ಶ್ರೀಮೂಕಾಂಬಿಕಾಷ್ಟಕಮ್

September 27, 2014 ರ 6:00 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶ್ರೀ ಮೂಕಾಂಬಿಕಾ ದೇವಿ ವಿರಾಜಮಾನ ಆಗಿಪ್ಪದು ಸಪ್ತ ಮುಕ್ತಿ ಸ್ಥಳಂಗಳಲ್ಲಿ ಒಂದಾದ ಕೊಲ್ಲೂರಿಲಿ. ಕೊಡಚಾದ್ರಿಯ ಚೆಂದದ ಬೆಟ್ಟದ ಸಾಲಿಲಿ ಸೌಪರ್ಣಿಕಾ ನದಿಯ ದಡಲ್ಲಿ ಶಿವಶಕ್ತಿಯರಿಬ್ಬರೂ ಜ್ಯೋತಿರ್ಲಿಂಗ ರೂಪಲ್ಲಿ ಇಪ್ಪ ಕೊಲ್ಲೂರಿಲಿ ಶ್ರೀ ಚಕ್ರದ ಮೇಲೆ ಅಬ್ಬೆಯ ಪಂಚಲೋಹದ ವಿಗ್ರಹವ ಸುಮಾರು ಸಾವಿರದ ಇನ್ನೂರು ವರುಷಕ್ಕೂ ಮೊದಲು ಶ್ರೀ ಶಂಕರಾಚಾರ್ಯರು ಸ್ಥಾಪನೆ ಮಾಡಿದ್ದವು ಹೇಳಿ ಹೇಳುತ್ತವು. ಇಲ್ಲಿ ನೆಲೆ ನಿಂದಿಪ್ಪ ಅಮ್ಮ ಶಕ್ತಿ, ಸರಸ್ವತಿ ಮತ್ತೆ ಮಹಾಲಕ್ಷ್ಮಿಯ ಅವತಾರ ಹೇಳಿಯೂ ಹೇಳ್ತವು. ಇಂದು ಈ ಮೂಕಾಂಬಿಕೆ ಭಕ್ತರ ಉದ್ಧಾರಕ್ಕಾಗಿ ಈ ಭೂಮಿಲಿ ಅವತರಿಸಿದ ದಿನ. ಅಬ್ಬೆ ಮಕ್ಕೊಗೆ ಬೇಕಾಗಿ ಆವಿರ್ಭವಿಸಿದ ದಿನ.
ಈ ವಿಶ್ವ ಜನನಿಯ ಜನ್ಮ ದಿನದ ಬಗ್ಗೆ ಶ್ರೀ ಗುರುಗೋ ಮೊದಲೊಂದರಿ ಹರೇರಾಮ ಬೈಲಿಲಿ ಶಿಷ್ಯರಿಂಗೆ ಸಂದೇಶ ಕೊಟ್ಟಿದವು.

ಈ ಪುಣ್ಯ ದಿನವ ನಮ್ಮ ಬೈಲಿಲಿ ನೆನಪ್ಪಿಸಿಗೊಂಬಲೆ ಕೊಶೀ ಆವುತ್ತಾ ಇದ್ದು. ನಮ್ಮ ಪೀಠದ ಆದಿ ಗುರು ಶ್ರೀ ಶಂಕರಾಚಾರ್ಯರು ಬರದ ಶ್ರೀ ಮೂಕಾಂಬಿಕಾಷ್ಟಕಮ್. ಕೊಲ್ಲೂರಿನ ಮೂಕಾಂಬಿಕೆ ಸೌಂದರ್ಯ ವೈಭವವ ಹೇಳ್ತ ಈ ಕೃತಿ ಅಬ್ಬೆಯ ಪೂರ್ಣ ರೂಪವ ನವಗೆ ಕೊಡ್ತು. ಮಂಗಳರೂಪಿಯಾಗಿ ಮಂಗಳಕರಳಾದ ಅಬ್ಬೆ ಸಕಲರ ಕಷ್ಟ ಪರಿಹರಿಸಿ ಮಂಗಳವ ಕೊಡಲಿ ಹೇಳಿ ಹಾರಯಿಕೆ.

ಶ್ರೀಮೂಕಾಂಬಿಕಾಷ್ಟಕಮ್ :

ಶ್ರೀಚಕ್ರಾಂಕಿತಬಿಂದುಮಧ್ಯನಿಲಯಾಂ ಪೀತಾಂಬರಾಲಂಕೃತಾಂ
ಶಂಖಂ ಚಕ್ರವರಾಭಯಂ ಚ ದಧತೀಂ ಬಾಲೇಂದುಮೌಳೀಂ ಶುಭಾಮ್ |
ಸಿಂಹಸ್ಯೋಪರಿಸಂಸ್ಥಿತಾಂ ತ್ರಿನಯನಾಂ ಮೂಕಾಸುರಚ್ಛೇದಿನೀಂ
ಶ್ರೀಕೋಲಾಪುರವಾಸಿನೀಂ ಭಗವತೀಂ ಧ್ಯಾಯಾಮಿ ಮೂಕಾಂಬಿಕಾಮ್ ||೧॥

ಮೂರ್ಧಾಗ್ರಾಂಚಿತರತ್ನಮೌಲಿವಿಲಸತ್ ಪೂರ್ಣೇಂದುಬಿಂಬಾನನಾಂ
ಫಾಲೇ ಕುಂಕುಮಲಾಂಛನಾಂ ನಿಟಿಲಯೋರ್ಮಧ್ಯಸ್ಥಕಸ್ತೂರಿಕಾಮ್ |
ಕರ್ಣಾಲಂಕೃತರತ್ನರಾಜಿತಘನಶ್ರೀಚಕ್ರಯುಗ್ಮಾನ್ವಿತಾಂ
ಶ್ರೀಕೋಲಾಪುರವಾಸಿನೀಂ ಭಗವತೀಂ ಧ್ಯಾಯಾಮಿ ಮೂಕಾಂಬಿಕಾಮ್ ||೨॥

ಕಾಮಾಕ್ಷೀಂ ಕರುಣೇಕ್ಷಣಾಂ ಪರಿಲಸತ್ ದಿವ್ಯಾಂಬಜನೈಃ ರಂಜಿತಾಂ
ನಾಸಾಯಾಂ ನವಮೌಕ್ತಿಕಾಂ ವಿದಧತೀಂ ಮಾಧುರ್ಯಗಾನಪ್ರಿಯಾಮ್ |
ಆದರ್ಶೋಪಮಕಾಂತಿಗಂಡಯುಗಲಾಂ ಹಾರಿದ್ರಚೂರ್ಣಾನ್ವಿತಾಂ
ಶ್ರೀಕೋಲಾಪುರವಾಸಿನೀಂ ಭಗವತೀಂ ಧ್ಯಾಯಾಮಿ ಮೂಕಾಂಬಿಕಾಮ್ ||೩॥

ಬಿಂಬೋಷ್ಠೀಂ ನವಪೀಠಿಕಾರಸಲಸತ್ ಸೌಂದರ್ಯಮಾನಾಧರಾಂ
ಶ್ರೀಮದ್ದಾಡಿಮಬೀಜಕಾಂತಿದಶನಾಂ ಮಂದಸ್ಮಿತೇನಾನ್ವಿತಾಮ್ |
ಮಾಧುರ್ಯಾಕ್ಷರಸಂಯುತಾಂ ಸುಖಕರೀಂ ಮಾರೇಣ ಸಂಸೇವಿತಾಂ
ಶ್ರೀಕೋಲಾಪುರವಾಸಿನೀಂ ಭಗವತೀಂ ಧ್ಯಾಯಾಮಿ ಮೂಕಾಂಬಿಕಾಮ್ ||೪॥

ಯೈಃ ಷಡ್ಭಿರ್ವದನೈಃ ನಿಪೀತಸುಭಗಾಲಂಕಾರಪೀನಸ್ತನೀಂ
ಸ್ಕಂದಸ್ಯಾಮಿತತೇಜಸಃ ಸುಜನನೀಂ ಮಂದಾರಮಾಲಾಧರೀಮ್ |
ಮಧ್ಯೇ ಸೌಷ್ಠವರೋಮರಾಜಿತಿಲಕಾಂ ಗಂಭೀರನಾಭೀಹೃದಾಂ
ಶ್ರೀಕೋಲಾಪುರವಾಸಿನೀಂ ಭಗವತೀಂ ಧ್ಯಾಯಾಮಿ ಮೂಕಾಂಬಿಕಾಮ್ ||೫॥

ನಾನಾರತ್ನವಿಚಿತ್ರಭೂಷಣಕರಾಂ ವಾಮೋರುಜಾನುದ್ವಯಾಂ
ಜಂಘಾಗ್ರಾಂಚಿತಹಂಸಕಾದಿಕರುಣೋದ್ಭೂಷಾ ವಿಶೇಷಾನ್ವಿತಾಮ್ |
ಇಂದ್ರಾದ್ಯಾಮರವೃಂದವಂದಿತಪದಾಂ ಭಕ್ತೇಷ್ಟದಾನವ್ರತಾಂ
ಶ್ರೀಕೋಲಾಪುರವಾಸಿನೀಂ ಭಗವತೀಂ ಧ್ಯಾಯಾಮಿ ಮೂಕಾಂಬಿಕಾಮ್ ||೬॥

ಮಾಯಾಮಾಧವಮುಖ್ಯದೇವನಿಚಯೈಃ ಸಂಸೇವ್ಯಮಾನಾಂ ಶುಭಾಂ
ಮಾರಾರಾತಿವಧೂಟಿಕಾಂ ಶುಭಕರೀಂ ಆನಂದ ಸಂದಾಯಿನೀಮ್ |
ಸೌವರ್ಣಾಂಚಿತಲಿಂಗಮೂರ್ದ್ನಿಪತಿನಾ ಸಾರ್ಥಸ್ವಸಾನ್ನಿಧ್ಯಕಾಂ
ಶ್ರೀಕೋಲಾಪುರವಾಸಿನೀಂ ಭಗವತೀಂ ಧ್ಯಾಯಾಮಿ ಮೂಕಾಂಬಿಕಾಮ್||೭॥

ಶ್ರೀ ವಾಣೀ ತುಹಿನಾದ್ರಿಜಾ ದಿತಿಸತೀ ಸ್ವಾಹಾಸ್ವಧಾನ್ವೇಷಿಣೀಂ
ಶ್ರೀಕಂಠಾದಿಸಮಸ್ತದೈವತಮುಖೈಃ ಸಂಪ್ರಾರ್ಥಿತಾಂ ಚಿನ್ಮಯೀಮ್ |
ಶ್ರೀಕಾಮೋದ್ಧತಮೂಕವಾಗ್ವಿಹತಿದಾಂ ಲಕ್ಷ್ಮೀಂ ಮಹಾಪೂರ್ವಿಕಾಂ
ಶ್ರೀಕೋಲಾಪುರವಾಸಿನೀಂ ಭಗವತೀಂ ಧ್ಯಾಯಾಮಿ ಮೂಕಾಂಬಿಕಾಮ್ ||೮॥

ನಮ್ಮ ಬೈಲಿನ ಸೊಸೆ ದೀಪಿ ರಾಗಮಾಲಿಕೆಲಿ ರಾಗಲ್ಲಿ ಚೆಂದಕ್ಕೆ ಹಾಡಿದ ಶ್ರೀ ಮೂಕಾಂಬಿಕಾಷ್ಟಕಮ್ –
MOOKAMBIKA ASHTAKAM by deepikabangalore

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಚೆನ್ನೈ ಬಾವ°

  ಮೂಕಾಂಬಿಕಾಷ್ಟಕಂ ಲಾಯಕ ಆಯ್ದು. ಶ್ರೀ ಅಕ್ಕಂಗೆ ಧನ್ಯವಾದ, ಸೊಗಸಾಗಿ ಹಾಡಿದ ದೀಪಿಕಾಕ್ಕಂಗೆ ಅಭಿನಂದನೆ ಎಂಬುದೀಗ – ‘ಚೆನ್ನೈವಾಣಿ’

  [Reply]

  VN:F [1.9.22_1171]
  Rating: +2 (from 2 votes)
 2. ಬೆಟ್ಟುಕಜೆ ಮಾಣಿ
  ಬೆಟ್ಟುಕಜೆ ಮಾಣಿ

  ದೇವಿ ಮೂಕಾಂಬಿಕೆಯ ಅಷ್ಟಕವ ಕೊಟ್ಟದಕ್ಕೆ ಅಕ್ಕಂಗೆ ಧನ್ಯವಾದ…ಉತ್ತಮ ಸಂಗ್ರಹ…

  [Reply]

  VN:F [1.9.22_1171]
  Rating: 0 (from 0 votes)
 3. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಶ್ರೀ ಅಕ್ಕಂಗೂ, ದೀಪಿಗೂ ಧನ್ಯವಾದ.

  [Reply]

  VN:F [1.9.22_1171]
  Rating: 0 (from 0 votes)
 4. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಅಪರೂಪದ ಅಷ್ಟಕವೊಂದರ ಸಕಾಲಲ್ಲಿ ಒದಗಿಸಿದ ಶ್ರೀ… ಮತ್ತೆ ಚೆಂದಕೆ ಹಾಡಿದ ದೀಪಿಕಾ ಇಬ್ರಿಂಗೂ ಧನ್ಯವಾದಂಗೊ

  [Reply]

  VA:F [1.9.22_1171]
  Rating: 0 (from 0 votes)
 5. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಚೊಕ್ಕ ಆಯಿದು

  [Reply]

  VA:F [1.9.22_1171]
  Rating: 0 (from 0 votes)
 6. Vasanthi

  Very good Deepika……Wish you best of luck..

  [Reply]

  VA:F [1.9.22_1171]
  Rating: 0 (from 0 votes)
 7. ಉಡುಪುಮೂಲೆ ಅಪ್ಪಚ್ಚಿ
  ಉಡುಪುಮೂಲೆ ಅಪ್ಪಚ್ಚಿ

  ಕ೦ನಡಿಗರ ನಾಡಹಬ್ಬ “ನವರಾತ್ರಿಯ” ಶುಭಗಳಿಗೆಲಿ ಮಹಾಕಾಳೀ ಮಹಾಲಕ್ಷ್ಮೀ ಮುಹಾಸರಸ್ವತೀ ಐಕ್ಯಸ್ವರೂಪಲ್ಲಿ ಕೊಲ್ಲೂರಿಲ್ಲಿ ನೆಲೆಸಿದ ಅಬ್ಬೆಯ ಅನನ್ಯ ಸ್ತೋತ್ರ ರತ್ನ ಶ್ರೀಮೂಕಾ೦ಬಿಕಾಷ್ಟಕವ ನಮ್ಮ ಬಯಲಿಲ್ಲಿ ಪ್ರಕಟಿಸಿದ ಶ್ರೀಯ ಕ್ಕ೦ಗೂ, ಹಾಡಿದ ತ೦ಗೆ ದೀಪಿಕಗ೦ಗೂ ಒಟ್ಟಿ೦ಗೆ ಹೃತ್ಪೂರ್ವಕ ಧನ್ಯವಾದ ಹಾ೦ಗೂ ಅಭಿನ೦ದನಗೊ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶುದ್ದಿಕ್ಕಾರ°ಪೆರ್ಲದಣ್ಣಸುಭಗಡೈಮಂಡು ಭಾವನೆಗೆಗಾರ°ಕೆದೂರು ಡಾಕ್ಟ್ರುಬಾವ°ಒಪ್ಪಕ್ಕಚೆನ್ನಬೆಟ್ಟಣ್ಣಹಳೆಮನೆ ಅಣ್ಣಚೂರಿಬೈಲು ದೀಪಕ್ಕಮಾಷ್ಟ್ರುಮಾವ°ದೊಡ್ಡಮಾವ°ತೆಕ್ಕುಂಜ ಕುಮಾರ ಮಾವ°ಕಾವಿನಮೂಲೆ ಮಾಣಿಶ್ಯಾಮಣ್ಣಮುಳಿಯ ಭಾವಬೊಳುಂಬು ಮಾವ°vreddhiವಾಣಿ ಚಿಕ್ಕಮ್ಮವಸಂತರಾಜ್ ಹಳೆಮನೆಡಾಗುಟ್ರಕ್ಕ°ಪುಟ್ಟಬಾವ°ವಿನಯ ಶಂಕರ, ಚೆಕ್ಕೆಮನೆಅನು ಉಡುಪುಮೂಲೆಅಕ್ಷರದಣ್ಣದೊಡ್ಮನೆ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ