Oppanna.com

ಮುಚ್ಚಿಲು ಮರದ ಪರಿಚಯ ಇದ್ದೋ??

ಬರದೋರು :   ನೀರ್ಕಜೆ ಮಹೇಶ    on   05/07/2010    11 ಒಪ್ಪಂಗೊ

ನೀರ್ಕಜೆ ಮಹೇಶ

ಲಾಗಾಯ್ತಿಂದ ಬೈಲಿಲಿಪ್ಪವಕ್ಕೆ (ಒಪ್ಪಣ್ಣನ ಗಣಕ ಬೈಲು ಅಲ್ಲ!) ಈ ಮರದ ಪರಿಚಯ ಇಕ್ಕು. ಆದರೆ ನಮ್ಮ ತಲೆಮಾರಿನವಕ್ಕೆ ಇದರ ಪರಿಚಯ ಎಲ್ಲರಿಂಗೂ ಇರ. ಅದಕ್ಕೇ ಪರಿಚಯ ಮಾಡ್ಸುವ ಹೇಳಿ ಕಂಡತ್ತು.
ಮನ್ನೆ ನಮ್ಮ ಬೆಂಗೂರಿನ ಲಾಲಬಾಗಿಂಗೆ ಹೋಗಿತ್ತಿದ್ದೆ. ಸುಮ್ಮನೆ ಗಾಳಿ ತಿಂಬಲೆ ಹೇಳಿ. ಹೋದಿಪ್ಪಗ ಎನ್ನ ಕ್ಯಾಮೆರಾ ದೆ ತೆಕ್ಕೊಂಡು ಹೋಗಿತ್ತಿದ್ದೆ. ಎಂತಾರು ಒಳ್ಳೆ ಪಟ ಸಿಕ್ಕರೆ ಹಿಡ್ಕೊಂಬಲೆ ಹೇಳಿ. ಅಂತು ಹೋದ್ದಕ್ಕೆ ಮೋಸ ಆಯಿದಿಲ್ಲೆ. ಅಲ್ಲೇ ಕೆಲವು ಮರಂಗಳ ಪಟಂಗ, ಹಕ್ಕಿ ಪಿಕ್ಕಿ ಹೂಗು ಎಲ್ಲ ತೆಗದ್ದೇ ತೆಗದ್ದು. ಅದರಲ್ಲಿ ಈ ಮುಚ್ಚಿಲು ಮರದ ಪಟವೂ ಇದ್ದು. ಈ ಮರದ ಬಗ್ಗೆ ಚೂರು ವಿಚಾರ್ಸುವ ಈಗ. ಒಳುದ ಪಟಂಗಳ ಒಪ್ಪಣ್ಣನ ಗಣಕ ಬೈಲಿಲಿ ಎಲ್ಲಾರು ಹತ್ಸುಲೆ (upload) ಆವುತ್ತೋ ನೋಡ್ತೆ.
ಮುಚ್ಚಿಲು ಹೇಳ್ತು ಒಂದು ಹೆಸರುವಾಸಿ ಮೋಪಿನ ಮರ. ಸಾಗುವಾನಿಯ ಹಾಂಗೆ ದೊಡ್ಡ ಎಲೆ (ಸಾಗುವಾನಿಂದ ಚೂರು ಸಣ್ಣದು, ಉದ್ದಕ್ಕೆ ಇರ್ತು). ತೋಡ ಕರೆ, ಇತ್ಯಾದಿ ಚೂರು ಪಸೆ ಇಪ್ಪ ಜಾಗೆಗಳಲ್ಲಿ ಉದ್ದಕ್ಕೆ ದೊಡ್ಡಕ್ಕೆ ಬೆಳವ ಮರ ಇದು. ಇಂಗ್ಲೀಷು ಶಾಸ್ತ್ರ ಪ್ರಕಾರ ಇದರ ಹೆಸರು dillenia indica ಹೇಳಿ. ಭಾರತದ ಕರ್ನಾಟಕದ ಪಶ್ಚಿಮ ಘಟ್ಟದ ಮಳೆಕಾಡುಗಳೇ ಈ ಮರದ ತವರು. ಊರಿಲಿ ಮುಚ್ಚಿಲು/ಮುಚ್ಚಿರು ಹೇಳ್ತ ಮರವ ಕಲ್ತೇಗ ಹೇಳಿಯೂ ಹೇಳ್ತವಡ್ಡ. ಇದು ಒಳ್ಳೆ ಮೋಪಿನ ಮರ ಹೇಳಿ ಅಪ್ಪ ಹೇಳಿಯೊಂಡಿತ್ತಿದ್ದವು. ನೋಡುಲೆ ಈ ಮರ ಸಿಕ್ಕುದೇ ಅಪರೂಪ. ಎಂಗಳ ನೀರ್ಕಜೆ ಬೈಲಿಲಿ ಎನಗೆ ಗೊಂತಿಪ್ಪ ಹಾಂಗೆ ಒಂದು ಸಣ್ಣ ಮರ ಇದ್ದು ಇದರದ್ದು. ಇದರ ದೊಡ್ಡ ಎಲೆ ನೋಡುವಗ ಕೊಟ್ಟಿಗೆ ಇತ್ಯಾದಿ ಮಾಡುಲಕ್ಕು ಹೇಳಿ ಎನಗೆ ಅನಿಸಿತ್ತು. ಹಾಂಗೆ ಹೇಳಿ ಮಾಡುಲೆ ಹೆರಡೆಡಿ.. ಪೂರ್ವಾಪರ ಗೊಂತಿಲ್ಲದ್ದೆ ಮಾಡಿ ಮತ್ತೆ UGG Stiefeletten günstig ಹೆಚ್ಚುಕಮ್ಮಿ ಅಪ್ಪಲೆ ಆಗನ್ನೆ…
ಈ ಮರದ್ದು ಇನ್ನೂ ಕೆಲವು ವಿಶೇಷಂಗ ಇದ್ದು. ಎಂತ ಹೇಳಿರೆ ಇದರ ಕಾಯಿ. ಸುಮಾರು ದೊಡ್ಡ ಮುಸುಂಬಿಯಷ್ಟು ದೊಡ್ಡ ಇಪ್ಪ ಇದರ ಕಾಯಿ ಒಣಗಿ ಅಪ್ಪಗ ತುಂಬಾ ಗಟ್ಟಿ ಆವುತ್ತು. ಇದರ ಬೀಜ ಮಾತ್ರ ಅಂತೆ ಹಾಕಿರೆ ಹುಟ್ಟುತ್ತಿಲ್ಲೆಡ್ಡ! ಆನೆಗೊ ಭಾರಿ ಲಾಯಿಕ ಆವುತ್ತು ಹೇಳಿ ತಿಂಬ ಈ ಹಣ್ಣಿನ ಬೀಜಂಗ ಅದರ ಹೊಟ್ಟೆಲಿ ಕಿಣ್ವಂಗಳ ಜೊತೆ ಬೆರೆತಪ್ಪಗ ಮಾತ್ರ ಅದಕ್ಕೆ ಹುಟ್ಟುವ ಶಕ್ತಿ ಬಪ್ಪದಡ್ಡ! ಹೀಂಗೆ ಎಲ್ಲಿಯೋ ಓದಿದ ನೆಂಪು ಎನಗೆ. ಇದರ ಬಗ್ಗೆ ಹೆಚ್ಚು ತಿಳುದೋರು ಇದ್ದರೆ ಹೇಳಿ. ಸಾಲದ್ದಕ್ಕೆ ಈ ಮರದ ಹೆಸರು ಇಂಗ್ಲೀಷಿಲಿ Elephant Apple ಹೇಳಿ ಇಪ್ಪದು ಇದಕ್ಕೇ ಆದಿಕ್ಕು ಹೇಳಿ ಎನ್ನ ಊಹೆ. ಇನ್ನು ಈ ಮರಂಗ ತುಂಬ ಅಪರೂಪ ಆದಿಪ್ಪದಕ್ಕುದೆ ಇದುವೇ ಕಾರಣ ಆದಿಕ್ಕು ಹೇಳಿ ಎನ್ನ ಅನಿಸಿಕೆ. ಎಂತ ಹೇಳ್ತಿ?
ಇನ್ನು ಬರವಣಿಗೆ ಮುಗುಶುವ ಮುನ್ನ ನಿಂಗೊಗೆ ಇನ್ನೊಂದು ಮರದ ಪರಿಚಯ ಮಾಡುತ್ತೆ. ಎಂಗಳ ನೀರ್ಕಜೆ ಬೈಲಿಲಿಯೂ, ಗುಡ್ಡೆಲಿಯೂ ಒಂದು ಜಾತಿಯ ಮರ ಇದ್ದು. ಊರಿಲಿ ಪಿಲಿಗುರ/ಪಿಲಿಂಗುರ (ಅಕೇರಿನ ನಾಲ್ಕು ಪಟಂಗ ನೋಡಿ) ಹೀಂಗೆಲ್ಲ ಹೇಳ್ತವು. ಎನಗೆ ಇತ್ಲ್ಲ್ಯಾಣವರೆಗೂ ಆ ಮರದ ಬಗ್ಗೆ ಹೆಚ್ಚು ಮಾಹಿತಿ ಇತ್ತಿಲ್ಲೆ. ಸಾಲದ್ದಕ್ಕೆ ಅದು ಶಾಸ್ತ್ರೀಯವಾಗಿ ಯಾವ ಮರ ಹೇಳುವ ಒಂದು ಮರ್ಲು ತಲೆಗೆ ಹೊಕ್ಕಿತ್ತು. ಆ ಮರ್ಲಿಂಗೆ ಕೊನೆಗೂ ಒಂದು ಶಾಂತಿ ಆತು ಹೇಳಿ ಮನ್ನೆ ಲಾಲಬಾಗಿಂಗೆ ಹೋದಿಪ್ಪಗ! ಆ ಮರದ್ದು ವೈಜ್ಞಾನಿಕ ಹೆಸರು ಇತ್ಯಾದಿ ವಿವರಂಗಳ ನಂಬರು ಪ್ಲೇಟಿಲಿ ಬರದು ಮರಕ್ಕೆ ಆಣಿ ಬಡಿದಿತ್ತಿದವು. ಎನಗೆ ಖುಷಿ ಆತು. ಪಟ ತೆಗದೇ ಬಿಟ್ಟೆ! ಈ ಮರದ ಪರಿಚಯ ನಿಂಗಗೆ ಮದಲೇ ಇತ್ತಿದ್ದರೆ ಇಲ್ಲೇ ಕೆಳ ನಿಂಗಳ ಅನುಭವ ಬರೆಯಿರಿ. ಅದು ಎಂತಕ್ಕೆ ಆವುತ್ತು ಇತ್ಯಾದಿ. ಎನಗೆ ಗೊಂತಿಪ್ಪ ಹಾಂಗೆ (ಅಪ್ಪ ಹೇಳಿ ಗೊಂತು ಎನಗುದೆ) ಮರ ಊದ್ದಕ್ಕೆ ಬೆಳೆತ್ತು, ತೊಲೆ ಅಡ್ಡ ಹಾಂಗಿಪ್ಪದಕ್ಕೆಲ್ಲ ಆವುತ್ತು.
ಇಲ್ಲಿ ಕೆಲವು ಪಟಂಗ ಇದ್ದು ನೋಡಿ. ನಿಂಗಳ ಅಭಿಪ್ರಾಯ ತಿಳಿಸಿ.

11 thoughts on “ಮುಚ್ಚಿಲು ಮರದ ಪರಿಚಯ ಇದ್ದೋ??

  1. ಅದು ತೊಂದರೆ ಇಲ್ಲೆ ಅಪ್ಪಚ್ಚಿ. ಹೇಂಗಾರು ಅರ್ಧಾಂಗಿಯೇ ಅಲ್ಲದೋ..ಏ°!!!!
    ಆರು ಬರದರೆಂತಯ ಒಪ್ಪ ಕೊಟ್ಟರೆ ಆತು…

  2. ಅಲ್ಲ ! ನಿಜ ಹೇಳೆಕ್ಕಾರೆ, ಕ್ಯಾರೆಟ್ ಸೂಪ್ ಶುದ್ದಿ ನೀರ್ಕಜೆ ಅಪ್ಪಚ್ಚಿ ಗೆ ಗೊಂತೇ ಇಲ್ಲೆ! ಆ ಒಪ್ಪ ಅನೇ ಕೊಟ್ಟದು ಆತೋ ನೆಗೆಗಾರ ಭಾವ….

      1. ಹೆ ಹೆ….. ಹೆ ಹಿ ಹ….. ಹಹಹಹ್ಹಹ್ಹ್ಹಹಹಹಹಹಹಹಹಹ್ಹಹ್ಹಹ್ !

    1. ಅದು ಕದಂಬ ಅಲ್ಲ. ಕದಂಬ ಮರ ಬೆಂಗೂರಿಲಿ ಎಂಗಳ ಮನೆಯ ಹತ್ತರೆ ಇದ್ದು. ೪-೫ ಮರ ಇದ್ದು. ಈಗ ಹೂಗು ಹೋಯಿದು. ಅದರ ಚಿತ್ರ ಇಲ್ಲಿ ಕೆಳ ಇದ್ದು ಇದ.. ಇದು ಆನು ತೆಗದ್ದಲ್ಲ… ಅಂತರ್ಜಾಲಲ್ಲಿ ಎಲ್ಲಿಯೋ ಸಿಕ್ಕಿತ್ತು.
      http://www.khandigeorganic.com/UploadPhotoGallery/kadamba2.jpg

      1. ನೀರ್ಕಜೆ ಚಿಕ್ಕಮ್ಮನ ಹೆಸರಿಲಿ ಬರದ್ದು ನೀರ್ಕಜೆ ಅಪ್ಪಚ್ಚಿಯೇ.. 🙂

        1. ಎಂಗೊಗೆ ಅದು ಅಂದಾಜಿಆಯಿದು, ಮೊನ್ನೆಂದಲೇ!
          ಅಜ್ಜಕಾನಬಾವಂಗೆ ಕುಸುಕುಸು ನೆಗೆದೇ ಬಂದುಗೊಂಡಿತ್ತು. 😀
          ಮೊನ್ನೆ ಅಡಿಗೆಯ ಶುದ್ದಿಗೆ ಚಿಕ್ಕಮ್ಮನ ಹೆಸರಿಲಿ ಎಂತದೋ ಒಂದು ಒಪ್ಪ ಬರದ್ದಿ ಅಲ್ಲದಾ? 😉

  3. ಹ ಹಾ.. ಗಮ್ಮತ್ತಿದ್ದು ನಿಂಗಳ ಹುಡ್ಕಾಣ.. ನಿಂಗಳು ಬರೆಯಿರಿ ಅಪ್ಪಚ್ಚಿ…

  4. ಪಟ ನೋಡಿಯಪ್ಪದ್ದೆ ಎಲ್ಲಿಯೋ ನೋಡಿದ್ದೆನ್ನೆ ಹೇಳಿ ಅನ್ಸಿತ್ತು,,, ಮತ್ತೆ ಗ್ರೇಶಿಗೊಂಡೆ,, ಇಲ್ಲಿಯೇ ಈಗ ನೋಡಿದ್ದಾಯಿಕ್ಕು ಹೇಳಿ,, 🙂 ಸರಿ ಹುಡ್ಕಿದ ಮತ್ತೆ ಮನೆಯ ಹತ್ರೆಯು ಒಂದೆರಡು ದಿಕ್ಕೆ ಕಂಡತ್ತು ಹೇಳುವ.. ಒಳ್ಳೆ ಮಾಹಿತಿ ಇಪ್ಪ ಲೇಖನ ಅಪ್ಪಚ್ಚಿ,, 🙂 ಸಸ್ಯಶಾಸ್ತ್ರದ (ಮಾಜಿ) ವಿಧ್ಯಾರ್ಥಿ ಆದ ಕಾರಣ ಮರದ ಪರಿಚಯ ಮಾಡಿಗೊಂಬಾಗ ಕುಶಿ ಆತು 🙂 ಹಿಂಗಿಪ್ಪ ಸಂಗತಿಗಳ ಪುರುಸೊತ್ತಿಪ್ಪಾಗೆಲ್ಲ ಹಂಚಿಗೊಳ್ಳಿ, 🙂 ಗಣಕ-ಬೈಲಿಲಿಪ್ಪ ಎಲ್ಲರಿಂಗುದೆ ಉಪಯುಕ್ತ ಮಾಹಿತಿ ಇದು.. 🙂 ಧನ್ಯವಾದಂಗೊ!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×