ಮಹಾನಗರದ ಮಹಾನ್ ಸಾಧಕಿ – ಡಾ.ಸುನಂದ ನಾರಾಯಣ ಭಟ್.

May 18, 2015 ರ 8:00 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಡಾ.ಸುನಂದ ನಾರಾಯಣ ಭಟ್.
ಡಾ.ಸುನಂದ ನಾರಾಯಣ ಭಟ್.

ಯಾವುದೇ ವೃತ್ತಿಲಿಪ್ಪೋರು  ನಿವೃತ್ತಿಗೆ ಹತ್ತರೆ ಬಪ್ಪಗ ಸಾಮಾನ್ಯವಾಗಿ ಮುಂದಾಣ ಯೋಚನೆ ಮಾಡೊದು ಹೇಂಗೆ ಹೇಳಿರೆ- ಎನ್ನ ಜೆವಾಬ್ದಾರಿ ಮುಗುತ್ತು ಇನ್ನು ಸಾಕು ಈ ತಲೆಬೆಶಿ, ಹೇಳಿ. ಮನೆಲಿ ಇದ್ದುಗೊಂಡು ಸಣ್ಣ ಪುಟ್ಟ ಕೆಲಸಂಗಳ(ಇದ್ದರೆ) ಮಾಡಿಗೊಂಡು ಕಾಲ ಕಳವದು, ವರ್ಷಲ್ಲಿ ಒಂದೊ ಎರಡೊ ಸರ್ತಿ ಮಕ್ಕ ಇಪ್ಪ ಜಾಗೆಗೆ ಹೋಗಿ ಅವರೊಟ್ಟಿಂಗೆ ಇದ್ದು ಬಪ್ಪದು,ಅಥವಾ ಕುಟುಂಬದೋರೆಲ್ಲ ಸೇರಿ ದೇಶ ಸುತ್ತಿ ಬಪ್ಪ ಆಲೋಚನೆಯೂ ಇರ್ತು ಹಲವರಿಂಗೆ. ಒಟ್ಟಾರೆ ಒತ್ತಡದ ಜೀವನ ಸಾಕು ಹೇಳಿ ಕಾಂಬದು ಸಾಮಾನ್ಯ. ಸುಮಾರು ಮೂವತ್ತೈದು ವರುಶಕ್ಕೂ ಹೆಚ್ಚಿನ ಸಮಯ ಕೆಲಸ ಮಾಡಿಗೊಂಡು,ಅದಕ್ಕೆ ಬೇಕಾಗಿ ಓಡಾಡಿ, ಒಟ್ಟಿಂಗೆ ಸಾಂಸಾರಿಕ ಜೆವಾಬ್ಧಾರಿಗಳ ನಿಭಾಯಿಸಿ ಒಂದು ಹಂತಕ್ಕೆ ತಪ್ಪಲ್ಲಿವರೆಗಾಣ ಹೊರೆ ಹೊತ್ತುಗೊಂಡಿತ್ತಿದ್ದ  ದೇಹಕ್ಕೆ ರಜ್ಜ ವಿಶ್ರಾಂತಿ ಬೇಕು ಹೇಳಿ ಕಾಂಬದು ತಪ್ಪಲ್ಲ. ಇವೆಲ್ಲ ಜೆವಾಬ್ದಾರಿಗಳ ಪೂರೈಸಿಯೂ, ಜೀವನಲ್ಲಿ ಮತ್ತೂ ಸಾಧನೆ ಮಾಡ್ಲೆ ಆವುತ್ತು ಹೇಳಿ ತೋರ್ಸಿ ಕೊಟ್ಟವೂ ಇರ್ತವು. ಹಾಂಗಿರ್ತ ಅಪರೂಪದ ವೆಗ್ತಿತ್ವದೋರ ಪೈಕಿ ಒಬ್ಬ ಡಾ. ಸುನಂದ ಭಟ್.

ಮುಂಬಾಯಿ ಮಹಾನಗರದ ಮಲಾಡಿನ ಕೊಲೇಜಿಲಿ ಪ್ರಕೃತ ಪ್ರಾಂಶುಪಾಲೆಯಾಗಿ ಕೆಲಸ ಮಾಡ್ತ ಇದ್ದವು.

ಇದರಲ್ಲಿ ಎಂತ ವಿಶೇಷ ಹೇದು ನಿಂಗೊಗೆ ಕಾಂಗು. ಅದವೇ ಈ ಶುದ್ಧಿ.

ಸುನಂದಕ್ಕ ನಮ್ಮ ನೆರೆಕರೆಯವೇ. ಪುತ್ತೂರಿನ ಪಂಜಿಗುಡ್ಡೆ ಶ್ರೀ ಈಶ್ವರ ಭಟ್ -ಶ್ರೀಮತಿ ಲಲಿತ ಇವರ ಮಗಳು.. ವಿದ್ಯಾಭ್ಯಾಸ ಪುತ್ತೂರು,ಕೊಡೆಯಾಲಲ್ಲಿ ಪೂರೈಸಿದವು. ಅರ್ಥಶಾಸ್ತ್ರಲ್ಲಿ ಎಮ್.ಎ. ಮುಗುಶಿಯಪ್ಪದ್ದೆ ಕುಂಬ್ಲೆ ಹತ್ತರಾಣ ಕಬೆಕೋಡು ಮನೆಗೆ ಸೊಸೆಯಾಗಿ ಸೇರಿದವು. ಕಬೆಕೋಡು ನಾರಾಯಣಣ್ಣಂಗೆ ದೂ…ರ ಬೊಂಬಾಯಿಲಿ ಕೆಲಸ. ಹಾಂಗೆ ಸುನಂದಕ್ಕನೂ ಬೊಂಬಾಯಿಗೆ ಬಂದು ಸೇರಿಗೊಂಡವು. ಕಲಿವಲೆ ಹುಶಾರಿತ್ತಿದ್ದ ಅಕ್ಕಂಗೆ, ತಾನು ಕಲ್ತದರ ಮಕ್ಕೊಗೆ ಕಲುಶೆಕ್ಕು ಹೇಳ್ತ ಆಶೆ.ನಾರಾಯಣಣ್ಣ ತಡದ್ದವಿಲ್ಲೆ,ಪ್ರೋತ್ಸಾಹವನ್ನೇ ಕೊಟ್ಟವು. ಅಕ್ಕಂಗೆ ಅಂಧೇರಿ ಹೇಳ್ತಲ್ಲಿ ಚಿನಾಯಿ ಕೊಲೆಜಿಲಿ ಉಪನ್ಯಾಸಕಿ ಕೆಲಸ ಸಿಕ್ಕಿತ್ತು. ಅಲ್ಲಿ ಮಕ್ಕೊಗೆ ಚೆಂದಕ್ಕೆ ಪಾಠ ಹೇಳಿಕೊಟ್ಟು ಕೊಲೇಜಿಲಿ ಒಳ್ಳೆ ಹೆಸರು ತೆಕ್ಕೊಂಡವು.ಎರಡು ಮಾಣಿಯಂಗೊ ಹುಟ್ಟಿ ಇವರ ಸಂಸಾರವೂ ದೊಡ್ಡ ಆತು. ಕೊಲೇಜಿಲಿ ಮಕ್ಕೊಗೆ ಕಲುಶುತ್ತ ಎಡೆಲಿ ತಾನೂ ಕಲಿವದರ ಮುಂದುವರಿಸಿದವು. ಮುಂಬೈ ವಿಶ್ವವಿದ್ಯಾಲಯಂದ ಎಮ್.ಫಿಲ್ ಪದವಿಯನ್ನೂ ಪಡಕ್ಕೊಂಡವು. ಸುನಂದಕ್ಕಂಗೆ ಮದಲಿಂದಲೇ ಥೀಸಿಸ್ ಬರೆಯೆಕ್ಕು,ಸಂಶೊಧನೆ ನಡೆಸೆಕ್ಕು ಹೇಳ್ತ ಗುರಿ ಇದ್ದತ್ತು.ಅದಕ್ಕೆ ಪೂರಕವಾಗಿ ಮುಂಬಯಿ ವಿಶ್ವವಿದ್ಯಾಲಯಲ್ಲಿ ಇವಕ್ಕೆ ಅವಕಾಶವೂ, ಒಳ್ಳೆ ಮಾರ್ಗದರ್ಶಕರೂ ಸಿಕ್ಕಿದವು. ಸಿಕ್ಕಿದ ಅವಕಾಶವ ಘಟ್ಟಿ ಹಿಡ್ಕೊಂಡವು,ಸುನಂದಕ್ಕ. ಗುರಿ ಸ್ಪಷ್ಟ ಇದ್ದತ್ತು, ಮಾರ್ಗದರ್ಶನಕ್ಕೆ ಕೊರತೆ ಬಯಿಂದಿಲೆ. ಅರ್ಥಶಾಸ್ತ್ರಲ್ಲಿ ಸಂಶೋಧನೆಗೆ ತೊಡಗಿದವು. ತೆಕ್ಕೊಂಡ ವಿಷಯ – ” ARECANUT AND COCOA PRODUCERS: PROBLEMS AND PROSPECTS ” with special reference to Dakshina Kannada and Uttara Kannada districts of Karnataka.

ಆದರೆ, ಕೊಶಿಲಿ ಜೀವನ ನಡೆಶಿಗೊಂಡಿತ್ತಿದ್ದ ಇವರ ಸಂಸಾರಲ್ಲಿ ಒಂದು ಅಘಾತ ಬಂತು.ಆರೋಗ್ಯಲ್ಲಿತ್ತಿದ್ದ ನಾರಾಯಣಣ್ಣ ಅಕಸ್ಮಾತ್ತಾಗಿ ಕಣ್ಮುಚ್ಚಿದವು. ಪ್ರಶಾಂತವಾಗಿಪ್ಪ ನೀರಿಂಗೆ ಕಲ್ಲು ಇಡ್ಕಿದ ಹಾಂಗಾತು ಇವರ ಸಂಸಾರ ನೌಕೆ. ಇಬ್ರು ಮಕ್ಕಳ ದಡ್ದಕ್ಕೆ ಮುಟ್ಟುಸಿ ಒಂದು ಹಂತಕ್ಕೆ ಬಂದಪ್ಪಗ ಸಮಯವೂ ಮುಂದೆ ಮುಂದೆ ಹೋತು. ಚಿನಾಯಿ ಕೊಲೇಜಿಲಿ ಪ್ರಾಂಶಪಾಲೆ ಹುದ್ದೆಗೆ ಏರಿದವು. ಕೊಲೇಜಿಲಿ ಇವಕ್ಕೆ ನಿವೃತ್ತಿ ಅಪ್ಪಲೆ ಹತ್ತರೆ ಬಂತು. ಸಂಸಾರದ ಹೊಣೆ ಹೊತ್ತುಗೊಂಡು, ಮಕ್ಕೊಗೆ ಪಾಠವನ್ನೂ ಹೇಳಿಕೊಟ್ಟು, ಕೊಲೇಜು ನಡೆಶುತ್ತ ಜೆವಾಬ್ಧಾರಿಯನ್ನೂ ನಿಭಾಯಿಸಿಗೊಂಡು, ತಾನು ಮಾಡೆಕ್ಕಾದ ಸಂಶೋಧನಾ ಕಾರ್ಯವನ್ನೂ ಮುಂದುವರಿಸಿದವು. ಕಳುದ ದಶಂಬ್ರಲ್ಲಿ ಇವಕ್ಕೆ ನಿವೃತ್ತಿ ಆತು.

ಆದರೆಂತ..! ಮುಂಬಾಯಿ ವಿಶ್ವವಿದ್ಯಾಲಯಂದ ಸುನಂದಕ್ಕನ ಪ್ರಬಂಧಕ್ಕೆ ಪಿ.ಎಚ್ ಡಿ. ಸಿಕ್ಕಿತ್ತು. ಇವರ ಸಾಧನೆಯ ಗುರುತಿಸಿ ಮಲಾಡಿನ ಘನಶ್ಯಾಮದಾಸ್ ಜಾಲನ್ ಕೊಲೇಜಿನೋರು ಪ್ರಾಂಶುಪಾಲೆಯಾಗಿ ಬರೆಕ್ಕು ಹೇಳಿ ಕೇಳಿದವು. ನಿವೃತ್ತಿ ನಂತ್ರವೂ ಸುನಂದಕ್ಕ ಡಾ.ಸುನಂದ ಭಟ್ ಆಗಿ ಒಂದು ಹೊಸ ಜೆವಾಬ್ದಾರಿ ತೆಕ್ಕೊಂಡಿದವು. ಆ ಜೆವಾಬ್ಧಾರಿಯ ಯಶಸ್ವಿಯಾಗಿ ನಿಭಾಯಿಸಿಗೊಂಡು ಬತ್ತಾ ಇದ್ದವು.

ಇವರ ಸಾಧನೆಗೆ ಈ ನುಡಿ-ಪುಷ್ಪ ಅರ್ಪಣೆ.

ಸಾಧನೆ ಮಾಡ್ಲೆ ಪ್ರಾಯ,(ಸಂಸಾರಿಕ)ಪಾಶ ಅಡ್ಡಿ ಬತ್ತಿಲೆ ಹೇಳಿ ತೋರ್ಸಿ ಕೊಟ್ಟ ಸುನಂದಕ್ಕ ನವಗೆಲ್ಲ ಆದರ್ಶಪ್ರಾಯರಾಗಿ ಎತ್ತರಲ್ಲಿ ಎದ್ದು ಕಾಣುತ್ತವು. ಸುನಂದಕ್ಕಂಗೆ ಅಭಿನಂದನೆ,ಅಭಿವಾದನೆ. 

~~~<>~~~

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಮುಳಿಯ ಭಾವ
  ರಘು ಮುಳಿಯ

  ಯಾ೦ತ್ರಿಕ ಜೀವನದ ಮುಂಬೈಯ ಹಾಂಗಿರ್ತ ಮಹಾನಗರಲ್ಲಿ ಇಷ್ಟು ದೊಡ್ಡ ಸಾಧನೆ ಮಾಡಿದ ಸುನಂದಕ್ಕನ ಪರಿಚಯ ಬೈಲಿನ ಬಂಧುಗೊಕ್ಕೆ ಆದ್ದದು ಸುಯೋಗವೇ ಸರಿ . ಮು೦ದಾಣ ಯುವ ಪೀಳಿಗೆಗೆ ಇವರ ಈ ಸಾಧನೆ ಆದರ್ಶವಾಗಲಿ . ಅಭಿನಂದನೆಗೋ .

  [Reply]

  VA:F [1.9.22_1171]
  Rating: 0 (from 0 votes)
 2. ಒಪ್ಪಣ್ಣ

  ನಮ್ಮ ಊರಿಲಿ ಹುಟ್ಟಿ ಬೆಳದು ಮೇಲೇರಿ ದೂ..ರದ ಬೊಂಬಾಯಿಲಿ ಕೋಲೇಜುಗಳ ಪ್ರಾಂಶುಪಾಲೆಯಾಗಿ ಯಶಸ್ವಿಯಾಗಿ ವೃತ್ತಿಜೀವನ ನೆಡೆಶಿದ, ಸಾಂಸಾರಿಕ ಜೀವನಲ್ಲಿ ಯಶಸ್ವಿಯಾಗಿ ಮನೆ ನಿರ್ವಹಿಸಿದ, ಸಂಶೋಧನೆ ನೆಡೆಶಿ ಡಾಕ್ಟ್ರಾದ, ಒಳ್ಳೆಯ ಹೆಸರು ಗಳುಸಿದ ಸುನಂದತ್ತೆಗೆ ನಮೋನಮಃ. ನಿಂಗಳ ಕಾರ್ಯಶ್ರದ್ಧೆ, ಸಾಧನೆ ಬೈಲಿನೋರಿಂಗೆ ಪ್ರೇರಣೆಯಾಗಲಿ.

  ಇಂತಹ ಮಹಾನ್ ಸಾಧಕಿಯ ಬಗ್ಗೆ ಬೈಲಿಂಗೆ ತಿಳುಶಿದ್ದಕ್ಕೆ ತೆಕ್ಕುಂಜೆಮಾವಂಗೆ – ಹರೇರಾಮ. ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)
 3. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಸುನಂದಕ್ಕನ ಸಾಧನೆಗೆ ನಮೋ ನಮಃ. ಮುಂಬಯಿಲಿ ಇದ್ದರೂ ಅವರ ಮನಸ್ಸಿನ ತುಡಿತ ದ.ಕ ಮತ್ತೆ ಉ.ಕನ್ನಡಕ್ಕೇ ಹೇಳಿ ಅವರ ಪ್ರಬಂಧದ ವಿಷಯ ಆಯ್ಕೆಲಿ ಗೊಂತಾವ್ತು

  [Reply]

  VA:F [1.9.22_1171]
  Rating: 0 (from 0 votes)
 4. ಚೆನ್ನೈ ಬಾವ°
  ಚೆನ್ನೈ ಭಾವ°

  ಹರೇ ರಾಮ . ದಾರಿ ದೀಪ

  [Reply]

  VA:F [1.9.22_1171]
  Rating: 0 (from 0 votes)
 5. ಗೋಪಾಲಣ್ಣ
  S.K.Gopalakrishna Bhat

  ಸುನಂದಕ್ಕನ ಪರಿಚಯಿಸಿದ್ದಕ್ಕೆ ಧನ್ಯವಾದ. ಇವು ಎಂಗಳ ಊರಿನವೇ ಆದರೂ ಎನಗೆ ಪರಿಚಯ ಇಲ್ಲೇ.

  [Reply]

  VA:F [1.9.22_1171]
  Rating: 0 (from 0 votes)
 6. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಪರಿಚಯ ಲೇಖನ ಲಾಯಕಿತ್ತು. ಮಹಾ ನಗರಲ್ಲಿ ಮಹಾ ಸಾಧಕಿ. ನಿಜವಾಗಿಯೂ ಅಪ್ಪು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೇಣಿಯಕ್ಕ°ದೊಡ್ಮನೆ ಭಾವಬಂಡಾಡಿ ಅಜ್ಜಿಪವನಜಮಾವಮುಳಿಯ ಭಾವಬೋಸ ಬಾವಶ್ರೀಅಕ್ಕ°ಬಟ್ಟಮಾವ°ಪುಟ್ಟಬಾವ°ಶೀಲಾಲಕ್ಷ್ಮೀ ಕಾಸರಗೋಡುವಿದ್ವಾನಣ್ಣಸುಭಗಗೋಪಾಲಣ್ಣಶರ್ಮಪ್ಪಚ್ಚಿಪ್ರಕಾಶಪ್ಪಚ್ಚಿಪಟಿಕಲ್ಲಪ್ಪಚ್ಚಿಅನಿತಾ ನರೇಶ್, ಮಂಚಿದೊಡ್ಡಭಾವವಾಣಿ ಚಿಕ್ಕಮ್ಮಕೇಜಿಮಾವ°ಡೈಮಂಡು ಭಾವಸಂಪಾದಕ°ಹಳೆಮನೆ ಅಣ್ಣಗಣೇಶ ಮಾವ°ಪುತ್ತೂರುಬಾವಕೊಳಚ್ಚಿಪ್ಪು ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ