ಪ್ರತಿಭಾವ೦ತ ವಿದ್ಯಾರ್ಥಿನಿ ಕುಮಾರಿ ವೈದೇಹಿ

ಕರ್ನಾಟಕ ರಾಜ್ಯದ ಪ್ರೌಢ ಶಿಕ್ಷಣ ಮಂಡಳಿ (KSEB) ನಡೆಶುವ ಹತ್ತನೇ ತರಗತಿ ಪರೀಕ್ಷೆಲಿ ಕುಮಾರಿ ವೈದೇಹಿ ಉತ್ತಮ ಸಾಧನೆ ಮಾಡಿ ಹೆತ್ತವಕ್ಕೆ, ಶಾಲೆಗೆ ಹಾಂಗೂ ನಮ್ಮ ಸಮಾಜಕ್ಕೆ ಹೆಮ್ಮೆ ತಂದುಕೊಟ್ಟಿದವು ಹೇಳುಲೆ ಸಂತೋಷ ಆವುತ್ತು.

ಉಪ್ಪಿನಂಗಡಿಯ ಹತ್ರದ ಒಂದು ಹಳ್ಳಿಲಿಪ್ಪ ಸರಕಾರಿ ಕನ್ನಡ ಮಾಧ್ಯಮ ಶಾಲೆಲಿ ಕಲ್ತ ವೈದೇಹಿ ಅಪ್ಪನ ಹೆಸರು ಪಿಲಿಕುಡೇಲು ಶ್ರೀಕೃಷ್ಣ ಭಟ್,ಅಮ್ಮನ ಹೆಸರು ಉಮಾ. ಇಂಗ್ಲೀಶ್ – 88, ಸಮಾಜ – 96, ಕನ್ನಡ -122, ಹಿಂದಿ-98, ಗಣಿತ-99, ವಿಜ್ಞಾನ -97 ಅ೦ಕ ಪಡಕ್ಕೊಂಡು ಒಟ್ಟು 600/625 ಪಡದ್ದವು ಹೇಳುದು ಹೆಮ್ಮೆಯ ವಿಷಯ.

ವೈದೇಹಿ ಮುಂದಾಣ ವಿದ್ಯಾಭ್ಯಾಸ ಸಾಂಗವಾಗಿ ನೆರವೇರಲಿ, ಜೀವನಲ್ಲಿ ಜಯಶಾಲಿಯಾಗಲಿ ಹೇಳುದು ನಮ್ಮ ಬೈಲಿನ ಹಾರೈಕೆ.

ನಮ್ಮ ಬೈಲಿನ ಪವನಜ ಮಾವನ ಭಾವನ ಮಗಳಾದ ವೈದೇಹಿಯ ಪಟ ಇತ್ತೀಚೆಗೆ ಬೈಲಿನ ಸಮಸ್ಯಾಪೂರಣಲ್ಲಿ ಬ೦ದದು ನಿ೦ಗೊಗೆ ನೆ೦ಪಿಕ್ಕು.

Vaidehi-Bhatಪುಟ್ಟು ಕ೦ಜಿ

ಶುದ್ದಿಕ್ಕಾರ°

   

You may also like...

8 Responses

 1. ರಘು ಮುಳಿಯ says:

  ಅಭಿನಂದನೆ .ಕನ್ನಡ ಮಾಧ್ಯಮಲ್ಲಿ ಕಲಿತ್ತಾ ಇಪ್ಪ ವೈದೇಹಿಯ ಈ ಸಾಧನೆ ನೋಡಿ ಹೆಮ್ಮೆ ಆವುತ್ತು . ಮು೦ದೆಯೂ ಸಾಧನೆಯ ಮೆಟ್ಟಲುಗಳ ಏರಿ ನಿ೦ದು ಯಶಸ್ವಿಯಾಗಲಿ ಹೇಳಿ ಹಾರೈಕೆಗೋ .

 2. ಸರಕಾರಿ ಶಾಲೆಗಳ ಈಗಿನ ಪರಿಸ್ಥಿತಿ ಹೇಂಗಿದ್ದೂಳಿ ನಿಂಗೊಗೆಲ್ಲ ಗೊಂತಿಕ್ಕು. ಸರಿ ಪಾಠ ಮಾಡುವವು ಇಲ್ಲೆ. ಕೆಲವೊಕ್ಕೆ ಸರಿಯಾಗಿ ಕನ್ನಡ ಮಾತಾಡ್ಲೂ ಎಡಿತ್ತಿಲ್ಲೆ. ಹಾಂಗಿಪ್ಪಗ ಈ ಕೂಸ ಹೆಚ್ಚಿನ ಪಾಠಂಗಳ ಅದುವೇ ಓದಿಕೊಮಡದ್ದು ಮಾತ್ರಲ್ಲದೆ ಬಾಕಿ ಮಕ್ಕೊಗೂ ಹೇಳಿ ಕೊಟ್ಟಿದು. ಅದಕ್ಕೆ ಇಂಗ್ಲಿಶಿಲಿ ಮಾತ್ರ ಸ್ವಲ್ಪ ಮಾರ್ಕು ಕಮ್ಮಿ ಆದದ್ದು. ಪೇಂಟೆಲಿದ್ದುಕೊಂಡು ಇಂಗ್ಲಿಶ್ ಮೀಡಿಯಂಲಿ ಕಲ್ತು, ಕೋಚಿಂಗಿಗೆ ಹೋಗಿ ಮಾರ್ಕು ತೆಗದವರ ಸಾಧನೆಂದ ಈ ಕೂಸಿನ ಸಾಧನೆ ಎಷ್ಟೋ ದೊಡ್ಡದು.

 3. Manjunatha Prasad K says:

  ವೈದೇಹಿಗೆ ಮತ್ತೆ ಅದರ ಹೆತ್ತವಕ್ಕೆ ಹಾರ್ದಿಕ ಅಭಿನಂದನೆಗೋ . ವಿಧ್ಯೆಯೇ ನಮಗೆ ದೊಡ್ಡ ಆಸ್ತಿ .

 4. ತೆಕ್ಕುಂಜ ಕುಮಾರ ಮಾವ° says:

  ವೈದೇಹಿಗೆ ಅಭಿನಂದನೆ.
  ಪವನಜ ಹೇಳಿದ್ದು ನೂರಕ್ಕೆ ನೂರು ಸತ್ಯ.

 5. S.K.Gopalakrishna Bhat says:

  ಅಭಿನಂದನೆ ವೈದೇಹಿಗೆ.

 6. ಶರ್ಮಪ್ಪಚ್ಚಿ says:

  ಅಭಿನನಂದನೆಗೊ ವೈದೇಹಿಗೆ. ಒಳ್ಳೆ ರೀತಿಲಿ ವಿದ್ಯಾಭ್ಯಾಸ ಮಾಡಿ ಕೀರ್ತಿವಂತಳಾಗು.

 7. indiratte says:

  ಇದರ ಅಪ್ಪನ ಹೆಸರು ನೋಡುವಾಗ ಇದು ಎನ್ನ ಅಣ್ಣನ (ದೊಡ್ಡಮ್ಮನ ಮಗ) ಮಗನ ಮಗಳು ಹೇಳಿ ಗ್ರೇಶುತ್ತೆ . ಆರೇ ಆದರೂ ಈ ಕೂಸಿನ ಸಾಧನೆಗೆ ಶಹಬ್ಬಾಸ್! ಹೇಳಲೇಬೇಕು . ವೈದೇಹಿ ಮುಂದೆಯೂ ಯಶಸ್ಸಿನ ದಾರಿಲಿಯೇ ಸಾಗುತ್ತಿರಲಿ ಹೇಳಿ ಶುಭ ಹಾರೈಸುತ್ತೆ.

 8. ನಮ್ಮ ನೆರೆಕರೆಲೇ ಎಲೆಮರೆ ಕಾಯಿಯ ಹಾಂಗೆ ಬೆಳಗಿದ ವೈದೇಹಿ ಗೆ ಅಭಿನಂದನೆಗೊ. ಮುಂದಾಣ ವಿದ್ಯಾಭ್ಯಾಸ ಚೆಂದಕೆ ಸಾಗಲಿ. ಶುಭಾಯಂಗೊ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *