ತೆಕ್ಕುಂಜ ಶಂಕರ ಭಟ್ಟ ವಿರಚಿತ ಶ್ರೀ ಲಲಿತಾಮಾನಸಪೂಜಾ ಸ್ತೋತ್ರಂ – ಪೂರ್ವಾರ್ಧ

ಶ್ರೀ ತೆಕ್ಕುಂಜ ಶಂಕರ ಭಟ್ಟರು ರಚಿಸಿದ ಶ್ರೀ ಲಲಿತಾಮಾನಸಪೂಜಾ ಸ್ತೋತ್ರ ದ ಶುರುವಾಣ ಭಾಗವ ಕೊಟ್ಟಿದೆ. ಇದರ ಕನ್ನಡಾನುವಾದವ ಶ್ರೀ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು ಮಾಡಿದ್ದವು.

ಪೂರ್ವಾರ್ಧಃ-

ಭವಾನಿ ತ್ವಾಂ ವಂದೇ ಭವಮಹಿಷಿ ಭಾವೈಕಸುಲಭಾಂ

ಭವೇ ನಿತ್ಯಂ ತ್ರಸ್ತಂ ಭವತಿ ದಯಯಾ ಪಾಹಿ ಸತತಂ

ಭವಾಬ್ಥೇರುತ್ತಾರಪ್ರವಹಣಸುತಾರೈಕನಿರತೇ

ಭವಂ ಕರ್ತುಂ ಹರ್ತುಂ ಪ್ರಭವತಿ ತವೇದಂ ಪದಯುಗಂ

ಪರಮ ಶಿವನ ರಾಣಿಯಾಗಿ ಭವಾನಿಯೆನಿಸಿದ ದೇವಿ !  ಧ್ಯಾನದಿಂದ ಮಾತ್ರ ಪಡೆಯಲು ಸಾಧ್ಯವುಳ್ಳ ನಿನ್ನನ್ನು ನಮಸ್ಕರಿಸುವೆನು. ಈ ಸಂಸಾರದಲ್ಲಿ ಭಯಗೊಂಡ ನನ್ನನ್ನು ನಿತ್ಯವೂ ಕಾಪಾಡು. ಸಂಸಾರವೆಂಬ ಸಾಗರದಿಂದ ಭಕ್ತಿಯೆಂಬ ದೋಣಿಯ ಮೂಲಕ ಭಕ್ತರನ್ನು ದಾಟಿಸುವುದರಲ್ಲಿ ಆಸಕ್ಟಿಯುಳ್ಳವಳೇ ! ನಿನ್ನೀ ಪಾದಗಳು ಸಂಸಾರವನ್ನುಂಟು ಮಾಡುವುದಕ್ಕೂ ಪರಿಹರಿಸುವುದಕ್ಕೂ ಅಧಿಕಾರವುಳ್ಳವುಗಳಾಗಿವೆ.

ಶ್ರೀ ಚಕ್ರಪೂಜಾಂ ಪರಮೇಶಲಬ್ಧಾಂ

ಕರೋಮಿ ಬಾಹ್ಯಾಂ ಕಥಮಪ್ರಬುದ್ಧಃ

ಕರೋಮಿ ತಸ್ಮಾನ್ಮನಸಾ ಸುಪೂಜಾಂ

ಶರೀರಚಕ್ರಸ್ಥಿತಕೋಣಮಧ್ಯೇ

ಪರಶಿವನ ಅನುಗ್ರಹದಿಂದ ಉಪದೇಶಿಸಲ್ಪಟ್ಟ ಶ್ರೀಚಕ್ರಾರ್ಚನೆಯನ್ನು ಬಾಹ್ಯಕ್ರಮದಲ್ಲಿ ನನ್ನಂತಹ ಅಲ್ಪಜ್ಞನು ಹೇಗೆ ಮಾಡಲಿ ! ಆದುದರಿಂದ ನಾನದನ್ನು ಶರೀರಾಂತರ್ಭಾಗದಲ್ಲಿ ಭಾವಿಸಲ್ಪಟ್ಟ ಶ್ರೀ ಚಕ್ರದ ಕೋಣಗಳಲ್ಲಿಯ ಸುಲಭವಾದ ಮಾನಸಪೂಜಾ ಕ್ರಮದಲ್ಲಿ ಮಾಡುವೆನು.

ಬಿಂದುರ್ಭವೇದ್ಬ್ರಹ್ಮಪುರೇ ಸುಕಾಶೇ

ತತ್ರಾಸಿ ಪತ್ಯಾ ಪರಿಹೃಷ್ಯಮಾಣಾ

ಕರೋಮಿ ಪೂಜಾಂ ಹೃದಿ ಭಾವಯಿತ್ವಾ

ಸುಪ್ರೀಯತಾಂ ಸರ್ವವಿಧಿಪ್ರಯುಕ್ತಾಂ  ||೩

ಪ್ರಕಾಶಮಯವಾದ ನನ್ನ ಬ್ರಹ್ಮರಂಧ್ರದಲ್ಲಿ ಬಿಂದು ಚಕ್ರವಿದೆ. ಅದರ ಮಧ್ಯದಲ್ಲಿ ಕಾಮಶಿವನನ್ನು ಕೂಡಿಕೊಂಡು ಪರಮಾನಂದವನ್ನನ್ನುಭವಿಸುತ್ತಾ ನೀನಿರುವೆ. ಅಂತಹ ನಿನ್ನನ್ನು ಅರುವತ್ತನಾಲ್ಕು ವಿಧಗಳಾದ ಉಪಚಾರಗಳಿಂದ, ಮಾನಸವಾಗಿ ಪೂಜಿಸುವೆನು. ನೀನು ಸಂತುಷ್ಟಳಾಗು.

ಶೀರ್ಷೇ ತ್ರಿಕೋಣೇ ಭಗಮಾಲಿಕಾದಿ

ಶಕ್ತಿತ್ರಯಾಢ್ಯಾಂ ಪರಿಪೂಜಯಾಮಿ

ಫಾಲೇ ಮದೀಯೆ ವಸುಸಂಖ್ಯಕೋಣೇ

ಸ್ಥಿತಾಂ ಶಕ್ತ್ಯಷ್ಟಕಸಂಯುತಾಂತ್ವಾಂ

ಓ ದೇವಿ ! ನನ್ನ ಮಸ್ತಕದಲ್ಲಿರುವ ತ್ರಿಕೋಣಾಕಾರವಾದ ಚಕ್ರದಲ್ಲಿ ಭಗಮಾಲಿಕಾ, ವಜ್ರೇಶ್ವರೀ, ಕಾಮೇಶ್ವರೀ ಎಂಬ ಮೂರು ಮಂದಿ ಶಕ್ತಿದೇವತೆಗಳಿಂದ ಕೂಡಿರುವ ನಿನ್ನನ್ನು ಪೂಜಿಸುವೆನು. ನನ್ನ ನೊಸಲಿನಲ್ಲಿರುವ ಅಷ್ಟಕೋಣ ಚಕ್ರದಲ್ಲಿ ವಶನೀ ಮುಂತಾದ ಎಂಟು ಮಂದಿ ದೇವಿಯಿಂದೊಡಗೂಡಿರುವ ನಿನ್ನನ್ನು ಪೂಜಿಸುವೆನು.

ಭ್ರೂಮಧ್ಯಮಧ್ಯೇ ದಶಕೋಣಯುಕ್ತೇ

ಪಾರ್ಶ್ವಾಧಿದೇವೀಸಹಿತಾ ಸ್ವಮಾತಃ

ತತ್ರತ್ಯ ದೇವೀಪರಿಪೂಜನಾಭಿಃ

ಸಂತುಷ್ಯಮಾಣಾ ಭವ ಲೋಕವಂದ್ಯೇ

ಎಲೌ ತಾಯಿಯೇ ! ನನ್ನ ಎರಡು ಹುಬ್ಬುಗಳ ಮಧ್ಯದಲ್ಲಿರುವ ಹತ್ತು ಕೋಣಗಳುಳ್ಳ ಚಕ್ರದಲ್ಲಿ, ನಿನ್ನ ಪರಿವಾರದವರಾದ ಸರ್ವಜ್ಞಾ ದೇವಿಯರೊಂದಿಗೆ ನೀನು ಕುಳಿತಿರು. ಎಲೌ ಲೋಕವಂದ್ಯಳೇ ! ಆ ದೇವಿಯರೊಂದಿಗೆ ನಿನ್ನನ್ನು ನಾನು ಪೂಜಿಸುವೆನು. ನೀನು ಸಂತುಷ್ಟಳಾಗು.

ಬಾಹ್ಯಂ ದಶಾರಂ ಮುನಯೋ ವದಂತಿ

ಕಂಠೇ ಸುರಮ್ಯೇ ಸಹಜಾಃ ಸ್ವಶಕ್ತೀಃ

ಸರ್ವೋಪಚಾರೈಃ ಪರಿಪೂಜಯಾಮಿ

ದೇವಿ ಪ್ರಸನ್ನಾ ಭವ ತಾರಿಣಿ ತ್ವಂ

ಎಲೌ ದೇವಿಯೇ !  ಸುಂದರವಾದ ನನ್ನ ಕಂಠದಲ್ಲಿ ಮುನಿಗಳ ಉಪದೇಶ ಪ್ರಕಾರ ಭಾವಿಸಲ್ಪಡಬೇಕಾದ ಹತ್ತು ಕೋಣಗಳುಳ್ಳ ಚಕ್ರದಲ್ಲಿ (ಬಾಹ್ಯದಶಾರ ಚಕ್ರದಲ್ಲಿ) ನಿನ್ನ ಸರ್ವಸಿದ್ಧಿ ಪ್ರದಾದಿಶಕ್ತಿ ದೇವತೆಯರಿರುವರು. ಅವರೊಂದಿಗೆ ನಿನ್ನನ್ನು ಎಲ್ಲ ವಿಧಗಳಾದ ಉಪಚಾರಗಳಿಂದಲೂ ಪೂಜಿಸುವೆನು. ಸಂಸಾರದಿಂದ ನಮ್ಮನ್ನು ಪಾರುಗಾಣಿಸುವ ನೀನು ಇದರಿಂದ ಪ್ರಸನ್ನಳಾಗು.

ಹೃತ್ಪದ್ಮಮಧ್ಯೇ ಮನುಕೋಣಮಾಹುಃ

ಸ್ತೋತ್ರಪ್ರಸನ್ನೇ ಮನಸೋಪ್ಯಗಮ್ಯೇ

ತದ್ಭೂತಶಕ್ತೀಃ ಪರಿತೋ ವಿಭಾವ್ಯ

ಸನ್ಮಾನಸಂ ಕರ್ಮ ಸಮಾಚರಾಮಿ

ಭಕ್ತರು ಮಾಡುವ ಸ್ತುತಿಯಿಂದ ಪ್ರಸನ್ನಳಾಗುವ ಮತ್ತು ಇತರರಿಗೆ ನೆನಸಲಿಕ್ಕೂ ಗೋಚರಳಾಗದ ದೇವಿಯೇ ! ನನ್ನ ಹೃದಯ ಕಮಲ ಮಧ್ಯದಲ್ಲಿ ಚತುರ್ದಶ ಕೋಣಗಳೂಳ್ಳ ಚಕ್ರವಿದೆ. ಅದರಲ್ಲಿ ಸರ್ವ ಸಂಕ್ಷೋಭಿಣೀ ಮುಂತಾದ ನಿನ್ನ ಶಕ್ತಿದೇವತೆಗಳನ್ನು ಭಾವನೆ ಮಾಡಿ, ಅವರೊಂದಿಗೆ ನಿನ್ನನ್ನು ಮಾನಸಿಕವಾಗಿ ಪೂಜಿಸುವೆನು.

ಕುಕ್ಷೌ ಸುವೃತ್ತಂ ಪ್ರಥಮಪ್ರಯುಕ್ತಂ

ಸಂತ್ಯತ್ರ ದೇವ್ಯೋ ಬಹುಯೋಗಯುಕ್ತಾಃ

ತಾಃ ಸರ್ವದೇವೀರ್ಮನಸಾಪ್ರಯುಕ್ತಃ

ಸಂತರ್ಪ್ಯ ಪೂಜಾವಿಧಿಮಾತನೋಮಿ

ಜಠರ ಪ್ರದೇಶದಲ್ಲಿ ಸುಂದರವಾದ ಒಂದನೆಯ ವೃತ್ತವಿದೆ. ಇದರಲ್ಲಿ ಯೋಗಾಭ್ಯಾಸನಿರತರಾದ ಹಲವು ಮಂದಿ ದೇವಿಯರಿರುವರು. ಆ ದೇವಿಯರನ್ನು ಮಾನಸಪೂಜೆಯಿಂದ ಸಂತುಷ್ಟಿಗೊಳಿಸುವೆನು.

ನಾಭಿಪ್ರದೇಶೇಷ್ಟದಳೈಃ ಸುರಮ್ಯಂ

ಪದ್ಮಂ ಸುರೇಂದ್ರೈರಭಿವಂದ್ಯಮಾನಂ

ತತ್ರಾಧಿದೇವೀಃ ಪರಿಪೂಜಯಿತ್ವಾ

ಪ್ರಾಪ್ನೋಮಿ ಸಿದ್ಧಿಂ ಮನಸಾ ವಿಭಾವ್ಯಾಂ

ನಾಭಿ ಪ್ರದೇಶದಲ್ಲಿ ಇಂದ್ರಾದಿಗಳು ಸಹ ವಂದಿಸಬೇಕಾದ ಸುಂದರವಾದ ಅಷ್ಟದಳ ಪದ್ಮವೆಂಬ ಚಕ್ರವಿದೆ. ಅದರಲ್ಲಿ ಅನಂಗಕುಸುಮಾದಿದೇವಿಯರಿರುವರು. ಅವರೊಂದಿಗೆ ನಿನ್ನನ್ನು ಪೂಜಿಸಿ, ಹೇ ದೇವೀ! ನನ್ನ ಮನೋಗತವಾದ ಸಿದ್ದಿಯನ್ನು ಪಡೆಯುವೆನು.

ಕಟೌ ದ್ವಿತೀಯಂ ವಿಪುಲಂ ಸುವೃತ್ತಂ

ಸಂತ್ಯತ್ರದೇವಾಶ್ಚರಣಾರ್ಚನಾತ್ತಾಃ

ತಾನ್ ಸರ್ವದೇವಾನ್ ಪರಿಪೂಜಯಾ ನಃ

ಚಿತ್ತೈ ಕಗಮ್ಯಾನ್ ಶರಣಂ ಪ್ರಪದ್ಯೇ೧೦

ಕಟಿಪ್ರದೇಶದಲ್ಲಿ ದೊಡ್ಡದಾದ ಎರಡನೆಯ ವೃತ್ತವೊಂದಿರುವುದು. ಶ್ರೀ ದೇವಿಯಾದ ನಿನ್ನ ಚರಣಾರಾಧನೆಯಲ್ಲಿ ತೊಡಗಿರುವ ಹಲವು ದೇವತೆಗಳು ಇದರಲ್ಲಿರುವರು.ಆ ದೇವತೆಗಳನ್ನೆಲ್ಲ ಮನಸ್ಸಿನಿಂದ ಭಾವಿಸಿ ಪೂಜಿಸಿ, ನಿನ್ನನ್ನು ಶರಣು ಹೊಂದುವೆನು.

ತಸ್ಮಾದಧಸ್ತಾದ್ವಿಮಲಂ ಸುರಮ್ಯಂ

ಪದ್ಮಂ ಸುಶೊಭಂ ನೃಪಸಂಖ್ಯಪತ್ರಂ

ಸಂತ್ಯತ್ರಸಿದ್ಧಾ ಬಹುಸಿದ್ಧಿಭಾಜೋ

ಧ್ಯಾಯಾಮಿ ಸಿದ್ಧ್ಯೆ ಭವಬಂಧಹಂತ್ರೀ೧೧

ಎಲೌ ಸಂಸಾರ ಬಂಧನವನ್ನು ನಾಶಮಾಡುವ ದೇವಿಯೇ ! ಆ ಎರಡನೆಯ ವೃತ್ತದ ಕೆಳಭಾಗದಲ್ಲಿ ನಿರ್ಮಲವಾಗಿಯೂ ಸುಂದರವಾಗಿಯೂ ಇರುವ ಹದಿನಾರು ದಳಗಳುಳ್ಳ ಹೊಳೆಯುವ ಪದ್ಮವೆಂಬ ಚಕ್ರವೊಂದಿದೆ. ಇದರ ದಳಗಳಲ್ಲಿ ಕಾಮಾಕರ್ಷಿಣಿ ಮುಂತಾದ ದೇವಿಯರಿರುವರು. ಇವರು ಹಲವು ಬಗೆಯ ಸಿದ್ಧಿಯನ್ನು ಹೊಂದಿದ ಸಿದ್ಧರೆನಿಸಿರುವರು. ನನ್ನ ಇಷ್ಟಾರ್ಥ ಸಿದ್ಧಿಗೋಸ್ಕರ ಇವರೊಂದಿಗೆ ನಿನ್ನನ್ನು ಮಾನಸಿಕವಾಗಿ ಪೂಜಿಸುವೆನು.

ಆಧಾರಮೂಲೇ ಪರಮಂ ತ್ರಿವೃತ್ತಂ

ವಸಂತಿ ಯಕ್ಷಾ ಪರಿಗೇಯಕಂಠಾಃ

ತ್ವಾಂ ರಮ್ಯಗಾನೈರಭಿವಂದಮಾನಾಃ

ಕುರ್ವಂತಿ ಸಿದ್ಧಿಂ ಪರಮೇಶವಂದ್ಯೇ೧೨

ಪರಮಶಿವನಿಂದ ವಂದಿಸಲ್ಪಡುವ ಹೇ ದೇವಿ ! ಮೂಲಾಧಾರವೆಂಬ ಸ್ಥಾನದ ಬುಡದಲ್ಲಿ – ಉತ್ತಮಗಳೆನಿಸಿದ ಮೂರು ವೃತ್ತಗಳಿವೆ. ಆ ವೃತ್ತಗಳಲ್ಲಿ ಗಾನಕ್ಕೆ ಯೋಗ್ಯವಾದ ಕಂಠಗಳುಳ್ಳ ಯಕ್ಷರು ವಾಸಿಸುತ್ತಿರುವರು. ಅವರನ್ನೆಲ್ಲ ನಿನ್ನನ್ನು ತಮ್ಮ ಇಂಪಾದ ಗಾನದಿಂದ ಮೆಚ್ಚಿಸಿ ನಮಸ್ಕರಿಸುತ್ತಾ, ನಿನ್ನ ಭಕ್ತರಿಗೆ ಇಷ್ಟಸಿದ್ಧಿಯಾಗುವಂತೆ ಪ್ರಾರ್ಥಿಸುತ್ತಿರುವರು.( ಅವರೊಂದಿಗೆ ನಿನ್ನನ್ನು ಧ್ಯಾನಿಸುವೆನು)

ಒಳುದ ಸ್ತೋತ್ರಂಗ ಇನ್ನಾಣ ಸರ್ತಿಗೆ.

~*~*~

ತೆಕ್ಕುಂಜ ಕುಮಾರ ಮಾವ°

   

You may also like...

6 Responses

 1. ಚೆನ್ನೈ ಭಾವ says:

  ಹರೇ ರಾಮ. ನಮಸ್ಕಾರ ಮತ್ತು ಧನ್ಯವಾದ.

 2. ವಿದ್ಯಾ ರವಿಶಂಕರ್ says:

  ಧನ್ಯವಾದಂಗೊ.

 3. ಅನುಶ್ರೀ ಬಂಡಾಡಿ says:

  ಕನ್ನಡಾನುವಾದವೂ ಸ್ತೋತ್ರದಷ್ಟೇ ಸುಂದರವಾಗಿದ್ದು. ಧನ್ಯವಾದಂಗೊ.

 4. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ತೆಕ್ಕುಂಜ ಶಂಕರ ಭಟ್ಟರ ಬಗ್ಗೆ ಮೊದಲೊಂದಾರಿ ಅಮ್ಮೆಂಬಳ ಶಂಕರನಾರಾಯಣ ನಾವಡರು ಹೇಳಿದ್ದವು. ನಾವಡರಿಂಗೆ ಅವು ಗುರುಗೊ ಅಡ. ಈಗ ಅವರ ಕವನ ಬೈಲಿಲಿ ಹಾಕುತ್ತಾ ಇಪ್ಪದು ಒಳ್ಳೆದಾತು

 5. ಬೊಳುಂಬು ಮಾವ says:

  ಸರಳಾನುವಾದದೊಟ್ಟಿಂಗೆ ಬಂದ ಶ್ರೀ ಲಲಿತೆಯ ಸ್ತೋತ್ರ ಲಾಯಕಿತ್ತು. ಕುಮಾರಣ್ಣಂಗೆ ಧನ್ಯವಾದ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *