ರುದ್ರ ಗೀತೆ : (ಅನುವಾಕ – 08)

March 14, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಲೇಖಕರ ಪರಿಚಯ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಶ್ರೀ ರುದ್ರ ಗೀತೆ” ಹೇಳುವ ಕನ್ನಡ ಗೀತೆಗಳ ಸಂಗ್ರಹವ ಇಲ್ಲಿ ಕೊಡುತ್ತಾ ಇದ್ದೆ.
ಒಂದು ಅನುವಾಕ ಸಂಸ್ಕೃತಲ್ಲಿ ಆದ ನಂತ್ರ ಅದರ ಕನ್ನಡ ಗೀತೆ ಬತ್ತ ಹಾಂಗೆ ಬರದ್ದೆ.

<< ಅನುವಾಕ 01- ಇಲ್ಲಿದ್ದು
<< ಅನುವಾಕ 02- ಇಲ್ಲಿದ್ದು
<< ಅನುವಾಕ 03- ಇಲ್ಲಿದ್ದು
<< ಅನುವಾಕ 04- ಇಲ್ಲಿದ್ದು
<< ಅನುವಾಕ 05- ಇಲ್ಲಿದ್ದು
<< ಅನುವಾಕ 06- ಇಲ್ಲಿದ್ದು
<< ಅನುವಾಕ 07- ಇಲ್ಲಿದ್ದು

– ಶರ್ಮಪ್ಪಚ್ಚಿ

ರುದ್ರಪ್ರಶ್ನಃ
ಅನುವಾಕ – 08

ನಮಃ ಸೋಮಾಯ ಚ ರುದ್ರಾಯ ಚ –
ನಮಸ್ತಾಮ್ರಾಯ ಚಾರುಣಾಯ ಚ ನಮಃ –
ಶಂಗಾಯ ಚ ಪಶುಪತಯೇ ಚ ನಮ –
ಉಗ್ರಾಯ ಚ ಭೀಮಾಯ ಚ ನಮೋ –
ಅಗ್ರೇವಧಾಯ ಚ ದೂರೇವಧಾಯ ಚ ನಮೋ –
ಹಂತ್ರೇ ಚ ಹನೀಯಸೇ ಚ ನಮೋ –
ವೃಕ್ಷೇಭ್ಯೋ ಹರಿಕೇಶೇಭ್ಯೋ –
ನಮಸ್ತಾರಾಯ ನಮಃ ಶಂಭವೇ ಚ ಮಯೋ ಭವೇ ಚ ನಮಃ –
ಶಂಕರಾಯ ಚ ಮಯಸ್ಕರಾಯ ಚ ನಮಃ –
ಶಿವಾಯ ಚ ಶಿವತರಾಯ ಚ –
ನಮಸ್ತೀರ್ಥ್ಯಾಯ ಚ ಕೂಲ್ಯಾಯ ಚ ನಮಃ –
ಪಾರ್ಯಾಯ ಚಾವಾರ್ಯಾಯ ಚ ನಮಃ –
ಪ್ರತರಣಾಯ ಚೋತ್ತರಣಾಯ ಚ ನಮ –
ಆತಾರ್ಯಾಯ ಚಾಲಾದ್ಯಾಯ ಚ ನಮಃ –
ಶಷ್ಪ್ಯಾಯ ಚ ಫೇನ್ಯಾಯ ಚ ನಮಃ –
ಸಿಕತ್ಯಾಯ ಚ ಪ್ರವಾಹ್ಯಾಯ ಚ|| 8 ||

ರುದ್ರಗೀತೆ – 08

ನಮಿಪೆ ಸೋಮಗೆ ಉಮೆಯ ಸಹಿತಗೆ ನಮಿಪೆ ರುದ್ರಗೆ ಕಷ್ಟಹರಗೆ|
ನಮಿಪೆ ತಾಮ್ರಗೆ ಕೆಂಪುವರ್ಣಗೆ ನಮಿಪೆ ಅರುಣಗೆ ಹೊನ್ನ ಕಣಕೆ||1||

ನಮಿಪೆ ಶಂಗಗೆ ಸುಖವನೀವಗೆ ನಮಿಪೆ ಲೋಕದ ಪಶುವಪತಿಗೆ|
ನಮಿಪೆ ಉಗ್ರಗೆ ಭಯವ ಕೊಡುವಗೆ ನಮಿಪೆ ಭೀಮಗೆ ದೊಡ್ಡವನಿಗೆ||2||

ನಮಿಪೆ ಮುಂಗಡೆ ಕೊಲ್ಲುವವನಿಗೆ ನಮಿಪೆ ದೂರದಿ ಕೊಲ್ಲುವನಿಗೆ|
ನಮಿಪೆ ಎಲ್ಲೆಡೆ ಹರಿಸುವವನಿಗೆ ನಮಿಪೆ ಪ್ರಳಯದಿ ಮುಗಿಸುವನಿಗೆ||3||

ನಮಿಪೆ ಹಸುರಿನ ಮರದ ಶಿಖರಕೆ ನಮಿಪೆ ನಿಂತಿಹ ವನ ಸಮೂಹಕೆ|
ನಮಿಪೆ ಪ್ರಣವಗೆ ನಮಿಪೆ ಶಂಭುಗೆ ನಮಿಪೆ ಸ್ವರ್ಗದ ಸುಖದ ಸುರಿಗೆ||4||

ನಮಿಪೆ ಸುಖವನು ಕರುಣಿಪವನಿಗೆ ನಮಿಪೆ ಪರದಲಿ ಕ್ಷೇಮನಿಧಿಗೆ|
ನಮಿಪೆ ಶಿವನಿಗೆ ಸ್ತಿತಿ ತುರೀಯಗೆ ನಮಿಪೆ ಶಿವತರ ಉಚ್ಚಗತಿಗೆ||5||

ನಮಿಪೆ ಹರಿಯುವ ನದಿಯ ತೀರ್ಥಕೆ ನಮಿಪೆ ನದಿಗಳ ದಡದ ಕಡೆಗೆ|
ನಮಿಪೆ ಆಚೆಯ ತೀರದವನಿಗೆ ನಮಿಪೆ ಈ ಕಡೆ ನಿಂತವನಿಗೆ||6||

ನಮಿಪೆ ಜಗವನು ದಾಟಿಸುವನಿಗೆ ನಮಿಪೆ ಜ್ಞಾನದಿ ತೇಲಿಸುವಗೆ|
ನಮಿಪೆ ಪುನರಪಿ ಜನಿಸುವವನಿಗೆ ನಮಿಪೆ ಫಲವನ್ನುಣ್ಣುವನಿಗೆ||7||

ನಮಿಪೆ ಕೋಮಲ ಹುಲ್ಲಿನವನಿಗೆ ನಮಿಪೆ ನೊರೆಯಲಿ ಸೇರಿದವಗೆ|
ನಮಿಪೆ ಮರಳಿನ ಹರಳಲಿರುವಗೆ ನಮಿಪೆ ಹರಿಯುವ ನೀರಿನವಗೆ||8||

ಸೂ: ಅನುವಾಕ -9 ರ ರುದ್ರಗೀತೆ ಬಪ್ಪ ಸೋಮವಾರ ನಿರೀಕ್ಷಿಸಿ.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಗೋಪಾಲಣ್ಣ
  Gopalakrishna BHAT S.K.

  ಈ ಅನುವಾಕ ಬಹಳ ಮುಖ್ಯ ಹೇಳಿ ಮತ್ತೂರು ಕೃಷ್ಣಮೂರ್ತಿ ಹೇಳಿದ್ದವು.ಇದರ ನಡುವೆ ನಮಶಿವಾಯ ಮಂತ್ರ ಇದ್ದು.ಪ್ರಕೃತಿಯ ವಿವಿಧ ಘಟಕಂಗಳ ಹೆಸರಿಸಿ ಹೇಳಿ ಅದರಲೊಂದಾಗಿಪ್ಪ ಶಿವತತ್ವ ವ ವಿವರಿಸಿದ್ದವು.
  ಮೂರು ವೇದದ ನಡುವೆ ಯಜುರ್ವೇದ,ಅದರ ನಡುವೆ ರುದ್ರಾಧ್ಯಾಯ,ಅದರ ನಡುವೆ ನಮಃ ಶಿವಾಯ -ಈ ಪಂಚಾಕ್ಷರೀ ಮಂತ್ರ ಇಪ್ಪದು ಇದರ ಪ್ರಾಮುಖ್ಯತೆಯ ತಿಳಿಸುತ್ತು ಹೇಳಿ ರುದ್ರ ಕಲಿಸುವ ಗುರುಗೊ ಮನೋಹರವಾಗಿ ವಿವರಿಸಿದ್ದವು.
  ತುಂಬಾ ಸಂತೋಷ ಆತು.

  [Reply]

  VA:F [1.9.22_1171]
  Rating: +1 (from 1 vote)
 2. ಮುಳಿಯ ಭಾವ
  ರಘುಮುಳಿಯ

  ಅಪ್ಪಚ್ಚಿ,

  ಸರಳ ಸು೦ದರ ಅನುವಾದ ಓದೊಗ ಸ೦ತೋಷ ಆವುತ್ತು.ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°
  ಚೆನ್ನೈ ಭಾವ

  ವಾರ ವಾರದ ಕಂತು ತೃಪ್ತಿ ನೀಡುತ್ತಾ ಇದ್ದು ಅಪ್ಪಚಿ. ಒಳ್ಳೆ ವೇದಿಕೆ ಇದು.

  [Reply]

  VA:F [1.9.22_1171]
  Rating: 0 (from 0 votes)
 4. ಒಪ್ಪಣ್ಣ

  ಶರ್ಮಪ್ಪಚ್ಚೀ..
  ಶಂಬಟ್ಟ ಡಾಗುಟ್ರಜ್ಜ ಬರದ ರುದ್ರಗೀತೆಯ ಬೈಲಿಂಗೆ ಪ್ರತಿ ಸೋಮವಾರ ಕೊಡ್ತಾ ಇಪ್ಪದು ತುಂಬಾ ಕೊಶಿ ಆವುತ್ತು. ಪ್ರತಿ ಸರ್ತಿ ರುದ್ರ ಹೇಳುವಗಳೂ – ಇದರ ಅರ್ತ ಗೊಂತಿದ್ದರೆ – ಹೇಳಿ ಅನುಸುತ್ತು ಕೆಲವು ಜೆನಕ್ಕೆ. ಅಂತವಕ್ಕೆ ಇದು ಒಳ್ಳೆ ಜಾಗೆ ಓದಿಗೊಂಬಲೆ.

  { ನಮಃ ಶಿವಾಯ ಚ }
  – ಇಡೀ ಯಜುರ್ವೇದಲ್ಲೇ ಇದು ಅತ್ಯಂತ ಪವಿತ್ರವಾದ ಶಬ್ದಂಗೊ ಅಡ! ಬಟ್ಟಮಾವ° ಒಂದೊಂದರಿ ಹೇಳುಗು..
  ಕೊಶಿ ಆತು ಅರ್ತ ಕಂಡು. ಬಪ್ಪ ವಾರಕ್ಕೆ ಕಾಯ್ತಾ ಇರ್ತೆ..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣvreddhiಪುಣಚ ಡಾಕ್ಟ್ರುಚೆನ್ನೈ ಬಾವ°ಶುದ್ದಿಕ್ಕಾರ°ರಾಜಣ್ಣವೆಂಕಟ್ ಕೋಟೂರುವೇಣಿಯಕ್ಕ°ಡಾಗುಟ್ರಕ್ಕ°ಚೂರಿಬೈಲು ದೀಪಕ್ಕವಿದ್ವಾನಣ್ಣಡಾಮಹೇಶಣ್ಣಅಜ್ಜಕಾನ ಭಾವದೊಡ್ಡಭಾವಪುತ್ತೂರುಬಾವಶ್ಯಾಮಣ್ಣಕೇಜಿಮಾವ°ಕಜೆವಸಂತ°ಶರ್ಮಪ್ಪಚ್ಚಿಮಾಲಕ್ಕ°ಶೇಡಿಗುಮ್ಮೆ ಪುಳ್ಳಿಯೇನಂಕೂಡ್ಳು ಅಣ್ಣಮಾಷ್ಟ್ರುಮಾವ°ಕೊಳಚ್ಚಿಪ್ಪು ಬಾವಪೆಂಗಣ್ಣ°ಪುತ್ತೂರಿನ ಪುಟ್ಟಕ್ಕಪಟಿಕಲ್ಲಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ