ಶ್ರದ್ಧಾ ಸೂಕ್ತಮ್

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ಸೂಕ್ತ  ಗೀತಾಂಜಲಿ” ಪುಸ್ತಕಂದ “ಶ್ರದ್ಧಾ ಸೂಕ್ತ ” ವ ಇಲ್ಲಿ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.

ಶರ್ಮಪ್ಪಚ್ಚಿ

~~~

ಶ್ರದ್ಧಯಾಗ್ನಿಃ ಸಮಿಧ್ಯತೇ | ಶ್ರದ್ಧಯಾ ವಿಂದತೇ ಹವಿಃ |

ಶ್ರದ್ಧಾಂ ಭಗಸ್ಯ ಮೂರ್ಧನಿ | ವಚಸಾ ವೇದಯಾಮಸಿ ||೧||

ಅಗ್ನಿಯುರಿವುದು ಶ್ರದ್ಧೆಯಿದ್ದರೆ ಹವನಗೊಂಬುದು ಶ್ರದ್ದೆಯಿಂದ

ಶ್ರೀಯ ಶಿಖರವೆ ಶ್ರದ್ಧೆಯೆನುತಲಿ ಪ್ರಕಟಪಡಿಸುವೆ ಶ್ರದ್ದೆಯಿಂದ ||೧||

ಪ್ರಿಯಗ್ಗ್ ಶ್ರದ್ಧೇ ದದತಃ | ಪ್ರಿಯಗ್ಗ್ ಶ್ರದ್ಧೇ ದಿದಾಸತಃ |

ಪ್ರಿಯಂ ಭೋಜೇಷು ಯಜ್ವಸು| ಇದಂ ಮ ಉದಿತಂ ಕೃಧಿ || ೨||

ನೀಡು ಶ್ರದ್ಧೆಯ ಎನ್ನ ಇಷ್ಟವ ಯಜ್ಞಗೈಯುವೆ ನಿಷ್ಠೆಯಿಂದ

ಭೋಗ ವಿಚ್ಛಿಪ ಬಂಧು ಬಳಗಕು ಯಜ್ಞ ಸೇವಿಸಿ ನೀಡು ಪ್ರಿಯವ ||೨||

ಯಥಾ ದೇವಾ ಅಸುರೇಷು | ಶ್ರದ್ಧಾಮುಗ್ರೇಷು ಚಕ್ರಿರೇ |

ಯೇವಂ ಭೋಜೇಷು ಯಜ್ವಸು | ಅಸ್ಮಾ ಕಮುದಿತಂ ಕೃಧಿ || ೩ ||

ಉಗ್ರರಸುರರ  ದಮನಗೈಯಲು ದೇವತೆಗಳಿಗೆ ಬಲವೆ ಶ್ರದ್ದೆ

ಇಷ್ಟ ಯಾಚಿಪ ನಮ್ಮ ಬಳಗಕೆ ಯಾಗ ಭೋಗವ ನೀಡು ಮುಂದೆ||೩||

ಶ್ರದ್ಧಾಂ ದೇವಾ ಯಜಮಾನಾಃ | ವಾಯುಗೋಪಾ ಉಪಾಸತೇ |

ಶ್ರದ್ಧಾಗ್ಂ ಹೃದಯ್ಯಯಾ ಕೂSತ್ಯಾ | ಶ್ರದ್ಧಯಾ ಹೂಯತೇ ಹವಿಃ || ೪ ||

ಶ್ರದ್ಧೆಯೊಲಿಸಲು ದೇವ ಮನುಜರು ಪಡೆದುಕೊಂಬರು ವಾಯುರಕ್ಷೆ

ಸಿರಿಯ ಸುರಿಸುವ ದೇವಿ ಶ್ರದ್ಧೆಯ ಹೃದಯದಾಳದಿ ಪಡೆವ ಇಚ್ಛೆ ||೪||

ಶ್ರದ್ಧಾಂ ಪ್ರಾತರ್ಹವಾಮಹೇ | ಶ್ರದ್ಧಾಂ ಮಧ್ಯಂದಿನಂ ಪರಿ |

ಶ್ರದ್ಧಾಗ್ಂ ಸೂರ್ಯಸ್ಯ ನಿಮ್ರುಚಿ | ಶ್ರದ್ಧೇ ಶ್ರದ್ಧಾಪಯೇ ಹಮಾS || ೫ ||

ಶ್ರದ್ದೆಯಾಚಿಪೆ ಉಷಃಕಾಲದಿ, ದಿನದ ಮಧ್ಯದ ಸಮಯ ಸಹಿತ

ಅಸ್ತಮಾನದಿ ಶ್ರದ್ದೆ ಮುಖ್ಯವು, ಲೋಕ ಕಾರ್ಯಕೆ ಶ್ರದ್ಧೆ ವಿಹಿತ ||೫||

ಶ್ರದ್ಧಾ ದೇವಾನಧಿವಸ್ತೇ | ಶ್ರದ್ಧಾ ವಿಶ್ವಮಿದಂ ಜಗತ್ |

ಶ್ರದ್ಧಾಂ ಕಾಮಸ್ಯ ಮಾತರಂ ಹವಿಷಾ ವರ್ಧಯಾಮಸಿ || ೬||

ವಾಸ ಶ್ರದ್ಧೆಗೆ ದೇವ ಸನಿಹದಿ ವಿಶ್ವ ಶ್ರದ್ಧಾಮಯದಿ ಚಲನೆ

ಶ್ರದ್ಧೆ ಮಾತೆಯು ಸರ್ವ ಕಾಮಕೆ. ಹವಿಸನೀಯುತ ವರ್ಧಿಸೆಂಬೆ ||೬||

ಶ್ರದ್ಧಯಾ ದೇವೋ ದೇವತ್ವಮಶ್ನುತೇ | ಶ್ರದ್ಧಾ ಪ್ರತಿಷ್ಠಾ ಲೋಕಸ್ಯ ದೇವೀ |

ಸಾನೋ ಜುಷಾಣೋಪ ಯಜ್ಞ ಮಾಗಾತ್ | ಕಾಮವತ್ಯಾSಮೃತಂ ದುಹಾನಾ || ೭||

ಶ್ರದ್ಧೆಯಿಂ ದೇವತ್ವ ಸಿದ್ಧಿಯು ಲೋಕ ಸಿದ್ಧಿಯು ಶ್ರದ್ಧೆಯಿಂದ

ಕಾಮ ಕರುವಿಗೆ ಸುಧೆಯ ನುಣಿಸಲಿ ತೋಷಗೊಳ್ಳಲಿ ಯಾಗದಿಂದ ||೭||

ಶ್ರದ್ಧಾ ದೇವೀ ಪ್ರಥಮಜಾ ಋತಸ್ಯ | ವಿಶ್ವಸ್ಯ ಭರ್ತ್ರೀ ಜಗತಃ ಪ್ರತಿಷ್ಠಾ |

ತಾಗ್ಂ ಶ್ರದ್ಧಾಗ್ಂ ಹವಿಷಾ ಯಜಾಮಹೇ | ಸಾನೋ ಲೋಕಮಮೃತಂ ದಧಾತು |

ಈಶಾನಾ ದೇವೀ ಭುವನಸ್ಯಾಧಿಪತ್ನೀ || ೮||

ದೇವಿ ಶ್ರದ್ಧೆಯು ಆದಿ ಪುರುಷನ ಪ್ರಥಮ ಪುತ್ರಿಯು ಸತ್ಯ ರೂಪಿ

ವಿಶ್ವಮಾತೆಯೆ ವಿಶ್ವಧಾತೆಯೆ ನೀಡು ದೇವಿಯೆ ಅಮೃತ ಲೋಕ ||೮||

ಓಂ ಶಾಂತಿಃ ಶಾಂತಿಃ ಶಾಂತಿಃ ||

(ಸಂಗ್ರಹ: ಸೂಕ್ತ ಗೀತಾಂಜಲಿ- ಡಾ| ಮಡ್ವ ಶಾಮ ಭಟ್ಟ)

ಸೂ:
ವೇದಮೂರ್ತಿ ತುಪ್ಪೆಕಲ್ಲು ಶಿವರಾಮ ಭಟ್ಟರ ಧ್ವನಿಲಿ
“ಶ್ರದ್ಧಾ  ಸೂಕ್ತಮ್” ಧ್ವನಿಮುದ್ರಿಕೆಯ ಬೈಲಿನ ಚೆನ್ನೈಬಾವ ಕಳುಸಿಕೊಟ್ಟಿದವು. ಬೈಲಿನ ಕೇಳುಗರಿಂಗಾಗಿ ಇಲ್ಲಿ ನೇಲುಸಿದ್ದು:
ಇಬ್ರಿಂಗೂ ಧನ್ಯವಾದಂಗೊ.

Get this widget | Track details | eSnips Social DNA

ಶರ್ಮಪ್ಪಚ್ಚಿ

   

You may also like...

6 Responses

 1. ತೆಕ್ಕುಂಜ ಕುಮಾರ says:

  ಶ್ರದ್ಧಾ ಸೂಕ್ತ ಆನು ಇದುವರೆಗೆ ಓದಿದ್ದಿಲೆ,ಶುರೂ ಓದುದು. ಶರ್ಮಪ್ಪಚ್ಚಿಗೆ ಧನ್ಯವಾದ.

  • ಶರ್ಮಪ್ಪಚ್ಚಿ says:

   ಉಪನಯನದ ಸಂದರ್ಭಲ್ಲಿ, ವಟುವಿಂಗೆ ಶ್ರದ್ಧಾಪ್ರಾಪ್ತಿಗೆ ಬೇಕಾಗಿ ಈ ಸೂಕ್ತವ ಪಠನ ಮಾಡ್ತವು.
   ಶ್ರದ್ಧೆಯ ಅಭಿವೃದ್ಧಿಗೆ ಈ ಸೂಕ್ತ ಪಠನ ಕಾರಣ ಆವುತ್ತು ಹೇಳ್ತವು.

  • ಧ್ವನಿ ಮುದ್ರಿಕೆ ನೇಲುಸಿದ್ದೆ. ಚೆನ್ನೈ ಭಾವನ ಕೊಡುಗೆ

 2. ಚೆನ್ನೈ ಭಾವ says:

  ‘ಸೂಕ್ತವೂ ಒಪ್ಪವೂ’. ವಟುವಿನ ಕಾಮಚಾರ ( ಮನಬಂದಂತೆ ಆಚಾರ) ಕಾಮ ವಾದ (ಮನಬಂದಂತೆ ಮಾತಾಡುವದು ) ಕಾಮ ಭಕ್ಷಣ (ಮನಬಂದಂತೆ ತಿಂಬದು) ಇತ್ಯಾದಿ ದೋಷ ದೂರವಾಗಿ ವಟುವಿಲ್ಲಿ ಮುಂದಿನ ವಿದ್ಯಾಭ್ಯಾಸ ಮತ್ತು ಮುಂದಾಣ ಜೀವನ ಜಾಗ್ರತೆಲಿ ಶ್ರದ್ಧಾ ಭಕ್ತಿ ಜವಾಬ್ದಾರಿಂದ ಮುಂದುವರಿಯೇಕು ಹೇಳಿ ವಟುವಿಂಗೆ ಶ್ರದ್ಧಾ ಶಕ್ತಿ ಜಾಗ್ರತಗೊಳುಸಲೆ ಉಪನಯನ ಸಂದರ್ಭಲ್ಲಿ ವೈದಿಕರು ವಟುವಿನ ಸುತ್ತು ಕೂದು ದರ್ಭೆಲಿ ವಟುವಿನ ಮುಟ್ಟಿಗೊಂಡು ಶ್ರದ್ಧಾ ಸೂಕ್ತ ಪಠಿಸುತ್ತವು. ಧ್ವನಿ ಸಹಿತ ಇಲ್ಲಿ ಕೊಟ್ಟದಕ್ಕೆ ಶರ್ಮಪ್ಪಚ್ಚಿಗೆ ಧನ್ಯವಾದ.

 3. ಶರ್ಮಪ್ಪಚ್ಚಿ,

  ಆದಿ ಪುರುಷನ ಪ್ರಥಮ ಪುತ್ರಿ ದೇವಿ ಶ್ರದ್ಧೆಯ ಶ್ರದ್ಧಾನುಗ್ರಹ ಕೇಳಿಗೊಂಬ ಸೂಕ್ತ ಅರ್ಥ ಗೊಂತಾದಪ್ಪಗ ಎಷ್ಟು ಲಾಯ್ಕಿದ್ದು ಹೇಳಿ ಅನಿಸಿತ್ತು. ಕಲಿವ ಮಕ್ಕೊಗೆ ಶ್ರದ್ಧೆ ಬೇಕು ಹೇಳುದರ ಉಪನಯನ ಅಪ್ಪಗಳೇ ವಟುವಿಂಗೆ ಸೂಕ್ಷ್ಮವಾಗಿ ಹೇಳಿ ಕೊಡುವ ನಮ್ಮ ಹಿರಿಯರ ಸಂಸ್ಕಾರ ಬೇರೆ ಎಲ್ಲಿ ಕಾಂಬಲೆ ಸಿಕ್ಕುಗು?

  ಬೈಲಿಂಗೆ ಒಳ್ಳೆ ಮಾಹಿತಿ ಕೊಟ್ಟದಕ್ಕೆ ಧನ್ಯವಾದಂಗೋ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *