ವಾಕ್ ಸೂಕ್ತಮ್ (ದೇವೀ ಸೂಕ್ತಮ್)

October 3, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ಸೂಕ್ತ ಗೀತಾಂಜಲಿ” ಪುಸ್ತಕಂದ ”  ವಾಕ್ ಸೂಕ್ತಮ್ ” ನ ಇಲ್ಲಿ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.

ಶರ್ಮಪ್ಪಚ್ಚಿ

~~~

ವಾಕ್ ಸೂಕ್ತಮ್ (ದೇವೀ ಸೂಕ್ತಮ್)

ದೇವೀಂ ವಾಚಮಜನಯಂತ ದೇವಾಃ | ತಾಂ ವಿಶ್ವರೂಪಾಃ ಪಶವೋ ವದಂತಿ |

ಸಾನೋ ಮಂದ್ರೇಷ ಮೂರ್ಜಂ ದುಹಾನಾ | ಧೇನುರ್ವಾಗಸ್ಮಾನುಪಸುಷ್ಟುತೈತು ||೧||

ಯದ್ವಾಗ್ವದಂತ್ಯ ವಿಚೇತನಾನಿ ರಾಷ್ಟ್ರೀ ದೇವಾನಾಂ ನಿಷಸಾದ ಮಂದ್ರಾ |

ಚತಸ್ರ ಊರ್ಜಂ ದುದುಹೇ ಪಯಾಗ್ಂಸಿ ಕ್ವಸ್ವಿದಸ್ಯಾಃ ಪರಮಂ ಜಗಾಮ ||೨||

ಗೌರೀರ್ಮಿಮಾಯ ಸಲಿಲಾನಿ ತಕ್ಷತ್ಯೇಕ ಪದೀ ದ್ವಿಪದೀ ಸಾ ಚತುಷ್ಪದೀ |

ಅಷ್ಟಾಪದೀ ನವಪದೀ ಬಭೂವುಷೇ ಸಹಸ್ರಾಕ್ಷರಾ ಪರಮೇ ವ್ಯೋಮನ್ ||೩||

ತಸ್ಯಾಗ್ಂ ಸಮುದ್ರಾ ಅಧಿವಿಕ್ಷರಂತಿ| ತೇನ ಜೀವಂತಿ ಪ್ರದಿಶಶ್ಚತಸ್ರಃ |

ತತಃ ಕ್ಷರತ್ಯಕ್ಷರಂ ತದ್ವಿಶ್ವಮುಪಜೀವತಿ ||೪||

ಅನಂತಾ ಮಂತಾದಧಿ ನಿರ್ಮಿತಾಂ ಮಹೀಮ್| ಯಸ್ಯಾಂ ದೇವಾ ಅದಧುರ್ಭೋಜನಾನಿ |

ಏಕಾಕ್ಷರಾಂ ದ್ವಿಪದಾಗ್ಂ ಷಟ್ಪದಾಂಚ| ವಾಚಂ ದೇವಾ ಉಪಜೀವಂತಿ ವಿಶ್ವೇ ||೫||

ವಾಚಂ ದೇವಾ ಉಪಜೀವಂತಿ ವಿಶ್ವೇ| ವಾಚಂ ಗಂಧರ್ವಾಃ ಪಶವೋ ಮನುಷ್ಯಾಃ |

ವಾಚೀ ಮಾ ವಿಶ್ವಾ ಭುವನಾನ್ಯರ್ಪಿತಾ| ಸಾ ನೋ ಹವಂ ಜುಷತಾಮಿಂದ್ರ ಪತ್ನೀ ||೬||

ವಾಗಕ್ಷರಂ ಪ್ರಥಮಜಾ ಋತಸ್ಯ| ವೇದಾನಾಂ ಮಾತಾಮೃತಸ್ಯ ನಾಭಿಃ|

ಸಾ ನೋ ಜುಷಾಣೋಪ ಯಜ್ಞಮಾಗಾತ್ | ಅವಂತೀ ದೇವೀ ಸುಹವಾ ಮೇ ಅಸ್ತು ||೭||

ಯಾ ಮೃಷಯೋ ಮಂತ್ರ ಕೃತೋ ಮನೀಷಿಣಃ  ಅನ್ವೈಚ್ಛನ್ದೇವಾ ಸ್ತಪಸಾ ಶ್ರಮೇಣ |

ತಾಂ ದೇವೀಂ ವಾಚಗ್ಂ ಹವಿಷಾ ಯಜಾಮಹೇ | ಸಾ ನೋ ದಧಾತು ಸುಕೃತಸ್ಯ ಲೋಕೇ ||೮||

ಚತ್ವಾರಿ  ವಾಕ್ಪರಿಮಿತಾ ಪದಾನಿ | ತಾನಿ ವಿದುರ್ಬ್ರಾಹ್ಮಣಾ ಯೇ ಮನೀಷಿಣಃ |

ಗುಹಾ ತ್ರೀಣಿ ನಿಹಿತಾ ನೇಂಗಯಂತಿ | ತುರೀಯಂ ವಾಚೋ ಮನುಷ್ಯಾ ವದಂತಿ ||೯||

ವಾಕ್ ಸೂಕ್ತ (ದೇವೀ ಸೂಕ್ತ)-ಕನ್ನಡ ಗೀತೆ

ಸೃಷ್ಟಿಗೈದರು ದೇವತೆಯರೇ ಮಾತು ಎನ್ನುವ ದೇವತೆಯನು

ವಿಶ್ವದೆಲ್ಲೆಡೆ ಪ್ರಾಣಿವರ್ಗವು ಮಾತನಾಡುವುದವಳ ದಯದಿ

ತೋಷಗೊಳ್ಳುತ ತೆರದಿ ಗೋವಿನ ಹಾಲು ಮೊಸರನು ತುಪ್ಪವನ್ನು

ಈಯಲನ್ನವ ಸ್ತುತಿಯನಾಲಿಸಿ ಬರಲಿ ಹೊಂದುತ ತುಷ್ಟಿಯನ್ನು ||೧||

ಮೋದವೀಯುತ ದೇವತೆಗಳಿಗೆ ಜ್ಞಾನಕಾಂಕ್ಷಿಗೆ ಜ್ಞಾನವಿತ್ತು

ಯಾಗ ಸ್ಥಳದಿಂ ನಾಲ್ಕು ದಿಶೆಗೂ ಅನ್ನ ಹಾಲನು ಉಣಿಸುವವಳು

ವಾಕ್ ದೇವಿಯ ಪರಮಪದವನು ಮನುಜನಾವನು ಹೊಂದಲರ್ಹ? ||೨||

ಹೊಂದುತಾತಳು ಪರಬ್ರಹ್ಮನ ಶುದ್ಧನೀರಿನ ಶಬ್ದವಾಗಿ

ದೇವಿ ಗೌರಿಯು ಪ್ರಣವ ರೂಪದಿ, ಏಕಪದಿಯಲಿ, ದ್ವಿಪದಿಯಾಗಿ

ವ್ಯಾಹೃತಿಯು ಸಾವಿತ್ರಿ ರೂಪದಿ, ಚತುಷ್ಪದಿಯಲಿ ವೇದ ನಾಲ್ಕು

ಅಷ್ಟಪದಿಯೂ, ನವಮ ಪದಿಯೂ ಪದವನೇಕವನಂತ ಹೊಂದಿ ||೩||

ಅರ್ಥವ್ಯಾಪ್ತಿಯ ವೇದ ಕಡಲಿಗೆ ವಾಕ್ ದೇವಿಯು ನೀಡುತಿಹಳು

ನಾಲ್ಕು ದಿಶೆಯುಪದೆಶೆಯೊಳಡಗಿದ ಪ್ರಾಣಿ ಜೀವಕೆ ವಾಸಸ್ಥಾನ

ನಾಶವಿಲ್ಲದ ಪ್ರಣವ ಮಂತ್ರದಿ ವಿಶ್ವ ಜೀವನ ಸಾಗುತಿಹುದು ||೪||

ಅನ್ನ ಉಂಬರು ದೇವರೆಲ್ಲರು ಮಂತ್ರರೂಪದಿ ದೇವ ದಯದಿ

ಪರಮ ಆತ್ಮನ ಪರಮ ಅಕ್ಷರ, ಅಂತ್ಯವಿಲ್ಲದನಂತ ರೂಪ,

ದ್ವಿಪದಿ ಷಡ್ಪದಿಯಿಂದ ವಿಸೃತ ವಿಶ್ವದೇವತೆಗಳಿಗೆ ಉಣಿಸು ||೫||

ಮಾತಿನಾಧಾರದಲಿ ಜೀವನ ದೇವತೆಗಳಿಗೆ ಜಗದೊಳೆಲ್ಲು

ಗೋವು ಗಂಧರ್ವರಿಗು ಜನರಿಗು ಭುವನ ಭಾಗ್ಯವು ದೇವಿ ಬಯಕೆ

ದೇವ ಇಂದ್ರನು ರಕ್ಷಿಸುತ್ತಲಿ ನಮ್ಮ ಹವಿಸನು ಕೊಳಲು ಬರಲಿ ||೬||

ದೇವಿ ಅಕ್ಷರ ವಾಕ್ ಮಾತೆಯು ಯಜ್ಞದಾದಿಯ ವೇದ ಮಾತೆ

ಅಮೃತ ಉಣ್ಣಲು ದೇವತೆಗಳಿಗೆ ನಾಭಿಯಾಕೆಯು ಮಂತ್ರ ರೂಪ

ತೃಪ್ತ ಮನದಲಿ ನಮಗೆ ದೇವಿಯು ಸುಖವನೀಯುತ ರಕ್ಷೆ ಕೊಡಲಿ ||೭||

ಮಂತ್ರಕರ್ತ ಮನೀಷಿ ಋಷಿಗಳು ಶ್ರಮದ ತಪದಲಿ ದೇವತೆಗಳು

ಬಯಸುತಿರುವರು ವಾಕ್ ದೇವಿಯ; ನಾವು ಹವಿಸಿಂ ಹೋಮಿಸುವೆವು

ಪುಣ್ಯ ಕಾರ್ಯದ ಫಲದ ಲೋಕವ ನಮಗೆ ನೀಡಲಿ ತೋಷಗೊಂಡು ||೮||

ನಾಲ್ಕು ಸ್ಥಾನವು ವಾಕ್ ಗಿರುವುದು, ಪರಾ ಪಶಂತಿ, ಮಧ್ಯ ವೈಖರಿ

ವೇದ ಬ್ರಾಹ್ಮಣ ನಾಲ್ಕು ವಿಧದಾ ವೇದ್ಯಗೊಂಬರು ಶಾಸ್ತ್ರದಿಂದ

ಮೂರು ಸ್ಥಾನವು ದೇಹದೊಳಗಡೆ, ಹೊರಗೆ ಎಂದೂ ಪಸರಿಸಿಲ್ಲ

ನಾಲ್ಕನೆಯದೆ ವೈಖರೀಯದು ಸರ್ವಜನರಿಗು ತಿಳಿವ ಮಾತು ||೯||

ಓಂ ಶಾಂತಿಃ ಶಾಂತಿಃ ಶಾಂತಿಃ ||

ಸಂಗ್ರಹ: ಸೂಕ್ತ ಗೀತಾಂಜಲಿ (ಡಾ| ಮಡ್ವ ಶಾಮ ಭಟ್ಟ)

[ಸಂಗ್ರಹಲ್ಲಿ ಇಪ್ಪ ೩ನೇ ಮತ್ತೆ ೪ ನೇ ಚರಣ, ಲೋಕ ರೂಢಿಲಿ ಹೇಳುವಾಗ ಇಲ್ಲೆ. ]

ಸೂ:
ವೇದಮೂರ್ತಿ ತುಪ್ಪೆಕಲ್ಲು ಸಹೋದರರ
“ಶ್ರೀ  ದೇವೀ ಸೂಕ್ತಮ್” ಧ್ವನಿಮುದ್ರಿಕೆಯ ಬೈಲಿನ ಚೆನ್ನೈಬಾವ ಕಳುಸಿಕೊಟ್ಟಿದವು. ಬೈಲಿನ ಕೇಳುಗರಿಂಗಾಗಿ ಇಲ್ಲಿ ನೇಲುಸಿದ್ದು:
ಇಬ್ರಿಂಗೂ ಧನ್ಯವಾದಂಗೊ.

Get this widget | Track details | eSnips Social DNA
ವಾಕ್ ಸೂಕ್ತಮ್ (ದೇವೀ ಸೂಕ್ತಮ್), 5.0 out of 10 based on 1 rating

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಲಾಯಕ ಆಯ್ದು. ಧನ್ಯವಾದ. ಶರ್ಮಪ್ಪಚ್ಚಿಯ ಸಂಗ್ರಹ ಅದ್ಭುತ. ಬೈಲಿಂಗೆ ನೀಡಿ ಬಹು ಉಪಕಾರ ಮಾಡಿದ್ದಕ್ಕೆ ವಿಷೇಶ ಶ್ಲಾಘನೆ.

  [Reply]

  VA:F [1.9.22_1171]
  Rating: 0 (from 0 votes)
 2. ವಿದ್ಯಾ ರವಿಶಂಕರ್
  ವಿದ್ಯಾ ರವಿಶಂಕರ್

  ಆನು ಸುರೂ ಕೇಳಿದ್ದು. ಧನ್ಯವಾದಂಗೊ.

  [Reply]

  VN:F [1.9.22_1171]
  Rating: 0 (from 0 votes)
 3. ನಿಮ್ಮ ಈ ಅಂತರ್ಜಾಲ ತಾಣದಿಂದಾಗಿ ನಾನು ಹೆಚ್ಚಿನ ದೇವರ ಪೂಜೆಯ ವಿಧಿ-ವಿಧಾನ ಮಾತ್ರವಲ್ಲದೆ, ದೇವರ ಅನೇಕ ಉಪಯುಕ್ತ ಮಂತ್ರಗಳನ್ನು ಕಲಿಯುವಂತಾಯಿತು ಮಾತ್ರವಲ್ಲದೇ, ಅವುಗಳ ಅರ್ಥವನ್ನು ತಿಳಿದು ಪೂಜಿಸುವಂತಾಯಿತು… ನಿಮಗೆ ತುಂಬಾ ಧನ್ಯವಾದಗಳು..!!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಎರುಂಬು ಅಪ್ಪಚ್ಚಿಹಳೆಮನೆ ಅಣ್ಣಅಕ್ಷರದಣ್ಣಬಂಡಾಡಿ ಅಜ್ಜಿವಾಣಿ ಚಿಕ್ಕಮ್ಮಕೇಜಿಮಾವ°ಬಟ್ಟಮಾವ°ಸುಭಗಪವನಜಮಾವವಿಜಯತ್ತೆಶ್ಯಾಮಣ್ಣಪೆಂಗಣ್ಣ°ಅನು ಉಡುಪುಮೂಲೆಶಾಂತತ್ತೆದೊಡ್ಡಭಾವಪಟಿಕಲ್ಲಪ್ಪಚ್ಚಿಒಪ್ಪಕ್ಕಕೊಳಚ್ಚಿಪ್ಪು ಬಾವಸರ್ಪಮಲೆ ಮಾವ°ದೀಪಿಕಾಪುತ್ತೂರಿನ ಪುಟ್ಟಕ್ಕಚುಬ್ಬಣ್ಣಅನಿತಾ ನರೇಶ್, ಮಂಚಿನೆಗೆಗಾರ°ರಾಜಣ್ಣವೆಂಕಟ್ ಕೋಟೂರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ