ಸರ್ವೋ ವೈ ರುದ್ರಃ

April 25, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಲೇಖಕರ ಪರಿಚಯ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಸರ್ವೋ ವೈ ರುದ್ರಃ” ಹೇಳುವ ಕನ್ನಡ ಗೀತೆಗಳ ಸಂಗ್ರಹವ ಇಲ್ಲಿ ಕೊಡುತ್ತಾ ಇದ್ದೆ.
ಇವು ಬರದ ರುದ್ರ ಗೀತೆಯ ಅನುವಾದವ ಕಳುದವಾರಂಗಳಲ್ಲಿ ನೋಡಿದ್ದು.(
ಸಂಕೊಲೆ)

– ಶರ್ಮಪ್ಪಚ್ಚಿ


ಸರ್ವೋ ವೈ ರುದ್ರಃ

ಸರ್ವೋ ವೈ ರುದ್ರಸ್ತಸ್ಮೈ ರುದ್ರಾಯ ನಮೋ ಅಸ್ತು| ಪುರುಷೋ ವೈ ರುದ್ರಃ ಸನ್ಮಹೋ ನಮೋ ನಮಃ||
ವಿಶ್ವಂ ಭೂತಂ ಭುವನಂ ಚಿತ್ರಂ ಬಹುಧಾ ಜಾತಂ ಜಾಯಮಾನಂಚಯತ್|| ಸರ್ವೋ ಹ್ಯೇಷ ರುದ್ರಸ್ತಸ್ಮೈ ರುದ್ರಾಯ ನಮೋ ಅಸ್ತು||

ಕದ್ರುದ್ರಾಯ ಪ್ರಚೇತಸೇ ಮೀಢುಷ್ಟಮಾಯ ತವ್ಯಸೇ||
ವೋಚೇಮ ಶಂತಮಗ್೦ ಹೃದೇ|| ಸರ್ವೋ ಹ್ಯೇಷ ರುದ್ರಸ್ತಸ್ಮೈ ರುದ್ರಾಯನಮೋ ಅಸ್ತು||
ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿ ವರ್ಧನಮ್|| ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾಮೃತಾತ್||
ಏಷ ತೇ ರುದ್ರ ಭಾಗಸ್ತಂ ಜುಷಸ್ವ ತೇನಾವಸೇನ ಪರೋ ಮೂಜವತೋತೀಹ್ಯವತತ ಧನ್ವಾ ಪಿನಾಕ ಹಸ್ತಃ ಕೃತ್ತಿ ವಾಸಾಃ||
ಋತಗ್೦ ಸತ್ಯಂ ಪರಂ ಬ್ರಹ್ಮ ಪುರುಷಂ ಕೃಷ್ಣ ಪಿಂಗಲಮ್|
ಊರ್ಧ್ವರೇತಂ ವಿರೂಪಾಕ್ಷಂ ವಿಶ್ವರೂಪಾಯ ವೈ ನಮೋ ನಮಃ||

ನಮೋ ಹಿರಣ್ಯಬಾಹವೇ ಹಿರಣ್ಯ ವರ್ಣಾಯ ಹಿರಣ್ಯ ರೂಪಾಯ ಹಿರಣ್ಯಪತಯೇಂಬಿಕಾಪತಯ ಉಮಾಪತಯೇ ಪಶುಪತಯೇ ನಮೋ ನಮಃ||

ಸರ್ವೋ ವೈ ರುದ್ರ – ಕನ್ನಡ

ಸರ್ವರಲ್ಲಿಯು ರುದ್ರರಿರುವರು ಸರ್ವ ರುದ್ರಗೆ ನಮನವಿರಲಿ
ಸತ್ ಸ್ವರೂಪದ ಪುರುಷನಾಗಿಹ ರುದ್ರ ಚಿನ್ಮಯ ನಿನಗೆ ನಮಿಪೆ||1||

ಜಡ ಸ್ವರೂಪದ ಜಗವು; ಜಗದಲಿ ಚೇತನಾಂಶವು ಮತ್ತೆ ವಿಶ್ವ|
ಮೊದಲು ಜನಿಸಿದ ಮುಂದೆ ಜನಿಸುವ ಬಹಳ ರೂಪದಿ ಜನಿಸಲಿಹರೆಂ|
ಮೂಲವಾಗಿಹ ಸರ್ವ ರೂಪದ ರುದ್ರ ದೇವಗೆ ನಮಿಪೆ ನಮಿಪೆ||2||

ಜ್ಞಾನ ಹೊಂದಿದ ಸಿರಿಯ ಸುರಿಯುವ ಸ್ತುತ್ಯನಾದವ ಹೃದಯ ನಿರತ|
ಶ್ಲಾಘ್ಯವಾಗಿಹ ರುದ್ರ ದೇವಗೆ ಶಾಂತ ಸುಖಕರ ಸ್ತುತಿಯನೊರೆವೆ||3||

ಗಂಧ ಪರಿಮಳ ಪುಷ್ಟಿಗೊಳಿಪನೆ ಮೂರು ಕಣ್ಣಿನ ರುದ್ರ ಶಿವನೆ|
ಸೌತೆಯಂದದಿ ಮೃತ್ಯು ಮುಕ್ತವ ಮಾಡು; ಅಮೃತದಿಂದ ಬೇಡ||4||

ಬುತ್ತಿಯಂದದಿ ಇತ್ತ ಹವಿಸನು ಎತ್ತಿಕೊಳ್ಳುತ ಎತ್ತರೇರು|
ಚರ್ಮವಾನೆಯ ಧರಿಸಿ ದೇಹದಿ ಧನು ಪಿನಾಕದಿ ಮುದದಿ ಚಲಿಸು||5||

ಪರಮ ಸತ್ಯವು ಪರಮ ಬ್ರಹ್ಮವು ಕಪ್ಪು ಪಿಂಗಳ ಪುರುಷ ರೂಪಿ|
ಊರ್ಧ್ವರೇತದ ರುದ್ರ ನಮಿಪೆನು ಮೂರು ಕಣ್ಣಿನ ವಿಶ್ವವ್ಯಾಪಿ||6||

ಹೊನ್ನ ಭುಜಗಳ ಹೊನ್ನ ಬಣ್ಣದ ಹೊನ್ನ ರೂಪಿನ ಉಮೆಯ ಪತಿಗೆ|
ಅಂಬಿಕಾಪತಿ ಹೊನ್ನ ಪತಿಗೂ ಸಕಲ ಪಶುಗಳ ಪತಿಗೆ ನಮಿಪೆ||7||

~*~*~*~

ಸರ್ವೋ ವೈ ರುದ್ರಃ

ಸದ್ಯೋಜಾತಂ ಪ್ರಪದ್ಯಾಮಿ ಸದ್ಯೋಜಾತಾಯ ವೈ ನಮೋ ನಮಃ||
ಭವೇ ಭವೇ ನಾತಿಭವೇ ಭವಸ್ವಮಾಮ್| ಭವೋದ್ಭವಾಯ ನಮಃ||
ವಾಮ ದೇವಯ ನಮೋ ಜ್ಯೇಷ್ಠಾಯ ನಮಃ ಶ್ರೇಷ್ಠಾಯ ನಮೋ ರುದ್ರಾಯ ನಮಃ ಕಾಲಾಯ ನಮಃ ಕಲವಿಕರಣಾಯ –
ನಮೋ ಬಲವಿಕರಣಾಯ ನಮೋ ಬಲಾಯ ನಮೋ ಬಲ ಪ್ರಮಥನಾಯ ನಮಃ ಸರ್ವ ಭೂತದಮನಾಯ ನಮೋ ಮನೋನ್ಮನಾಯ ನಮಃ||

ಸರ್ವೋ ವೈ ರುದ್ರ – ಕನ್ನಡ

ಶಿವನೆ ಸದ್ಯೋಜಾತ ನಮಿಪೆನು ಜನ್ಮ ಜನ್ಮಕು ಜನ್ಮ ಬೇಡ|
ಜನ್ಮ ದಾಟಲು ತತ್ವ ಜ್ಞಾನವ ಸದ್ಯೋಜಾತನೆ ಕರುಣಿಸೆಮಗೆ||8||

ಸುಂದರಾಂಗಗೆ ಆದಿ ಪುರುಷಗೆ ಶ್ರೇಷ್ಠ ರುದ್ರಗೆ ಕಾಲ ಕಲಿಗೆ|
ತೋಷದಿಂದಲೆ ಸೃಷ್ಟಿಕರ್ತಗೆ ಬಲವನೀವಗೆ ಬಲವಹರಗೆ||9||

ಬಲವ ಮರ್ದಿಸಿ ಮುದವನೀವಗೆ ಸರ್ವ ಪ್ರಾಣಿಯ ದಮನಿಸುವಗೆ|
ಸರ್ವ ಜ್ಞಾನದ ಪರಮ ಶಿವನಿಗೆ ನಮಿಪೆ ರುದ್ರನ ಸಕಲ ಬಲಕೆ||10||

~*~*~*~

ಸರ್ವೋ ವೈ ರುದ್ರಃ

ಅಘೋರೇಭ್ಯೋಥ ಘೋರೇಭ್ಯೋ ಘೋರಘೋರ ತರೇಭ್ಯಃ|
ಸರ್ವೇಭ್ಯಃ ಸರ್ವ ಶರ್ವೇಭ್ಯೋ ನಮಸ್ತೇ ಅಸ್ತು ರುದ್ರ ರೂಪೇಭ್ಯಃ||

ತತ್ಪುರುಷಾಯ ವಿದ್ಮಹೇ ಮಹಾ ದೇವಾಯ ಧೀಮಹಿ|
ತನ್ನೋ ರುದ್ರಃ ಪ್ರಚೋದಯಾತ್||

ಸರ್ವೋ ವೈ ರುದ್ರ – ಕನ್ನಡ

ಘೋರವಲ್ಲದ ಘೋರವಾಗಿಯು ಘೋರದಿಂದಲು ಘೋರವೆನಿಪ|
ಪ್ರಳಯ ರಮಣನೆ ರುದ್ರ ರುಧಿರನೆ ಸರ್ವವ್ಯಾಪಿಯೆ ನಿನಗೆ ನಮಿಪೆ||೧೧||

ಶ್ರೇಷ್ಠ ದೇವನೆ ತತ್ವ ಪುರುಷನೆ ನಿನ್ನನರಸುತ ಧ್ಯಾನಿಸುವೆವು|
ರುದ್ರ ದೇವನ ಕರುಣೆಯಿಂದಲಿ ಧ್ಯಾನ ಜ್ಞಾನವು ಹೊಂದಿ ಬರಲಿ||೧೨||

~*~*~*~

ಸರ್ವೋ ವೈ ರುದ್ರಃ

ಈಶಾನಃ ಸರ್ವ ವಿದ್ಯಾನಾಮೀಶ್ವರಃ ಸರ್ವ ಭೂತಾನಾಂ ಬ್ರಹ್ಮಾಧಿಪತಿರ್ಬ್ರಹ್ಮಣೋಧಿಪತಿರ್ಬ್ರಹ್ಮಾ ಶಿವೋ ಮೇ ಅಸ್ತು ಸದಾಶಿವೋಮ್||
ಯೋ ರುದ್ರೋ ಅಗ್ನೌ ಯೋ ಅಪ್ಸು ಯ ಓಷಧೀಷು ಯೋ ರುದ್ರೋ ವಿಶ್ವಾ ಭುವನಾ ವಿವೇಶ ತಸ್ಮೈ ರುದ್ರಾಯ ನಮೋ ಅಸ್ತು||

ಯಸ್ಮಾತ್ಪರಂ ನಾಪರಮಸ್ತಿ ಕಿಂಚಿದ್ಯಸ್ಮಾನ್ನಾಣೀಯೋ ನ ಜ್ಯಾಯೋಸ್ತಿ ಕಶ್ತಿತ್|
ವೃಕ್ಷ ಇವ ಸ್ತಬ್ಧೋ ದಿವಿ ತಿಷ್ಠತ್ಯೇಕಸ್ತೇನೇದಂ ಪೂರ್ಣಂ ಪುರುಷೇಣ ಸರ್ವಮ್||

ತಮುಷ್ಟುಹಿ ಯಃ ಸ್ವಿಷುಃ ಸುಧನ್ವಾ ಯೋ ವಿಶ್ವಸ್ಯ ಕ್ಷಯತಿ ಭೇಷಜಸ್ಯ|
ಯಕ್ಷ್ವಾಮಹೇ ಸೌಮನಸಾಯ ರುದ್ರಂ ನಮೋಭಿರ್ದೇವಮಸುರಂದುವಸ್ಯ|

ಸರ್ವೋ ವೈ ರುದ್ರ – ಕನ್ನಡ

ಸಕಲ ವಿದ್ಯೆಗೆ ಈಶನಾಗಿಹೆ ಜೀವಕೇಶ್ವರ ಸಕಲ ಜಗಕೆ|
ವೇದದಧಿಪತಿ ಬ್ರಹ್ಮದಧಿಪತಿ ಶುಭ ಸದಾಶಿವ ನನ್ನಗೊಳಿಸು||13||

ಶ್ರೇಷ್ಠನಾದರು ನೀಚನಾದರು ದೊಡ್ಡದಾಗಲಿ ಚಿಕ್ಕದಿರಲಿ|
ಬ್ರಹ್ಮ ತತ್ವವ ಮೀರಿ ಯಾರಿಗು ಲೋಕದೆಲ್ಲೆಡೆ ಕಾಣಸಿಗದು||14||

ಶೇಷ್ಠ ಬಾಣವ ಧರಿಸಿದವನಿಗೆ ಶ್ರೇಷ್ಠ ಬಿಲ್ಲನು ಹಿಡಿದವನಿಗೆ|
ವಿಶ್ವದೌಷಧಿಯಾದ ರುದ್ರಗೆ ಪೂಜ್ಯ ಸ್ತುತಿಯಲಿ ಪೂಜಿಸುವೆನು||15||

ದಿವ್ಯ ತೇಜದ ಶಿವನ ತೋಷದಿ ಅಸುರ ದಮನಕೆ ನಮನ ಗೈವೆ|
ಪರಮ ಸುಖವನು ಮನದಿ ನೀಡಲು ನಮನದೊಂದಿಗೆ ಅರ್ಚಿಸುವೆನು||16||

~*~*~*~

ಸರ್ವೋ ವೈ ರುದ್ರಃ

ಅಯಂ ಮೇ ಹಸ್ತೋ ಭಗವಾನಯಂ ಮೇ ಭಗವತ್ತರಃ|
ಅಯಂ ಮೇ ವಿಶ್ವಭೇಷಜೋಯಂ ಶಿವಾಭಿಮರ್ಶನಃ|

ಯೇ ತೇ ಸಹಸ್ರಮಯುತಂ ಪಾಶಾ ಮೃತ್ಯೋ ಮರ್ತ್ಯಾಯ ಹಂತವೇ|
ತಾನ್, ಯಜ್ಞಸ್ಯ ಮಾಯಯಾ ಸರ್ವಾನಹ ಯಜಾಮಹೇ|

ಮೃತ್ಯವೇ ಸ್ವಾಹಾ ಮೃತ್ಯವೇ ಸ್ವಾಹಾ ||

ಓಂ ನಮೋ ಭಗವತೇ ರುದ್ರಾಯ ವಿಷ್ಣವೇ ಮೃತ್ಯುರ್ಮೇ ಪಾಹಿ||

ಓಂ ಶಾಂತಿಃ ಶಾಂತಿಃ ಶಾಂತಿಃ ||

ಸರ್ವೋ ವೈ ರುದ್ರ – ಕನ್ನಡ

ನನ್ನ ಕೈಯಿದು ಲಿಂಗ ಸ್ಪರ್ಶದಿ ಭಾಗ್ಯಗೊಂಡಿತು ಪೂಜೆಯಿಂದ|
ಮೇರು ಭಾಗ್ಯವ ಪಡೆದುಕೊಂಡಿತು ವಿಶ್ವದೌಷಧಿಯಾಗಿಯಿರಲಿ||17||

ಉರುಳು ಸಾಸಿರ ಮನುಜ ಕೊರಳಿಗೆ ಕೈಲಿ ಹಿಡಿದಿಹೆ ಮೃತ್ಯುಶಿವನೆ|
ಯಜ್ಞ ಪೂಜೆಯ ಬಲದಿ ಎಲ್ಲವ ಸಡಿಲು ಗೊಳಿಪೆವು ನಿನ್ನ ದಯದಿ||18||

ಮೃತ್ಯುರೂಪದ ರುದ್ರ ಶಿವನಿಗೆ ಹೋಮಿಸುತ್ತಿಹೆ ಭಕ್ತಿಯಿಂದ|
ಮೃತ್ಯುರೂಪದ ರುದ್ರ ಶಿವನಿಗೆ ಹೋಮಿಸುತ್ತಿಹೆ ಭಕ್ತಿಯಿಂದ|
ವಿಶ್ವ ವ್ಯಾಪಕ ರುದ್ರ ದೇವನೆ ನನ್ನ ರಕ್ಷಿಸು ಮೃತ್ಯುವಿಂದ||19||

ಓಂ ಶಾಂತಿಃ ಶಾಂತಿಃ ಶಾಂತಿಃ ||

~*~*~*~

ಸಂಗ್ರಹ:

 • ವೇದ ಮಂತ್ರ ಗೀತಾಂಜಲಿ”, ಲೇಖಕರು: ಡಾ| ಮಡ್ವ ಶಾಮ ಭಟ್ಟ
 • ಇದೇ ಲೇಖಕರ ರುದ್ರಗೀತೆ ಬೈಲಿಲಿ ಅದಾಗಲೇ ಬಯಿಂದು. ಆಸಕ್ತರು ಇಲ್ಲಿ ನೋಡ್ಳಕ್ಕು: ಸಂಕೊಲೆ
ಸರ್ವೋ ವೈ ರುದ್ರಃ, 5.0 out of 10 based on 2 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಗೋಪಾಲಣ್ಣ
  Gopalakrishna BHAT S.K.

  ರುದ್ರನ ಪ್ರಾರ್ಥನೆ ಚಂದ ಬಯಿಂದು.

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಅನುವಾದ ಓದಿಗೊಂಡು ರುದ್ರ ಹೇಳ್ಳೆ ಲಾಯಕ್ಕ ಆವ್ತು. ಸಾರ್ಥಕ ಕೆಲಸ ಹೇಳಿ ನಮ್ಮ ಒಪ್ಪ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಡ್ಕತ್ತಿಮಾರುಮಾವ°ಜಯಗೌರಿ ಅಕ್ಕ°ಅಕ್ಷರ°ಬಂಡಾಡಿ ಅಜ್ಜಿಪುತ್ತೂರಿನ ಪುಟ್ಟಕ್ಕವಿಜಯತ್ತೆಶ್ಯಾಮಣ್ಣಉಡುಪುಮೂಲೆ ಅಪ್ಪಚ್ಚಿದೇವಸ್ಯ ಮಾಣಿಅಕ್ಷರದಣ್ಣvreddhiಚೆನ್ನಬೆಟ್ಟಣ್ಣನೀರ್ಕಜೆ ಮಹೇಶದೊಡ್ಮನೆ ಭಾವವಸಂತರಾಜ್ ಹಳೆಮನೆಡಾಮಹೇಶಣ್ಣಪುಟ್ಟಬಾವ°ಸರ್ಪಮಲೆ ಮಾವ°ದೀಪಿಕಾದೊಡ್ಡಭಾವಮಂಗ್ಳೂರ ಮಾಣಿಬೋಸ ಬಾವಶೇಡಿಗುಮ್ಮೆ ಪುಳ್ಳಿಪೆರ್ಲದಣ್ಣಪುತ್ತೂರುಬಾವಸಂಪಾದಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ