ಶ್ರೀ ಶಾರದಾಭುಜಂಗಪ್ರಯಾತಾಷ್ಟಕಮ್

April 23, 2011 ರ 8:28 pmಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶೀಮದ್ ಶಂಕರಭಗವತ್ಪಾದ ವಿರಚಿತ
ಶ್ರೀ ಶಾರದಾಭುಜಂಗಪ್ರಯಾತಾಷ್ಟಕಮ್

ಸುವಕ್ಷೋಜಕುಂಭಾಂ ಸುಧಾಪೂರ್ಣ ಕುಂಭಾಂ
ಪ್ರಸಾದಾವಲಂಬಾಂ ಪ್ರಪುಣ್ಯಾವಲಂಬಾಮ್ |
ಸದಾಸ್ಯೇಂದುಬಿಂಬಾಂ ಸದಾನೋಷ್ಠ ಬಿಂಬಾಂ
ಭಜೇ ಶಾರದಾಂಬಾಮಜಸ್ರಂ ಮದಂಬಾಮ್ ||೧||

[ವಿಶ್ವಪೋಷಣೆಗಾಗಿ ದೇವಿ ಶಾರದೆ ಅಮೃತಪೂರ್ಣವಾದ ಸ್ತನಯುಗ್ಮವನ್ನು ಧರಿಸಿದ್ದಾಳೆ. ಸದಾ ಪ್ರಸನ್ನ ಮುಖಮುದ್ರೆಯಿಂದ ಕೂಡಿದ  ಆಕೆ ಪುಣ್ಯವಂತರಿಗೆ ಆಶ್ರಯದಾತಳು. ಚಂದ್ರಬಿಂಬದಂಥ ಮುಖಮಂಡಲ, ಅಮೃತವನ್ನು ಸೂಸುತ್ತಿರುವ ತುಟಿಗಳಿಂದ ಸದಾ ವರದಾನದ ಮಾತುಗಳು, ಇಂಥ ತಾಯಿ ಶಾರದೆಯನ್ನು ನಾನು ಸದಾ ಭಜಿಸುತ್ತೇನೆ.]
ಕಟಾಕ್ಷೇ ದಯಾರ್ದ್ರಾಂ ಕರೇ ಜ್ಞಾನಮುದ್ರಾಂ
ಕಲಾಭಿರ್ವಿನಿದ್ರಾಂ ಕಲಾಪೈಃ ಸುಭದ್ರಾಮ್ |
ಪುರಸ್ತ್ರೀಂ ವಿನಿದ್ರಾಂ ಪುರಸ್ತುಂಗಭದ್ರಾಂ
ಭಜೇ ಶಾರದಾಂಬಾಮಜಸ್ರಂ ಮದಂಬಾಮ್ ||೨||

[ಶಾರದಾಂಬೆಯ ಕಣ್ಣುಗಳು ಸದಾ ಕರುಣೆಯಿಂದ ಆರ್ದ್ರವಾಗಿವೆ. ಕೈಯಲ್ಲಿ ಜ್ಞಾನ ಮುದ್ರೆಯನ್ನು ಧರಿಸಿದ್ದಾಳೆ. ಚತುಷ್ಷಷ್ಠಿ ಕಲೆಗಳಿಂದ ಸದಾ ಪರಿಪೂರ್ಣಳಾದ ಆಕೆ ನವಿಲುಗರಿಗಳಿಂದ ಸುಶೋಭಿತಳು. ತುಂಗಭದ್ರಾ ತೀರವಾಸಿನಿ, ಚೈತನ್ಯದ ಚಿಲುಮೆ ತ್ರಿಪುರ ಸುಂದರಿಯನ್ನು ನಾನು ಸದಾ ಧ್ಯಾನಿಸುತ್ತೇನೆ.]
ಲಲಾಮಾಂಕಫಾಲಾಂ ಲಸದ್ಗಾನಲೋಲಾಂ
ಸ್ವಭಕ್ತೈಕಪಾಲಾಂ ಯಶಃ ಶ್ರೀ ಕಪೋಲಾಮ್ |
ಕರೇ ತ್ವಕ್ಷಮಾಲಾಂ ಕನತ್ಪ್ರತ್ನಲೋಲಾಂ
ಭಜೇ ಶಾರದಾಂಬಾಮಜಸ್ರಂ ಮದಂಬಾಮ್ ||೩||

[ಶಾರದಾಮಾತೆ ಹಣೆಯಲ್ಲಿ ಸುಂದರ ತಿಲಕವನ್ನು ಧರಿಸಿದ್ದಾಳೆ. ಇಂಪಾದ ಗಾನದಲ್ಲಿ ಆಸಕ್ತಳು, ಭಕ್ತರನ್ನು ಕಾಪಾಡುವವಳು, ಕೀರ್ತಿಮಂತವಾದ ಕಪೋಲಗಳಿಂದ ರಮಣೀಯಳು, ಕೈಯಲಿ ತೂಗುತ್ತಿರುವ ಜಪಸರವನ್ನು ಧರಿಸಿದ್ದಾಳೆ. ಇವಳನ್ನು ನಾನು ಧ್ಯಾನಿಸುತ್ತೇನೆ.]
ಸುಸೀಮಂತವೇಣೀಂ ದೃಶಾ ನಿರ್ಜಿತೈಣೀಂ
ರಮತ್ಕೀರವಾಣೀಂ ನಮದ್ವಜ್ರಪಾಣಿಮ್ |
ಸುಧಾಮಂಥರಾಸ್ಯಾಂ ಮುದಾ ಚಿಂತ್ಯವೇಣೀಂ
ಭಜೇ ಶಾರದಾಂಬಾಮಜಸ್ರಂ ಮದಂಬಾಮ್ ||೪||

[ಶಾರದಾದೇವಿಯ ಬೈತಲೆ ಹಾಗೂ ಕೇಶರಾಶಿ ಸುಂದರವಾದವುಗಳು. ಆಕೆಯ ಕಣ್ಣಿನ ಸೌಂದರ್ಯ ಹೆಣ್ಣು ಜಿಂಕೆಯ ನೋಟವನ್ನು ಮೀರಿಸುವಂತಹದು. ಆಕೆಯ ಮಾತು ಗಿಣಿಯ ಮಾತಿಗಿಂತ ಮೋಹಕವಾದದ್ದು. ದೇವೇಂದ್ರಾದಿಗಳೂ ಆಕೆಯ ಮುಂದೆ ಬಗ್ಗುತ್ತಾರೆ. ಅಮೃತಪಾನದಿಂದಾಗಿ ಆಕೆಯ ಮುಖದಲ್ಲಿ ಜಾಢ್ಯವಾವರಿಸಿದಂತೆ ತೋರುತ್ತದೆ. ಆಕೆಯ ಕೇಶರಾಶಿಯನ್ನು ನೋಡುವುದೇ ಒಂದು ಸಂತೋಷದ ಕೆಲಸ. ಇಂಥ ತಾಯಿಯನ್ನು ನಾನು ವಂದಿಸುತ್ತೇನೆ.]
ಸುಶಾಂತಾಂ ಸುದೇಹಾಂ ದೃಗಂತೇ ಕಚಾಂತಾಂ
ಲಸತ್ಸಲ್ಲತಾಂಗೀಮನಂತಾಮಚಿಂತ್ಯಾಮ್ |
ಸ್ಮರೇತ್ತಾಪಸೈಃ ಸರ್ಗಪೂರ್ವಸ್ಥಿತಾಂ ತಾಂ
ಭಜೇ ಶಾರದಾಂಬಾಮಜಸ್ರಂ ಮದಂಬಾಮ್ ||೫||

[ದೇವಿ ಶಾರದೆ ಶಾಂತ ಸ್ವರೂಪಿಣಿ, ಬಳುಕುವ ಬಳ್ಳಿಯಂತಹ ಸುಂದರ ದೇಹ ಅವಳದು. ಆಕೆಯ ಕೇಶಪಾಶ ಕಣ್ಣುಗಳ ತುದಿಯವರೆಗೆ ಹರಡಿಕೊಂಡಿದೆ. ಆದಿ ಅಂತ್ಯಗಳಿಲ್ಲದ ಆಕೆ ನಮ್ಮ ಮನಸ್ಸಿಗೆ ನಿಲುಕದವಳು. ಸೃಷ್ಟಿಗಿಂತಲೂ ಮುಂಚೆಯೇ ಇದ್ದ ಆಕೆಯನ್ನು ತಪಸ್ವಿಗಳು ಧ್ಯಾನ ಮಾಡುತ್ತಾರೆ. ಆ ತಾಯೊಯನ್ನು ನಾನು ಸ್ಮರಿಸುತ್ತೇನೆ]
ಕುರಂಗೇ ತುರಂಗೇ ಮೃಗೇಂದ್ರೇ ಖಗೇಂದ್ರೇ
ಮರಾಲೇ ಮದೇಭೇ ಮಹೋಕ್ಷೇಧಿರೂಡಾಮ್ |
ಮಹತ್ಯಾಂ ನವಮ್ಯಾಂ ಸದಾ ಸಾಮರೂಪಾಂ
ಭಜೇ ಶಾರದಾಂಬಾಮಜಸ್ರಂ ಮದಂಬಾಮ್ ||೬||

[ಶಾರದಾದೇವಿಯು ನಾನಾ ದೇವತೆಗಳ ಶಕ್ತಿರೂಪಳಾಗಿ ನಾನಾ ಆಕಾರಗಳನ್ನು ತಳೆದು ಜಿಂಕೆ, ಕುದುರೆ, ಸಿಂಹ, ಗರುಡ, ಹಂಸ, ಆನೆ, ಎತ್ತು, ಮುಂತಾದವುಗಳನ್ನು ತನ್ನ ವಾಹನವನ್ನಾಗಿ ಮಾಡಿಕೊಳ್ಳುತ್ತಾಳೆ. ಮಹಾನವಮಿಯಂದು ಶಾಂತಸ್ವರೂಪದಿಂದ ಶೋಭಿಸುತ್ತಾಳೆ. ಆ ಮಾತೆಗೆ ನನ್ನ ನಮಸ್ಕಾರ.]
ಜ್ವಲತ್ಕಾಂತಿವಹ್ನಿಂ ಜಗನ್ಮೋಹನಾಂಗೀಂ
ಭಜನ್ಮಾನಸಾಂಭೋಜಸುಭ್ರಾಂತಭೃಂಗೀಮ್ |
ನಿಜಸ್ತೋತ್ರಸಂಗೀತನೃತ್ಯಪ್ರಭಾಂಗೀಂ
ಭಜೇ ಶಾರದಾಂಬಾಮಜಸ್ರಂ ಮದಂಬಾಮ್ ||೭||

[ಶಾರದಾದೇವಿಯ ಶರೀರ ಅಗ್ನಿಯ ತೇಜಸ್ಸಿನಂತೆ ಕಾಂತಿಪೂರ್ಣವಾದದ್ದು. ಲೋಕಮೋಹಕವಾದ ಸೌಂದರ್ಯದಿಂದ ಕೂಡಿದ್ದು, ಕಮಲದಲ್ಲಿ ದುಂಬಿ ಹಾರಾಡುವಂತೆ ದೇವಿಯು ಭಕ್ತರ ಮನಸ್ಸಿನಲ್ಲಿ ಸುಳಿದಾಡುತ್ತಾಳೆ. ಅವಳನ್ನೇ ಕುರಿತಾದ ಸಂಗೀತ-ಸ್ತೋತ್ರ-ನೃತ್ಯಗಳಿಂದ ಸಂತುಷ್ಟಳಾದ ಅವಳ ಶರೀರ ಬೆಳಗತೊಡಗುತ್ತದೆ. ಆ ಮಾತೆಯನ್ನು ನಾನು ಸದಾ ಪೂಜಿಸುತ್ತೇನೆ.]
ಭವಾಂಭೋಜನೇತ್ರಾಜಸಂಪೂಜ್ಯಮಾನಾಂ
ಲಸನ್ಮಂದಹಾಸಪ್ರಭಾವಕ್ತ್ರಚಿಹ್ನಾಮ್ |
ಚಲಚ್ಚಂಚಲಾಚಾರುತಾಟಂಕಕರ್ಣಾಂ
ಭಜೇ ಶಾರದಾಂಬಾಮಜಸ್ರಂ ಮದಂಬಾಮ್ ||೮||

[ಹರಿಹರ ಬ್ರಹ್ಮರು ಶಾರದಾದೇವಿಯನ್ನು ಆರಾಧಿಸುತ್ತಾರೆ. ಆಕೆಯ ಮಂದಹಾಸದ ಕಾಂತಿ ಮುಖವನ್ನೆಲ್ಲ ಬೆಳಗಿದೆ. ಕಿವಿಯಲ್ಲಿ ಸದಾ ಅಲ್ಲಾಡುತ್ತಿರುವ ಕರ್ಣಾಭರಣಗಳಿವೆ. ಅಂಥ ನನ್ನ ತಾಯಿ ಶಾರದೆಯನ್ನು ನಾನು ಸದಾ ಭಜಿಸುತ್ತೇನೆ.]
ದೀಪಿ ಅಕ್ಕ ಹಾಡಿದ್ದದರ ಕೇಳಲೆಃ

ಶ್ರೀ ಶಾರದಾಭುಜಂಗಪ್ರಯಾತಾಷ್ಟಕಮ್, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಸ್ತೋತ್ರವೂ ಲಾಯಕ ಇದ್ದು. ಬರದ್ದೂ ಲಾಯಕ ಆಯಿದು. ಓದಲೂ ಲಾಯಕ್ಕ ಆವ್ತು ಅರ್ಥ ನೋಡಿಗೊಂದು ಅರ್ಥ ಮಾಡಲೂ ಒಪ್ಪ ಆತು ಹೇಳಿ ಕುಮಾರಣ್ಣ ಒಪ್ಪ.

  [Reply]

  VA:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  Gopalakrishna BHAT S.K.

  ಈ ಶ್ಲೋಕದ ಲಯ ತುಂಬಾ ಲಾಯಿಕಿದ್ದು.
  ಶಂಕರ ಭಗವತ್ಪಾದರು ಇಂತಾ ಎಷ್ಟು ಶ್ಲೋಕ ಬರೆದ್ದವು?

  [Reply]

  VA:F [1.9.22_1171]
  Rating: 0 (from 0 votes)
 3. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಅರ್ಥ ಸಹಿತ ಅಷ್ಟಕವ ಕೊಟ್ಟದು ಲಾಯಿಕ ಆತು.
  ಕುಮಾರಣ್ಣಂಗೆ ಧನ್ಯವಾದಂಗೊ

  [Reply]

  ಉಂಡೆಮನೆ ಕುಮಾರ°

  ಉಂಡೆಮನೆ ಕುಮಾರ° Reply:

  ಎಲ್ಲೋರಿಂಗೂ ಧನ್ಯವಾದಂಗೊ..
  ಯತಿತ್ರಯರಿಂದ (ಸ್ವರ್ಣವಲ್ಲೀ, ರಾಮಚಂದ್ರಾಪುರಮಠ, ಯೆಡತೊರೆ) ಆಯೋಜಿತವಾದ “ಶಾಂಕರ ಸರಸ್ವತೀ” ಹೇಳ್ತ ಶಂಕರಾಚಾರ್ಯರ ಸ್ತೋತ್ರಂಗಳ ಸಾಮೂಹಿಕ (sAmUhika) ಪಠಣ ಕಾರ್ಯಕ್ರಮಲ್ಲಿ ಹೇಳಿಕೊಟ್ಟ ಸ್ತೋತ್ರ..

  [Reply]

  VA:F [1.9.22_1171]
  Rating: 0 (from 0 votes)
 4. Kesh
  Keshavchandra Bhatt Kekanaje

  ತುಂಬಾ ತುಂಬಾ ಧನ್ಯವಾದ

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುವರ್ಣಿನೀ ಕೊಣಲೆಸಂಪಾದಕ°ಡೈಮಂಡು ಭಾವಜಯಶ್ರೀ ನೀರಮೂಲೆದೊಡ್ಡಮಾವ°ಒಪ್ಪಕ್ಕಚುಬ್ಬಣ್ಣರಾಜಣ್ಣಅಕ್ಷರ°ವೇಣಿಯಕ್ಕ°ಪವನಜಮಾವಗಣೇಶ ಮಾವ°ಕಾವಿನಮೂಲೆ ಮಾಣಿಕೊಳಚ್ಚಿಪ್ಪು ಬಾವಬಂಡಾಡಿ ಅಜ್ಜಿಪೆಂಗಣ್ಣ°ಬಟ್ಟಮಾವ°ತೆಕ್ಕುಂಜ ಕುಮಾರ ಮಾವ°ವಿಜಯತ್ತೆಚೆನ್ನಬೆಟ್ಟಣ್ಣಪೆರ್ಲದಣ್ಣಅನಿತಾ ನರೇಶ್, ಮಂಚಿಪುಟ್ಟಬಾವ°ಕೆದೂರು ಡಾಕ್ಟ್ರುಬಾವ°ಗೋಪಾಲಣ್ಣಪುತ್ತೂರಿನ ಪುಟ್ಟಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ