Oppanna.com

ಸಂಕ್ಷಿಪ್ತ ಗಣಪತಿ ಹೋಮ

ಬರದೋರು :   ಬಟ್ಟಮಾವ°    on   06/09/2010    32 ಒಪ್ಪಂಗೊ

ಬಟ್ಟಮಾವ°

ಕಲ್ಪೋಕ್ತ ವಿಧಿಲಿ ಗಣಪತಿ ಹೋಮ
ಜನ್ಮಾಷ್ಟಮಿ ಕಳುದು ಎಂಟು ದಿನ ಅಪ್ಪಗ ಅಮಾವಾಸ್ಯೆ, ನಾಲ್ಕರಲ್ಲಿ ಚೌತಿ (ಅಷ್ಟಮಿ ಕೈಂಞೊಟ್ಟು ಎಟ್ಟೊಡು ಬಾವು, ನಾಲೊಡು ಚೌತಿ!

ಪ್ರತೀ ವರ್ಷದ ಹಾಂಗೆ ಈ ವರ್ಷವೂ ಗಣಪತಿಯ ಆರಾಧನೆ ತುಂಬಾ ಗೌಜಿಲಿ ಮಾಡುವ ತಯಾರಿ ಕಾಣ್ತಾ ಇದ್ದು. ಹಾಂಗೇ ನಮ್ಮ ಬೈಲಿಲಿಯೂ ಗಣಪತಿ ಹೋಮ ಆಯೆಕ್ಕು ಹೇಳಿಗೊಂಡು ನಮ್ಮ ಗುರಿಕ್ಕಾರ್ರು ಹೇಳಿದವು..
ಬೈಲಿಲಿ ಪ್ರತಿಯೊಬ್ಬನೂ ಗಣಪತಿ ಹೋಮ ಮಾಡೆಕ್ಕು ಹೇಳಿ ಬಟ್ಟ ಮಾವ° ಹೇಳಿದವು. ಹಾಂಗೇ ಸೂರ್ಯಾಸ್ತ ಆದ ಕೂಡಲೇ ಚಂದ್ರೋದಯದ ಮೊದಲು ಹೋಮ ಆಯೆಕ್ಕು ಹೇಳಿ ಜೋಯಿಷಪ್ಪಚ್ಚಿ ಹೇಳಿದವು.
ಬಟ್ಟಮಾವನ ಹತ್ತರೆ ಸಂಕ್ಷಿಪ್ತವಾಗಿ ಮಾಡ್ತ ಬಗೆ ಎಂತಾರು ಇದ್ದೋ? ಹೇಳಿ ಕೇಳಿದೆ. ಅದಕ್ಕೆ ಓ ಹೀಂಗೆ ಮಾಡ್ಳಕ್ಕು ಹೇಳಿ ವಿವರಣೆ ಕೊಟ್ಟವು.
ನಮ್ಮ ಅಜ್ಜ  ಹಿಂದಾಣ ಕಾಲಲ್ಲಿ ಇರುಳಪ್ಪಗ ಬಾವಡೆಲಿ ಅಥವಾ ಒಲೆಲಿ ಇಪ್ಪ ಅಗ್ನಿಯ ಮೂಲಕ ಹೋಮ ಮಾಡಿಗೊಂಡು ಇತ್ತವು. ಹೋಮಲ್ಲಿ ಆಹುತಿಗೆ ಅಷ್ಟದ್ರವ್ಯ, ಮೋದಕ, ಪಚ್ಚಪ್ಪ ಮಾಡಿಗೊಂಡು ಇತ್ತವು.
ಕಲ್ಪೋಕ್ತ ವಿಧಿಲಿ ಗಣಪತಿ ಹೋಮ ಮಾಡಿ ಹೇಳಿ ಬಟ್ಟಮಾವ° ಹೇಳಿದವು..
ಬಟ್ಟಮಾವ° ಸೂಕ್ಷ್ಮಲ್ಲಿ ಹೇಳಿದ ಕ್ರಮಂಗಳ ಇಲ್ಲಿ ಬರದು ನಿಂಗೊಗೆ ತೋರುಸುತ್ತಾ ಇದ್ದೆ. ಸಾಧ್ಯ ಆದರೆ ಈ ಚೌತಿಲಿ ಗೆಣವತಿಯ ಒಂದರಿ ನೆಂಪು ಮಾಡಿಗೊಳಿ!
ಹರೇರಾಮ

ಬೇಕಪ್ಪ ಸಾಮಾನುಗೊ:

  • ಬೆಣ್ತಕ್ಕಿ – 1 ಸೇರು
  • ತೆಂಗಿನ ಕಾಯಿ -4
  • ವೀಳ್ಯದ ಎಲೆ  – ಒಂದು ಕೌಳೆ
  • ಅಡಕ್ಕೆ – 2
  • ಗೋಟು ಕಾಯಿ – 1
  • ಮುಷ್ಟಗೆ – 1 ಹೆಡಗೆ
  • ದರ್ಭೆ – 1 ಹಿಡಿ ಅಪ್ಪಷ್ಟು
  • ಶೇಡಿಹೊಡಿ / ಸಿಗ್ತೆ ಹೊಡಿ  – 100 ಗ್ರಾಂ
  • ಕರಿಕ್ಕೆ – ಅಂದಾಜು ೨೫ (ಆಹುತಿಗೆ)
  • ಹೂಗಿನ ಹರಿವಾಣ – ಹೂಗು, ತೊಳಶಿ, ಗಂಧ, ಅಕ್ಷತೆ..
  • ಚೆಂಬು, ಕೌಳಿಗೆ, ಸಕ್ಕಣ (ಆಚಮನ ಮಾಡ್ಲೆ)
  • ದೀಪ, ಬತ್ತಿ, ಎಣ್ಣೆ, ಊದುಬತ್ತಿ, ಕರ್ಪೂರ

ಅಷ್ಟದ್ರವ್ಯ ಸಾಮಾನುಗೊ:

  1. ಹೊದಳು –  ಒಂದು ಕಟ್ಟ (100 ಗ್ರಾಂ)
  2. ಅವಲಕ್ಕಿ – ಒಂದು ಕಟ್ಟ (ಕಾಲು ಕಿಲ)
  3. ಬೆಲ್ಲ – 1 ಕಿಲ
  4. ಕಬ್ಬು- ಎಂಟು ಗೆಂಟು
  5. ದನದ ತುಪ್ಪ- 1 ಕುಡ್ತೆ
  6. ಜೇನ – 1 ಕುಡ್ತೆ
  7. ಬಾಳೆ ಹಣ್ಣು – 8
  8. ಎಳ್ಳು – ಒಂದು ಹಿಡಿ (50 ಗ್ರಾಂ)
ಗಣಹೋಮದ ಮಂಡಲದ ಗೆರೆಗೊ..
ಗಣಹೋಮದ ಮಂಡಲದ ಗೆರೆಗೊ..

ಆರಂಭ:
ದೊಡ್ಡ ಪಾತ್ರಲ್ಲಿ ಅಷ್ಟದ್ರವ್ಯವ ಬೆರುಸಿಗೊಂಡು, ಅದರ ಎರಡು ಸಮಪಾಲು ಮಾಡಿ ಎರಡು ಪಾತ್ರಲ್ಲಿ ಮಡಿಕ್ಕೊಳೆಕ್ಕು.
ಶುದ್ಧ ನೆಲಕ್ಕಲ್ಲಿ ಹೋಮ, ಗೆಣವತಿ, ಸ್ವಸ್ತಿಕ – ಮೂರು ಮಂಡಲಂಗಳ (ಚಿತ್ರಲ್ಲಿ ಇಪ್ಪಹಾಂಗೆ) ಶೇಡಿಹೊಡಿಲಿ ಬರಕ್ಕೊಳೆಕ್ಕು,
ಸ್ವಸ್ತಿಕಕ್ಕೆ ಒಂದು ಸೇರು ಅಕ್ಕಿ, ತೆಂಗಿನ ಕಾಯಿ, ಐದು ಎಲೆ, ಒಂದು ಅಡಕ್ಕೆ, ಒಂದು ಪಾವಲಿ ಮಡುಗೆಕ್ಕು,
ಹೋಮ ಮಂಡಲದ ಮೇಲೆ ಬಾವಡೆ ಮಡುಗೆಕ್ಕು. (ಬಾಳೆದಂಡಿನ ಹೋಮಕುಂಡವೂ ಮಾಡ್ಳಕ್ಕು)
ದೀಪ ಬೆಳಗಿ ಮನೆ ದೇವರ, ಗುರು – ಹಿರಿಯರ ಕಾಲು ಹಿಡ್ಕೊಂಡು ಹೋಮ ಸುರು ಮಾಡೆಕ್ಕು.
ಹೋಮದ ವಿಧಿ:
1. ಆಚಮನ:
ಋಗ್ವೇದಾಯ ಸ್ವಾಹಾ ||
ಯಜುರ್ವೆದಾಯ ಸ್ವಾಹಾ.
ಸಾಮವೇದಾಯ ಸ್ವಾಹಾ ||

ಅಥರ್ವ ವೇದಾಯ ನಮಃ | ಇತಿಹಾಸ ಪುರಾಣೇಭ್ಯೋ ನಮಃ ||
2.  ಶರೀರ ಶುದ್ಧಿ /ಪ್ರೋಕ್ಷಣೆ:
ಎಡದ ಕೈಗೆ ತೊಳಶಿ, ಗಂಧ, ಅಕ್ಷತೆ, ಒಂದು ಸಕ್ಕಣ ನೀರು ಹಾಕಿ ಬಲದ ಕೈ ಮುಚ್ಚಿಗೊಂಡು ಬಲದ  ಮೊಳಪ್ಪಿನ ಮೇಲೆ ಮಡುಗೆಕ್ಕು.
ಓಂ ನಮೋ ನಾರಾಯಣಾಯ |
ಗಂಗಾದ್ಯಾಃ ಸರ್ವೇ ತೀರ್ಥಾಃ ಸನ್ನಿಹಿತಾಃ ಸಂತು ||

ತಚ್ಚಂಯೋರಾವೃಣೀಮಹೇ| ಗಾತುಂ ಯಜ್ಞಾಯ | ಗಾತುಂ ಯಜ್ಞಪತಯೇ ||
ದೈವೀ ಸ್ವಸ್ತಿರಸ್ತುನಃ || ಸ್ವಸ್ತಿರ್ಮಾನುಷೇಭ್ಯಃ ||

ಊರ್ಧ್ವಂ ಜಿಗಾತು ಭೇಷಜಂ | ಶನ್ನೋ ಅಸ್ತು  ದ್ವಿಪದೇ | ಶಂಚತುಷ್ಪದೇ ||

ಓಂ ಶಾಂತಿಃ ಶಾಂತಿಃ ಶಾಂತಿಃ ||
– ಹೇಳಿ ಹೇಳಿಗೊಂಡು ಕೈಲಿ ಇಪ್ಪ ನೀರಿನ ತೊಳಶಿ ಎಲೆಲಿ ನಮ್ಮ ಮೇಲಂಗೆ ಪ್ರೋಕ್ಷಣೆ ಮಾಡಿಗೊಳೆಕ್ಕು.
3. ಜಲ ಶುದ್ಧಿ:
ನೀರಿನ ಕೌಳಿಗೆಗೆ – ತೊಳಶಿ, ಗಂಧ, ಅಕ್ಷತೆ – ಹಾಕಿ ಕೌಳಿಗೆಯ ಮೇಲೆ ಬಲದ ಕೈ ಮುಚ್ಚಿಗೊಂಡು ಈ ಕೆಳಾಣ ಶ್ಲೋಕ ಹೇಳೆಕ್ಕು:
ಕಲಶಸ್ಯ ಮುಖೇ ವಿಷ್ಣುಃ ಕಂಠೇ ರುದ್ರ ಸಮಾಶ್ರಿತಃ |
ಮೂಲೇ ತತ್ರ ಸ್ಥಿತೋ ಬ್ರಹ್ಮಾ ಮಧ್ಯೇ ಮಾತೃಗಣಾ ಸ್ಮೃತಾಃ ||

ಕುಕ್ಷೌತು ಸಾಗರಾಃ ಸರ್ವೇ ಸಪ್ತ ದ್ವೀಪಾ ವಸುಂಧರಾ |
ಋಗ್ವೇದೋಥ ಯಜುರ್ವೇದಃ ಸಾಮವೇದೋಹ್ಯಥರ್ವಣಃ ||

ಅಂಗೈಶ್ಚ ಸಹಿತಾಃ ಸರ್ವೇ ಕಲಶಂತು ಸಮಾಶ್ರಿತಾಃ |
ಅತ್ರ ಗಾಯತ್ರೀ ಸಾವಿತ್ರೀ  ಶಾಂತಿಃ ಪುಷ್ಟಿಕರೀ ತಥಾ ||

ಆಯಾಂತು ಮಮ ದೇಹಸ್ಯ ದುರಿತಕ್ಷಯಕಾರಕಾಃ |
ಸರ್ವೇ ಸಮುದ್ರಾಃ ಸರಿತಸ್ತೀರ್ಥಾನಿ ಜಲದಾನದಾಃ ||

ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತೀ |
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||

ಇನ್ನು ಕೈ ಮುಕ್ಕೊಂಡು:
ಕಲಶ ದೇವತಾಭ್ಯೋ ನಮಃ ಸರ್ವೋಪಚಾರ ಪೂಜಾಃ ಸಮರ್ಪಯಾಮಿ ||
4. ಸಂಕಲ್ಪ :
ಶರೀರ ಶುದ್ಧಿಗೆ ತೆಕ್ಕೊಂಡ ಹಾಂಗೇ ಹೂಗು, ಗಂಧ, ಅಕ್ಷತೆ – ಹಿಡ್ಕೊಳ್ಳೆಕ್ಕು (ನೀರು ಹಾಕಲಿಲ್ಲೆ).
ಶುಕ್ಲಾಂಬರಧರಂ ವಿಷ್ಣುಂ ಶಶಿ ವರ್ಣಂ ಚತುರ್ಭುಜಂ |
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ ||

ದೇಶ – ಕಾಲ – ವೆಗ್ತಿ –  ಕಾರ್ಯ – ಈ ನಾಕರ ಸೇರುಸಿಗೊಂಡು ಸಂಕಲ್ಪ ಮಂತ್ರ ರಚನೆ ಮಾಡಿಗೊಳೆಕ್ಕು.
ಪ್ರತಿ ದಿನ/ ಪ್ರತಿ ಪ್ರದೇಶ / ಪ್ರತಿ ಕಾರ್ಯಕ್ಕೆ ಇದು ವಿತ್ಯಾಸ ಆವುತ್ತು. (ಬೈಲಿಂಗೆ ಚೌತಿಗಿಪ್ಪ ಸಂಕಲ್ಪವ ಬರದ್ದು)
ಓಂ  ಸ್ವಸ್ತಿ ||
ಶ್ರೀ ಕೃಷ್ಣ ಕೃಷ್ಣಾದ್ಯ ಭಗವತೋ – ಮಹಾಪುರುಷಸ್ಯ – ವಾಸುದೇವಸ್ಯ – ವಿಷ್ಣೋರಾಜ್ಞಯಾ – ಪ್ರವರ್ತಮಾನಸ್ಯ – ಅದ್ಯಬ್ರಹ್ಮಣೋ – ದ್ವಿತೀಯಪರಾರ್ಧೆ – ಶ್ವೇತವರಾಹ ಕಲ್ಪೇ – ವೈವಸ್ವತ ಮನ್ವಂತರೇ – ಕಲಿಯುಗೇ – ಪ್ರಥಮಪಾದೇ – ಜಂಬೂದ್ವೀಪೇ – ಭಾರತವರ್ಷೇ – ಭರತಖಂಡೇ  – ಮೇರೋರ್ದಕ್ಷಿಣ ಪಾರ್ಶ್ವೇ – ಗೋರಾಷ್ಟ್ರದೇಶೇ – ಗೋಕರ್ಣಮಂಡಲೇ  – ಶಾಲಿವಾಹನಶಕ ವರ್ಷೇ – ಬೌದ್ಧಾವತಾರೆ  – ಪರಶುರಾಮಕ್ಷೇತ್ರೇ – ಶಕಾಬ್ದೆಸ್ಮಿನ್ ವರ್ತಮಾನ ವ್ಯಾವಹಾರಿಕೇ- (ವಿಕೃತಿ)ನಾಮ ಸಂವತ್ಸರೇ -(ದಕ್ಷಿಣ)ಆಯನೇ-(ವರ್ಷ)ಋತೌ- (ಭಾದ್ರಪದ )ಮಾಸೇ-(ಶುಕ್ಲ)ಪಕ್ಷೇ – (ಚತುರ್ಥ್ಯಾಮ್)ತಿಥೌ –  (ಮಂದ)ವಾಸರಯುಕ್ತಾಯಾಂ –
–  (ಗೋತ್ರ) (ನಕ್ಷತ್ರೆ ) (ರಾಶೌ) (ಹೆಸರು)ಶರ್ಮಣೋ  ‘ಮಮ’
– ಜನ್ಮ ರಾಶ್ಯಪೇಕ್ಷಯಾ – ಯೇ ಯೇ ಗ್ರಹಾಃ ಅರಿಷ್ಟ ಸ್ಥಾನೇಷು ಸ್ಥಿತಾಃ ತೇಷಾಂ ಗ್ರಹಾಣಾಂ ಶುಭಏಕಾದಶ ಸ್ಥಾನಫಲಾವಾಪ್ತ್ಯರ್ಥಂ, ಸಮಸ್ತ ಕಾರ್ಯೇಷು ಶ್ರೀ ಮಹಾಗಣಾಧೀಶ್ವರ ಪೂರ್ಣಾನುಗ್ರಹ ಪ್ರಾಪ್ತ್ಯರ್ಥಂ, ಸಮಸ್ತ ದೈವೀ ಸಂಪದಭಿವೃದ್ಯರ್ಥಂ, ಚಿಂತಿತ ಕಾರ್ಯೇಷು ನಿರ್ವಿಘ್ನತಾ ಶೀಘ್ರಮೇವ ಸಮಾಪ್ತ್ಯರ್ಥಂ, ಶ್ರೀ ಮಹಾಗಣಪತಿ ಹೋಮಂ ಕರಿಷ್ಯೇ ||

ಹೇಳಿ ಬಲದ ಕೈಗೆ ಹಾಕಿಗೊಂಡು ಎಡದ ಕೈಲಿ (ಅಥವಾ ಧರ್ಮಪತ್ನಿ) ಒಂದು ಸಕ್ಕಣ ನೀರು ಹಾಕಿ ಗಣಪತಿ ಮಂಡಲಕ್ಕೆ ಹಾಕೆಕ್ಕು.
ಇಂತಾ ರಾಶಿ ನಕ್ಷತ್ರ ಇಪ್ಪಂತಾ ಇಂತಾ ಹೆಸರಿನ ವೆಗ್ತಿ ಆದ ಆನು, ಇಂತಾ ಜಾಗೆಲಿ, ಇಂತಾ ದಿನ ಇಂತಾ ಕಾರ್ಯ ಮಾಡ್ತಾ ಇದ್ದೆ. ಎಲ್ಲಾ ಗ್ರಹದೇವರುಗೊ ಆಶೀರ್ವಾದ ಮಾಡೇಕು – ಹೇಳ್ತದರ ಸಂಕ್ಷಿಪ್ತವಾಗಿ ಹೇಳಿದ್ದು ಇಲ್ಲಿ!
5. ಅಗ್ನಿ ಪ್ರತಿಷ್ಠೆ:
ಈ ಕೆಳಾಣ ಮಂತ್ರವ ಹೇಳಿಗೊಂಡು ಬಾವಡೆಲಿ (/ಕುಂಡಲ್ಲಿ) ಅಗ್ನಿಯ ಪ್ರತಿಷ್ಠೆ ಮಾಡೆಕ್ಕು:
ಓಂ ಉಪಾವರೋಹ ಜಾತವೇದಃ ಪುನಸ್ತ್ವಂ
ದೇವೇಭ್ಯೋ ಹವ್ಯಂ ವಹನಃ ಪ್ರಜಾನನ್ |
ಆಯುಃ ಪ್ರಜಾಗುಂ ರಯಿಮಸ್ಮಾಸು ಧೇಹಿ
ಅಜಸ್ರೋ ದೀಧಿಹಿ ನೋ ಧುರೋಣೇ ||

ಓಂ ಭೂರ್ಭುವಸ್ಸುವರೋಂ  ಅಗ್ನಿಂ ಪ್ರತಿಷ್ಥಾಪಯಾಮಿ |
ಹೇಳಿ ಒಳ ಒಲೆಂದ ಕೈಬಾವಡೆಲಿ ತಂದ ಅಗ್ನಿಯ ಬಾವಡೆಗೆ ಹಾಕೆಕ್ಕು.
6. ಪರಿಧಿ:
ಮುಂದೆ ಹೇಳುವ ಮಂತ್ರದ ಪ್ರಕಾರ ಎರಡೆರಡು ದರ್ಭೆಯ ಮಡುಗೆಕ್ಕು:
ಪೂರ್ವಸ್ಯಾಂ ದಿಶಿ ಪರಿಸ್ತೃಣಾಮಿ || (ದರ್ಭೆಯ ಕೊಡಿ ಈಶಾನ್ಯಕ್ಕೆ ಬಪ್ಪ ಹಾಂಗೆ ಬಾವಡೆಯ ಪೂರ್ವ ಭಾಗಲ್ಲಿ )
ದಕ್ಷಿಣಸ್ಯಾಂ  ದಿಶಿ ಪರಿಸ್ತೃಣಾಮಿ || (ಆಗ್ನೇಯಕ್ಕೆ ಕೊಡಿ ಬಪ್ಪಹಾಂಗೆ)
ಪಶ್ಚಿಮಸ್ಯಾಂ ದಿಶಿ ಪರಿಸ್ತೃಣಾಮಿ || (ಬಾವಡೆಯ ಪಶ್ಚಿಮ ಭಾಗಲ್ಲಿ ವಾಯವ್ಯಕ್ಕೆ ಕೊಡಿ ಬಪ್ಪ ಹಾಂಗೆ)
ಉತ್ತರಾಗ್ಸ್ತಯೋರಧಃ | (ವಾಯವ್ಯಂದ, ಈಶಾನ್ಯಕ್ಕೆ ಕೊಡಿ ಬಪ್ಪ ಹಾಂಗೆ,ಎಲ್ಲಾ ಪರಿಧಿಂದ ಕೆಳ ಇಪ್ಪ ಹಾಂಗೆ)
7. ನೀರು ಸುತ್ತುಗಟ್ಟುವದು:
ಓಂ ಅದಿತೇನು ಮನ್ಯಸ್ವ  | (ನೈರುತ್ಯಂದ ಆಗ್ನೇಯಕ್ಕೆ)
ಓಂ  ಅನುಮತೇನು ಮನ್ಯಸ್ವ |
(ನೈರುತ್ಯಂದ ವಾಯವ್ಯಕ್ಕೆ)
ಓಂ ಸರಸ್ವತೇನು ಮನ್ಯಸ್ವ  |
(ವಾಯವ್ಯಂದ ಈಶಾನ್ಯಕ್ಕೆ)
ಓಂ ದೇವ ಸವಿತ ಪ್ರಸುವ ||
(ಈಶಾನ್ಯಂದ ಆಗ್ನೇಯಕ್ಕೆ)
8.ಅಗ್ನಿ ಅಲಂಕಾರ:
ಇನ್ನು ಪೂರ್ವಂದ ಸುರು ಮಾಡಿಗೊಂಡು ಈಶಾನ್ಯದ ವರೆಗೆ ಹೂಗು, ಗಂಧ,ಅಕ್ಷತೆ ಹಾಕಿ  ಅಗ್ನಿಯ ಅಲಂಕರಿಸೆಕ್ಕು.
ಓಂ ಅಗ್ನಯೇ ನಮಃ | (ಪೂರ್ವ)
ಓಂ ಜಾತವೇದಸೇ  ನಮಃ | (ಆಗ್ನೇಯ)
ಓಂ ಸಹೋಜಸೇ ನಮಃ | (ದಕ್ಷಿಣ)
ಓಂ ಅಜಿರಾಪ್ರಭವೇನಮಃ | (ನೈಋತ್ಯ)
ಓಂ ವೈಶ್ವಾನರಾಯ  ನಮಃ |(ಪಶ್ಚಿಮ)
ಓಂ ನರ್ಯಾಪಸೇ ನಮಃ | (ವಾಯವ್ಯ)
ಓಂ ಪಂಕ್ತಿರಾಧಸೇ ನಮಃ |(ಉತ್ತರ)
ಓಂ ವಿಸರ್ಪಿಣೇ ನಮಃ |(ಈಶಾನ್ಯ)
ಓಂ ಯಜ್ನೆಶ್ವರಾಯ ನಮಃ | – ಹೋಮಕ್ಕೆ ಹಾಕೆಕ್ಕು.
9. ಅಗ್ನಿ ಪ್ರಜ್ವಾಲನ:
ಇನ್ನು ಅಗ್ನಿಯ ಪ್ರಜ್ವಲನ ಮಾಡೆಕ್ಕು – ಹೇಳಿರೆ, ಶಾಕೋಲು ಇತ್ಯಾದಿಯ ಹಾಕಿ, ಆಗ ಹಾಕಿದ ಕೆಂಡವ ಜ್ವಾಲೆಬಂದು ಹೊತ್ತುವ ಹಾಂಗೆ ಮಾಡೆಕು.
ಜ್ವಾಲೆಜ್ವಾಲೆಯಾಗಿ ಹೊತ್ತಿಗೊಂಡು ಇಪ್ಪಗ ಈ ಮಂತ್ರಲ್ಲಿ ಪ್ರಾರ್ಥನೆಮಾಡೆಕ್ಕು:
ಓಂ ಅಗ್ನಿಂ ಪ್ರಜ್ವಲಿತಂ ವಂದೇ ಜಾತವೇದಂ ಹುತಾಶನಂ |
ಸುವರ್ಣವರ್ಣ ಮಮಲಂ ಸಮಿದ್ಧಂ ವಿಶ್ವತೋಮುಖಂ ||

10. ವ್ಯಾಹೃತಿ:
ಅಗ್ನಿಯ ಪಶ್ಚಿಮ ಭಾಗಲ್ಲಿ ತುಂಡುದರ್ಭೆಯ ಹಾಕಿ ಅದರ ಮೇಲೆ ತುಪ್ಪದ ತಟ್ಟೆ ಮಡುಗೆಕ್ಕು.
ಎಡದ ಕೈಲಿ ನಾಕು ತುಂಡು ದರ್ಭೆಯ ಹಿಡ್ಕೊಂಡು ಬಲದ ಕೈಲಿ ಒಂದೊಂದೇ ದರ್ಭೆಯ ತುಪಕ್ಕೆ ಮುಟ್ಟುಸಿ ಹೋಮಕ್ಕೆ ಹಾಕೆಕ್ಕು.
ಓಂ ಭೂಃ ಸ್ವಾಹಾ | ಅಗ್ನಯ ಇದಂನಮಮ ||
ಓಂ ಭುವಃ ಸ್ವಾಹಾ | ವಾಯವ ಇದಂನಮಮ ||
ಓಗುಂ ಸುವ
ಸ್ವಾಹಾ | ಸೂರ್ಯಾಯೇದಂನಮಮ ||
ಓಂ ಭೂರ್ಭುವಸ್ಸುವಃ ಸ್ವಾಹಾ | ಪ್ರಜಾಪತಯ ಇದಂನಮಮ ||

11. ಪೂಜೆ:
ಇನ್ನು ಅಗ್ನಿಗೆ, ಮಂಡಲಕ್ಕೆ ಗಣಪತಿಯ ಪೂಜೆ ಮಾಡೆಕ್ಕು.
ಓಂ ಭೂಃ ಗಣಪತಿಮಾವಾಹಯಾಮಿ |
ಓಂ ಭುವ
ಗಣಪತಿಮಾವಾಹಯಾಮಿ |
ಓಗುಂ ಸುವ
ಗಣಪತಿಮಾವಾಹಯಾಮಿ |
ಓಂ ಭೂರ್ಭುವಸ್ಸುವರೋಂ ಗಣಪತಿಮಾವಾಹಯಾಮಿ ||

12. ದ್ವಾದಶ ನಾಮ ಪೂಜೆ:
ಒಂದೊಂದೇ ಎಸಳು ಹೂಗಿನ ಗೆಣವತಿ ಮಂಡ್ಳಕ್ಕೆ ಹಾಕೆಕ್ಕು:
ಓಂ ಸುಮುಖಾಯ ನಮಃ| ಏಕದಂತಾಯ ನಮಃ | ಕಪಿಲಾಯ ನಮಃ | ಗಜಕರ್ಣಕಾಯ ನಮಃ | ಲಂಬೋದರಾಯ ನಮಃ | ವಿಕಟಾಯ ನಮಃ | ವಿಘ್ನರಾಜಾಯ ನಮಃ | ಗಣಾಧಿಪಾಯ ನಮಃ | ಧೂಮ್ರಕೇತವೇ ನಮಃ | ಗಣಾಧ್ಯಕ್ಷಾಯ ನಮಃ | ಫಾಲಚಂದ್ರಾಯ ನಮಃ | ಗಜಾನನಾಯ ನಮಃ ||
ದ್ವಾದಶನಾಮ ಪೂಜಾಂ ಸಮರ್ಪಯಾಮಿ ||
13. ಷೋಡಷೋಪಚಾರ ಪೂಜೆ:
ಶ್ರೀ ಮಹಾಗಣಪತಯೇ ನಮಃ |
ಧ್ಯಾನಂ ಸಮರ್ಪಯಾಮಿ | (ಒಂದು ಸಕ್ಕಣ ನೀರು ತಟ್ಟೆಗೆ ಬಿಡೆಕ್ಕು)
ಪಾದ್ಯಂ ಸಮರ್ಪಯಾಮಿ | (ಒಂದು ಸಕ್ಕಣ ನೀರು ತಟ್ಟೆಗೆ ಬಿಡೆಕ್ಕು)
ಅರ್ಘ್ಯಂ ಸಮರ್ಪಯಾಮಿ | (ಒಂದು ಸಕ್ಕಣ ನೀರು ತಟ್ಟೆಗೆ ಬಿಡೆಕ್ಕು)
ಆಚಮನೀಯಂ ಸಮರ್ಪಯಾಮಿ | (ಒಂದು ಸಕ್ಕಣ ನೀರು ತಟ್ಟೆಗೆ ಬಿಡೆಕ್ಕು)
ಸ್ನಾನಂ ಸಮರ್ಪಯಾಮಿ|(ಒಂದು ಸಕ್ಕಣ ನೀರು ತಟ್ಟೆಗೆ ಬಿಡೆಕ್ಕು)
ವಸ್ತ್ರಂ ಸಮರ್ಪಯಾಮಿ|(ಹೂಗಿಲಿ  ಹೋಮಕ್ಕೂ ಮಂಡಲಕ್ಕೂ ಅರ್ಚನೆ ಮಾಡೆಕ್ಕು.)
ಉಪವೀತಂ ಸಮರ್ಪಯಾಮಿ|(ಹೂಗಿಲಿ  ಹೋಮಕ್ಕೂ ಮಂಡಲಕ್ಕೂ ಅರ್ಚನೆ ಮಾಡೆಕ್ಕು.)
ಆಭರಣಂ ಸಮರ್ಪಯಾಮಿ|(ಹೂಗಿಲಿ  ಹೋಮಕ್ಕೂ ಮಂಡಲಕ್ಕೂ ಅರ್ಚನೆ ಮಾಡೆಕ್ಕು.)
ಗಂಧಂ ಸಮರ್ಪಯಾಮಿ|(ಹೂಗು,ಗಂಧ ಸೇರ್ಸಿ ಹೋಮಕ್ಕೂ ಮಂಡಲಕ್ಕೂ ಅರ್ಚನೆ ಮಾಡೆಕ್ಕು.)
ಅಕ್ಷತಾನ್  ಸಮರ್ಪಯಾಮಿ|(ಅಕ್ಷತೆಲಿ  ಹೋಮಕ್ಕೂ ಮಂಡಲಕ್ಕೂ ಅರ್ಚನೆ ಮಾಡೆಕ್ಕು.)
ಪುಷ್ಪಾಣಿ ಸಮರ್ಪಯಾಮಿ | (ಹೂಗಿಲಿ  ಹೋಮಕ್ಕೂ ಮಂಡಲಕ್ಕೂ ಅರ್ಚನೆ ಮಾಡೆಕ್ಕು.)
ಧೂಪಮಾಘ್ರಾಪಯಾಮಿ| (ಊದುಬತ್ತಿ ಹೊತ್ಸಿ ಎಡದ ಕೈಲಿ ಘಂಟಾಮಣಿ ಆಡ್ಸಿಗೊಂಡು ಬಲದ ಕೈಲಿ ಹೋಮಕ್ಕೂ ಮಂಡಲಕ್ಕೂ ಎತ್ತೆಕ್ಕು.)
ದೀಪಂ ದರ್ಶಯಾಮಿ| ಏಕಾರತಿ ಹೊತ್ಸಿ ಎಡದ ಕೈಲಿ ಘಂಟಾಮಣಿ ಆಡ್ಸಿಗೊಂಡು ಬಲದ ಕೈಲಿ ಹೋಮಕ್ಕೂ ಮಂಡಲಕ್ಕೂ ಎತ್ತೆಕ್ಕು.

14. ನೈವೇದ್ಯ :

ಇನ್ನು ಅಷ್ಟದ್ರವ್ಯದ ಒಂದು ಪಾಲಿನ ಮಂಡಲಲ್ಲಿ  ಆರಾಧನೆ ಮಾಡುವ ಗಣಪತಿಗೆ  ನೈವೇದ್ಯ ಮಾಡೆಕ್ಕು.
ಮತ್ತೆ ನೈವೇದ್ಯಕ್ಕೆ ಎಂತೆಲ್ಲ ಇದ್ದೋ – ಅದರೆಲ್ಲ – ಗಣಪತಿ ಮಂಡಲದ ಎದುರು ಮಡಗಿ – ನೈವೇದ್ಯ ಮಾಡೆಕ್ಕು:
  • ಗಾಯತ್ರೀ ಮಂತ್ರ ಹೇಳಿಗೊಂಡು ತೊಳಶಿ ಎಲೆಲಿ ನೀರು ನೈವೇದ್ಯಕ್ಕೆ ಪ್ರೋಕ್ಷಣೆ ಮಾಡೆಕ್ಕು.
  • ಸತ್ಯಂ ತ್ವರ್ತೇನ ಪರಿಶಿಂಚಾಮಿ | ಶ್ರೀ ಮಹಾಗಣಪತಯೇ ನಮ  | ಇದಂ ಮಹಾನೈವೇದ್ಯಂ ನಿವೇದಯಾಮಿ ||
    – ಹೇಳಿ ಹೇಳಿಗೊಂಡು ತೊಳಶಿ ಎಲೆಗೆ ನೀರು ಹಾಕಿ ನೈವೆದ್ಯಂಗೊಕ್ಕೆ ಒಂದು ಪ್ರದಕ್ಷಿಣಾಕಾರವಾಗಿ ಸುತ್ತುಗಟ್ಟಿ ಮಂಡಲಕ್ಕೆ ಹಾಕೆಕ್ಕು.
  • ಓಂ  ಅಮೃತೋಪಸ್ತರಣಮಸಿ ಸ್ವಾಹಾ ||
    – ಒಂದು ಸಕ್ಕಣ ನೀರು ತಟ್ಟೆಗೆ ಬಿಡೆಕ್ಕು.
  • ಇನ್ನು ನೈವೇದ್ಯ ಮಾಡೆಕ್ಕು:
    • ಓಂ ಪ್ರಾಣಾಯ ಸ್ವಾಹಾ ||
    • ಓಂ ಅಪಾನಾಯ ಸ್ವಾಹಾ ||
    • ಓಂ ವ್ಯಾನಾಯ ಸ್ವಾಹಾ ||
    • ಓಂ ಉದಾನಾಯ ಸ್ವಾಹಾ ||
    • ಓಂ ಸಮಾನಾಯ ಸ್ವಾಹಾ ||
    • ಓಂ ಬ್ರಹ್ಮಣೇ ಸ್ವಾಹಾ ||

ಪೂಜೆಲಿ ಮಾಡ್ತ ಹಾಂಗೆ ಉದ್ವಾಸನೆ ಮಾಡ್ಳಿದ್ದು, ಆದರೆ ಈಗ ಅಲ್ಲ. ಆಹುತಿ ಆದ ಮೇಗೆ. ಆತೋ?!
15. ಆಹುತಿ:
ಇನ್ನು ಒಂದೊಂದೇ ಸಕ್ಕಣ ತುಪ್ಪ ಹೋಮಕ್ಕೆ ಆಹುತಿ ಮಾಡೆಕ್ಕು.
ಓಂ ಪ್ರಾಣಾಯ ಸ್ವಾಹಾ | ಪ್ರಾಣಾಯೇದಂ ನಮಮ ||
ಓಂ ಅಪಾನಾಯ ಸ್ವಾಹಾ | ಅಪಾನಾಯೇದಂ ನಮಮ ||
ಓಂ ವ್ಯಾನಾಯ ಸ್ವಾಹಾ | ವ್ಯಾನಾಯೇದಂ ನಮಮ ||
ಓಂ ಉದಾನಾಯ ಸ್ವಾಹಾ | ಉದಾನಾಯೇದಂ ನಮಮ ||
ಓಂ ಸಮಾನಾಯ ಸ್ವಾಹಾ | ಸಮಾನಾಯೇದಂ ನಮಮ ||
ಓಂ ಬ್ರಹ್ಮಣೇ ಸ್ವಾಹಾ | ಬ್ರಹ್ಮಣ ಇದಂ ನಮಮ ||
ಶ್ರೀ ಮಹಾಗಣಾಧೀಶ್ವರಾಯ ಸ್ವಾಹಾ | ಶ್ರೀ ಮಹಾಗಣಾಧೀಶ್ವರಾಯ ಇದಂ ನಮಮ ||

16. ಉಪಹೋಮ:
ಉಪಹೋಮ ಹೇಳಿತ್ತುಕಂಡ್ರೆ, ಹವನ ಕಾರ್ಯಲ್ಲಿ ಅಗ್ನಿದೇವರಿಂಗೆ ಸಂಪ್ರೀತಿ ಅಪ್ಪಲೆ ವಸ್ತುಗಳ ಹೋಮುಸುದು.
ಸುರುವಿಂಗೆ ಉಪಹೋಮ ಆರಂಭ ಮಾಡ್ತ ಲೆಕ್ಕಲ್ಲಿ ಈ ಮಂತ್ರ ಹೇಳೆಕ್ಕು:
ಶ್ರೀ ಮಹಾಗಣಾಧೀಶ್ವರ  ಪ್ರೀತ್ಯರ್ಥಂ ಆಜ್ಯ , ಅಷ್ಟದ್ರವ್ಯ, ಆಜ್ಯ, ದೂರ್ವಾ ಆಜ್ಯಾನಿ ಹೋಶ್ಯಾಮಹೇ ||
ಮಹಾಗಣಪತಿಯ ಪ್ರೀತ್ಯರ್ಥವಾಗಿ ತುಪ್ಪ – ಅಷ್ಟದ್ರವ್ಯ – ತುಪ್ಪ – ಕರಿಕ್ಕೆ – ತುಪ್ಪ – ಈ ವಸ್ತುಗಳಲ್ಲಿ ಅನುಕ್ರಮವಾಗಿ ಹೋಮುಸೆಕ್ಕು.
ಪ್ರತಿಸರ್ತಿ ಹೋಮುಸಲೂ ಮೂಲಮಂತ್ರ ಒಂದೇ!
ಹಾಂಗಾಗಿ, ಈ ಕೆಳಾಣ  ಮೂಲಮಂತ್ರಂದ ಆಹುತಿ ಕ್ರಮವಾಗಿ – ತುಪ್ಪ – ಅಷ್ಟದ್ರವ್ಯ (ಮೋದಕ,ಪಚ್ಚಪ್ಪ) – ತುಪ್ಪ – ಗರಿಕೆ – ತುಪ್ಪಂದ ಎಂಟೆಂಟು ಆಹುತಿ ಮಾಡೆಕ್ಕು:
ಮೂಲ ಮಂತ್ರ:
ಓಂ ಶ್ರೀಂ ಹ್ರೀಂ  ಕ್ಲೀಂ ಗ್ಲೌಂ ಗಂ ಗಣಪತಯೇ ವರವರದ ಸರ್ವ ಜನಂ ಮೇ ವಶಮಾನಯ ಸ್ವಾಹಾ ||
ಶ್ರೀ ಮಹಾಗಣಪತಯ ಇದಂ ನಮಮ ||

17.1. ದ್ವಾದಶನಾಮ ಆಹುತಿ:
ಎಲ್ಲಾ ದ್ರವ್ಯಂಗಳ ಎಂಟೆಂಟು ಆಹುತಿ ಆದಮೇಲೆ ದ್ವಾದಶನಾಮದ ಆಹುತಿ ಕೊಡುದು.
ಕ್ರಮ ಸಂಕ್ಯೆ 12 ರಲ್ಲಿ ಮಾಡಿದ ದ್ವಾದಶನಾಮ ಪೂಜೆ ಇದ್ದಲ್ಲದ, ಪ್ರತಿ ಹೆಸರಿಲಿಯೂ ಆಹುತಿ ಕೊಟ್ರೆ ಆತು.  ಪ್ರತಿ ಆಹುತಿಯ ಸ್ವಾಹಾ ಆದ ಮತ್ತೆ, ಇದಂ ನಮಮ ಹೇಳಿ ಸೇರಿಸಿಗೊಂಡ್ರೆ ಆತು.
ಅದು ಹೀಂಗೆ ಬತ್ತು:
ಓಂ ಸುಮುಖಾಯ ಸ್ವಾಹಾ | ಸುಮುಖಾಯೇದಂ ನಮಮ ||
ಏಕದಂತಾಯ ಸ್ವಾಹಾ | ಏಕದಂತಾಯೇದಂ ನಮಮ ||
ಕಪಿಲಾಯ ಸ್ವಾಹಾ | ಕಪಿಲಾಯೇದಂ ನಮಮ ||
ಗಜಕರ್ಣಕಾಯ ಸ್ವಾಹಾ | ಗಜಕರ್ಣಕಾಯೇದಂ ನಮಮ ||
ಲಂಬೋದರಾಯ ಸ್ವಾಹಾ | ಲಂಬೋದರಾಯೇದಂ ನಮಮ ||
ವಿಕಟಾಯ ಸ್ವಾಹಾ | ವಿಕಟಾಯೇದಂ ನಮಮ ||
ವಿಘ್ನರಾಜಾಯ ಸ್ವಾಹಾ | ವಿಘ್ನರಾಜಾಯೇದಂ ನಮಮ ||
ಗಣಾಧಿಪಾಯ ಸ್ವಾಹಾ | ಗಣಾಧಿಪಾಯೇದಂ ನಮಮ ||
ಧೂಮ್ರಕೇತವೇ ಸ್ವಾಹಾ | ಧೂಮ್ರಕೇತವೇದಂ ನಮಮ ||
ಗಣಾಧ್ಯಕ್ಷಾಯ ಸ್ವಾಹಾ | ಗಣಾಧ್ಯಕ್ಷಾಯೇದಂ ನಮಮ ||
ಫಾಲಚಂದ್ರಾಯ ಸ್ವಾಹಾ | ಫಾಲಚಂದ್ರಾಯೇದಂ ನಮಮ ||
ಗಜಾನನಾಯ ಸ್ವಾಹಾ | ಗಜಾನನಾಯೇದಂ ನಮಮ ||

ದ್ವಾದಶನಾಮ ಆಹುತಿಂ ಸಮರ್ಪಯಾಮಿ ||
– ಇದಾದ ಮತ್ತೆ ಮತ್ತೆ ವ್ಯಾಹೃತಿ ಮಂತ್ರಂದ (ಕ್ರಮ ಸಂಕ್ಯೆ 10 ರಲ್ಲಿ ಹೇಳಿದ್ದು) ಪುನಃ ಆಹುತಿ ಕೊಡೆಕ್ಕು.

17.2. ನೈವೇದ್ಯ ಉದ್ವಾಸನೆ:
ಆಗ ಮಡಗಿನ ನೈವೇದ್ಯವ ಉದ್ವಾಸನೆ ಮಾಡ್ತ ಸಮೆಯ ಈಗ ಬಂತು.
ಕೌಳಿಗೆಂದ ಒಂದು ಸಕ್ಕಣ ನೀರು ತೆಗದು ಗೆಣವತಿ ಮಂಡ್ಳಕ್ಕೆ ಹಾಕೆಕ್ಕು:
ಓಂ ಅಮೃತಾಪಿಧಾನಮಸಿ ಸ್ವಾಹಾ ||
ಗೆಣವತಿಯ ಮಂಡ್ಳಂದ ಎರಾಡು ಹೂಗು ತೆಗದು ನೈವೇದ್ಯದ ಮೇಗೆ ಹಾಕೆಕ್ಕು.
ಶ್ರೀ ಮಹಾಗಣಾಧೀಶ್ವರಾಯ ನಮಃ |
ಸಮರ್ಪಿತ ಮಹಾನೈವೇದ್ಯಮುದ್ವಾಸಯಾಮಿ ||

18. ಸ್ವಿಷ್ಟ ಕೃತ:
ಒಂದು ಸಕ್ಕಣ ತುಪ್ಪ ಆಹುತಿ ಮಾಡೆಕ್ಕು:
ಓಂ ಅಗ್ನಯೇ ಸ್ವಿಷ್ಟಕೃತೇ ಸ್ವಾಹಾ | ಅಗ್ನಯೇ ಸ್ವಿಷ್ಟಕೃತ  ಇದಂ ನಮಮ ||
19. ಪರಿಧಿ:
ಆಗ ದರ್ಬೆಗಳ ಕುಂಡದ ನಾಕೂ ಸುತ್ತಕೆ ಮಡುಗಿದ್ದಲ್ಲದ, ಅದು ಪರಿಧಿ.
ಪೂರ್ವಂದ ಪ್ರದಕ್ಷಿಣಾಕಾರವಾಗಿ ಅದರ ತೆಗದು ತುಪ್ಪಕ್ಕೆ ಅದ್ದಿ ಈ ಮಂತ್ರಂದ ಹೋಮಕ್ಕೆ ಹಾಕೆಕ್ಕು:
ಓಂ ಭೂರ್ಭುವಸ್ಸುವಃ ಸ್ವಾಹಾ | ಪ್ರಜಾಪತಯ ಇದಂ ನಮಮ ||
20. ಫಲ ಸಮರ್ಪಣೆ:
ಇನ್ನು ಫಲ (ಗೋಟುಕಾಯಿ), ಪಕ್ವ (ಬಾಳೆಹಣ್ಣು), ಗುಡ (ಬೆಲ್ಲ), ಪುಷ್ಪ (ಹೂಗು) – ತುಪ್ಪಕ್ಕೆ ಮುಟ್ಸಿ ಹೋಮಕ್ಕೆ ಆಹುತಿ ಮಾಡೆಕ್ಕು.
ಗೋಟುಕಾಯಿಯ ಕರಟವನ್ನೂ, ಚೋಲಿಯನ್ನೂ, ಮುತ್ತು, ನಾರು, ನೆರಿಗೆಯನ್ನೂ ಹೋಮಕ್ಕೇ ಹಾಕೆಕ್ಕು. ಅದೊಂದು ಕಾಯಿ ಇಡೀ ಗೆಣವತಿಗೇ ಇಪ್ಪದು.
ಗೋಟುಕಾಯಿಯ ರಜಾ ಒಟ್ಟೆ ಮಾಡಿ, ಒಳಂಗೆ ಒಂದು ಸಕ್ಕಣ ತುಪ್ಪ ಇಳುಸಿ, ಪುನಾ ಆ ತುಂಡಿಲೇ ಮುಚ್ಚಿ ಕೈಲಿ ಹಿಡ್ಕೊಳಿ.
ಈ ಮಂತ್ರ ಹೇಳಿಗೊಂಡು ಹೋಮಕ್ಕೆ ಸಮರ್ಪಣೆ ಮಾಡೆಕ್ಕು:
ಓಂ ಇದಂ ಫಲಂ ಮಯಾ ದೇವ ಸ್ಥಾಪಿತಂ ಪುರತಸ್ತವಾ | ತೇನ ಮೇ ಸಫಲಾ ವಾಪ್ತಿಃ ಭವೇಜ್ಜನ್ಮನಿ ಜನ್ಮನಿ ||

ಇನ್ನು, ಎರಡು ಬಾಳೆ ಹಣ್ಣಿನ ಚೋಲಿ ತೆಗದು, ತುಪ್ಪಲ್ಲಿ ಅದ್ದಿ ಕೈಲಿ ಹಿಡ್ಕೊಳಿ. ಈ ಮಂತ್ರ ಹೇಳಿಗೊಂಡು ಹೋಮುಸೆಕ್ಕು:
ಓಂ ಇದಂ ಪಕ್ವಂ ಮಯಾ ದೇವ ಸ್ಥಾಪಿತಂ ಪುರತಸ್ತವಾ | ತೇನ ಮೇ ಸಫಲಾ ವಾಪ್ತಿಃ ಭವೇಜ್ಜನ್ಮನಿ ಜನ್ಮನಿ ||
ಬೆಲ್ಲವ ತುಪ್ಪಕ್ಕೆ ಅದ್ದಿ ಹೋಮಕ್ಕೆ ಹಾಕಲೆ ಈ ಮಂತ್ರ:
ಓಂ ಅಯಂ ಗುಡೋ ಮಯಾ ದೇವ ಸ್ಥಾಪಿತಂ ಪುರತಸ್ತವಾ | ತೇನ ಮೇ ಸಫಲಾ ವಾಪ್ತಿಃ ಭವೇಜ್ಜನ್ಮನಿ ಜನ್ಮನಿ ||
ಹೂಗು (ಸಿಂಗಾರ) ರಜ ಹಿಡ್ಕೊಂಡು, ತುಪ್ಪಕ್ಕೆ ಅದ್ದಿ, ಹೋಮಕ್ಕೆ, ಈ ಮಂತ್ರಂದ:
ಓಂ ಇದಂ ಪುಷ್ಪಂ ಮಯಾ ದೇವ ಸ್ಥಾಪಿತಂ ಪುರತಸ್ತವಾ | ತೇನ ಮೇ ಸಫಲಾ ವಾಪ್ತಿಃ ಭವೇಜ್ಜನ್ಮನಿ ಜನ್ಮನಿ ||
21. ಬ್ರಹ್ಮಾರ್ಪಣ:
ಒಂದು ಸಕ್ಕಣ ತುಪ್ಪವ ಈ ಮಂತ್ರಂದ ಆಹುತಿ ಕೊಡೆಕ್ಕು:
ತಃ ಪೂರ್ವಂ ಪ್ರಾಣ ಬುದ್ಧಿ ದೇಹ ಧರ್ಮಾಧಿಕಾರತಃ – ಜಾಗ್ರತ್ ಸ್ವಪ್ನ ಸುಶುಪ್ತ್ಯವಸ್ಥಾಸು –  ಮನಸಾ ವಾಚಾ ಕರ್ಮಣಾ ಹಸ್ತಾಭ್ಯಾಂ –
ಪದ್ಭ್ಯಾ ಮುದರೇಣ ಶಿಶ್ನಾ – ಯತ್ಕೃತಂ – ಯದ್ದತ್ತಂ – ಯನ್ಯೂನಂ – ಯದಾಚರಿತಂ –
ತತ್ಸರ್ವಂ ಬ್ರಹ್ಮಾರ್ಪಣಂ ಭವತು ಸ್ವಾಹಾ |
ಬ್ರಹ್ಮಣ ಇದಂ ನಮಮ ||

22. ಪೂರ್ಣಾಹುತಿ:
ಎದ್ದು ನಿಂದು ತುಪ್ಪದ ತಟ್ಟೆಯ ಹಿಡ್ಕೊಂಡು ಈ ಕೆಳಾಣ ಮಂತ್ರಂದ ತಟ್ಟೆಲಿಪ್ಪ ತುಪ್ಪವ ಎಲ್ಲಾ ಆಹುತಿ ಕೊಡೆಕ್ಕು:
ಓಂ ಮೂರ್ಧಾನಂದಿವೋ ಅರತಿಂ ಪೃಥಿವ್ಯಾ ವೈಶ್ವಾನರಮೃತಾಯ ಜಾತಮಗ್ನಿಂ|
ಕವಿಗುಂ ಸಮ್ರಾಜಮತಿಥಿಂ ಜನಾನಾ ಮಾಸನ್ನಾ ಪಾತ್ರಂ ಜನಯಂತ ದೇವಾ: ಸ್ವಾಹಾ||
ವೈಶ್ವಾನರಾಗ್ನಯ ಇದಂ ನಮಮ ||

ಹೋಮಕ್ಕೆ ಅಕ್ಷತೆ ಹಾಕಿ ಕೈ ಮುಗಿಯೆಕ್ಕು:
ಪೂರ್ಣಾಹುತಿ ಮುಹೂರ್ತಂ ಸುಮುಹೂರ್ತಮಸ್ತು ||
23. ಮಂಗಳಾರತಿ:
ಇನ್ನು ನವಗೆ ಬಪ್ಪ ಮಂತ್ರಲ್ಲಿ ಮಂಗಳಾರತಿ ಮಾಡೆಕ್ಕು.
ಮಂತ್ರಂಗ ಎಲ್ಲವೂ ಮಂಗಳವೇ,ಇಂತಹ ಮಂಗಳ ಮಂತ್ರವ ಹೇಳಿಗೊಂಡು ಆರತಿ ಮಾಡುವುದಕ್ಕೆ ಮಂಗಳಾರತಿ ಹೇಳಿ ಹೇಳ್ತವು.
ಮಂಗಳಾರತಿಯ ಅನುಕ್ರಮ:

  • ಧೂಪ
  • ಏಕಾರತಿ
  • ಇತರ ಆರತಿಗೊ – (ಇದ್ದರೆ)
  • ನೆಲೆ ಆರತಿ (ಕರ್ಪೂರ ಆರತಿ)

24. ಮಂತ್ರ ಪುಷ್ಪ:
ಯೋವೇದಾ ದೌ ಸ್ವರಃ ಪ್ರೋಕ್ತೋ ವೇದಾಂತೇ ಚ ಪ್ರತಿಷ್ಠಿತಃ |
ತಸ್ಯಃ ಪ್ರಕೃತಿಲೀನಸ್ಯ ಯಃ ಪರಸ್ಸ ಮಹೇಶ್ವರಃ ||
ಶ್ರೀ ಮಹಾಗಣಪತಯೇ ನಮಃ – ವೇದೋಕ್ತ ಮಂತ್ರ ಪುಷ್ಪಾಂಜಲಿಂ ಸಮರ್ಪಯಾಮಿ ||

– ಹೋಮಕ್ಕೂ ಮಂಡಲಕ್ಕೂ ಒಂದೊಂದು ಹೂಗು ಹಾಕಿ ಕೈ ಮುಗಿಯೆಕ್ಕು, ಮನೆಯೋರು ಎಲ್ಲೋರು ಸೇರಿ.
25. ಪ್ರದಕ್ಷಿಣೆ:
ಈ ಶ್ಲೋಕ ಹೇಳಿಗೊಂಡು ಹೋಮಕ್ಕೂ ಮಂಡಲಕ್ಕೂ ಮೂರು ಪ್ರದಕ್ಷಿಣೆ ಬಂದು ಗಣಪತಿ ದೇವರಿಂಗೆ ನಮಸ್ಕಾರ ಮಾಡೆಕ್ಕು:
ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿಚ |
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇ ಪದೇ ||

26. ಪ್ರಾರ್ಥನೆ:
ಹೋಮದ ಅಧಿದೇವರಿಂಗೆ ಪ್ರಾರ್ಥನೆ ಮಾಡುದು:
ಶ್ರದ್ಧಾಂ ಮೇಧಾಂ ಯಶಃ ಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರಿಯಂ ಬಲಂ |
ಆಯುಷ್ಯಂ ತೇಜ ಆರೋಗ್ಯಂ ದೇಹಿ ಮೇ ಹವ್ಯವಾಹನ ||

27. ಓಜೋಸಿ:
ಹೋಮದ ವಿಶೇಷ ಭಸ್ಮವ ತುಪ್ಪಲ್ಲಿ ಕಲಸಿ ತೆಕ್ಕೊಂಬದೇ ಓಜೋಸಿ. ಹೋಮದ ಈಶಾನ್ಯ ಮೂಲೆಂದ ಭಸ್ಮ ತೆಗದು ಓಜೋಸಿ ಮಾಡಿ,
ಭ್ರೂ ಮಧ್ಯ – ಎದೆ – ಹೊಕ್ಕುಳು – ಬಲದ ಹೆಗಲು – ಕೊರಳಿನ ಹಿಂದೆ – ನೆತ್ತಿಗೆ – ಕ್ರಮಲ್ಲಿ ಹಾಕೆಕ್ಕು:
ಓಜೋಸಿ, ಸಹೋಸಿ, ಬಲಮಸಿ ಭ್ರಾಜೋಸಿ,ದೇವಾನಾಂ ಧಾಮ ನಾಮಾಸಿ, ವಿಶ್ವಮಸಿ ವಿಶ್ವಾಯುಃ ಸರ್ವಮಸಿ ಸರ್ವಾಯುರಭಿಭೂರೋಂ ||

28. ಪ್ರಸನ್ನ ಪೂಜೆ:
ಹೋಮಕ್ಕೂ ಮಂಡಲಕ್ಕೂ ಒಂದೊಂದು ಹೂಗು ಹಾಕಿ:
ಪ್ರಸನ್ನ ಪೂಜಾಂ ಸಮರ್ಪಯಾಮಿ ||
ತಟ್ಟೆಗೆ ಎರಡು ಸಕ್ಕಣ ನೀರು ಬಿಟ್ಟು:
ಪ್ರಸನ್ನಾರ್ಘ್ಯಂ ಸಮರ್ಪಯಾಮಿ ||
29. ಬ್ರಹ್ಮಾರ್ಪಣ:
ಹೂಗು ಗಂಧ ಅಕ್ಷತೆ ಹಿಡ್ಕೊಂಡು ಎಡದ ಕೈಲಿ (ಅಥವಾ ಧರ್ಮಪತ್ನಿ) ನೀರು ಹಾಕಿಗೊಂಡು:
ಅನೇನ ಮಹಾಗಣಪತಿ ಹೋಮ ಕರ್ಮಣಾ ಶ್ರೀಪರಮೇಶ್ವರಃ ಪ್ರೀಯತಾಂ|  ಓಂ ತತ್ಸತ್ ||

– ಹೇಳಿ ನೀರು ಹಾಕಿ ಹೋಮಕ್ಕೂ, ಮಂಡಲಕ್ಕೂ ಹಾಕಿ.
ನಿಂಗಳ ಗೋತ್ರ ಪ್ರವರ ಹೇಳಿ ನಮಸ್ಕಾರ ಮಾಡೆಕ್ಕು.
ಶ್ರೀಮದ್ಯಜುಃಶಾಖಾ, ಬೋಧಾಯನ ಸೂತ್ರಾನ್ವಿತ, {} ಪ್ರವರಾನ್ವಿತ, {}ಗೋತ್ರೋತ್ಪನ್ನಃ
.. ಶರ್ಮಾಹಮಸ್ಮಿ ಭೋ ಅಭಿವಾದಯೇ ||

30. ಪ್ರಸಾದ:
ಪ್ರಸೀದ ಪ್ರಸಾದಾಂ ದೇಹಿ ಹೇಳಿ ಎರಡೂ ಕೈ ಜೋಡ್ಸಿ, ಮಂಡಲಂದ ಪ್ರಸಾದ ಸ್ವೀಕಾರ ಮಾಡಿ.
ಹೆರಿಯೋರಿಂದ ಆಶೀರ್ವಾದ ತೆಕ್ಕೊಂಡು, ಕಿರಿಯೋರಿಂಗೆ ಆಶೀರ್ವಾದ ಕೊಡುದು.
31. ಉದ್ವಾಸನೆ:
ಗಣಪತಿ ಮಂಡಲಕ್ಕೆ ಅಕ್ಷತೆ ಹಾಕಿ, ಒಂದು ಮುಷ್ಟಿ ಹೂಗು ಮೂಸಿ ತಟ್ಟೆಗೆ ಹಾಕಿ:
ಯಾಂತು ದೇವ ಗಣಾಃ ಸರ್ವೇ ಪೂಜಾ ಮಾದಾಯ ಮತ್ಕೃತಾಂ |
ಸಿದ್ಧಿಂ ದತ್ವಾತು ವಿಪುಲಾಂ ಪುನರಾಗಮನಾಯಚ ||

ಯಜ್ನೇಶ್ವರಾಯ  ನಮಃ |
ಓಂ ಭೂರ್ಭುವಸ್ಸುವರೋಮ್ ಯಥಾಸ್ಥಾನಮುದ್ವಾಸಯಾಮಿ ||
ಬಾವಡೆಯ ಒಂದರಿ ಹನುಸೆಕ್ಕು.
32. ದ್ವಿರಾಚಮ್ಯ:
ಕ್ರಮಸಂಕ್ಯೆ 1. ರಲ್ಲಿ ಇಪ್ಪ ಹಾಂಗೆ, ಎರಡು ಸರ್ತಿ ಆಚಮನ ಮಾಡೆಕ್ಕು.

ಸುರು ಆದಲ್ಲಿಗೇ ಬಂದು ಮುಗುದತ್ತು.

-@-

ಸೂ: ಒಂದೊಂದು ಮನೆಗೆ, ಕುಲಕ್ಕೆ ಅದರದ್ದೇ ಆದ ಕ್ರಮ ಇದ್ದು.  ಇದು ಎಲ್ಲೋರಿಂಗೂ ಅಕ್ಕಾದ ಕಲ್ಪೋಕ್ತ ವಿಧಿ.
ಇದರಿಂದ ಹೊರತಾದ ಸುಮಾರು ಕ್ರಮಂಗೊ ಇದ್ದು.
ಹೆಚ್ಚಿನ ನಿಖರ ಮಾಹಿತಿಗಾಗಿ ನಿಂಗಳ ಕುಲಗುರುಗಳ ಸಂಪರ್ಕಿಸಿ.

ಚವುತಿಯ ಗಣಪತಿ ಅನುಗ್ರಹ ಎಲ್ಲೋರಿಂಗೂ ಆಗಲಿ.
॥ ಒಳ್ಳೆದಾಗಲಿ ॥

ಒಪ್ಪಣ್ಣನ ಬೈಲು..

32 thoughts on “ಸಂಕ್ಷಿಪ್ತ ಗಣಪತಿ ಹೋಮ

  1. ಅತೀ ಉತ್ತಮವಾಗಿದ್ದು ; ಮಾರ್ಗದ್ರ್ಶನಕ್ಕೆ ಅನಂತ ಅನಂತ ಧನ್ಯವಾದಗಳು

  2. ಬಹಳ ಒಳ್ಳೆಯ ಮಾಹಿತಿ !!! ತುಂಬಾ ಧನ್ಯವಾದಗಳು 🙂

  3. ಚೆನ್ನಾಗಿದೆ. ಕಲಿಯುವವರಿಗೆ ಅನುಕೂಲ. ನನಗೆ ಅಗ್ನಿಮಖದ ಬಗ್ಗೆ ಎಲ್ಲಿಯೂ ವಿವರಣೆ ಸಿಕಿರಲ್ಿಲ್ಳಾ. ಹೋಮದ ಬಗ್ಗೆ ಇನ್ನಷ್ಟು ವಿವರಣೆ ಬೇಕು. ಕಲಿಸಬಲ್ಲಿರಾ ಅಥವಾ ಬೇರೆ ಗ್ರಂಥದ ಬಗ್ಗೆ ತಿಳಿಸಬಲ್ಲಿರಾ ನಿಮಗೆ ಅನಂತ ಧನ್ಯವಾದಗಳು.

  4. ಮೂಲ ಮಂತ್ರದಲ್ಲಿ ಶ್ರೀ೦ ನಂತರ ಹ್ರೀ೦ ಸೇರಿಸಿ

  5. ತಮಗೆ ಗಣಪತಿ ಹೋಮದ ಸಂಕ್ಷ್ಮಿಪ್ತ ವಿವರಗಳಿಗಾಗಿ ಬಹಳ ಚಿರ ಋಣಿ.

  6. ಹರೇ ರಾಮ,ಇಲ್ಲಿ ಗಣಪತಿ ಹೋಮದ ಕ್ರಮ ಹಾಕಿದ್ದು ಬಾರೀ ಒಳ್ಳೆದಾತು,ಹಾಂಗೇ ಸತ್ಯನಾರಾಯಣ ಪೂಜಾ ವಿಧಿ ಬಗ್ಗೆದೆ ತಿಳಿಸಿರೆ ತುಂಬಾ ಒಳ್ಳೆದಿತ್ತು

  7. ಹರೇ ರಾಮ; ನಮ್ಮ ಬಯಲಿ ಇ೦ಥ ಮಾಹಿತಿಗೊ ಇನ್ನೂದೆ ನಿರ೦ತರ ಬ೦ದೂ೦ಡಿರೆಕು. ಇಲ್ಲಿ ಇದರ ಇಷ್ಟು ಲಾಯಕಾಗಿ ನಿರೂಪಣೆ ಮಾಡಿದ ಭಟ್ಟ ಮಾವ° ಇದರ ಬಯಲಿ೦ಗೆ ತ೦ದ ಗಣೇಶ ಮಾವ° ಹಾ೦ಗೂ ಒಪ್ಪಣ್ಣನ ಉಮೇದಿ೦ಗೆ ತು೦……..ಬಾ…….ಧನ್ಯವಾದ.
    ಈ ಸ೦ದರ್ಭಲ್ಲಿ ಒ೦ದು ಜಿಜ್ಞಾಸೆಃ- ನಮ್ಮ ವೈದಿಕಾಚರಣೆಲಿಪ್ಪ ಮ೦ಡಲ, ಸ್ವಸ್ತಿಕಾದಿಗಳ ಸ೦ಜ್ಞಾರ್ಥ- ಸ೦ಕೇತಕ್ಕಿಪ್ಪ ವಿಷಯ೦ಗಳನ್ನುದೆ ವಿವರಿಸಿರೆ ಅದರ ಮಹತ್ವವ ಸರಿಯಾಗಿ ತಿಳ್ಕೊ೦ಬಲಾವುತ್ತಲ್ಲದೊ? ಸಿ೦ಧೂ ಕಣಿವೆಲಿ ಸಿಕ್ಕಿದ ಲಿಪಿಲಿಯದು ಚಿತ್ರಾಕರದ್ದಡ. ಒ೦ದೊ೦ದು ದೇವತಗೂ ಅವರದೇ ಆದ ಮ೦ಡಲ – ಸ್ತ೦ಡಿಲ೦ಗೊ ಇಪ್ಪದರ ನಾವು ನಮ್ಮ ಆಚರಣೆಲಿ ಕಾಣ್ತು.ಇಲ್ಲಿಯ ಒ೦ದೊ೦ದು ಗೆರೆ, ಆಕೃತಿಗಕ್ಕುದೆ ಅದರದೇ ಆದ ವೈಶಿಷ್ಟ್ಯ೦ಗೊ ಇದ್ದಡ.ತಾ೦ತ್ರಿಕ ಮುದ್ರಾದಿಗಳ ಸೊಕ್ಷ್ಮಲ್ಲಿ ಗಮನಿಸಿರೆ ಪ್ರಾಕಿಲ್ಲಿ ಭಾಷೆ ಲಿಪಿಯ ಪಡವ ಮದಲೇ ಬಳಶಿಯೊ೦ಡ ಸ೦ಜ್ಞೆಯ ರೂಪವೋ, ಅಲ್ಲಾ ಭಾಷೆಯ ಅತ್ಯ೦ತ ಎತ್ತರದ ಬೌದ್ಧಿಕ ಮಟ್ಟಲ್ಲಿ ಮಾಡಿಗೊ೦ಡ ರೂಪವೋ? ಹೀ೦ಗೆಲ್ಲಾ………… ಸ೦ಶಯ೦ಗೊ ಬತ್ತಿಲ್ಲಿಯೋ? ಈ ವಿಷಯಲ್ಲಿ ಸರಿಯಾದ ಮಾಹಿತಿಯ ತಿಳ್ದವು ತಿಳ್ಶೆಕು ಹೇದು ವಿನ೦ತಿ.

  8. ಲಾಯಾಕ್ಕಿದ್ದು ಭಟ್ಟ ಮಾವ. ತುಮ್ಭ ಉಪಕಾರ ಆತು.

  9. namaskara bhatta mavange.
    sukshmalli ganapathi homada krama thilisiddu thumbaa prayojana aathu.
    iede reethi nithya poojeya krama thilisi kodi. bailu bittu pattanalli halavu orusha iddavakke kelavarigadaru anukula akku heli yenna grahike.

  10. ಮೂಲ ಮಂತ್ರ:
    ಓಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ ಗಂ ಗಣಪತಯೇ ವರವರದ ಸರ್ವ ಜನಂ ಮೇ ವಶಮಾನಯ ಸ್ವಾಹಾ ||

  11. ತುಂಬಾ ಒಳ್ಳೆದಾತು ಗಣೇಶ ಮಾವ° ನಿಂಗೊ ಬಟ್ಟಮಾವ° ಹೇಳಿದ ಗೆಣವತಿ ಹೋಮ ಮಾಡುವ ಕ್ರಮ ಇಲ್ಲಿ ಕೊಟ್ಟದು..ವಿವರವಾಗಿ ಕೊಟ್ಟಿದಿ.
    ಧನ್ಯವಾದಂಗೊ, ಹಾಂಗೇ ಪೂಜೆ ಮಾಡುಲೆ ಪುಸ್ತಕಲ್ಲಿ ಗಣಪತಿಮಾವಾಹಯಾಮಿ ಹೇಳಿ “ಷಣ್ಮುದ್ರಾನ್ ಪ್ರದರ್ಷ್ಯ’ ಹೇಳಿ ಕೊಟ್ಟಿದವು.
    ಆವಾಹಿತೋ ಭವ, ಸಂಸ್ಥಾಪಿತೋ ಭವ.. ಈ ಮುದ್ರೆಗಳ ಹೇಂಗೆ ಮಾಡುವದು ಹೇಳ್ತಿರೊ?

  12. THUMBBBBBBBBBBBBBBBBBBBBBBBBBBBBBBBBBBBBBBBBBBBBBBBBBBBBAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAA
    DANYAVADAGALU
    MAVA

  13. Ganapathi homada vidhi Heenge sikkiddu Enage upakara aathu. Sankalpalli
    Nirvighanatha – POORVAKA Heli ondu shabda serisire sari auttha heli enage kanutthu…

  14. ಒಪ್ಪಣ್ಣ ಭಾರೀ ಲಾಯ್ಕಯ್ದು!!
    ಆದರೆ ಚೌತಿ ಕಳುದ ಮೇಲೆ ನೋಡಿದ್ದಲ್ಲದ! ಹಾಂಗಾಗಿ ಈ ಸರ್ತಿ ಬರೇ ನೈವೇದ್ಯ ಮಾತ್ರ !!

  15. ಶ್ರೀದೇವಿಯಕ್ಕ ಈಗೀಗ ಪೇಟೆಲಿಪ್ಪವಕ್ಕೆಲ್ಲಾ ಕಿಚ್ಹಿನ ಕೆಂಡ ಹೇಂಗೆ ಮಾಡೋದು ಹೇಳಿ ಹೇಳಿಕೊದೇಕ್ಕಾಗಿ ಬಾರ ಹೇಳಿ ಕಾನ್ನ್ತು !!
    ಕ್ಯಾಂಪ್ ಫೈರ್ ; ಬರ್ಬಿಕ್ಯು; ಹೇಳಿ ಎಲ್ಲ ಮಾಡೋಗ ಉಪಯೋಗಿಸುವ ಚಾರ್ಕೋಲೆ ಕಿಚ್ಹು ಇಲ್ಲೇಯ ಹಾಂಗೆ ಮಾಡಿಗೊಂದರೆ ಆತು!!
    ದೇವರ ಕೆಲಸ ಅಲ್ಲದ ಅಕ್ಕ ರಜಾ ಕಷ್ಟ ಬಂದು ಮಾಡಿರೆ ಯಾವಾಗಲೂ ನೆಮ್ಪುದೆ , ಪುಣ್ಯವುದೇ ಸಿಕ್ಕುಗನ್ನೇ .ಶ್ರೀ ಮಹಾಗನಪತಿಯು
    ನಮ್ಮೆಲ್ಲರ ಕಾಪಾಡಿ ರಕ್ಷಿಸಲಿ

  16. ಆನು ಬೈಲಿಂಗೆ ಬಂದು ಎಲ್ಲೊರ ಲೆಕ್ಕಲ್ಲಿ ಸಂಕಲ್ಪ ಮಾಡಿ ಹೋಮ ಮಾಡ್ತೆ ಅಲ್ಲದಾ?ಹಾಂಗೆ ಎಲ್ಲೋರ ಮನಗೆ ಒಂದೇ ದಿನ ಬಂದು ಹೋಮ ಮಾಡ್ಲೆ ಎನಗೂ ಪುರುಸೊತ್ತು ಬೇಕನ್ನೇ..ಹಾಂಗೆ ಆನು ಈ ವಿಧಿ ಗಣೇಶನ ಹತ್ರೆ ತಿಳಿಶಿದ್ದು.ನೀನು ಹೇಳಿದ ವಿಷಯಂಗ ಎಲ್ಲ ಸರಿ..ಈ ಪ್ರಶ್ನೆಯೂ ಬಪ್ಪದು ಸಹಜ..ಆದರೆ ಇಲ್ಲಿ ಮೊದಲೇ ಹೇಳಿದ್ದು..ಕಲ್ಪೋಕ್ತ ವಿಧಿಲಿ ಸಂಕ್ಷಿಪ್ತ ಗಣಪತಿ ಹೋಮ.ಹೇಳಿ…ಹಾಂಗೆ ಹೇಳಿರೆ ನಮ್ಮ ಕಲ್ಪನಗೆ ತಕ್ಕ ಹಾಂಗೆ ಗಣಪತಿಯ ಸೇವೆ ಮಾಡ್ಳಕ್ಕು ಹೇಳಿ ಶಾಸ್ತ್ರ ವಿಧಿ (ಬರೇ ಚೌತಿ ದಿನಕ್ಕೆ ಮಾಡ್ತಕ್ಕೆ) ಇದ್ದು..ನಾವು ಹೋಮ ಮಾಡುವಗ ಅದರ ಮುಖ್ಯ ವಿಧಿಗೆ ಲೋಪ ಬಾರದ್ದ ರೀತಿಲಿ ಆನು ವಿವರಣೆ ಕೊಟ್ಟಿದೆ..ಹಾಂಗಾದ ಕಾರಣ ಇಲ್ಲಿ ಔಪಾಸನದ ಅಗತ್ಯ ಇಲ್ಲೆ..ಅದಕ್ಕೆ ಅದರದ್ದೇ ಆದ ವಿಧಿಲಿ ಹೋಮ ಮಾಡ್ತಾ ಕ್ರಮ ಇದ್ದು..ಔಪಾಸನ ಹೇಳಿರೆ ನಾವು ಅಗ್ನಿಯ ಸಂರಕ್ಷಣೆ ಮಾಡುವ ಒಂದು ವಿಧಿ.ಔಪಾಸನ ವಿಧಿಯ ಆನು ಇನ್ನು ಮುಂದೆ ಲೇಖನಲ್ಲಿ ವಿವರವಾಗಿ ತಿಳಿಶುತ್ತೆ ಆತೋ?
    ಇನ್ನು ಮಂಡಲ ಬರವ ವಿಷಯ;ಆ ಚಿತ್ರದ ವಿವರಣೆಯ ನಿನಗೆ ಗಣೇಶನ ಹತ್ತರೆ ಮಿಂಚಂಚೆ ಮಾಡ್ಲೆ ಹೇಳ್ತೆ
    ಮನೆಯ ಆಯದ ಒಳದಿಕೆ ಆದಷ್ಟು ಈಶಾನ್ಯಅಥವಾ ಆಗ್ನೇಯ ಭಾಗಲ್ಲಿ ಹೋಮ ಮಾಡ್ಲೆ ಅಕ್ಕು..ದೇವರ ಕೊಣೆಲಿಯೀ ಆಯೆಕ್ಕು ಹೇಳಿ ಇಲ್ಲೆ.
    ಔಪಾಸನ ವಿಧಿಲಿ ಮಾಡ್ತರೆ ಕೆಂಡ ಹೆಮ್ಮಕ್ಕ ತರೆಕ್ಕು.ಹೇಳಿರೆ ಅಗ್ನಿಯ ಸಂರಕ್ಷಣೆ ಮಾಡ್ತ ಜವಾಬ್ದಾರಿ ಹೆಮ್ಮಕ್ಕಳದ್ದು.ಅದಕ್ಕೆ ಅದ!ಹೋಮ ಆದಿಕ್ಕಿ ಔಪಾಸನವ ಗೆಂಡ,ಹೆಂಡತಿಯ ಹತ್ತರೆ ಕೊಡ್ತದು.
    ದೇವರ ದೀಪಂದ ಅಗ್ನಿಯ ಮೆಲ್ಲಂಗೆ ಕಾಯಿ ಸೊಪ್ಪಿಂಗೆ ಹೊತ್ಸಿ ತಂದರಾತು…
    ಅಗ್ನಿಯ ಆಚರಣೆ ಮಾಡ್ತ ವಿಧಿಯ ಬಗ್ಗೆ ಇನ್ನು ಮುಂದೆ ಲೇಖನಲ್ಲಿ ತಿಳಿಶುತ್ತೆ..ಈಗ ಸದ್ಯಕ್ಕೆ ಈ ವಿಧಿಲಿ ಹೋಮ ಮಾಡಿ.. ಆತೋ?
    ಗಣಪತಿಯ ಅನುಗ್ರಹಂದ ಎಲ್ಲ ಕಾರ್ಯ ನಿರ್ವಿಘ್ನವಾಗಿ ನೆರವೇರಲಿ..ಎಲ್ಲೋರಿಂಗೂ ಒಳ್ಳೆದಾಗಲಿ.
    ಹರೇ ರಾಮ.

  17. ಗಣೇಶ ಮಾವ° , ಬಟ್ಟ ಮಾವನ ಹತ್ತರೆ ವಿವರಣೆ ಕೇಳಿ ಬರದು ಕೊಟ್ಟದು ಲಾಯಕ ಆಯಿದಾತೋ…
    ಬಟ್ಟಮಾವ° ಸಕಾಲಕ್ಕೆ ಈಗೀಗ ಬೈಲಿಂಗೆ ವಿವರಣೆಗಳ ಕೊಡುತ್ತಾ ಇದ್ದಿ… ಒಳ್ಳೇದಾತು… ಈ ಸಂಸ್ಕಾರಂಗ ಬೈಲಿಲಿ ಮುಂದರಿಯಲಿ ಹೇಳ್ತಾ ಸದುದ್ದೇಶ ನಿಂಗಳದ್ದು. ( ಚೌತಿ ದಿನ ಸುಮಾರು ದಿಕ್ಕೆ ಹೋಪಲಿಪ್ಪ ಕಾರಣ ಅವರವರ ಮನೆಯ ಹೋಮವ ಅವ್ವವ್ವೆ ಸುದಾರ್ಸಿಕ್ಕಿ ಹೇಳಿದ್ದು ಅಲ್ಲನ್ನೇ 😉 ಏ! ಆಗಿರ.. ನಿಂಗ ಹಾಂಗೆ ಮಾಡ್ಲಿಲ್ಲೇ ಗೊಂತಿದ್ದು) ಕ್ರಮಂಗಳ ವಿವರವಾಗಿ ಕೊಟ್ಟಿದಿ, ಧನ್ಯವಾದಂಗಾ ಇಬ್ರಿಂಗುದೆ!!!
    ಎನಗೆ ಕೆಲವು ಸಂಶಯ..
    *ನಾವು ಯಾವಾಗಲೂ ಬಟ್ಟ ಮಾವನ ಬರ್ಸಿ ಹೋಮ ಮಾಡುವಾಗ ಔಪಾಸನ ತಂದು ವಿಧಿಲಿ ಮಾಡುದಲ್ಲದಾ? ಅಂಬಗ ಇಲ್ಲಿ ನಾವೇ ಮಾಡುವಾಗ ಹಾಂಗೆ ಮಾಡ್ಲೆ ಇಲ್ಲೆಯಾ?
    *ಮಂಡಲ ಬರವಗ ಅದಕ್ಕೆ ಕ್ರಮ ಇಲ್ಲೆಯಾ? ಎಲ್ಲಿಂದ ಸುರು, ಎಲ್ಲಿ ಕೊನೆ ಹೇಳಿ? ಹೇಂಗೆ ಬರದರೂ ಆವುತ್ತಾ?
    *ಈಗ ಒಪ್ಪಣ್ಣ ಒಂದು ವಿಷಯ ದೇವರ ಕೋಣೆದು ತೆಗದು ಜೇನುಗೂಡಿನ ಗೆಜಳ್ಸಿದ ಹಾಂಗೆ ಆಯಿದು, ಆದರೂ ಕೇಳುದು, ಸಣ್ಣ ದೇವರ ಕೋಣೆ ಇಪ್ಪವು ಬೇರೆ ಕೋಣೆಲಿ ಹೇಳಿದರೆ ಶುದ್ಧ ಇಪ್ಪಲ್ಲಿ ಹೋಮ ಮಾಡುಲಕ್ಕಾ ಹೇಳಿ….
    *ಬಾವಡೆಲಿ ಕೆಂಡ ಹೆಮ್ಮಕ್ಕ ತರೆಕ್ಕಲ್ಲದಾ?
    *ಈ ಪೇಟೇಲಿ ಇಪ್ಪವು ಕೆಂಡ ಎಲ್ಲಿಂದ ತಪ್ಪದು? ಹೇಂಗೆ ಮಾಡುದು?
    ಇದರ ವಿವರಂಗಳ ಕೊಟ್ಟಿದ್ದರೆ ಒಳ್ಳೆದಿತ್ತು.
    ಧನ್ಯವಾದಂಗ ಪುನಾ ಒಂದಾರಿ..

  18. ಭಾರಿ ಒಳ್ಳೆದಾತು ಈಗ ಹೋಮ ಮಾಡುವ ಕ್ರಮ ಹಾಕಿದ್ದು. ಭಾರಿ ಲಾಯ್ಕಾಯಿದು. ಆನು ಇದರ ಪ್ರಿಂಟ್ ತೆಕ್ಕೊಂಡಿದೆ. ಇನ್ನು ಚೌತಿ ದಿನ ಇದರ ನೋಡಿಯೊಂಡು ಹೋಮ ಮಾಡುವ ಅಂದಾಜಿಲಿ ಇದ್ದೆ.
    ಮುರಳಿ

  19. ಭಟ್ಟಮಾವ, ಬಾರಿ ಕೊಶಿಯಾತು.. ಗಣಪತಿ ಹೋಮ ಮಾಡುದು ತಿಳುಶಿಕೊಟ್ಟದಕ್ಕೆ… ಇನ್ನು ಹೀ೦ಗೆ… ನಿ೦ಗೊಗೆ ಎಡಿಗಾವುತಾನ್ಗೆ ಬೇರೆ ಬೇರೆ ಹೋಮ, ಪೂಜೆಗಳ ಬಗ್ಗೆ ವಿವರ ಕೊಡಿ… 😛 😀

  20. ತುಂಬ ಉಪಕಾರ ಆತು ಭಟ್ಟಮಾವ°. ಎಂಗಳ ಮನೆಲಿ ಗುರುಪರಂಪರಾಕ್ರಮೇಣ ಬಂದ ಕ್ರಮಲ್ಲಿ ಗಣ(ಪತಿ) ಹೋಮ ಮಾಡುತ್ತೆಯೊ°. ಅದು ಹೆಚ್ಚು ಕಮ್ಮಿ ಇದೇ ಕ್ರಮಲ್ಲಿ ಇದ್ದು.

  21. ಭಟ್ಟ ಮಾವನಿಂದ ಬೇಡುವ ಆಶೀರ್ವಾದಂಗೊ.
    ಭಟ್ಟ ಮಾವನ, ಗಣೇಶ ಮಾವನ ಪ್ರಯತ್ನ, ಒಪ್ಪಣ್ಣನ ಸಹಕಾರಂದ, ಹೋಮ ಮಾಡುವ ವಿವರ ಬಯಲಿಂಗೆ ಕೊಟ್ಟದು ಸಂತೋಷ ಆತು. ಎಲ್ಲರಿಂಗೂ ಧನ್ಯವಾದಂಗೊ.
    ಮಾಡುವ ರೀತಿಲಿ ಬೇರೆ ಬೇರೆ ಕ್ರಮಂಗೊ ಇದ್ದರೂ ಅಕೇರಿಗೆ ಸೇರುವದು ಆ ದೊಡ್ಡ ಚಾಮಿಗೆ ಅಲ್ಲದಾ? ಅವನ ಅನುಗ್ರಹ ಎಲ್ಲರಿಂಗೂ ಸಿಕ್ಕಲಿ.

  22. I think it is not so useful because, we perform SHREE MAHAGANAPATI HOMA by Aacharya, it is only the correct tradition i think.

    1. ಕಾಂತಣ್ಣ…ಆದಷ್ಟು ಹವ್ಯಕ ಭಾಷೆಲಿ ಒಪ್ಪ ಕೊಡೆಕು ಹೇಳಿ ಕೋರಿಕೆ.. ದೇಶ ಕಾಲೌ ಸಂಕೀರ್ತ್ಯ ಹೇಳಿ ಇದ್ದ ಹಾಂಗೆ ಒಂದೊಂದು ಊರಿಲಿ ಆಚರಣೆಗ ವಿಭಿನ್ನ ರೀತಿಲಿ ಇರ್ತು.ಅದರ ಹೆರ ತಪ್ಪ ಪ್ರಯತ್ನ ನಾವು ಮಾಡುವ.ಆ ಮೂಲಕ ಆಚರಣೆಗಳ ಗೌರವಿಸುವ. ಹರೇ ರಾಮ..

    2. ಕಾಂತಣ್ಣ… ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಚೌತಿ ದಿನ ಮನೆಗಳಲ್ಲಿ ಗಣಹೋಮ ಮನೆಯವ್ವೇ ಮಾಡ್ತವು. ಅದಕ್ಕೆ ಪುರೋಹಿತರ ಬಪ್ಪಲೆ ಹೇಳುಲೆ ಇಲ್ಲೆ. ಮನೆಯವ್ವೇ ಭಕ್ತಿಲಿ ಮಾಡುದು. ಹಾಂಗಾದ ಕಾರಣ ಬಟ್ಟಮಾವ ಕ್ರಮ ಹೇಳಿ ಕೊಟ್ಟದು ಒಳ್ಳೆದಾತು. ಹೇಂಗೂ ಮಾಡುವಗ ರಜ ಕ್ರಮ ಗೊಂತಿದ್ದರೆ ಒಳ್ಳೆದು. ಹಾಂಗಾಗಿ it is not so useful ಹೇಳುವ ನಿಂಗಳ ಅಭಿಪ್ರಾಯ ಸರಿಯಲ್ಲ.

  23. batta mavange sastanga pranama madidde allindale ondu aashirvaada madikki.aayaaya kaalakke yevadu aayeko adara nempu madi kodtadarottinge madekaada kramavannu heli kodtadakke estu sarti kaalu hidudaru kammiye.Ottinge oppannange ondu oppa kodadre aagaane.antu oppangalottinge mohananna.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×