ಶಿವಾಪರಾಧ ಕ್ಷಮಾಪಣಾ ಸ್ತೋತ್ರ

February 20, 2012 ರ 9:00 amಗೆ ನಮ್ಮ ಬರದ್ದು, ಇದುವರೆಗೆ 15 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅದ್ವೈತ ಮತ ಸಂಸ್ಥಾಪನಾಚಾರ್ಯರಾದ ಪರಮಪೂಜ್ಯ ಶ್ರೀ ಶಂಕರಭಗವತ್ಪಾದರು ಅವರ ಜೀವನ ಪರ್ಯಂತ ಅನೇಕ ಶ್ಲೋಕಂಗಳ, ಸ್ತೋತ್ರಂಗಳ ಮೂಲಕ ಆದಿಶಂಕರನ, ಆದಿಮಾಯೆಯ ಸ್ತುತಿಮಾಡಿದ್ದವು. ಪ್ರತಿ ಶ್ಲೋಕಂಗಳಲ್ಲೂ ಜೀವನಾನುಭವ ಒಳಗೊಂಡ ದೈನ್ಯತೆಲಿ ದೇವರ ಹತ್ತರೆ ಕೇಳಿಗೊಂಬ ಮಾತುಗೊ ಇರ್ತು. ಶಿಷ್ಯಕೋಟಿಗೊ ಅವೆಲ್ಲವನ್ನೂ ಸಂಗ್ರಹಮಾಡಿಗೊಂಡು ದೇವತಾರಾಧನೆ ಮಾಡುವಗ ಇಂದಿಂಗೂ , ಎಂದೆಂದಿಂಗೂ ಆ ಶ್ಲೋಕಂಗಳ ಬಳಸಿಗೊಂಬಲಿದ್ದು. ಅಂತಾ ಶ್ಲೋಕಮೌಕ್ತಿಕಂಗಳಲ್ಲಿ “ಶಿವಾಪರಾಧ ಕ್ಷಮಾಪಣಾ ಸ್ತೋತ್ರ”!
ನಾವು ಮಾಡಿದ ಎಲ್ಲ ತಪ್ಪುಗಳನ್ನೂ ಕ್ಷಮಿಸಿ, ಆಜೀವಪರಿಯಂತ ಆಯುರಾರೋಗ್ಯಭಾಗ್ಯ ಕೊಟ್ಟು ಕಾಪಾಡೇಕು – ಹೇದು ಆ ಮಹಾದೇವನ ಹತ್ತರೆ ಕೇಳಿಗೊಂಬ ದೈನ್ಯತಾಭಾವದ ಶ್ಲೋಕ.
ಇಂದು ಸೋಮವಾರ! – ಶಿವಂಗೆ ವಿಶೇಷವಾದ ದಿನ.
ಇಂದು ಶಿವರಾತ್ರಿ – ಹೆಸರೇ ಹೇಳ್ತಾಂಗೆ ಶಿವನ ಹಬ್ಬ!
ಈ ಎರಡು ವಿಶೇಷತೆ ಇಪ್ಪಗ ನಮ್ಮ ಬೈಲಿಲಿಯೂ ಈ ಶಿವನ ಶ್ಲೋಕವ ನಾವೆಲ್ಲರೂ ಪಠಿಸುವೊ.
ಸಂಪಾಲುಸಿ, ಸರಳಹವ್ಯಕಲ್ಲಿ ಅರ್ತ ಬರದು ಕೊಟ್ಟ ಶರ್ಮಪ್ಪಚ್ಚಿಗೆ ಅನಂತ ವಂದನೆಗೊ.
ಚೆಂದಕೆ ಹಾಡಿದ ಸ್ವರವ ಗಿರಿಭಾವನ ಅಂಗುಡಿಂದ ಹುಡ್ಕಿ ಸಂಪಾಲುಸಿ ಕಳುಗಿದ ಚೆನ್ನೈಭಾವಂಗೂ – ಧನ್ಯವಾದಂಗೊ. ಇವರಿಬ್ರ ಪರಿಶ್ರಮಂದಾಗಿ ಬೈಲಿನೋರಿಂಗೆ ಸಿಕ್ಕಿದ ಈ ಅಮೂಲ್ಯ ಸಂಪತ್ತು, ನಮ್ಮೆಲ್ಲರ ಶಿವರಾತ್ರಿಯ ಚೆಂದ ಮಾಡಲಿ – ಹೇಳ್ತದು ಬೈಲಿನ ಪರವಾಗಿ ಹಾರೈಕೆ.

ಎಲ್ಲೋರಿಂಗೂ ಶಿವರಾತ್ರಿಯ ಶುಭಾಶಯಂಗೊ…

~

ಶಿವಾಪರಾಧ ಕ್ಷಮಾಪಣಾ ಸ್ತೋತ್ರ (ಶ್ರೀ ಶ್ರೀ ಶಂಕರಾಚರ್ಯ ವಿರಚಿತ)

ಆದೌ ಕರ್ಮಪ್ರಸಂಗಾತ್ ಕಲಯತಿ ಕಲುಷಂ ಮಾತೃಕುಕ್ಷೌ ಸ್ಥಿತಂ ಮಾಂ
ವಿಣ್ಮೂತ್ರಾಮೇಧ್ಯಮಧ್ಯೇ ಕ್ವಥಯತಿ ನಿತರಾಂ ಜಾಠರೋ ಜಾತವೇದಾಃ |
ಯದ್ಯದ್ವೈ ತತ್ರ ದುಃಖಂ ವ್ಯಥಯತಿ ನಿತರಾಂ ಶಕ್ಯತೇ ಕೇನ ವಕ್ತುಂ
ಕ್ಷಂತವ್ಯೋ ಮೇSಪರಾಧಃ ಶಿವ ಶಿವ ಶಿವ ಭೋಃ ಶ್ರೀ ಮಹಾದೇವ ಶಂಭೋ ||೧||

ಪೂರ್ವ ಕರ್ಮ ಫಲದ ಸಾಂಗತ್ಯಂದ ಕಲುಷಿತನಾಗಿ ಅಬ್ಬೆಯ ಗರ್ಭಪಾತ್ರೆಲಿ ಜನ್ಮವೆತ್ತಿದೆ. ಅಲ್ಲಿ  ಕಲ್ಮಷ, ಮೂತ್ರಾದಿಗಳ ಮಧ್ಯೆ ಹೊರಳಾಡಿದೆ. ಅಬ್ಬೆಯ  ಜಠರಾಗ್ನಿಲೆ ಬೆಂದೆ. ಹೇಳುಲೆಡಿಯದ್ದಷ್ಟು ಕಷ್ಟ ದುಃಖಲ್ಲಿ ಬಿದ್ದುಗೊಂಡಿದ್ದರೂ ನಿನ್ನ ಸ್ಮರಿಸಿದ್ದಿಲ್ಲೆ.
ಹೇ ಶಿವನೇ, ಮಹಾದೇವನೇ, ಶಂಭುವೇ ಎನ್ನ ಸರ್ವಾಪರಾಧಂಗಳ ಕ್ಷಮಿಸು..

ಬಾಲ್ಯೇ ದುಃಖಾತಿರೇಕಾನ್ಮಲಲುಲಿತವಪುಃ ಸ್ತನ್ಯಪಾನೇ ಪಿಪಾಸಾ
ನೋ ಶಕ್ತಶ್ಚೇಂದ್ರಿಯೇಭ್ಯೋ ಭವಗುಣ ಜನಿತಾ ಜಂತವೋ ಮಾಂ ತುದಂತಿ |
ನಾನಾರೋಗಾದಿದುಃಖಾದ್ರುದನಪರವಶಃ ಶಂಕರಂ ನ ಸ್ಮರಾಮಿ
ಕ್ಷಂತವ್ಯೋ ಮೇSಪರಾಧಃ ಶಿವ ಶಿವ ಶಿವ ಭೋಃ ಶ್ರೀ ಮಹಾದೇವ ಶಂಭೋ ||೨||

ಬಾಲ್ಯಕಾಲಲ್ಲಿ, ದುಃಖಾತಿರೇಕಂಗಳಿಂದ ಅತ್ಯಾಸಕ್ತನಾಗಿ, ಸ್ತನ್ಯಪಾನಲ್ಲಿ ಇಚ್ಛಿತನಾದೆ. ಎನ್ನ ದೇಹದ ಅಂಗಾಂಗಗಳಲ್ಲಿ  ಶಕ್ತಿ ಇತ್ತಿದ್ದಿಲ್ಲೆ.  ತಾವು ಮಾಡಿದ ಪಾಪ ಫಲಗಳಂದಾಗಿ ಹುಟ್ಟಿದ ಹುಳಂಗೊ, ಕ್ರಿಮಿಕೀಟಂಗೊ,  ಜಂತುಗೊ ಎನ್ನ ಪೀಡಿಸಿದವು. ಹಲವು ರೋಗಂಗಳಿಂದ ದುಃಖಂಗಳಿಂದ ಪರವಶನಾದೆ. ಅಂಬಗಳೂ ಆನು ನಿನ್ನ ಒಂದರಿಯೂ ಸ್ಮರಣೆ ಮಾಡಿದ್ದಿಲ್ಲೆ.
ಹೇ ಶಿವನೇ, ಮಹಾದೇವನೇ, ಶಂಭುವೇ ಎನ್ನ ಸರ್ವಾಪರಾಧಂಗಳ ಕ್ಷಮಿಸು..

ಪ್ರೌಢೋಹಂ ಯೌವನಸ್ಥೋ ವಿಷಯವಿಷಧರೈಃ ಪಂಚಭಿಃರ್ಮರ್ಮಸಂಧೌ
ದಷ್ಟೋ ನಷ್ಟೋ ವಿವೇಕಃ ಸುತಧನಯುವತಿಸ್ವಾದುಸೌಖ್ಯೇ ನಿಷಣ್ಣಃ |
ಶೈವೀಚಿಂತಾವಿಹೀನಂ ಮಮ ಹೃದಯಮಹೋ ಮಾನಗರ್ವಾಧಿರೂಢಂ
ಕ್ಷಂತವ್ಯೋ ಮೇSಪರಾಧಃ ಶಿವ ಶಿವ ಶಿವ ಭೋಃ ಶ್ರೀ ಮಹಾದೇವ ಶಂಭೋ ||೩||

ಜವ್ವನಕ್ಕೆ ಮುಟ್ಟುವಾಗ ಆನು ಜವ್ವನದ ಮದಂದ ಶಬ್ದ, ಸ್ಪರ್ಶ, ರಸ, ರೂಪ, ಗಂಧ ಹೇಳ್ತ ಐದು ವಿಷಯಕ್ಕೆ ಮೋಹಿತನಾಗಿ ವಿಷಯ ಲಂಪಟನಾದೆ. ವಿವೇಕಶೂನ್ಯನಾಗಿ, ಸುತ, ಧನ, ಯುವತಿ ಈ ಎಲ್ಲಾ ವಿಷಯಾಸ್ವಾದ ಸೌಖ್ಯಲ್ಲಿ ಮುಳುಗಿದೆ. ಚಿಂತಾವಿಹೀನನಾಗಿ, ಅಭಿಮಾನ ಮತ್ತೆ ಗರ್ವಂದ ಎನ್ನ ಹೃದಯ ಕೂಡಿತ್ತು. ಒಂದು ಸರ್ತಿಯು ಕೂಡಾ ನಿನ್ನ ಧ್ಯಾನ ಮಾಡಿದ್ದಿಲ್ಲೆ.
ಹೇ ಶಿವನೇ, ಮಹಾದೇವನೇ, ಶಂಭುವೇ ಎನ್ನ ಸರ್ವಾಪರಾಧಂಗಳ ಕ್ಷಮಿಸು.

ವಾರ್ಧಕ್ಯೇ ಚೇಂದ್ರಿಯಾಣಾಂ ವಿಗತಗತಿಮತಿಶ್ಚಾಧಿದೈವಾದಿತಾಪೈಃ
ಪಾಪೈಃ ರೋಗೈರ್ವಿಯೋಗೈಸ್ತ್ವನವಸಿತವಪುಃ ಪ್ರೌಢಹೀನಂಚ ದೀನಂ |
ಮಿಥ್ಯಾ ಮೋಹಾಭಿಲಾಷೈರ್ಬ್ರಮತಿ ಮಮ ಮನೋ ಧೂರ್ಜಟೇರ್ಧ್ಯಾನ ಶೂನ್ಯಂ
ಕ್ಷಂತವ್ಯೋ ಮೇSಪರಾಧಃ ಶಿವ ಶಿವ ಶಿವ ಭೋಃ ಶ್ರೀ ಮಹಾದೇವ ಶಂಭೋ ||೪||

ಮುಪ್ಪಿಂಗಪ್ಪಗ ಮನಸ್ಸು ಮತ್ತೆ ಇಂದ್ರಿಯಂಗಳ ಸ್ವಾಧೀನ ಇಲ್ಲದ್ದೆ ಮತಿ ಗತಿಗಳ ಕಳಕ್ಕೊಂಡೆ. ರೋಗ ರುಜಿನ ವಿಯೋಗಂಗಳಿಂದಾಗಿ ಕೃಶನಾದೆ. ಆಧಿದೈವಿಕ ಆಧಿಭೌತಿಕ ಆಧ್ಯಾತ್ಮಿಕ ಹೇಳ್ತ ತಾಪತ್ರಯಕ್ಕೆ ಒಳಗಾದೆ.  ಮಿಥ್ಯೆಯಾದ ಮೋಹದ ಆಶೆಗಳಿಂದ ಭ್ರಮೆಗೊಳಗಾದ ಎನ್ನ ಮನಸ್ಸು ಧ್ಯಾನ ಶೂನ್ಯ ಆತು. ಅಂಬಗಳೂ ಜಟಾಧಾರಿಯಾದ ನಿನ್ನ ಸ್ಮರಣೆ ಮಾಡಿದ್ದಿಲ್ಲೆ.
ಶಿವನೇ, ಮಹಾದೇವನೇ, ಶಂಭುವೇ ಎನ್ನ ಸರ್ವಾಪರಾಧಂಗಳ ಕ್ಷಮಿಸು.

ನೋ ಶಕ್ಯಂ ಸ್ಮಾರ್ತಕರ್ಮ ಪ್ರತಿಪದಗಹನಪ್ರತ್ಯವಾಯಾಕುಲಾಖ್ಯಂ
ಶ್ರೌತೇ ವಾರ್ತಾ ಕಥಂ ಮೇ ದ್ವಿಜಕುಲವಿಹಿತೇ ಬ್ರಹ್ಮ ಮಾರ್ಗೇ ಸುಸಾರೇ |
ಜ್ಞಾತೋ ಧರ್ಮೋ ವಿಚಾರೈಃ ಶ್ರವಣಮನನಯೋಃ ಕಿಂ ನಿಧಿಧ್ಯಾಸಿತವ್ಯಂ
ಕ್ಷಂತವ್ಯೋ ಮೇSಪರಾಧಃ ಶಿವ ಶಿವ ಶಿವ ಭೋಃ ಶ್ರೀ ಮಹಾದೇವ ಶಂಭೋ ||೫||

ಎನ್ನ ಜೀವನಲ್ಲಿ ಪ್ರತಿ ಹೆಜ್ಜೆಗೂ ಅಡ್ಡಿ,ಆತಂಕ, ವಿರೋಧಂಗಳ ಎದುರುಸುವದೇ ಆಗಿ ಹೋತು. ಹಾಂಗಾಗಿ ದ್ವಿಜನಾಗಿ ಹುಟ್ಟಿಯೂ, ನಿತ್ಯ ಸ್ಮಾರ್ತ ಕರ್ಮ ಅನುಷ್ಠಾನಂಗಳನ್ನೇ ಮಾಡದ್ದ ಆನು ವೇದಂಗಳಲ್ಲಿ ವಿಧಿಸಿದ ಬ್ರಹ್ಮ ಮಾರ್ಗವ ಅನುಷ್ಠಾನ ಹೇಂಗೆ ಮಾಡಲಿ. ತತ್ತ್ವಜ್ಞಾನ ವಿಚಾರಲ್ಲಿ ಶ್ರವಣ, ಮನನ, ಮಾಡದ್ದ ಆನು  ನಿಧಿಧ್ಯಾಸನಂಗಳ ಹೇಂಗೆ ಮಾಡಲಿ. ಹಾಂಗಾಗಿ-ಹೇ ಶಿವನೇ, ಮಹಾದೇವನೇ, ಶಂಭುವೇ ಎನ್ನ ಸರ್ವಾಪರಾಧಂಗಳ ಕ್ಷಮಿಸು.

ಸ್ನಾತ್ವಾ ಪ್ರತ್ಯೂಷಕಾಲೇ ಸ್ನಪನವಿಧಿವಿಧೌ ನಾಹೃತಂ ಗಾಂಗತೋಯಂ
ಪೂಜಾರ್ಥಂ ವಾ ಕದಾಚಿದ್ಬಹುತರಗಹನಾತ್ ಖಂಡಬಿಲ್ವೀದಲಾನಿ |
ನಾನೀತಾ ಪದ್ಮಮಾಲಾ ಸರಸಿ ವಿಕಸಿತಾ ಗಂಧಪುಷ್ಪೇ ತ್ವದರ್ಥಂ
ಕ್ಷಂತವ್ಯೋ ಮೇSಪರಾಧಃ ಶಿವ ಶಿವ ಶಿವ ಭೋಃ ಶ್ರೀ ಮಹಾದೇವ ಶಂಭೋ ||೬||

ಉದೆಕಾಲಕ್ಕೆ ಎದ್ದು ವಿಧಿ ವಿಧಾನವಾಗಿ ಮಿಂದು ನಿನ್ನ ಅಭಿಷೇಕಕ್ಕಾಗಿ ಗಂಗಾಜಲ ತಯಿಂದಿಲ್ಲೆ. ನಿನ್ನ ಪೂಜೆಗಾಗಿ ಒಂದೇ ಒಂದು ಅಖಂಡ ದಳ ಬಿಲ್ವವನ್ನೂ ತಂದು ಸಮರ್ಪಿಸಿದ್ದಿಲ್ಲೆ. ಪುಷ್ಪಮಾಲೆಯಾಗಲೀ, ಗಂಧವಾಗಲೀ, ಕೆರೆಲಿ ಅರಳಿದ ಒಂದು ಕಮಲದ ಹೂಗಾಗಲೀ, ಯಾವುದನ್ನೂ ಕೂಡಾ ಸಮರ್ಪಿಸಿದ್ದಿಲ್ಲೆ.
ಹೇ ಶಿವನೇ, ಮಹಾದೇವನೇ, ಶಂಭುವೇ ಎನ್ನ ಸರ್ವಾಪರಾಧಂಗಳ ಕ್ಷಮಿಸು.

ದುಗ್ಧೈರ್ಮಧ್ವಾಜ್ಯುತೈರ್ದಧಿಸಿತಸಹಿತೈಃ ಸ್ನಾಪಿತಂ ನೈವ ಲಿಂಗಂ
ನೋ ಲಿಪ್ತಂ ಚಂದನಾದ್ಯೈಃ ಕನಕವಿರಚಿತೈಃ ಪೂಜಿತಂ ನ ಪ್ರಸೂನೈಃ |
ಧೂಪೈಃ ಕರ್ಪೂರದೀಪೈಃ ವಿವಿಧರಸಯುತೈಃ ನೈವ ಭಕ್ಷ್ಯೋಪಹಾರೈಃ
ಕ್ಷಂತವ್ಯೋ ಮೇSಪರಾಧಃ ಶಿವ ಶಿವ ಶಿವ ಭೋಃ ಶ್ರೀ ಮಹಾದೇವ ಶಂಭೋ ||೭||

ಹಾಲು, ಜೇನ, ತುಪ್ಪ, ಮೊಸರು, ಶರ್ಕರಂಗಳಿಂದ ಲಿಂಗಕ್ಕೆ ಅಭಿಷೇಕ ಮಾಡಿದ್ದಿಲ್ಲೆ. ಚಂದನಾದಿಗಳಿಂದ, ಸುವರ್ಣತೀರ್ಥಂದ ಪೂಜಿಸಿದ್ದಿಲ್ಲೆ. ಧೂಪ ಕರ್ಪೂರ ದೀಪಂಗಳಿಂದ ಅರಾಧಿಸಿದ್ದಿಲ್ಲೆ.  ಬಗೆ ಬಗೆಯ ರಸಭರಿತ ಭಕ್ಷ್ಯಂಗಳ ನೈವೇದ್ಯ ಮಾಡಿದ್ದಿಲ್ಲೆ.
ಹೇ ಶಿವನೇ, ಮಹಾದೇವನೇ, ಶಂಭುವೇ ಎನ್ನ ಸರ್ವಾಪರಾಧಂಗಳ ಕ್ಷಮಿಸು.

ಧ್ಯಾತ್ವಾ ಚಿತ್ತೇ ಶಿವಾಖ್ಯಂ ಪ್ರಚುರತರಧನಂ ನೈವ ದತ್ತಂ ದ್ವಿಜೇಭ್ಯೋ
ಹವ್ಯಂ ತೇ ಲಕ್ಷಸಂಖ್ಯೈಃ ಹುತವಹವದನೇ ನಾರ್ಪಿತಂ ಬೀಜ ಮಂತ್ರೈಃ |
ನೋ ತಪ್ತಂ ಗಾಂಗತೀರೇ ವ್ರತಜಪನಿಯಮೈಃ ರುದ್ರಜಾಪ್ಯರ್ನ್ಯ ವೇದೈ
ಕ್ಷಂತವ್ಯೋ ಮೇSಪರಾಧಃ ಶಿವ ಶಿವ ಶಿವ ಭೋಃ ಶ್ರೀ ಮಹಾದೇವ ಶಂಭೋ ||೮||

ಮನಸ್ಸಿಲಿ ಶಿವನಾಮವ ಧ್ಯಾನ ಮಾಡಿಗೊಂಡು ಧನವ (ಐಶ್ವರ್ಯವ) ಬ್ರಾಹ್ಮಣರಿಂಗೆ ದಾನ ಮಾಡಿದ್ದಿಲ್ಲೆ. ಅಗ್ನಿಮುಖೇನ ಲಕ್ಷಲಕ್ಷ ಸಂಖ್ಯೆಲಿ ಬೀಜಮಂತ್ರ ಸಹಿತ ಹೋಮ ಮಾಡಿದ್ದಿಲ್ಲೆ. ಗಂಗಾತೀರಲ್ಲಿ ವ್ರತ, ರುದ್ರಜಪ ನಿಯಮಂಗಳ ಮಾಡಿದ್ದಿಲ್ಲೆ.
ಹೇ ಶಿವನೇ, ಮಹಾದೇವನೇ, ಶಂಭುವೇ ಎನ್ನ ಸರ್ವಾಪರಾಧಂಗಳ ಕ್ಷಮಿಸು.

ಸ್ಥಿತ್ವಾ ಸ್ಥಾನೇ ಸರೋಜೇ ಪ್ರಣವಮಯಮರುತ್ಕುಂಡಲೇ ಸೂಕ್ಷ್ಮ ಮಾರ್ಗೇ
ಶಾಂತೇ ಸ್ವಾಂತೇ ಪ್ರಲೀನೇ ಪ್ರಕಟಿತ ವಿಭವೇ ಜ್ಯೋತಿ ರೂಪೇ ಪರಾಖ್ಯೇ |
ಲಿಂಗಜ್ಞೇ ಬ್ರಹ್ಮ ವಾಕ್ಯೇ ಸಕಲತನುಗತಂ ಶಂಕರಂ ನ ಸ್ಮರಾಮಿ
ಕ್ಷಂತವ್ಯೋ ಮೇSಪರಾಧಃ ಶಿವ ಶಿವ ಶಿವ ಭೋಃ ಶ್ರೀ ಮಹಾದೇವ ಶಂಭೋ ||೯||

ಪದ್ಮಾಸನಲ್ಲಿ ಕೂದು ಪ್ರಣವ ಮಂತರವ ಉಚ್ಚರಿಸಿ, ಎನ್ನ ಅಂತರಂಗವ ಪ್ರಶಾಂತಗೊಳಿಸಿ, ಎಲ್ಲಾ ಅವಯವಂಗಳಲ್ಲಿ ಆವರಿಸಿಂಡು ಇಪ್ಪ ಜ್ಯೋತಿ ಸ್ವರೂಪಿಯೂ ಬ್ರಹ್ಮ  ಸ್ವರೂಪಿಯೂ ಆದ ನಿನ್ನ ಎಂದೂದೆ ಸಮಾಧಿಸ್ಥನಾಗಿ ಧ್ಯಾನ ಮಾಡಿದ್ದಿಲ್ಲೆ.
ಹೇ ಶಿವನೇ, ಮಹಾದೇವನೇ, ಶಂಭುವೇ ಎನ್ನ ಸರ್ವಾಪರಾಧಂಗಳ ಕ್ಷಮಿಸು.

ನಗ್ನೋ ನಿಸ್ಸಂಗಶುದ್ಧಃ ತ್ರಿಗುಣವಿರಹಿತೋ ಧ್ವಸ್ತಮೋಹಾಂಧಕಾರೋ
ನಾಸಾಗ್ರೇ ನ್ಯಸ್ತದೃಷ್ಟಿಃ ವಿದಿತಭವಗುಣೋ ನೈವ ದೃಷ್ಟಃ ಕದಾಚಿತ್|
ಉನ್ಮನ್ಯಾSವಸ್ಥಯಾ ತ್ವಾಂ ವಿಗತಕಲಿಮಲಂ ಶಂಕರಂ ನ ಸ್ಮರಾಮಿ
ಕ್ಷಂತವ್ಯೋ ಮೇSಪರಾಧಃ ಶಿವ ಶಿವ ಶಿವ ಭೋಃ ಶ್ರೀ ಮಹಾದೇವ ಶಂಭೋ ||೧೦||

ಸತ್ವ ರಜಸ್, ತಮೋ – ತ್ರಿಗುಣರಹಿತನೂ,  ಏಕಾಂಗಿಯೂ, ಮೂಗಿನ ಕೊಡಿಲಿ ದೃಷ್ಟಿ ಇಪ್ಪವನೂ, ಶುದ್ಧನಾಗಿಯೂ, ಎಲ್ಲಾ ಕಲ್ಮಷಂಗಳಿಂದ ದೂರ ಇಪ್ಪವನೂ ಆದ ನಿನ್ನ ಆನು ಎಂದೂ ದರ್ಶನ ಮಾಡಿದ್ದಿಲ್ಲೆ ಮಾತ್ರ ಅಲ್ಲದ್ದೆ ಏಕಾಗ್ರಚಿತ್ತನಾಗಿ, ಉನ್ಮನ್ಯಾವಸ್ಥೆಂದ, ಶಂಕರನಾದ ನಿನ್ನ ಕಿಂಚಿತ್ತೂ ಸ್ಮರಣೆ ಮಾಡಿದ್ದಿಲ್ಲೆ.
ಹೇ ಶಿವನೇ, ಮಹಾದೇವನೇ, ಶಂಭುವೇ ಎನ್ನ ಸರ್ವಾಪರಾಧಂಗಳ ಕ್ಷಮಿಸು]

ಚಂದ್ರೋದ್ಭಾಸಿತ ಶೇಖರೇ ಸ್ಮರಹರೇ ಗಂಗಾಧರೇ ಶಂಕರೇ
ಸರ್ಪೈರ್ಭೂಷಿತಕಂಠಕರ್ಣವಿವರೇ ನೇತ್ರೋತ್ಥವೈಶ್ವಾನರೇ
ದಂತಿತ್ವಕ್ಕೃತಸುಂದರಾಂಬರಧರೇ ತ್ರೈಲೋಕ್ಯಸಾರೇ ಹರೇ
ಮೋಕ್ಷಾರ್ಥಂ ಕುರು ಚಿತ್ತವೃತ್ತಿಮಖಿಲಾಮನ್ಯೈಸ್ತು ಕಿಂ ಕರ್ಮಭಿಃ ||೧೧||

ಚಂದ್ರನ ಧರಿಸಿದ, ಮನ್ಮಥನ ಸಂಹರಿಸಿದ ಗಂಗಾಧರ ಶಂಕರನೇ! ಸರ್ಪಭೂಷಿತನಾಗಿ ಹಣೆಲಿ ಅಗ್ನಿಯ ಕಣ್ಣಿಪ್ಪೋನೇ, ಚೆಂದದ ಗಜಚರ್ಮ ಧರಿಸಿಪ್ಪೋನೇ, ತ್ರಿಲೋಕಸಾರನೇ, ಒಡೆಯನೇ, ಹರನೇ ಮೋಕ್ಷಾರ್ಥವಾಗಿ ರಜ್ಜ ಆದರೂ ಎನ್ನ ಕರ್ಮಾನುಸಾರ, ನಿನ್ನಲ್ಲಿ ಮನಸ್ಸಪ್ಪ ಹಾಂಗೆ ಮಾಡು ಹೇ ಶಿವನೇ.

ಕಿಂ ವಾನೇನ ಧನೇನ ವಾಜಿಕರಿಭಿಃ ಪ್ರಾಪ್ತೇನ ರಾಜ್ಯೇನ ಕಿಂ
ಕಿಂ ವಾ ಪುತ್ರಕಲತ್ರಮಿತ್ರಪಶುಭಿಃ ದೇಹೇನ ಗೇಹೇನ ಕಿಂ |
ಜ್ಞಾತ್ವೈತತ್ ಕ್ಷಣ ಭಂಗುರಂ ಸಪದಿ ರೇ ತ್ಯಾಜ್ಯಂ ಮನೋ ದೂರತಃ
ಸ್ವಾತ್ಮಾರ್ಥಂ ಗುರುವಾಕ್ಯತೋ ಭಜ ಭಜ ಶ್ರೀ ಪಾರ್ವತೀವಲ್ಲಭಂ ||೧೨||

ಪೈಸೆಂದ, ಕುದುರೆ ಆನೆಗಳಿಂದ, ರಾಜ್ಯಂದ, ಮಕ್ಕೊ, ಬಂಧು ಬಾಂಧವರಿಂದ ಪಶು ದೇಹಂಗಳಿಂದ ಎಂತ ಪ್ರಯೋಜನ? ಇವು ನೀರಿನ ಮೇಲೆ ಇಪ್ಪ ಗುಳ್ಳೆಗಳ ಹಾಂಗೆ. ಇವುಗಳೆಲ್ಲವನ್ನೂ ಮನಸ್ಸಿಂದ ಹೆರ ತೆಗದು ದೂರ ಹಾಕೆಕ್ಕು. ಆತ್ಮೋದ್ಧಾರಕ್ಕಾಗಿ ಗುರುವಾಕ್ಯಂದ ಶ್ರೀ ಪಾರ್ವತೀ ವಲ್ಲಭನ ಭಜನೆ ಮಾಡು.

ಆಯುರ್ನಶ್ಯತಿ ಪಶ್ಯತಾಂ ಪ್ರತಿದಿನಂ ಯಾತಿಕ್ಷಯಂ ಯೌವನಂ
ಪ್ರತ್ಯಾಯಾಂತಿ ಗತಾಃ ಪುನರ್ನ ದಿವಸಾಃ ಕಾಲೋ ಜಗದ್ಭಕ್ಷಕಃ |
ಲಕ್ಷ್ಮೀಸ್ತೋಯತರಂಗಭಂಗಚಪಲಾ ವಿದ್ಯುಚ್ಚಲಂ ಜೀವಿತಂ
ತಸ್ಮಾನ್ಮಾಂ ಶರಣಾಗತಂ ಶರಣದ ತ್ವಂ ರಕ್ಷ ರಕ್ಷಾಧುನಾ ||೧೩||

ಪ್ರತಿದಿನವೂ ಯೌವನ ಆಯುಸ್ಸು ಹಾಳಪ್ಪದು ಕಾಣುತ್ತು. ಕಳದು ಹೋದ ಯೌವನದ ದಿನಂಗೊ ಮತ್ತೆ  ವಾಪಾಸು ಬತ್ತಿಲ್ಲೆ.  ಐಶ್ವರ್ಯ (ಲಕ್ಷ್ಮಿ),  ನೀರಿನ ಮೇಲೆ ಇಪ್ಪ ಅಲೆಗಳ ಏರಿಳಿತದ ಹಾಂಗೆ. ಅದು ಶಾಶ್ವತ ಅಲ್ಲ. ಜೀವನ ಹೇಳುವದು ಮಿಂಚಿನ ಹಾಂಗೆ ಕ್ಷಣಿಕ. ಜಗದ್ರಕ್ಷಕನೇ ಜೀವಿತಕ್ಕೆ ಆಧಾರ ಆದ ನೀನು ಶರಣಾಗತನಾದ ಎನ್ನ ಕರುಣೆಂದ ಕಾಪಾಡು.

ಕರಚರಣಕೃತಂ ವಾಕ್ಕಾಯಜಂ ಕರ್ಮಜಂ ವಾ
ಶ್ರವಣನಯನಜಂ ವಾ ಮಾನಸಂ ವಾಪರಾಧಂ |
ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ಧೇ ಶ್ರೀ ಮಹಾದೇವ ಶಂಭೋ ||೧೪||

ಹೇ ದೇವಾ, ಗೊಂತಿದ್ದೋ, ಗೊಂತಿಲ್ಲದ್ದೆಯೋ ಎನ್ನ ಕೈಲಿ, ಕಾಲಿಲಿ, ಮಾತಿಲಿ, ಶ್ರವಣಲ್ಲಿ, ಮನಸ್ಸಿಲಿ ಮಾಡಿದ ಎನ್ನ ತಪ್ಪುಗಳ, ಮಾಡದ್ದ ಕೆಲಸಂಗಳ ಕ್ಷಮಿಸು. ಪ್ರೀತಿ,ಕರುಣೆಯ ಸಾಗರ ಆದ ನಿನಗೆ, ಮಹಾದೇವನೇ ಜಯವಾಗಲಿ ಹೇಳಿ ಹೇಳುತ್ತೆ.

~**~

॥ಓಂ ಶಾಂತಿಃ ಶಾಂತಿಃ ಶಾಂತಿಃ॥

ಶ್ಲೋಕ ಶ್ರವಣಕ್ಕೆ:

[audio:audio/shivaparadhakshamapana/SHIVAAPARAADHAKSHAMAAPANASTOTRAM.mp3]

~**~

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಮೂಲ:: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
URL: www.addkiosk.in ; www.giri.in

ಈ ಶುದ್ದಿಗೆ ಇದುವರೆಗೆ 15 ಒಪ್ಪಂಗೊ

 1. srbhat1966
  ರಾಘವೇಂದ್ರ

  ಶಿವಾಪರಾಧ ಕ್ಷಮಾಪಣಾ ಸ್ತೊತ್ರ ನಮ್ಮ ಭಾಷೆಲಿ ಅನುವಾದ ಮಾಡಿದ್ದು ಭಾರೀ ಲಾಯಿಕ ಆಯಿದು. ಓದಿ ಅಪ್ಪಗ ಕಣ್ಣಿಲ್ಲಿ ನೀರು ಬನ್ತು. ತುಂಬಾ ತುಂಬಾ ಧನ್ಯವಾದಂಗೊ ಅಪ್ಪಚ್ಚಿ.

  [Reply]

  VA:F [1.9.22_1171]
  Rating: +1 (from 1 vote)
 2. ಮಾನೀರ್ ಮಾಣಿ
  ಮಾನೀರ್ ಮಾಣಿ

  ಬಹಳ ಸರಳವಾಗಿ ಸು೦ದರವಾಗಿ ವಿವರಣೆ ಕೊಟ್ಟ ಶರ್ಮಪ್ಪಚ್ಚಿಗೆ, ಧ್ವನಿಮುದ್ರಿಕೆಯ ಸ೦ಪಾದಿಸಿದ ಚೆನ್ನೈ ಭಾವ೦ಗೆ ಧನ್ಯವಾದ೦ಗೋ :)

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪವನಜಮಾವಶಾಂತತ್ತೆಎರುಂಬು ಅಪ್ಪಚ್ಚಿವೆಂಕಟ್ ಕೋಟೂರುಬಟ್ಟಮಾವ°ಉಡುಪುಮೂಲೆ ಅಪ್ಪಚ್ಚಿಪೆಂಗಣ್ಣ°ದೊಡ್ಮನೆ ಭಾವಪಟಿಕಲ್ಲಪ್ಪಚ್ಚಿಅನು ಉಡುಪುಮೂಲೆಶ್ಯಾಮಣ್ಣದೊಡ್ಡಮಾವ°ಕೊಳಚ್ಚಿಪ್ಪು ಬಾವತೆಕ್ಕುಂಜ ಕುಮಾರ ಮಾವ°ಮುಳಿಯ ಭಾವಕಜೆವಸಂತ°ಅಕ್ಷರ°ಗಣೇಶ ಮಾವ°ಡೈಮಂಡು ಭಾವಕಾವಿನಮೂಲೆ ಮಾಣಿಅಡ್ಕತ್ತಿಮಾರುಮಾವ°ಪುಣಚ ಡಾಕ್ಟ್ರುಬಂಡಾಡಿ ಅಜ್ಜಿಜಯಗೌರಿ ಅಕ್ಕ°ವಿನಯ ಶಂಕರ, ಚೆಕ್ಕೆಮನೆಕೇಜಿಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ