ಋಗ್ವೇದೋಕ್ತಂ ರಾತ್ರೀ ಸೂಕ್ತಮ್

November 21, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ಸೂಕ್ತ ಗೀತಾಂಜಲಿ” ಪುಸ್ತಕಂದ ಋಗ್ವೇದೋಕ್ತಂ ರಾತ್ರೀ ಸೂಕ್ತಮ್ ನ ಇಲ್ಲಿ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.

ಶರ್ಮಪ್ಪಚ್ಚಿ
~~~

ಋಗ್ವೇದೋಕ್ತಂ ರಾತ್ರೀ ಸೂಕ್ತಮ್

ಓಂ ರಾತ್ರೀ ವ್ಯಖ್ಯದಾಯತೀ ಪುರುತ್ರಾ ದೇವ್ಯಾ ಅಕ್ಷಭಿಃ |

ವಿಶ್ವಾ ಅಧಿ ಶ್ರೀಯೋSಧಿತ ||೧||

ಓರ್ವಪ್ರಾ ಅಮರ್ತ್ಯಾ ನಿವತೋ ದೇವ್ಯು ಉದ್ವತಃ |

ಜ್ಯೋತಿಷಾ ಬಾಧತೇ ತಮಃ ||೨||

ನಿರು ಸ್ವಸಾರಮಸ್ಕೃತೋಷಸಂ ದೇವ್ಯಾಯತೀ |

ಅಪೇದು ಹಾಸತೇ ತಮಃ ||೩||

ಸಾನೋ ಅದ್ಯ ಯಸ್ಯಾ ವಯಂ ನಿ ತೇ ಯಾಮನ್ನ ವಿಕ್ಷ್ಮಹಿ |

ವೃಕ್ಷೇ ನ ವಸತಿಂ ವಯಃ ||೪||

ನಿ ಗ್ರಾಮಾಸೋ ಅವಿಕ್ಷತ ನಿ ಪದ್ವಂತೋ ನಿ ಪಕ್ಷಿಣಃ |

ನಿ ಶ್ಯೇನಾಸಶ್ಚಿದರ್ಥಿನಃ ||೫||

ಯಾವಯಾ ವ್ಯಕ್ಯಾ ಅಂವೃಕಂ ಯವಯಸ್ತೇನ ಮೂರ್ಮ್ಯೇ |

ಅಥಾ ನಃ ಸುತರಾ ಭವ ||೬||

ಉಪ ಮಾ ಪೇಪಿಶತ್ತಮಃ ಕೃಷ್ಣಂ ವ್ಯಕ್ತಮಸ್ಥಿತ |

ಉಷ ಋಣೇವ ಯಾತಯ ||೭||

ಉಪ ತೇ ಗಾ ಇವಾಕರಂ ವೃಣೀಷ್ಟ ದುಹಿತರ್ದಿವಃ |

ರಾತ್ರಿ ಸ್ತೋಮಂ ನ ಜಿಗ್ಯುಷೇ ||೮||

ಓಂ ಶಾಂತಿಃ ಶಾಂತಿಃ ಶಾಂತಿಃ

ಋಗ್ವೇದೋಕ್ತ ರಾತ್ರಿ ಸೂಕ್ತ (ಕನ್ನಡ ಗೀತೆ)

ನೋಡುತಿರುವಳು ಎಲ್ಲ ಕಡೆಯಲಿ ರಾತ್ರಿ ದೇವತೆ ಬಂದು ನಿಂದು

ತಾರೆ ನಯನಗಳಿಂದ ಕಾಂಬಳು ಸಕಲ ಶೋಭನ ಚೆಲುವ ಮಿಂದು ||೧||

ಬಳ್ಳಿಮರಗಳ ಮುಚ್ಚಿ ಮೆರೆವಳು ಅಂತರಿಕ್ಷದಿ ಕತ್ತಲಿಂದ

ತೇಜವಮೃತಕೆ ಧಕ್ಕೆ ಬರುವುದು ತಾರೆ ಬೆಳಕಿನ ಬಾಧೆಯಿಂದ ||೨||

ಸರ್ವ ವ್ಯಾಪ್ತಿಯ ರಾತ್ರಿದೇವತೆ ತಂಗಿ ಉಷೆಯನು ಕರೆಯುತಿಹಳು

ಉಷೆಯ ಆಗಮ ಸುಗಮಗೊಳ್ಳಲು ಕತ್ತಲೆತ್ತಲು ಕಾಣ ಸಿಗದು ||೩||

ರಾತ್ರಿ ದೇವತೆ ಕೃಪೆಯ ನೆರಳಲಿ ಮನೆಯಲುಳಿವೆವು ನಾವು ಸುಖದಿ

ಹಕ್ಕಿ ಕುಲಗಳು ರಾತ್ರಿ ಜಾವದಿ ಮರದಿ ಆಶ್ರಯ ಪಡೆವ ತೆರದಿ ||೪||

ನಿದ್ದೆಗೊಂಬರು ರಾತ್ರಿ ಬಂದಿರೆ ಜನರು, ಗ್ರಾಮದ ಕುದುರೆ, ಹಸುವು

ಪಕ್ಷಿ ಪುಂಜವು ಶೀಘ್ರಗಮನದ ಗಿಡುಗ ಹದ್ದಿನ ಸಹಿತ ಕುಲವು ||೫||

ರಾತ್ರಿ ದೇವತೆ ನಮ್ಮ ಹಿಂಸಿಪ ದುಷ್ಟ ಶಕ್ತಿಯ ದೂರಗೊಳಿಸು

ರಕ್ಷಿಸೆಮ್ಮನು ಕಳ್ಳರಿಂದಲೆ ಕ್ಷೇಮವಾಗಲಿ ನಮ್ಮ ಬದುಕು ||೬||

ಕಪ್ಪು ಬಣ್ಣದ ಕತ್ತಲಿಂದಲೆ ಮುತ್ತಿಕೊಂಡಿದೆ ಅಂಧಕಾರ

ಮುಕ್ತಿಗೊಳಿಸೈ ದೇವಿ ಉಷೆಯೇ ಸಾಲಿಗನು ಹಣ ಕೊಡುವ ತೆರದಿ ||೭||

ಹಾಲು ಬಯಸುತ ಸೂರ್ಯ ಪುತ್ರಿಯೆ ಸಾರುತಿರುವೆನು ದನದ ಬಳಿಗೆ

ಶತ್ರು ಗೆಲ್ಲಲು ನನ್ನ ಸ್ತೋತ್ರದ ಹವಿಸನರ್ಚಿಸುತಿರುವೆ ನಿನಗೆ ||೮||

ಸಂಗ್ರಹ: ಸೂಕ್ತ ಗೀತಾಂಜಲಿ-ಡಾ| ಮಡ್ವ ಶಾಮ ಭಟ್ಟ

ಸೂ:
ವೇದಮೂರ್ತಿ ತುಪ್ಪೆಕಲ್ಲು ಸಹೋದರರ
ಋಗ್ವೇದೋಕ್ತಂ ರಾತ್ರೀ ಸೂಕ್ತಮ್” ಧ್ವನಿಮುದ್ರಿಕೆಯ ಬೈಲಿನ ಚೆನ್ನೈಬಾವ ಕಳುಸಿಕೊಟ್ಟಿದವು. ಬೈಲಿನ ಕೇಳುಗರಿಂಗಾಗಿ ಇಲ್ಲಿ ನೇಲುಸಿದ್ದು:
ಇಬ್ರಿಂಗೂ ಧನ್ಯವಾದಂಗೊ.

[audio:audio/RUGVEDOKTA_RATRI_SOOKTAM.mp3] ಋಗ್ವೇದೋಕ್ತಂ ರಾತ್ರೀ ಸೂಕ್ತಮ್, 5.0 out of 10 based on 1 rating

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಧನ್ಯವಾದ ಅಪ್ಪಚ್ಚಿಗೆ. ಅರ್ಥಸಹಿತ ಸೂಕ್ತ ಓದಿಯಪ್ಪಗ ನಾವೆಂತರ ಹೇಳಿದ್ದು / ಓದಿದ್ದು ಹೇಳಿ ಸರೀಯಾಗಿ ಅರ್ಥ ಆತು. ಬೈಲಿಂಗೆ ಒಳ್ಳೆ ಕಾರ್ಯ ಅಪ್ಪಚ್ಚಿದು ಹೇಳಿ ಅಭಿನಂದನೆ.

  [Reply]

  VA:F [1.9.22_1171]
  Rating: 0 (from 0 votes)
 2. ಜಯಶ್ರೀ ನೀರಮೂಲೆ
  jayashree.neeramoole

  ಹರೇ ರಾಮ ಅಪ್ಪಚ್ಚಿ,
  ನಿದ್ದೆ ಹೇಳುದು ನಮ್ಮ ಜೀವನಲ್ಲಿ ಎಷ್ಟು ಮುಖ್ಯ… ನಿದ್ರಾದೇವಿಗೆ ಎಷ್ಟು ನಮನ ಸಲ್ಲಿಸಿರೂ ಸಾಲ… ೨೦೧೦ ಚಾತುರ್ಮಾಸ್ಯದ ಪ್ರವಚನಲ್ಲಿ ಗುರುಗೋ ನಿದ್ರೆಯ ಮಹತ್ವದ ಬಗ್ಗೆ ತುಂಬಾ ಲಾಯಕಲ್ಲಿ ಹೇಳಿದ್ದವು… ಅದು ನೆನಪಾತು…ಧನ್ಯವಾದ ಅಪ್ಪಚ್ಚಿಗೆ…

  [Reply]

  VA:F [1.9.22_1171]
  Rating: 0 (from 0 votes)
 3. ಅಡಕೋಳಿ
  ಅಡಕೋಳಿ

  ಹರೇ ರಾಮ,
  ಬಲು ದಿನದ ನಂತರ ಒಪ್ಪಣ್ಣನಲ್ಲಿ ಬಪ್ಪುಲೆ ಖುಶೀ ಆಗ್ತು. ಶರ್ಮಣ್ಣ ಧನ್ಯವಾದ

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೆದೂರು ಡಾಕ್ಟ್ರುಬಾವ°ಅನಿತಾ ನರೇಶ್, ಮಂಚಿಶೇಡಿಗುಮ್ಮೆ ಪುಳ್ಳಿಹಳೆಮನೆ ಅಣ್ಣಅನು ಉಡುಪುಮೂಲೆಪುಣಚ ಡಾಕ್ಟ್ರುದೊಡ್ಡಮಾವ°ಡೈಮಂಡು ಭಾವಸರ್ಪಮಲೆ ಮಾವ°ನೆಗೆಗಾರ°ಪೆಂಗಣ್ಣ°ಕೇಜಿಮಾವ°ದೇವಸ್ಯ ಮಾಣಿಯೇನಂಕೂಡ್ಳು ಅಣ್ಣವೆಂಕಟ್ ಕೋಟೂರುವಿನಯ ಶಂಕರ, ಚೆಕ್ಕೆಮನೆಎರುಂಬು ಅಪ್ಪಚ್ಚಿಅಜ್ಜಕಾನ ಭಾವವಿದ್ವಾನಣ್ಣಜಯಶ್ರೀ ನೀರಮೂಲೆಸಂಪಾದಕ°ತೆಕ್ಕುಂಜ ಕುಮಾರ ಮಾವ°ಕೊಳಚ್ಚಿಪ್ಪು ಬಾವಗೋಪಾಲಣ್ಣಶಾಂತತ್ತೆದೊಡ್ಮನೆ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ