ಶ್ರೀ ಸತ್ಯನಾರಾಯಣಪೂಜಾವ್ರತಕಥಾ – ಪಂಚಮೋಧ್ಯಾಯಃ

January 26, 2012 ರ 6:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳುದವಾರ – ಚತುರ್ಥೋಧ್ಯಾಯಃ
(ಸೂ: ಪಾಠಾಂತರ ವ್ಯತ್ಯಾಸ ಇಪ್ಪಲೂ ಸಾಕು)

ಶ್ರೀ ಸತ್ಯನಾರಾಯಣಪೂಜಾವ್ರತಕಥಾ – ಪಂಚಮೋಧ್ಯಾಯಃ

 

ಕಥಾಶ್ಲೋಕ ಶ್ರವಣಕ್ಕೆ:
[audio:audio/SNP_KATHA_CHAPTER_05.mp3]
ಧ್ವನಿ ಕೃಪೆ : www.sangeethamusic.com

|| ಸೂತ ಉವಾಚ ॥

ಅಥಾನ್ಯಚ್ಚಪ್ರವಕ್ಷ್ಯಾಮಿ ಶೃಣುಧ್ವಂ ಮುನಿಸತ್ತಮಾಃ ।
ಆಸೀದಂಗಧ್ವಜೋ ರಾಜಾ ಪ್ರಜಾಪಾಲನತತ್ಪರಃ ॥೧॥
ಪ್ರಸಾದಂ ಸತ್ಯದೇವಸ್ಯ ತ್ಯಕ್ತ್ವಾ ದುಃಖಮವಾಪ ಸಃ ।
ಏಕದಾ ಸ ವನಂ ಗತ್ವಾ ಹತ್ವಾ ಬಹುವಿಧಾನ್ ಪಶೂನ್ ॥೨॥

 

ಆಗತ್ಯ ವಟಮೂಲಂ ಚ ದೃಷ್ಟ್ವಾ ಸತ್ಯಸ್ಯ ಪೂಜನಂ ।
ಗೋಪಾಃ ಕುರ್ವಂತಿ ಸಂತುಷ್ಟಾ ಭಕ್ತಿಯುಕ್ತಾ ಸಬಾಂಧವಾಃ ॥೩॥
ರಾಜಾ ದೃಷ್ಟ್ವಾ ತು ದರ್ಪೇಣ ನ ಗತ್ವಾ ನ ನನಾಮ ಸಃ ।
ತತೋ ಗೋಪಗಣಾಃ ಸರ್ವೇ ಪ್ರಸಾದಂ ನೃಪಸನ್ನಿಧೌ ॥೪॥

 

ಸಂಸ್ಥಾಪ್ಯ ಪುನರಾಗತ್ಯ ಭುಕ್ತ್ವಾ ಸರ್ವೇ ಯಥೇಪ್ಸಿತಂ ।
ತತಃ ಪ್ರಸಾದಂ ಸಂತ್ಯಜ್ಯ ರಾಜಾ ದುಃಖಮವಾಪ ಸಃ ॥೫॥
ತಸ್ಯ ಪುತ್ರಶತಂ ನಷ್ಟಂ ಧನಧಾನ್ಯಾದಿಕಂ ಚ ಯತ್ ।
ಸತ್ಯದೇವೇನ ತತ್ಸರ್ವಂ ನಾಶಿತಂ ಮಮ ನಿಶ್ಚಿತಂ ॥೬॥

 

ಅತಸ್ತತ್ತ್ರೈವ ಗಚ್ಛಾಮಿ ಯತ್ರ ದೇವಸ್ಯ ಪೂಜನಂ ।
ಮನಸಾ ತು ವಿನಿಶ್ಚಿತ್ಯ ಯಯೌ ಗೋಪಾಲಸನ್ನಿಧೌ ॥೭॥
ತತೋಸೌ ಸತ್ಯದೇವಸ್ಯ ಪೂಜಾಂ ಗೋಪಗಣೈಃ ಸಹ ।
ಭಕ್ತಿ ಶ್ರದ್ಧಾನ್ವಿತೋ ಭೂತ್ವಾ ಚಕಾರ ವಿಧಿನಾ ನೃಪಃ ॥೮॥

 

ಸತ್ಯದೇವ ಪ್ರಸಾದೇನ ಧನಪುತ್ರಾನ್ವಿತೋ ಭವತ್ ।
ಇಹಲೋಕೇ ಸುಖಂ ಭುಕ್ತ್ವಾ ಚಾಂತೇ ಸತ್ಯಪುರಂ ಯಯೌ ॥೯॥
ಯ ಇದಂ ಕುರುತೇ ಸತ್ಯವ್ರತಂ ಪರಮದುರ್ಲಭಂ ।
ಶೃಣೋತಿ ಚ ಕಥಾಂ ಪುಣ್ಯಾಂ ಭಕ್ತಿಯುಕ್ತಃ ಫಲಪ್ರದಾಂ ॥೧೦॥

 

ಧನಧಾನ್ಯಾದಿಕಂ ತಸ್ಯ ಭವೇತ್ ಸತ್ಯಪ್ರಸಾದತಃ ।
ದರಿದ್ರೋ ಲಭತೇ ವಿತ್ತಂ ಬದ್ಧೋ ಮುಚ್ಯೇತ ಬಂಧನಾತ್ ।।೧೧।
ಭೀತೋ ಭಯಾತ್ಪ್ರಮುಚ್ಯೇತ ಸತ್ಯಮೇವ ನ ಸಂಶಯಃ ।
ಈಪ್ಸಿತಂ ಚ ಫಲಂ ಭುಕ್ತ್ವಾ ಚಾಂತೇ ಸತ್ಯಪುರಂ ವ್ರಜೇತ್ ॥೧೨।।

 

ಇತಿ ವಃ ಕಥಿತಂ ವಿಪ್ರಾಃ ಸತ್ಯನಾರಾಯಣವ್ರತಂ ।
ಯತ್ಕೃತ್ವಾ ಸರ್ವದುಃಖೇಭ್ಯೋ ಮುಕ್ತೋ ಭವತಿ ಮಾನವಃ ॥೧೩॥
ವಿಶೇಷತಃ ಕಲಿಯುಗೇ ಸತ್ಯಪೂಜಾ ಫಲಪ್ರದಾ ।
ಕೇಚಿತ್ಕಾಲಂ ವದಿಷ್ಯಂತಿ ಸತ್ಯಮೀಶಂ ತಮೇವ ಚ ॥೧೪॥

 

ಸತ್ಯನಾರಾಯಣಂ ಕೇಚಿತ್ ಸತ್ಯದೇವಂ ತಥಾಪರೇ ।
ನಾನಾರೂಪಧರೋ ಭೂತ್ವಾ ಸರ್ವೇಷಾಮೀಪ್ಸಿತಪ್ರದಃ ॥೧೫॥
ಭವಿಷ್ಯತಿ ಕಲೌ ಸತ್ಯವ್ರತರೂಪೀ ಸನಾತನಃ ।
ಯ ಇದಂ ಪಠತೇ ನಿತ್ಯಂ ಶೃಣೋತಿ ಮುನಿಸತ್ತಮಾಃ ॥೧೬॥

ಸತ್ಯಂ ನಶ್ಯಂತಿ ಪಾಪಾನಿ ಸತ್ಯದೇವ ಪ್ರಸಾದತಃ  ॥೧೭।।

ಇತಿ ಶ್ರೀ ಸ್ಕಂದಪುರಾಣೇ ರೇವಾಖಂಡೇ ಸತ್ಯನಾರಾಯಣವ್ರತಕಥಾಯಾಂ ಪಂಚಮೋಧ್ಯಾಯಃ ॥

ಕತೆ:

ಮಂಗಳ ಮೂರುತಿಗೆ ಮಂಗಳಾರತಿ…

ಸೂತ ಪುರಾಣಿಕ ಹೇಳುತ್ತ° – “ಸತ್ಯನಾರಾಯಣ ವ್ರತದ ಮಹಾತ್ಮ್ಯ ಸಾರುವ ಇನ್ನೊಂದು ಕಥೆ ಇದ್ದು; ಕೇಳಿ, ಹೇಳುತ್ತೆ” ಹೇಳಿ ಮತ್ತೊಂದು ದೃಷ್ಟಾಂತವ ವಿವರುಸಲೆ ಪ್ರಾರಂಭಿಸಿದ°.
ಆಸೀದಂಗಧ್ವಜೋ ರಾಜಾ ಪ್ರಜಾಪಾಲನತತ್ಪರಃ.... – ಪೂರ್ವಕಾಲಲ್ಲಿ  ಧರ್ಮಲ್ಲಿ ಪ್ರಜೆಗಳ ಪಾಲಿಸಿಗೊಂಡು ‘ಅಂಗಧ್ವಜ’ ಎಂಬ ಒಬ್ಬ ರಾಜ ಇತ್ತಿದ್ದ°.
ಶ್ರೀ ಸತ್ಯನಾರಾಯಣ ದೇವರ ಪ್ರಸಾದ ತಿರಸ್ಕರಿಸಿ ಅವ° ಘೋರ ಕಷ್ಟಕ್ಕೆ ಸಿಲಿಕಿಗೊಂಡ ಘಟನೆ ಅವನ ಜೀವನಲ್ಲಿ ಆಗಿ ಹೋತು. ಒಂದಿನ ಅವ° ಕಾಡಿಲ್ಲಿ ಕ್ರೂರ ಮೃಗಂಗಳ ಬೇಟೆಯಾಡಿ ಹಿಂತಿರುಗಿ ಬಪ್ಪಗ ಒಂದು ವಟವೃಕ್ಷದ ಅಡಿಲಿ ಅನೇಕ ಗೋಪಾಲಕಂಗೊ ಒಟ್ಟುಗೂಡಿ ಸತ್ಯನಾರಾಯಣ ಪೂಜೆ ಮಾಡಿಗೊಂಡಿಪ್ಪದರ ನೋಡಿದ°.
ಅಲ್ಪರಾದ ಈ ಗೋಪಾಲಕಂಗೊ ಎಂತ್ಸರ ಇದು ಪೂಜೆ ಮಾಡುತ್ತ್ಸು ಹೇದು ತಿರಸ್ಕಾರ ಭಾವನೆಂದ ದೇವರಿಂಗೆ ಕೈಮುಗುದ್ದನೂ ಇಲ್ಲೆ, ವಿನಯಂದ ಅವು ಕೊಟ್ಟ ಪ್ರಸಾದವನ್ನೂ ಸ್ವೀಕರಿಸಿದನ್ನೂ ಇಲ್ಲೆ.
ಅಲಕ್ಷ್ಯಮಾಡಿಗೊಂಡು ತನ್ನ ರಾಜಧಾನಿಗೆ ಬಂದ°.  ಹೀಂಗೆ ಅಲಕ್ಷ್ಯ ತೋರಿದ್ದರಿಂದಾಗಿ ಅವನ ನೂರು ಮಂದಿ ಮಕ್ಕೊ ಸತ್ತುಹೋದ್ದಲ್ಲದ್ದೇ, ರಾಜಕೋಶವೂ, ಸಕಲ ಸಂಪತ್ತೂ ನಷ್ಟ ಆತು.
ಸತ್ಯನಾರಾಯಣ ಸ್ವಾಮಿಯ ಕೋಪಂದಲೇ ತನಗೆ ಈ ರೀತಿ ದುರ್ಗತಿ ಪ್ರಾಪ್ತ ಆದ್ದು ಹೇಳಿ ನಿಶ್ಚೈಸಿ ಆ ಗೋಪಾಲಕಂಗೊ ಪೂಜೆ ಮಾಡಿಗೊಂಡಿದ್ದ ಆ ಜಾಗಯ ಹುಡುಕ್ಕಿಯೊಂಡು ಬಂದ°.  ಆ ಸಮಯಲ್ಲಿ ಅಲ್ಲಿ ಗೋಪಾಲಕಂಗೊ ಸತ್ಯನಾರಾಯಣ ಪೂಜೆ ಮಾಡಿಕೊಂಡಿತ್ತಿದ್ದವು. ಅವರ ಒಟ್ಟಿಂಗೆ ತಾನೂ ಸೇರಿಗೊಂಡು ಪೂಜೇಲಿ ಪಾಲ್ಗೊಂಡ.

ಸತ್ಯನಾರಾಯಣ ದೇವರ ಅನುಗ್ರಹಂದ ಪುನಃ ಧನಪುತ್ರಾದಿಗಳ ಪಡದು ಸುಖವಾಗಿ ಬಹುಕಾಲ ಬಾಳಿ ಕೊನೇಲಿ ಸತ್ಯಲೋಕವ ಸೇರಿಗೊಂಡ°.
ಯಾವಾತ° ಪರಮ ದುರ್ಲಭವಾದ ಈ ‘ಶ್ರೀಸತ್ಯನಾರಾಯಣವ್ರತಪೂಜೆ’ಯ ಮಾಡುತ್ತನೋ, ಮಾಡುಸುತ್ತನೋ, ಈ ಪುಣ್ಯಕಥೆಗಳ ಕೇಳುತ್ತನೋ, ಕೇಳುಸುತ್ತನೋ, ಓದುತ್ತನೋ, ಓದ್ಸುತ್ತಾನೋ, ಅವಕ್ಕೆಲ್ಲರಿಂಗೂ ಶ್ರೀ ಸತ್ಯನಾರಾಯಣ ದೇವರ ಪರಮ ಅನುಗ್ರಹ, ಧನಧಾನ್ಯಾದಿ, ಸುಖ ಸಂತೋಷ ನೆಮ್ಮದಿ ಲಭಿಸುತ್ತು.
ದರಿದ್ರ ಧನಿಕನಾಗಿಯೂ, ಬಂಧನಲ್ಲಿಪ್ಪೋನು ಬಂಧಮುಕ್ತನಾಗಿಯೂ, ಭೀತನಾದವ ಭಯಮುಕ್ತಿಯ ಪಡದು ತಾನು ಬಯಸಿದ ಇಷ್ಟಾರ್ಥ ಪೂರ್ತಿ ಪಡದು ಅಕೇರಿಗೆ ಸತ್ಯಲೋಕವ ಸೇರುತ್ತ°.

ಸೂತಪುರಾಣಿಕ ಹೇಳುತ್ತ° – “ಎಲೈ ಮುನಿಗಳೇ, ಮನುಷ್ಯನ ಸಕಲ ದುಃಖಂಗಳನ್ನೂ ಪರಿಹರುಸುವ ಈ ಸತ್ಯನಾರಾಯಣವ್ರತವ ಸಮಸ್ತ ವಿವರಂಗಳ ಸವಿಸ್ತಾರವಾಗಿ ಆನು ನಿಂಗೊಗೆ ಹೇಳಿದ್ದೆ. ವಿಶೇಷವಾಗಿ ಶ್ರದ್ಧಾಭಕ್ತಿ ಆಸಕ್ತಿ ಕ್ಷೀಣಿಸಿಪ್ಪ ಕಲಿಯುಗಲ್ಲಿ ಸ್ವಲ್ಪ ಶ್ರಮಲ್ಲಿ ಮಾಡ್ಳೆ ಎಡಿಗಪ್ಪ ಈ ಪೂಜೆಯು ಅತ್ಯಂತ ಫಲದಾಯಕವಾಗಿದ್ದು.
ಈ ದೇವರ- ಕಾಲ°, ಈಶ°, ಸತ್ಯದೇವ°, ಸತ್ಯನಾರಾಯಣ, ಹೇಳಿ ಒಬ್ಬೊಬ್ಬ ಒಂದೊಂದು ಹೆಸರಿಂದ ಹೆಸರಿಸಿರೂ ಎಲ್ಲವೂ ಭಗವಂತನಾದ ಶ್ರೀ ಮಹಾವಿಷ್ಣುವಿನ ಒಂದೇ ಅಂಶವೇ. ಶ್ರದ್ಧಾಭಕ್ತಿಲಿ ಅರ್ಚಿಸಿ ಪ್ರಾರ್ಥಿಸಿರೆ ನಾನಾ ರೂಪವುಳ್ಳ ಭಗವಂತ° ವಿವಿಧ ನಾಮ ರೂಪಂಗಳಿಂದ ಎಲ್ಲೋರ ಅಭೀಷ್ಟವನ್ನೂ ಈಡೇರಿಸುತ್ತ°. ಈ ಪುಣ್ಯಕಥೆಯ ಆರು ಪ್ರತಿನಿತ್ಯವೂ ಪಾರಾಯಣ ಮಾಡುತ್ತವೋ, ಅಲ್ಲ., ಕೇಳುತ್ತವೋ ಅವೆಲ್ಲರ ಸಕಲ ಪಾಪಂಗ ತೊಲಗಿ ಶುಭ ಉಂಟಾವ್ತು
” ಹೇಳಿ ಹೇಳಿ ಮುಗಿಸಿದಲ್ಯಂಗೆ,
ಶ್ರೀ ಸತ್ಯನಾರಾಯಣವ್ರತ ಕಥೆಯ ಐದನೇ ಅಧ್ಯಾಯ ಮುಗುದತ್ತು.

ಶ್ರೀ ಲಕ್ಷ್ಮೀಸಹಿತ ಶ್ರೀ ಸತ್ಯನಾರಾಯಣ ದೇವರ ಪಾದಾರವಿಂದಕ್ಕೆ ಗೋವಿಂದ ಅನ್ನಿ ಗೋವಿಂದ ….., ಗೋ..ವಿಂದ

ಶಾಂತಿಮಂತ್ರಾಃ

ಕಾಯೇನ ವಾಚಾ ಮನಸೇಂದ್ರಿಯೈರ್ವಾ ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್ ।
ಕರೋಮಿ ಯದ್ಯತ್ಸಕಲಂ ಪರಸ್ಮೈ ನಾರಾಯಣೇತಿ ಸಮರ್ಪಯಾಮಿ ॥

ಸ್ವಸ್ತಿ ಪ್ರಜಾಭ್ಯಃ ಪರಿಪಾಲಯಂತಾಂ ನ್ಯಾಯೇಣ ಮಾರ್ಗೇಣ ಮಹೀಂ ಮಹೀಶಾಃ ।
ಗೊಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ ಲೋಕಾಃ ಸಮಸ್ತಾಃ ಸುಖಿನೋ ಭವಂತು ॥

ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ ।
ದೇಶೋsಯಂ ಕ್ಷೋಭ ರಹಿತಃ ಸಜ್ಜನಾಃ ಸಂತು ನಿರ್ಭಯಾಃ ॥

ಅಪುತ್ರಃ  ಪುತ್ರಿಣಃ ಸಂತು ಪುತ್ರಿಣಃ ಸಂತು ಪೌತ್ರಿಣಃ ।
ಅಧನಾಃ ಸಧನಾಃ ಸಂತು ಜೀವಂತು ಶರದಾಂ ಶತಮ್ ॥

ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ ।
ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿದ್ ದುಃಖವಾಗ್ಭವೇತ್ ॥

ಓಂ ಅಸತೋ ಮಾ ಸದ್ಗಮಯ
ತಮಸೋ ಮಾ ಜೋತಿರ್ಗಮಯ
ಮೃತ್ಯೋರ್ಮಾ ಅಮೃತಂ ಗಮಯ
ಓಂ ಶಾಂತಿಃ ಶಾಂತಿಃ ಶಾಂತಿಃ ॥

ಗಾವೋಮೇ ಪುರತಃ ಸಂತು
ಗಾವೋಮೇ ಸಂತು ಪೃಷ್ಠತಃ ।
ಗಾವೋಮೇ ಹೃದಯೇ ನಿತ್ಯಮ್
ಗವಾಂ ಮಧ್ಯೇ ವಸಾಮ್ಯಹಮ್ ॥
ಓಂ ಶಾಂತಿಃ ಶಾಂತಿಃ ಶಾಂತಿಃ ॥

ಓಂ ಸಹನಾ ವವತು ಸಹನೌ ಭುನಕ್ತು
ಸಹವೀರ್ಯಂ ಕರವಾವಹೈ ।
ತೇಜಸ್ವಿನಾಮಧೀತಮಸ್ತು –
ಮಾವಿದ್ವಿಶಾವಹೈ ॥

ಓಂ ಶಾಂತಿಃ ಶಾಂತಿಃ ಶಾಂತಿಃ ||

ಓಂ ನಮೋ ನಾರಾಯಣಾಯ ॥ ಶ್ರೀ ಕೃಷ್ಣಾರ್ಪಣಮಸ್ತು ॥

ಮದಲೆ ಮಾಡಿದಾಂಗೆ ಶ್ರೀ ಸತ್ಯನಾರಾಯಣ ದೇವರ ಮನಸಾ ಧ್ಯಾನಿಸಿಗೊಂಡು ಷೋಡಶೋಪಚಾರಪೂಜೆಯ ಮನಸಾ ಪರಿಕಲ್ಪಿಸಿಗೊಂಬದು.

ಮತ್ತೆ ಮಹಾನೈವೇದ್ಯ – ಮಂಗಳಾರತಿ – ಮಂತ್ರಪುಷ್ಪ – ಪ್ರಾರ್ಥನೆ –ಪ್ರದಕ್ಷಿಣ – ನಮಸ್ಕಾರ – ಪುನಃಪೂಜಾ (ಪ್ರಸನ್ನಪೂಜೆ) – ಬ್ರಹ್ಮಾರ್ಪಣ – ಪ್ರಸಾದವಿತರಣೆ – ಭೋಜನ.

ಸಂಗೀತ/ಹಾಡು ಹೇಳ್ತವಕ್ಕೆ ಇದೇ ಸಮಯ ಹೇಳಿ ಹೇಳ್ತವದಾ ಬಟ್ಟಮಾವ°.
(ಇಲ್ಲದ್ರೆ ಮಂತ್ರಪುಷ್ಪ ಸುರುಮಾಡುವಾಗ ಅವರದ್ದೂ ಸುರುವಕ್ಕು !!)

ಓಯಿ., ಇವತ್ತು ಆಟ / ಕೂಟ ಮತ್ತು ಉಂಟಾ? ಅಲ್ಲಾ., ಬೊಳುಂಬು ಮಾವನ ನಾಟಕವೂ ಆದೀತು.

ಇಲ್ಲದ್ರೆ ಇದಾ ಎಲ್ಲೋರು ಒಟ್ಟಿಂಗೆ ಹೇಳಿಕ್ಕಿ –

“ ಶ್ರೀ ಲಕ್ಷ್ಮೀಸಹಿತ ಶ್ರೀ ಸತ್ಯನಾರಾಯಣ ದೇವರ ಪಾದಾರವಿಂದಕ್ಕೆ ಗೋವಿಂದ ಅನ್ನಿ ಗೋವಿಂದ ….., ಗೋ..ವಿಂದ” ॥

~*~*~

ಹರಿಕಥಾ ಶ್ರವಣಕ್ಕೆ:

[audio:audio/KATHA_CHAPTER_05.mp3]
ಧ್ವನಿ ಕೃಪೆ : www.sangeethamusic.com

ಸೂ:

ನಮ್ಮ ಊರಿನ ವಿಶೇಷ ಆಚರಣೆಗಳಲ್ಲಿ ಒಂದಾದ “ಶ್ರೀ ಸತ್ಯನಾರಾಯಣ ಪೂಜಾ” ಕತೆಯ ಸಮಗ್ರವಾಗಿ ಬೈಲಿಂಗೆ ಹೇಳಿದ ಚೆನ್ನೈಭಾವಂಗೆ, ಅದರ ಧ್ವನಿಕೃಪೆ ಕೊಟ್ಟು ಸಹಕರಿಸಿದ “ಸಂಗೀತಾ ಮ್ಯೂಸಿಕ್”ನ ಹಿತೈಷಿಕೊಕ್ಕೆ – ಬೈಲಿನ ವಿಶೇಷ ಕೃತಜ್ಞತೆ ಸಲ್ಲುತ್ತು.
~
ಗುರಿಕ್ಕಾರ°

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಶೇಡಿಗುಮ್ಮೆ ಪುಳ್ಳಿ
  ಶೇಡಿಗುಮ್ಮೆ ಪುಳ್ಳಿ

  ಗುರಿಕ್ಕಾರ್ರು ಹೇಳಿದ ಹಾಂಗೇ ನಾವುದೇ ಎಲ್ಲೋರಿಂಗೂ ಧನ್ಯವಾದ ಹೇಳ್ತು. ಕಿರಿಕಿರಿ ಮಾಡದ್ದೇ ಕೂದು ಕಥೆಕೇಳಿ, ಬಾಕಿಪ್ಪವಕ್ಕುದೇ ಕೇಳುಲೆ ಸಕಾಯ ಮಾಡಿದ ಎಲ್ಲೋರಿಂಗೂ ಇನ್ನೊಂದು ಸರ್ತಿ ಧನ್ಯವಾದಂಗೊ, ಬಟ್ಟಮಾವ ನವಗೆ ಎರಡು ಉಂಡೆಕೊಡ್ತವಡಾ ಹಾಂಗಾಗಿ ಅವಕ್ಕೊಂದು ಪೆಸಲು ಧನ್ಯವಾದ ….

  [Reply]

  VN:F [1.9.22_1171]
  Rating: +1 (from 1 vote)
 2. ಗಣೇಶ ಪೆರ್ವ
  ಗಣೇಶ ಪೆರ್ವ

  ಒಪ್ಪ೦ಗೊ.

  [Reply]

  VA:F [1.9.22_1171]
  Rating: +1 (from 1 vote)
 3. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಧನ್ಯವಾದ ಕತೆ ಹೇಳಿದ್ದಕ್ಕೆ

  [Reply]

  VA:F [1.9.22_1171]
  Rating: +1 (from 1 vote)
 4. ಜಯಶ್ರೀ ನೀರಮೂಲೆ
  jayashree.neeramoole

  “ಯಾವಾತ° ಪರಮ ದುರ್ಲಭವಾದ ಈ ‘ಶ್ರೀಸತ್ಯನಾರಾಯಣವ್ರತಪೂಜೆ’ಯ ಮಾಡುತ್ತನೋ, ಮಾಡುಸುತ್ತನೋ, ಈ ಪುಣ್ಯಕಥೆಗಳ ಕೇಳುತ್ತನೋ, ಕೇಳುಸುತ್ತನೋ, ಓದುತ್ತನೋ, ಓದ್ಸುತ್ತಾನೋ, ಅವಕ್ಕೆಲ್ಲರಿಂಗೂ ಶ್ರೀ ಸತ್ಯನಾರಾಯಣ ದೇವರ ಪರಮ ಅನುಗ್ರಹ, ಧನಧಾನ್ಯಾದಿ, ಸುಖ ಸಂತೋಷ ನೆಮ್ಮದಿ ಲಭಿಸುತ್ತು.”

  ಚೆನ್ನೈ ಭಾವನ ನೇತ್ರುತ್ವಲ್ಲಿ ಬೈಲಿನವಕ್ಕೆಲ್ಲ ಪರಮ ದುರ್ಲಭವಾದ ಇದು ಅತ್ಯಂತ ಉತ್ತಮ ರೀತಿಲ್ಲಿ ಲಭಿಸಿದ್ದು ಹೇಳಿದರೆ ಅದರರ್ಥ… “ಹವ್ಯಕರೆಲ್ಲ ಸುಖ ಸಂತೋಷ ನೆಮ್ಮದಿಲ್ಲಿ ಜೀವನ ನಡೆಸುವ ಸಮಯ ಹತ್ತರೆ ಬಂತು… :)”

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೆಂಕಟ್ ಕೋಟೂರುಡಾಗುಟ್ರಕ್ಕ°ವಿಜಯತ್ತೆಪೆರ್ಲದಣ್ಣತೆಕ್ಕುಂಜ ಕುಮಾರ ಮಾವ°ಹಳೆಮನೆ ಅಣ್ಣಉಡುಪುಮೂಲೆ ಅಪ್ಪಚ್ಚಿಅನು ಉಡುಪುಮೂಲೆಅಕ್ಷರದಣ್ಣಒಪ್ಪಕ್ಕಬಂಡಾಡಿ ಅಜ್ಜಿಗಣೇಶ ಮಾವ°ಪೆಂಗಣ್ಣ°ಚುಬ್ಬಣ್ಣವೇಣೂರಣ್ಣಶಾಂತತ್ತೆದೊಡ್ಡಭಾವವಾಣಿ ಚಿಕ್ಕಮ್ಮಶ್ಯಾಮಣ್ಣವೇಣಿಯಕ್ಕ°ಅಡ್ಕತ್ತಿಮಾರುಮಾವ°ಚೆನ್ನಬೆಟ್ಟಣ್ಣಚೆನ್ನೈ ಬಾವ°ನೆಗೆಗಾರ°ವಸಂತರಾಜ್ ಹಳೆಮನೆಜಯಗೌರಿ ಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ