ತ್ರಿಸುಪರ್ಣ ಸೂಕ್ತಮ್

October 10, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ಸೂಕ್ತ ಗೀತಾಂಜಲಿ” ಪುಸ್ತಕಂದ “ತ್ರಿಸುಪರ್ಣ ಸೂಕ್ತಮ್ ” ನ ಇಲ್ಲಿ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.

ಶರ್ಮಪ್ಪಚ್ಚಿ
~~~


ತ್ರಿಸುಪರ್ಣ ಸೂಕ್ತಮ್

ಬ್ರಹ್ಮ ಮೇತುಮಾಮ್ | ಮಧು ಮೇತು ಮಾಮ್ | ಬ್ರಹ್ಮಮೇವ ಮಧುಮೇತು ಮಾಮ್ |

ಯಾಸ್ತೇ ಸೋಮಪ್ರಜಾವತ್ಸೋಬಿಸೋ ಅಹಮ್| ದುಷ್ವಪ್ನಹನ್ದುರುಷ್ವಹ |

ಯಾಸ್ತೇ ಸೋಮ ಪ್ರಾಣಾಗ್ಂ ಸ್ತಾನ್ ಜುಹೋಮಿ ||೧||

ತ್ರಿಸುಪರ್ಣ ಮಯಾಚಿತಂ ಬ್ರಾಹ್ಮಣಾಯ ದದ್ಯಾತ್ | ಬ್ರಹ್ಮ ಹತ್ಯಾಂ ವಾ ಏತೇಘ್ನಂತಿ |

ಯೇ ಬ್ರಾಹ್ಮಣಾ ತ್ರಿಸುಪರ್ಣಂ ಪಠಂತಿ | ತೇ ಸೋಮಂ ಪ್ರಾಪ್ನುವಂತಿ | ಆ ಸಹಸ್ರಾತ್ಪಂಕ್ತಿಂ ಪುನಂತಿ| ಓಮ್ ||೨||

ಬ್ರಹ್ಮ ಮೇಧಯಾ| ಮಧುಮೇಧಯಾ | ಬ್ರಹ್ಮಮೇವ ಮಧು ಮೇಧಯಾ |

ಅದ್ಯಾನೋ ದೇವ ಸವಿತಃ ಪ್ರಜಾವತ್ಸಾವೀಃ ಸೌಭಾಗಮ್ | ಪರಾದುಷ್ವುಪ್ನಿಯಗ್ಂಸುವ|

ವಿಶ್ವಾನಿ ದೇವ ಸವಿತರ್ದುರಿತಾನಿ ಪರಾಸುವ | ಯದ್ಭದ್ರಂ ತನ್ಮ ಆ ಸುವ |

ಮಧು ವಾತಾ  ಋತಾಯತೇ ಮಧುಕ್ಷರಂತಿ ಸಿಂಧವಃ | ಮಾಧ್ವೀರ್ನ ಸಂತೋಷ್ವಧೀಃ |

ಮಧುನಕ್ತಮುತೋಷಸಿ ಮಧುವತ್ವಾರ್ಥಿವಗ್ಂ ರಜಃ | ಮಧು ದ್ಯೌರಸ್ತುನಃ ಪಿತಾ |

ಮಧುಮಾನ್ನೋವನಸ್ಪತಿರ್ಮಧು ಮಾಗ್ಂ ಅಸ್ತು ಸೂರ್ಯಃ ಮಾಧ್ವೀರ್ಗಾವೋ ಭವಂತು ನಃ ||೩||

ಯ ಇಮಂ ತ್ರಿಸುಪರ್ಣ ಮಯಾಚಿತಂ ಬ್ರಾಹ್ಮಣಾಯ ದದ್ಯಾತ್ ಬ್ರೂಣ ಹತ್ಯಾಂ ವಾ ಏತೇಘ್ನಂತಿ |

ಯೇ ಬ್ರಾಹ್ಮಣಾಸ್ತ್ರಿಸುಪರ್ಣಂ ಪಠಂತಿ | ತೇ ಸೋಮಂ ಪ್ರಾಪ್ನುವಂತಿ | ಆ ಸಹಸ್ರಾತ್ಪಂಕ್ತಿಂ ಪುನಂತಿ | ಓಮ್ ||೪||

ಬ್ರಹ್ಮ ಮೇಧವಾ | ಮಧು ಮೇಧವಾ | ಬ್ರಹ್ಮಮೇವ ಮಧುಮೇಧವಾ |

ಬ್ರಹ್ಮಾ ದೇವಾನಾಂ ಪದವೀಃ ಕವಿನಾಮೃಷಿರ್ವಿಪ್ರಾಣಾಂ ಮಹಿಷೋ ಮೃಗಾಣಾಂ |

ಶ್ಯೇನೋ ಗೃಧ್ರಾಣಾಗ್ಂ ಸ್ವಧಿತಿರ್ವನಾನಾಗ್ಂ ಸೋಮಃ ಪವಿತ್ರ ಮತ್ಯೇತಿ ರೇಭನ್ |

ಹಗ್ಂಸಃಶುಚಿದ್ವಸುರಂತರಿಕ್ಷಸದ್ದೋತಾ ವೇದಿಷದತಿಥಿರ್ದುರೋಣಸತ್ |

ನೃಷದ್ವರಸದೃತಸದ್ ವ್ಯೋಮಸದ್ಬಜಾ ಗೋಜಾ ಋತಜಾ ಅದ್ರಿಜಾ ಋತಂ ಬೃಹತ್ ||೫||

ಋಚೇ ತ್ವಾ ರುಚೇ ತ್ವಾ ಸಮಿಥ್ಸ್ರವಂತಿ ಸರಿತೋ ನ ಧೇನಾಃ| ಅಂತರ್ ಹೃದಾ ಮನಸಾ ಪೂಯಮಾನಾಃ |

ಘೃತಸ್ಯ ಧಾರಾ ಅಭಿಚಾಕಶೀಮಿ| ಹಿರಣ್ಯಯೋ ವೇತಸೋ ಮಧ್ಯ ಆಸಾಮ್ |

ತಸ್ಮಿಥ್ಸುಪರ್ಣೋ ಮಧುಕೃತ್ ಕುಲಾಯೀ ಭಜನ್ನಾಸ್ತೇ ಮಧು ದೇವತಾಭ್ಯಃ |

ತಸ್ಯಾಸತೇ ಹರಯಸ್ಸಪ್ತತೀರೇ ಸ್ವಧಾಂ ದುಹಾನಾ ಅಮೃತಸ್ಯ ಧಾರಾಮ್ |

ಯ ಇದಂ ತ್ರಿಸುಪರ್ಣ ಮಯಾಚಿತಂ ಬ್ರಾಹ್ಮಣಾಯ ದದ್ಯಾತ್ | ವೀರ ಹತ್ಯಾಂ ವಾ ಏತೇಘ್ನಂತಿ |

ಯೇ ಬ್ರಾಹ್ಮಣಾ ತ್ರಿಸುಪರ್ಣಂ ಪಠಂತಿ | ತೇ ಸೋಮಂ ಪ್ರಾಪ್ನುವಂತಿ | ಆ ಸಹಸ್ರಾತ್ಪಂಕ್ತಿಂ ಪುನಂತಿ| ಓಮ್ ||೬||

ತ್ರಿಸುಪರ್ಣ ಸೂಕ್ತ (ಕನ್ನಡ ಗೀತೆ)

ಬ್ರಹ್ಮ ತತ್ವವು ನನಗೆ ಲಭಿಸಲಿ ಮಧುರ ಚಿಂತನೆ ಮನದೊಳಿರಲಿ

ಬ್ರಹ್ಮ ತತ್ವವು ಮಧುರ ಚಿಂತನೆ ಜತೆಯಲೆನ್ನನು ಹೊಂದಿಬರಲಿ

ನಾನು ಕಂದನು ಸೋಮದೇವನೆ ನಿನ್ನ ಪ್ರಜೆಗಳ ಮಧ್ಯದಲ್ಲಿ

ದುಷ್ಟಸ್ವಪ್ನವು ದೂರವಾಗಲಿ ನಿನಗೆ ಅರ್ಪಿಪೆ ಪ್ರಾಣಗಳನು ||೧||

ವಿಪ್ರನಾವರು ಕೋರದಿದ್ದರು ತ್ರಿಸುವರ್ಣವಂ ಕಲಿಸಬೇಕು

ಬ್ರಹ್ಮ ಹತ್ಯೆಯ ದೋಷ ನಶಿಪುದು ಮಂತ್ರ ಬ್ರಾಹ್ಮಣ ಪಠಿಸುತಿರಲು

ಸೋಮಯಾಗದ ಫಲವನುಂಬರು ಪಂಕ್ತಿಸಾವಿರ ಶುದ್ಧಿಗೊಂಡು || ಓಮ್ || ||೨||

ಬರಲಿ ಮೇಧಾ ಬ್ರಹ್ಮತತ್ವವು ಮಧುರ ಚಿಂತನೆ ಶಕ್ತಿ ಮೇಧಾ

ಬ್ರಹ್ಮ ತತ್ವವ ಮಧುರ ಚಿಂತನೆ ಶಕ್ತಿ ಮೇಧಾ ತಂದು ಕೊಡಲಿ

ಸವಿತ ದೇವನೆ ನಮಗೆ ಕರುಣಿಸು ಶಿಷ್ಯ ಗುರುಗಳ ಭಾಗ್ಯವನ್ನು

ಕೆಟ್ಟ ಕನಸನು ದೂರ ಓಡಿಸು ಎಲ್ಲ ವಿಧಗಳ ದುರಿತ ಹರಿಸು

ಸರ್ವಮಂಗಳ ದಯದಿ ಪಾಲಿಸು ಗಾಳಿ ಬೀಸಲಿ ಸುಖವ ಕೊಡಲಿ

ನದಿಗಳೀಯಲಿ ಮಧುರ ಜಲವನು ವನ್ಯದೌಷಧಿ, ಹಿತವ ಬಯಸಿ

ರಾತ್ರಿ ಉಷೆಯಲಿ ಶಾಂತಿ ನೀಡಲಿ ಧೂಳಿನಲಿ ವಿಶ್ರಾಂತಿಯನ್ನು

ಸ್ವರ್ಗಲೋಕವು ಸುಖವ ಕಾಣಲಿ ಸಸ್ಯ ಮರಗಳು ಫಲವ ಕೊಡಲಿ

ಸೂರ್ಯ ನೀಡಲಿ ತಂಪು ಸೊಂಪನು ಗೋವು ನೀಡಲಿ ಹಾಲು ಮೊಸರು ||೩||

ಬ್ರಾಹ್ಮಣಾವರು ಕೋರದಿದ್ದರು ತ್ರಿಸುಪರ್ಣವಂ ಕಲಿಸಬೇಕು

ಬ್ರೂಣ ಹತ್ಯಾ ದೋಷ ನಶಿಪುದು ಮಂತ್ರ ಬ್ರಾಹ್ಮಣ ಪಠಿಸುತಿರಲು

ಸೋಮಯಾಗದ ಫಲವನುಂಬರು ಪಂಕ್ತಿ ಸಾವಿರ ಶುದ್ಧಿಗೊಂಡು ||೪||

ಬ್ರಹ್ಮ ಯಜ್ಞವು ಮಧುರ ಯಜ್ಞವು ಬ್ರಹ್ಮ ಮಧುರಾ ಯಜ್ಞರೂಪ

ದೇವತೆಗಳಲಿ ಬ್ರಹ್ಮ ದೇವನು ಪರಮ ಬ್ರಹ್ಮನ ದೇವ ರೂಪ

ಕವಿಗಳೆಡೆಯಲಿ ಪದವಿಯುತ್ತಮ ಋಷಿಗಳುತ್ತಮ ವಿಪ್ರರಲ್ಲಿ

ಮಹಿಷ ಶ್ರೇಷ್ಠನು ಮೃಗಗಳೆಡೆಯಲಿ ಗಿಡುಗ ದೊಡ್ಡದು ಪಕ್ಷಿಕುಲದಿ

ವನಗಳಲ್ಲಿಯು ಕೊಡಲಿ ರೂಪವು ಯಾಗದಲ್ಲಿಯು ಸೋಮಲತೆಯು

ಮಂತ್ರ ಸ್ವರಗಳ ಪಠಣಗೈಯುತ ಶುದ್ಧ ಪಾವನ ಮೂರ್ತಿಯವನು

ಸೂರ್ಯ ತೇಜದಿ ನಭದಿ ಹೊಳೆವನು ಹೋಮದಗ್ನಿಯು ಯಾಗದಲ್ಲಿ

ತಿಥಿಗಳಲ್ಲದ ದಿನದಿ ಅತಿಧಿಯು ವಾಸಗೊಂಬನು ಮನೆಗಳಲ್ಲಿ

ಮನುಜರಲ್ಲಿಯು ಕ್ಷೇತ್ರದಲ್ಲಿಯು ಯಜ್ಞದಲ್ಲಿಯು ಗಗನದಲ್ಲಿ

ನಿರಿನಲ್ಲಿಯು ಹಾಲಿನಲ್ಲಿಯು ಕೀರ್ತಿವಂತನು ಸತ್ಯದಲ್ಲಿ

ಗಿರಿಗಳಲ್ಲಿಯು ಸರ್ವರಲ್ಲಿಯು ಪರಮ ಆತ್ಮನ ರೂಪನವನು ||೫||

ಬ್ರಾಹ್ಮಣಾವರು ಕೋರದಿದ್ದರು ತ್ರಿಸುಪರ್ಣವಂ ಕಲಿಸಬೇಕು

ವೀರ ಹತ್ಯೆಯ ದೋಷ ನಶಿಪುದು ಮಂತ್ರ ಬ್ರಾಹ್ಮಣ ಪಠಿಸುತಿರಲು

ಸೋಮ ಯಾಗದ ಫಲವನುಂಬರು ಪಂಕ್ತಿ ಸಾವಿರ ಶುದ್ಧಿಗೊಂಡು ||ಓಮ್||    ||೬||

ಓಂ ಶಾಂತಿಃ ಶಾಂತಿಃ  ಶಾಂತಿಃ ||

ಸಂಗ್ರಹ: ಸೂಕ್ತ ಗೀತಾಂಜಲಿ ( ಡಾ|| ಮಡ್ವ ಶಾಮ ಭಟ್ಟ)

ಸೂ:
ವೇದಮೂರ್ತಿ ತುಪ್ಪೆಕಲ್ಲು ಸಹೋದರರ
“ತ್ರಿಸುಪರ್ಣ ಸೂಕ್ತಮ್” ಧ್ವನಿಮುದ್ರಿಕೆಯ ಬೈಲಿನ ಚೆನ್ನೈಬಾವ ಕಳುಸಿಕೊಟ್ಟಿದವು. ಬೈಲಿನ ಕೇಳುಗರಿಂಗಾಗಿ ಇಲ್ಲಿ ನೇಲುಸಿದ್ದು:
ಇಬ್ರಿಂಗೂ ಧನ್ಯವಾದಂಗೊ.


Get this widget | Track details | eSnips Social DNA
ತ್ರಿಸುಪರ್ಣ ಸೂಕ್ತಮ್, 5.0 out of 10 based on 1 rating

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಲಾಯಕ ಆಯ್ದು. ಧನ್ಯವಾದ ಅಪ್ಪಚ್ಚಿಗೆ.

  [Reply]

  VA:F [1.9.22_1171]
  Rating: 0 (from 0 votes)
 2. ಅನುಶ್ರೀ ಬಂಡಾಡಿ
  ಅನುಶ್ರೀ ಬಂಡಾಡಿ

  ಧನ್ಯವಾದಂಗೊ ಶರ್ಮಪ್ಪಚ್ಚಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನುಶ್ರೀ ಬಂಡಾಡಿಉಡುಪುಮೂಲೆ ಅಪ್ಪಚ್ಚಿದೇವಸ್ಯ ಮಾಣಿಕಜೆವಸಂತ°ಪ್ರಕಾಶಪ್ಪಚ್ಚಿಹಳೆಮನೆ ಅಣ್ಣಪವನಜಮಾವಶ್ಯಾಮಣ್ಣಪುತ್ತೂರಿನ ಪುಟ್ಟಕ್ಕಪೆಂಗಣ್ಣ°ಡೈಮಂಡು ಭಾವದೊಡ್ಮನೆ ಭಾವಕಳಾಯಿ ಗೀತತ್ತೆಬೋಸ ಬಾವಬಂಡಾಡಿ ಅಜ್ಜಿಗೋಪಾಲಣ್ಣಕೆದೂರು ಡಾಕ್ಟ್ರುಬಾವ°ಯೇನಂಕೂಡ್ಳು ಅಣ್ಣದೊಡ್ಡಮಾವ°ಚೂರಿಬೈಲು ದೀಪಕ್ಕಎರುಂಬು ಅಪ್ಪಚ್ಚಿಶಾ...ರೀಮುಳಿಯ ಭಾವಅಜ್ಜಕಾನ ಭಾವಶೀಲಾಲಕ್ಷ್ಮೀ ಕಾಸರಗೋಡುವಾಣಿ ಚಿಕ್ಕಮ್ಮ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ