ಶ್ರೀ ಸತ್ಯನಾರಾಯಣಪೂಜಾವ್ರತಕಥಾ – ಚತುರ್ಥೋಧ್ಯಾಯಃ

January 19, 2012 ರ 6:00 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳುದವಾರ – ತೃತೀಯೋಧ್ಯಾಯಃ
[ಪಾಠಾಂತರ ವ್ಯತ್ಯಾಸ ಇಪ್ಪಲೂ ಸಾಕು ಎಂಬುದು ನೆಂಪಿರಲಿ.]

ಶ್ರೀ ಸತ್ಯನಾರಾಯಣಪೂಜಾವ್ರತಕಥಾ – ಚತುರ್ಥೋಧ್ಯಾಯಃ

ಕಥಾಶ್ಲೋಕ ಶ್ರವಣಕ್ಕೆ:
[audio:audio/SNP_KATHA_CHAPTER_04.mp3]
ಧ್ವನಿ ಕೃಪೆ : www.sangeethamusic.com

|| ಸೂತ ಉವಾಚ ॥

ಯಾತ್ರಾಂ ತು ಕೃತವಾನ್ ಸಾಧುಃ ಮಂಗಲಾಯನ ಪೂರ್ವಿಕಾಂ ।
ಬ್ರಾಹ್ಮಣಾಯ ಧನಂ ದತ್ವಾ ತು ನಗರಂ ಯಯೌ ॥೧॥
ಕಿಯದ್ಧೂರೇ ಗತೇ ಸಾಧೌ ಸತ್ಯನಾರಾಯಣಃ ಪ್ರಭುಃ ।
ಜಿಜ್ಞಾಸಾಂ ಕೃತವಾನ್ ಸಾಧೋ ಕಿಮಸ್ತಿ ತವ ನೌಸ್ಥಿತಂ ॥೨॥

ತತೋ ಮಹಾಜನೌ ಮತ್ತೌ ಹೇಲಯಾ ಚ ಪ್ರಹಸ್ಯ ವೈ।
ಕಥಂ ಪೃಚ್ಛಸಿ ಭೋ ದಂಡಿನ್ ಮುದ್ರಾಂ ನೇತು ಕಿಮಿಚ್ಛಸಿ ।।೩॥
ಲತಪತ್ರಾದಿಕಂ ಚೈವ ವರ್ತತೇ ತರಣೌ ಮಮ ।
ನಿಷ್ಠುರಂ ಚ ವಚಃ ಶ್ರುತ್ವಾ ಸತ್ಯಂ ಭವತು ತೇ ವಚಃ ॥೪॥

ಏವಮುಕ್ತ್ವಾ ಗತಃ ಶೀಘ್ರಂ ದಂಡೀ ತಸ್ಯ ಸಮೀಪತಃ ।
ಕಿಯದ್ದೂರೇ ತತೋ ಗತ್ವಾ ಸ್ಥಿತಃ ಸಿಂಧುಸಮೀಪತಃ ॥೫॥
ಗತೇ ದಂಡಿನಿ ಸಾಧುಶ್ಚ ಕೃತನಿತ್ಯಕ್ರಿಯಸ್ತದಾ ।
ಉತ್ಥಿತಾಂ ತರಣೀಂ ದೃಷ್ಟ್ವಾ ವಿಸ್ಮಯಂ ಪರಮಂ ಯಯೌ ॥೬॥

ದೃಷ್ಟ್ವಾ ಲತಾದಿಕಂ ಚೈವ ಮೂರ್ಛಿತೋ ನೃಪತದ್ಭುವಿ ।
ಲಭ್ಧಸಂಜ್ಞೋವಣಿಕ್ಪುತ್ರಸ್ತತಶ್ಚಿಂತಾನ್ವಿತೋ ಭವತ್ ॥೭॥
ತದಾ ತು ದುಹಿತುಃ ಕಾಂತೋ ವಚನಂ ಚೇದಮಬ್ರವೀತ್ ।
ಕಿಮರ್ಥಂ ಕ್ರಿಯತೇ ಶೋಕಃ ಶಾಪೋ ದತ್ತಶ್ಚ ದಂಡಿನಾ ॥೮॥

ಶಕ್ಯತೇ ತೇನ ಸರ್ವಂ ಹಿ ಕರ್ತುಂ ಚಾತ್ರ ನ ಸಂಶಯಃ ।
ಅತಸ್ತಚ್ಛರಣಂ ಯಾಮೋವಾಂಛಿತಾರ್ಥೋ ಭವಿಷ್ಯತಿ ॥೯॥
ಜಾಮಾತುರ್ವಚನಂ ಶ್ರುತ್ವಾ ತತ್ಸಕಾಶಂ ಗತಸ್ತದಾ ।
ದೃಷ್ಟ್ವಾ ಚ ದಂಡಿನಂ ಭಕ್ತ್ವಾ ನತ್ವಾ ಪ್ರೋವಾಚ ಸಾದರಂ ॥೧೦॥

ಕ್ಷಮಸ್ವ ಚಾಪರಾಧಂ ಮೇ ಯದುಕ್ತಂ ತವ ಸನ್ನಿಧೌ ।
ಏವಂ ಪುನಃ ಪುನರ್ನತ್ವಾ ಮಹಾಶೋಕಾಕುಲೋ ಭವತ್ ॥೧೧॥
ಪ್ರೋವಾಚ ವಚನಂ ದಂಡೀ ವಿಲಪಂತಂ ವಿಲೋಕ್ಯ ಚ ।
ಮಾ ರೋದೀಃ ಶೃಣುಮದ್ವಾಕ್ಯಂ ಮಮ ಪೂಜಾಬಹಿರ್ಮುಖಃ ॥೧೨॥

ಮಮಾಜ್ಞಯಾಚದುರ್ಬುದ್ಧೇ ಲಬ್ಧಂ ದುಃಖಂ ಮುಹುರ್ಮುಹುಃ ।
ತಚ್ಛೃತ್ವಾ ಭವದ್ವಾಕ್ಯಂ ಸ್ತುತಿಂ ಕರ್ತುಂ ಸಮುದ್ಯತಃ ॥೧೩॥

ಸಾಧುರುವಾಚ ॥
ತ್ವನ್ಮಾಯಾ ಮೋಹಿತಾಃ ಸರ್ವೇ ಬ್ರಹ್ಮಾದ್ಯಾಸ್ತ್ರಿದಿವೌಕಸಃ ।
ನ ಜಾನಂತಿ ಗುಣಾನ್ ರೂಪಂ ತವಾಶ್ಚರ್ಯಮಿದಂ ಪ್ರಭೋ॥೧೪॥

ಮೂಢೋಹಂ ತ್ವಾಂ ಕಥಂ ಜಾನೇ ಮೋಹಿತಸ್ತವ ಮಾಯಯಾ ।
ಪ್ರಸೀದ ಪೂಜಯಿಷ್ಯಾಮಿ ಯಥಾವಿಭವವಿಸ್ತರೈಃ ॥೧೫॥
ಪುರಾ ವಿತ್ತಂ ಚ ತತ್ಸರ್ವಂ ತ್ರಾಹಿ ಮಾಂ ಶರಣಾಗತಂ ।
ಶ್ರುತ್ವಾ ಭಕ್ತಿಯುತಂ ವಾಕ್ಯಂ ಪರಿತುಷ್ಟೋ ಜನಾರ್ಧನಃ ॥೧೬॥

ವರಂ ಚ ವಾಂಛಿತಂ ದತ್ವಾ ತತ್ರೈವಾಂತರ್ದಧೇ ಹರಿಃ ।
ತತೋ ನಾವಂ ಸಮಾರುಹ್ಯ ದೃಷ್ಟ್ವಾ ವಿತ್ತಪ್ರಪೂರಿತಾಂ ॥೧೭॥
ಕೃಪಯಾ ಸತ್ಯದೇವಸ್ಯ ದೇವಸ್ಯ ಸಫಲಂ ವಾಂಛಿತಂ ಮಮ ।
ಇತ್ಯುಕ್ತ್ವಾ ಸ್ವಜನೈಃ ಸಾರ್ದಂ ಪೂಜಾಂ ಕೃತ್ವಾ ಯಥಾವಿಧಿ ॥೧೮॥

ಹರ್ಷೇಣ ಚಾಭವತ್ಪೂರ್ಣಃ ಸತ್ಯದೇವ ಪ್ರಸಾದತಃ ।
ನಾವಂ ಸಂಯೋಜ್ಯ ಯತ್ನೇನ ಸ್ವದೇಶಗಮನಂ ಕೃತಂ ॥೧೯
ಸಾಧುರ್ಜಾಮಾತರಂ ಪ್ರಾಹ ಪಶ್ಯ ರತ್ನಪುರೀಂ ಮಮ ।
ದೂತಂ ಚ ಪ್ರೇಷಯಾಮಾಸ ನಿಜವಿತ್ತಸ್ಯ ರಕ್ಷಕಂ ॥೨೦॥

ದೂತೋಸೌ ನಗರಂ ಗತ್ವಾ ಸಾಧುಭಾರ್ಯಾಂ ವಿಲೋಕ್ಯ ಚ ।
ಪ್ರೋವಾಚ ವಾಂಛಿತಂ ವಾಕ್ಯಂ ನತ್ವಾ ಬದ್ಧಾಂಜಲಿಸ್ತದಾ ॥೨೧॥
ನಿಕಟೇ ನಗರಸ್ಯೈವ ಜಾಮಾತ್ರಾ ಸಹಿತೋ ವಣಿಕ್ ।
ಆಗತೋ ಬಂಧುವರ್ಗೈಶ್ಚ ವಿತ್ತೈಶ್ಚ ಬಹುಭಿರ್ಯುತಃ ।।೨೨॥

ಶ್ರುತ್ವಾ ದೂತಮುಖಾದ್ವಾಕ್ಯಂ ಮಹಾಹರ್ಷವತೀ ಸತೀ ।
ಸತ್ಯಪೂಜಾಂ ಕುರುಷ್ವೇತಿ ಪ್ರೋವಾಚ ತನುಜಾಂ ಪ್ರತಿ ॥೨೩॥
ವ್ರಜಾಮಿ ಶೀಘ್ರಮಾಗಚ್ಛ ಸಾಧುಸಂದರ್ಶನಾಯ ಚ ।
ಇತಿ ಮಾತೃವಚಃ ಶ್ರುತ್ವಾ ವ್ರತಂ ಕೃತ್ವಾ ಸಮಾಪ್ಯ ಚ ॥೨೪॥

ಪ್ರಸಾದಂ ತು ಪರಿತ್ಯಜ್ಯ ಗತಾ ಸಾಪಿ ಪತಿಂ ಪ್ರತಿ ।
ತೇನ ರುಷ್ಟಃ ಸತ್ಯದೇವೋ ಭರ್ತಾರಂ ತರಣೀಂ ತಥಾ ॥೨೫॥
ಸಂಹೃತ್ಯ ಚ ಧನೈಃ ಸಾರ್ಧಂ ತಸ್ಯಾವಮಜ್ಜಯತ್ ।
ತತಃ ಕಲಾವತೀ ಕನ್ಯಾ ನ ವಿಲೋಕ್ಯ ನಿಜಂ ಪತಿಂ ॥೨೬।।

ಶೋಕೇನ ಮಹತಾ ತತ್ರ ರುದತೀ ಚಾಪತದ್ಭುವಿ ।
ದೃಷ್ಟ್ವಾ ತಥಾವಿಧಾಂ ನಾವಂ ಕನ್ಯಾಂ ಚ ಬಹುದುಃಖಿತಾಂ ॥೨೭॥
ಭೀತೇನ ಮನಸಾ ಸಾಧುಃ ಕಿಮಾಶ್ಚರ್ಯಮಿದಂ ಭವೇತ್ ।
ಚಿಂತ್ಯಮಾನಾಶ್ಚ ತೇ ಸರ್ವೇ ಬಭೂವು ಸ್ತರಿವಾಹಕಾಃ ॥೨೮॥

ತತೋ ಲೀಲಾವತೀ ಕನ್ಯಾಂ ದೃಷ್ಟ್ವಾ ಸಾ ವಿಹ್ವಲಾ ಭವತ್।
ವಿಲಲಾಪಾತಿದುಃಖೇನ ಭರ್ತಾರಂ ಚೇದಮಬ್ರವೀತ್ ॥೨೯॥
ಇದಾನೀಂ ನೌಕಯಾ ಸಾರ್ಧಂ ಕಥಂ ಸೋಭೂದಲಕ್ಷಿತಃ ।
ನ ಜಾನೇ ಕಸ್ಯ ದೇವಸ್ಯ ಹೇಲಯಾ ಚೈವ ಸಾ ಹೃತಾ ॥೩೦॥

ಸತ್ಯದೇವಸ್ಯ ಮಾಹಾತ್ಮ್ಯಂ ಜ್ಞಾತುಂ ವಾ ಕೇನ ಶಕ್ಯತೇ ।
ಇತ್ಯುಕ್ತ್ವಾ ವಿಲಲಾಪೈವ ತತಶ್ಚ ಸ್ವಜನೈಃ ಸಹ ॥೩೧॥
ತತೋ ಲೀಲಾವತೀಂ ಕನ್ಯಾಂ ಕ್ರೋಡೇ ಕೃತ್ವಾ ರುರೋದ ಹ ।
ತತಃ ಕಲಾವತೀಕನ್ಯಾ ನಷ್ಟೇ ಸ್ವಾಮಿನಿ ದುಃಖಿತಾ ॥೩೨॥

ಗೃಹೀತ್ವಾ ಪಾದುಕೇ ತಸ್ಯಾನುಗಂತುಂ ಚ ಮನೊ ದಧೇ ।
ಕನ್ಯಾಯಾಶ್ಚರಿತಂ ದೃಷ್ಟ್ವಾ ಸಭಾರ್ಯಃ ಸಜ್ಜನೋ ವಣಿಕ್ ॥೩೩॥
ಅತಿ ಶೋಕೇನ ಸಂತಪ್ತಃ ಚಿಂತಯಾಮಾಸ ಧರ್ಮವಿತ್ ।
ಹೃತಂ ವಾ ಸತ್ಯದೇವೇನ ಭ್ರಾಂತೋಹಂ ಸತ್ಯಮಾಯಯಾ ॥೩೪।।

ಸತ್ಯಪೂಜಾಂ ಕರಿಷ್ಯಾಮಿ ಯಥಾವಿಭವವಿಸ್ತರೈಃ ।
ಇತಿ ಸರ್ವಾನ್ ಸಮಾಹೂಯ ಕಥಯಿತ್ವಾ ಮನೋರಥಂ ॥೩೫॥
ನತ್ವಾ ಚ ದಂಡವದ್ಭೂಮೌ ಸತ್ಯದೇವಂ ಪುನಃ ಪುನಃ ।
ತತಸ್ತುಷ್ಟಃ ಸತ್ಯದೇವೋ ದೀನಾನಾಂ ಪರಿಪಾಲಕಃ ॥೩೬॥

ಜಗಾದ ವಚನಂ ವ್ಯೋಮ್ನಿ ಕೃಪಯಾ ಭಕ್ತವತ್ಸಲಃ ।
ತ್ಯಕ್ತ್ವಾ ಪ್ರಸಾದಂ ತೇ ಕನ್ಯಾ ಪತಿಂ ದ್ರಷ್ಟುಂ ಸಮಾಗತಾಃ ॥೩೭॥
ಅತೋsದೃಷ್ಟೋs ಭವತ್ತಸ್ಯಾಃ ಕನ್ಯಕಾಯಾಃ ಪತಿರ್ಧ್ರುವಂ ।
ಗೃಹಂ ಗತ್ವಾ ಪ್ರಸಾದಂ ಚ ಭುಕ್ತ್ವಾ ಸಾಯಾತಿ ಚೇತ್ಪುನಃ ॥೩೮॥

ಲಬ್ಧಬರ್ತ್ರೀ ಸುತಾ ಸಾಧೋ ಭವಿಷ್ಯತಿ ನ ಸಂಶಯಃ ।
ಕನ್ಯಕಾ ತಾದೃಶಂ ವಾಕ್ಯಂ ಶ್ರುತ್ವಾ ಗಗನಮಂಡಲಾತ್ ॥ ೩೯।।
ಕ್ಷಿಪ್ರಂ ತದಾ ಗೃಹಂ ಗತ್ವಾ ಪ್ರಸಾದಂ ಚ ಬುಭೋಜ ಸಾ ।
ಸಾ ಪಶ್ಚಾತ್ಪುನರಾಗತ್ಯ ದದರ್ಶ ಸ್ವಜನಂ ಪತಿಂ ॥೪೦॥

ತತಃ ಕಲಾವತೀ ಕನ್ಯಾ ಜಗಾದ ಪಿತರಂ ಪ್ರತಿ ।
ಇದಾನೀಂ ಚ ಗೃಹಂ ಯಾಹಿ ವಿಲಂಬಂ ಕುರುಷೇ ಕಥಂ ॥೪೧॥
ತಚ್ಛೃತ್ವಾ ಕನ್ಯಕಾವಾಕ್ಯಂ ಸಂತುಷ್ಟೋಭೂದ್ವಣಿಕ್ಸುತಃ ।
ಪೂಜನಂ ಸತ್ಯದೇವಸ್ಯ ಕೃತ್ವಾ ವಿಧಿವಿಧಾನತಃ ॥೪೨॥

ಧನೈರ್ಬಂಧುಗಣೈಸ್ಸಾರ್ಧಂ ಜಗಾಮ ನಿಜಮಂದಿರಂ ।
ಪೌರ್ಣಮಾಸ್ಯಾಂಚ ಸಂಕ್ರಾಂತೌ ಕೃತವಾನ್ ಸತ್ಯಪೂಜನಂ ॥೪೩॥
ಇಹಲೋಕೇ ಸುಖಂ ಭುಕ್ತ್ವಾ ಚಾಂತೇ ಸತ್ಯಪುರಂ ಯಯೌ ॥೪೪॥

ಇತಿ ಶ್ರೀ ಸ್ಕಂದಪುರಾಣೇ ರೇವಾಖಂಡೇ ಸತ್ಯನಾರಾಯಣವ್ರತಕಥಾಯಾಂ ಚತುರ್ಥೋಧ್ಯಾಯಃ ॥

ಕತೆ:

ಶ್ರೀ ಸತ್ಯನಾರಾಯಣ ಕತೆಯ ಮುಂದುವರಿಸ್ಯೊಂಡು ಸೂತಪುರಾಣಿಕ ಹೇಳುತ್ತ° – ಚಂದ್ರಕೇತು ಮಹಾರಾಜನ ಕಾರಾಗೃಹಂದ ಬಿಡುಗಡೆಯಾಗಿ ಅಲ್ಲಿಪ್ಪ ಬ್ರಾಹ್ಮಣರಿಂಗೆ ದಾನ ದಕ್ಷಿಣೆಗಳ ಕೊಟ್ಟು ಸಂತೋಷಿಸಿ ತನ್ನ ಅಳಿಯನ ಜತೇಲಿ ತನ್ನ ಊರಿಂಗೆ ಹೆರಟ ವ್ಯಾಪಾರಿ ಪ್ರಯಾಣ ಮುಂದುವರುಸಿ ತನ್ನ ಊರ ಹೊರಬಾಹೆಗೆ ಬಂದು ತಲುಪಿದ°.
ಆ ಕಾಲಕ್ಕೆ ಇವನ ಈಗಾಣ ವರ್ತನೆ ಸ್ವಭಾವ ಪುನಃ ಪರೀಕ್ಷಿಸೆಕ್ಕು ಹೇಳಿ ಭಗವಂತ° ಒಬ್ಬ ಸನ್ಯಾಸಿ ರೂಪಲ್ಲಿ ಇವರ ಮುಂದೆ ಕಾಣಿಸಿಗೊಂಡ°.
ಅವರ ಮಾತ್ನಾಡಿಸಿದ ಸನ್ಯಾಸಿ “ನಿನ್ನ ಹಡಗಿಲ್ಲಿ ಎಂತೆಂತ ಇದ್ದು?” ಹೇಳಿ ಪ್ರಶ್ನಿಸಿದ°.
ತನ್ನಂತ ಶ್ರೀಮಂತನ ನೋಡಿ ಈ ರೀತಿ ಪ್ರಶ್ನುಸುವ ಬಡಬಿಕ್ಷುಕ ರೂಪಲ್ಲಿಪ್ಪ ಈ ಸನ್ಯಾಸಿಯ ತಾತ್ಸಾರ ಭಾವೆನೆಂದ ಹಲ್ಲುಕಿಸ್ಕೊಂಡು “ಎಂತದೋ°? , ನಿನಗೆಂತಾಯೇಕೀಗ?, ಏನಾರು ಎಂಗಳತ್ರಂದ ತೆಕ್ಕೊಂಬ ಬಯಕೆ ಇದ್ದೋ?. ಈ ಹಡಗಿಲ್ಲಿ ಬೆಲೆಬಾಳುವ ವಸ್ತುಗೊ ಎಂತ್ಸೂ ಇಲ್ಲೆ. ಒಣಕ್ಕಟೆ ಸೊಪ್ಪು ಬಳ್ಳಿಗೊ ಇಪ್ಪದು. ಬೇಕಾರೆ ನೀಯೇ ನೋಡು” ಹೇಳಿ ಹೇಳಿದ ವ್ಯಾಪಾರಿ. ನಿಷ್ಠುರಂ ಚ ವಚಃ ಶ್ರುತ್ವಾ – ವರ್ತಕ° ಹೇಳಿದ ಗರ್ವದ ನುಡಿಗಳ ಕೇಳಿಗೊಂಡ ಸನ್ಯಾಸಿ ‘ಸತ್ಯಂ ಭವತು ತೇ ವಚಃಹಾಂಗೇ ಆಗಲಿಹೇಳಿ ಹೇಳಿಕ್ಕಿ ಅಲ್ಲಿಂದ ರಜ ದೂರ ಸರುದು ಹೋದ°.

ಆ ವ್ಯಾಪಾರಿಗೊ ತಮ್ಮ ನಿತ್ಯಕರ್ಮಂಗಳ ಮಾಡಿ ಹಡಗಿನ ಸಮೀಪ ಬಂದು ನೋಡುತ್ತವು – ಹಡಗು ಹಗುರವಾಗಿ ನೀರಮೇಲೆ ತೇಲಿಗೊಂಡಿದ್ದು. ವಿಸ್ಮಿತರಾದವು.
ಹಡಗಿನ ಹತ್ರೆ ಬಂದು ಒಳ ನೋಡಿರೆ ತರಗೆಲೆಬಳ್ಳಿಗಳೇ ಇತ್ತಿದ್ದದು! ದುರದೃಷ್ಟವ ಕಂಡು ಮೂರ್ಛಿತನಾದವು ವ್ಯಾಪಾರಿಗೊ.
ಕ್ಷಣಕಾಲ ಕಳುದು ಮೂರ್ಛೆ ತೆಳುದಪ್ಪಗ ಅಳಿಯ ವ್ಯಾಪಾರಿ, ಮಾವ ವ್ಯಾಪಾರಿಯ ನೋಡಿ – “ಸುಮ್ಮನೆ ವ್ಯರ್ಥ ಚಿಂತಿಸಿ ಎಂತ ಫಲ ಇನ್ನು. ಆ ಸನ್ಯಾಸಿಯೇ ಈ ರೀತಿ ಶಾಪ ಕೊಟ್ಟಿರೇಕು. ಆದ್ದರಿಂದಲೇ ನಮ್ಮ ಸಂಪತ್ತಲ್ಲಾ ಮಾಯವಾಗಿ ದರಿದ್ರತೆ ತೋರಿದ್ದು. ಅವನೇ ನಮ್ಮ ಈ ಕಷ್ಟನಷ್ಟವ ಪರಿಹರುಸೇಕೆ ಹೊರತು ನಾವು ಎಂತ ದುಃಖಿಸಿಯೂ ಪ್ರಯೋಜನ ಇಲ್ಲೆ. ಆದ್ದರಿಂದ ಅವಂಗೇ ಶರಣಾಗತಿ ಅಪ್ಪೋ°.” ಹೇಳಿ ಹೇಳಿದ°.
ಅಳಿಯನ ಮಾತಿನ ಕೇಳಿ ವ್ಯಾಪಾರಿ ಓಡಿಹೋಗಿ ಸನ್ಯಾಸಿಯ ಕಾಲಿಂಗೆ ಅಡ್ಡಬಿದ್ದು, ಕ್ಷಮಸ್ವ ಚಾಪರಾಧಂ ಮೇ ಯದುಕ್ತಂ ತವ ಸನ್ನಿಧೌ… ಎನ್ನ ಅಪರಾಧವ ಕ್ಷಮಿಸು, ಆನು ನಿಂಗಳತ್ರೆ ಲೊಟ್ಟೆ ಹೇಳಿದ್ದಕ್ಕೆ ಕೋಪಿಸಿಗೊಳ್ಳೆಡಿ. ಸರ್ವಾಪರಾಧ ಆತು. ಕ್ಷಮಿಸು ಕ್ಷಮಿಸು ಹೇಳಿ ಮತ್ತೆ ಮತ್ತೆ ಸನ್ಯಾಸಿಗೆ ನಮಸ್ಕಾರ ಮಾಡಿದ°.  ಹೀಂಗೆ ವಿಲಾಪಿಸಿಯೊಂಡಿಪ್ಪ ವರ್ತಕನ ನೋಡಿ ಸನ್ಯಾಸಿಯು – “ ಏ ಮೂರ್ಖ, ಅಂತೇ ಎಂತಕೆ ನೀ ಕೂಗುತ್ತೆ. ‘ಮಾ ರೋದೀಃ ಶೃಣುಮದ್ವಾಕ್ಯಂ ಮಮ ಪೂಜಾಬಹಿರ್ಮುಖಃ’ – ಎನ್ನ ಭಕ್ತಿಂದ ಪೂಜುಸದ್ದೆ, ಕಡೆಗಣಿಸಿದ್ದರಿಂದಲಾಗಿ ನಿನಗೆ ಈ ರೀತಿ ಕಷ್ಟ ದುಃಖ ಉಂಟಾದ್ದು.” ಹೇಳಿ ಹೇಳಿದ°.  ಭಗವಂತ ಹೇಳಿದ ಮಾತಿನ ಕೇಳಿ ವರ್ತಕ, ಭಕ್ತಿಂದ ಕೈ ಜೋಡುಸಿ, ತ್ವನ್ಮಾಯಾ ಮೋಹಿತಾಃ ಸರ್ವೇ ಬ್ರಹ್ಮಾದ್ಯಾಸ್ತ್ರಿದಿವೌಕಸಃ । ನ ಜಾನಂತಿ ಗುಣಾನ್ ರೂಪಂ ತವಾಶ್ಚರ್ಯಮಿದಂ ಪ್ರಭೋ || – “ಪ್ರಭೋ, ನಿನ್ನ ಮಾಯೆಂದ ಬ್ರಹ್ಮಾದಿ ದೇವತೆಗಳೇ ಮೋಹಿತರಾಯ್ದವು. ನಿನ್ನ ನಾಮ ರೂಪ ಗುಣ ಮುಂತಾದವುಗಳ ಅವ್ವೇ ತಿಳ್ಕೊಂಬಲೆ ಅಶಕ್ತರಾಯ್ದವು. ಹೀಂಗಿಪ್ಪಗ, ಮೂಢನೂ ಅಲ್ಪನೂ ಆಗಿಪ್ಪ ಎನ್ನಾಂಗಿರ್ತವ° ಹೇಂಗೆ ನಿನ್ನ ತಿಳ್ಕೊಂಬಲೆ ಸಾಧ್ಯ. ದಯದೋರಿ ಪ್ರಸನ್ನನಾಗು, ಸಾಧ್ಯವಪ್ಪ ಎಲ್ಲಾ ರೀತಿಯ ವೈಭವಂದ ನಿನ್ನ ಪೂಜಿಸುತ್ತೆ, ನಿನಗೆ ಸಂಪೂರ್ಣ ಶರಣಾಯ್ದೆ, ಎನ್ನ ನಷ್ಟವಾದ ಸಂಪತ್ತು ಪುನಃ ಎನಗೆ ಸಿಕ್ಕುತ್ತಾಂಗೆ ಮಾಡು.”  ಹೇಳಿ ಅಂಗಾಲಾಚಿ ಬೇಡಿಕೊಂಡ°.
ಪಶ್ಚಾತ್ತಾಪಂದ ಕಂಗೆಟ್ಟ ವರ್ತಕನ ಸ್ಥಿತಿಯ ನೋಡಿ ಅವನ ಪ್ರಾರ್ಥನೆಂದ ಸಂತುಷ್ಟನಾದ ಭಗವಂತ° ಅವನ ಅಭೀಷ್ಟ ಸಲ್ಲಿಸಿ ಬೇಡಿದ ವರವ ಇತ್ತು ಅಂತರ್ಧಾನನಾದ°.

ಅಭಾವನಲ್ಲಿ ಸನಾಪೂ

ಬಳಿಕ ತನ್ನ ಹಡಗು ಮದಲಾಣ ಹಾಂಗೆ ಸಂಪತ್ತಿಂದ ತುಂಬಿ ಇಪ್ಪದರ ಕಂಡು ಸಂತೋಷಗೊಂಡು ಶ್ರೀ ಸತ್ಯನಾರಾಯಣ ಸ್ವಾಮಿಯ ಅನುಗ್ರಹಂದ ತನ್ನ ಇಷ್ಟಾರ್ಥ ಸಿದ್ಧಿ ಆತು ಹೇಳಿ ತೃಪ್ತನಾಗಿ ಪುನಃ ದೇವರ ಪೂಜಿಸಿ ತನ್ನ ಊರಿಂಗೆ ಹೋಪ ನಿಶ್ಚಯ ಮಾಡಿದ°.
ಅಳಿಯನೊಡಗೂಡಿ ತನ್ನ ಊರು ರತ್ನಪುರಿಯ ಸಮೀಪಕ್ಕೆ ಬಂದು ತಲುಪಿದ್ದಾಗಿ ತನ್ನ ಮನಗೆ ವರ್ತಮಾನ ಕಳುಸಿದ ವರ್ತಕ°.  ದೂತ ವರ್ತಕನ ಮನಗೆ ಹೋಗಿ ವರ್ತಕನ ಮಡದಿ ಲೀಲಾವತಿಗೆ ನಮಸ್ಕರಿಸಿ “ನಿಂಗಳ ಗಂಡ ಅಳಿಯನ ಜತೇಲಿ ಬಹಳ ಧನಸಂಪತ್ತಿನಿಂದೊಡಗೂಡಿ ಊರಿಂಗೆ ಬಂದು ತಲುಪಿದ್ದ°” ಹೇಳಿ ನಿವೇದಿಸಿತ್ತು. ಈ ಮಾತುಗಳ ಕೇಳಿ ಪರಮ ಸಂತುಷ್ಟೆಯಾದ ಲೀಲಾವತಿ, ತನ್ನ ಮಗಳಾದ ಕಲಾವತಿಯ ದೆನಿಗೊಂಡು, –  “ಮಗಳೇ, ಆನು ಅವರ ಸ್ವಾಗತುಸಲೆ ಮುಂದಾಗಿ ಹೋವ್ತೆ., ನೀನೊಂದು ಸತ್ಯನಾರಾಯಣ ಪೂಜೆ ಮಾಡಿಕ್ಕಿ ಬಾ” ಹೇಳಿಕ್ಕಿ ವರ್ತಕ ಇಪ್ಪಲ್ಲ್ಯಂಗೆ ಧಾವಿಸಿ ಬಂತು.

ಅಬ್ಬೆಯ ಮಾತಿನಂತೆ ಮಗಳು ಸಾಂಗವಾಗಿ ಸತ್ಯನಾರಾಯಣ ಪೂಜೆಯ ಮಾಡಿ ಮುಗುಸಿತ್ತು. ಆದರೆ, ಗಂಡನ ಕಾಂಬ ತವಕಲ್ಲಿ ಪ್ರಸಾದ ಬಿಟ್ಟಿಕ್ಕಿ ತಾನೂ ಅವಿಪ್ಪಲ್ಯಂಗೆ ಓಡಿ ಬಂತು.
ಪ್ರಸಾದ ಬಿಟ್ಟು ಬಂದದ್ದರಿಂದ ಕುಪಿತನಾದ ಸತ್ಯದೇವರು ವರ್ತಕನ ಅಳಿಯನನ್ನೂ, ಅವ° ಏರಿಗೊಂಡಿದ್ದ ಹಡಗನ್ನೂ ನೀರಿಲ್ಲಿ ಮುಳುಗಿದ ಹಾಂಗೆ ಕಾಣೆ ಮಾಡಿದ°.
ಮಗಳು ಕಲಾವತಿ ಅಲ್ಲಿ ಬಂದು ನೋಡುವಾಗ ತನ್ನ ಗಂಡ ಇಲ್ಲದ್ದಿಪ್ಪದ್ದು ಕಂಡು ದುಃಖಿತೆಯಾಗಿ ಮೂರ್ಛೆಹೋಗಿ ನೆಲಕ್ಕಲ್ಲಿ ಬಿದ್ದತ್ತು. “ಇದೆಂತಹ ಆಶ್ಚರ್ಯ” ಹೇಳಿ ಅಲ್ಲಿಪ್ಪೋರು ಎಲ್ಲಾರು ಆಶ್ಚರ್ಯಗೊಂಡವು.
ಲೀಲಾವತಿಯು ವಿಲಪಿಸಿಗೊಂಡು ಗಂಡನತ್ರೆ “ಈಗತಾನೇ ನಿಂಗಳ ಜೋತೆಲಿಯೇ ಇತ್ತಿದ್ದ ಅಳಿಯ ಅಕಸ್ಮಾತ್ ಕಾಣೆ ಆದ್ದೇಂಗೆ ? ಯಾವ ದೇವರ ಮಾಯೆಯೋ ಇದು ? ಅಲ್ಲ, ಸತ್ಯನಾರಾಯಣ ದೇವರ ಮಹಿಮೆಯನ್ನಾರು ತಿಳಿದವು ಆರು ? ಎಂಬಿತ್ಯಾದಿ ನುಡಿಗಳೊಂದಿಗೆ ದುಃಖಿಸಿತ್ತು. ತನ್ನ ಗಂಡನ ಸಾವಿನಿಂದ ದುಃಖಿತೆಯಾದ ಮಗಳು ಕಲಾವತಿ, ಅವನ ಪಾದುಕೆ ತೆಕ್ಕೊಂಡು ತಾನೂ ಗಂಡನೊಂದಿಂಗೆ ಹೋವುತ್ತೆ ಹೇಳಿಗೊಂಡು ಸಹಗಮನಕ್ಕೆ ಸಿದ್ಧಳಾತು. ಸತ್ಯನಾರಾಯಣ ದೇವರ ಏನೋ ಕೋಪಂದಲೇ ಈ ರೀತಿ ಅನಾಹುತಕ್ಕೆ ಕಾರಣ ಆದಿಕ್ಕು, ಅವನ ಮಹಿಮೆ ಅರಿಯದ್ದೇ ನಾವೆಲ್ಲಾ ಭ್ರಾಂತರವುತ್ತಾ ಇದ್ದೆಯೋ°, ಯಾವುದೇ ಅಪರಾಧ ಆಗಿದ್ದರೂ ಅದೆಲ್ಲವ ಮರೆತು ಕ್ಷಮಿಸೇಕು, ಅದರ ಪ್ರಾಯಶ್ಚಿತ್ತ  ರೂಪಲ್ಲಿ ವೈಭವಂದ ಶ್ರೀ ಸತ್ಯನಾರಾಯಣ ಪೂಜೆ ಮಾಡುತ್ತೆ: ಹೇಳಿ ವರ್ತಕ°  ಅಲ್ಲಿಪ್ಪೋರ ಮುಂದೆ ಹೇಳಿಗೊಂಡ. ಆ ಹೊತ್ತಿಂಗೆ, ಸಂತುಷ್ಟನಾದ ಸತ್ಯನಾರಾಯಣ ದೇವರು ಅಶರೀರವಾಣಿ ಮೂಲಕ, “ನಿನ್ನ ಮಗಳು ಸತ್ಯನಾರಾಯಣ ಪೂಜೆ ಮಾಡಿಕ್ಕಿ ಪ್ರಸಾದ ಸ್ವೀಕರುಸದ್ದೇ ಬಂದದ್ದರಿಂದ  ಈ ರೀತಿ ತೊಂದರೆಗೆ ಕಾರಣ ಆತು.” ಹೇಳಿ ಹೇಳಿದ°.

ಆಕಾಶಂದ ಕೇಳಿಬಂದ ಈ ವಾಣಿಯ ಕೇಳಿದ ಮಗಳು ಓಡಿ ಮನಗೆ ಹೋಗಿ ಸತ್ಯನಾರಾಯಣ ದೇವರಿಂಗೆ ಭಕ್ತಿಲಿ ನಮಿಸಿ ಪ್ರಸಾದ ಸ್ವೀಕರುಸಿ ಮರಳಿ ಬಂತು.
ಅಷ್ಟಪ್ಪಗ ಇಲ್ಲಿ ಅದರ ಗಂಡನೂ ಹಡಗೂ ಪ್ರತ್ಯಕ್ಷ ಆತು. ಎಲ್ಲರೂ ಶ್ರೀ ಸತ್ಯನಾರಾಯಣ ದೇವರ ಕೃಪೆ ಹೇಳಿ ಸಂತೋಷಗೊಂಡವು.
ಮಗಳು – “ ಅಪ್ಪ°, ಇನ್ನೆಂತಕೆ ತಡಮಾಡುತ್ಸು, ಎಲ್ಲಾರು ಮನಗೆ ಹೊಪೋ°” ಹೇಳಿ ಹೇಳಿತ್ತು. ವ್ಯಾಪಾರಿ ಮದಾಲು ತಾನು ಹೇಳಿಗೊಂಡ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆಯ ವಿಧಿವತ್ತಾಗಿ ಅದೇ ಸ್ಥಳಲ್ಲಿ ಮಾಡಿ ಎಲ್ಲೋರನ್ನು ಕೂಡಿಗೊಂಡು ತನ್ನ ಮನಗೆ ಹೋದ°.
ಆ ಬಳಿಕ ಪ್ರತಿ ಸಂಕ್ರಮಣ ಮತ್ತು ಹುಣ್ಣಮೆ ದಿನಂಗಳಲ್ಲಿ ತಪ್ಪದ್ದೆ ಶ್ರೀ ಸತ್ಯನಾರಾಯಣವ್ರತ ಪೂಜೆಯ ಮಾಡಿಸಿಗೊಂಡು ಬಂದು ಅಕೇರಿಗೆ ಇಹಲೋಕಲ್ಲಿ ಸುಖವಾಗಿ ಕಾಲಕಳದು ಅಂತ್ಯಲ್ಲಿ ಸತ್ಯಲೋಕವ ಸೇರಿಗೊಂಡ° ಎಂಬಲ್ಯಂಗೆ ಶ್ರೀ ಸತ್ಯನಾರಾಯಣವ್ರತ ಕಥೆಯ ನಾಲ್ಕನೇ ಅಧ್ಯಾಯ ಮುಗಿತ್ತು.

ಓಂ ನಮೋ ನಾರಾಯಣಾಯ ॥ ಶ್ರೀ ಕೃಷ್ಣಾರ್ಪಣಮಸ್ತು ॥

ಶ್ರೀ ಸತ್ಯನಾರಾಯಣ ದೇವರ ಮನಸಾ ಧ್ಯಾನಿಸಿಗೊಂಡು ಷೋಡಶೋಪಚಾರಪೂಜೆಯ ಮನಸಾ ಪರಿಕಲ್ಪಿಸಿಗೊಂಬದು. ಶಂಖ ಜಾಗಟೆ ತಾಳ ಸಹಿತ ಮಣಿ ಆಡಿಸಿ, ಒಂದು ಮಂಗಳಾರತಿಯ ಮನಸ್ಸಿಲ್ಲೇ ಮಾಡಿಕ್ಕಿ.
ಊದುಬತ್ತಿ ಹೊತ್ತಿಗೊಂಡೇ ಇದ್ದನ್ನೇ.

ಶ್ರೀ ಲಕ್ಷ್ಮೀಸಹಿತ ಶ್ರೀ ಸತ್ಯನಾರಾಯಣ ದೇವರ ಪಾದಾರವಿಂದಕ್ಕೆ ಗೋವಿಂದ ಅನ್ನಿ ಗೋವಿಂದ ….., ಗೋ..ವಿಂದ ॥

ಹರಿಕಥಾ ಶ್ರವಣಕ್ಕೆ:

[audio:audio/KATHA_CHAPTER_04.mp3]
ಧ್ವನಿ ಕೃಪೆ : www.sangeethamusic.com

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಶೇಡಿಗುಮ್ಮೆ ಪುಳ್ಳಿ
  ಶೇಡಿಗುಮ್ಮೆ ಪುಳ್ಳಿ

  ಶ್ರೀ ಲಕ್ಷ್ಮೀಸಹಿತ ಶ್ರೀ ಸತ್ಯನಾರಾಯಣ ದೇವರ ಪಾದಾರವಿಂದಕ್ಕೆ ಗೋವಿಂದ ಅನ್ನಿ ಗೋವಿಂದ ….., ಗೋ………………..ವಿಂದಾ……..

  [Reply]

  VN:F [1.9.22_1171]
  Rating: +1 (from 1 vote)
 2. Shama Prasad
  Shama Prasad

  ನಮ್ಮದುದೆ ಗೋವಿಂದ ಗೋ….ವಿಂದ. ನಿಂಗಳ ಲೇಖನಕ್ಕೆ ನಮ್ಮ ಒಪ್ಪ.

  [Reply]

  VN:F [1.9.22_1171]
  Rating: +1 (from 1 vote)
 3. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಮನೆಯವು ಎಲ್ಲರೂ ಕೂದು ಕೇಳಿ ಸಂತೋಷ ಪಟ್ಟೆಯೊ.
  ಧನ್ಯವಾದಂಗೊ

  [Reply]

  VA:F [1.9.22_1171]
  Rating: +1 (from 1 vote)
 4. ಉಂಡೆಮನೆ ಕುಮಾರ°
  ಉಂಡೆಮನೆ ಕುಮಾರ°

  ಧನ್ಯವಾದ..ಭಾವಂಗೆ

  [Reply]

  VA:F [1.9.22_1171]
  Rating: +1 (from 1 vote)
 5. ಗಣೇಶ ಪೆರ್ವ
  ಗಣೇಶ ಪೆರ್ವ

  ಒಳ್ಳೇ ಕೆಲಸ, ಧನ್ಯವಾದ೦ಗೊ ಚೆನ್ನೈ ಭಾವಾ..

  [Reply]

  VA:F [1.9.22_1171]
  Rating: +1 (from 1 vote)
 6. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ತುಂಬ ಸಂತೋಷ .

  [Reply]

  VN:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನಬೆಟ್ಟಣ್ಣಹಳೆಮನೆ ಅಣ್ಣವಿದ್ವಾನಣ್ಣದೀಪಿಕಾಪುತ್ತೂರಿನ ಪುಟ್ಟಕ್ಕಮಂಗ್ಳೂರ ಮಾಣಿದೊಡ್ಡಭಾವವಸಂತರಾಜ್ ಹಳೆಮನೆಬಂಡಾಡಿ ಅಜ್ಜಿವೆಂಕಟ್ ಕೋಟೂರುಶೇಡಿಗುಮ್ಮೆ ಪುಳ್ಳಿಬಟ್ಟಮಾವ°ಅಜ್ಜಕಾನ ಭಾವವಿಜಯತ್ತೆಮುಳಿಯ ಭಾವvreddhiಸುವರ್ಣಿನೀ ಕೊಣಲೆಪುಟ್ಟಬಾವ°ಕೊಳಚ್ಚಿಪ್ಪು ಬಾವಬೋಸ ಬಾವಪೆಂಗಣ್ಣ°ಪೆರ್ಲದಣ್ಣಕಾವಿನಮೂಲೆ ಮಾಣಿಶರ್ಮಪ್ಪಚ್ಚಿಶ್ಯಾಮಣ್ಣಶ್ರೀಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ