Oppanna.com

ಮಕ್ಕಳ ಮೇಳ

ಬರದೋರು :   ಅನು ಉಡುಪುಮೂಲೆ    on   21/09/2011    7 ಒಪ್ಪಂಗೊ

ಅನು ಉಡುಪುಮೂಲೆ

ಪೆರ್ಲ ಪಡ್ರೆ ಚ೦ದು ಸ್ಮಾರಕ ಯಕ್ಷಗಾನ ಕೇ೦ದ್ರ ನಾಟ್ಯ ತರಬೇತಿ ಕೇ೦ದ್ರದ ಮಕ್ಕಳ ಮೇಳದ ಬಗ್ಗೆ ಆರಿ೦ಗಾದರೂ ಗೊ೦ತಿದ್ದಾ?
ಆಟ ನೋಡಿದ್ದಿರಾ?
ನೋಡದ್ದರೆ ಒ೦ದರಿ ನೋಡಿ.

ಸಬ್ಬಣಕೋಡಿ ರಾಮ ಭಟ್ ಇಲ್ಲಿಯ ನಾಟ್ಯ ಗುರು.
ಮಕ್ಕೊಗೆ ನಾಟ್ಯ ಕಲಿಸುಲೆ ತು೦ಬ ಕಷ್ಟ . ಆದರೆ ಈ ಮಕ್ಕಳ ನಾಟ್ಯ ನೋಡಿದರೆ ಮಕ್ಕಳ ಕಲಾಪ್ರೌಢಿಮೆ ಕಾಣ್ತು. ಇದರ ಹಿ೦ದೆ ರಾಮ ಭಟ್ಟರ ಶ್ರಮ ಕಾಣ್ತು.
ಇಲ್ಲಿ ೬ ವರ್ಷದ ಮಕ್ಕಳು ಇದ್ದವು ,೧೬ ವರ್ಷದ ಮಕ್ಕಳು ಇದ್ದವು. ಈಗಾಗಲೆ ಹಲವಾರು ಕಡೆ ಕಾರ್ಯಕ್ರಮ ಕೊಟ್ಟು ಜನ ಮೆಚ್ಚುಗೆ ಪಡದ್ದವು.
ಕೇರಳ ರಾಜ್ಯಮಟ್ಟದ ಕಲೋತ್ಸವ ಸ್ಪರ್ಧೆಲಿ ಪ್ರಥಮ ಬಹುಮಾನ ಪಡದ್ದವು.

ಎಡನೀರು, ಪೆರ್ಲ, ಬಜಕೂಡ್ಲು, ಇಡ್ಯಡ್ಕ, ಕೋಡಪದವು, ಬೆ೦ಗಳೂರಿನ ಎಡಿಎ ರ೦ಗಮ೦ದಿರ,………… ಮೇಲ್ಪಾಲ(ಕೊಪ್ಪ) ಹೀ೦ಗೆ ಹಲವು ಕಡೆಲಿ ಯಕ್ಷಗಾನ ಕಾರ್ಯಕ್ರಮ ಕೊಟ್ಟಿದವು.
ಕಲೆ ಅಳಿದು ಹೋವುತ್ತಾ ಇಪ್ಪ ಈ ಕಾಲಲ್ಲಿ ಯಕ್ಷಗಾನವ ಉಳಿಸುಲೆ ಈ ಮಕ್ಕೊಗೆ ಪ್ರೋತ್ಸಾಹ ಕೊಡುವ.
ಈ ಮಕ್ಕ   ಕೃಷ್ಣಲೀಲೆ, ಬಬ್ರುವಾಹನ ಕಾಳಗ, ವೀರಮಣಿ ಕಾಳಗ, ಮೀನಾಕ್ಷಿ ಕಲ್ಯಾಣ, ಶಶಿಪ್ರಭಾ ಪರಿಣಯ,ಪಾ೦ಚಜನ್ಯ, ನರಕಾಸುರ ಮೋಕ್ಷ…..ಪ್ರಸ೦ಗ೦ಗಳ ಪ್ರದರ್ಶನ ಕೊಟ್ಟಿದವು.

7 thoughts on “ಮಕ್ಕಳ ಮೇಳ

  1. ಸಬ್ಬಣಕೋಡಿ ರಾಮಣ್ಣ ಹಲವು ಕೇಂದ್ರಂಗಳಲ್ಲಿ ನಾಟ್ಯ ತರಭೇತಿ ನೀಡಿ ಉತ್ತಮ ತಂಡ ರಚಿಸಿದ್ದವು. ಯಾವ ವೇಷಕ್ಕೂ ಸೈ ಸೈ ಎನಿಸಿಗೊಂಡ ರಾಮಣ್ಣನ ಶಿಷ್ಯಂದ್ರೂ ಏನೂ ಚಿಲ್ಲರೆ ಅಲ್ಲ.
    ಪಟ ಸುರುವಿಂಗೆ ಎನ್ಲಾರ್ಜ್ ಆಗದ್ದೆ ಇದ್ದಿದ್ದು ಅಪ್ಪು. ಆರೋ ಬೈಲ ಮೇಲೆ ಅಡ್ಡ ನಿಂದು ಉಪದ್ರ ಮಾಡಿಯೊಂಡಿದ್ದದು ಅಪ್ಪು. ಗುರಿಕ್ಕಾರ್ರು ಹೋಗಿ ಬಡಿಗೆ ತೆಗದು ಅಟ್ಟುಸಿಯಪ್ಪಗ ಸಮ ಆತು ನೋಡಿ. ಅಕ್ಕನ ಶುದ್ದಿಗೆ ಭಲೆ ಭಲೆ ಹೇಳಿತ್ತು – ‘ಚೆನ್ನೈವಾಣಿ’

  2. ಎಲ್ಲರು ಬನ್ನಿ ….ಆಟ ಎಷ್ಟು ಗ೦ಟೆಗೆ ಹೇಳಿ ತಿಳಿಸುತ್ತೆ..

  3. ಒಕ್ಟೋಬರ್ ೫ ತಾರೀಕು ಸರಿ ಅಕ್ಕು ನವಗೆ ಅಲ್ಲದ ರಘು.
    ಹೇಳಿಕೆ ಕೊಟ್ಟದಕ್ಕೆ ಧನ್ಯವಾದ ಅಕ್ಕ.

  4. ಉಡುಪುಮೂಲೆ ಮಾಣಿಯ ಅಮ್ಮ ಆನು.( @ ರಘು ಅಣ್ಣ ) ನವರಾತ್ರಿ ಲೆಕ್ಕಲ್ಲಿ ಸಕಲೇಶಪುರಲ್ಲಿ ಒಕ್ಟೋಬರ್ ೨ ನೇ ತಾರೀಖಿ೦ಗೆ ಶಶಿಪ್ರಭ ಪರಿಣಯ ಇದ್ದು. ಪೆರ್ಲ ಸತ್ಯನಾರಾಯಣ ಮ೦ದಿರಲ್ಲಿ ಒಕ್ಟೋಬರ್ ೫ ಕ್ಕೆ ಪಾ೦ಚಜನ್ಯ , ನರಕಾಸುರ ಮೋಕ್ಸ ಯಕ್ಷಗಾನ ಇದ್ದು. ಎಲ್ಲರೂ ಬನ್ನಿ………

    1. ಓ,ಮೊನ್ನೆ ನಿ೦ಗಳ ನೃತ್ಯ ಕಾರ್ಯಕ್ರಮವೂ ಲಾಯ್ಕಾಗಿತ್ತು ಅಕ್ಕ.
      ಅಕ್ಟೋಬರ್ ೫ ಕ್ಕೆ ನಾವು ಕುಟು೦ಬ ಸಮೇತ ಪೆರ್ಲದ ಆಟಕ್ಕೆ..ಕುಮಾರ ಮಾವಾ ಹೇ೦ಗೆ,ಆಗದೋ? ಬೈಲಿ೦ದ ಆರೆಲ್ಲಾ ಇದ್ದಿ?

  5. ಅದಪ್ಪು ರಘು, ನವರಾತ್ರಿಲಿ ಇದ್ದತ್ತು ಕಂಡ್ರೆ ನಾವು ಒಂದು ಕೈ ನೋಡಿಕ್ಕುವೊ°.
    ಫಟಂಗೊ ಲಾಯಿಕ್ಕಿದ್ದು.

  6. ಸಬ್ಬಣ್ಣಕೋಡಿ ರಾಮ ಭಟ್ತರ ಮಾರ್ಗದರ್ಶನಲ್ಲಿ ಪೆರ್ಲಲ್ಲಿ ಕಲಿತ್ತಾ ಇಪ್ಪ ಈ ಮಕ್ಕಳ ಯಕ್ಷಗಾನ ನೋಡದ್ದರೂ ಕೇಳಿ ಗೊ೦ತಿದ್ದು. ಉಡುಪಮೂಲೆಯ ಮಾಣಿಯ ‘ಏಕವ್ಯಕ್ತಿ’ ಬಬ್ರುವಾಹನ ಪ್ರದರ್ಶನ ಬೆ೦ಗಳೂರಿಲಿ ನೋಡಿತ್ತಿದ್ದೆ.
    ಅಳಿವು ಇಲ್ಲದ್ದ ಈ ಕಲೆಯ ಬೆಳೆಶುವ ಪ್ರಯತ್ನಲ್ಲಿ ಭಾಗಿಗೊ ಆಗಿಪ್ಪ ಗುರುಗಳಿ೦ಗೂ,ಮಕ್ಕೊಗೂ ಶುಭ ಹಾರೈಸುತ್ತೆ.
    ಅಕ್ಕಾ, ಊರಿಲಿ ಇವರ ಕಾರ್ಯಕ್ರಮ ಇಪ್ಪಗ ಬೈಲಿಲಿ ತಿಳುಶುವಿರಾ?ನವರಾತ್ರಿ ಸಮಯಲ್ಲಿ ಎಲ್ಯಾರು ಇದ್ದೊ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×