿ.

ರುದ್ರ ಗೀತೆ : (ಅನುವಾಕ – 07), 5.0 out of 10 based on 1 rating
ಶುದ್ದಿಶಬ್ದಂಗೊ (tags): , , , , , , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಈ ಸೋಮವಾರದ್ದಾತು. ಇನ್ನು ಇನ್ನಾಣ ಸೋಮವಾರಕ್ಕೆ ಕಾವದು.

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಮಾವ

  ಸರಳ ಸುಂದರ ಕಾವ್ಯ, ಚೆಂದ ಆಯಿದು.

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘುಮುಳಿಯ

  ಪ್ರಕೃತಿಯ,ವಿಶೇಷವಾಗಿ ,ಬೇರೆ ಬೇರೆ ರೂಪಲ್ಲಿಪ್ಪ ನೀರಿನ ಆರಾಧನೆ ಮಾಡಿದ ಹಾ೦ಗೆ ಕಾಣುತ್ತು.ಅರ್ಥ ಗೊ೦ತಾಗಿಯಪ್ಪಗ ರುದ್ರದ ಚೆ೦ದ ಇನ್ನೂ ಹೆಚ್ಚಾವುತ್ತು,ಅಲ್ಲದೋ?
  ಅಪ್ಪಚ್ಚಿ,ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 4. ಡಾಮಹೇಶಣ್ಣ
  ಮಹೇಶ

  {ನಮೋ ನಿಷಂಗಿಣ}
  ನಮೋ ನಿಷಂಗಿಣೇ ಹೇಳಿ ಇದ್ದೊ ಕಾಣ್ತು.

  ಎನಗೆ ಸುಮಾರು ಸ೦ಸ್ಕೃತ ಶಬ್ದ೦ಗ ಅರ್ಥ ಸಹಿತವಾಗಿ ಸಿಕ್ಕುತ್ತಾ ಇದ್ದು!! ಧನ್ಯವಾದ.

  [Reply]

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  [ನಮೋ ನಿಷಂಗಿಣೇ ಹೇಳಿ ಇದ್ದೊ ಕಾಣ್ತು]. ನೀನು ಹೇಳಿದ್ದು ಸರಿ.
  ಟೈಪಿಂಗ್ ಲ್ಲಿ ಬಂದ ತೊಂದರೆ.
  ಧನ್ಯವಾದಂಗೊ

  [Reply]

  VA:F [1.9.22_1171]
  Rating: 0 (from 0 votes)
 5. ಭೂಪಣ್ಣ
  Bhoopa

  ಶರ್ಮಪ್ಪಚ್ಚೀ,

  ಎಷ್ತು ಚೆ೦ದಕ್ಕೆ ಬರದ್ದೀ..
  ನಿ೦ಗಳ ಬರವಣಿಗೆ ನೋಡಿದರೆ ಆನೆಲ್ಲ ಆ ಲೆವೆಲ್ ಗೆ ಬರೆಕ್ಕಾದರೆ ಎಷ್ತು ಸಮಯ ಬೇಕೋ..

  ತು೦ಬಾ ಲಾಯಿಕ ಆಯಿದು.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅಂತೂ ಆ ಲೆವೆಲ್ಲಿಂಗೆ ನಿಂಗೊ ಈಗಂಗೆ ಟಾರ್ಗೆಟ್ ಮಡಿಕ್ಕೊಂಡಿದಿ ಹೇಳಿ ಪಬ್ಲಿಕ್ ಮಾಡಿಬಿಟ್ಟಿ.!!

  [Reply]

  VA:F [1.9.22_1171]
  Rating: 0 (from 0 votes)
 6. ಉಂಡೆಮನೆ ಕುಮಾರ°
  ಉಂಡೆಮನೆ ಕುಮಾರ°

  ಧನ್ಯವಾದಂಗೊ-ಶರ್ಮಪ್ಪಚ್ಚಿ, ಇಲ್ಯಾಣ ರುದ್ರಾಧ್ಯಾಯಿಗೊಕ್ಕೆ ಹಂಚುತ್ತ ಇದ್ದೆ.ರುದ್ರಗೀತೆ.ಎಲ್ಲರೂ ತುಂಬಾ ಖುಷಿಪಟ್ಟವು..ಈಗ ಸೋಮವಾರಕ್ಕೆ ಕಾಯುವದು

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುಣಚ ಡಾಕ್ಟ್ರುತೆಕ್ಕುಂಜ ಕುಮಾರ ಮಾವ°ಕಾವಿನಮೂಲೆ ಮಾಣಿವಿದ್ವಾನಣ್ಣನೆಗೆಗಾರ°ಅಡ್ಕತ್ತಿಮಾರುಮಾವ°ಅಜ್ಜಕಾನ ಭಾವಹಳೆಮನೆ ಅಣ್ಣಮಾಷ್ಟ್ರುಮಾವ°ನೀರ್ಕಜೆ ಮಹೇಶಪುತ್ತೂರುಬಾವಪ್ರಕಾಶಪ್ಪಚ್ಚಿvreddhiಸುಭಗಶೀಲಾಲಕ್ಷ್ಮೀ ಕಾಸರಗೋಡುಶಾಂತತ್ತೆಮುಳಿಯ ಭಾವಚೆನ್ನಬೆಟ್ಟಣ್ಣದೀಪಿಕಾವೇಣೂರಣ್ಣಒಪ್ಪಕ್ಕಗೋಪಾಲಣ್ಣಡಾಗುಟ್ರಕ್ಕ°ವಿಜಯತ್ತೆಸುವರ್ಣಿನೀ ಕೊಣಲೆಅಕ್ಷರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ