ಸಣ್ಣಸಂಕೊಲೆ(shortlink):
ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
ಆತ್ಮೀಯ ಬೈಲಿಂಗೆ,
ಡಾ| ಶಾಮ ಭಟ್ಟ, ಮಡ್ವ ಇವು ಬರದ “ಸೂಕ್ತ ಗೀತಾಂಜಲಿ” ಪುಸ್ತಕಂದ “ ಋಗ್ವೇದೋಕ್ತಂ ದೇವೀ ಸೂಕ್ತಮ್“ ನ ಇಲ್ಲಿ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.
ಶರ್ಮಪ್ಪಚ್ಚಿ
~~~
ಋಗ್ವೇದೋಕ್ತಂ ದೇವೀ ಸೂಕ್ತಮ್
ಧ್ಯಾನಮ್
ಓಂ ಸಿಂಹಸ್ಥಾ ಶಶಿಶೇಖರಾ ಮರಕತ ಪ್ರಖ್ಯ್ಚೆತುರ್ಭಿಭುಜೈಃ
ಶಂಖಂ ಚಕ್ರಧನುಶ್ಚರಾಂಶ್ಚ ದಧತೀ ನೇತ್ರೈಸ್ತ್ರಿಭಿಶ್ಯೋಭಿತಾ|
ಆಮುಕ್ತಾಂಗದ ಹಾರಕಂಕಣ ರಣತ್ಕಾಂಚೀರಣನ್ನೂಪುರಾ
ದುರ್ಗಾ ದುರ್ಗತಿಹಾರಿಣೀ ಭವತು ರತ್ನೋಲ್ಲಸತ್ಕುಂಡವಾ||
ಸೂಕ್ತಮ್
ಅಹಂ ರುದ್ರೇಭಿರ್ವಸುಭಿಶ್ಚರಾಮ್ಯಹಮಾದಿತ್ತೈರುತ ವಿಶ್ವ ದೇವೈಃ |
ಅಹಂ ಮಿತ್ರಾವರುಣೋಭಾ ಬಿಭರ್ಮ್ಯಹಮಿಂದ್ರಾಗ್ನೀ ಅಹಮಶ್ವಿನೋಭಾ ||೧||
ಅಹಂ ಸೋಮಮಾಹನಸಂ ಬಿಭರ್ಮ್ಯಹಂ ತ್ವಷ್ಟಾರಮುತ ಪೂಷಣಂ ಭಗಮ್ |
ಅಹಂ ದದಾಮಿ ದ್ರವಿಣಂ ಹವಿಷ್ಮತೇ ಸುಪ್ರಾವ್ಯೇ ಯಜಮಾನಾಯ ಸುನ್ವತೇ ||೨||
ಅಹಂ ರಾಷ್ಟ್ರೀ ಸಂಗಮನೀ ವಸೂನಾಂ ಚಿಕಿತುಷೀ ಪ್ರಥಮಾ ಯಜ್ಞಿಯಾನಾಮ್ |
ತಾಂ ಮಾ ದೇವಾ ವ್ಯದಧುಃ ಪುರುತ್ರಾ ಭೂರಿಸ್ಥಾತ್ರಾಂ ಭೂರ್ಯಾವೇಶಯಂತೀಮ್ ||೩||
ಮಯಾಸೋ ಅನ್ನಮತ್ತಿ ಯೋ ವಿಪಶ್ಯತಿ ಯಃ ಪ್ರಾಣಿತಿ ಯ ಈಂ ಶೃಣೋತ್ಯುಕ್ತಮ್ |
ಅಮಂತವೋ ಮಾಂ ತ ಉಪಕ್ಷಿಯಂತಿ ಶ್ರುಧಿ ಶ್ರುತ ಶ್ರದ್ಧಿವಂ ತೇ ವದಾಮಿ ||೪||
ಅಹಮೇವ ಸ್ವಯಮಿಧಂ ವದಾಮಿ ಜುಷ್ಟಂ ದೇವೇಭಿರುತ ಮಾನುಷೇಭಿಃ |
ಯಂ ಕಾಮಯೇ ತಂ ತಮುಗ್ರಂ ಕೃಣೋಮಿ ತಂ ಬ್ರಹ್ಮಾಣಂ ತಮೃಷಿಂ ತಂ ಸುಮೇಧಾಂ ||೫||
ಅಹಂ ರುದ್ರಾಯ ಧನುರಾತನೋಮಿ ಬ್ರಹ್ಮದ್ವಿಷೇ ಶರವೇ ಹಂತ ವಾ ಉ |
ಅಹಂ ಜನಾಯ ಸಮದಂ ಕೃಣೋಮ್ಯಹಂ ದ್ಯಾವಾ ಪೃಥಿವೀ ಆವಿವೇಷ ||೬||
ಅಹಂ ಸುವೇ ಪಿತರ ಮಸ್ಯ ಮೂರ್ಧನ್ ಮಮ ಯೋನಿರಪ್ಸ್ವಾ ಅಂತಸ್ಸಮುದ್ರೇ |
ತತೋ ವಿತಿಷ್ಠೇ ಭುವನಾನಿ ವಿಶ್ವೋತಾಮೂಂ ದ್ಯಾಂ ವರ್ಷ್ಮಣೋಪಸ್ಪೃಶಾಮಿ ||೭||
ಅಹಮೇವ ವಾತ ಇವ ಪ್ರವಾಮ್ಯಾರಭಮಾಣಾ ಭುವನಾನಿ ವಿಶ್ವಾ |
ಪರೋ ದಿವಾ ಪರ ಏನಾ ಪೃಥಿವ್ಯೈತಾವತೀ ಮಹಿನಾ ಸಂಬಭೂವ ||೮||
ಋಗ್ವೇದೋಕ್ತ ದೇವೀ ಸೂಕ್ತ (ಕನ್ನಡ ಗೀತೆ)
ಧ್ಯಾನ
ಸಿಂಹವೇರಿದ ಶಶಿಯ ಧರಿಸಿದ ಪ್ರಭಾರತ್ನದ ನಾಲ್ಕು ಭುಜದ
ಶಂಖ ಚಕ್ರವ ಬಿಲ್ಲು ಬಾಣವ ಧರಿಸಿ ಶೋಭಿತೆ ಮೂರು ನಯನ
ಹಾರಕಂಕಣ ಮುಕ್ತ ಫಲದಲಿ ಗೆಜ್ಜೆ ದನಿಯಲಿ ಪಾದಯುಗಳ
ರತ್ನ ಕುಂಡಲಹೊಳೆವ ಚೆಲುವಿನ ದುರ್ಗೆ ದುಸ್ತರ ತರಣಗೊಳಿಸು
ಸೂಕ್ತ
ನಾನು ಚಲಿಪೆನು ರುದ್ರ ವಸುಗಳು ವಿಶ್ವದೇವಾದಿತ್ಯರೊಡನೆ
ಮಿತ್ರ ವರುಣರ ಅಗ್ನಿ ಇಂದ್ರರ ಪೋಷಿಸಿರುವೆನು ಅಶ್ವಿನಿಯನು ||೧||
ನಾನು ಧರಿಸಿಹೆ ಸೋಮ ರಸವನು; ತ್ವಷ್ಟ, ಭಗ, ಪೂಷನನು ಸಹಿತ
ದೇವ ತೃಪ್ತಿಗೆ ಸೋಮ ಹವಿಸನ್ನೀವ ಹಿರಿಯಗೆ ಸಿರಿಯನೀವೆ ||೨||
ನಾನೆ ಈಶ್ವರಿ ನಾನೆ ದಾನಿಯು ನಾನೆ ಜ್ಞಾನಿಯು ನಾನೆ ಪ್ರಥಮ
ವಿವಿಧ ರೂಪದಿ ಜೀವ ತಳೆದಿಹೆ ಸಕಲ ದೇವರ ಪೂಜೆಯಿಂದ ||೩||
ಅನ್ನ ಉಂಬರು ಕಣ್ಣು ಕಾಂಬರು ಉಸಿರುಗೊಂಬರು ನನ್ನ ದಯದಿ
ನನ್ನ ಶಕ್ತಿಯ ನೆನೆಯೆ ಕ್ಷಯಿಸರು ಕೇಳು ಜ್ಞಾನಿಯೆ ಸತ್ಯದಿರವ ||೪||
ತತ್ವವೀತೆರೆ ಪೇಳುತಿರುವೆನು ದೇವ ಮಾನವ ಸೇವ್ಯಳಾಗಿ
ನನ್ನ ಪ್ರೀತಿಪರನ್ನು ಪೊರೆವೆನು ಬ್ರಹ್ಮ, ಮೇಧಾ, ಋಷಿಗಳಾಗಿ ||೫||
ಬ್ರಹ್ಮ ದ್ವೇಷದ ಅಸುರನಾಶಕೆ ರುದ್ರಧನುವಿನ ಹೆದೆಯಲಿರುವೆ
ಭೂಮಿ ಸ್ವರ್ಗದ ಒಳಗೆ ಸೇರುತ ಜನರ ರಕ್ಷಣೆ ಮಾಡುತಿರುವೆ ||೬||
ಭೂಮಿ ಮೇಗಡೆ ಸ್ವರ್ಗ ರಚಿಸಿಹೆ ಕಡಲ ಮಧ್ಯದಿ ಉಗಮಗೊಂಡೆ
ವಿವಿಧ ರೂಪದಿ ಜೀವ ವ್ಯಾಪಿಸಿ ತನುವ ಹೊಂದುತ ಸುಖವ ಕೊಡುವೆ ||೭||
ವಿಶ್ವದೆಲ್ಲೆಡೆ ವಾಯು ರೂಪದಿ ಲೋಕ ಕಾರಣಳಾಗಿ ಚಲಿಪೆ
ದಿವಿಗು ಭುವಿಗೂ ಮೀರಿ ನಿಂತಿಹೆ ಮಹಿಮೆ ಈತೆರ ಮೆರೆಯುತಿರುವೆ ||೮||
ಓಂ ಶಾಂತಿಃ ಶಾಂತಿಃ ಶಾಂತಿಃ
ಸಂಗ್ರಹಃ -ಸೂಕ್ತ ಗೀತಾಂಜಲಿ- ಡಾ| ಮಡ್ವ ಶಾಮ ಭಟ್ಟ
ಸೂ:
ವೇದಮೂರ್ತಿ ತುಪ್ಪೆಕಲ್ಲು ಸಹೋದರರ “ಋಗ್ವೇದೋಕ್ತಂ ದೇವೀ ಸೂಕ್ತಮ್” ಧ್ವನಿಮುದ್ರಿಕೆಯ ಬೈಲಿನ ಚೆನ್ನೈಬಾವ ಕಳುಸಿಕೊಟ್ಟಿದವು. ಬೈಲಿನ ಕೇಳುಗರಿಂಗಾಗಿ ಇಲ್ಲಿ ನೇಲುಸಿದ್ದು:
ಇಬ್ರಿಂಗೂ ಧನ್ಯವಾದಂಗೊ.
Audio clip: Adobe Flash Player (version 9 or above) is required to play this audio clip. Download the latest version here. You also need to have JavaScript enabled in your browser.
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಶರ್ಮಪ್ಪಚ್ಚಿ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
ಗೋಪಾಲಣ್ಣನ ದೇವೀಮಹಾತ್ಮೆ ಮತ್ತು ಇದರ ಜೊತೆ ಜೊತೆಗೆ ನೋಡಿ ತುಂಬಾ ಖುಷಿ ಆತು… ಧನ್ಯವಾದಂಗ…
[ಉತ್ತರುಸಿ]
ಮಡ್ವದಜ್ಜ° ಬರದ್ದು ಲಾಯಕ ಆಯ್ದು ಶರ್ಮಪ್ಪಚಿ ಬೈಲಿಂಗೆ ಅದರ ಬರದರ್ಪಿಸಿದ್ದೂ ಲಾಯಕ ಆಯ್ದು. ಧನ್ಯವಾದಂಗೊ.
[ಉತ್ತರುಸಿ]
(ಬ್ರಹ್ಮ ದ್ವೇಷದ ಅಸುರನಾಶಕೆ ರುದ್ರಧನುವಿನ ಹೆದೆಯಲಿರುವೆ
ಭೂಮಿ ಸ್ವರ್ಗದ ಒಳಗೆ ಸೇರುತ ಜನರ ರಕ್ಷಣೆ ಮಾಡುತಿರುವೆ..)
ಅಪ್ಪಚ್ಚೀ, ಇದುವೆ ಬೇಕಾದ್ದದು ಈಗ!
ಈಶ್ವರಿಯೂ ದಾನಿಯೂ ಜ್ಞಾನಿಯೂ ಎಲ್ಲ ದೇವರುಗಳ ದೇವಿಯೂ ಆಗಿಪ್ಪ ಶ್ರೀದೇವಿ ಬ್ರಹ್ಮದ್ವೇಷಿಗಳ ನಿಗ್ರಹಿಸಿ ಸಕಲ ಸಜ್ಜನರ ರಕ್ಷಣೆ ಮಾಡಲಿ ಹೇಳಿ ಪ್ರಾರ್ಥನೆ.
ಡಾಕ್ಟ್ರು ಶಂಬಟ್ಟಜ್ಜ ಅನುವಾದಿಸಿದ ಎಲ್ಲಾ ಸೂಕ್ತಂಗಳನ್ನೂ ಬೈಲಿಲ್ಲಿ ಪ್ರಸ್ತುತಪಡಿಸಿದ್ದು ‘ಸೂಕ್ತ’ ಹೇಳಿ ಇತ್ಲಾಗಿಂದ ಒಪ್ಪಿತ್ತು..
[ಉತ್ತರುಸಿ]