ಧನ್ಯವಾದ ಪತ್ರ–ಡಾ|ಲಕ್ಷ್ಮೀಶ ಜೆ.ಹೆಗಡೆ

ಕೃಷ್ಣ ಶರ್ಮರಿಗೆ ನಮಸ್ಕಾರ.Dr. Lakshmisha J Hegade

ಒಪ್ಪಣ್ಣನ ಬೈಲಿನ ಬಂಧುಗಳ ಸಹಾಯ,ಆಶೀರ್ವಾದದಿಂದ ಹಾಗೂ ಶ್ರೀಗುರುಗಳ ಅನುಗ್ರಹದಿಂದ ನನ್ನ ಎಂಬಿಬಿಎಸ್ ಮುಗಿದು ಮೊನ್ನೆ ಮಾರ್ಚ್ 19 ಕ್ಕೆ ಪದವಿ ಪ್ರದಾನ ಸಮಾರಂಭ (graduation day) ನಡೆಯಿತು. ಈ ಸಂದರ್ಭದಲ್ಲಿ ಅಂದು ನನಗೆ ಸಹಾಯ ಮಾಡಿದ ಬೈಲಿನ ಬಂಧುಗಳಿಗೆ ಧನ್ಯವಾದ ಹೇಳುವುದು ನನ್ನ ಕರ್ತವ್ಯ.ಹಾಗಾಗಿ ಕೆಳಗಿನ ಪ್ಯಾರಾದಲ್ಲಿ ಬರೆದಿರುವ ಬರಹವನ್ನು ಒಪ್ಪಣ್ಣ ಜಾಲತಾಣದಲ್ಲಿ ಹಾಕಬೇಕಾಗಿ ವಿನಂತಿ.

ಹರೇರಾಮ.
ಧನ್ಯವಾದಗಳು

ಲಕ್ಷ್ಮೀಶ ಜೆ.ಹೆಗಡೆ

~~~~

ಹರೇರಾಮ.

ಒಪ್ಪಣ್ಣನ ಬೈಲಿನ ಎಲ್ಲ ಬಂಧುಗಳಿಗೆ ನಮಸ್ಕಾರ. ಆನು ಲಕ್ಷ್ಮೀಶ ಜೆ.ಹೆಗಡೆ. ನಿಂಗಕ್ಕೆಲ್ಲ ನೆನೆಪಿದ್ದಿಕ್ಕು. 2011 ರಲ್ಲಿ ಆನು CET ಯಲ್ಲಿ 728 rank ತೆಗೆದು ಎಂಬಿಬಿಎಸ್ ಮಾಡ ಕನಸು ಕಾಣ್ತಾ ಇಪ್ಪಕ್ಕರೆ ಯನ್ನ ಕನಸಿಗೆ ದೊಡ್ಡ ಮಟ್ಟದಲ್ಲಿ ಆರ್ಥಿಕ ಸಹಾಯ ಮಾಡಿ ಆನು ಎಂಬಿಬಿಎಸ್ ಓದ ಹಾಂಗೆ ಮಾಡಿದಿ ಬೈಲಿನ ಬಂಧುಗಳೆಲ್ಲ. ಈಗ ಒಂದು ವರ್ಷದ Internship ಕೂಡ ಮುಗಿದು ಯನ್ನ ಎಂಬಿಬಿಎಸ್ ಸಂಪೂರ್ಣ ಆತು. ಮೊನ್ನೆ ಮಾರ್ಚ್ 19 ನೇ ತಾರೀಖು ಪದವಿ ಪ್ರದಾನ ಸಮಾರಂಭ (graduation day) ನಡತ್ತು. ಈ ಸಂತೋಷದ ವಿಷಯನ  ಒಪ್ಪಣ್ಣನ ಬೈಲಿನ ಎಲ್ಲ ಬಂಧುಗಳ ಜೊತಿಗೆ ಹಂಚಿಕ್ಯಂಬ್ದು ಯನ್ನ ಕರ್ತವ್ಯ. ಅವತ್ತು ಆನು ಎಂಬಿಬಿಎಸ್ ಸೇರಕ್ಕಾರೆ ನಿಂಗ ಎಲ್ಲ  ಆರ್ಥಿಕ ಸಹಾಯ ಮಾಡದೇ ಇದ್ದಿದ್ರೆ ಆನು ಮೆಡಿಕಲ್ ಓದದು ಊಹಿಸಲೂ ಕಷ್ಟ ಆಗ್ತಿತ್ತು. ನಿಂಗಳ ಎಲ್ಲರ ಸಹಕಾರದಿಂದ ಯನ್ನ ಐದುವರೆ ವರ್ಷಗಳ ಪಯಣ ನಿರಾತಂಕವಾಗಿ ಸಾಗಿ ಮೊನ್ನೆ ಮಾರ್ಚ್ ಹತ್ತೊಂಬತ್ತಕ್ಕೆ ಪದವಿ ತಗಂಡು ಆನು Officially ಡಾಕ್ಟರ್ ಆದಿ ಈಗ.

ಅವತ್ತು ಯಂಗೆ ಸಹಾಯ ಮಾಡಿದ ಬೈಲಿನ ಎಲ್ಲ ಬಂಧುಗಳಿಗೂ ಯನ್ನ ಅನಂತಾನಂತ ಕೃತಜ್ಞತೆಗಳು.ಇದರ ಜೊತೆ ಆನು ಪದವಿ ತಗತ್ತಾ ಇಪ್ಪ ಕ್ಷಣದ ಫೋಟೋವನ್ನು ಮತ್ತು ಪ್ರಶಸ್ತಿ ಪತ್ರನ ಲಗತ್ತಿಸಿದ್ದಿ. ಎಲ್ಲರೂ ನೋಡಿ ಆಶೀರ್ವದಿಸಕ್ಕು. ಮುಂದೆ MD ಅಥವಾ MS ಮಾಡ ಆಲೋಚನೆ ಇದ್ದು ಯಂಗೆ.ಅದಕ್ಕೂ ಬೈಲಿನ ಎಲ್ಲ ಬಂಧುಗಳ ಆಶೀರ್ವಾದ ಬೇಕು ಯಂಗೆ.

ಮತ್ತೊಮ್ಮೆ ಬೈಲಿನ ಎಲ್ಲ ಬಂಧುಗಳಿಗೂ ಧನ್ಯವಾದ. ನಿಂಗಳೆಲ್ಲರ ಪ್ರೀತಿ,ಆಶೀರ್ವಾದ ಮತ್ತು ಶ್ರೀಗುರುಗಳ ಅನುಗ್ರಹ ಎನ್ನ ಮೇಲೆ ಸದಾ ಇರಲಿ.

ಹರೇರಾಮ

-ಲಕ್ಷ್ಮೀಶ ಜೆ.ಹೆಗಡೆ
s/o ಜಯರಾಮ ಹೆಗಡೆ
‘ಚಿತ್ರಭಾನು’
ಮಿಜಾರು ಪೋಸ್ಟ್
ಮಂಗಳೂರು ತಾಲೂಕು -574225
lakshmishahegademijar@gmail.com
Ph:8762735783

ಶರ್ಮಪ್ಪಚ್ಚಿ

   

You may also like...

3 Responses

  1. S.K.Gopalakrishna Bhat says:

    abhinandanego

  2. ಹರೇ ರಾಮ , ಅಭಿನಂದಂನೆಗೊ ಡಾ| ಲಕ್ಷ್ಮೀಶ ಹೆಗಡೆ. ನಿನ್ನ ಇಷ್ಟಾರ್ಥದಂತೆ ಮುಂದಿನ ಉಚ್ಚ ಶಿಕ್ಷಣ ಕೈಗೂಡಲಿ,

  3. ಬೊಳುಂಬು ಗೋಪಾಲ says:

    ಅಭಿನಂದನೆಗೊ. ಉಜ್ವಲ ಭವಿಷ್ಯ ನಿನ್ನದಾಗಲಿ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *