ಶ್ರೀ ಸೂಕ್ತಮ್

September 5, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ ”  ಶ್ರೀ ಸೂಕ್ತಮ್ ” ನ ಇಲ್ಲಿ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.

ಶರ್ಮಪ್ಪಚ್ಚಿ
~~~

ಶ್ರೀ ಸೂಕ್ತಮ್

ಓಂ ಹಿರಣ್ಯವರ್ಣಾಂ ಹರಿಣೀಂ ಸುವರ್ಣರಜತಸ್ರಜಾಮ್ |

ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ ||೧||

ತಾಂ ಮ ಆವಹ ಜಾತವೇದೋ ಲಕ್ಷ್ಮೀಮನಪಗಾಮಿನೀಮ್ |

ಯಸ್ಯಾಂ ಹಿರಣ್ಯಂ ವಿಂದೇಯಂ ಗಾಮಶ್ವಂ ಪುರುಷಾನಹಮ್ ||೨||

ಅಶ್ವ ಪೂರ್ವಾಂ ರಥ ಮಧ್ಯಾಂ ಹಸ್ತಿನಾದ ಪ್ರಬೋಧಿನೀಮ್ |

ಶ್ರಿಯಂ ದೇವೀಮುಪಹ್ವಯೇ ಶ್ರೀರ್ಮಾ ದೇವೀಜುಷತಾಮ್ ||೩||

ಕಾಂ ಸೋಸ್ಮಿತಾಂ ಹಿರಣ್ಯಪ್ರಾಕಾರಮಾರ್ದ್ರಾಂ ಜ್ವಲಂತೀಂ ತೃಪ್ತಾಂ ತಪರ್ಯಂತೀಮ್ |

ಪದ್ಮೇಸ್ಥಿತಾಂ ಪದ್ಮವರ್ಣಾಂ ತಾಮಿಹೋಪಹ್ವಯೇ ಶ್ರಿಯಮ್ ||೪||

ಚಂದ್ರಾಂ ಪ್ರಭಾಸಾಂ ಯಶಸಾ ಜ್ವಲಂತೀಂ ಶ್ರಿಯಂ ಲೋಕೇ ದೇವಜುಷ್ಟಾಮುದಾರಾಮ್ |

ತಾಂ ಪದ್ಮಿನೀಮೀಂ ಶರಣಮಹಂ ಪ್ರಪದ್ಯೇಲಕ್ಷ್ಮೀರ್ಮೇ ನಶ್ಯತಾಂ ತಾಂ ವೃಣೇ ||೫||

ಆದಿತ್ಯವರ್ಣೇ ತಪಸೋಧಿಜಾತೋ ವನಸ್ಪತಿಸ್ತವ ವೃಕ್ಷೋಥಬಿಲ್ವಃ |

ತಸ್ಯ ಫಲಾನಿ ತಪಸಾ ನುದಂತು ಮಾಯಾಂತರಾ ಯಾಶ್ಚ ಬಾಹ್ಯಾ ಅಲಕ್ಷ್ಮೀಃ ||೬||

ಉಪೈತು ಮಾಂ ದೇವಸಖಃ ಕೀರ್ತಿಶ್ಚ ಮಣಿನಾ ಸಹ |

ಪ್ರಾದುರ್ಭೂತೋಸ್ಮಿ ರಾಷ್ಟ್ರೇಸ್ಮಿನ್ ಕೀರ್ತಿಮೃದ್ಧಿಂ ದದಾತು ಮೇ ||೭||

ಕ್ಷುತ್ಪಿಪಾಸಾಮಲಾಂ ಜ್ಯೇಷ್ಠಾಮಲಕ್ಷ್ಮೀಂ ನಾಶಯಾಮ್ಯಹಮ್ |

ಅಭೂತಿಮ ಸಮೃದ್ಧಿಂ ಚ ಸರ್ವಾಂ ನಿರ್ಣುದ ಮೇ ಗೃಹಾತ್ ||೮||

ಗಂಧದ್ವಾರಾಂ ದುರಾಧರ್ಷಾಂ ನಿತ್ಯ ಪುಷ್ಟಾಂ ಕರೀಷಿಣೀಮ್ |

ಈಶ್ವರೀಗ್ಂ ಸರ್ವಭೂತಾನಾಂ ತಾಮಿಹೋಪಹ್ವಯೇ ಶ್ರಿಯಮ್ ||೯||

ಮನಸಃ ಕಾಮಮಾಕೂತಿಂ ವಾಚಸ್ಸತ್ಯವಶೀಮಹಿ |

ಪಶೂನಾಂ ರೂಪಮನ್ನಸ್ಯ ಮಯಿ ಶ್ರೀಃ ಶ್ರಯತಾಂ ಯಶಃ ||೧೦||

ಕರ್ದಮೇನ ಪ್ರಜಾಭೂತಾ ಮಯಿ ಸಂಭವ ಕರ್ದಮ |

ಶ್ರಿಯಂ ವಾಸಯ ಮೇ ಕುಲೇ ಮಾತರಂ ಪದ್ಮಮಾಲಿನೀಮ್ ||೧೧||

ಆಪಸ್ಸೃಜಂತು ಸ್ನಿಗ್ಧಾನಿ ಚಿಕ್ಲೀತ ವಸ ಮೇ ಗೃಹೇ |

ನಿ ಚ ದೇವೀಂ ಮಾತರಂ ಶ್ರಿಯಂ ವಾಸಯ ಮೇ ಕುಲೇ ||೧೨||

ಆರ್ದ್ರಾಂ ಪುಷ್ಕರಣೀಂ ಪುಷ್ಟಿಂ ಪಿಂಗಲಾಂ ಪದ್ಮಮಾಲಿನೀಮ್ |

ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ ||೧೩||

ಆರ್ದ್ರಾಂ ಯಃಕರಿಣೀಂ ಯಷ್ಟಿಂ ಸುವರ್ಣಾಂ ಹೇಮ ಮಾಲಿನೀಮ್ |

ಸೂರ್ಯಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ ||೧೪||
ತಾಂ ಮ ಆವಹ ಜಾತವೇದೋ ಲಕ್ಷ್ಮೀ ಮನಪಗಾಮಿನೀಮ್ |

ಯಸ್ಯಾಂ ಹಿರಣ್ಯಂ ಪ್ರಭೂತಂ ಗಾವೋ ದಾಸ್ಯೋಶ್ವಾನ್, ವಿಂದೇಯಂ ಪುರುಷಾನಹಮ್ ||೧೫||

ಯಶ್ಶುಚಿಃ ಪ್ರಯತೋ ಭೂತ್ವಾ ಜುಹುಯಾದಾಜ್ಯ ಮನ್ವಹಮ್ |

ಶ್ರಿಯಃ ಪಂಚದಶರ್ಚಂ ಚ ಶ್ರೀ ಕಾಮಸ್ಸತತಂ ಜಪೇತ್ ||೧೬||

ಮಹಾದೇವ್ಯೈಚ ವಿದ್ಮಹೇ ವಿಷ್ಣು ಪತ್ನ್ಯೈ ಚ ಧೀಮಹಿ

ತನ್ನೋ ಲಕ್ಷ್ಮೀಃ ಪ್ರಚೋದಯಾತ್

ಶ್ರೀ ಸೂಕ್ತ (ಕನ್ನಡ ಗೀತೆ)

ಸೂಕ್ತಿಃ

ಹೊನ್ನ ಜಿಂಕೆಯ ಕಥೆಯ ಮರೆಯದೆ ಕಾಮ ಮೋಹವ ದೂರವಿರಿಸು

ಹೊನ್ನ ಮೈಯಿಂ ಚಂದ್ರನಂತಿಹ ತಾಯಿ ಲಕ್ಷ್ಮಿಯ ಬಳಿಗೆ ಕರೆಸು

***

ಹೊನ್ನ ಹೊಳಪಿನ ಜಿಂಕೆ ಚೆಲುವಿನ ಸ್ವರ್ಣರಜತದ ನಗದಿ ಮೆರೆವ

ಹೊನ್ನ ಮೈಯಿಂ ಚಂದ್ರನಂತಿಹ ಲಕ್ಷ್ಮಿ ಲಭಿಸಲಿ ಅಗ್ನಿಯೆನಗೆ ||೧||

ಜಾತವೇದನೆ, ಜತೆಯಗಾಮಿನಿ ನನ್ನ ಶ್ರೇಯಕೆ ಲಕ್ಷ್ಮಿ ಬರಿಸು

ಮೋದ ಮನದಲಿ ಚಿನ್ನ ದನಗಳ ಕುದುರೆ ಸೇವಕರನ್ನು ಕೊಡಿಸು ||೨||

ಕುದುರೆ ಮುಂಗಡೆ ರಥದ ಮಧ್ಯದಿ ಆನೆ ಕೂಗಲಿ ನೆನಪಿಸುವಳು

ಸಿರಿಯ ನೀಯಲಿ ನನ್ನ ಪೊರೆಯಲಿ ದೇವಿ ಶ್ರೀಯಳ ಕರೆಯುತಿರುವೆ ||೩||

ಮನಕೆ ನಿಲುಕದ ಮುಗುಳು ನಗೆಯಲಿ ಚಿನ್ನ ತೇವದ ಪ್ರಭೆಯ ಹೊಂದಿ

ತೃಪ್ತ ತೃಪ್ತಿಪ ಪದ್ಮಪೀಠದ ಪದ್ಮ ವರ್ಣದ ಶ್ರೀಯ ಕರೆವೆ ||೪||

ದೇವ ಸೇವಿತ ಚಂದ್ರ ಕಾಂತಿಯ ಕೀರ್ತಿಸಂಪದ ಮೆರೆಯುವಳಿಗೆ

ಲಕ್ಷ್ಮಿ ಪದ್ಮಿನಿ ಶರಣು ಹೊಗುವೆನು ನನ್ನ ಬಡತನ ನೀಗಿ ನೆಲಸು ||೫||

ನಿನ್ನ ತಪದಿಂ ಜನಿತ ಬಿಲ್ವವು ಸೂರ್ಯ ವರ್ಣಳೆ ಫಲವು ತಪದಿ

ನನ್ನ ಒಳಗಣ ಮನದ ಹೊರಗಣ ಲಕ್ಷ್ಮಿರಹಿತವು ನಾಶಗೊಳಲಿ ||೬||

ದೇವ ದೇವನ ಸಖ ಕುಬೇರನು ಕೀರ್ತಿ ಮಣಿಯರ ಜತೆಗೆ ಬರಲಿ

ತಾನು ಜನಿಸಿದ ರಾಷ್ಟ್ರವಿದರಲಿ ಕೀರ್ತಿ ಸಂಪದ ತಂದು ಕೊಡಲಿ ||೭||

ಹಸಿವೆ ತೃಷೆಗಳ ದೋಷಪೂರಿತ ಹಿರಿಯಾಲಕ್ಷ್ಮಿಯಾಂತಗೊಳಿಪೆ

ಎಲ್ಲ ಬಡತನವೆಲ್ಲ  ಅಶುಭವ ನನ್ನ ಮನೆಯಿಂ ಹೊರಗೆ ಕಳಿಸು ||೮||

ಗಂಧದಿಂದಿಹ ಸ್ಥಿರದಿ ನಿಂತಿಹ ನಿತ್ಯ ಕೃಷಿಯಲಿ ಪುಷ್ಟಿಗೊಂಡು

ಸರ್ವ ಜೀವಿಯ ಒಡತಿಯವಳಿಗೆ ಸ್ವಾಗತಾದರ ಶ್ರೀಗೆ ನೀವೆ ||೯||

ಮನದಿ ಇಷ್ಟವು ಮಾತು ಸತ್ಯವು ಅನ್ನ ಪಶುಗಳ ಫಲಗಳನ್ನು

ಸರ್ವ ಸಂಪದ ಸರ್ವ ಯಶವನು ಶ್ರಿಯೆ ನನ್ನಲಿ ಕೊಡುವಳಾಗು ||೧೦||

ಮಾಡು ಕರ್ದಮ ತಾಯಿ ಲಕ್ಷ್ಮಿಯು ನನ್ನ ಕುಲದಲಿ ವಾಸಿಪಂತೆ

ಪದ್ಮ ಮಾಲಿನಿ ಮಾತೆಯೊಂದಿಗೆ ನನ್ನ ಮನೆಯಲಿ ವಾಸ ಮಾಡು ||೧೧||

ಸ್ನೇಹ ಹೊಂದಲಿ ಜಲದ ದೇವತೆ ನೆಲಸು ಚಿಕ್ಲೀತೆನ್ನ ಗೃಹದಿ

ಶ್ರೀಯ ದೇವತೆ ಮಾತೆ ಲಕ್ಷ್ಮಿಯು ನನ್ನ ಕುಲದಲಿ ಜನಿಸಿ ಬರಲಿ ||೧೨||

ಆನೆಯಿಂದಭಿಷೇಕಗೊಳ್ಳುವ ಪಿಂಗಳಾರ್ದ್ರದಿ ಶಕ್ತಿ ಮೆರೆವ

ಹೊನ್ನ ಚಂದ್ರಿಕೆ ಹೊನ್ನ ಮಾಲೆಯ ಲಕುಮಿ ಕರೆತರು ಜಾತವೇದ ||೧೩||

ದಂಡಧಾರಣಿ ದಂಡ ಶೋಭೆಯ ಹೇಮ ಮಾಲಿನಿ ಸ್ವರ್ಣ ಶ್ರೀಯ

ಸೂರ್ಯ ತೇಜದ ಹೊನ್ನ ತನುವಿನ ಲಕ್ಷ್ಮಿ ಕರೆತರು ಜಾತವೇದ ||೧೪||

ಜತೆಗೆ ನೆಲಸುವ ಲಕ್ಷ್ಮಿ ಪ್ರಾಪ್ತಿಯ ಜಾತವೇದನೆ ನನಗೆ ಬರಿಸು

ಅವಳ ದಯೆಯಲಿ ಗೋವು ಹೊನ್ನನು ಕೆಲಸದಾಳನು ಪಡೆದುಕೊಂಬೆ ||೧೫||

ಶ್ರದ್ಧೆ ಶುಚಿಯಲಿ ಹೋಮದಾಜ್ಯದ ಪಂಚದಶದರ್ಚನೆಯ ಗೈದು

ಶ್ರೀಯ ಕಾಮಿತ ನಿತ್ಯ ದಿನವೂ  ಸೂಕ್ತ ಶ್ರೀಯನು ಜಪಿಸಬೇಕು ||೧೬||

ಜ್ಞಾನಗೊಂಬೆವು ಮಹಾದೇವಿಯ ವಿಷ್ಣುಪತ್ನಿಯ ಧ್ಯಾನಿಸುವೆವು

ದೇವಿ ಲಕ್ಷ್ಮಿಯು ನಮ್ಮ ಬುದ್ಧಿಗೆ ಶ್ರೀಯ ಪ್ರೇರಣೆ ನೀಡುತಿರಲಿ

ಸಂಗ್ರಹ: ವೇದಮಂತ್ರ ಗೀತಾಂಜಲಿ (ಡಾ| ಮಡ್ವ ಶಾಮ ಭಟ್ಟ)

ಸೂ:
ವೇದಮೂರ್ತಿ ತುಪ್ಪೆಕಲ್ಲು ಸಹೋದರರ
“ಶ್ರೀ  ಸೂಕ್ತಮ್” ಧ್ವನಿಮುದ್ರಿಕೆಯ ಬೈಲಿನ ಚೆನ್ನೈಬಾವ ಕಳುಸಿಕೊಟ್ಟಿದವು. ಬೈಲಿನ ಕೇಳುಗರಿಂಗಾಗಿ ಇಲ್ಲಿ ನೇಲುಸಿದ್ದು:
ಇಬ್ರಿಂಗೂ ಧನ್ಯವಾದಂಗೊ.

Get this widget | Track details | eSnips Social DNA
ಶ್ರೀ ಸೂಕ್ತಮ್, 5.0 out of 10 based on 2 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಮಂಗ್ಳೂರ ಮಾಣಿ

  ನನ್ನ ಒಳಗಣ ಮನದ ಹೊರಗಣ ಲಕ್ಷ್ಮಿರಹಿತವು ನಾಶಗೊಳಲಿ ||೬||
  ಎಷ್ಟು ಒೞೇ ಮಾತು..

  ಧನ್ಯವಾದ ಅಪ್ಪಚ್ಚಿ…

  [Reply]

  VA:F [1.9.22_1171]
  Rating: 0 (from 0 votes)
 2. Saradi Appachchi

  Hi oppanna,

  Gana homada vidhana nodide. Khushi aatu enthake helire chowthi dian maneli ganapathi home ittiddu – Amai Anantha Battara sarthyalli.

  I have one request! Shukravara durga pooje henege madudu heli tilisiddare olledu ittu. I dont know if you have done it already!

  [Reply]

  VA:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°
  ಚೆನ್ನೈ ಭಾವ

  ದಿ. ಡಾ| ಮಡ್ವ ಶಾಮ ಭಟ್ರ ರಚನೆಗೊ ಎಲ್ಲವೂ ಅತೀ ನಾಜೂಕಿಂದ ಆಯ್ದು. ಇಪ್ಪದರ ಇಪ್ಪ ಹಾಂಗೆ ಅನುವಾದಿಸಿ ಓದಲೂ , ತಿಳಿವಲೂ ಅತೀ ಸರಳವೂ, ಸುಂದರವೂ ಆಗಿ ಇದ್ದು ಹೇಳಿ ಒಪ್ಪ . ಶರ್ಮಪ್ಪಚ್ಚಿಗೆ ಧನ್ಯವಾದ ಸಹಿತ ಒಪ್ಪ.

  [Reply]

  VA:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಲಾಯ್ಕ ಆಯಿದು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನಬೆಟ್ಟಣ್ಣವಿನಯ ಶಂಕರ, ಚೆಕ್ಕೆಮನೆಸಂಪಾದಕ°ಮಾಷ್ಟ್ರುಮಾವ°ಸುಭಗಯೇನಂಕೂಡ್ಳು ಅಣ್ಣಅಕ್ಷರ°ಬೊಳುಂಬು ಮಾವ°ನೀರ್ಕಜೆ ಮಹೇಶಅನು ಉಡುಪುಮೂಲೆವೇಣೂರಣ್ಣಉಡುಪುಮೂಲೆ ಅಪ್ಪಚ್ಚಿಮುಳಿಯ ಭಾವಗಣೇಶ ಮಾವ°vreddhiಶರ್ಮಪ್ಪಚ್ಚಿಕೆದೂರು ಡಾಕ್ಟ್ರುಬಾವ°ಹಳೆಮನೆ ಅಣ್ಣಮಾಲಕ್ಕ°ವೆಂಕಟ್ ಕೋಟೂರುಶುದ್ದಿಕ್ಕಾರ°ಜಯಗೌರಿ ಅಕ್ಕ°ಪ್ರಕಾಶಪ್ಪಚ್ಚಿನೆಗೆಗಾರ°ಅಡ್ಕತ್ತಿಮಾರುಮಾವ°ಕಜೆವಸಂತ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ