Oppanna.com

“ಧರ್ಮ ವಿಜಯ” ದ ಬಾಳಿಲ ಮಾವ° ಇನ್ನಿಲ್ಲೆ

ಬರದೋರು :   ಮುಳಿಯ ಭಾವ    on   16/02/2015    14 ಒಪ್ಪಂಗೊ

ಹವಿಗನ್ನಡ ಸಾಹಿತ್ಯಕ್ಷೇತ್ರಲ್ಲಿ ಶಾಶ್ವತವಾಗಿ ನೆಲೆನಿ೦ಬ “ಧರ್ಮ ವಿಜಯ” ಮಹಾಕಾವ್ಯವ ಬರದು ,ನಮ್ಮ ಸ೦ಸ್ಕೃತಿಯ ಒಳುಶಿ ಬೆಳೆಶುವದರ ಒಟ್ಟಿ೦ಗೆ ನಮ್ಮ ಭಾಷೆಲಿ ಗಟ್ಟಿ ಸಾಹಿತ್ಯರಚನೆಯ ಸಾಧ್ಯತೆಗಳ ಸಮಾಜಕ್ಕೆ ತೋರ್ಸಿಕೊಟ್ಟ ಬಾಳಿಲ ಮಾವ°, ಶ್ರೀ ಪರಮೇಶ್ವರ ಭಟ್ ಬಾಳಿಲ, ಇವು ಮನ್ನೆ ಫ಼ೆಬ್ರವರಿ ೧೪ ನೆ ತಾರೀಕು ಶೆನಿವಾರ ಮಣಿಪಾಲಲ್ಲಿ ನಿಧನ ಹೊ೦ದಿದವು .

ಬದಿಯಡ್ಕಲ್ಲಿ ದಿ.ವೆ೦ಕಟರಮಣ ಭಟ್ಟ – ಹೊನ್ನಮ್ಮ ದ೦ಪತಿಗಳ ಮಗನಾಗಿ ಹುಟ್ಟಿದ ಬಾಳಿಲ ಮಾವ°, ಕಿಳಿ೦ಗಾರು ಶಾಲೆಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡದ ಮೇಲೆ ಇವರ ಕುಟು೦ಬದೋರು ಸುಳ್ಯದ ಬೆಳ್ಳಾರೆ ಹೊಡೆ೦ಗೆ ಹೋಗಿ ನೆಲೆಯಾದವು. ಬೆಳ್ಳಾರೆ ಶಾಲೆಲಿ ಪ್ರೌಢಶಿಕ್ಷಣ ಪಡದ ಮತ್ತೆ ಬಾಳಿಲ ಮಾವ೦ದು ಸ್ವಾಧ್ಯಯನವೇ ! ಟೈಪಿ೦ಗ್, ಶೋರ್ಟ್ ಹ್ಯಾ೦ಡ್ ಕಲ್ತು ಪುತ್ತೂರಿಲಿ ಪ್ರಸಿದ್ಧ ವಕೀಲರ ಹತ್ತರೆ ಉದ್ಯೋಗಕ್ಕೆ ಸೇರಿದವು,ಅಲ್ಲಿ೦ದ ಮಡಿಕೇರಿಗೆ ಹೋಗಿ ಒ೦ದು ಪೆಟ್ರೋಲ್ ಬ೦ಕಿಲಿ ಲೆಕ್ಕಪತ್ರ ಬರದವು,ಹೀ೦ಗೆ ಕೆಲವು ದಿಕ್ಕಿಲಿ ಹಲವು ಜೆನರ ಒಡನಾಟಲ್ಲಿ ಲೋಕಾನುಭವವ ಹೆಚ್ಚುಸಿಗೊ೦ಡವು.ಕಾ೦ಚನ ಶಾಲೆಲಿ ಅಧ್ಯಾಪಕರಾಗಿ ಸೇರಿಗೊ೦ಡಮೇಲೆ ಮ೦ಗಳೂರಿನ ಅಧ್ಯಾಪಕ ತರಬೇತಿ ಶಾಲೆಲಿ ಹೆಚ್ಚಿನ ತರಬೇತಿಯನ್ನೂ ಪಡದವು.ಬಾಳಿಲ ವಿದ್ಯಾಬೋಧಿನೀ ಶಾಲೆಲಿ ( ೧೯೭೧-೧೯೮೮) ಅಧ್ಯಾಪಕರಾಗಿ ಸೇರಿ ಹಿ೦ದಿ ಪ್ರವೀಣ, ಕನ್ನಡ ಎ೦.ಎ.ಪದವಿಗಳನ್ನೂ ಪಡದವು.

ಅಬ್ಬೆ,ಅಜ್ಜಿಯರ ಹಾಡುಗಳ ಕೇಳಿ ಬೆಳದ ಬಾಳಿಲ ಮಾವನ ಮನಸ್ಸು ಹವಿಗನ್ನಡದ ಸಾಹಿತ್ಯರಚನೆಯ ಹೊಡೆ೦ಗೆ ಸಹಜವಾಗಿ ತಿರುಗಿತ್ತು. ಶಾಲೆಲಿ ಮಕ್ಕೊಗೆ ಕವನ೦ಗಳ ಬರದು ಹಾಡುಸಿ, ಮಕ್ಕಳ ಹತ್ತರೆ ನಾಟಕ೦ಗಳ ಆಡುಸಿ ಅವರ ಬೆಳೆಶೊದರ ಒಟ್ಟಿ೦ಗೆ ತಮ್ಮ ಸಾಹಿತ್ಯಕುಸುಮ ಅರಳುವ ಅವಕಾಶ ಮಾಡಿಗೊ೦ಡವು.
ಹವ್ಯಕ ಭಾಷೆಲಿ ಮಕ್ಕೊಗೆ “ಕಿಟ್ಟಣ್ಣನ ಪ್ರೀತಿ”, “ಹೊಳಪಿನ ಹಾದಿ”,“ಪ್ರಹ್ಲಾದ” ಹೇಳ್ತ ಮೂರು ಖ೦ಡಕಾವ್ಯ೦ಗಳ ಬರದವು. ಕನ್ನಡಲ್ಲಿಯೂ ಸಾಹಿತ್ಯಸೇವೆ ಮಾಡಿದ ಬಾಳಿಲ ಮಾವ° ” ಬಣ್ಣದ ಬೆಳಕು” ಹೇಳ್ತ ಕವನ ಸ೦ಕಲನವ ರಚನೆ ಮಾಡಿದ್ದವು.

೨೦೦೫ ನೆ ಇಸವಿಲಿ ಲೋಕಾರ್ಪಣೆ ಆದ “ಧರ್ಮವಿಜಯ” ಖ೦ಡಕಾವ್ಯ ಹವ್ಯಕರ ಮನಸ್ಸುಗಳ ಗೆದ್ದದು, ನಮ್ಮ ಭಾಷೆಲಿ ಆತ್ಮೀಯವಾಗಿ ಬರದ ಮಾವನ ಶೈಲಿ೦ದಾಗಿ ಹೇಳಿರೆ ತಪ್ಪಾಗ.
ಮನೆಮಕ್ಕೊಗೆ ಮಹಾಭಾರತದ ಕತೆಯ ಹೇಳುತ್ತಾ ಹೋಪ ಈ ಮಹಾನ್ ಕೃತಿಯ ಶುರುವಾಣ ಅಧ್ಯಾಯ ” ಒಳಬನ್ನಿ” ಲಿ ಕವಿಯ ಆಶಯವ ಸ್ಪಷ್ಟವಾಗಿ ನಮ್ಮ ಭಾಷೆಲಿ ಹೇ೦ಗೆ ಹೇಳಿದ್ದವು ನೋಡುವ°.

“ಅಬ್ಬೆ” ಹೋಯಿದು ಈಗ ” ಮಮ್ಮಿ” ಒಳ ಬ೦ದಾತು
ಹೆ೦ಡತಿಯ ಬದಲಿ೦ಗೆ ಪರ್ದೇಶಿ ” ಮಿಸ್ಸೆಸ್ಸು”
ಅಪ್ಪ° ಎಲ್ಲಿದ್ದನೋ ಈಗಿಪ್ಪದವ° “ಡ್ಯಾಡಿ”
ಸಾಕಿಷ್ಟು ತೋರುತ್ತು ಬದಲಾವಣೆಯ ಗಾಳಿ
ಮಳೆ ಬೆಳ್ಳ ಬಪ್ಪಗೀ ನಮ್ಮತನ ತೊಳದೆಲ್ಲ
ಬೋಳು ಬೋಳಾಗದ್ದ ಹಾ೦ಗೆ ಮಾಡೆಕು ನಾವು
ಎಲ್ಲೆಲ್ಲಿ ಒಳ್ಳೆದಿದ್ದೋ ಅದರ ತೆಕ್ಕೊಳೆಕ್ಕು
ನಮ್ಮ ಬೇರಲುಗದ್ದ ಹಾ೦ಗೆಯೂ ನೋಡ್ಕೊಳೆಕು
ಬೇರು ಕಿತ್ತರೆ ಮತ್ತೆ ಒಳಿಯ  ”

ಮು೦ದೆ ಐದನೆಯ ಅಧ್ಯಾಯ “ಹೊಟ್ಟೆಕಿಚ್ಚು” ವಿಲಿ ಕೌರವ ಪಾ೦ಡವರ ಬಾಲ್ಯದ ಬೆಳವಣಿಗೆಗಳ ಕತೆ ಹೇಳಿಗೊ೦ಡು ನಮ್ಮ ಸಮಾಜಲ್ಲಿ ಅದು ಈಗಳು ಹೇ೦ಗೆ ಪ್ರಸ್ತುತ ಹೇಳಿ ಉದಾಹರಣೆಯ ಮೂಲಕ ಹೀ೦ಗೆ ಹೇಳಿದ್ದವು.
” ಮಕ್ಕಳೇ ಮನೆಲಿ ನಮ್ಮ೦ಜ್ಜ೦ದ್ರ ಮಾತಿದ್ದು
ನಿ೦ಗೊ ಕೇಳಿಪ್ಪಲೂ ಸಾಕು ಮನೆಗೊಬ್ಬ ಮಗ
ಹುಟ್ಟಿದರೆ ಸಾಕಾಗ ಎರಡೊ? ಅವು ಹೆಚ್ಚಕ್ಕು
ನಮ್ಮ ಈ ಕಾಲಲ್ಲಿ ಒ೦ದಬ್ಬೆ ಮಕ್ಕಳೇ
ಆಸ್ತಿ ಬದ್ಕಿನ ನೆಪವ ಹಿಡ್ಕೊ೦ಡು ಹೋರಾಡಿ
ಕೋರ್ಟು ನ೦ಬ್ರಲ್ಲಿಯೇ ಆಯುಷ್ಯ ಮುಗಿಗನ್ನೆ
ನೆರೆಕರೆಲಿ ನಾವಿದರ ಅಲ್ಲಲ್ಲಿ ಕಾ೦ಬದೇ
ಎರಡಬ್ಬೆ ಮಕ್ಕೊ ಯಾ ಅಣ್ಣ ತಮ್ಮ೦ದ್ರೊ೦ದು
ಮನೆಲಿದ್ದರದರ ಕತೆ ಹೇಳೆಕೋ ಕೇಳೆಕೋ?
ಅದರಲ್ಲಿಯೂ ತು೦ಬ ಮಕ್ಕೊ ಇದ್ದರೆ ಅವರ
ಪೆರಟು ಬುದ್ಧಿಯೊ ಬೆಳವೊ ದಿನದಿನವು ಹೆಚ್ಚಕ್ಕು
ಎನ್ನ ಮಗ, ನಿನ್ನ ಮಗ, ಭೇದ ಭಾವನೆ ಇಕ್ಕು
ಅವ ಹೆಡ್ಡ, ಇವ ಜಾಣ, ಹೀ೦ಗೆ ತರತಮ ಹೆಚ್ಚಿ
ಹಗೆ ಹೊಟ್ಟೆಕಿಚ್ಚಿ೦ಗೆ ಎಡೆಯಾಗಿ, ಅದು ಬೆಳದು,
ಕೈಗೆ ಕೈ ಹತ್ತುತ್ತು ನಿತ್ಯ

ಅ೦ದ್ರಾಣ ಕಾಲಲ್ಲಿ
ಹಸ್ತಿನಾವತಿಲಿಯೂ ಮಕ್ಕಳೊಟ್ಟಿ೦ಗೆ ಈ
ಮಾಮೂಲು ಬುದ್ಧಿಯೂ ಹುಟ್ಟಿ ಬೆಳದಾಯಿದದ
…….”
ಈ ಪುಸ್ತಕವ ಓದಿರೇ ಅದರ ರುಚಿ ಗೊ೦ತಕ್ಕಷ್ಟೆ..
ಬಾಳಿಲ ಮಾವ೦ಗೆ ಸಿಕ್ಕಿದ ಪ್ರಶಸ್ತಿಗೊ ಸುಮಾರು, ಸಾಹಿತ್ಯ ಸಮ್ಮಾನ೦ಗೊ ಹಲವಾರು.
ಇತ್ತೀಚೆಗೆ ದಶ೦ಬ್ರ ತಿ೦ಗಳಿಲಿ ಸುಳ್ಯಲ್ಲಿ ನೆಡದ ತಾಲೂಕು ಸಾಹಿತ್ಯ ಸಮ್ಮೇಳನಲ್ಲಿ ಬಾಳಿಲ ದ೦ಪತಿಗಳ ಸಮ್ಮಾನ ಕಾರ್ಯಕ್ರಮ ನೆಡದ್ದು.unnamed-2313

ಬಾಳಿಲ ಮಾವನ ಭಾಷಾಪ್ರೇಮ ನವಗೆಲ್ಲ ಆದರ್ಶವಾಗಲಿ. ಅವರ ಆತ್ಮಕ್ಕೆ ದೇವರ ಪಾದಲ್ಲಿ ಚಿರಶಾ೦ತಿ ಸಿಕ್ಕಲಿ ಹೇಳ್ತದು ಬೈಲಿನ ಬ೦ಧುಗಳ ಪ್ರಾರ್ಥನೆ.

(ಚಿತ್ರಕೃಪೆ : ಅ೦ತರ್ಜಾಲ)

ಮುಳಿಯ ಭಾವ

14 thoughts on ““ಧರ್ಮ ವಿಜಯ” ದ ಬಾಳಿಲ ಮಾವ° ಇನ್ನಿಲ್ಲೆ

  1. ನಮ್ಮ ಭಾಷೆಲಿ ಮಹಾಭಾರತವ ನಮ್ಮ ಮನೆಯ ಒಳಾಣ ಕಥೆಯ ಹಾಂಗೆ ಕಾವ್ಯರೂಪಲ್ಲಿ ಬರದ, ಹವ್ಯಕ ಭಾಷೆಲಿ ಹಲವು ಸಾಹಿತ್ಯ ರಚಿಸಿದ ಬಾಳಿಲ ಮಾವ, ಈಗ ಇಲ್ಲೆ ಹೇಳುವುದು ಬೇಜಾರಿನ ಸಂಗತಿ. ಧರ್ಮ ವಿಜಯ ನಿಜವಾಗಿಯೂ ಹವ್ಯಕ ಭಾಷೆಯ ಒಂದು ಸುಂದರ ಕೃತಿ. ಅದರಲ್ಲಿ ಕತೆ ಮಾಂತ್ರ ಅಲ್ಲ, ಜೀವನದ ಹಲವಾರು ಮೌಲ್ಯಂಗಳನ್ನೆ ಹೇಳಿದ್ದವು.
    ಮಾವನ ಸ್ಮರಣೆ ಮಾಡುವ, ಅವಕ್ಕೆ ಗೌರವ ತೋರುವ ಕೆಲಸ ಮಾಡೆಕಾದ್ದದು ನಮ್ಮೆಲ್ಲರ ಕರ್ತವ್ಯ ಕೂಡ.

  2. ಮುಳಿಯ ರಘುವಣ್ಣ,ತೆಕ್ಕು೦ಜೆ ಕುಮಾರಮಾವ°ಹಾ೦ಗೂ ಸುಭಗಣ್ಣ ನಿ೦ಗಳ ಸಮ್ಮತಿಯ ನೋಡಿ ಧನ್ಯೋಸ್ಮಿ ಹೇದೆನಿಸಿತ್ತು.ಕೃತಜ್ಞತಗೊ.ಬಯಲಿನ ಬ೦ಧುಗೆಲ್ಲರಿ೦ದಲು ಪ್ರೋತ್ಸಾಹವ ಕೋರುವ°.

  3. ಸುದ್ದಿ ಓದಿಯಪ್ಪಗ ತು೦ಬ ಸ೦ಕಟ ಆತು.ಅವರ ಧರ್ಮ ವಿಜಯ ಮಹಾಕಾವ್ಯ ಹವ್ಯಕ ಭಾಷೆಗೆ ಮಹತ್ವದ ಸ್ಥಾನ ತ೦ದು ಕೊಟ್ಟ ಮದಲ ಮೇರುಕೃತಿ. ಇ೦ದು ಅವು ನಮ್ಮ ಅಗಲಿರು ಅವರ ಕೃತಿಗಳ ಮುಖಾ೦ತರ ಅವರ ಹೆಸರು ಚಿರಸ್ಥಾಯಿ. ಅಗಲಿದ ಅವರ ದಿವ್ಯಾತ್ಮಕ್ಕೆ ಚಿರಶಾ೦ತಿ ಕೋರುವದರೊಟ್ಟಿ೦ಗೆ ಬಯಲಿನ ಬ೦ಧುಗಳಲ್ಲಿ ಎನ್ನದೊ೦ದು ಸವಿನಯ ಕೋರಿಕೆ ಎ೦ತದು ಹೇದರೆ ಅವರ ಸ್ಮರಣೆ ಶಾಶ್ವತವಾಗಿಪ್ಪ ಹಾ೦ಗೆ ಪ್ರತಿ ಒರುಶವುದೆ ಅವರ ಹೆಸರಿಲ್ಲಿ ನಮ್ಮ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ವಾರ್ಷಿಕ ಕಾರ್ಯಕ್ರಮಲ್ಲಿ ಒ೦ದು ಒಳ್ಳೆಯ ಮೊತ್ತದ ಆರ್ಥಿಕ ಬಹುಮಾನವ ಆ ವರ್ಷದ ಉತ್ತಮ ಒಪ್ಪಣ್ಣನ ನೆರೆಕರೆ ಪ್ರತಿಷ್ಥಾನದ ಬಯಲಿಲ್ಲಿ ಪ್ರಕಟಿತ ಉತ್ತಮ ಹವಿಗನ್ನಡ ಕೃತಿಗೆ ಕೊಡುವ ಸತ್ಕಾರ್ಯವ ಹಮ್ಮಿಗೊ೦ಡರೆ ಅದುವೇ ಅವರ ದಿವ್ಯಾತ್ಮಕ್ಕೆ ನಾವು ಸಲ್ಸುವ ಅತಿಶ್ರೇಷ್ಠ ಶ್ರದ್ಧಾ೦ಜಲಿ ಹೇದು ಎನ್ನ ಗ್ರಹಿಕೆ. ಈ ಬಗ್ಗೆ ನಾವೆಲ್ಲರೂ ಚಿ೦ತಿಸಿ ಈ ಸತ್ಕಾರ್ಯಲ್ಲಿ ಒ೦ದು ನಿಧಿಯ ಒಟ್ಟು ಮಾಡಿ ಸ೦ಗ್ರಹವಾದ ಇಡಿಗ೦ಟಿನ ಬೇ೦ಕಿಲ್ಲಿ ನಿರಖು ಠೇವಣಿ ಮಡಗಿ ಅದರಿ೦ದ ಬಪ್ಪ ಬಡ್ಡಿಲಿ ಈ ಮೇಗೆ ಹೇಳಿದ ಬಹುಮಾನ ವಿತರಣೆಯ ಪ್ರತಿವರುಷವು ನೆಡೆಶಿಕೊ೦ಡು ಬಪ್ಪದು ಅತ್ಯುತ್ತಮ. ನಮ್ಮವೆಲ್ಲರೂ ಈ ಸತ್ಕಾರ್ಯಲ್ಲಿ ಓಕೊಡುಗು ಹೇದು ಗ್ರೆಹಿಶಿಗೊ೦ಡು ಈ ಒ೦ದು ವಿನ೦ತಿಯ ಬಯಲಿನ ಬ೦ಧುಗಳೆಲ್ಲರ ಮು೦ದೆ ಮಡಗಿದ್ದೆ.ಆರಿ೦ಗಾದರೂ ಇದು ಅಧಿಕಪ್ರಸ೦ಗ ಹೇದು ತೋರಿರೆ ದಯವಿಟ್ತು ಕ್ಷಮಿಸಿ.

    1. ಉಡುಪುಮೂಲೆ ಅಪ್ಪಚ್ಚಿ ಹೇಳಿದ ಸಲಹೆ ಖ೦ಡಿತಾ ಪಾಲಿಸೆಕ್ಕಾದ್ದು . ಬೈಲಿನ ಬಂಧುಗೊ ಒಗ್ಗೂಡಿ ಕೈಜೋಡುಸಿದರೆ ಹೀಂಗಿರ್ತ ಒಳ್ಳೊಳ್ಳೆ ಯೋಚನೆಗಳ ನನಸು ಮಾಡುಲೆ ಎಡಿಗು.
      ಧನ್ಯವಾದ ಅಪ್ಪಚ್ಚಿ .

    2. ಖಂಡಿತಾ ಮಾಡೆಕ್ಕು. ಈ ವಿಷಯಲ್ಲಿ ಉಡುಪಮೂಲೇ ಅಪ್ಪಚ್ಚಿಯ ಸಲಹೆ ಯೋಗ್ಯವಾಗಿದ್ದು.

    3. ಛೆ, ಅಧಿಕಪ್ರಸಂಗ ಖಂಡಿತ ಅಲ್ಲ ಅಪ್ಪಚ್ಚೀ,
      ಸಮಯೋಚಿತ ಸಲಹೆ ಇದು! ಬಾಳಿಲಮಾವನ ಸೇವೆಯ ಯೋಗ್ಯ ರೀತಿಲಿ ನಿರಂತರ ಸ್ಮರಣೆ; ಆ ಮೂಲಕ ಅವಕ್ಕೆ ಗೌರವ ಸಲ್ಲುಸುವ ಕಾರ್ಯವ ನಾವೆಲ್ಲರೂ ಸೇರಿ ಮಾಡುವೊ°

  4. ಶ್ರೀಯಕ್ಕ ಹೇಳುವ ಹಾಂಗೆ;ಸಾಹಿತ್ಯ ಪತ್ತಾಯ ತುಂಬಿಸಿದವರ ಪೈಕಿ ಪರಮೇಶ್ವರಣ್ಣಂದು ದೊಡ್ಡಪಾಲಿದ್ದು. ಬಾಳಿಲ ಪರಮೇಶ್ವರಣ್ಣಂಗೆ ೨೦೦೫ರಲ್ಲಿ ಬೆಂಗಳೂರಿನ ಹವ್ಯಕ ಅಧ್ಯಯನಕೇಂದ್ರಲ್ಲಿ “ಸೂರಿ” ಪ್ರಶಸ್ತಿ ಸಿಕ್ಕಿದ ಆ ಕಾರ್ಯಕ್ರಮಲ್ಲಿ ಆನುದೆ ಭಾಗವಹಿಸಿದ್ದೆ.ವೇದಿಕೆಲಿ ಕವಿಗೋಷ್ಠಿ, ಪ್ರಬಂಧ ಮಂಡನೆಲಿ ಎನಗು ಅವಕಾಶ ಸಿಕ್ಕಿತ್ತಿದ್ದು.ಬಾಳಿಲಣ್ಣನ ’ಧರ್ಮವಿಜಯ’ ಪುಸ್ತಕ ಎಂಗೊ ಭಾಗವಹಿಸಿದವಕ್ಕೆ ಕೊಟ್ಟಿದೊವು. ಅದರ ಓದಿದ್ದೆ. ಈ ದಿವ್ಯಾತ್ಮಕ್ಕೆ ಸಾಯುಜ್ಯ ಸಿಕ್ಕಲಿ ಹೇಳಿ ನಮ್ಮೆಲ್ಲೋರ ಒಕ್ಕೊರಲಿನ ಪ್ರಾರ್ಥನೆ.

  5. ಬಾಳಿಲ ಪರಮೇಶ್ವರಣ್ನ ನ ಕೆಲವು ತಿಂಗಳ ಹಿಂದೆ ಕಂಡು ಮಾತಾಡಿದ್ದೆ .ಅವರ ಕೆಲವು ಪುಸ್ತಕಂಗಳನ್ನುದೆ ಓದಿದ್ದೆ.ಮಕ್ಕಳ ಸಾಹಿತಿ ಯಾಗಿ , ಕವಿಯಾಗಿ ಸಾಹಿತ್ಯ ರಚನೆ ಮಾಡಿದ ಆ ಹಿರಿಯ ರಿಂಗೆ ನಮಸ್ಕಾರ .ಅವರ ಆತ್ಮ ಕ್ಕೆ ಶಾಂತಿ ಸಿಗಲಿ ..

  6. ನಮ್ಮ ಸಮಾಜದ ಹೆರಿಚೇತನಂಗ ಮರೆ ಅಪ್ಪಗ ಅದು ನವಗೆ ತುಂಬಾ ದೊಡ್ಡ ನಷ್ಟ.
    ನಮ್ಮ ಸಾಹಿತ್ಯದ ಪತ್ತಾಯವ ತುಂಬುಸಿ ಸಮೃದ್ಧಿ ಮಾಡಿಗೊಂಡು ಇದ್ದೋರು ಕಾಲಂಗೆ ಓಕೊಟ್ಟು ಹೋದಪ್ಪಗ ಅಪ್ಪ ವೇದನೆ ಹೇಳುಲೆ ಎಡಿಯ. ಸುಭಗಣ್ಣ ಹೇಳಿದ ಹಾಂಗೆ ಮೊನ್ನೆ ಅವರ ವಿಷಯ ಮಾತಾಡಿಗೊಂಡು ಬಂದದು. ಅವರ ನೆಂಪಿಲಿ ಇಪ್ಪಗಳೇ ಅವು ಇಲ್ಲೆ ಹೇಳುದರ ನಂಬುಲೆ ಎಡಿಗಾಯಿದಿಲ್ಲೆ. ಆ ಹಿರಿಯರ ಆತ್ಮಕ್ಕೆ ಶಾಂತಿ ಸಿಕ್ಕಲಿ..
    ಅವರ ಮನೆಯವಕ್ಕೆ ಅವ್ವಿಲ್ಲದ್ದ ದುಃಖವ ಸಹಿಸುವ ಶಕ್ತಿ ದೇವರು ಕೊಡಲಿ..

  7. ಅಗಲಿದ ಆತ್ಮಕ್ಕೆ ಚಿರಶಾಂತಿ ಕೋರಿ ಪ್ರಾರ್ಥನೆ.

  8. ಬಹಳ ಬೇಜಾರಾದ ಸಂಗತಿ. ಅವು ಬರೆದ ಕನ್ನಡ ಬರಹ ಓದಿದ್ದೆ. ಆದರೆ, ಧರ್ಮವಿಜಯ ಓದಿದ್ದಿಲ್ಲೇ .ಅವರ ಆತ್ಮಕ್ಕೆ ಚಿರ ಶಾಂತಿ ಸಿಕ್ಕಲಿ.

  9. ಖಂಡಿತಕ್ಕೂ ಬಾಳಿಲ ಮಾವನ ಜೀವನ -ಸಾಧನೆ ನವಗೆ ಆದರ್ಶವಾಗಲಿ. ಹವ್ಯಕ ಸಾಹಿತ್ಯಕ್ಕೆ ಅವು ಸಲ್ಲುಸಿದ ಸೇವೆ ನವಗೆ ದಾರಿ ದೀಪ ಆಗಲಿ. ಅವರ ಆತ್ಮಕ್ಕೆ ಶಾಂತಿ ಸಿಕ್ಕಲಿ.

  10. ಮನ್ನೆ- ಹೇಳಿರೆ ಮನ್ನೆಯೇ.. ಇದೇ ಹದಿನಾಕನೆ ತಾರೀಕಿಂಗೆ ಶ್ರೀಯಕ್ಕ, ಮಾಷ್ಟ್ರುಮಾವನೊಟ್ಟಿಂಗೆ ಬೆಂಗ್ಳೂರಿಂಗೆ ಹೋಗಿಂಡು ವಾಪಾಸು ಬಪ್ಪಗ ಕಾರಿಲ್ಲಿ ಲೋಕಾಭಿರಾಮ ಮಾತುಕತೆ ಎಡಕ್ಕಿಲ್ಲಿ ಈ ಬಾಳಿಲಮಾವನ ಬಗ್ಗೆಯೂ ಸುಮಾರು ಮಾತಾಡಿದ್ದೆಯೊ°!! ಎಂತಹ ವಿಚಿತ್ರ ಅಲ್ಲದೊ? ಬಹುಶ: ಒಪ್ಪಣ್ಣ ಬೈಲಿನವತ್ರೆ ವಿದಾಯ ಹೇಳ್ಳೆಬೇಕಾಗಿ ಇವು ಎಂಗಳ ಸ್ಮೃತಿಗೆ ಅಂಬಗ ಬಂದದಾಗಿಕ್ಕು!

    ಹವ್ಯಕ ಸಾಹಿತ್ಯಕ್ಷೇತ್ರಕ್ಕೆ ಅನನ್ಯ ಸೇವೆ ಸಲ್ಲುಸಿದ ಬಾಳಿಲಮಾವ ಎಂದೆಂದಿಂಗೂ ಸ್ಮರಣೀಯರು. ಆ ಹಿರಿಯರ ಚೇತನಕ್ಕೆ ಪರಮಾತ್ಮ ಸಾಯುಜ್ಯ ಪ್ರಾಪ್ತಿಯಾಗಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×