ರುದ್ರ ಗೀತೆ : (ಅನುವಾಕ – 09)

March 21, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಲೇಖಕರ ಪರಿಚಯ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಶ್ರೀ ರುದ್ರ ಗೀತೆ” ಹೇಳುವ ಕನ್ನಡ ಗೀತೆಗಳ ಸಂಗ್ರಹವ ಇಲ್ಲಿ ಕೊಡುತ್ತಾ ಇದ್ದೆ.
ಒಂದು ಅನುವಾಕ ಸಂಸ್ಕೃತಲ್ಲಿ ಆದ ನಂತ್ರ ಅದರ ಕನ್ನಡ ಗೀತೆ ಬತ್ತ ಹಾಂಗೆ ಬರದ್ದೆ.

ಕಳುದವಾರದ  ಅನುವಾ08- ಇಲ್ಲಿದ್ದು
– ಶರ್ಮಪ್ಪಚ್ಚಿ

– ಶರ್ಮಪ್ಪಚ್ಚಿ

ರುದ್ರಪ್ರಶ್ನಃ
ಅನುವಾಕ – 09

ನಮ ಇರಿಣ್ಯಾಯ ಚ ಪ್ರಪಥ್ಯಾಯ ಚ ನಮಃ –
ಕಿಗ್‍ಂಶಿಲಾಯ ಚ ಕ್ಷಯಣಾಯ ಚ ನಮಃ –
ಕಪರ್ದಿನೇ ಚ ಪುಲಸ್ತಯೇ ಚ ನಮೋ –
ಗೋಷ್ಠ್ಯಾಯ ಚ ಗೃಹ್ಯಾಯ ಚ ನಮಸ್ತಲ್ಪ್ಯಾಯ –
ಚ ಗೇಹ್ಯಾಯ ಚ ನಮಃ –
ಕಾಟ್ಯಾಯ ಚ ಗಹ್ವರೇಷ್ಠಾಯ ಚ ನಮೋ –
ಹೃದಯ್ಯಾಯ ಚ ನಿವೇಷ್ಪ್ಯಾಯ ಚ ನಮಃ –
ಪಾಗ್‍ಂಸವ್ಯಾಯ ಚ ರಜಸ್ಯಾಯ ಚ ನಮಃ –
ಶುಷ್ಕ್ಯಾಯ ಚ ಹರಿತ್ಯಾಯ ಚ ನಮೋ –
ಲೋಪ್ಯಾಯ ಚೋಲಪ್ಯಾಯ ಚ ನಮ –
ಊರ್ವ್ಯಾಯ ಚ ಸೂರ್ಮ್ಯಾಯ ಚ ನಮಃ –
ಪರ್ಣ್ಯಾಯ ಚ ಪರ್ಣಶದ್ಯಾಯ ಚ –
ನಮೋಪಗುರಮಾಣಾಯ ಚಾಭಿಘ್ನತೇ ಚ ನಮ –
ಆಖ್ಖಿದತೇ ಚ ಪ್ರಖ್ಖಿದತೇ ಚ ನಮೋ –
ವಃ ಕಿರಿಕೇಭ್ಯೋ ದೇವಾನಾಗ್‍ಂ ಹೃದಯೇಭ್ಯೋ ನಮೋ –
ವಿಕ್ಷೀಣಕೇಭ್ಯೋ ನಮೋ ವಿಚಿನ್ವತ್ಕೇಭ್ಯೋ ನಮ –
ಆನಿರ್‍ಹತೇಭ್ಯೋ ನಮ ಆಮೀವತ್ಕೇಭ್ಯಃ|| 9 ||

ರುದ್ರಗೀತೆ – 09

ನಮಿಪೆ ಉಪ್ಪಿನ ದಾರಿಯವನಿಗೆ ನಮಿಪೆ ಸವೆದಿಹ ದಾರಿಯವಗೆ|
ನಮಿಪೆ ಕ್ಲಿಷ್ಟದ ಕಲ್ಲ ಮಾರ್ಗಕೆ ನಮಿಪೆ ಸುಖಕರ ವಾಸದೆಡೆಗೆ||1||

ನಮಿಪೆ ಜಡೆಯನು ಧರಿಸಿದವನಿಗೆ ನಮಿಪೆ ಭಕ್ತರ ಎದುರಿನವಗೆ|
ನಮಿಪೆ ದನಗಳ ಹಟ್ಟಿ ಕೊಠಡಿಗೆ ನಮಿಪೆ ಹಯಗಳ ಲಾಯಗಳಿಗೆ||2||

ನಮಿಪೆ ಎರಗುತ ಒರಗುವವನಿಗೆ ನಮಿಪೆ ಮಾಳಿಗೆ ಮನೆಯವನಿಗೆ|
ನಮಿಪೆ ಮುಳ್ಳಿನ ಬನದಲಿರುವಗೆ ನಮಿಪೆ ಪರ್ವತ ಗುಹೆಯವನಿಗೆ||3||

ನಮಿಪೆ ಆಳದ ನೀರಿನವನಿಗೆ ನಮಿಪೆ ನೀರಿನ ಹನಿಸಮೂಹಕೆ|
ನಮಿಪೆ ಧೂಳಿನ ಒಳಗೆ ಇರುವಗೆ ನಮಿಪೆ ಕಾಣದ ಧೂಳಿನೆಡೆಗೆ||4||

ನಮಿಪೆ ಒಣಗಿದ ದ್ರವ್ಯದವನಿಗೆ ನಮಿಪೆ ಹಸುರಿನ ದ್ರವ್ಯದವಗೆ|
ನಮಿಪೆ ಸಸ್ಯವೆ ಇಲ್ಲದವನಿಗೆ ನಮಿಪೆ ಹುಲ್ಲಿನ ವಿವಿಧ ಕಡೆಗೆ||5||

ನಮಿಪೆ ಪೃಥ್ವಿಯ ವಾಸದವನಿಗೆ ನಮಿಪೆ ಚಂದದ ಅಲೆಯ ನೊರೆಗೆ|
ನಮಿಪೆ ಹಸುರಿನ ಎಲೆಯ ರಾಶಿಗೆ ನಮಿಪೆ ಒಣಕಲು ಎಲೆಯ ಜಗಕೆ||6||

ನಮಿಪೆ ಆಯುಧ ಎತ್ತಿದವರಿಗೆ ನಮಿಪೆ ಎದುರಲಿ ಹೊಡೆಯುವರಿಗೆ|
ನಮಿಪೆ ಗಾಯವ ಗೊಳಿಸುವವರಿಗೆ ನಮಿಪೆ ತೀಷ್ಣದಿ ತಿವಿಯುವರಿಗೆ ||7||

ನಮಿಪೆ ಸಂಪದ ಸುರಿಸುವವರಿಗೆ ನಮಿಪೆ ಹೃದಯದ ದೈವಗಳಿಗೆ|
ನಮಿಪೆ ಕ್ಷೀಣವ ಹೊಂದದವರಿಗೆ ನಮಿಪೆ ವಿಶ್ವದ ರೂಪಗಳಿಗೆ || 8 ||

ಸೂ:

ರುದ್ರ ಗೀತೆ : (ಅನುವಾಕ – 09), 5.0 out of 10 based on 1 rating
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಶ್ರೀಅಕ್ಕ°

  ಶರ್ಮಪ್ಪಚ್ಚಿ, ಈ ಅನುವಾಕದ ಅನುವಾದಲ್ಲಿ ಶಿವ° ಎಲ್ಲಾ ದಿಕ್ಕೆ, ಎಲ್ಲಾ ರೂಪಲ್ಲಿ, ಎಲ್ಲಾ ರೀತಿಲಿ ಇರ್ತ ಹೇಳ್ತ ವಿವರಣೆ ಲಾಯ್ಕಾಯಿದು. ಪ್ರತಿಯೊಂದು ಸಾಲಿಲೂ ಇಪ್ಪ ಶಿವನ ಮಹಿಮೆ ಅರ್ಥ ಆದಪ್ಪಗ ರುದ್ರದ ಪೂರ್ಣ ಸಾರ ಎಲ್ಲೋರಿಂಗೂ ಸಿಕ್ಕುಗು ಅಲ್ಲದಾ?

  [Reply]

  VN:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ಧನ್ಯವಾದ ಶರ್ಮಪ್ಪಚ್ಚಿ.ಆಯುಧ ಎತ್ತಿ ಗಾಯಗೊಳಿಸುವವ೦ಗೂ ನಮಿಸೆಕ್ಕು,ಎ೦ತಾ ಭಾವನೆ ,ಅಲ್ಲದೋ?ವಿಶ್ವರೂಪದ ಕಲ್ಪನೆಯೇ ಸರಿ.

  [Reply]

  VA:F [1.9.22_1171]
  Rating: 0 (from 0 votes)
 3. ಡಾಮಹೇಶಣ್ಣ
  ಮಹೇಶ

  ಶರ್ಮಪ್ಪಚ್ಚಿ,
  ಕೊನೆಯ ಸಾಲಿನ (ಆನಿರ್‍ಹತೇಭ್ಯೋ ನಮ ಆಮೀವತ್ಕೇಭ್ಯಃ) ಅರ್ಥ ಬಿಟ್ಟು ಹೋತೋ ಹೇಳಿ ಕಾಣ್ಟು. ಒ೦ದರಿ ನೋಡಿ ಹೇಳ್ತೀರೊ?

  [Reply]

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ಮಹೇಶ,
  ತಿಳಿಸಿದ್ದಕ್ಕೆ ಧನ್ಯವಾದಂಗೊ.
  ಬಹುಶಃ ಅವು ಅನುವಾದ ಮಾಡುವಾಗ ಬಿಟ್ಟು ಹೋಗಿರೆಕು. ಪುಸ್ತಕಲ್ಲಿ ಇಲ್ಲೆ.
  [ಅನಿರ್ಹತರು ಎಂದರೆ, ಪಾಪಿಗಳೆಂದು ನಿಶ್ಚಯಿಸಲ್ಪಟ್ಟವರನ್ನು ಮಾತ್ರವೇ ಶಿಕ್ಷೆಗೆ ಒಳ ಪಡಿಸುವವರು.
  ಆಮೀವತ್ಕರೆಂಬವರು ಪಾಪಿಗಳನ್ನು ಅತ್ತಿತ್ತ ಓಡಾಡಿಸುತ್ತಾ ಅವರುಗಳು ತಪ್ಪಿಸಿಕೊಂಡು ಓಡಿ ಹೋಗದಂತೆ ಎಲ್ಲೆಲ್ಲಿಯೂ ಕಾವಲಿರುವವರು] ಓದುವವಕ್ಕೆ ಅರ್ಥ ಮಾಡ್ಲೆ ಬೇಕಾಗಿ “ರುದ್ರ ಭಾಷ್ಯ ಪ್ರಕಾಶ” ಈ ಪುಸ್ತಕಂದ ಅಯ್ದ ಭಾಗವ ಇಲ್ಲಿ ಕೊಡ್ತಾ ಇದ್ದೆ.

  [Reply]

  VA:F [1.9.22_1171]
  Rating: 0 (from 0 votes)
 4. ಬಾಲಣ್ಣ
  ಬಾಲಣ್ಣ

  ಕೊನೆಯ ಅನುವಾಕಲ್ಲಿ, -ವಿಕ್ಶೀಣಕೇಭ್ಯೋ… ಂದ ಎಲ್ಲಾ ಶಬ್ದಂಗೊಕ್ಕೂ ” ದೆವಾನಾಗುಂ ಹೄದಯೇಭ್ಯೋ..” ಸೇರುಸಿ ಕಲುಶಿದ್ದಿದ್ದವು ಎಂಗೊಗೆ, ಪೆರಡಾಲಲ್ಲಿ.

  [Reply]

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ಅಪ್ಪು.
  ಹಾಂಗೊಂದು ಕ್ರಮ ಇದ್ದು ಹೇಳಿ ಆನು ಕೇಳಿದ್ದೆ.
  ಧನ್ಯವಾದಂಗೊ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುಟ್ಟಬಾವ°ಶಾಂತತ್ತೆಶುದ್ದಿಕ್ಕಾರ°ದೊಡ್ಮನೆ ಭಾವವಿಜಯತ್ತೆಕೊಳಚ್ಚಿಪ್ಪು ಬಾವಕಜೆವಸಂತ°ಶೇಡಿಗುಮ್ಮೆ ಪುಳ್ಳಿರಾಜಣ್ಣನೆಗೆಗಾರ°ಕಳಾಯಿ ಗೀತತ್ತೆಅನುಶ್ರೀ ಬಂಡಾಡಿಬೋಸ ಬಾವಜಯಗೌರಿ ಅಕ್ಕ°ಕಾವಿನಮೂಲೆ ಮಾಣಿವೆಂಕಟ್ ಕೋಟೂರುತೆಕ್ಕುಂಜ ಕುಮಾರ ಮಾವ°ಮುಳಿಯ ಭಾವದೇವಸ್ಯ ಮಾಣಿಗಣೇಶ ಮಾವ°ಪಟಿಕಲ್ಲಪ್ಪಚ್ಚಿಕೆದೂರು ಡಾಕ್ಟ್ರುಬಾವ°ವೇಣಿಯಕ್ಕ°ಮಂಗ್ಳೂರ ಮಾಣಿಶರ್ಮಪ್ಪಚ್ಚಿಮಾಷ್ಟ್ರುಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ