ಯೋಪಾಂ ಪುಷ್ಪಂ ವೇದ

ಆತ್ಮೀಯ ಬೈಲಿಂಗೆ,

ಡಾ| ಶಾಮ ಭಟ್ಟ, ಮಡ್ವ ಇವು ಬರದ “ಸೂಕ್ತ ಗೀತಾಂಜಲಿ” ಪುಸ್ತಕಂದ “ಯೋಪಾಂ ಪುಷ್ಪಂ ವೇದ ” ಹೇಳುವ ಸೂಕ್ತವ ಇಲ್ಲಿ ಕೊಡುತ್ತಾ ಇದ್ದೆ.
ಸಂಸ್ಕೃತ ಪಾಠಲ್ಲಿ ಒಂದು ಪಾದ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.

ಶರ್ಮಪ್ಪಚ್ಚಿ
~~~

ಯೋಪಾಂ ಪುಷ್ಪಂ ವೇದ

ಯೋಪಾಂ ಪುಷ್ಪಂ ವೇದ| ಪುಷ್ಪವಾನ್ ಪ್ರಜಾವಾನ್ ಪಶುಮಾನ್ ಭವತಿ|
ಚಂದ್ರಮಾ ವಾ ಅಪಾಂ ಪುಷ್ಪಮ್|  ಪುಷ್ಪವಾನ್ ಪ್ರಜಾವಾನ್ ಪಶುಮಾನ್ ಭವತಿ|
ಯ ಏವಂ ವೇದ ||೧||

ಜಲದ ಪುಷ್ಪವೆ ಚಂದ್ರನೆಂಬುದ ತಿಳಿಯೆ ಜಲವನು ಪುಷ್ಪವೆಂದು
ಪುಷ್ಪವಂತನು ಪ್ರಜಾವಂತನು ಪಶುಸಮೃಧ್ದವಂತನವನು
ತಿಳಿಯಲೀತೆರ ಪುಷ್ಪವಂತನು ಪ್ರಜೆಯ ಪಶುಗಳ ಹೊಂದುತಿಹನು|1|

ಯೋಪಾಮಾಯತನಂ ವೇದ| ಅಯತನವಾನ್ ಭವತಿ|
ಅಗ್ನಿರ್ವಾ ಅಪಾಮಾಯತನಮ್| ಆಯತನವಾನ್ಭವತಿ|
ಯೋSಗ್ನೇರಾಯತನಂ ವೇದ| ಆಯತನವಾನ್ಭವತಿ|
ಆಪೋವಾ ಅಗ್ನೇರಾಯತನಂ| ಆಯತನವಾನ್ಭವತಿ|
ಯ ಏವಂ ವೇದ ||೨||

ತಿಳಿವನಾವನು ನೀರಿನುಗಮವ ಸುಖದ ಆಶ್ರಯ ಪಡೆವನವನು
ಅಗ್ನಿ ನೀರಿಗೆ ಉಗಮವೆಂಬುದ ತಿಳಿಯೆ ಪಡೆವನು ಭವ್ಯ ಸೌಧ
ತಿಳಿವನಾವನು ಅಗ್ನಿಯುಗಮವ ಸುಖದ ಆಶ್ರಯ ಪಡೆವನವನು
ನೀರು ಅಗ್ನಿಗೆ ಉಗಮವೆಂಬುದ ತಿಳಿಯೆ ಪಡೆವನು ಭವ್ಯ ಸೌಧ
ತಿಳಿಯಲೀತೆರ ಪುಷ್ಪವಂತನು ಪ್ರಜೆಯ ಪಶುಗಳ ಹೊಂದುತಿಹನು||2||


ಯೋಪಾಮಾಯತನಂ ವೇದ| ಆಯತನವಾನ್ಭವತಿ|
ವಾಯುರ್ವಾ ಅಪಾಮಾಯತನಮ್| ಆಯತನವಾನ್ಭವತಿ |
ಯೋವಾಯೋರಾಯತನಂ ವೇದ| ಆಯತನವಾನ್ಭವತಿ|
ಆಪೋವೈ ವಾಯೋರಾಯತನಮ್| ಆಯತನವಾನ್ಭವತಿ|
ಯ ಏವಂ ವೇದ ||೩||

ತಿಳಿವನಾವನು ನೀರಿನುಗಮವ ಸುಖದ ಆಶ್ರಯ ಪಡೆವನವನು
ವಾಯು ನೀರಿಗೆ ಉಗಮವೆಂಬುದ ತಿಳಿಯೆ ಪಡೆವನು ಭವ್ಯ ಸೌಧ
ತಿಳಿವನಾವನು ವಾಯು ಉಗಮವ ಸುಖದ ಆಶ್ರಯ ಪಡೆವನವನು
ನೀರು ವಾಯುಗೆ ಉಗಮವೆಂಬುದ ತಿಳಿಯೆ ಪಡೆವನು ಭವ್ಯ ಸೌಧ
ತಿಳಿಯಲೀತೆರ ಪುಷ್ಪವಂತನು ಪ್ರಜೆಯ ಪಶುಗಳ ಹೊಂದುತಿಹನು ||3||

ಯೋಪಾಮಾಯತನಂ ವೇದ| ಆಯತನವಾನ್ಭವತಿ|
ಅಸೌ ವೈ ತಪನ್ನಪಾಮಾಯತನಮ್| ಆಯತನವಾನ್ಭವತಿ|
ಯೋsಮುಷ್ಯ ತಪತ ಆಯತನಂ ವೇದ| ಆಯತನವಾನ್ಭವತಿ|
ಆಪೋವಾ ಅಮುಷ್ಯ ತಪತ ಆಯತನಮ್| ಆಯತನವಾನ್ಭವತಿ
ಯ ಏವಂ ವೇದ ||೪||

ತಿಳಿವನಾವನು ನೀರಿನುಗಮವ ಸುಖದ ಆಶ್ರಯ ಪಡೆವನವನು
ತಪದ ಸೂರ್ಯನು ಉಗಮವೆಂಬುದ ತಿಳಿಯೆ ಪಡೆವನು ಭವ್ಯ ಸೌಧ
ತಿಳಿವನಾವನು ಸೂರ್ಯನುಗಮವ ಸುಖದ ಆಶ್ರಯ ಪಡೆವನವನು
ನೀರು ಸೂರ್ಯಗೆ ಉಗಮವೆಂಬುದ ತಿಳಿಯೆ ಪಡೆವನು ಭವ್ಯ ಸೌಧ
ತಿಳಿಯಲೀತೆರ ಪುಷ್ಪವಂತನು ಪ್ರಜೆಯ ಪಶುಗಳ ಹೊಂದುತಿಹನು ||4||

ಯೋಪಾಮಾಯತನಂ ವೇದ| ಆಯತನವಾನ್ಭವತಿ|
ಚಂದ್ರಮಾವಾ ಅಪಾಮಾಯತನಮ್| ಆಯತನವಾನ್ಭವತಿ|
ಯಶ್ಚಂದ್ರಮಸ ಆಯತನಂ ವೇದ| ಆಯತನವಾನ್ಭವತಿ|
ಆಪೋವೈ ಚಂದ್ರಮಸ ಆಯತನಂ| ಆಯತನವಾನ್ಭವತಿ|
ಯ ಏವಂ ವೇದ ||೫||

ತಿಳಿವನಾವನು ನೀರಿನುಗಮವ ಸುಖದ ಆಶ್ರಯ ಪಡೆವನವನು
ಚಂದ್ರ ನೀರಿಗೆ ಉಗಮವೆಂಬುದ ತಿಳಿಯೆ ಪಡೆವನು ಭವ್ಯ ಸೌಧ
ತಿಳಿವನಾವನು ಚಂದ್ರನುಗಮವ ಸುಖದ ಆಶ್ರಯ ಪಡೆವನವನು
ನೀರು ಚಂದ್ರಗೆ ಉಗಮವೆಂಬುದ ತಿಳಿಯೆ ಪಡೆವನು ಭವ್ಯ ಸೌಧ
ತಿಳಿಯಲೀತೆರ ಪುಷ್ಪವಂತನು ಪ್ರಜೆಯ ಪಶುಗಳ ಹೊಂದುತಿಹನು ||೫||

ಯೋಪಾಮಾಯತನಂ ವೇದ| ಆಯತನವಾನ್ಭವತಿ|
ನಕ್ಷತ್ರಾಣಿವಾ ಅಪಾಮಾಯತನಮ್| ಆಯತನವಾನ್ಭವತಿ|
ಯೋ ನಕ್ಷತ್ರಾಣಾಮಾಯತನಂ ವೇದ| ಆಯತನವಾನ್ಭವತಿ|
ಆಪೋವೈ ನಕ್ಷತ್ರಣಾಮಾಯತನಮ್| ಆಯತನವಾನ್ಭವತಿ|
ಯ ಏವಂ ವೇದ ||೬||

ತಿಳಿವನಾವನು ನೀರಿನುಗಮವ ಸುಖದ ಆಶ್ರಯ ಪಡೆವನವನು
ತಾರೆ ನೀರಿಗೆ ಉಗಮವೆಂಬುದ ತಿಳಿಯೆ ಪಡೆವನು ಭವ್ಯ ಸೌಧ
ತಿಳಿವನಾವನು ತಾರೆಯುಗಮವ ಸುಖದ ಆಶ್ರಯ ಪಡೆವನವನು
ನೀರು ತಾರೆಗೆ ಉಗಮವೆಂಬುದ ತಿಳಿಯೆ ಪಡೆವನು ಭವ್ಯ ಸೌಧ
ತಿಳಿಯಲೀತೆರ ಪುಷ್ಪವಂತನು ಪ್ರಜೆಯ ಪಶುಗಳ ಹೊಂದುತಿಹನು ||೬||

ಯೋಪಾಮಾಯತನಂ ವೇದ| ಆಯತನವಾನ್ಭವತಿ|
ಪರ್ಜನ್ಯೋವಾ ಅಪಾಮಾಯತನಮ್| ಆಯತನವಾನ್ಭವತಿ
ಯಃ ಪರ್ಜನ್ಯಸ್ಯಾಯತನಂ ವೇದ| ಆಯತನವಾನ್ಭವತಿ|
ಆಪೋವೈ ಪರ್ಜನ್ಯಸ್ಯಾಯತನಮ್| ಆಯತನವಾನ್ಭವತಿ|
ಯ ಏವಂ ವೇದ ||೭||

ತಿಳಿವನಾವನು ನೀರಿನುಗಮವ ಸುಖದ ಆಶ್ರಯ ಪಡೆವನವನು
ಮೋಡ ನೀರಿಗೆ ಉಗಮವೆಂಬುದ ತಿಳಿಯೆ ಪಡೆವನು ಭವ್ಯ ಸೌಧ
ತಿಳಿವನಾವನು ಮೋಡದುಗಮವ ಸುಖದ ಆಶ್ರಯ ಪಡೆವನವನು
ನೀರು ಮೋಡಕೆ ಉಗಮವೆಂಬುದ ತಿಳಿಯೆ ಪಡೆವನು ಭವ್ಯ ಸೌಧ
ತಿಳಿಯಲೀತೆರ ಪುಷ್ಪವಂತನು ಪ್ರಜೆಯ ಪಶುಗಳ ಹೊಂದುತಿಹನು ||೭||

ಯೋಪಾಮಾಯತನಂ ವೇದ| ಆಯತನವಾನ್ಭವತಿ|
ಸಂವತ್ಸರೋವಾ ಅಪಾಮಾಯತಮ್| ಆಯತನವಾನ್ಭವತಿ|
ಯಃ ಸಂವತ್ಸರಸ್ಯಾಯತನಂ ವೇದ| ಆಯತನವಾನ್ಭವತಿ|
ಅಪೋವೈ ಸಂವತ್ಸರಸ್ಯಾಯತನಮ್| ಆಯತನವಾನ್ಭವತಿ
ಯ ಏವಂ ವೇದ ||೮||

ತಿಳಿವನಾವನು ನೀರಿನುಗಮವ ಸುಖದ ಆಶ್ರಯ ಪಡೆವನವನು
ಒಂದು ವರ್ಷವೆ ಉಗಮವೆಂಬುದ ತಿಳಿಯೆ ಪಡೆವನು ಭವ್ಯ ಸೌಧ
ತಿಳಿವನಾವನು ವರ್ಷದುಗಮವ ಸುಖದ ಆಶ್ರಯ ಪಡೆವನವನು
ನೀರು ವರ್ಷಕೆ ಉಗಮವೆಂಬುದ ತಿಳಿಯೆ ಪಡೆವನು ಭವ್ಯ ಸೌಧ
ತಿಳಿಯಲೀತೆರ ಪುಷ್ಪವಂತನು ಪ್ರಜೆಯ ಪಶುಗಳ ಹೊಂದುತಿಹನು ||೮||

ಯೋsಪ್ಸುನಾವಂ ಪ್ರತಿಷ್ಠಿತಾಂ ವೇದ| ಪ್ರತ್ಯೇವ ತಿಷ್ಠತಿ||
ಇಮೇ ವೈ ಲೋಕಾ ಅಪ್ಸು ಪ್ರತಿಷ್ಠಿತಾಃ| ತದೇಷಾsಭ್ಯನೂಕ್ತಾ ||೯||

ನೀರ ಮೇಲಿನ ನಾವೆಯಂದದಿ ತಿಳಿವನಾವನು ಭೂಮಿಯಿಂತು
ಲೋಕವೆಲ್ಲವವು ಸ್ಥಿರದಿ ನಿಂತಿದೆ ವೇದವೀತೆರ ಪೇಳುತಿಹುದು ||೯||

 

ಓಂ ಶಾಂತಿಃ ಶಾಂತಿಃ ಶಾಂತಿಃ ||

~*~*~

(ಸಂಗ್ರಹ: ಸೂಕ್ತ ಗೀತಾಂಜಲಿ, ಡಾ| ಮಡ್ವ ಶಾಮ ಭಟ್ಟ)

ಸೂ:
ವೇದಮೂರ್ತಿ ತುಪ್ಪೆಕಲ್ಲು ಸಹೋದರರ
“ಮಂತ್ರಪುಷ್ಪಂ” ಧ್ವನಿಮುದ್ರಿಕೆಯ ಬೈಲಿನ ಚೆನ್ನೈಬಾವ ಕಳುಸಿಕೊಟ್ಟಿದವು. ಬೈಲಿನ ಕೇಳುಗರಿಂಗಾಗಿ ಇಲ್ಲಿ ನೇಲುಸಿದ್ದು:
ಇಬ್ರಿಂಗೂ ಧನ್ಯವಾದಂಗೊ.

 

ಮಂತ್ರಪುಷ್ಪಮ್ – ಯೋಪಾಂ ಪುಷ್ಪಂ ವೇದ:

 

ಶರ್ಮಪ್ಪಚ್ಚಿ

   

You may also like...

14 Responses

  1. ವೇದಮೂರ್ತಿ ತುಪ್ಪೆಕಲ್ಲು ಸಹೋದರರ “ಮಂತ್ರ ಪುಷ್ಪ”ವ ಇನ್ನೊಂಂದರಿ ಕೇಳುವಾ ಹೇಳಿ ಗ್ರೇಶಿದರೆ ಇಲ್ಲಿಪ್ಪ ಧ್ವನಿಮುದ್ರಿಕೆ ಸಂಕೊಲೆ ಕಾಣೆ ಅಯ್ದನ್ನೆ ಭಾವಾ….
    ಇನ್ನು ಎಂತ ಮಾಡುಸ್ಸು…?

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *