ಮಕ್ಕಳ ಮೇಳ

September 21, 2011 ರ 12:14 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪೆರ್ಲ ಪಡ್ರೆ ಚ೦ದು ಸ್ಮಾರಕ ಯಕ್ಷಗಾನ ಕೇ೦ದ್ರ ನಾಟ್ಯ ತರಬೇತಿ ಕೇ೦ದ್ರದ ಮಕ್ಕಳ ಮೇಳದ ಬಗ್ಗೆ ಆರಿ೦ಗಾದರೂ ಗೊ೦ತಿದ್ದಾ?
ಆಟ ನೋಡಿದ್ದಿರಾ?
ನೋಡದ್ದರೆ ಒ೦ದರಿ ನೋಡಿ.

ಸಬ್ಬಣಕೋಡಿ ರಾಮ ಭಟ್ ಇಲ್ಲಿಯ ನಾಟ್ಯ ಗುರು.
ಮಕ್ಕೊಗೆ ನಾಟ್ಯ ಕಲಿಸುಲೆ ತು೦ಬ ಕಷ್ಟ . ಆದರೆ ಈ ಮಕ್ಕಳ ನಾಟ್ಯ ನೋಡಿದರೆ ಮಕ್ಕಳ ಕಲಾಪ್ರೌಢಿಮೆ ಕಾಣ್ತು. ಇದರ ಹಿ೦ದೆ ರಾಮ ಭಟ್ಟರ ಶ್ರಮ ಕಾಣ್ತು.
ಇಲ್ಲಿ ೬ ವರ್ಷದ ಮಕ್ಕಳು ಇದ್ದವು ,೧೬ ವರ್ಷದ ಮಕ್ಕಳು ಇದ್ದವು. ಈಗಾಗಲೆ ಹಲವಾರು ಕಡೆ ಕಾರ್ಯಕ್ರಮ ಕೊಟ್ಟು ಜನ ಮೆಚ್ಚುಗೆ ಪಡದ್ದವು.
ಕೇರಳ ರಾಜ್ಯಮಟ್ಟದ ಕಲೋತ್ಸವ ಸ್ಪರ್ಧೆಲಿ ಪ್ರಥಮ ಬಹುಮಾನ ಪಡದ್ದವು.

ಎಡನೀರು, ಪೆರ್ಲ, ಬಜಕೂಡ್ಲು, ಇಡ್ಯಡ್ಕ, ಕೋಡಪದವು, ಬೆ೦ಗಳೂರಿನ ಎಡಿಎ ರ೦ಗಮ೦ದಿರ,………… ಮೇಲ್ಪಾಲ(ಕೊಪ್ಪ) ಹೀ೦ಗೆ ಹಲವು ಕಡೆಲಿ ಯಕ್ಷಗಾನ ಕಾರ್ಯಕ್ರಮ ಕೊಟ್ಟಿದವು.
ಕಲೆ ಅಳಿದು ಹೋವುತ್ತಾ ಇಪ್ಪ ಈ ಕಾಲಲ್ಲಿ ಯಕ್ಷಗಾನವ ಉಳಿಸುಲೆ ಈ ಮಕ್ಕೊಗೆ ಪ್ರೋತ್ಸಾಹ ಕೊಡುವ.
ಈ ಮಕ್ಕ   ಕೃಷ್ಣಲೀಲೆ, ಬಬ್ರುವಾಹನ ಕಾಳಗ, ವೀರಮಣಿ ಕಾಳಗ, ಮೀನಾಕ್ಷಿ ಕಲ್ಯಾಣ, ಶಶಿಪ್ರಭಾ ಪರಿಣಯ,ಪಾ೦ಚಜನ್ಯ, ನರಕಾಸುರ ಮೋಕ್ಷ…..ಪ್ರಸ೦ಗ೦ಗಳ ಪ್ರದರ್ಶನ ಕೊಟ್ಟಿದವು.

ಮಕ್ಕಳ ಮೇಳ, 5.0 out of 10 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಮುಳಿಯ ಭಾವ
  ರಘು ಮುಳಿಯ

  ಸಬ್ಬಣ್ಣಕೋಡಿ ರಾಮ ಭಟ್ತರ ಮಾರ್ಗದರ್ಶನಲ್ಲಿ ಪೆರ್ಲಲ್ಲಿ ಕಲಿತ್ತಾ ಇಪ್ಪ ಈ ಮಕ್ಕಳ ಯಕ್ಷಗಾನ ನೋಡದ್ದರೂ ಕೇಳಿ ಗೊ೦ತಿದ್ದು. ಉಡುಪಮೂಲೆಯ ಮಾಣಿಯ ‘ಏಕವ್ಯಕ್ತಿ’ ಬಬ್ರುವಾಹನ ಪ್ರದರ್ಶನ ಬೆ೦ಗಳೂರಿಲಿ ನೋಡಿತ್ತಿದ್ದೆ.
  ಅಳಿವು ಇಲ್ಲದ್ದ ಈ ಕಲೆಯ ಬೆಳೆಶುವ ಪ್ರಯತ್ನಲ್ಲಿ ಭಾಗಿಗೊ ಆಗಿಪ್ಪ ಗುರುಗಳಿ೦ಗೂ,ಮಕ್ಕೊಗೂ ಶುಭ ಹಾರೈಸುತ್ತೆ.
  ಅಕ್ಕಾ, ಊರಿಲಿ ಇವರ ಕಾರ್ಯಕ್ರಮ ಇಪ್ಪಗ ಬೈಲಿಲಿ ತಿಳುಶುವಿರಾ?ನವರಾತ್ರಿ ಸಮಯಲ್ಲಿ ಎಲ್ಯಾರು ಇದ್ದೊ?

  [Reply]

  VA:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಅದಪ್ಪು ರಘು, ನವರಾತ್ರಿಲಿ ಇದ್ದತ್ತು ಕಂಡ್ರೆ ನಾವು ಒಂದು ಕೈ ನೋಡಿಕ್ಕುವೊ°.
  ಫಟಂಗೊ ಲಾಯಿಕ್ಕಿದ್ದು.

  [Reply]

  VN:F [1.9.22_1171]
  Rating: 0 (from 0 votes)
 3. ಅನು ಉಡುಪುಮೂಲೆ
  ಅನುಪಮ

  ಉಡುಪುಮೂಲೆ ಮಾಣಿಯ ಅಮ್ಮ ಆನು.( @ ರಘು ಅಣ್ಣ ) ನವರಾತ್ರಿ ಲೆಕ್ಕಲ್ಲಿ ಸಕಲೇಶಪುರಲ್ಲಿ ಒಕ್ಟೋಬರ್ ೨ ನೇ ತಾರೀಖಿ೦ಗೆ ಶಶಿಪ್ರಭ ಪರಿಣಯ ಇದ್ದು. ಪೆರ್ಲ ಸತ್ಯನಾರಾಯಣ ಮ೦ದಿರಲ್ಲಿ ಒಕ್ಟೋಬರ್ ೫ ಕ್ಕೆ ಪಾ೦ಚಜನ್ಯ , ನರಕಾಸುರ ಮೋಕ್ಸ ಯಕ್ಷಗಾನ ಇದ್ದು. ಎಲ್ಲರೂ ಬನ್ನಿ………

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಓ,ಮೊನ್ನೆ ನಿ೦ಗಳ ನೃತ್ಯ ಕಾರ್ಯಕ್ರಮವೂ ಲಾಯ್ಕಾಗಿತ್ತು ಅಕ್ಕ.
  ಅಕ್ಟೋಬರ್ ೫ ಕ್ಕೆ ನಾವು ಕುಟು೦ಬ ಸಮೇತ ಪೆರ್ಲದ ಆಟಕ್ಕೆ..ಕುಮಾರ ಮಾವಾ ಹೇ೦ಗೆ,ಆಗದೋ? ಬೈಲಿ೦ದ ಆರೆಲ್ಲಾ ಇದ್ದಿ?

  [Reply]

  VA:F [1.9.22_1171]
  Rating: 0 (from 0 votes)
 4. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಒಕ್ಟೋಬರ್ ೫ ತಾರೀಕು ಸರಿ ಅಕ್ಕು ನವಗೆ ಅಲ್ಲದ ರಘು.
  ಹೇಳಿಕೆ ಕೊಟ್ಟದಕ್ಕೆ ಧನ್ಯವಾದ ಅಕ್ಕ.

  [Reply]

  VN:F [1.9.22_1171]
  Rating: 0 (from 0 votes)
 5. ಅನು ಉಡುಪುಮೂಲೆ
  ಅನುಪಮ

  ಎಲ್ಲರು ಬನ್ನಿ ….ಆಟ ಎಷ್ಟು ಗ೦ಟೆಗೆ ಹೇಳಿ ತಿಳಿಸುತ್ತೆ..

  [Reply]

  VA:F [1.9.22_1171]
  Rating: 0 (from 0 votes)
 6. ಚೆನ್ನೈ ಬಾವ°

  ಸಬ್ಬಣಕೋಡಿ ರಾಮಣ್ಣ ಹಲವು ಕೇಂದ್ರಂಗಳಲ್ಲಿ ನಾಟ್ಯ ತರಭೇತಿ ನೀಡಿ ಉತ್ತಮ ತಂಡ ರಚಿಸಿದ್ದವು. ಯಾವ ವೇಷಕ್ಕೂ ಸೈ ಸೈ ಎನಿಸಿಗೊಂಡ ರಾಮಣ್ಣನ ಶಿಷ್ಯಂದ್ರೂ ಏನೂ ಚಿಲ್ಲರೆ ಅಲ್ಲ.
  ಪಟ ಸುರುವಿಂಗೆ ಎನ್ಲಾರ್ಜ್ ಆಗದ್ದೆ ಇದ್ದಿದ್ದು ಅಪ್ಪು. ಆರೋ ಬೈಲ ಮೇಲೆ ಅಡ್ಡ ನಿಂದು ಉಪದ್ರ ಮಾಡಿಯೊಂಡಿದ್ದದು ಅಪ್ಪು. ಗುರಿಕ್ಕಾರ್ರು ಹೋಗಿ ಬಡಿಗೆ ತೆಗದು ಅಟ್ಟುಸಿಯಪ್ಪಗ ಸಮ ಆತು ನೋಡಿ. ಅಕ್ಕನ ಶುದ್ದಿಗೆ ಭಲೆ ಭಲೆ ಹೇಳಿತ್ತು – ‘ಚೆನ್ನೈವಾಣಿ’

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಮಾವ°ಬಟ್ಟಮಾವ°ಬೋಸ ಬಾವಸುಭಗಸುವರ್ಣಿನೀ ಕೊಣಲೆಶುದ್ದಿಕ್ಕಾರ°ಉಡುಪುಮೂಲೆ ಅಪ್ಪಚ್ಚಿಪುತ್ತೂರಿನ ಪುಟ್ಟಕ್ಕಕೆದೂರು ಡಾಕ್ಟ್ರುಬಾವ°ಹಳೆಮನೆ ಅಣ್ಣರಾಜಣ್ಣವಸಂತರಾಜ್ ಹಳೆಮನೆಮಾಲಕ್ಕ°ಚೆನ್ನೈ ಬಾವ°ಗಣೇಶ ಮಾವ°ಶ್ರೀಅಕ್ಕ°ಅನು ಉಡುಪುಮೂಲೆಬೊಳುಂಬು ಮಾವ°ದೀಪಿಕಾಸಂಪಾದಕ°ಶೇಡಿಗುಮ್ಮೆ ಪುಳ್ಳಿಪೆಂಗಣ್ಣ°ಡಾಮಹೇಶಣ್ಣವಿನಯ ಶಂಕರ, ಚೆಕ್ಕೆಮನೆಎರುಂಬು ಅಪ್ಪಚ್ಚಿವಿಜಯತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ