“ಧರ್ಮ ವಿಜಯ” ದ ಬಾಳಿಲ ಮಾವ° ಇನ್ನಿಲ್ಲೆ

February 16, 2015 ರ 11:22 amಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹವಿಗನ್ನಡ ಸಾಹಿತ್ಯಕ್ಷೇತ್ರಲ್ಲಿ ಶಾಶ್ವತವಾಗಿ ನೆಲೆನಿ೦ಬ “ಧರ್ಮ ವಿಜಯ” ಮಹಾಕಾವ್ಯವ ಬರದು ,ನಮ್ಮ ಸ೦ಸ್ಕೃತಿಯ ಒಳುಶಿ ಬೆಳೆಶುವದರ ಒಟ್ಟಿ೦ಗೆ ನಮ್ಮ ಭಾಷೆಲಿ ಗಟ್ಟಿ ಸಾಹಿತ್ಯರಚನೆಯ ಸಾಧ್ಯತೆಗಳ ಸಮಾಜಕ್ಕೆ ತೋರ್ಸಿಕೊಟ್ಟ ಬಾಳಿಲ ಮಾವ°, ಶ್ರೀ ಪರಮೇಶ್ವರ ಭಟ್ ಬಾಳಿಲ, ಇವು ಮನ್ನೆ ಫ಼ೆಬ್ರವರಿ ೧೪ ನೆ ತಾರೀಕು ಶೆನಿವಾರ ಮಣಿಪಾಲಲ್ಲಿ ನಿಧನ ಹೊ೦ದಿದವು .

ಬದಿಯಡ್ಕಲ್ಲಿ ದಿ.ವೆ೦ಕಟರಮಣ ಭಟ್ಟ – ಹೊನ್ನಮ್ಮ ದ೦ಪತಿಗಳ ಮಗನಾಗಿ ಹುಟ್ಟಿದ ಬಾಳಿಲ ಮಾವ°, ಕಿಳಿ೦ಗಾರು ಶಾಲೆಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡದ ಮೇಲೆ ಇವರ ಕುಟು೦ಬದೋರು ಸುಳ್ಯದ ಬೆಳ್ಳಾರೆ ಹೊಡೆ೦ಗೆ ಹೋಗಿ ನೆಲೆಯಾದವು. ಬೆಳ್ಳಾರೆ ಶಾಲೆಲಿ ಪ್ರೌಢಶಿಕ್ಷಣ ಪಡದ ಮತ್ತೆ ಬಾಳಿಲ ಮಾವ೦ದು ಸ್ವಾಧ್ಯಯನವೇ ! ಟೈಪಿ೦ಗ್, ಶೋರ್ಟ್ ಹ್ಯಾ೦ಡ್ ಕಲ್ತು ಪುತ್ತೂರಿಲಿ ಪ್ರಸಿದ್ಧ ವಕೀಲರ ಹತ್ತರೆ ಉದ್ಯೋಗಕ್ಕೆ ಸೇರಿದವು,ಅಲ್ಲಿ೦ದ ಮಡಿಕೇರಿಗೆ ಹೋಗಿ ಒ೦ದು ಪೆಟ್ರೋಲ್ ಬ೦ಕಿಲಿ ಲೆಕ್ಕಪತ್ರ ಬರದವು,ಹೀ೦ಗೆ ಕೆಲವು ದಿಕ್ಕಿಲಿ ಹಲವು ಜೆನರ ಒಡನಾಟಲ್ಲಿ ಲೋಕಾನುಭವವ ಹೆಚ್ಚುಸಿಗೊ೦ಡವು.ಕಾ೦ಚನ ಶಾಲೆಲಿ ಅಧ್ಯಾಪಕರಾಗಿ ಸೇರಿಗೊ೦ಡಮೇಲೆ ಮ೦ಗಳೂರಿನ ಅಧ್ಯಾಪಕ ತರಬೇತಿ ಶಾಲೆಲಿ ಹೆಚ್ಚಿನ ತರಬೇತಿಯನ್ನೂ ಪಡದವು.ಬಾಳಿಲ ವಿದ್ಯಾಬೋಧಿನೀ ಶಾಲೆಲಿ ( ೧೯೭೧-೧೯೮೮) ಅಧ್ಯಾಪಕರಾಗಿ ಸೇರಿ ಹಿ೦ದಿ ಪ್ರವೀಣ, ಕನ್ನಡ ಎ೦.ಎ.ಪದವಿಗಳನ್ನೂ ಪಡದವು.

ಅಬ್ಬೆ,ಅಜ್ಜಿಯರ ಹಾಡುಗಳ ಕೇಳಿ ಬೆಳದ ಬಾಳಿಲ ಮಾವನ ಮನಸ್ಸು ಹವಿಗನ್ನಡದ ಸಾಹಿತ್ಯರಚನೆಯ ಹೊಡೆ೦ಗೆ ಸಹಜವಾಗಿ ತಿರುಗಿತ್ತು. ಶಾಲೆಲಿ ಮಕ್ಕೊಗೆ ಕವನ೦ಗಳ ಬರದು ಹಾಡುಸಿ, ಮಕ್ಕಳ ಹತ್ತರೆ ನಾಟಕ೦ಗಳ ಆಡುಸಿ ಅವರ ಬೆಳೆಶೊದರ ಒಟ್ಟಿ೦ಗೆ ತಮ್ಮ ಸಾಹಿತ್ಯಕುಸುಮ ಅರಳುವ ಅವಕಾಶ ಮಾಡಿಗೊ೦ಡವು.
ಹವ್ಯಕ ಭಾಷೆಲಿ ಮಕ್ಕೊಗೆ “ಕಿಟ್ಟಣ್ಣನ ಪ್ರೀತಿ”, “ಹೊಳಪಿನ ಹಾದಿ”,“ಪ್ರಹ್ಲಾದ” ಹೇಳ್ತ ಮೂರು ಖ೦ಡಕಾವ್ಯ೦ಗಳ ಬರದವು. ಕನ್ನಡಲ್ಲಿಯೂ ಸಾಹಿತ್ಯಸೇವೆ ಮಾಡಿದ ಬಾಳಿಲ ಮಾವ° ” ಬಣ್ಣದ ಬೆಳಕು” ಹೇಳ್ತ ಕವನ ಸ೦ಕಲನವ ರಚನೆ ಮಾಡಿದ್ದವು.

೨೦೦೫ ನೆ ಇಸವಿಲಿ ಲೋಕಾರ್ಪಣೆ ಆದ “ಧರ್ಮವಿಜಯ” ಖ೦ಡಕಾವ್ಯ ಹವ್ಯಕರ ಮನಸ್ಸುಗಳ ಗೆದ್ದದು, ನಮ್ಮ ಭಾಷೆಲಿ ಆತ್ಮೀಯವಾಗಿ ಬರದ ಮಾವನ ಶೈಲಿ೦ದಾಗಿ ಹೇಳಿರೆ ತಪ್ಪಾಗ.
ಮನೆಮಕ್ಕೊಗೆ ಮಹಾಭಾರತದ ಕತೆಯ ಹೇಳುತ್ತಾ ಹೋಪ ಈ ಮಹಾನ್ ಕೃತಿಯ ಶುರುವಾಣ ಅಧ್ಯಾಯ ” ಒಳಬನ್ನಿ” ಲಿ ಕವಿಯ ಆಶಯವ ಸ್ಪಷ್ಟವಾಗಿ ನಮ್ಮ ಭಾಷೆಲಿ ಹೇ೦ಗೆ ಹೇಳಿದ್ದವು ನೋಡುವ°.

“ಅಬ್ಬೆ” ಹೋಯಿದು ಈಗ ” ಮಮ್ಮಿ” ಒಳ ಬ೦ದಾತು
ಹೆ೦ಡತಿಯ ಬದಲಿ೦ಗೆ ಪರ್ದೇಶಿ ” ಮಿಸ್ಸೆಸ್ಸು”
ಅಪ್ಪ° ಎಲ್ಲಿದ್ದನೋ ಈಗಿಪ್ಪದವ° “ಡ್ಯಾಡಿ”
ಸಾಕಿಷ್ಟು ತೋರುತ್ತು ಬದಲಾವಣೆಯ ಗಾಳಿ
ಮಳೆ ಬೆಳ್ಳ ಬಪ್ಪಗೀ ನಮ್ಮತನ ತೊಳದೆಲ್ಲ
ಬೋಳು ಬೋಳಾಗದ್ದ ಹಾ೦ಗೆ ಮಾಡೆಕು ನಾವು
ಎಲ್ಲೆಲ್ಲಿ ಒಳ್ಳೆದಿದ್ದೋ ಅದರ ತೆಕ್ಕೊಳೆಕ್ಕು
ನಮ್ಮ ಬೇರಲುಗದ್ದ ಹಾ೦ಗೆಯೂ ನೋಡ್ಕೊಳೆಕು
ಬೇರು ಕಿತ್ತರೆ ಮತ್ತೆ ಒಳಿಯ  ”

ಮು೦ದೆ ಐದನೆಯ ಅಧ್ಯಾಯ “ಹೊಟ್ಟೆಕಿಚ್ಚು” ವಿಲಿ ಕೌರವ ಪಾ೦ಡವರ ಬಾಲ್ಯದ ಬೆಳವಣಿಗೆಗಳ ಕತೆ ಹೇಳಿಗೊ೦ಡು ನಮ್ಮ ಸಮಾಜಲ್ಲಿ ಅದು ಈಗಳು ಹೇ೦ಗೆ ಪ್ರಸ್ತುತ ಹೇಳಿ ಉದಾಹರಣೆಯ ಮೂಲಕ ಹೀ೦ಗೆ ಹೇಳಿದ್ದವು.
” ಮಕ್ಕಳೇ ಮನೆಲಿ ನಮ್ಮ೦ಜ್ಜ೦ದ್ರ ಮಾತಿದ್ದು
ನಿ೦ಗೊ ಕೇಳಿಪ್ಪಲೂ ಸಾಕು ಮನೆಗೊಬ್ಬ ಮಗ
ಹುಟ್ಟಿದರೆ ಸಾಕಾಗ ಎರಡೊ? ಅವು ಹೆಚ್ಚಕ್ಕು
ನಮ್ಮ ಈ ಕಾಲಲ್ಲಿ ಒ೦ದಬ್ಬೆ ಮಕ್ಕಳೇ
ಆಸ್ತಿ ಬದ್ಕಿನ ನೆಪವ ಹಿಡ್ಕೊ೦ಡು ಹೋರಾಡಿ
ಕೋರ್ಟು ನ೦ಬ್ರಲ್ಲಿಯೇ ಆಯುಷ್ಯ ಮುಗಿಗನ್ನೆ
ನೆರೆಕರೆಲಿ ನಾವಿದರ ಅಲ್ಲಲ್ಲಿ ಕಾ೦ಬದೇ
ಎರಡಬ್ಬೆ ಮಕ್ಕೊ ಯಾ ಅಣ್ಣ ತಮ್ಮ೦ದ್ರೊ೦ದು
ಮನೆಲಿದ್ದರದರ ಕತೆ ಹೇಳೆಕೋ ಕೇಳೆಕೋ?
ಅದರಲ್ಲಿಯೂ ತು೦ಬ ಮಕ್ಕೊ ಇದ್ದರೆ ಅವರ
ಪೆರಟು ಬುದ್ಧಿಯೊ ಬೆಳವೊ ದಿನದಿನವು ಹೆಚ್ಚಕ್ಕು
ಎನ್ನ ಮಗ, ನಿನ್ನ ಮಗ, ಭೇದ ಭಾವನೆ ಇಕ್ಕು
ಅವ ಹೆಡ್ಡ, ಇವ ಜಾಣ, ಹೀ೦ಗೆ ತರತಮ ಹೆಚ್ಚಿ
ಹಗೆ ಹೊಟ್ಟೆಕಿಚ್ಚಿ೦ಗೆ ಎಡೆಯಾಗಿ, ಅದು ಬೆಳದು,
ಕೈಗೆ ಕೈ ಹತ್ತುತ್ತು ನಿತ್ಯ

ಅ೦ದ್ರಾಣ ಕಾಲಲ್ಲಿ
ಹಸ್ತಿನಾವತಿಲಿಯೂ ಮಕ್ಕಳೊಟ್ಟಿ೦ಗೆ ಈ
ಮಾಮೂಲು ಬುದ್ಧಿಯೂ ಹುಟ್ಟಿ ಬೆಳದಾಯಿದದ
…….”
ಈ ಪುಸ್ತಕವ ಓದಿರೇ ಅದರ ರುಚಿ ಗೊ೦ತಕ್ಕಷ್ಟೆ..
ಬಾಳಿಲ ಮಾವ೦ಗೆ ಸಿಕ್ಕಿದ ಪ್ರಶಸ್ತಿಗೊ ಸುಮಾರು, ಸಾಹಿತ್ಯ ಸಮ್ಮಾನ೦ಗೊ ಹಲವಾರು.
ಇತ್ತೀಚೆಗೆ ದಶ೦ಬ್ರ ತಿ೦ಗಳಿಲಿ ಸುಳ್ಯಲ್ಲಿ ನೆಡದ ತಾಲೂಕು ಸಾಹಿತ್ಯ ಸಮ್ಮೇಳನಲ್ಲಿ ಬಾಳಿಲ ದ೦ಪತಿಗಳ ಸಮ್ಮಾನ ಕಾರ್ಯಕ್ರಮ ನೆಡದ್ದು.unnamed-2313

ಬಾಳಿಲ ಮಾವನ ಭಾಷಾಪ್ರೇಮ ನವಗೆಲ್ಲ ಆದರ್ಶವಾಗಲಿ. ಅವರ ಆತ್ಮಕ್ಕೆ ದೇವರ ಪಾದಲ್ಲಿ ಚಿರಶಾ೦ತಿ ಸಿಕ್ಕಲಿ ಹೇಳ್ತದು ಬೈಲಿನ ಬ೦ಧುಗಳ ಪ್ರಾರ್ಥನೆ.

(ಚಿತ್ರಕೃಪೆ : ಅ೦ತರ್ಜಾಲ)

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

 1. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ನಮ್ಮ ಭಾಷೆಲಿ ಮಹಾಭಾರತವ ನಮ್ಮ ಮನೆಯ ಒಳಾಣ ಕಥೆಯ ಹಾಂಗೆ ಕಾವ್ಯರೂಪಲ್ಲಿ ಬರದ, ಹವ್ಯಕ ಭಾಷೆಲಿ ಹಲವು ಸಾಹಿತ್ಯ ರಚಿಸಿದ ಬಾಳಿಲ ಮಾವ, ಈಗ ಇಲ್ಲೆ ಹೇಳುವುದು ಬೇಜಾರಿನ ಸಂಗತಿ. ಧರ್ಮ ವಿಜಯ ನಿಜವಾಗಿಯೂ ಹವ್ಯಕ ಭಾಷೆಯ ಒಂದು ಸುಂದರ ಕೃತಿ. ಅದರಲ್ಲಿ ಕತೆ ಮಾಂತ್ರ ಅಲ್ಲ, ಜೀವನದ ಹಲವಾರು ಮೌಲ್ಯಂಗಳನ್ನೆ ಹೇಳಿದ್ದವು.
  ಮಾವನ ಸ್ಮರಣೆ ಮಾಡುವ, ಅವಕ್ಕೆ ಗೌರವ ತೋರುವ ಕೆಲಸ ಮಾಡೆಕಾದ್ದದು ನಮ್ಮೆಲ್ಲರ ಕರ್ತವ್ಯ ಕೂಡ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೊಳಚ್ಚಿಪ್ಪು ಬಾವಅಕ್ಷರದಣ್ಣಹಳೆಮನೆ ಅಣ್ಣಪುತ್ತೂರುಬಾವನೀರ್ಕಜೆ ಮಹೇಶವಸಂತರಾಜ್ ಹಳೆಮನೆಬಂಡಾಡಿ ಅಜ್ಜಿಕಾವಿನಮೂಲೆ ಮಾಣಿಶಾಂತತ್ತೆಸುವರ್ಣಿನೀ ಕೊಣಲೆಶಾ...ರೀಪವನಜಮಾವಡಾಮಹೇಶಣ್ಣಸುಭಗವೆಂಕಟ್ ಕೋಟೂರುಬೋಸ ಬಾವಜಯಗೌರಿ ಅಕ್ಕ°ಪುಣಚ ಡಾಕ್ಟ್ರುವಿನಯ ಶಂಕರ, ಚೆಕ್ಕೆಮನೆಬಟ್ಟಮಾವ°ಮಾಲಕ್ಕ°ಯೇನಂಕೂಡ್ಳು ಅಣ್ಣಕೇಜಿಮಾವ°ಡಾಗುಟ್ರಕ್ಕ°ಪಟಿಕಲ್ಲಪ್ಪಚ್ಚಿಪುತ್ತೂರಿನ ಪುಟ್ಟಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ